Tag: ತಂಬಿಟ್ಟು

  • ಮಹಾಶಿವರಾತ್ರಿ 2025; ಶಿವನಿಗೆ ಪ್ರಿಯವಾದ ತಂಬಿಟ್ಟು ಹೀಗೆ ಮಾಡಿ!

    ಮಹಾಶಿವರಾತ್ರಿ 2025; ಶಿವನಿಗೆ ಪ್ರಿಯವಾದ ತಂಬಿಟ್ಟು ಹೀಗೆ ಮಾಡಿ!

    ಹಾಶಿವರಾತ್ರಿ ಆಚರಣೆಗೆ ದೇಶದ ಎಲ್ಲೆಡೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಶಿವರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಸಿಹಿಯಾದ ತಂಬಿಟ್ಟು ಮಾಡಿ ಶಿವನಿಗೆ ಅರ್ಪಿಸುವ ಆಚರಣೆಯಿದೆ. ತಂಬಿಟ್ಟು ಶಿವನಿಗೆ ಅತ್ಯಂತ ಶ್ರೇಷ್ಠ ಮತ್ತು ಪ್ರಿಯವಾದ ಆಹಾರ ಎನ್ನಲಾಗಿದೆ. ಹೀಗಾಗಿ ಶಿವನಿಗೆ ಆರತಿ ಮಾಡುವ ಸಮಯದಲ್ಲಿ ತಂಬಿಟ್ಟು ಇಟ್ಟು ನೈವೇದ್ಯ ಮಾಡಿ ಬಳಿಕ ಅದನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಹಾಗಿದ್ರೆ ಸುಲಭವಾಗಿ ತಂಬಿಟ್ಟು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಹುರಿಗಡಲೆ – 1 ಕಪ್
    ಒಣ ತೆಂಗಿನಕಾಯಿ ತುರಿ – 1/2 ಕಪ್
    ಬೆಲ್ಲ – 3/4 ಕಪ್
    ತುಪ್ಪ – 1/4 ಕಪ್
    ಗಸಗಸೆ ಬೀಜಗಳು – 1 ಚಮಚ
    ಏಲಕ್ಕಿಪುಡಿ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಮಿಕ್ಸಿ ಜಾರಿನಲ್ಲಿ ಹುರಿಗಡಲೆ ಹಾಗೂ ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ನಂತರ ಹುರಿಯಲು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಗಸಗಸೆ ಬೀಜಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದು ಪಕ್ಕಕ್ಕೆ ಇರಿಸಿ.
    * ಆ ಬಳಿಕ ಅದೇ ಬಾಣಲೆಗೆ ಒಣ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಹುರಿದುಕೊಂಡು, ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ವರ್ಗಾಯಿಸಿ ಒರಟಾಗಿ ರುಬ್ಬಿಕೊಳ್ಳಿ.
    * ನಂತರ ಬಾಣಲೆಯಲ್ಲಿ 1/4 ಕಪ್ ತುಪ್ಪವನ್ನು ತೆಗೆದುಕೊಂಡು, ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ. ಬೆಲ್ಲವು ಕರಗುವಂತೆ ಚೆನ್ನಾಗಿ ಬೆರೆಸಿಕೊಳ್ಳಿ.
    * ಈ ಬಾಣಲೆಗೆ ಈಗಾಗಲೇ ರುಬ್ಬಿದ ತೆಂಗಿನಕಾಯಿ ಸೇರಿಸಿಕೊಂಡು, ಗಸಗಸೆ ಹಾಗೂ ಹುರಿಗಡಲೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
    * ತುಪ್ಪ ಕಡಿಮೆಯೆಂದೆನಿಸಿದ್ದಲ್ಲಿ ಒಂದೆರಡು ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಬಿಸಿಯಿರುವಾಗಲೇ ಉಂಡೆಗಳನ್ನು ಕಟ್ಟಿಕೊಳ್ಳಿ.
    * ಈಗ ಹುರಿಗಡಲೆ ತಂಬಿಟ್ಟು ಉಂಡೆ ಸವಿಯಲು ಸಿದ್ಧ.

  • ಶಿವರಾತ್ರಿ ಸ್ಪೆಷಲ್ ತಂಬಿಟ್ಟು ರೆಸಿಪಿ

    ಶಿವರಾತ್ರಿ ಸ್ಪೆಷಲ್ ತಂಬಿಟ್ಟು ರೆಸಿಪಿ

    ಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಿಹಿಯಾದ ಅಡುಗೆ, ದೇವರಿಗೆ ನೈವೇದ್ಯ ಮಾಡಬೇಕಾಗುತ್ತದೆ. ಇಂದು ಮಹಾಶಿವರಾತ್ರಿ (Maha Shivaratri), ಈ ದಿನ ರಾತ್ರಿಯಿಡೀ ಶಿವನಾಮ ಸ್ಮರಣೆ ಮಾಡಿ ಜಾಗರಣೆ ಮಾಡುತ್ತೀರಿ. ಶಿವನಿಗೆ ಪ್ರಿಯವಾದ ನೈವೇದ್ಯ ಎಂದರೆ ಅದು ತಂಬಿಟ್ಟು. ದೇವರಿಗೆ ನೈವೇದ್ಯ ಮಾಡಿಲ್ಲ ಅಂದರೆ ಶಿವರಾತ್ರಿ ಪೂರ್ಣವೇ ಆಗಲ್ಲ. ಹೀಗಾಗಿ ಮನೆಯಲ್ಲೆ ಸುಲಭ ರೀತಿಯಲ್ಲಿ ತಂಬಿಟ್ಟು (Tambittu) ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಾಗ್ರಿಗಳು
    ಅಕ್ಕಿ – ಅರ್ಧ ಕೆಜಿ
    ಎಳ್ಳು – 5-6 ಚಮಚ
    ಕಡ್ಲೆಕಾಯಿ ಬೀಜ – 50 ಗ್ರಾಂ
    ಹುರಿಗಡಲೆ – 50 ಗ್ರಾಂ
    ಬೆಲ್ಲ – 1 ಅಚ್ಚು
    ಕೊಬ್ಬರಿ ತುರಿ – 1 ಬಟ್ಟಲು
    ಏಲಕ್ಕಿ – 2 ಇದನ್ನೂ ಓದಿ: ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ಅಕ್ಕಿ ಹಾಕಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಬಳಿಕ ಮಿಕ್ಸರ್ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಿ.
    * ಅದೇ ಪ್ಯಾನ್‍ಗೆ ಕಡ್ಲೆಕಾಯಿ ಬೀಜ ಹಾಕಿ ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
    * ಪ್ಯಾನ್‍ಗೆ ಎಳ್ಳು ಹಾಕಿ ಬೆಚ್ಚಗೆ ಮಾಡಿ.
    * ಈಗ ಒಂದು ಮಿಕ್ಸರ್ ಜಾರ್ ಗೆ ಹುರಿಗಡಲೆ, ಕಡ್ಲೆಕಾಯಿ ಬೀಜ, ಏಲಕ್ಕಿ ಹಾಕಿ ತರಿತರಿ ರುಬ್ಬಿಕೊಳ್ಳಿ.
    * ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಬೆಲ್ಲ ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ.
    * ಈ ಕಡೆ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಪುಡಿ ಮಾಡಿದ ಅಕ್ಕಿ, ಹುರಿದ ಎಳ್ಳು, ಕೊಬ್ಬರಿ ತುರಿ, ಪುಡಿ ಮಾಡಿದ ಹುರಿಗಡಲೆ, ಕಡ್ಲೆಕಾಯಿಬೀಜ, ಏಲಕ್ಕಿ ಹಾಕಿ.
    * ಇದಕ್ಕೆ ಒಂದೆಳೆ ಪಾಕವನ್ನು ಬಿಸಿಯಾಗಿರುವಾಗಲೇ ಸೇರಿಸಿ ಕಲಸಿ ಉಂಡೆ ಕಟ್ಟಿ.
    * ಪಾಕ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಇಲ್ಲವಾದಲ್ಲಿ ಉಂಡೆ ಒಡೆದು ಹೋಗುತ್ತದೆ. ಇದನ್ನೂ ಓದಿ: ಗೋಕಾಕ್‌ನ ಫೇಮಸ್ ಕರದಂಟು ಸವಿದಿದ್ದೀರಾ?

  • ಮಕ್ಕಳಿಗೆ ಇಷ್ಟವಾದ ‘ತಂಬಿಟ್ಟಿನ ಉಂಡೆ’ ಮಾಡಿ ಸವಿಯಿರಿ

    ಮಕ್ಕಳಿಗೆ ಇಷ್ಟವಾದ ‘ತಂಬಿಟ್ಟಿನ ಉಂಡೆ’ ಮಾಡಿ ಸವಿಯಿರಿ

    ಮಕ್ಕಳಿಗೆ ಸಿಹಿ ತಿಂಡಿಗಳು ಎಂದರೆ ತುಂಬಾ ಇಷ್ಟ. ಆದರೆ ಪೋಷಕರು ಸಿಹಿ ತಿಂಡಿ ಕೊಟ್ರೆ ಎಲ್ಲಿ ಮಕ್ಕಳ ಹಲ್ಲಿಗೆ ತೊಂದರೆ ಆಗುತ್ತೆ ಎಂದು ಭಯಪಡುತ್ತಾರೆ. ಆದರೆ ಇಂದು ನಾವು ಹೇಳಿಕೊಡುತ್ತಿರುವ ಸಿಹಿ ತಿಂಡಿ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮಕ್ಕಳು ಸಹ ಆಟಾಡಿಕೊಂಡು ಇಷ್ಟಪಟ್ಟು ತಿನ್ನುತ್ತಾರೆ. ಅದು ಯಾವ ತಿಂಡಿ ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ‘ತಂಬಿಟ್ಟಿನ ಉಂಡೆ’. ಈ ಉಂಡೆಯನ್ನು ಧಾನ್ಯಗಳನ್ನು ಬಳಸಿ ಮಾಡುವುದರಿಂದ ಮಕ್ಕಳ ಆರೋಗ್ಯಕ್ಕೆ ಮತ್ತು ದೊಡ್ಡವರಿಗೆ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತೆ.

    ಬೇಕಾಗುವ ಪದಾರ್ಥಗಳು:
    * ಕಡಲೆ ಕಾಳು – 1 ಕಪ್
    * ಹೆಸರು ಕಾಳು – 1 ಕಪ್
    * ಅಕ್ಕಿ – 1/3 ಕಪ್
    * ಉದ್ದಿನ ಬೇಳೆ – 1/8 ಕಪ್


    * ಬೆಲ್ಲ – ಒಂದುವರೆ ಕಪ್
    * ತೆಂಗಿನ ತುರಿ – 1 ಕಪ್
    * ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ – 1/2 ಕಪ್
    * ಏಲಕ್ಕಿ ಪುಡಿ – 1/2 ಟೀಸ್ಪೋನ್

    ಮಾಡುವ ವಿಧಾನ:
    * ಮೊದಲು ಒಂದು ಬಾಣಲೆಗೆ ಕಡಲೆ ಕಾಳು ಹಾಕಿ 5 ರಿಂದ 6 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಹೆಸರು ಕಾಳು ಹಾಕಿ 5 ರಿಂದ 6 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ. ಅದೇ ರೀತಿ ಕ್ರಮವಾಗಿ ಅಕ್ಕಿ, ಉದ್ದಿನ ಬೇಳೆ ಹಾಕಿ 5 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ.
    * ಹುರಿದ ಶೇಂಗಾಬೀಜಗಳನ್ನೊಂದು ಹೊರತು ಪಡಿಸಿ ಉಳಿದೆಲ್ಲವುಗಳನ್ನು ಒಂದು ಪಾತ್ರೆಗೆ ಹಾಕಿ ಕಲಸಿ. ಒಂದು ಮಿಕ್ಸಿ ಜಾರಿಗೆ ಈ ಸಾಮಾಗ್ರಿಗಳನ್ನು ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ.
    * ಒಂದು ಬಾಣಲೆಯಲ್ಲಿ ಒಂದು ಮುಕ್ಕಾಲು ಕಪ್ ಬೆಲ್ಲ, ಅರ್ಧ ಕಪ್ ನೀರು ಹಾಕಿ ಕಲಕಿ. ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷ ಬೆಲ್ಲ ಕರಗುವ ತನಕ ಕುದಿಸಿ. ತೆಂಗಿನ ತುರಿ ಹಾಕಿ ಕಲಸಿ.
    * ಬೆಲ್ಲ ಸ್ವಲ್ಪ ಅಂಟಿಕೊಳ್ಳಲು ಪ್ರಾರಂಭಿಸಿದಾಗ ಇದಕ್ಕೆ 2 ಕಪ್ ರುಬ್ಬಿದ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಅರ್ಧ ಕಪ್ ಶೇಂಗಾ ಬೀಜ, ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ.
    * ಈಗ ಇದನ್ನು ಚಿಕ್ಕ, ಚಿಕ್ಕ ಉಂಡೆಗಳನ್ನು ಮಾಡಿ.

    – ಪೌಷ್ಟಿಕವಾದ ತಂಬಿಟ್ಟಿನ ಉಂಡೆ ತಿನ್ನಲು ಸಿದ್ಧ.

    Live Tv

  • ತಂಬಿಟ್ಟು ಕೊಡಿ ದಾರಿಯಲ್ಲಿ ತಿನ್ಕೊಂಡು ಹೋಗ್ತೀನಿ: ಮಂಡ್ಯದಲ್ಲಿ ಅಮ್ಮನ ಪರವಾಗಿ ದರ್ಶನ್ ಪ್ರಚಾರ

    ತಂಬಿಟ್ಟು ಕೊಡಿ ದಾರಿಯಲ್ಲಿ ತಿನ್ಕೊಂಡು ಹೋಗ್ತೀನಿ: ಮಂಡ್ಯದಲ್ಲಿ ಅಮ್ಮನ ಪರವಾಗಿ ದರ್ಶನ್ ಪ್ರಚಾರ

    ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯದ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

    ಕೆಆರ್‍ಎಸ್ ಅರಳಿಕಟ್ಟೆಗೆ ದರ್ಶನ್ ಆಗಮಿಸಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ದರ್ಶನ್, ರೆಬಲ್ ಸ್ಟಾರ್ ಅಂಬರೀಶ್ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸುಮಲತಾ ಪರ ಪ್ರಚಾರವನ್ನು ಆರಂಭಿಸಿದರು.

    ಇದೇ ವೇಳೆ ಮಾತನಾಡಿದ ಅವರು, ಇಲ್ಲಿ ಊರಲ್ಲಿ ಎಲ್ಲರು ತಂಬಿಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿ ನನ್ನ ಬಾಯಲ್ಲಿ ನೀರು ಬರುತ್ತಿತ್ತು ಹಾಗೂ ತಿನ್ನಬೇಕು ಅಂತಾ ಆಸೆ ಆಗುತಿತ್ತು. ಹೀಗಾಗಿ ನನಗೂ ತಂಬಿಟ್ಟು ಕೊಡಿ ತಿಂದುಕೊಂಡು ಹೋಗುತ್ತೇನೆ ಎಂದು ದರ್ಶನ್ ಗ್ರಾಮಸ್ಥರಲ್ಲಿ ಕೇಳಿಕೊಂಡರು. ದರ್ಶನ್ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ತಂಬಿಟ್ಟು ಕೊಟ್ಟಿದ್ದಾರೆ. ದರ್ಶನ್ ತಂಬಿಟ್ಟು ತಿಂದು ಬಾಯಿ ಸಿಹಿ ಮಾಡಿಕೊಂಡಿದ್ದಾರೆ.

    ತಂದೆ, ತಾಯಿ ಸಮಾನ ಎಲ್ಲಾ ಗುರು ಹಿರಿಯರಿಗೆ ನಮಸ್ಕಾರ ಮಾಡಿ, ಯಾರು ಯಾರು ಏನು ಮಾತನಾಡಿದರೂ ಅದಕ್ಕೆ ನೀವೂ ಉತ್ತರ ಕೊಡ್ಬೇಕು ಎಂದು ದರ್ಶನ್ ಹೇಳಿದರು. ಅಂಬರೀಶ್ ಮಾಡಿದ ಕೆಲಸ ಮುಂದುವರಿಸಲು ಸುಮಲತಾ ಬಂದಿದ್ದಾರೆ. ಅವರ ಚಿಹ್ನೆಯಾದ ಕಹಳೆಗೆ ಮತ ನೀಡಿ ಆಶೀರ್ವಾದಿಸಿ ಎಂದು ಮನವಿ ಮಾಡಿದರು.

    ಹುಲಿದುರ್ಗದ ಜನತೆಗೆ ನಮಸ್ಕಾರ ಮಾಡಿ, 18ಕ್ಕೆ ಚುನಾವಣೆ ನಡೆಯಲಿದೆ. ಅಮ್ಮನಿಗೆ ವೋಟು ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಟೀಕೆ ಟಿಪ್ಪಣಿಗಳಿಗೆ ನಿಮ್ಮ ವೋಟಿನ ಮೂಲಕ ಉತ್ತರ ಕೊಡಿ ಎಂದು ಕೇಳಿಕೊಂಡರು.