Tag: ತಂಡ

  • ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಬರ ಅಧ್ಯಯನಕ್ಕೆಂದು ಕೇಂದ್ರದಿಂದ ಬಂದಿದ್ದ ತಂಡವನ್ನು ಮೆಚ್ಚಿಸಲು ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಹೌದು, ಬರಗಾಲ ಪೀಡಿತ ತಾಲೂಕು ಎಂದೇ ಹೆಸರು ಪಡೆದಿರುವ ಹರಪ್ಪನಹಳ್ಳಿ ಪಟ್ಟಣಕ್ಕೆ ಭಾನುವಾರ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿತ್ತು. ಈ ವೇಳೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳನ್ನು ಮೆಚ್ಚಿಸಲು ಸರ್ಕಾರಿ ಶಾಲೆಯಲ್ಲೇ ಭರ್ಜರಿ ಬಾಡೂಟವನ್ನು ಹಾಕಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಸೂಚನೆಯಂತೆ ಹರಪ್ಪನಹಳ್ಳಿ ಪಟ್ಟಣದ ನಜೀರ್ ನಗರದ ಮೋರಾರ್ಜಿ ವಸತಿಯುತ ಶಾಲೆಯಲ್ಲಿ ಕೇಂದ್ರ ಅಧಿಕಾರಿಗಳಿಗೆಂದೇ ಬಾಡೂಟ ಸಿದ್ದಪಡಿಸಿದ್ದರು. ಇದರಲ್ಲಿ ಚಿಕನ್ ಮಸಾಲ, ಮಟನ್ ಚಾಪ್ಸ್, ಎಗ್ ಮಸಾಲ, ರೋಟಿ ಹಾಗೂ ರಾಗಿಮುದ್ದೆಯನ್ನು ಮಾಡಿಸಿದ್ದರು.

    ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಾಲೂಕಿನ ಬರ ಅಧ್ಯಯನಕ್ಕಿಂತ ಕೇಂದ್ರದ ತಂಡಕ್ಕೆ ಬಾಡೂಟವೇ ಪ್ರಮುಖವಾಗಿತ್ತು. ಕೇವಲ ಎರಡು ಮೂರು ಕಡೆ ಪರಿಶೀಲನೆ ನಡೆಸಿ, ಹೋದ್ಯಾ ಪುಟ್ಟ, ಬಂದ್ಯಾ ಪುಟ್ಟ ಎಂಬಂತೆ ಅಧ್ಯಯನ ಮಾಡಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಅಧ್ಯಯನ ಮಾಡಿಕೊಂಡು ಹೋಗಿದ್ದರು. ಆದರೆ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದರು. ಈಗ ಪುನಃ ಅದೇ ರೀತಿ ಈ ಬಾರಿಯೂ ಮಾಡಿಕೊಂಡು ಹೋಗುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪುಂಡರಿಗೆ ತಕ್ಕ ಶಾಸ್ತಿ ಮಾಡಲು ಹುಟ್ಟಿಕೊಂಡ ಟೀಂ ಈಗ ಸೈಲೆಂಟ್

    ಪುಂಡರಿಗೆ ತಕ್ಕ ಶಾಸ್ತಿ ಮಾಡಲು ಹುಟ್ಟಿಕೊಂಡ ಟೀಂ ಈಗ ಸೈಲೆಂಟ್

    ಕಲಬುರಗಿ: ಪುಂಡಪೋಕರಿಗಳಿಗೆ ತಕ್ಕ ಶಾಸ್ತಿ ಮಾಡುವುದಕ್ಕೆ ತಂಡವೊಂದು ಹುಟ್ಟಿಕೊಂಡಿತ್ತು. ಬೀದಿ ಕಾಮಣ್ಣರ ಕಾಟದಿಂದ ಪೊಲೀಸ್ ಇಲಾಖೆ ಪ್ರತ್ಯೇಕ ಸೆಲ್ ಓಪನ್ ಮಾಡಿತ್ತು. ಆದರೆ ಆರಂಭದಲ್ಲಿ ಅಬ್ಬರಿಸಿದ್ದ ಆ ಟೀಂ ಇದೀಗ ಸೈಲೆಂಟ್ ಆಗಿದೆ.

    ಸಿಟಿ ಪೊಲೀಸ್ ಕಮಾಂಡೋ ಸೆಂಟರ್ ಕಲಬುರಗಿ ನಗರದಲ್ಲಿ ಇತ್ತೀಚೆಗೆ ಓಪನ್ ಆಗಿದೆ. ಪೊಲೀಸ್ ಇಲಾಖೆ ಜಾರಿಗೆ ತಂದಿದ್ದ ಸಿಟಿ ಪೊಲೀಸ್ ಕಮಾಂಡ್ ಸೆಂಟರ್ ಯೋಜನೆಯನ್ನು ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಜೊತೆಗೆ ಕಮಾಂಡ್ ಸೆಂಟರ್‍ನಲ್ಲಿ ಕೆಲಸ ಮಾಡುವ ವಿಶೇಷ ಪಡೆಗೆ ನಗರದಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಅಂತ ಸೂಚನೆ ಸಹ ನೀಡಿದರು. ಈ ಯೋಜನೆ 1 ವಾರ ನಗರದ ಕೆಲ ಪುಡಿ ರೌಡಿಗಳಿಗೆ ನಡುಕ ಹುಟ್ಟಿಸಿತ್ತು. ನಗರದಲ್ಲಿ ಎಲ್ಲವೂ ಸರಿಯಾಗಿಯೇ ನಡೆದುಕೊಂಡು ಹೋಗುತ್ತಿದೆ ಎನ್ನುವಷ್ಟರಲ್ಲಿ ಕಮಾಂಡ್ ಸೆಂಟರ್‍ನ ವಿಶೇಷ ಪಡೆ ಇದೀಗ ಸೈಲೆಂಟ್ ಆಗಿ ಮೂಲೆ ಗುಂಪಾಗಿದೆ.

    ನಗರದ 14 ಪೊಲೀಸ್ ಠಾಣೆಗಳ ಪೈಕಿ ಮಹಿಳಾ ಪೇದೆ ಸೇರಿ ಆಯ್ದ ಸಿಬ್ಬಂದಿಯನ್ನು ಪೊಲೀಸ್ ಕಮಾಂಡೋ ಸೆಂಟರ್ ಗೆ ನಿಯೋಜಿಸಲಾಗಿತ್ತು. ಇದಕ್ಕಾಗಿ ವಿಶೇಷ ಬೈಕ್ ಕೊಟ್ಟು ಬೀದಿ ಕಾಮಣ್ಣರನ್ನು ಹಾಗೂ ಸರಗಳ್ಳರನ್ನು ಬೆನ್ನತ್ತಿ ಹಿಡಿದು ಬುದ್ಧಿ ಕಲಿಸುವಂತಹ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿತ್ತು. ಆದರೆ ಅದೇ ಸಿಬ್ಬಂದಿ ಈಗ ವಾಪಸ್ ತಮ್ಮ ಠಾಣೆಗೆ ಮರಳಿದ್ದು ಸಿಟಿ ಕಮಾಂಡ್ ಸೆಂಟರ್ ಶಟ್‍ಡೌನ್ ಆಗುವ ಹಂತಕ್ಕೆ ಬಂದಿದೆ.

    ಈ ಬಗ್ಗೆ ಕಲಬುರಗಿ ಎಸ್‍ಪಿಯನ್ನು ಕೇಳಿದರೆ ಕಮಾಂಡ್ ಸೆಂಟರ್ ಟೆಕ್ನಿಕಲ್ ಅಪ್‍ಗ್ರಡ್ ಮಾಡಲಾಗ್ತಿದೆ. ನಗರದ ಬಹುತೇಕ ಕಡೆ ಒಂದೂವರೆ ಕೋಟಿ ವೆಚ್ಚದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪನಾಯಕ ಕೊನೆಯಲ್ಲಿ, ನಾಯಕನ ಪತ್ನಿ ಮೊದಲ ಸಾಲಿನಲ್ಲಿ: ಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಮಿಂಚಿಂಗ್

    ಉಪನಾಯಕ ಕೊನೆಯಲ್ಲಿ, ನಾಯಕನ ಪತ್ನಿ ಮೊದಲ ಸಾಲಿನಲ್ಲಿ: ಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಮಿಂಚಿಂಗ್

    ಲಂಡನ್: ಭಾರತೀಯ ಕ್ರಿಕೆಟ್ ತಂಡದ ಸದಸ್ಯರ ಫೋಟದಲ್ಲಿ ಬಾಲಿವುಡ್ ನಟಿ ಹಾಗೂ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ನಿಂತುಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

    ಮಂಗಳವಾರ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನರ್ ಕಛೇರಿಯು ಭಾರತೀಯ ಕ್ರಿಕೆಟ್ ತಂಡದ ಸದಸ್ಯರಿಗಾಗಿಯೇ ಔತಣಕೂಣವನ್ನು ಏರ್ಪಡಿಸಿತ್ತು. ಈ ಕೂಟಕ್ಕೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಹ ತೆರಳಿ, ಭಾರತೀಯ ತಂಡದ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಚ್ಚರಿ ಹಾಗೂ ಟೀಕೆಗೆ ಕಾರಣವಾಗಿದೆ.

    ಇಂಗ್ಲೆಂಡ್ ಹಾಗೂ ಭಾರತ ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ತಮ್ಮ ಪತ್ನಿ ಹಾಗೂ ಕುಟುಂಬದವರಿಂದ ದೂರ ಉಳಿಯಬೇಕೆಂದು ಬಿಸಿಸಿಐ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ. ಹೀಗಿದ್ದರೂ ಸಹ ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿಯಾದ ಅನುಷ್ಕಾ ಶರ್ಮಾ ಈ ಔತಣ ಕೂಟದಲ್ಲಿ ಹೇಗೆ ಭಾಗವಹಿಸಿದ್ದಾರೆ ಎನ್ನುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಅಲ್ಲದೇ ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಔತಣಕೂಟದ ವೇಳೆ ಭಾರತ ಕ್ರಿಕೆಟ್ ತಂಡದ ಸದಸ್ಯರೊಂದಿಗಿನ ಫೋಟೋವನ್ನು ಹಾಕಿಕೊಂಡಿತ್ತು. ಈ ಫೋಟೋದಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯರೊಡನೆ ಅನುಷ್ಕಾ ಶರ್ಮಾ ಫೋಟೋಗೆ ಫೋಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ ನಾಯಕನ ಬಳಿಕ ಇರಬೇಕಾದ ಉಪನಾಯಕನನ್ನು ಹಿಂದೆ ಸರಿಸಿ ತಾನು ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವ ಅನುಷ್ಕಾ ವಿರುದ್ಧ ಸಾಮಾಜಿಕ ತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಬಿಸಿಸಿಐ ಎರಡು ಬಗೆಯ ನೀತಿ ಅಳವಡಿಸಿಕೊಂಡಿದೆ ಎಂದು ಜಾಲತಾಣಿಗರು ಕಿಡಿ ಕಾರಿದ್ದಾರೆ.

    ಈ ಹಿಂದೆ ವ್ಯಕ್ತಿಯೊಬ್ಬ ಕಸ ಹಾಕಿದ್ದನ್ನು ಪ್ರಶ್ನಿಸಿ ತರಾಟಗೆ ತೆಗೆದುಕೊಂಡ ನೀವು ಸದಸ್ಯರಲ್ಲೇ ಇದ್ದರೂ ಫೋಟೋ ನಿಂತುಕೊಂಡಿದ್ದು ಸರಿಯೇ ಎಂದು ಜನ ಪ್ರಶ್ನಿಸಿದ್ದಾರೆ.

    https://twitter.com/aliasgarmg/status/1026931478163275778

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಹಿಳೆಯರಿಗೆ ಕಾಟ ಕೊಡುವ ಪುಂಡರನ್ನು ಒದ್ದು ಒಳಗೆ ಹಾಕಲು ಓಬವ್ವ ಪಡೆ ರಚನೆ!

    ಮಹಿಳೆಯರಿಗೆ ಕಾಟ ಕೊಡುವ ಪುಂಡರನ್ನು ಒದ್ದು ಒಳಗೆ ಹಾಕಲು ಓಬವ್ವ ಪಡೆ ರಚನೆ!

    ಚಿತ್ರದುರ್ಗ: ಕೋಟೆನಾಡಲ್ಲಿ ಮಹಿಳೆಯರು ಇನ್ನು ಮುಂದೆ ಯಾವುದೇ ಅಡ್ಡಿ ಆತಂಕ ಇಲ್ಲದೇ ನಿರ್ಭೀತಿಯಿಂದ ಓಡಾಡಬಹುದು. ಮಹಿಳೆಯರಿಗೆ ಕಾಟ ಕೋಡೋ ಪುಂಡರನ್ನು ಒದ್ದು ಒಳಗೆ ಹಾಕಲು ಓಬವ್ವ ಪಡೆ ರಚನೆಯಾಗಿದೆ.

    ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಇಂತಹ ಒಂದು ವಿನೂತನ ಟೀಮ್ ರೆಡಿ ಮಾಡಿದೆ. ಪೋಲಿಗಳಿಗೆ ಹೇಗೆ ಪಾಠ ಕಲಿಸಬೇಕು ಎಂಬುದರ ಬಗ್ಗೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ. ಮಂಗಳವಾರ ಓಬವ್ವ ಪಡೆಗೆ ಚಾಲನೆ ನೀಡಲಾಯ್ತು. ಈ ವೇಳೆ ವಿದ್ಯಾರ್ಥಿನಿಯರು ತಮ್ಮನ್ನ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಡೆಮೋ ತೋರಿಸಿಲಾಯಿತು.

    ಓಬವ್ವ ಪಡೆಯಿಂದ ಮಹಿಳೆಯರಿಗೆ ರಕ್ಷಣೆ ಸಿಗುತ್ತದೆ. ಹಾಗಾಗಿ ಈ ಪಡೆಯನ್ನು ಜಾರಿಗೆ ತರಲಾಗಿದೆ. ಅವರಿಗೆ ಒಂದು ತಿಂಗಳು ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಹೇಳಿದ್ದಾರೆ.

    ಕಾರ್ಯಕ್ರಮಕ್ಕೆ ಪೂರ್ವ ವಲಯ ಐಜಿಪಿ ಶರತ್ ಚಂದ್ರ ಸೇರಿದಂತೆ ಡಿಸಿ ವಿಜಯಾ ಜೋತ್ಸ್ನಾ, ಸಿಇಓ ರವೀಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಆಗಮಿಸಿ ಉದ್ಘಾಟಿಸಿದ್ರು. ಇದರ ಜೊತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಡೆಮೋ ತೋರಿಸಿಲಾಯಿತು.

    ಒಟ್ಟಾರೆ ಮಹಿಳೆಯರನ್ನು ಚುಡಾಯಿಸಿ ಮಜಾ ಪಡೆಯುತ್ತಿದ್ದ ಕಾಮುಕರಿಗೆ ಇನ್ಮುಂದೆ ಓಬವ್ವ ಪಡೆ ಅವರ ಹೆಡೆಮುರಿ ಕಟ್ಟಿ ಬುದ್ದಿ ಕಲಿಸಲಿದ್ದಾರೆ. ಈ ಮೂಲಕ ಮಹಿಳೆಯರು ಯಾವುದೇ ಕಿರಿ ಕಿರಿ ಇಲ್ಲದೆ ಆರಾಮವಾಗಿ ಓಡಾಡಲು ಓಬವ್ವ ಪಡೆ ಯಾವುದೇ ರಕ್ಷಣೆಗೆ ಕ್ಷಣಾರ್ಧಲ್ಲಿ ಬರಲಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ಈ ತಂಡ ರೆಡಿ ಮಾಡಿದ್ದು, 94808 03100 ನಂಬರ್ ಗೆ ಕಾಲ್ ಮಾಡಿದರೆ ತಕ್ಷಣ ಮಹಿಳೆಯರ ರಕ್ಷಣೆಗೆ ಈ ಪಡೆ ನಿಲ್ಲುತ್ತದೆ.

  • ಕಾಮನ್‍ವೆಲ್ತ್ ಗೇಮ್ಸ್ : ಜನರ ಮುಂದೆ ಬಾಸ್ಕೆಟ್ ಬಾಲ್ ಆಟಗಾರನಿಂದ ಗೆಳತಿಗೆ ಪ್ರಪೋಸ್- ವಿಡಿಯೋ

    ಕಾಮನ್‍ವೆಲ್ತ್ ಗೇಮ್ಸ್ : ಜನರ ಮುಂದೆ ಬಾಸ್ಕೆಟ್ ಬಾಲ್ ಆಟಗಾರನಿಂದ ಗೆಳತಿಗೆ ಪ್ರಪೋಸ್- ವಿಡಿಯೋ

    ಗೋಲ್ಡ್ ಕೋಸ್ಟ್: ಇಂಗ್ಲೆಂಡ್ ಬಾಸ್ಕೆಟ್ ಬಾಲ್ ಆಟಗಾರ ಜಾಮೆಲ್ ಆಂಡರ್ಸನ್ ಭಾನುವಾರ ನಡೆದ ಕಾಮನ್‍ವೆಲ್ತ್ ಗೇಮ್ಸ್ ವೇಳೆ ಬಾಸ್ಕೆಟ್ ಬಾಲ್ ಕೋರ್ಟ್‍ನಲ್ಲೇ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ.

    ಭಾನುವಾರ ನಡೆದ ಪಂದ್ಯದಲ್ಲಿ ಕ್ಯಾಮೇರೋನ್ ವಿರುದ್ಧ ಇಂಗ್ಲೇಡ್ 81-54 ಅಂತರದಲ್ಲಿ ಜಯಗಳಿಸಿತ್ತು. ತಮ್ಮ ಜಯವನ್ನು ಸಂಭ್ರಮಿಸುತ್ತಿರುವಾಗಲೇ ಆಂಡರ್ಸನ್ ತನ್ನ ಟೀಂ ಜೊತೆ ಸೇರಿಕೊಂಡು ತನ್ನ ಪ್ರೇಯಸಿ ಜಾರ್ಜಿಯಾ ಜೋನ್ಸ್ ಗೆ ಸರ್ಪ್ರೈಸ್ ನೀಡಿ ಪ್ರಪೋಸ್ ಮಾಡಿದ್ದಾರೆ.

    ಆಂಡರ್ಸನ್ ಸ್ಪೇನ್‍ನ ಪಾಲಿಡೆಪೋರ್ಟಿವೊ ಲಾ ರೊಡಾಗಾಗಿ ಬಾಸ್ಕೆಟ್ ಬಾಲ್ ಆಡುತ್ತಿದ್ದು, ಜೋನ್ಸ್ ಬ್ರಿಟಿಷ್‍ನ ಮ್ಯಾಂಚೆಸ್ಟರ್ ಮಿಸ್ಟಿಕ್ಸ್ ಮಹಿಳಾ ಬಾಸ್ಕೆಟ್ ಬಾಲ್ ಲೀಗ್ ಗಾಗಿ ಆಟವಾಡುತ್ತಾರೆ.

    ಆಂಡರ್ಸನ್ ಜಾರ್ಜಿಯಾ ಅವರನ್ನು ಪ್ರಪೋಸ್ ಮಾಡುವ ವಿಡಿಯೋವನ್ನು ಇಂಗ್ಲೆಂಡ್ ತಂಡ ಬಿಡುಗಡೆ ಮಾಡಿದೆ. ಆ ವಿಡಿಯೋದಲ್ಲಿ ಇಂಗ್ಲೆಂಡ್ ತಂಡ ವೃತ್ತಾಕಾರದಲ್ಲಿ ನಿಂತುಕೊಂಡು ತಮ್ಮ ಜಯವನ್ನು ಸಂಭ್ರಮಿಸುತ್ತಿದ್ದರು. ತಕ್ಷಣ ಅವರೆಲ್ಲ ಹಿಂದೆ ಬಂದು ನಿಂತುಕೊಂಡಾಗ ಆಂಡರ್ಸನ್ ಮೊಣಕಾಲೂರಿ ಜಾರ್ಜಿಯಾರಿಗೆ ಪ್ರಮೋಸ್ ಮಾಡಿದ್ದಾರೆ.

    ನನ್ನ ತಂಡದ ಸದಸ್ಯರು ಇದರಲ್ಲಿ ಭಾಗಿಯಾಗಿ ಇಷ್ಟು ಅದ್ಭುತ ರೀತಿಯಲ್ಲಿ ಪ್ಲಾನ್ ಮಾಡಿದ್ದರು. ಹಾಗಾಗಿ ಎಲ್ಲವೂ ಸರಿಯಾಗಿ ನೆರವೇರಿತ್ತು. ಈ ವಿಚಾರ ನನ್ನ ಮನಸ್ಸಿನಲ್ಲಿತ್ತು ಹಾಗಾಗಿ ನನಗೆ ಬಾಸ್ಕೆಟ್ ಬಾಲ್ ಆಡಲು ಸುಲಭವಾಯಿತು ಎಂದು ಆಂಡರ್ಸನ್ ತಿಳಿಸಿದ್ದಾರೆ.

    ನನಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನನ್ನ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ನನ್ನನ್ನು ಅಲ್ಲಿ ನಿಲ್ಲಿಸಿದ್ದರು. ನಂತರ ಅಲ್ಲಿ ನಡೆದಿದ್ದನು ನೋಡಿ ನನಗೇ ಶಾಕ್ ಆಗಿದೆ ಎಂದು ಜಾರ್ಜಿಯಾ ಹೇಳಿದ್ದಾರೆ. ಈ ಒಂದು ಅವಕಾಶಕ್ಕಾಗಿ ನಾವು ತುಂಬ ಪರಿಶ್ರಮಪಟ್ಟಿದ್ದೇವೆ. ಬಾಸ್ಕೆಟ್ ಬಾಲ್ ನಮ್ಮ ಸಂಬಂಧದ ಒಂದು ಭಾಗವಾಗಿದೆ. ಹಾಗಾಗಿ ನಾನು ಈ ರೀತಿ ಮಾಡಿದೆ ಎಂದು ಆಂಡರ್ಸನ್ ತಿಳಿಸಿದ್ದಾರೆ.

    ಕೋರ್ಟ್ ನಲ್ಲಿ ಜಾರ್ಜಿಯಾರನ್ನು ಪ್ರಪೋಸ್ ಮಾಡುವ ಮೊದಲು ಆಂಡರ್ಸನ್, ಜಾರ್ಜಿಯಾ ಅವರ ತಂದೆ ಜೇಫ್ ಹತ್ತಿರ ಆರ್ಶೀವಾದ ಪಡೆದಿದ್ದಾರೆ. ಜೇಫ್ ಇಂಗ್ಲೆಂಡ್ ಅಂತರಾಷ್ಟ್ರೀಯಾ ಹಾಗೂ ಮ್ಯಾಂಚೆಸ್ಟರ್ ಮಿಸ್ಟಿಕ್ಸ್ ನ ಮಾಜಿ ಕೋಚ್ ಆಗಿದ್ದಾರೆ.

    https://www.youtube.com/watch?v=odhDkFN-hZg

  • ಕೆನಡಾ ಹಾಕಿ ಟೀಂ ಪ್ರಯಾಣಿಸುತ್ತಿದ್ದ ಬಸ್ ಅಪಘಾತ – 14 ಮಂದಿ ಸಾವು

    ಕೆನಡಾ ಹಾಕಿ ಟೀಂ ಪ್ರಯಾಣಿಸುತ್ತಿದ್ದ ಬಸ್ ಅಪಘಾತ – 14 ಮಂದಿ ಸಾವು

    ಒಟ್ಟಾವಾ: ಕೆನಡಾ ದೇಶದ ಜೂನಿಯಾರ್ ಹಾಕಿ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿ 14 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

    ಕೆನಡಾದ ಸಾಸ್ಕಾಚೆವನ್ ಗ್ರಾಮೀಣ ಪ್ರದೇಶದ ಹೆದ್ದಾರಿ ತಿಸ್ದಲೆ ಬಳಿ ಆಟಗಾರರಿದ್ದ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಸಾಸ್ಕಾಚೆವನ್ ಜೂನಿಯರ್ ಹಾಕಿ ಟೂರ್ನಿಮೆಂಟ್ ನಲ್ಲಿ ಭಾಗವಹಿಸುವ ಸಲುವಾಗಿ ಆಟಗಾರರು ಬಸ್ ನಲ್ಲಿ ಹೊರಟ್ಟಿದ್ದರು. ಒಟ್ಟಾರೆ 28 ಮಂದಿ ಆಟಗಾರರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ 16 ರಿಂದ 24 ವಯಸ್ಸಿನ ಒಳಗಿನವರು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.

  • ಉಳ್ಳಾಲದಲ್ಲಿ ಲಾಂಗ್ ಬೀಸಿ ಯುವಕನ ಹತ್ಯೆಗೆ ಯತ್ನ

    ಉಳ್ಳಾಲದಲ್ಲಿ ಲಾಂಗ್ ಬೀಸಿ ಯುವಕನ ಹತ್ಯೆಗೆ ಯತ್ನ

    ಮಂಗಳೂರು: ನಗರದ ಹೊರವಲಯದ ಉಳ್ಳಾಲದಲ್ಲಿ ಮತ್ತೆ ತಲ್ವಾರ್ ಝಳಪಿಸಿದ್ದು, ಸೋಮವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಲಾಂಗ್ ಬೀಸಿ ಹತ್ಯೆಗೆ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

    ಹಲ್ಲೆಗೊಳಗಾದ ಯುವಕನನ್ನು ನೌಷದ್(22) ಎಂದು ಗುರುತಿಸಲಾಗಿದೆ. ಈತನ ಮೇಲೆ ಉಳ್ಳಾಲದ ರಹಮಾನಿಯಾ ಮಸೀದಿ ಬಳಿ ರಮಿತ್ ಮತ್ತು ನಾಲ್ವರಿಂದ ತಲ್ವಾರ್ ದಾಳಿ ನಡೆದಿದ್ದು, ಪರಿಣಾಮ ನೌಷದ್ ಕೈಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ಬಂದ ನೌಷದ್ ನನ್ನು ಉಳ್ಳಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.

    ಸ್ಥಳಕ್ಕೆ ಡಿಸಿಪಿ ಶಾಂತ್ ರಾಜ್, ಎಸಿಪಿ ಶೃತಿ, ಎಸ್‍ಐ ಗೋಪಿಕೃಷ್ಣ ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಘಟನೆ ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.