Tag: ತಂಡ

  • T20 ಕ್ರಿಕೆಟ್‍ನಲ್ಲಿ ಭಾರತ vs ಪಾಕಿಸ್ತಾನ ನಡುವೆ ಯಾರು ಬೆಸ್ಟ್?

    T20 ಕ್ರಿಕೆಟ್‍ನಲ್ಲಿ ಭಾರತ vs ಪಾಕಿಸ್ತಾನ ನಡುವೆ ಯಾರು ಬೆಸ್ಟ್?

    ದುಬೈ: ಟಿ20 ವಿಶ್ವಕಪ್ ಆರಂಭವಾಗಿದೆ. ಈಗಾಗಲೇ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟಕ್ಕಾಗಿ ಇಡೀ ವಿಶ್ವ ಕಾದು ಕುಳಿತಿದೆ. ಈ ನಡುವೆ ಟಿ20 ಕ್ರಿಕೆಟ್‍ನಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಈ ಅಂಕಿ ಅಂಶ ಉತ್ತರ ನೀಡುತ್ತಿದೆ.

    ಹೌದು ಭಾರತ ಹಾಗೂ ಪಾಕಿಸ್ತಾನ ನಡುವಿನ ಟೀಂ ರ‍್ಯಾಂಕಿಂಗ್, ಆಟಗಾರರ ರ‍್ಯಾಂಕಿಂಗ್ ಮತ್ತು ಟಿ20 ವಿಶ್ವಕಪ್ ಇತಿಹಾಸದಲ್ಲಿನ ಸಾಧನೆಯನ್ನು ಗಮನಿಸಿದರೆ ಎರಡು ತಂಡಗಳು ಪ್ರಬಲವಾಗಿರುವುದು ತಿಳಿಯುತ್ತದೆ. ಇದನ್ನೂ ಓದಿ: ಮೊದಲ ಟಿ20 ವಿಶ್ವಕಪ್ ಬಾಲ್‍ಔಟ್ ಮೂಲಕ ಪಾಕ್‍ಗೆ ಶಾಕ್ ಕೊಟ್ಟ ಭಾರತ

    ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎರಡು ಬಾರಿ ಫೈನಲ್ ಪ್ರವೇಶಿಸಿದ್ದು ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿದೆ ಜೊತೆಗೆ ಒಂದೊಂದು ಬಾರಿ ರನ್ನರ್ ಅಪ್ ಆಗಿ ತೃಪ್ತಿಪಟ್ಟಿದೆ. 2007ರಲ್ಲಿ ಆರಂಭಗೊಂಡ ಮೊದಲ ವಿಶ್ವಕಪ್‍ನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದರೆ, 2009ರ ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿಶ್ವಕಪ್‍ಗೆ ಮುತ್ತಿಕ್ಕಿದೆ.

    ಪ್ರಸ್ತುತ ಟಿ20 ಕ್ರಿಕೆಟ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಸಾಧನೆಯನ್ನು ಗಮನಿಸಿದರೆ, ರ‍್ಯಾಂಕಿಂಗ್ ನಲ್ಲಿ ಭಾರತ ತಂಡ 2ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ತಂಡ 3ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ

    ವೈಯಕ್ತಿಕ ಆಟಗಾರರ ರ‍್ಯಾಂಕಿಂಗ್ ಗಮನಿಸಿದರೆ ಬ್ಯಾಟಿಂಗ್‍ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಟಿ20 ಕ್ರಿಕೆಟ್‍ನಲ್ಲಿ 2ನೇ ರ‍್ಯಾಂಕಿಂಗ್ ನಲ್ಲಿದ್ದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 4ನೇ ರ‍್ಯಾಂಕಿಂಗ್ ನಲ್ಲಿದ್ದಾರೆ. ಜೊತೆಗೆ ಭಾರತದ ಇನ್ನೊಬ್ಬ ಆಟಗಾರ ಕೆ.ಎಲ್ ರಾಹುಲ್ 6ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 7ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ – ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ವಿಕೆಟ್ ಸಾಧನೆ

    ತಂಡಗಳ ರ‍್ಯಾಂಕಿಂಗ್, ಆಟಗಾರರ ರ‍್ಯಾಂಕಿಂಗ್ ಗಮನಿಸದರೆ ಎರಡು ತಂಡಗಳ ಪ್ರದರ್ಶನ ಶ್ರೇಷ್ಠ ಮಟ್ಟದಲ್ಲಿದೆ. ಆದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಪ್ರತಿ ಬಾರಿ ಗೆದ್ದಿದೆ ಇದು ಭಾರತಕ್ಕೆ ಪ್ಲಸ್ ಪಾಯಿಂಟ್.

  • ಹಿಗ್ಗಾಮುಗ್ಗ ಥಳಿಸಿ ಕಾರೊಳಗೆ ತುಂಬಿಕೊಂಡು ಮಹಿಳೆಯರಿಂದ್ಲೇ ಗೃಹಿಣಿ ಅಪಹರಣ!

    ಹಿಗ್ಗಾಮುಗ್ಗ ಥಳಿಸಿ ಕಾರೊಳಗೆ ತುಂಬಿಕೊಂಡು ಮಹಿಳೆಯರಿಂದ್ಲೇ ಗೃಹಿಣಿ ಅಪಹರಣ!

    ಕೋಲಾರ: ಕುಟುಂಬ ಕಲಹ ಹಿನ್ನೆಲೆಯಲ್ಲಿ ಮಹಿಳೆಯನ್ನು ಹಿಗ್ಗಾಮುಗ್ಗ ಥಳಿಸಿ ಕಾರಿನಲ್ಲಿ ಅಪಹರಣ ಆರೋಪ ಇದೀಗ ಕೇಳಿ ಬಂದಿದೆ. ಕೋಲಾರ ತಾಲೂಕಿನ ಸೋಮಸಂದ್ರ ಗ್ರಾಮದಲ್ಲಿ ಕಳೆದ ರಾತ್ರಿ ಸುಮಾರು 5 ಜನ ಮಹಿಳೆಯರ ತಂಡ ಮಹಿಳೆಯೋರ್ವಳನ್ನ ಹಿಗ್ಗಾಮುಗ್ಗ ಥಳಿಸಿ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.

    33 ವರ್ಷದ ಕಮಲಮ್ಮ ಅಪಹರಣಕ್ಕೊಳಗಾದ ಮಹಿಳೆ ಎನ್ನಲಾಗುತ್ತಿದೆ. ಅಪಹರಣಕ್ಕೂ ಮೊದಲು ಹಲ್ಲೆ ಮಾಡಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಮಹಿಳೆಯನ್ನು ಎಳೆದಾಡಿ ದೊಣ್ಣೆಗಳಿಂದ ಹೊಡೆದು ಕಾರಿನಲ್ಲಿ ಕರೆದೊಯ್ದ ದುಷ್ರ್ಕಮಿಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ.

    ಮೀನಾಕ್ಷಿ, ಶಾಲಿನಿ ಎಂಬವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ನಡೆದಿರುವ ಕೃತ್ಯ ಎನ್ನಲಾಗಿದೆ. ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಹೀಗೆ ಥಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 15 ಸಾವಿರ ರೂ., ದಾಖಲಾತಿಗಳಿದ್ದ ಪರ್ಸ್ ಹಿಂದಿರುಗಿಸಿದ ಕಾಲೇಜಿನ ವಿದ್ಯಾರ್ಥಿಗಳು

    ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಇದನ್ನೂ ಓದಿ:  5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ- ಶಿಕ್ಷಕ ಅರೆಸ್ಟ್

  • ಕೊಡಗಿನ ಯುವತಿ ಸಮುದ್ರದಲ್ಲಿ ಕಣ್ಮರೆ- ವಿಹಾರಕ್ಕೆ ಬಂದಿದ್ದ ನಾಲ್ವರ ತಂಡ

    ಕೊಡಗಿನ ಯುವತಿ ಸಮುದ್ರದಲ್ಲಿ ಕಣ್ಮರೆ- ವಿಹಾರಕ್ಕೆ ಬಂದಿದ್ದ ನಾಲ್ವರ ತಂಡ

    ಉಡುಪಿ: ಕರಾವಳಿ ಜಿಲ್ಲೆಗಳಿಗೆ ವಿಶೇಷವಾಗಿ ಸಮುದ್ರತೀರಕ್ಕೆ ಪ್ರವಾಸ ಬರಬೇಡಿ ಎಂದು ಎಷ್ಟು ಎಚ್ಚರಿಕೆ ನೀಡಿದರೂ ಜನ ಕೇಳುತ್ತಿಲ್ಲ. ವೀಕೆಂಡ್ ಬಂದ್ರೆ ಈಗಲೂ ನೂರಾರು ಜನ ಸಮುದ್ರ ತೀರದತ್ತ ಮುಖ ಮಾಡುತ್ತಾರೆ. ಹೀಗೆ ಕೊಡಗು ಮತ್ತು ಮೈಸೂರು ಭಾಗದಿಂದ ಬಂದಿದ್ದ ಯುವಕ-ಯುವತಿಯರ ತಂಡವೊಂದು ಮಲ್ಪೆಗೆ ಆಗಮಿಸಿತ್ತು. ಈ ವೇಳೆ ಸಮುದ್ರದ ಅಲೆಗಳಲ್ಲಿ ಈಜುತ್ತಿದ್ದಾಗ ನೀರು ಪಾಲಾದ ಘಟನೆ ಮಲ್ಪೆ ಸಮುದ್ರ ತೀರದಲ್ಲಿ ನಡೆದಿದೆ.

    ಮೈಸೂರಿನ ಯುವಕ ಹಾಗೂ ಕೊಡಗಿನಿಂದ ಮೂವರು ಯುವತಿಯರು ಬೀಚ್ ಗೆ ಬಂದಿದ್ದರು. ನಾಲ್ವರ ಪೈಕಿ ಓರ್ವ ಯುವಕ ಹಾಗೂ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಕೊಡಗಿನ ಯುವತಿ ದಶಮಿ (20) ಸಮುದ್ರದಲ್ಲಿ ಕಣ್ಮರೆಯಾಗಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಗಾಗಿ ಹುಡುಕಾಟ ನಡೆಯುತ್ತಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಲೆಗಳ ತೀವ್ರತೆ ಹೆಚ್ಚಿರುವುದರಿಂದ ಸಮುದ್ರಕ್ಕೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆಯ ಹೊರತಾಗಿಯೂ ತಂಡ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳ ಆರ್ಭಟಕ್ಕೆ ಸಿಲುಕಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದರೂ ಹೊರ ಜಿಲ್ಲೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ.

  • ದುಬೈನಲ್ಲಿ ಮೃತಪಟ್ಟ ಯುವಕ- ಮೃತದೇಹ ಮಂಗ್ಳೂರಿಗೆ ಕಳಿಸಿದ ಸರ್ವಧರ್ಮದ ಯುವಕರು

    ದುಬೈನಲ್ಲಿ ಮೃತಪಟ್ಟ ಯುವಕ- ಮೃತದೇಹ ಮಂಗ್ಳೂರಿಗೆ ಕಳಿಸಿದ ಸರ್ವಧರ್ಮದ ಯುವಕರು

    ಮಂಗಳೂರು: ಸರ್ವಧರ್ಮದ ಯುವಕರ ತಂಡವೊಂದು ದುಬೈನಲ್ಲಿ ಮೃತಪಟ್ಟ ಯುವಕನ ವಿಳಾಸವನ್ನು ಪತ್ತೆಹಚ್ಚಿ ಬಳಿಕ ಆತನ ಮೃತದೇಹವನ್ನು ಮಂಗಳೂರಿಗೆ ಕಳುಹಿಸಿದ ಘಟನೆ ನಡೆದಿದೆ.

    ನಗರದ ಅಡ್ಡೂರು ನಿವಾಸಿ ಯಶವಂತ ಪೂಜಾರಿ ಕಳೆದ 12 ದಿನಗಳ ಹಿಂದೆ ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೆಲಸಕ್ಕಾಗಿ ದುಬೈಗೆ ಹೋಗಿದ್ದ ಯಶವಂತ ಪೂಜಾರಿಯ ಸೂಕ್ತ ದಾಖಲೆಗಳು ಸಿಗದ ಕಾರಣ ಅವರ ಹುಟ್ಟೂರನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ.

    ಇತ್ತ ಕೊರೊನಾ ಸಮಸ್ಯೆಯಿಂದಾಗಿಯೂ ದುಬೈನಲ್ಲಿ ಲಾಕ್ ಡೌನ್ ಇರೋ ಹಿನ್ನೆಲೆಯಲ್ಲೂ ವಿಳಾಸ ಪತ್ತೆ ಕಷ್ಟಕರವಾಗಿತ್ತು. ಈ ವಿಚಾರವನ್ನು ಅರಿತ ದುಬೈನಲ್ಲಿರುವ ಮಂಗಳೂರು ಮೂಲದ ಎಲ್ಲಾ ಧರ್ಮದ ಯುವಕರು ಮೃತರ ವಿಳಾಸವನ್ನು ಪತ್ತೆಹಚ್ಚಿ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ. ಅದರಂತೆ ಪಾರ್ಥಿವ ಶರೀರವನ್ನು ಹೊತ್ತ ವಿಮಾನ ಶನಿವಾರ ದುಬೈನಿಂದ ಕ್ಯಾಲಿಕಟ್ ಗೆ ಏಳು ಗಂಟೆಗೆ ತಲುಪಿದೆ.

    ಅಲ್ಲದೇ ಕ್ಯಾಲಿಕಟ್ ನಿಂದ ಮಂಗಳೂರಿಗೆ ಮೃತದೇಹದ ತರಲು ಅಂಬುಲೆನ್ಸ್ ವ್ಯವಸ್ಥೆ ಕೂಡ ಇದೇ ಯುವಕರ ತಂಡ ಮಾಡಿದೆ. ಭಾನುವಾರ ಮೃತದೇಹ ಮಂಗಳೂರು ತಲುಪಲಿದೆ. ಕರಾವಳಿಯಲ್ಲಿ ಕೋಮುದ್ವೇಷದ ಗಲಭೆಗಳು ಮಾತ್ರ ನಡೆಯೋದಲ್ಲ, ದೂರದ ದುಬೈನಲ್ಲಿರುವ ಇದೇ ಕರಾವಳಿಯ ಯುವಕರು ಸಾಮರಸ್ಯದಿಂದಲೂ ಇದ್ದಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

  • ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ, ಗೆಲ್ಲೋದು ತುಂಬಾ ಇದೆ: ಗಂಭೀರ್

    ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ, ಗೆಲ್ಲೋದು ತುಂಬಾ ಇದೆ: ಗಂಭೀರ್

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಆತ ಸಾಧಿಸುವುದು ಇನ್ನೂ ತುಂಬಾ ಇದೆ ಎಂದು ಭಾರತ ತಂಡದ ಮಾಜಿ ಆಟಗಾರ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

    ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಂಭೀರ್, ಕೇವಲ ವೈಯಕ್ತಿಕವಾಗಿ ಉತ್ತಮವಾಗಿ ಆಡುವುದರಿಂದ ಟೀಮ್ ಅನ್ನು ಗೆಲ್ಲಿಸಲು ಆಗುವುದಿಲ್ಲ. ನಾಯಕ ವೈಯಕ್ತಿಕ ಆಟದ ಜೊತೆಗೆ ತಂಡದ ಸದಸ್ಯರನ್ನು ಹುರಿದುಂಬಿಸಬೇಕು ಎಂದು ಕೊಹ್ಲಿ ಅವವರಿಗೆ ಸಲಹೆ ನೀಡಿದ್ದಾರೆ.

    ಕ್ರಿಕೆಟ್ ಒಂದು ಟೀಮ್ ಸೇರಿ ಆಡಬೇಕಾದ ಕ್ರೀಡೆ. ನೀವು ವೈಯಕ್ತಿಕವಾಗಿಯೂ ಸ್ಕೋರ್ ಮಾಡಬೇಕು. ಆದರ ಜೊತೆ ತಂಡವನ್ನು ದೊಡ್ಡ ದೊಡ್ಡ ಟೂರ್ನಿಯಲ್ಲಿ ಗೆಲ್ಲಿಸಬೇಕು. ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ, ಸೌತ್ ಆಫ್ರಿಕಾದ ಜಾಕ್ ಕಾಲಿಸ್ ಬಹಳ ರನ್ ಹೊಡೆದರು. ಆದರೆ ಅವರು ಟ್ರೋಫಿ ಗೆಲ್ಲಲಿಲ್ಲ. ಹಾಗೆಯೇ ಕೊಹ್ಲಿ ಕೂಡ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಇನ್ನೂ ಸಾಧಿಸಬೇಕಿರುವುದು ತುಂಬಾ ಇದೆ ಎಂದು ಹೇಳಿದ್ದಾರೆ.

    ನೀವು ಎಷ್ಟೇ ದೊಡ್ಡ ಮಟ್ಟದ ರನ್ ಹೊಳೆಯನ್ನೇ ಹರಿಸಿ, ಆದರೆ ನನ್ನ ಪ್ರಕಾರ ದೊಡ್ಡ ಟ್ರೋಫಿಯನ್ನು ಗೆಲ್ಲದೇ ಇದ್ದರೆ, ನಿಮ್ಮ ಕ್ರೀಡಾ ಜೀವನ ಪೂರ್ಣಗೊಳ್ಳಲ್ಲ. ಹಾಗಾಗಿ ಕೊಹ್ಲಿ ತಮ್ಮ ತಂಡವನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು. ಬೇರೆ ಆಟಗಾರರನ್ನು ಇವರಿಗೆ ಹೋಲಿಸಬಾರದು. ಎಲ್ಲ ಆಟಗಾರರಿಗೂ ಅವರದ್ದೇ ಆದ ಸ್ಕಿಲ್ ಇರುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ತಂಡದ ಆಟಗಾರರನ್ನು ಹುರಿದುಂಬಿಸಿ ಆಡಬೇಕು ಎಂದು ಗೌತಮ್ ತಿಳಿಸಿದ್ದಾರೆ.

    ತಂಡದಲ್ಲಿರುವ ಯುವ ಆಟಗಾರರನ್ನು ಕೊಹ್ಲಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದೊಡ್ಡ ದೊಡ್ಡ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ತಂಡವನ್ನು ಸರಿಯಾಗಿ ನಿರ್ವಹಣೆ ಮಾಡುವುದರಲ್ಲಿ ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಎಂಎಸ್ ಧೋನಿ ನಂತರ ಕೊಹ್ಲಿ 2017ರಲ್ಲಿ ಭಾರತದ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದರು. ಆದರೆ ತಂಡ ಟ್ರೋಫಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ನಾಕೌಟ್ ಹಂತದಲ್ಲಿ ಟೂರ್ನಿಯಿಂದ ಔಟ್ ಆಗಿತ್ತು.

    ಭಾರತದ ರನ್ ಮಷಿನ್ ಎಂದೇ ಖ್ಯಾತಿಯಾಗಿರುವ ಕೊಹ್ಲಿ ವೈಯಕ್ತಿಕವಾಗಿ ಉತ್ತಮವಾಗಿ ಆಡುತ್ತಿದ್ದಾರೆ. ಟಿ-20 ಮಾದರಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಏಕದಿನ ಮಾದರಿಯಲ್ಲಿ ಈಗಾಗಲೇ ಒಟ್ಟು 11,867 ರನ್ ಸಿಡಿಸಿರುವ ಕೊಹ್ಲಿ, 205 ಪಂದ್ಯಗಳಲ್ಲೇ 10,000 ರನ್ ಪೂರೈಸಿ 2018ರಲ್ಲಿ ಅತೀ ಬೇಗ 10 ಸಾವಿರ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಜೊತೆಗೆ ಟೆಸ್ಟ್ ಮಾದರಿಯಲ್ಲಿ ಐಸಿಸಿ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಆದರೆ ನಾಯಕನಾಗಿ ಇಲ್ಲಿಯವರೆಗೂ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ.

  • ಬಾಬರ್ ಅಜಮ್ ಇಂಡೋ-ಪಾಕ್ ಮಿಶ್ರ ತಂಡದಲ್ಲಿ ಭಾರತೀಯರೇ ಹೆಚ್ಚು

    ಬಾಬರ್ ಅಜಮ್ ಇಂಡೋ-ಪಾಕ್ ಮಿಶ್ರ ತಂಡದಲ್ಲಿ ಭಾರತೀಯರೇ ಹೆಚ್ಚು

    – ವಿರಾಟ್ ಸಮಬಲ ಬ್ಯಾಟ್ಸ್‌ಮನ್ ನಾನಲ್ಲ: ಬಾಬರ್

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಸ್ತುತ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಇಂಡೋ-ಪಾಕ್ ಮಿಶ್ರ ತಂಡವನ್ನು ರಚಿಸಿದ್ದು, ಅದರಲ್ಲಿ ಟೀಂ ಇಂಡಿಯಾ ಆಟಗಾರರೇ ಹೆಚ್ಚಾಗಿದ್ದಾರೆ.

    ಇಂಡೋ-ಪಾಕ್ ಮುಖಾಮುಖಿಯಾಗುವುದು ಹೆಚ್ಚು ವಿರಳವಾಗಿದೆ. ಐಸಿಸಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಆಡುತ್ತವೆ. ಆದರೆ ಆಟಗಾರರು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಾಗೇ ಪಾಕಿಸ್ತಾನದ ಟಿ20, ಏಕದಿನ ಕ್ರಿಕೆಟ್ ತಂಡ ನಾಯಕ ಬಾಬರ್ ಅಜಮ್, ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನಿರೂಪಕ, ವಿಶ್ಲೇಷಕ ಹರ್ಷ ಭೋಗ್ಲೆ ಅವರೊಂದಿಗಿನ ಲೈವ್ ಚಾಟಿಂಗ್‍ನಲ್ಲಿ ಈ ವಿಚಾರವನ್ನು ಬಾಬರ್ ಅಜಮ್ ಹಂಚಿಕೊಂಡಿದ್ದಾರೆ.

    ಬಾಬರ್ ತಾವು ರಚಿಸಿದ ಟಿ20 ತಂಡದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನಂತರದ 3ನೇ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಮೈದಾನಕ್ಕೆ ಇಳಿಯಲಿದ್ದಾರೆ.

    ಬಾಬರ್ ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದಾರೆ. ಶೋಯೆಬ್ ಮಲಿಕ್ ಆಲ್‍ರೌಂಡರ್ ಆಗಿದ್ದರೂ ಬಾಬರ್ ಅವರು ತಮ್ಮ ತಂಡದಲ್ಲಿ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೂ ಸ್ಥಾನ ನೀಡಿದ್ದಾರೆ. ತಂಡದಲ್ಲಿ ಧೋನಿ, ಮಲಿಕ್ ಮತ್ತು ಪಾಂಡ್ಯ ಅವರೊಂದಿಗೆ, ಬಾಬರ್ ತಂಡವು ವಿಶ್ವ ದರ್ಜೆಯ ಶ್ರೇಷ್ಠ ಬ್ಯಾಟಿಂಗ್ ತಂಡವನ್ನು ಹೊಂದಿದೆ.

    ತಂಡದಲ್ಲಿ ಶಾದಾಬ್ ಖಾನ್ ಮತ್ತು ಕುಲದೀಪ್ ಯಾದವ್ ಇಬ್ಬರು ಸ್ಪಿನ್ನರ್ ಆಗಿದ್ದರೆ, ಜಸ್‍ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಅಮೀರ್ ಅವರು ವೇಗ ಬೌಲರ್ ಗಳಾಗಿದ್ದಾರೆ. ಒಟ್ಟಾರೆಯಾಗಿ ಬಾಬರ್ ಅಜಮ್ ಅವರು ಆಟದ ಎಲ್ಲಾ ವಿಭಾಗಗಳಲ್ಲಿ ವಿವಿಧ ಆಯ್ಕೆಗಳೊಂದಿಗೆ ಬಲಿಷ್ಟ ತಂಡವನ್ನು ಕಟ್ಟಿದ್ದಾರೆ.

    ತಂಡ ಹೀಗಿದೆ:
    ರೋಹಿತ್ ಶರ್ಮಾ, ಬಾಬರ್ ಅಜಮ್, ವಿರಾಟ್ ಕೊಹ್ಲಿ, ಶೋಯೆಬ್ ಮಲಿಕ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಜಸ್‍ಪ್ರೀತ್ ಬುಮ್ರಾ, ಮೊಹಮ್ಮದ್ ಅಮೀರ್, ಕುಲದೀಪ್ ಯಾದವ್.

    ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡುತ್ತಿರುವ ವಿಚಾರಕ್ಕೆ ಸಂದರ್ಶನ ಒಂದರಲ್ಲಿ ಪ್ರತಿಕ್ರಿಯೆ ನೀಡಿರುವ ಬಾಬರ್ ಅಜಮ್, “ಅವರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾನು ಇನ್ನೂ ಬೆಳೆಯಬೇಕಿದೆ ಹಾಗೂ ಸಾಧಿಸುವುದು ಸಾಕಷ್ಟಿದೆ. ಅವರಂತಹ ಆಟಗಾರನಾಗಲು ಪ್ರಯತ್ನಿಸುತ್ತೇನೆ. ಪಾಕಿಸ್ತಾನ ತಂಡವು ನನ್ನ ನಾಯಕತ್ವದಲ್ಲಿ ಹೆಚ್ಚು ಪಂದ್ಯಗಳನ್ನು ಗೆಲ್ಲುವಂತೆ ಶ್ರಮಿಸುತ್ತೇನೆ. ವಿರಾಟ್ ಸಮಬಲ ಬ್ಯಾಟ್ಸ್‌ಮನ್ ನಾನಲ್ಲ” ಎಂದು ತಿಳಿಸಿದ್ದಾರೆ.

  • ಪಾಳೇಗಾರರ ಅವಧಿಯಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಲ್ಯಾಣಿ ಪುನಶ್ಚೇತನ

    ಪಾಳೇಗಾರರ ಅವಧಿಯಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಲ್ಯಾಣಿ ಪುನಶ್ಚೇತನ

    ಬೆಂಗಳೂರು: ಪಾಳೇಗಾರರ ಆಡಳಿತ ಅವಧಿಯಲ್ಲಿ ನಿರ್ಮಿಸಿದ್ದ ಇತಿಹಾಸ ಪ್ರಸಿದ್ಧ ಕಲ್ಯಾಣಿಯೊಂದು ಗಿಡಗಂಟೆಗಳು ಬೆಳೆದುಕೊಂಡು ಸಂಪೂರ್ಣ ಕಲ್ಯಾಣಿಯು ಕಾಣದಂತೆ ಅವನತಿಯ ಅಂಚಿಗೆ ತಲುಪಿತ್ತು. ಇದೀಗ ಆ ಕಲ್ಯಾಣಿಗೆ ನ್ಯಾಯಾಧೀಶರ ತಂಡ, ವಕೀಲರ ತಂಡ, ಪೊಲೀಸ್ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಪುನಶ್ಚೇತನ ಮಾಡುವ ಮೂಲಕ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಸಿಡಿಹೊಸಕೋಟೆ ಬಳಿಯಿರುವ ಪುರಾತನ ಕಾಲದ ದೊರೆಸಾನಿ ಕಲ್ಯಾಣಿಯೂ ಅವನತಿಯ ಅಂಚಿಗೆ ತಲುಪಿ ಕಲ್ಯಾಣಿ ಇನ್ನು ಮುಂದಿನ ಪೀಳಿಗೆಗೆ ಕೇವಲ ನೆನಪು ಮಾತ್ರ ಎಂದುಕೊಂಡಿದ್ದರು. ಈ ಬಗ್ಗೆ ಸರ್ಕಾರವಾಗಲಿ, ಪುರಾತತ್ವ ಇಲಾಖೆಯಾಗಲಿ, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಾಗಲಿ ಗಮನ ಹರಿಸದೆ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗುವಲ್ಲಿ ವಿಫಲವಾಗಿದ್ದರು. ಕಲ್ಯಾಣಿಯೂ ಸಂಪೂರ್ಣ ಗಿಡಗಂಟೆಗಳಿಂದ ತುಂಬಿಕೊಂಡು ವಿಷ ಜಂತುಗಳ ಆವಾಸಸ್ಥಾನವಾಗಿತ್ತು. ಅಲ್ಲಿ ಕಲ್ಯಾಣಿ ಇತ್ತ ಎನ್ನುವಂತಹ ಪ್ರಶ್ನೆ ಮೂಡುವಂತೆ ಮಾಡಿತ್ತು.

    ಕಲ್ಯಾಣಿಯ ಅವನತಿಯ ಅಂಚಿನಲ್ಲಿರುವ ಬಗ್ಗೆ ಸಮಾಜಿಕ ಜಾಲತಾಣ ಸೇರಿದಂತೆ ಇತಿಹಾಸ ತಜ್ಞರು ಸಹ ಈ ಬಗ್ಗೆ ಗಮನ ಹರಿಸಬೇಕೆಂದು ಮಾಹಿತಿ ಹಂಚಿಕೊಂಡಿದ್ದರು. ಈ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿದ ನ್ಯಾಯಾಧೀಶರ ತಂಡ, ವಕೀಲರ ತಂಡ, ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಕ್ಷರ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಇಡೀ ದಿನ ಕಲ್ಯಾಣಿಯಲ್ಲಿ ಬೆಳೆದುಕೊಂಡಿದ್ದ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಸ್ವಚ್ಚತಾ ಕಾರ್ಯ ನಡೆಸಿ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿರುವುದಕ್ಕೆ ಇಡೀ ಆನೇಕಲ್ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈಗ ನಾವು ಕಲ್ಯಾಣಿಯನ್ನು ಸ್ವಚ್ಛಗೊಳಿಸಿದೇವೆ. ಆದರೆ ಕಲ್ಯಾಣಿಗೆ ಇದ್ದ ಕಲ್ಲಿನ ಮೆಟ್ಟಿಲುಗಳು ಸಡಿಲಗೊಂಡು ಕುಸಿದಿದ್ದು ಅವುಗಳನ್ನು ಸರಿಪಡಿಸಬೇಕು ಹಾಗೆ ಮುಂದಿನ ದಿನಗಳಲ್ಲಿ ಕಲ್ಯಾಣಿಯಲ್ಲಿ ನೀರು ನಿಲ್ಲುವಂತೆ ಮಾಡಿ ಪುರಾತನ ಇತಿಹಾಸ ಸಾರುವ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗಬೇಕೆಂದು ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಸ್ವಚ್ಛತಾ ಕಾರ್ಯ ಮಾಡಿದವರು ಒತ್ತಾಯಿಸಿದರು.

  • ವಿದ್ಯಾರ್ಥಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು

    ವಿದ್ಯಾರ್ಥಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು

    ಬೆಂಗಳೂರು: ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಕೊಚ್ಚಿ ಕೊಂದ ಘಟನೆ ತಡರಾತ್ರಿ ನಂದಿನಿ ಲೇಔಟ್‍ನ ಸರಸ್ವತಿಪುರದಲ್ಲಿ ನಡೆದಿದೆ.

    ಉಮಾ ಮಹೇಶ್ವರ(20) ಕೊಲೆಯಾದ ವಿದ್ಯಾರ್ಥಿ. ಬುಧವಾರ ಸಂಜೆ ಗಣೇಶ ಲೇಔಟ್‍ನಲ್ಲಿ ಯುವಕರ ಗುಂಪು ಗಲಾಟೆ ಮಾಡಿಕೊಂಡಿತ್ತು. ಈ ವೇಳೆ ಎದುರಾಳಿ ತಂಡ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿತ್ತು. ಆದರೆ ಯಾವ ಕಾರಣಕ್ಕಾಗಿ ಗಲಾಟೆ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

    ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಉಮಾ ಮಹೇಶ್ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಮಾ ಮಹೇಶ್ವರ ಇಂದು ಮುಂಜಾನೆ ಮೃತಪಟ್ಟಿದ್ದಾನೆ. ಇತ್ತ ಮಾರಣಾಂತಿಕವಾಗಿ ಹಲ್ಲೆ ಮಾಡಿದ ನಂತರ ತಂಡ ಪರಾರಿಯಾಗಿದೆ.

    ವಿದ್ಯಾರ್ಥಿ ಮೇಲೆ ತಂಡವೊಂದು ಹಲ್ಲೆ ಮಾಡಿದ ವಿಷಯವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಈ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಮನೆಯಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಶವವಾಗಿ ಪತ್ತೆ

    ಮನೆಯಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಶವವಾಗಿ ಪತ್ತೆ

    ಸಿಯೋಲ್: ಪಾಪ್ ಗಾಯಕಿ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ದಕ್ಷಿಣ ಕೊರಿಯಾದ ಜಿಯೊಂಗ್ಲಿನಲ್ಲಿ ನಡೆದಿದೆ.

    ಸುಲ್ಲಿ(25) ಶವವಾಗಿ ಪತ್ತೆಯಾದ ಗಾಯಕಿ. ಸುಲ್ಲಿ ಮ್ಯಾನೇಜರ್ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು. ಆದರೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಮ್ಯಾನೇಜರ್ ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಸುಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಮಾರ್ಚ್ 29, 1994ರಂದು ಹುಟ್ಟಿದ ಸುಲ್ಲಿ, ಕೆ-ಪಾಪ್ ಬ್ಯಾಂಡ್‍ನ ಸದಸ್ಯೆ ಆಗಿದ್ದಳು. ಮಾಧ್ಯಮಗಳ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಜನರು ನಿಂದಿಸುತ್ತಿದ್ದಕ್ಕೆ 2014ರಲ್ಲಿ ಸುಲ್ಲಿ ತನ್ನ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಳು. ಬಳಿಕ 2015ರಲ್ಲಿ ಆ ತಂಡದಿಂದ ಹೊರಬಂದು ನಟನೆಯತ್ತ ಆಸಕ್ತಿ ವಹಿಸಿದ್ದಳು.

    ಸುಲ್ಲಿ ಮೂರು ವರ್ಷಗಳ ನಂತರ ಅಂದರೆ 2018ರಲ್ಲಿ ಸಂಗೀತ ಕೆಲಸವನ್ನು ಪುನರಾಂಭಿಸಿದ್ದಳು. ಜೂನ್ 2019ರಲ್ಲಿ ಸುಲ್ಲಿ ಗಾಬ್ಲಿನ್ ಎಂಬ ಆಲ್ಬಂ ಮೂಲಕ ಸೋಲೋ ಗಾಯಕಿಯಾಗಿ ಡೆಬ್ಯು ಮಾಡಿದ್ದಳು. ನಂತರ 2005ರಲ್ಲಿ ಸುಲ್ಲಿ ಕಿರುತೆರೆಯಲ್ಲಿ ನಟಿಸಲು ಶುರು ಮಾಡಿದ್ದಳು.

    2012ರಲ್ಲಿ ‘ಬ್ಯೂಟಿಫುಲ್ ಯೂ’ ಕಾರ್ಯಕ್ರಮಕ್ಕಾಗಿ ಸುಲ್ಲಿ ನ್ಯೂ ಸ್ಟಾರ್ ಅವಾರ್ಡ್ ಪಡೆದುಕೊಂಡಿದ್ದಳು. ಸುಲ್ಲಿ ಪ್ಯಾನಿಕ್ ಡಿಸಾರ್ಡರ್ (ಭಯದಿಂದ ಅಸ್ವಸ್ಥತೆ)ನಿಂದ ಬಳಲುತ್ತಿದ್ದಳು. ಅಲ್ಲದೆ ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ, “ನನಗೆ ಜೊತೆ ಆತ್ಮೀಯರಾಗಿದ್ದವರೇ ನನ್ನನ್ನು ಬಿಟ್ಟು ಹೋಗಿದ್ದಾರೆ. ನನಗೆ ಅವರಿಂದ ತುಂಬಾ ನೋವಾಗಿತ್ತು. ನನ್ನನ್ನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲ ಎಂದು ಅನಿಸುತ್ತಿತ್ತು” ಎಂದು ಹೇಳಿಕೊಂಡಿದ್ದಳು.

  • ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ – ಎರಡು ತಂಡಗಳ ನಡುವೆ ಮಾರಾಮಾರಿ

    ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ – ಎರಡು ತಂಡಗಳ ನಡುವೆ ಮಾರಾಮಾರಿ

    ಮಂಗಳೂರು: ಎರಡು ತಂಡಗಳ ನಡುವೆ ಮಾರಾಮಾರಿ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಶೂಟೌಟ್ ನಡೆಸಿದ ಘಟನೆ ಮಂಗಳೂರು ನಗರ ಹೊರವಲಯದ ಉಳ್ಳಾಲದ ಮಕ್ಕಚ್ಚೇರಿ ಕಿಲೇರಿಯಾ ನಗರದಲ್ಲಿ ನಡೆದಿದೆ.

    ಇರ್ಷಾದ್(17) ಗುಂಡೇಟಿನಿಂದ ಗಾಯಗೊಂಡ ಸ್ಥಳೀಯ ನಿವಾಸಿ. ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ ಉಂಟಾಗಿದ್ದು, ಈ ಕಾರಣದಿಂದಾಗಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆಯುತ್ತಿತ್ತು.

    ಈ ವೇಳೆ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಏಳು ಮಂದಿ ಸಹಚರರೊಂದಿಗೆ ಆಗಮಿಸಿದ್ದಾನೆ. ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸುಹೈಲ್ ಕಂದಕ್ ತಂಡದ ಮೇಲೆ 5 ಸುತ್ತು ಫೈರ್ ಮಾಡಿದ್ದಾನೆ. ಸುಹೈಲ್ ಫೈರಿಂಗ್ ಮಾಡುತ್ತಿದ್ದಂತೆ ಸ್ಥಳೀಯರು ಆತನ ಕಾರನ್ನು ಪುಡಿಗಟ್ಟಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.