Tag: ತಂಪುಪಾನಿಯ

  • ಬಿಸಿಲಿನ ಬೇಗೆಗೆ ಮನೆಯಲ್ಲೇ ತಯಾರಿಸಿ ತಂಪಾದ ಪಾನೀಯ

    ಬಿಸಿಲಿನ ಬೇಗೆಗೆ ಮನೆಯಲ್ಲೇ ತಯಾರಿಸಿ ತಂಪಾದ ಪಾನೀಯ

    ಬಿಸಿಲಿನ ಬೇಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಯಾರಿಕೆಗಾಗಿ ನಾವು ಅಂಗಡಿಯಲ್ಲಿ ಸಿಗುವ ವಿವಿಧ ತರಹದ ಜ್ಯೂಸ್‍ಗಳ ಮೊರೆ ಹೋಗುತ್ತಿದ್ದೇವೆ. ಹೀಗಾಗಿ ಅಂಗಡಿಯಲ್ಲಿ ಸಿಗುವ ಜ್ಯೂಸ್‍ಗಳಿಗಿಂತ ನಾವೇ ಮನೆಯಲ್ಲಿ ರುಚಿಯಾದ ಮತ್ತು ತಂಪಾದ ಮತ್ತು ಆರೋಗ್ಯಕರವಾದ ಜ್ಯೂಸ್‍ಗಳನ್ನು ಮಾಡಿ ಸೇವಿಸಬಹುದಾಗಿದೆ. ಫಟಾಫಟ್ ಆಗಿ ಮಾಡುವ ಮಾಡುವ ಈ 2 ಜ್ಯೂಸ್‍ಗಳನ್ನು ನೀವು ಒಮ್ಮೆ ಮಾಡಿ..

    ಕಾಮಕಸ್ತೂರಿ ಜ್ಯೂಸ್

    ಬೇಕಾಗುವ ಸಾಮಾಗ್ರಿಗಳು:
    * ಕಾಮಕಸ್ತೂರಿ ಬೀಜ
    * ನಿಂಬೆಹಣ್ಣು
    * ಸಕ್ಕರೆ – 4 ಟೀ ಸ್ಪೂನ್
    * ಎಲಕ್ಕಿ- 4
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    * ಮೊದಲು ಒಂದು ಬೌಲ್‍ಗೆ 2 ಗ್ಲಾಸ್ ನೀರನ್ನು ಹಾಕಿ. ನಂತರ ಉಪ್ಪು ಮತ್ತು ಸಕ್ಕರೆಯನ್ನು ಹಾಕಿ ಸಕ್ಕರೆ ಚೆನ್ನಾಗಿ ಕರಗುವವರೆಗೆ ಇಟ್ಟಿರಬೇಕು.
    * ಮತ್ತೊಂದು ಬೌಲ್‍ನಲ್ಲಿ ನೀರನ್ನು ಹಾಕಿ ಕಾಮಕಸ್ತೂರಿ ಬೀಜವನ್ನು ನೆನೆಸಿಟ್ಟಿರಬೇಕು.
    * ನಂತರ ಈ ಮೊದಲೇ ಸಕ್ಕರೆಯನ್ನು ಕರಗಿಸಿಟ್ಟ ನೀರಿಗೆ ಎಲಕ್ಕಿ, ನಿಂಬೆಹಣ್ಣಿ ರಸ ಮತ್ತು ಕಾಮಕಸ್ತೂರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಮತ್ತು ತಂಪಾದ ಕಾಮಕಸ್ತೂರಿ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.

    ಸೌತೆಕಾಯಿ ಜ್ಯೂಸ್
    ಬೇಕಾಗುವ ಸಾಮಗ್ರಿಗಳು
    * ಸೌತೆಕಾಯಿ-1
    * ಸಕ್ಕರೆ- 4 ಟೀ ಸ್ಪೂನ್
    * ಉಪ್ಪು ರುಚಿಗೆ ತಕ್ಕಷ್ಟು
    * ಎಲಕ್ಕಿ ಪೌಡರ್_ ಅರ್ಧ ಸ್ಪೂನ್
    * ನಿಂಬೆಹಣ್ಣು- 1

    ಮಾಡುವ ವಿಧಾನ:
    * ಸೌತೆಕಾಯಿ ತಿರುಳನ್ನು ತೆಗೆದು ಸಣ್ಣದಾಗಿ ಕಟ್ ಮಾಡಿಟ್ಟಿರುವ ಸೌತೆಕಾಯಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಜೊತೆಯಲ್ಲಿ ಉಪ್ಪು, ಸಕ್ಕರೆ, 2 ಗ್ಲಾಸ್ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು.
    * ನಂತರ ಈ ಮಿಶ್ರಣವನ್ನು ಸೋಸಿ ತೆಗೆಯಬೇಕು.
    * ಈ ಜ್ಯೂಸ್‍ಗೆ ನಿಂಬೆಹಣ್ಣಿನ ರಸವನ್ನು ಸೇರಿಸಿದರೆ ರುಚಿಯಾದ, ಆರೋಗ್ಯಕರವಾದ ಸೌತೆಕಾಯಿ ಜ್ಯೂಸ್ ಸಿದ್ಧವಾಗುತ್ತದೆ.