Tag: ತಂತ್ರಜ್ಞಾನ

  • ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

    ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

    ಬೀಜಿಂಗ್: ಭಾರತದ ಸೇರಿ ಹಲವು ದೇಶಗಳು ಇದೀಗ 5ಜಿ ನೆಟ್‌ವರ್ಕ್ ಪರಿಚಯಿಸಿದರೆ, ಚೀನಾವು ಈಗ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಪರಿಚಯಿಸಿದೆ.

    ಚೀನಾ (China) ಹಾಗೂ ಹುವೈ ಯುನಿಕಾರ್ನ್ ಜೊತೆ ಜಂಟಿಯಾಗಿ 10ಜಿ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಚೀನಾದ ಹೆಬೈ ಪ್ರಾಂತ್ಯದ ಸುನನ್ ಕೌಂಟಿಯಲ್ಲಿ ಕಾರ್ಯಗತಗೊಳಿಸಿದೆ. ಇದನ್ನೂ ಓದಿ: ನಿವೃತ್ತ ಡಿಜಿಪಿ ಬರ್ಬರ ಹತ್ಯೆ – ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ನಡೀತಾ ಕೊಲೆ?

    ಭಾರತ (India) ಸೇರಿ ಇತರೆ ದೇಶಗಳು 100 ಎಂಬಿಪಿಎಸ್ ವೇಗದಲ್ಲಿರುವಾಗ, ಚೀನಾ ಕಂಪನಿಗಳು ಇದರಿಂದ 10 ಪಟ್ಟು ವೇಗವನ್ನು ಹೊಂದಿರುವ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಜಾರಿಗೊಳಿಸಿದೆ. 2 ಗಂಟೆಗಳ ಫಿಲ್ಮ್‌ಗಳು ಕೇವಲ 1 ನಿಮಿಷದಲ್ಲಿ ಮಾಡಬಹುದು. ಇದನ್ನೂ ಓದಿ: ಕೋಟಿ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ ಮಂಗಳಮುಖಿಯ ಬರ್ಬರ ಹತ್ಯೆ – ಪತಿ, ಮನೆಗೆಲಸದಾಕೆ ಪರಾರಿ

    ಹೆಬೈ ಪ್ರಾಂತ್ಯದಲ್ಲಿ ಪರಿಚಯಿಸಲ್ಪಟ್ಟಿರುವ ವಿಶ್ವದ ಮೊದಲ 50ಜಿ ಪಿಒಎನ್ ಸೊಲ್ಯೂಷನ್ಸ್ ಅಡಿ ನಿರ್ಮಿಸಲ್ಪಟ್ಟ ಈ ಬ್ರಾಡ್ ಬ್ಯಾಂಡ್ ಮೂಲಸೌಲಭ್ಯ 9,834 ಎಂಬಿಪಿಎಸ್ ಡೌನ್‌ಲೋಡ್ ಸ್ಟೀಡ್ ಹೊಂದಿದೆ. ಇದು 1,008 ಎಂಬಿಪಿಎಸ್ ಸ್ಪೀಡ್‌ನಲ್ಲಿ ಅಪ್‌ಲೋಡ್ ಮಾಡುತ್ತದೆ. ಇದನ್ನೂ ಓದಿ: ನಿವೃತ್ತ IPS ಅಧಿಕಾರಿಗೆ 10 ಬಾರಿ ಚಾಕುವಿನಿಂದ ಇರಿದು ಕೊಂದ ಪತ್ನಿ; 15 ನಿಮಿಷ ನರಳಿ ಪ್ರಾಣಬಿಟ್ಟ ಓಂ ಪ್ರಕಾಶ್‌

    ಅಲ್ಲದೇ 900 ಜಿಬಿಯಷ್ಟು ಭಾರಿ ಫೈಲ್ ಗಳು ಕೆಲವೇ ಸೆಕೆಂಡಲ್ಲಿ ಡೌನ್‌ಲೋಡ್ ಆಗುತ್ತವೆ. ಫೈಬರ್ ಆಪ್ಟಿಕ್ ಆರ್ಕಿಟೆಕ್ಟರ್ ಅನ್ನು ಅಪ್ ಗ್ರೇಡ್ ಮಾಡಿದಾಗ ಸಿಂಗಲ್ ಯೂಸರ್ ಬ್ಯಾಂಡ್‌ವಿಡ್ಸ್ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 102 ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಜಸ್ಥಾನ | ಅಪ್ರಾಪ್ತನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ – ಮಹಿಳೆಗೆ 20 ವರ್ಷ ಜೈಲು

    ಬ್ರಾಡ್‌ಬ್ಯಾಂಡ್ ವೇಗವರ್ಧನೆಯು ಭವಿಷ್ಯದಲ್ಲಿ 8ಕೆ ವೀಡಿಯೋ ಸ್ಟ್ರೀಮಿಂಗ್ ಆಪ್‌ಗಳು ಹಾಗೂ ಅಡ್ವಾನ್‌ಸ್ಟ್ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಅತ್ಯುನ್ನತ ವರ್ಚುವಲ್ ರಿಯಾಲಿಟಿ ಅನುಭವಕ್ಕೆ ಪೂರಕವಾಗಲಿದೆ ಎಂದು ವರದಿಯಾಗಿದೆ.

  • ಕರ್ನಾಟಕ ದೇಶದ ತಂತ್ರಜ್ಞಾನ ವಲಯದ ಹೃದಯ ಬಡಿತ: ಡಿಕೆಶಿ

    ಕರ್ನಾಟಕ ದೇಶದ ತಂತ್ರಜ್ಞಾನ ವಲಯದ ಹೃದಯ ಬಡಿತ: ಡಿಕೆಶಿ

    ಬೆಂಗಳೂರು: ದೇಶದ ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ (Karnataka) ಮೊದಲ ಸ್ಥಾನದಲ್ಲಿದೆ. ಅಲ್ಲದೇ ಐಟಿ- ಬಿಟಿ ಹಾಗೂ ನವೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕರ್ನಾಟಕ ಅದರಲ್ಲೂ ಬೆಂಗಳೂರು (Bengaluru) ದೇಶದ ತಂತ್ರಜ್ಞಾನ ವಲಯದ ಹೃದಯ ಬಡಿತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರು ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ 27ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2024ರ (Tech Summit 2024) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕವು ಪೇಟೆಂಟ್ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಪೇಟೆಂಟ್ ಅರ್ಜಿಗಳ ಸಂಖ್ಯೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನದ ಜೊತೆಗೆ ಚಿಪ್ ವಿನ್ಯಾಸದಲ್ಲಿ ದೇಶದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ ಎಂದರು. ಇದನ್ನೂ ಓದಿ: ತುಂಬಿ ಹರಿಯುತ್ತಿದ್ದ ಕಾಲುವೆಗೆ ಇಳಿದ ಗೂಡ್ಸ್ ಆಟೋ – ಕೂಲಿ ಕಾರ್ಮಿಕರು ಪಾರು

    ಯಂತ್ರೋಪಕರಣಗಳ ತಯಾರಿಕೆಯಲ್ಲಿಯೂ ಕರ್ನಾಟಕ ಮುಂದಿದ್ದು, ಸುಮಾರು 85ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ವಿನ್ಯಾಸ ಘಟಕಗಳು ನಮ್ಮ ರಾಜ್ಯದಲ್ಲಿವೆ. ಸೆಮಿಕಂಡಕ್ಟರ್ ತಯಾರಿಕೆಗೆ ಕರ್ನಾಟಕವೇ ಆಧಾರ. ದೇಶದ ಜೈವಿಕ ತಂತ್ರಜ್ಞಾನ ವಲಯಕ್ಕೆ 52%ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ: ಹವಾಮಾನ ತಜ್ಞ ಸಿ.ಎಸ್. ಪಾಟೀಲ್

    ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ನಮ್ಮ ನಗರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಹಲವಾರು ಶಿಕ್ಷಣತಜ್ಞರು ಹೆಸರಾಂತ ಎಂಜಿನಿಯರಿಂಗ್ ಕಾಲೇಜುಗಳು, ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ಬೆಂಗಳೂರು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಬೆಂಗಳೂರು ಬೆಳವಣಿಗೆಗೆ ನೆಹರು ಅವರು ಹಾಗೂ ಅನೇಕರ ದೂರದೃಷ್ಟಿಯ ಕೊಡುಗೆಯಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಲೆ ಯತ್ನ ಕೇಸ್; ನಟ ತಾಂಡವೇಶ್ವರ್ ಅರೆಸ್ಟ್- ಕಮಿಷನರ್ ದಯಾನಂದ್ ಹೇಳೋದೇನು?

    ಅಜೀಂ ಪ್ರೇಮ್ ಜೀ ಅವರು ಮತ್ತು ನಾರಾಯಣ ಮೂರ್ತಿ ಅವರು ಬೆಂಗಳೂರು ಹೊರತು ಪಡಿಸಿ ಬೇರೆ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಬೆಂಗಳೂರು ಐಟಿ ಹಬ್ ಬೆಳೆಯುತ್ತಿರಲಿಲ್ಲ. ಸಾವಿರಾರು ಜನರು ತಮ್ಮ ಸ್ಟಾರ್ಟ್ಅಪ್‌ಗಳಿಗೆ ಬೆಂಗಳೂರನ್ನು ಆಯ್ಕೆ ಮಾಡದೇ ಇದ್ದಿದ್ದರೆ ಬೆಂಗಳೂರು ಲಕ್ಷಾಂತರ ಜನರಿಗೆ ಆಸರೆ ಒದಗಿಸುತ್ತಿರಲಿಲ್ಲ ಎಂದು ನುಡಿದರು. ಇದನ್ನೂ ಓದಿ:  ಚಿತ್ರದುರ್ಗ| ಪತಿ ಸಾವಿನಿಂದ ಖಿನ್ನತೆ – ತಾಯಿ, ಮಗಳು ನೇಣಿಗೆ ಶರಣು

    ಬೆಂಗಳೂರು ಟೆಕ್ ಸಮ್ಮಿಟ್ ನವೋದ್ಯಮಿಗಳು, ಉದ್ಯಮಿಗಳು, ತಂತ್ರಜ್ಞರು, ಸೃಜನಶೀಲರು ಮತ್ತು ಅಸಾಧಾರಣ ಕನಸುಗಾರರ ಸಮ್ಮೇಳನ. ಕರ್ನಾಟಕ ದಾರ್ಶನಿಕರ, ಆಧುನಿಕ ಚಿಂತಕರ ಭೂಮಿ. ಭಾರತದ ಐಟಿ ಕ್ರಾಂತಿಯ ಹಾಗೂ ಜೈವಿಕ ತಂತ್ರಜ್ಞಾನದ ಹುಟ್ಟೂರು. ಮಾಹಿತಿ ತಂತ್ರಜ್ಞಾನದ ಮೂಲಕ ನಮ್ಮ ರಾಜ್ಯದ ಹೆಸರು ಜಾಗತಿಕ ಮಟ್ಟದಲ್ಲಿದೆ ಎಂದರು. ಇದನ್ನೂ ಓದಿ: ಯು.ಟಿ.ಪಿ ಕಾಲುವೆ ಒಡೆದು 1 ತಿಂಗಳಾದ್ರೂ ದುರಸ್ತಿ ಮಾಡದ ಅಧಿಕಾರಿಗಳು- ಕಂಗಾಲಾದ ರೈತರು

    ಕರ್ನಾಟಕವು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ವಲಯಗಳಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತಿದೆ. ಈ ವಲಯದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ನಮ್ಮ ಕರ್ನಾಟಕವು 2025ರ ವೇಳೆಗೆ ಈ ಕ್ಷೇತ್ರದಲ್ಲಿ ಸುಮಾರು 25,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಈ ಕ್ಷೇತ್ರಕ್ಕೆ ಬೆಂಬಲವಾಗಿ ನಿಂತ ಪರಿಣಾಮ ಸುಮಾರು 70% ರಷ್ಟು ಉದ್ಯೋಗ ಸೃಷ್ಟಿಯಾಗಿಯಾಗಿದೆ ಎಂದು ತಿಳಿಸಿದರು.  ಇದನ್ನೂ ಓದಿ: Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ

  • ಏರೋಸ್ಪೇಸ್ ಕ್ಷೇತ್ರದಲ್ಲಿ ಲಕ್ಷ ಮಂದಿಗೆ ತರಬೇತಿ, 60,000 ಕೋಟಿ ಹೂಡಿಕೆಯ ಗುರಿ – ಪ್ರಿಯಾಂಕ್ ಖರ್ಗೆ

    ಏರೋಸ್ಪೇಸ್ ಕ್ಷೇತ್ರದಲ್ಲಿ ಲಕ್ಷ ಮಂದಿಗೆ ತರಬೇತಿ, 60,000 ಕೋಟಿ ಹೂಡಿಕೆಯ ಗುರಿ – ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ 2022-27ರಂತೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ 1 ಲಕ್ಷ ಮಂದಿಗೆ ತರಬೇತಿ ನೀಡುವ ವ್ಯಾಪಕ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು ಹಾಗೂ 60,000 ಕೋಟಿ ರೂ. ಹೂಡಿಕೆಯ ಮೂಲಕ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ 70,000 ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ 2 ದಿನಗಳ ರಕ್ಷಣಾ ಮತ್ತು ಏರೋಸ್ಪೇಸ್‌ಗೆ ಸಂಬಂಧಿಸಿದ 13ನೇ ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಶೃಂಗಸಭೆಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ಇದನ್ನೂ ಓದಿ: ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ

    ಮೂಲಸೌಕರ್ಯದಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ ಮತ್ತು ಸುಧಾರಿತ ಸಾಮಗ್ರಿಗಳಲ್ಲಿ ಸಂಶೋಧನೆಗೆ ಆದ್ಯತೆ ನೀಡುತ್ತದೆ, ಜೊತೆಗೆ ವ್ಯವಹಾರವನ್ನು ಸುಲಭಗೊಳಿಸಲು 500 ಕೋಟಿ ಪ್ರೋತ್ಸಾಹಕಗಳೊಂದಿಗೆ ನಿಯಮಾವಳಿಗಳನ್ನು ಸರಳೀಕರಿಸುತ್ತದೆ. 200ಕ್ಕೂ ಹೆಚ್ಚು ಪಾಲುದಾರಿಕೆಗಳು ಸಹಯೋಗವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದೂ ಸಚಿವರು ತಿಳಿಸಿದರು.

    ಸುಸ್ಥಿರತೆ ಉತ್ತೇಜಿಸುವ ಮೂಲಕ 2027ರ ವೇಳೆಗೆ ಸ್ಥಳೀಯ ತಂತ್ರಜ್ಞಾನಗಳು ಮತ್ತು ಹಸಿರು ಅಭ್ಯಾಸಗಳ ಮೂಲಕ ಶೇ.30ರಷ್ಟು ಇಂಗಾಲದ ಕಡಿತವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ, ಹೆಚ್ಚುವರಿಯಾಗಿ, ಏರೋಸ್ಪೇಸ್ ಮತ್ತು ಡಿಫೆನ್ಸ್ ಇಕೋಸಿಸ್ಟಮ್‌ನ ಜಾಗದಲ್ಲಿ ವೇಗವರ್ಧಕ ಬೆಂಬಲವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಿದೆ ಎಂದೂ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಇದನ್ನೂ ಓದಿ: ಉಡುಪಿಯ ಹಲವೆಡೆ ನೆರೆ ಪರಿಸ್ಥಿತಿ; ಹಾಸನ, ಕೊಡಗಿನನಲ್ಲಿ ಭೂಕುಸಿತದ ಅವಾಂತರ; ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ!

    ಸೈನ್ಯ, ವಾಯುಪಡೆ, ಭದ್ರತೆ ಮತ್ತು ಕಣ್ಗಾವಲು, ನೌಕಾಪಡೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೆ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಒದಗಿಸಲು ಉಪಗ್ರಹ ಇಂಟರ್ನೆಟ್ ಸೇವೆ (SIS) ಮೌಲ್ಯಯುತವಾದ ವೇದಿಕೆಯಾಗಿದೆ, ಶೃಂಗಸಭೆಯು ಅತ್ಯಾಧುನಿಕ ತಂತ್ರಜ್ಞಾನಗಳು, ನಾವೀನ್ಯತೆ ಮತ್ತು ರೋಮಾಂಚಕ ಭಾರತೀಯ ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಪಂಚದ ಪ್ರದರ್ಶನವನ್ನು ಹೊಂದಿದೆ ಎಂದೂ ಸಚಿವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

    ಮುಂದುವರೆದು ಕರ್ನಾಟಕವು ಮಾಹಿತಿ ತಂತ್ರಜ್ಞಾನ (IT) ಮಾತ್ರವಲ್ಲದೇ ಡೀಪ್ ಟೆಕ್, ನ್ಯಾನೋ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿಯೂ ಮುಂಚೂಣಿಯಲ್ಲಿದೆ. ಎಲೆಕ್ಟ್ರಾನಿಕ್ಸ್ ವಲಯದಲ್ಲಿ, ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ, ನಿರ್ದಿಷ್ಟವಾಗಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಭಾರತದ ಪ್ರಮುಖ ಶಕ್ತಿಗೆ ಹಾದಿಯನ್ನು ಸುಗಮಗೊಳಿಸಿದೆ ಎಂದು ಹೇಳಿದರು. ಇದನ್ನೂ ಓದಿ: Valmiki Corporation Scam | ನಿಗಮದ ಹಣವನ್ನ ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಿದ್ದಾರೆ – ಇಡಿ ಸ್ಫೋಟಕ ಹೇಳಿಕೆ!

    ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್ ಅಸೋಸಿಯೇಷನ್ ಆಫ್ ಇಂಡಿಯಾ (ELCINA) 1967ರಿಂದ ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಉದ್ಯಮಕ್ಕೆ ಸೇವೆ ಸಲ್ಲಿಸುತ್ತಿರುವ ಅತಿದೊಡ್ಡ ಮತ್ತು ಹಳೆಯ ಸಂಸ್ಥೆಯಾಗಿದೆ, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ವಲಯದಲ್ಲಿ ಉತ್ಪಾದನೆ ಮತ್ತು ವ್ಯಾಪಾರ ವಿಸ್ತರಣೆಯನ್ನು ಉತ್ತೇಜಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ ವಿವರಿಸಿದರು.

  • ಗಗನಯಾತ್ರಿಗಳ ಮೈಕ್ರೋಮೀಟೋರಾಯ್ಡ್ ದಿರಿಸುಗಳ ಕೌತುಕ ಲೋಕದ ಬಗ್ಗೆ ನಿಮಗೆ ಗೊತ್ತಾ? 

    ಗಗನಯಾತ್ರಿಗಳ ಮೈಕ್ರೋಮೀಟೋರಾಯ್ಡ್ ದಿರಿಸುಗಳ ಕೌತುಕ ಲೋಕದ ಬಗ್ಗೆ ನಿಮಗೆ ಗೊತ್ತಾ? 

    ಬೆಂಗಳೂರು: ತಾಂತ್ರಿಕತೆ ಬೆಳೆದಂತೆ ಬಾಹ್ಯಾಕಾಶ ಸಂಶೋಧನೆಗಳು (Space Research) ಹೆಚ್ಚೆಚ್ಚು ಆಗುತ್ತಿದ್ದು, ಅದಕ್ಕೆ ಪೂರಕವಾದ ಸಂಶೋಧನೆಗಳು ನಡೆಯುತ್ತಿವೆ. ಹಾಗಾಗಿ ಬ್ಯಾಹ್ಯಾಕಾಶ ಯಾನಕ್ಕೆ ಬಹುಮುಖ್ಯವಾಗಿ ಬೇಕಾದ ಗಗನಯಾತ್ರಿಗಳ ದಿರಿಸುಗಳಲ್ಲೂ (Astronuts Dress) ಸಾಕಷ್ಟು ಬೆಳವಣಿಗೆ ಕಂಡುಬರುತ್ತಿವೆ. 

    ಹೌದು.. ಬಾಹ್ಯಾಕಾಶ ಯಾನಕ್ಕೆ ತೆರಳುವ ಗಗನಯಾತ್ರಿಗಳು ಧರಿಸುವ ದಿರಿಸುಗಳು ಅದ್ಭುತ ತಂತ್ರಜ್ಞಾನವನ್ನ ಒಳಗೊಂಡಿವೆ. ಗಗನಯಾತ್ರಿಗಳು ಬಾಹ್ಯಾಕಾಶದ ಕಠಿಣ ವಾತಾವರಣದಲ್ಲಿಯೂ ಅನ್ವೇಷಣೆ ಕೈಗೊಳ್ಳಲು ಮತ್ತು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಅವು ಅನುವು ಮಾಡಿಕೊಡುತ್ತವೆ. ಬಾಹ್ಯಾಕಾಶ ಯಾನದ ವೇಳೆ ಗಗನಯಾತ್ರಿಗಳು ಧರಿಸುವ ಉಡುಪುಗಳ ಕೆಲವು ವಿಶಿಷ್ಟ ಲಕ್ಷಣಗಳನ್ನು ಇಲ್ಲಿ ತಿಳಿಯಬಹುದು. 

    ನೀರಿನ ಟ್ಯೂಬ್‌ಗಳಂತಹ ರಚನೆಗಳು ಮತ್ತು ಮೈಕ್ರೋಮೀಟೋರಾಯ್ಡ್ (Micrometeoroid) ಉಡುಪನ್ನು ಗಗನಯಾತ್ರಿಗಳು ಬಳಸುತ್ತಾರೆ. ಇದು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ದೈಹಿಕ ದ್ರವಗಳು ಸಮತೋಲನದಲ್ಲಿರುವಂತೆ ನೋಡಿಕೊಳ್ಳಲು ಸಹಾಯಕವಾಗುತ್ತವೆ. 

    ಜೊತೆಗೆ ಈ ಉಡುಪುಗಳು -250° ಫ್ಯಾರನ್‌ಹೀಟ್‌ (ಸುಮಾರು -121 ಡಿಗ್ರಿ ಸೆಲ್ಸಿಯಸ್‌) ನಿಂದ 250° ಫ್ಯಾರನ್‌ ಹೀಟ್‌ (121 ಡಿಗ್ರಿ ಸೆಲ್ಸಿಯಸ್‌) ವರೆಗಿನ ವಿಪರೀತ ತಾಪಮಾನದಿಂದ ಅವರನ್ನ ರಕ್ಷಿಸುತ್ತವೆ. ಗಗನಯಾತ್ರಿಗಳಿಗೆ ಉಸಿರಾಟಕ್ಕೆ ಆಮ್ಲಜನಕ ಪೂರೈಕೆ ಮಾಡುವ ಜೊತೆಗೆ, ಬಾಹ್ಯಾಕಾಶದಲ್ಲಿ ನಡೆದಾಡುವ ಸಮಯದಲ್ಲಿ ಕುಡಿಯಲು ನೀರನ್ನೂ ಪೂರೈಸುತ್ತದೆ. ಇದನ್ನೂ ಓದಿ: ಅರ್ಮೇನಿಯನ್ ನಿಯಂತ್ರಿತ ಕರಾಬಾಕ್‌ನಲ್ಲಿ ಅಜರ್‌ಬೈಜಾನ್‌ ಮಿಲಿಟರಿ ದಾಳಿ – 25 ಮಂದಿ ಸಾವು

    ಕೈಗವಸುಗಳು, ಬೂಟುಗಳು, ಹೆಲ್ಮೆಟ್, ವೈಸರ್ (ಹೆಲ್ಮೆಟ್‌ನಲ್ಲಿ ಮುಖದ ಮುಂಭಾಗ ಅಳವಡಿಸಲಾದ ಗ್ಲಾಸ್‌) ಮತ್ತು ಬೆನ್ನುಹೊರೆಯನ್ನು ಈ ಉಡುಪು ಒಳಗೊಂಡಿರುತ್ತದೆ. ಕೆಲವೊಮ್ಮೆ ಜೆಟ್-ಪ್ಯಾಕ್‌ (ಲಿಕ್ವಿಡ್‌ ಡಿವೈಸ್‌) ಮಾದರಿಯ ಸಾಧನವಾಗಿರುವ ಇದನ್ನು ಮಾನವಸಹಿತ ಚಾಲನಾ ಘಟಕವೆಂದೂ (ಮ್ಯಾನ್ಡ್ ಮ್ಯಾನುವರಿಂಗ್ ಯುನಿಟ್) ಕರೆಯಲಾಗುತ್ತದೆ. ಇದು ಗಗನಯಾತ್ರಿಗಳು ಅಗತ್ಯ ಕಾರ್ಯನಿರ್ವಹಿಸಲು ನೆರವಾಗುತ್ತದೆ.

    ತಾಪಮಾನ, ಒತ್ತಡ, ಆಮ್ಲಜನಕ, ಇಂಗಾಲದ ಡೈಆಕ್ಸೈಡ್, ಶಕ್ತಿ, ಸಂವಹನ ಮತ್ತು ಟೆಲಿಮೆಟ್ರಿ ಅಥವಾ ದೂರಮಾಪನ (ದೂರದ ಭೌತಿಕ ಘಟನೆಯನ್ನು ತಿಳಿಯುವ ವ್ಯವಸ್ಥೆ) ಮಾಡುವ, ಸೂಟ್‌ನ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಜೀವ ಬೆಂಬಲ ವ್ಯವಸ್ಥೆಯನ್ನ (ಲೈಫ್ ಸಪೋರ್ಟ್ ಸಿಸ್ಟಂ) ಅವು ಹೊಂದಿವೆ. ಇದನ್ನೂ ಓದಿ: ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?

    ಭವಿಷ್ಯದ ಕಾರ್ಯಾಚರಣೆಗಳ ಸವಾಲುಗಳು ಮತ್ತು ಬೇಡಿಕೆಗಳನ್ನು ಪೂರೈಸಲು ಬಾಹ್ಯಾಕಾಶದ ದಿರಿಸುಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ.  ಉದಾಹರಣೆಗೆ, ಎಕ್ಸ್‌ ಪ್ಲೋರೇಶನ್ ಎಕ್ಸ್‌ ಟ್ರಾವೆಹಿಕ್ಯುಲರ್ ಮೊಬಿಲಿಟಿ ಯುನಿಟ್ ಅಥವಾ xEMU ಎಂಬ ಹೊಸ ಸೂಟ್ ಅನ್ನು ನಾಸಾ (NASA) ಅಭಿವೃದ್ಧಿಪಡಿಸುತ್ತಿದೆ. ಇದು ಹಿಂಭಾಗದಲ್ಲಿ ಪ್ರವೇಶಿಸಬಹುದಾದ ಹ್ಯಾಚ್, ಸುಧಾರಿತ ಚಲನಶೀಲತೆ, ವರ್ಧಿತ ಸಂವಹನ ಮತ್ತು ಹೆಚ್ಚಿನ ಗ್ರಾಹಕೀಕರಣ ಆಯ್ಕೆಗಳನ್ನು ಹೊಂದಿರುತ್ತದೆ. 2025ರ ಚಂದ್ರಯಾನಕ್ಕೆ ಈಗಿನೀಂದಲೇ ಸಿದ್ಧತೆ ನಡೆಸಿರುವ ನಾಸಾ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನೊಳಗೊಂಡ ಉಡುಪುಗಳನ್ನು ಸಿದ್ಧಪಡಿಸಿದೆ. 

    ಬಾಹ್ಯಾಕಾಶ ಸೂಟ್‌ಗಳು ಗಗನಯಾತ್ರಿಗಳ ಸುರಕ್ಷತೆಗೆ ಮಾತ್ರವಲ್ಲದೆ ಮತ್ತು ಆವಿಷ್ಕಾರಗಳನ್ನೂ ಮುನ್ನಡೆಸಲೂ ನೆರವಾಗುತ್ತಿವೆ

    ಮಾಹಿತಿ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಾಗಿಂಗ್ ಮಾಡುವಾಗ ಕಾರು ಡಿಕ್ಕಿ – ಟೆಕ್ ಸಿಇಒ ಸಾವು

    ಜಾಗಿಂಗ್ ಮಾಡುವಾಗ ಕಾರು ಡಿಕ್ಕಿ – ಟೆಕ್ ಸಿಇಒ ಸಾವು

    ಮುಂಬೈ: ಜಾಗಿಂಗ್‍ಗೆ (Jogging) ಹೋಗಿದ್ದ ತಂತ್ರಜ್ಞಾನ ಸಂಸ್ಥೆಯೊಂದರ ಸಿಇಓಗೆ (Tech CEO) ಕಾರೊಂದು (Car) ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮುಂಬೈನ (Mumbai) ವರ್ಲಿ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಮಹಿಳೆಯನ್ನು ರಾಜಲಕ್ಷ್ಮಿ ರಾಮಕೃಷ್ಣ (42) ಎಂದು ಗುರುತಿಸಲಾಗಿದೆ. ದಾದರ್ ಮಾತುಂಗಾ ಪ್ರದೇಶದ ನಿವಾಸಿಯಾಗಿರುವ ರಾಜಲಕ್ಷ್ಮಿ ತನ್ನ ಪತಿಯೊಂದಿಗೆ ಬೆಳಗ್ಗೆ ಜಾಗಿಂಗ್ ಹೋಗಿದ್ದರು. ಅಲ್ಲಿಂದ ಹಿಂದಿರುಗುವಾಗ ವರ್ಲಿ ಬಾಂದ್ರಾ ಬಳಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್‌

    ಹಿಂಬದಿಯಿಂದ ವೇಗವಾಗಿ ಬಂದ ಎಸ್‌ಯುವಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ರಾಜಲಕ್ಷ್ಮಿಗೆ ಡಿಕ್ಕಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಾಲಕ ಸುಮರ್ ಮರ್ಚೆಂಟ್ (23)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ವೇಳೆ ಕಾರಿನ ಚಾಲಕ ಸುಮೇರ್ ಮರ್ಚೆಂಟ್ ಕೂಡ ಗಾಯಗೊಂಡಿದ್ದಾನೆ. ಕಾರು ಚಾಲಕ ಸುಮೇರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಈತ ಮುಂಬೈನ ತಾರ್ಡಿಯೋ ಪ್ರದೇಶದಲ್ಲಿ ವಾಸವಿದ್ದ. ಘಟನೆಗೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

  • ರಾಷ್ಟ್ರದ ಅಭಿವೃದ್ಧಿಗೆ ತಾಂತ್ರಿಕ ಪ್ರಗತಿ ಬಹಳ ಮುಖ್ಯ: ರಾಜ್ಯಪಾಲ ಗೆಹ್ಲೋಟ್

    ರಾಷ್ಟ್ರದ ಅಭಿವೃದ್ಧಿಗೆ ತಾಂತ್ರಿಕ ಪ್ರಗತಿ ಬಹಳ ಮುಖ್ಯ: ರಾಜ್ಯಪಾಲ ಗೆಹ್ಲೋಟ್

    ಬೆಂಗಳೂರು: ರಾಷ್ಟ್ರದ ಅಭಿವೃದ್ಧಿಗೆ ತಾಂತ್ರಿಕ ಪ್ರಗತಿ ಬಹಳ ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಇದಕ್ಕೆ ಪ್ರಾಯೋಗಿಕ ಅನುಭವ ಮತ್ತು ತಾಂತ್ರಿಕ ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ ಅಗತ್ಯವಿರುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.

    ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿದ್ದ ಗೌರವ ಪದವಿ ವಿತರಣಾ ಕಾರ್ಯಕ್ರಮದಲ್ಲಿ ಪದ್ಮಭೂಷಣ ಪ್ರಶಸ್ತಿ ವಿಜೇತ ಡಾ. ಕೃಷ್ಣ ಎಲಾ ಮತ್ತು ಪದ್ಮಶ್ರೀ ಪುರಸ್ಕೃತ ಪ್ರೊ. ರೋಹಿಣಿ ಎಂ ಗಾಡ್ವೋಲೆ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಇದನ್ನೂ ಓದಿ: ರಾಜಭವನದಲ್ಲಿ 75 ಶ್ರೀಗಂಧ ಸಸಿ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ

    ನಂತರ ಮಾತನಾಡಿದ ಅವರು, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ಸ್ಥಾಪಿತವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸುವ ಮೂಲಕ ಭಾರತದ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟಿದೆ ಎಂದರು.

    ಈ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ. ವಿವಿಧ ಚಟುವಟಿಕೆಗಳಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ ಎಂದು ಶ್ಲಾಘಿಸಿದರು. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಪ್ರಕಟಿಸಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಲ್ಲಿ, ವಿಟಿಯು ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರೀಯವಾಗಿ 49ನೇ ಸ್ಥಾನವನ್ನು ಪಡೆದಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ 72, 76ನೇ ಸ್ಥಾನವನ್ನು ಪಡೆದಿದ್ದು, ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಮತ್ತು “ಒಟ್ಟಾರೆ” ವಿಭಾಗದಲ್ಲಿ ಟಾಪ್ 100 ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿರುವುದು ಹರ್ಷದಾಯಕ ಎಂದರು. ಇದನ್ನೂ ಓದಿ: ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ – ಬಿಜೆಪಿಗೆ ಕಾಂಗ್ರೆಸ್‌ ಸವಾಲು

    ಪದ್ಮಭೂಷಣ ಡಾ. ಕೃಷ್ಣ ಎಲಾ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರೋಹಿಣಿ ಎಂ ಗೋಡ್ಬೋಲೆ ಅವರಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ ಗೌರವ ಪದವಿಯನ್ನು ನೀಡಲಾಗಿದೆ. ಈ ಸಾಧಕರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

    ಗೌರವಾನ್ವಿತ ಅಶ್ವಥ್ ನಾರಾಯಣ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕರಿಸಿದ್ದಪ್ಪ, ರಿಜಿಸ್ಟ್ರಾರ್, ಪ್ರೊ. ಎ.ರು.ದೇಶಪಾಂಡೆ, ರಿಜಿಸ್ಟ್ರಾರ್ ಮೌಲ್ಯಮಾಪನ, ಪ್ರೊ. ಬಿ.ಇ.ರಂಗಸ್ವಾಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಂಪೆಲ್ಸಿಸ್- ಲೆಯರ್ಡಲ್ ಕಂಪನಿಗಳ ಸಂಶೋಧನೆ & ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಉದ್ಘಾಟನೆ

    ಇಂಪೆಲ್ಸಿಸ್- ಲೆಯರ್ಡಲ್ ಕಂಪನಿಗಳ ಸಂಶೋಧನೆ & ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಉದ್ಘಾಟನೆ

    ಬೆಂಗಳೂರು: ಆರೋಗ್ಯ ಸೇವೆಗಳ ಕ್ಷೇತ್ರ ಸೇರಿದಂತೆ ಹಲವು ವಲಯಗಳಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವ ಜಾಗತಿಕ ಮಟ್ಟದ ಕಂಪನಿಗಳಾದ ‘ಇಂಪೆಲ್ಸಿಸ್’ ಮತ್ತು ‘ಲೆಯರ್ಡಲ್ ಮೆಡಿಕಲ್’ ಕಂಪನಿಗಳು ನಗರದಲ್ಲಿ ಸ್ಥಾಪಿಸಿರುವ ವಿಶ್ವದರ್ಜೆಯ ಅತ್ಯಾಧುನಿಕ ಕಚೇರಿಗಳನ್ನು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಂಗಳವಾರ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಭಾರತದ ಐಟಿ, ಬಿಟಿ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗಳ ರಾಜಧಾನಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಎರಡು ಕಂಪನಿಗಳು ಮನುಷ್ಯನ ದೇಹಾರೋಗ್ಯದ ಅಧ್ಯಯನ ಮತ್ತು ಕಂಡುಬರುವ ಅನಾರೋಗ್ಯಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಶೋಧನಾ ಮೂಲಮಾತೃಕೆಗಳನ್ನು ಅಭಿವೃದ್ಧಿ ಪಡಿಸಿ, ಡಿಜಿಟಲ್ ಸೇವೆಗಳ ಮೂಲಕ ನೆರವು ನೀಡಲಿದೆ’ ಎಂದರು.

    `ಆರೋಗ್ಯ ಸೇವೆಗಳಿಗೆ ಆಧುನಿಕ ಜಗತ್ತಿನಲ್ಲಿ ಅತ್ಯಂತ ಮಹತ್ವವಿದೆ. ಹೃದಯಾಘಾತ, ರಕ್ತದೊತ್ತಡ, ಪಾಶ್ರ್ವವಾಯು ಮುಂತಾದ ಅನಾರೋಗ್ಯಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ, ಕ್ಷಿಪ್ರ ವೇಗದಲ್ಲಿ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನ ನೀಡುವುದು ಜರೂರಾಗಿ ನಡೆಯಬೇಕಾಗಿದೆ. ಇಂಪೆಲ್ಸಿಸ್ ಮತ್ತು ಲೆಯರ್ಡಲ್ ಕಂಪನಿಗಳು ಇವುಗಳನ್ನು ಸಾಧ್ಯವಾಗಿಸಲು ಐಟಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಸಾಫ್ಟ್‍ವೇರ್ ಅಭಿವೃದ್ಧಿಪಡಿಸುವುದು ರೋಗಿಗಳಿಗೆ ವರದಾನವಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನೂತನ ಲೋಕಾಯುಕ್ತರಾಗಿ ಭೀಮನಗೌಡ ಸಂಗನಗೌಡ ಪಾಟೀಲ್‌ ನೇಮಕ

    ಅಮೆರಿಕ ಮೂಲದ ಇಂಪೆಲ್ಸಿಸ್ ಕಂಪನಿಯು ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಕಚೇರಿ ಹೊಂದಿರುವುದು ಸ್ವಾಗತಾರ್ಹವಾಗಿದೆ. ಈ ಅತ್ಯಾಧುನಿಕ ಸಂಶೋಧನಾ ಕೇಂದ್ರದ ಮೂಲಕ ಆರೋಗ್ಯ ಸೇವೆಗಳ ಜತೆಗೆ ಇ-ಕಲಿಕೆ, ಕಂಟೆಂಟ್ ಎಂಜಿನಿಯರಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಕ್ಷೇತ್ರಗಳಿಗೂ ನೆರವು ಸಿಗಲಿದೆ ಎಂದು ನುಡಿದರು.

    ಮಾಹಿತಿ ತಂತ್ರಜ್ಞಾನ ಮೂಲಸೌಲಭ್ಯ, ಸುರಕ್ಷತೆ ಮತ್ತು ಅಭಿವೃದ್ಧಿಯ ಸುಸ್ಥಿರ ಮಾದರಿಗಳನ್ನು ಈ ಕೇಂದ್ರಗಳು ಅಳವಡಿಸಿಕೊಂಡಿವೆ. 20 ವರ್ಷಗಳ ಅನುಭವ ಹೊಂದಿರುವ ಇಂಪೆಲ್ಸಿಸ್ ಕಂಪನಿಯಲ್ಲಿ ಸಾವಿರಕ್ಕೂ ಹೆಚ್ಚು ಪರಿಣತ ತಂತ್ರಜ್ಞರಿರುವುದು ಒಳ್ಳೆಯದು. ಕರ್ನಾಟಕವು ಇದರ ಲಾಭವನ್ನು ಪಡೆದುಕೊಳ್ಳಲಿದೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಲೆಯರ್ಡಲ್ ಮೆಡಿಕಲ್ ಸಂಸ್ಥೆಯ ಸಿಇಒ ಆಲ್ಫ್ ಕ್ರಿಶ್ಚಿಯನ್ ಡೈಡಲ್ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಯಚೂರು ನಗರಸಭೆ ಕಲುಷಿತ ನೀರಿಗೆ ಮತ್ತೊಂದು ಬಲಿ – ಸಾವಿನ ಸಂಖ್ಯೆ 6ಕ್ಕೆ ಏರಿಕೆ

  • ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ ಅಮನ್ ದೀಪ್ ನೇಮಕ

    ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ ಅಮನ್ ದೀಪ್ ನೇಮಕ

    ನ್ಯೂಯಾರ್ಕ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅವರ ತಂತ್ರಜ್ಞಾನ ರಾಯಭಾರಿಯಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಅವರನ್ನು ನೇಮಿಸಲಾಗಿದೆ.

    2016 ರಿಂದ 2018 ರವರೆಗೆ ಜಿನೀವಾದಲ್ಲಿ ನಡೆದ ನಿಶಸ್ತ್ರೀಕರಣದ ಸಮ್ಮೇಳನಕ್ಕೆ ಭಾರತೀಯ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿಯಾಗಿದ್ದ ಗಿಲ್, ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್‌ನ ಅಂತಾರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನಾ ಸಹಯೋಗದ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಇದನ್ನೂ ಓದಿ: ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

    ಪಂಜಾಬ್ ವಿವಿಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಗಿಲ್, ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಜಿನಿವಾ ವಿವಿಯಿಂದ ಫ್ರೆಂಚ್ ಇತಿಹಾಸ ಹಾಗೂ ಭಾಷೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಅಮನ್ ದೀಪ್ ಸಿಂಗ್ ಗಿಲ್ ಅವರು ಡಿಜಿಟಲ್ ತಂತ್ರಜ್ಞಾನದ ಚಿಂತನೆಯ ನಾಯಕನಾಗಿದ್ದು, ಡಿಜಿಟಲ್ ತಂತ್ರಜ್ಞಾನಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಡಿಜಿಟಲ್ ರೂಪಾಂತರಗಳನ್ನು ಜವಾಬ್ದಾರಿಯುತವಾಗಿ ಹಾಗೂ ಅಭಿವೃದ್ಧಿಗೊಳಿಸುವ ಬಗ್ಗೆ ಒಳ್ಳೆಯ ತಿಳುವಳಿಕೆ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

  • ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ

    ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ

    ಬೆಂಗಳೂರು: ವಿಶ್ವದಲ್ಲೇ ಅತೀ ವೇಗವಾಗಿ ಚಾರ್ಜ್ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಅಲ್ಯೂಮಿನಿಯಂ ಇಯಾನ್ ಗ್ರಾಫೇನ್ ಪೌಚ್ ಸೆಲ್(Aluminum Ion Graphene Pouch Cells) ತಂತ್ರಜ್ಞಾನವನ್ನು ಬೆಂಗಳೂರಿನ ಸ್ಟಾರ್ಟ್ಅಪ್ ನೋರ್ಡಿಶ್ಚೇ ಟೆಕ್ನಾಲಜೀಸ್(NORDISCHE TECHNOLOGIES) ಸಿದ್ದಪಡಿಸಿದೆ. ಇದು ಲಿಥೀಯಂ ಇಯಾನ್ ಸೆಲ್ಸ್ ಬ್ಯಾಟರಿಗಿಂತಲೂ 50 ಪಟ್ಟು ಹೆಚ್ಚು ವೇಗದಲ್ಲಿ ಚಾರ್ಜ್ ಆಗುವ ಹಾಗೂ ಅಷ್ಟೇ ಮಟ್ಟದ ಬ್ಯಾಟರಿ ಸಾಮರ್ಥ್ಯ ಹೊಂದಿರುವ, ನಾನ್ ಟಾಕ್ಸಿಕ್ ಮತ್ತು ಅಗ್ನಿ ನಿರೋಧಕ ತಂತ್ರಜ್ಞಾನವನ್ನು ಹೊಂದಿದೆ.

    ಬ್ಯಾಟರಿ ಕ್ಷೇತ್ರದಲ್ಲಿನ ಈ ವಿನೂತನ ಹಾಗೂ ಕ್ರಾಂತಿಕಾರಿ ತಂತ್ರಜ್ಞಾನವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮುಖ್ಯಸ್ಥ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

    ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಈಗ ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳಲ್ಲಿ  ಬಳಸಲಾಗುತ್ತಿರುವ ಲೀಥಿಯಂ ಬ್ಯಾಟರಿ ತಂತ್ರಜ್ಞಾನದಿಂದ ಬಹಳಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ವಾಹನಗಳಲ್ಲಿ ಬಳಸಲಾಗಿರುವ ಬ್ಯಾಟರಿಗಳು ಬೆಂಕಿ ಹತ್ತಿಕೊಳ್ಳುವುದು, ಸರಿಯಾದ ಸಾಮರ್ಥ್ಯತೆ ಹೊಂದದೇ ಇರುವುದು. ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವೆಂಬಂತೆ ಅಲ್ಯೂಮಿನಿಯಂ ಇಯಾನ್ ಗ್ರಾಫೇನ್ ಪೌಚ್ ಸೆಲ್ ತಂತ್ರಜ್ಞಾನವನ್ನು ಬೆಂಗಳೂರಿನ ಸ್ಟಾರ್ಟ್ಅಪ್ ನೋರ್ಡಿಶ್ಚೇ ಟೆಕ್ನಾಲಜೀಸ್ – ಸಿಪಿಟ್ (ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನೀಯರಿಂಗ್ & ಟೆಕ್ನಾಲಜಿ)ಯ ಜೊತೆಗೂಡಿ ಸಂಶೋಧಿಸಿದೆ. ರಫ್ತು ಅವಲಂಬಿತ ಲೀಥೀಯಂ ಬ್ಯಾಟರಿ ತಂತ್ರಜ್ಞಾನದಷ್ಟೇ ಸಾಮರ್ಥ್ಯ ಹೊಂದಿರುವ ಈ ತಂತ್ರಜ್ಞಾನ ನಮ್ಮ ದೇಶದ ಆವಿಷ್ಕಾರಗಳಲ್ಲಿ ಬಹಳ ಮಹತ್ವದ್ದು ಎಂದು ಹೇಳಿದರು. ಇದನ್ನೂ ಓದಿ: ಆಡಳಿತ ಮಂಡಳಿ ಎಚ್ಚರಿಕೆಗೆ ಡೋಂಟ್‍ಕೇರ್- ಹಿಜಬ್ ಧರಿಸಿ ಬಂದ 15 ವಿದ್ಯಾರ್ಥಿನಿಯರು!

    ಬೆಂಗಳೂರಿನ ಸ್ಟಾರ್ಟ್ಅಪ್ ನೋರ್ಡಿಶ್ಚೇ ಟೆಕ್ನಾಲಜೀಸ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಸಬ್ಯಸಾಚಿ ದಾಸ್ ಮಾತನಾಡಿ, ಕಳೆದ 5 ವರ್ಷಗಳಿಂದ ನಮ್ಮ ಸಂಸ್ಥೆ ನಡೆಸಿದ ಸಂಶೋಧನೆಯ ಫಲವಾಗಿ ಈ ವಿನೂತನ ಅಲ್ಯೂಮಿನಿಯಂ-ಗ್ರಾಫೇನ್ ಪೌಚ್ ಸೆಲ್ ಮತ್ತು ಭವಿಷ್ಯದ ಇಲೆಕ್ಟ್ರಿಕಲ್ ವೆಹಿಕಲ್ ಬ್ಯಾಟರಿ ತಂತ್ರಜ್ಞಾನವನ್ನು ಸಂಶೋಧಿಸಲಾಗಿದೆ. ಈ ಬ್ಯಾಟರಿಗಳು ಬಹಳಷ್ಟು ಹಗುರ ಹಾಗೂ ವಿಶ್ವದಲ್ಲೇ ಅತೀ ವೇಗವಾಗಿ ಚಾರ್ಜ್ ಆಗಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ, ಈ ಬ್ಯಾಟರಿ ಕೆಲಸ ಮಾಡುವ ಉಷ್ಣಾಂಶದ ರೇಂಜ್ ಬಹಳಷ್ಟಿದ್ದು(-25ಸೆಲ್ಸಿಯಸ್ ನಿಂದ 60 ಡಿಗ್ರಿ ಸೆಲ್ಸಿಯಸ್), ಬೆಂಕಿ ಹತ್ತಿಕೊಳ್ಳುವುದಿಲ್ಲ. ಹೆಚ್ಚಿನ ಸಾಮರ್ಥ್ಯ ಹೊಂದಿರುವ ಮತ್ತು 5 ರಿಂದ 7 ವರ್ಷಗಳ ಬಾಳಿಕೆ ಬರುತ್ತದೆ. ಅಲ್ಲದೇ ಈ ರಿಚಾರ್ಜೆಬಲ್ ಬ್ಯಾಟರಿಗಳನ್ನು 3,000 ಸೈಕಲ್‌ಗಳಲ್ಲಿ ಬಳಸಬಹುದಾಗಿದೆ. ಈ ತಂತ್ರಜ್ಞಾವನ್ನು ಎಲೆಕ್ಟ್ರಿಕ್ ವೆಹಿಕಲ್‌ಗಳಲ್ಲೂ ಬಳಸಬಹುದು ಎಂದು ಹೇಳಿದರು. ಇದನ್ನೂ ಓದಿ: ಜಾರಂದಾಯ ದೈವದ ಪವಾಡ – ಮದುವೆ ಹಾಲ್‍ನಲ್ಲಿ ಕಳ್ಳತನವಾದ ಚಿನ್ನದ ಸರ ಅಚ್ಚರಿಯ ರೀತಿಯಲ್ಲಿ ಪತ್ತೆ

    ವಿಶೇಷತೆಗಳೇನು?
    ಹಗುರ ಮತ್ತು ಅತಿವೇಗವಾಗಿ ಚಾರ್ಜ್ ಅಗುವ ಸಾಮರ್ಥ್ಯ
    ಹೈ ಎನರ್ಜಿ ಡೆನ್ಸಿಟಿ – 150ವ್ಯಾಟ್/ಕೆಜಿ
    ಕೈಗೆಟಕುವ ದರ
    ಫ್ಲೆಕ್ಸಿಬಲ್ ಸೋರ್ಸ್ ಆಫ್ ಎನರ್ಜಿ ಸ್ಟೋರೇಜ್
    ಲಾರ್ಜ್ ರೇಂಜ್ ಆಫ್ ಟೆಂಪರೇಚರ್‌ನಲ್ಲಿ ಕಾರ್ಯನಿರ್ವಹಣೆ (ಈಡಿom -25ಅ ಣo 60ಅ)
    5 ರಿಂದ 7 ವರ್ಷಗಳ ಬಾಳಿಕೆ
    ಸುಮಾರು 3,000 ಬಾರಿ ರಿಚಾರ್ಜ್ ಮಾಡಬಹುದು
    ಪರಿಸರ ಸ್ನೇಹಿ, ಹೊಗೆ ರಹಿತ ಮತ್ತು ಬೆಂಕಿ ಹತ್ತಿಕೊಳ್ಳದೇ ಇರುವುದು

  • ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ಚೆನ್ನೈ: ಭಾರತದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಗುರುವಾರ ಚೆನ್ನೈನಲ್ಲಿ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಯಶಸ್ವೀ ಪರೀಕ್ಷೆ ನಡೆಸಿದರು.

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್‌ನಲ್ಲಿ ಮೊದಲ ಬಾರಿಗೆ 5ಜಿ ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಅಶ್ವಿನಿ ವೈಷ್ಣವ್, ಇಡೀ ನೆಟ್‌ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ ಎಂದರು.

    5G

    ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಸಾಕ್ಷಾತ್ಕಾರವಾಗಿದೆ. ಭಾರತದಲ್ಲೇ ತಯಾರಾಗುವ 4ಜಿ ಹಾಗೂ 5ಜಿ ತಂತ್ರಜ್ಞಾನದ ಸ್ಟಾಕ್ ಅನ್ನು ಇತರ ದೇಶಗಳಿಗೂ ವಿತರಿಸುವುದು ಅವರ ಗುರಿಯಾಗಿದೆ. ಈ ಸಂಪೂರ್ಣ ತಂತ್ರಜ್ಞಾನದ ಯಶಸ್ಸಿನೊಂದಿಗೆ ನಾವು ಜಗತ್ತನ್ನೇ ಗೆಲ್ಲಬೇಕು ಎಂದು ವೈಷ್ಣವ್ ಹೇಳಿದರು. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ

    ದೂರಸಂಪರ್ಕ ಇಲಾಖೆ 5ಜಿ ನೆಟ್‌ವರ್ಕ್ ಹರಾಜಿನ ಬಗ್ಗೆ ಮುಂದಿನ ವಾರದಲ್ಲಿ ಅಂತಿಮ ಅನುಮೋದನೆಗೆ ಕೇಂದ್ರ ಸಚಿವ ಸಂಪುಟಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ. ಇದೇ ವರ್ಷದ ಕೊನೆಯಲ್ಲಿ ಗ್ರಾಹಕರ ಕೈಗೆ 5ಜಿ ನೆಟ್‌ವರ್ಕ್ ಲಭಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ?

    ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಐಐಟಿ ಮದ್ರಾಸ್‌ನಲ್ಲಿ ದೇಶದ ಮೊದಲ 5ಜಿ ಟೆಸ್ಟ್‌ಬೆಡ್ ಅನ್ನು ಉದ್ಘಾಟಿಸಿದ್ದರು. ಇದೀಗ ಅದೇ ಕೇಂದ್ರದಲ್ಲಿ ಸಂಪರ್ಕ ಸಚಿವ ದೇಶದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಪರೀಕ್ಷಿಸಿದ್ದಾರೆ.