ರಾಯಚೂರು: ಗಾಂಜಾ, ಮದ್ಯ ಸೇವಿಸಿ ನಿತ್ಯ ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯ (Father) ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ಹತ್ಯೆ (Murder) ನಡೆಸಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ದೇವರಭೂಪೂರು ಗ್ರಾಮದಲ್ಲಿ ನಡೆದಿದೆ.
ಬಂಡಿ ತಿಮ್ಮಣ್ಣ (55) ಕೊಲೆಯಾದ ವ್ಯಕ್ತಿಯಾದರೆ, ಶೀಲವಂತ ತಂದೆಯನ್ನು ಕೊಲೆ ಮಾಡಿದ ಆರೋಪಿ. ತಂದೆ ಪ್ರತಿ ನಿತ್ಯ ಗಾಂಜಾ, ಮದ್ಯ ಸೇವಿಸಿ ತಾಯಿಗೆ ಕಿರುಕುಳ ನೀಡುತ್ತಿದ್ದ ಎಂದು ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಗಣಿ ಅಧಿಕಾರಿ ಪ್ರತಿಮಾ ಕೊಲೆ ಕೇಸ್‌ನಲ್ಲಿ ಸುಳಿವು ಸಿಕ್ಕಿದೆ: ಪರಮೇಶ್ವರ್
ಮಗ ಕುಟುಂಬಸ್ಥರ ಎದುರೇ ತಂದೆಯನ್ನು ಕೊಂದು ತಪ್ಪಿಸಿಕೊಳ್ಳಲು ದಾರಿಯಿಲ್ಲದ ಹಿನ್ನೆಲೆ ತಾನೇ ಪೊಲೀಸರಿಗೆ ಕರೆ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಲಿಂಗಸುಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಾನಾಗೇ ಪೊಲೀಸರಿಗೆ ಶರಣಾಗಿದ್ದು, ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ನೇಹಿತರ ಭೇಟಿಗೆ ಬಂದಿದ್ದ ಯೋಧನ ಮೇಲೆ ಮಾರಣಾಂತಿಕ ಹಲ್ಲೆ- ವೀಡಿಯೋ ವೈರಲ್
ಹುಬ್ಬಳ್ಳಿ: ಮಗ ತಪ್ಪು ಮಾಡಿದರೆ ತಂದೆಯಾದಾತ ಅಬ್ಬಬ್ಬಾ ಎಂದರೆ ಬೈದು ಬುದ್ಧಿ ಹೇಳಬಹುದು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಾಲ್ಕು ತದುಕಿ ತಪ್ಪು ತಿದ್ದಿ-ತೀಡಬಹುದು. ದೀರ್ಘಕ್ಕೆ ಹೋದರೆ ಮನೆಯಿಂದ ಹೊರ ಹಾಕಬಹುದು. ಆದರೆ ಹುಬ್ಬಳ್ಳಿಯ ಈ ಉದ್ಯಮಿ ಮಾಡಿರೋ ಕುಕೃತ್ಯಕ್ಕೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಹೌದು. ಹುಬ್ಬಳ್ಳಿ (Hubballi) ಯ ಖ್ಯಾತ ಉದ್ಯಮಿ ಭರತ್ ಜೈನ್ ತನ್ನ ಮಗ ಅಖಿಲ್ ಜೈನ್ ನಿನ್ನೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಕಳೆದ ಮೂರು ದಿನಗಳಿಂದ ಪೊಲೀಸರು ಹುಡುಕಾಡುತ್ತಿದ್ದ ಶವ, ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ ಸುಪಾರಿ ಕಿಲ್ಲರ್ಸ್ ಧಾರವಾಡ ಜಿಲ್ಲೆಯ ಕಲಘಟಗಿ ಬಳಿ ದೇವಿಕೊಪ್ಪ ಗ್ರಾಮದ ಹೊರವಲಯದಲ್ಲಿ ಅಖಿಲ್ ಜೈನ್ ಶವ ಹೂತು ಹಾಕಿದ್ದಾರೆ. ಮಗನ ಕೊಲೆಗೆ ತಂದೆ ಭರತ್ ಜೈನ್ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಸುಪಾರಿ ಕಿಲ್ಲರ್ಸ್ ಕೊಲೆ ಮಾಡಿ ಭರತ್ ಜೈನ್ ವಾಟ್ಸಪ್ (Whatsapp) ಗೆ ಒಂದು ಫೋಟೋ ಕಳಿಸಿದ್ರು. ಅದರಿಂದಲೇ ಭರತ್ ಜೈನ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ.
ಫೋಟೋ ಜಾಡು ಹಿಡಿದು ಹೊರಟ ಪೊಲೀಸರಿಗೆ ಶವ ಕಬ್ಬಿನ ಗದ್ದೆಯಲ್ಲಿರೋದು ಪತ್ತೆಯಾಗಿದೆ. ವಾಟ್ಸಪ್‍ಗೆ ಬಂದಿರೋ ಫೊಟೋದ ಗುರುತು ಹಾಗೂ ಅಲ್ಲಿ ಗುಂಡಿ ಅಗೆದಿರೋ ಗುರುತುಗಳಿಂದ ಶವ ಇಲ್ಲೇ ಹೂತಿದ್ದಾರೆ ಅನ್ನೋದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಹೀಗಾಗಿ ಹುಬ್ಬಳ್ಳಿಯ ಹಿರಿಯ ಅಧಿಕಾರಿಗಳ ಟೀಮ್ ಕಬ್ಬಿನ ಗದ್ದೆ ತುಂಬಾ ಸರ್ಪಗಾವಲು ಹಾಕಿದೆ. ಇಂದು ಗುಂಡಿಯಿಂದ ಶವ ಹೊರ ತೆಗೆಯಲಿದ್ದಾರೆ. ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮೇಯುತ್ತಿದ್ದ ಹಸುಗಳನ್ನು ಗುಂಡಿಟ್ಟು ಕೊಂದ ಎಸ್ಟೇಟ್ ಮಾಲೀಕ
ಕುಡಿತದ ದಾಸನಾಗಿದ್ದ ಅಖಿಲ್ ಜೈನ್: ತಂದೆ ಭರತ್ ಜೈನ್ ಸೇರಿ ಐವರ ವಿರುದ್ಧ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಭರತ್ ಜೈನ್ ಮಾಹದೇವ ನಾಲವಾಡ್, ಸಲೀಮ್ ಸಲಾವುದ್ದೀನ್, ರೆಹಮಾನ್ ಹಾಗೂ ಓರ್ವ ಅಪರಿಚಿತನ ವಿರುದ್ಧ ದೂರು ದಾಖಲಾಗಿದೆ. ಭರತ್ ಜೈನ್ ಮಗ ಅಖಿಲ್ ಕುಡಿದು ಬಂದು ತಂದೆಗೆ ಕೊಲೆ ಬೆದರಿಕೆ ಹಾಕಿದ್ದನಂತೆ ಅಲ್ಲದೆ ನಿತ್ಯ ಕಿರಿಕಿರಿ ಮಾಡುತ್ತಿದ್ದ. ಹೀಗಾಗಿ ಸುಪಾರಿ ಕೊಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಭರತ್ ಜೈನ್ (Businessman Bharat Jain) ಹೆಸರಾಂತ ಉದ್ಯಮಿ, ಮಗನ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ ಅನ್ನೋದರ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಇನ್ನೊಂದು ಕಡೆ ಅಖಿಲ್ ಕೊಲೆಗೆ ಕ್ಯಾಸಿನೋ ಕಾರಣ ಎನ್ನಲಾಗಿದೆ. ಯಾಕಂದ್ರೆ ಕ್ಯಾಸಿನೋದಲ್ಲಿ ಸುಮಾರು ಐದರಿಂದ ಆರು ಕೋಟಿ ಅಖಿಲ್ ಸಾಲ ಮಾಡಿದ್ದ. ಸಾಲಗಾರರ ಕಿರಿಕಿರಿ ಜಾಸ್ತಿಯಾಗಿತ್ತು ಅನ್ನೋ ಅನುಮಾನವೂ ಇದೆ. ಇದಲ್ಲದೆ ಅಖಿಲ್ ಡ್ರಗ್ ಅಡಿಕ್ಟ್ ಆಗಿದ್ದ ಅನ್ನೋ ಮಾತುಗಳು ಕೇಳಿ ಬರ್ತಿದ್ದು, ಮರ್ಯಾದೆಗೆ ಅಂಜಿ ಭರತ್ ಜೈನ್ ಮುಂದೆ ನಿಂತು ಮಗನನ್ನ ಕೊಲೆ ಮಾಡಿದ್ನಾ ಅನ್ನೋದು ಅನುಮಾನ. ಆದರೆ ಪೊಲೀಸರು ಸುಪಾರಿ ಕೊಲೆ ಎಂದು ದಾಖಲಿಸಿಕೊಂಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಮೂರು ದಿನಗಳಿಂದಲೂ ಅಖಿಲ್ ಜೈನ್ ಕೊಲೆ ಪ್ರಕರಣ ಹುಬ್ಬಳ್ಳಿಯಲ್ಲಿ ಸದ್ದು ಮಾಡ್ತಿದೆ. ಇದುವರೆಗೂ ಪೊಲೀಸ್ ಅಧಿಕಾರಿಗಳು ಯಾವುದನ್ನೂ ಬಹಿರಂಗ ಪಡಿಸಿಲ್ಲ.
Live Tv
[brid partner=56869869 player=32851 video=960834 autoplay=true]
ಅಮರಾವತಿ: ಹಳೆಯ ಬಾವಿಯೊಳಗೆ(well) ತಂದೆ, ಮಗ ಸೇರಿದಂತೆ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ(Andhra Pradesh) ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಮಚಲಿಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಂಟುಮಿಲ್ಲಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಸ್ಥಳೀಯ ನಿವಾಸಿ ರಾಮರಾವ್(55) ಅವರು ನೀರಿನ ಹರಿವನ್ನು ಸರಿಪಡಿಸುವ ಸಲುವಾಗಿ ಹೂಳು ತೆಗೆಯಲು ಆಳವಾಗಿದ್ದ ಹಳೆಯ ಬಾವಿಗೆ ಇಳಿದಿದ್ದರು. ಆದರೆ ಈ ವೇಳೆ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮಗ ಲಕ್ಷ್ಮಣ್(33) ರಾಮರಾವ್ ಅವರನ್ನು ರಕ್ಷಿಸುವ ಸಲುವಾಗಿ ಬಾವಿಗೆ ಹಾರಿದ್ದಾರೆ. ಆದರೆ ಅವರಿಗೂ ಅದೇ ವಿಧಿ ಎದುರಾಗಿ, ಬಾವಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್
ಬಾವಿಗೆ ಇಳಿದಿದ್ದ ತಂದೆ, ಮಗನನ್ನು ರಕ್ಷಿಸಲು ಮುಂದಾದ ಗ್ರಾಮದ ಶ್ರೀನಿವಾಸ್ ಹಾಗೂ ರಂಗ ಬಾವಿಗೆ ಇಳಿದಿದ್ದರು. ಆದರೆ ಬಾವಿ ಪ್ರವೇಶಿಸಿದ ಯಾರೊಬ್ಬರೂ ಬದುಕಲು ಸಾಧ್ಯವಾಗಲಿಲ್ಲ. ಬಾವಿಯಲ್ಲಿ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ ಮಾಹಿತಿಯನ್ನು ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ: ಗನ್ ಹಿಡಿದು ಮಕ್ಕಳನ್ನು ಮದರಸಾಗೆ ಕಳುಹಿಸಿದ ವ್ಯಕ್ತಿ
ಘಟನಾ ಸ್ಥಳಕ್ಕೆ ಆಗಮಿಸಿದ ಆಂಧ್ರಪ್ರದೇಶದ ವಸತಿ ಸಚಿವ ಜೋಗಿ ರಮೇಶ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯ ಬಗ್ಗೆ ಬಂಟುಮಿಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಅಮರಾವತಿ: 90 ಕಿಮೀ. ದೂರದಲ್ಲಿದ್ದ ತಮ್ಮ ಹುಟ್ಟೂರಿಗೆ ಮಗನ ಮೃತದೇಹ ಸಾಗಿಸಲು ಅಂಬುಲೆನ್ಸ್ ಚಾಲಕ 20,000 ರೂ. ಕೇಳಿದ್ದಾನೆ. ಈ ಹಿನ್ನೆಲೆ ತಂದೆ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ತಡೆದು ಸವಾರನನ್ನು ಬೇಡಿಕೊಂಡು ತನ್ನ ಹುಟ್ಟೂರಿಗೆ ಸೇರಿದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ
ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್(RUIA) ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಃಖಿತ ವ್ಯಕ್ತಿ ನರಸಿಂಹುಲು ತನ್ನ 10 ವರ್ಷದ ಮಗ ಜಸ್ವಾನನ್ನು ಕಳೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ನರಸಿಂಹುಲು ಹುಟ್ಟೂರಿಗೆ 90 ಕಿ.ಮೀ ದೂರವಿತ್ತು. ಈ ಹಿನ್ನೆಲೆ ಅಂಬುಲೆನ್ಸ್ ಚಾಲಕನನ್ನು ನರಸಿಂಹುಲು ಆಸ್ಪತೆಯಿಂದ ತಮ್ಮೊರಿಗೆ ಜಸ್ವಾ ಮೃತದೇಹವನ್ನು ಕರೆದೊಯ್ಯಲು ಕೇಳಿದ್ದಾನೆ. ಇದನ್ನೂ ಓದಿ: ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ
My heart aches for innocent little Jesava,who died at Tirupati’s RUIA hospital.His father pleaded with authorities to arrange an ambulance which never came.With mortuary vans lying in utter neglect,pvt ambulance providers asked a fortune to take the child home for final rites.1/2 pic.twitter.com/mcW94zrQUt
ಚಾಲಕ 20,000 ರೂ. ಬೇಡಿಕೆ ಇಟ್ಟಿದ್ದಾನೆ. ಬಡತಂದೆಗೆ ಚಾಲಕ ಮಾಡಿದ ಡಿಮ್ಯಾಂಡ್ ಕೇಳಿ ಶಾಕ್ ಆಗಿದ್ದು, ಮಗನ ದೇಹ ಎತ್ತಿಕೊಂಡು ಆ ಸ್ಥಳದಲ್ಲಿ ಓಡಾಡುತ್ತಿದ್ದ ಬೈಕ್ ಸವಾರರಿಗೆ 90 ಕಿ.ಮೀಟರ್ ದೂರದಲ್ಲಿರುವ ತನ್ನ ಹುಟ್ಟೂರಿಗೆ ಬಿಡುವಂತೆ ಮನವಿ ಮಾಡಿಕೊಂಡಿದ್ದಾನೆ. ನರಸಿಂಹುಲು ಅವರು ಮಾವಿನ ತೋಟದಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದರು. ಅವರ ಬಳಿ ಹಣವಿಲ್ಲದ ಕಾರಣ ಹೊರಗಿನಿಂದ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತೋಟದ ಮಾಲೀಕರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಗ್ರಾಮದಿಂದ ಆಂಬುಲೆನ್ಸ್ ಕಳುಹಿಸಿದ್ದಾರೆ. ಆದರೆ ಇದನ್ನು ಗಮನಿಸಿದ ಖಾಸಗಿ ಅಂಬುಲೆನ್ಸ್ ಚಾಲಕ ಗ್ರಾಮದಿಂದ ಬಂದಿದ್ದ ಚಾಲಕನನ್ನು ಥಳಿಸಿ ಆಸ್ಪತ್ರೆಯಿಂದ ಓಡಿಸಿದ್ದಾರೆ. ಈ ಹಿನ್ನೆಲೆ ತಂದೆ ಬೈಕ್‍ನಲ್ಲಿ ಶವವನ್ನು ಹೊತ್ತೊಯ್ದಿದ್ದಾನೆ.
ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದು, ತಿರುಪತಿಯ RUIA ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪುಟ್ಟಮಗನನ್ನು ಕರೆದುಕೊಂಡು ಹೋಗಬೇಕೆಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ ಅದಕ್ಕೆ ಯಾರು ಒಪ್ಪಿಕೊಳ್ಳಲಿಲ್ಲ. ಶವಾಗಾರದ ವ್ಯಾನ್‍ಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಬರೆದು ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್
ಮಾಧ್ಯಮಗಳ ವರದಿಗಳ ಪ್ರಕಾರ, ಬುಡಕಟ್ಟು ಜನಾಂಗದ ಬಾಲಕ ಜಸ್ವಾ ಯಕೃತ್ತಿನ(ಲಿವರ್) ಸಮಸ್ಯೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಸಂಪೂರ್ಣ ಘಟನೆಯ ತನಿಖೆಗೆ ಆದೇಶಿಸಿದೆ.
ಲಕ್ನೋ: ಸೊಸೆಯಾಗಿದ್ದವಳೇ ತಂದೆಯ ಎರಡನೇ ಪತ್ನಿಯಾಗಿ, ಮಲತಾಯಿಯಾಗಿ ಬಂದು ಪುತ್ರನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿರುವ ಒಂದು ಪ್ರಕರಣ ಉತ್ತರ ಪ್ರದೇಶದ ಬದೌನ್‍ನಿಂದ ವರದಿಯಾಗಿದೆ.
ಯುವಕನಿಗೆ 2016ರಲ್ಲಿ ಮದುವೆಯಾಗಿತ್ತು. ಆತ ಮದ್ಯಪಾನ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆ, ಆತನನ್ನು ಬಿಟ್ಟುಹೋಗಿದ್ದಳು. ಆರು ತಿಂಗಳಿಂದ ತಂದೆಯವರು ಖರ್ಚಿಗೆ ಹಣ ನೀಡುವುದನ್ನು ನಿಲ್ಲಿಸಿದ್ದು ಹಾಗೂ ಸಂಭಾಲ್‍ನಲ್ಲಿ ಪ್ರತ್ಯೇಕವಾಗಿ ವಾಸವಾಗಿ ಇರುತ್ತಿದ್ದದ್ದು ಪುತ್ರನ ಗಮನಕ್ಕೆ ಬಂದಿತ್ತು. ಹೀಗಾಗಿ ತಂದೆಯವರ ಜೀವನ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡುವಂತೆ ಜಿಲ್ಲಾ ಪಂಚಾಯತ್ ಗೆ ಆರ್‍ಟಿಐ ಮೂಲಕ ಅರ್ಜಿ ಸಲ್ಲಿಸಿದ್ದನು. ಇದನ್ನೂ ಓದಿ: ಸೋಮವಾರಕ್ಕೆ ಮಾಡಿ ಸಿಹಿಯಾದ ಪನ್ನೀರ್ ಪಾಯಸ
ಮಗನಿಗೆ ಆಘಾತವಾಗುವಂತಹ ವಿಚಾರ ಗೊತ್ತಾಗಿದೆ. 2016ರಲ್ಲಿ ತಾನು ಮದುವೆಯಾಗಿದ್ದ ಯುವತಿಯನ್ನೇ ತಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಅಂಶ ಬಹಿರಂಗವಾಯಿತು. ಇದರಿಂದ ಕೋಪಗೊಂಡ ಯುವಕ ತಂದೆ ವಿರುದ್ಧ ಬಿಸೌಲಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಗುಟ್ಟು ಗೊತ್ತಾದ ಬಳಿಕ ಯುವತಿ ಕೂಡ ತಂದೆಯ ಜೊತೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಪೊಲೀಸರೂ ಕೂಡ ವಿವಾದವನ್ನು ರಾಜಿ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ತನ್ನ ತಂದೆಯನ್ನೇ ಮಗ ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಭೈರೇನಹಳ್ಳಿಯಲ್ಲಿ ನಡೆದಿದೆ.
ಮುನೇಗೌಡ(50) ಮಗನಿಂದ ಕೊಲೆಯಾದ ತಂದೆ. ಮಗ ಮಂಜುನಾಥ್ ಕೊಲೆ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ತಂದೆ ಮಗನ ಜಗಳದಲ್ಲಿ ತಾತ ಮಗನ ಕೈಯಿಂದಲೇ ಅಪ್ಪನ ಕೊಲೆ ಮಾಡಿಸಿದ್ದಾನೆ.
ತಂದೆ ಮಗ ಹಾಗೂ ತಾತ ಮೂವರಿಗೂ ಮದ್ಯ ಸೇವಿಸುವ ಚಟವಿತ್ತು. ಹೀಗಾಗಿ ಕುಡಿದ ಅಮಲಿನಲ್ಲಿ ಆಗಾಗ್ಗೆ ತಂದೆ, ಮಗ ಜಗಳ ಆಡೋದು ಮಾತಿಗೆ ಮಾತು ಬೆಳೆಸೋದು ಸಾಮಾನ್ಯ ಎಂಬಂತಾಗಿತ್ತು. ಇದೇ ರೀತಿ ನಿನ್ನೆ ರಾತ್ರಿ ಸಹ ತಂದೆ ಮಗ ಇಬ್ಬರು ಮಾತಿಗೆ ಮಾತು ಬೆಳೆಸಿ ಜಗಳವಾಡಿದ್ದಾರೆ. ಈ ವೇಳೆ ಕೊಲೆಯಾದ ಮುನೇಗೌಡ ತಂದೆ ರಂಗಪ್ಪ ‘ಏಯ್ ಏನೋ ಯಾವಗ್ಲೂ ಇದೇ ಮಾತಿಗೆ ಮಾತು ಸಾಯಿಸುಬಿಡು ಅಂತ ಪ್ರೇರೇಪಿಸಿದ್ದಾನೆ’ ತಾತನ ಮಾತು ಕೇಳಿದ ಮೊಮ್ಮಗ ತನ್ನ ತಂದೆಯನ್ನೆ ಕೊಲೆ ಮಾಡಿದ್ದಾನೆ.
ಮಂಜುನಾಥ್ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚೂಪಾದ ಚಾಕುವನ್ನು ತೆಗೆದುಕೊಂಡು ತಂದೆಗೆ ಇರಿದುಕೊಂದಿದ್ದಾನೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಮಗ ಮಂಜುನಾಥ್ ಹಾಗೂ ತಾತ ರಂಗಪ್ಪನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾವಣಗೆರೆ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ನಗರದ ಕೈಗಾರಿಕಾ ಪ್ರದೇಶದ ಸಮೀಪದಲ್ಲಿ ನಡೆದಿದೆ.
ತುರ್ಚಗಟ್ಟ ನಿವಾಸಿ ಸಿದ್ದೇಶ್ (30), 3 ವರ್ಷದ ಮಗ ಮೃತ ದುರ್ದೈವಿಗಳು. ತಂದೆ-ಮಗ ಇಂದು ತುರ್ಚಗಟ್ಟದಿಂದ ದಾವಣಗೆರೆಗೆ ಬರುತ್ತಿದ್ದರು. ಈ ವೇಳೆ ಮತ್ತೊಂದು ಬೈಕ್‍ನಲ್ಲಿ ವೇಗವಾಗಿ ಬಂದ ಯುವಕರು ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಎರಡೂ ಬೈಕ್‍ಗಳು ನುಜ್ಜುಗುಜ್ಜಾಗಿದ್ದು, ಕೆಳಗೆ ಬಿದ್ದ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದು ಬೈಕ್‍ನಲ್ಲಿದ್ದ ಯುವಕರು ಗಂಭೀರವಾಗಿ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದರೂ ಸ್ಥಳದಲ್ಲಿದ್ದವರು ಸುಮ್ಮನೆ ನೋಡುತ್ತಲೇ ನಿಂತಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹದಡಿ ಠಾಣೆಯ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಯುವಕರು ಅತಿ ವೇಗದಲ್ಲಿ ಬೈಕ್ ಓಡಿಸಿದ್ದೇ ಘಟನೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಸಂಬಂಧ ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚಿಕ್ಕೋಡಿ (ಬೆಳಗಾವಿ): ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ನಡೆದಿದೆ.
ಜುಗುಳ ಗ್ರಾಮದ ಭರತ್ ಅಲಾಸೆ (46), ಮಗ ಪ್ರೇಮ್ ಅಲಾಸೆ (20) ಮೃತ ದುರ್ದೈವಿಗಳು. ಭರತ್ ಅವರು ತಮ್ಮ ಹೊಲದಿಂದ ಟ್ರ್ಯಾಕ್ಟರ್ ನಲ್ಲಿ ಮೇವು ತರುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ಮೇಲೆ ಕುಳಿದಿದ್ದ ಭರತ್, ಪ್ರೇಮ್ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ: ಪಬ್ಲಿಕ್ ಟಿವಿ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ತಂದೆ-ಮಗನನ್ನ ಎಸ್‍ಡಿಆರ್‍ಎಫ್ ತಂಡ ಸುರಕ್ಷಿತವಾಗಿ ಮರಳಿ ತಂದಿದೆ.
ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮುಧೋಳ ತಾಲೂಕಿನ ಚಿಚಕಂಡಿ ಸೇತುವೆ ಮುಳುಗಡೆಯಾಗಿತ್ತು. ಸೇತುವೆ ಮೇಲೆ ನೀರು ಬರುತ್ತದೆ ಎನ್ನುವ ವಿಷಯ ತಿಳಿದ ಜೀರಗಾಳ ಗ್ರಾಮದ ಶ್ರೀಶೈಲ ಉಪ್ಪಾರ್ ಹಾಗೂ ಮಗ ರಮೇಶ್ ಹೊಲದಲ್ಲಿ ಕಟ್ಟಲಾಗಿದ್ದ ದನಗಳನ್ನ ಹೊರತರಲು ಹೋದಾಗ ಪ್ರವಾಹಕ್ಕೆ ಸಿಲುಕಿ ಜೀವಭಯದಲ್ಲಿದ್ದರು.
ಈ ವಿಚಾರ ತಿಳಿದು ಪಬ್ಲಿಕ್ ಟಿವಿ ಪ್ರತಿನಿಧಿ ರವಿ ಹಳ್ಳೂರ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ, ರಕ್ಷಣಾ ಕಾರ್ಯಕ್ಕೆ ಮುಂದಾಗುವಂತೆ ಮನವಿ ಮಾಡಿದ್ದರು. ಪರಿಣಾಮ, ಎಸ್‍ಡಿಆರ್‍ಎಫ್ ತಂಡ ಸ್ಥಳಕ್ಕೆ ಆಗಮಿಸಿ ಪ್ರವಾಹದಲ್ಲಿ ಸಿಲುಕಿದ್ದ ತಂದೆ ಮಗನನ್ನು ರಕ್ಷಿಸಿದ್ದಾರೆ.
ಹಿರಣ್ಯಕೇಶಿ, ಮಾರ್ಕಂಡೇಯ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಘಟಪ್ರಭಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮೇಲೆ ಸುಮಾರು ಎಂಟು ಅಡಿಯಷ್ಟು ನೀರು ಹರಿಯುತ್ತಿದೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಈ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಚಖಂಡಿಯಲ್ಲಿ ಪ್ರವಾಹದ ಮಧ್ಯೆ ತಂದೆ-ಮಗ ಸಿಲುಕಿಕೊಂಡು ಅಪಾಯದಲ್ಲಿದ್ದಾರೆ.
ಹಿರಣ್ಯಕೇಶಿ, ಮಾರ್ಕಂಡೇಯ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮೇಲೆ ಸುಮಾರು ಎಂಟು ಅಡಿಯಷ್ಟು ನೀರು ಹರಿಯುತ್ತಿದೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಈ ಮಧ್ಯೆ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನಿವಾಸಿಗಳಾದ ಶ್ರೀಶೈಲ ಉಪ್ಪಾರ(68) ಹಾಗೂ ರಮೇಶ್ ಉಪ್ಪಾರ(30) ಪ್ರವಾಹದ ಮಧ್ಯೆ ಸಿಲುಕಿಕೊಂಡು ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಸುಮಾರು ನಾಲ್ಕು ಗಂಟೆಯಿಂದ ತಂದೆ- ಮಗ ನೀರಿನ ಮಧ್ಯೆಯೇ ಸಿಲುಕಿದ್ದಾರೆ. ಚಿಚಖಂಡಿ ನಡುಗಡ್ಡೆಯಲ್ಲಿದ್ದ ಹೊಲದಲ್ಲಿನ ಎಮ್ಮೆಗಳನ್ನು ತರಲು ಹೋಗಿ ನೀರಿನ ಪ್ರವಾಹದ ಮಧ್ಯೆ ತಂದೆ ಮಗ ಸಿಲುಕಿದ್ದಾರೆ. ಅವರ ಜೊತೆ 4 ಎಮ್ಮೆಗಳು ಕೂಡ ಜೀವ ರಕ್ಷಣೆಗಾಗಿ ಪರದಾಡುತ್ತಿವೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪಬ್ಲಿಕ್ ಟಿವಿ ವರದಿಗಾರರು ತಂದೆ-ಮಗನನ್ನು ರಕ್ಷಣೆ ಮಾಡಿ ಎಂದು ಮುದೋಳ ಶಾಸಕ ಗೊವಿಂದ್ ಕಾರಜೋಳ್, ಎಸ್ ಪಿ ಲೋಕೆಶ್, ಡಿಸಿ ಆರ್. ರಾಮಚಂದ್ರನ್ ಹಾಗೂ ಮುದೋಳ ಸಿಪಿಐ ಶ್ರೀಶೈಲ್ ಬನ್ನೆ ಅವರಿಗೆ ತಿಳಿಸಿದ್ದಾರೆ. ಆದರೂ ಕೂಡ ಈವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿಲ್ಲ. ಬರೀ ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ. ಹೀಗಾಗಿ ರಕ್ಷಣೆಗೆ ಬಾರದ ಅಧಿಕಾರಿಗಳ ಮೇಲೆ ಜೀರಗಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.