Tag: ಢಾಬಾ

  • ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್‌ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!

    ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್‌ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!

    ಬೆಳಗಾವಿ: ಅನ್ನ – ನೀರು ನೀಡದೆ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೋಳ ತೊಡಿಸಿ ಹೊಟೇಲ್ ಕಾರ್ಮಿಕರಿಗೆ (labourers)  ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ಕಂಡುಬಂದಿದೆ. ಈ ದೃಶ್ಯಗಳನ್ನು ನೋಡಿದರೆ ಜೀತ ಪದ್ಧತಿ ಇನ್ನೂ ಜೀವಂತವಿದೆಯೇ ಎಂಬುದಕ್ಕೆ ಈ ವರದಿ ಪುಷ್ಟಿ ನೀಡಿತ್ತು. ಈ ಕುರಿತು ʻಪಬ್ಲಿಕ್‌ ಟಿವಿʼ (Public TV) ವರದಿ ಪ್ರಸಾರ ಮಾಡಿದ ಕೆಲವೇ ಸಮಯದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ಹಾಗೂ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಖಾಸಗಿ ಢಾಬಾಗೆ ಗ್ರಾಮೀಣ ಸಿಪಿಐ ಸಮೀರ ಮುಲ್ಲಾ ಭೇಟಿ ನೀಡಿದ್ದಾರೆ. ತಹಶೀಲ್ದಾರ್‌ ಸಹ ಭೇಟಿ ನೀಡಿದ್ದು, ಢಾಬಾ ಮಾಲಿಕ ಹಾಗೂ ಕೆಲಸಗಾರರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇರಲ್ವೋ ಗೊತ್ತಿಲ್ಲ: ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್

    ಹೊಟೇಲ್ ಕೆಲಸಕ್ಕೆ ಉತ್ತರ ಭಾರತದ ಯುವಕರನ್ನು ಕರೆತಂದು ಪುಡಿಗಾಸು ಮುಂಗಡವಾಗಿ ನೀಡಿ ಅವರಿಗೆ ಚಿತ್ರಹಿಂಸೆ ಕೊಟ್ಟು ಕಾಲಿಗೆ ಬೇಡಿ ಹಾಕಿ ಕಬ್ಬಿಣದ ಸರಪಳಿಯಿಂದ ಕಟ್ಟಿ ಥಳಿಸುವ ದೃಶ್ಯಗಳು ಕಂಡುಬಂದಿದ್ದವು. ಇದನ್ನೂ ಓದಿ: ಚಾಮರಾಜನಗರ| ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿ.ಟಿ ಸ್ಕ್ಯಾನ್ ಸೌಲಭ್ಯವಿದ್ರೂ ರೋಗಿಗಳ ಪರದಾಟ

    ಮಾಲಿಕನ ಕುಕೃತ್ಯಕ್ಕೆ ರೋಸಿಹೋದ ಹೊಟೇಲ್ ಕೂಲಿ ಕಾರ್ಮಿಕರು ಬಿಡುಗಡೆ ಭಾಗ್ಯ ಯಾವಾಗ ಎಂಬುದನ್ನು ಕಾದು ನೋಡುತ್ತಿದ್ದರು. ಉತ್ತರ ಭಾರತದಿಂದ ಬಂದ ಯುವಕರಿಗೆ ಇಲ್ಲಿಯ ಭಾಷೆ ಬರುವುದಿಲ್ಲ. ಕಾಲಿಗೆ ಕೋಳ ತೊಟ್ಟುಕೊಂಡೇ ರೊಟ್ಟಿ ತಟ್ಟಿ ಜನರ ಹೊಟ್ಟೆ ತುಂಬಿಸುತ್ತಿದ್ದುದ್ದಂತು ವಿಷಾಧನಿಯ.

    ಇದೀಗ ʻಪಬ್ಲಿಕ್‌ ಟಿವಿʼ ವರದಿ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇಷ್ಟೊಂದು ಕಾಯ್ದೆ ಕಾನೂನುಗಳು ಪ್ರಬಲವಾಗಿದ್ದರೂ ಇಂಥ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೀತ ಪದ್ದತಿ ಸಂಪೂರ್ಣ ಹೊಗಲಾಡಿಸಲು ಕಠಿಣ ಕಾನೂನುಗಳಿದ್ದು ಹೋಟೆಲ್ ಮಾಲಿಕರಿಗೆ ಶಿಕ್ಷೆಯಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ತಿಳಿಸಿದ್ದಾರೆ.

  • ಡೇಟಿಂಗ್‌ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ

    ಡೇಟಿಂಗ್‌ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ

    ನವದೆಹಲಿ: 25 ವರ್ಷದ ಯುವತಿಯನ್ನು (Woman) ಕೊಲೆ ಮಾಡಿ, ಆಕೆಯ ಶವವನ್ನು ಫ್ರಿಜರ್‌ನಲ್ಲಿ (Freezer) ಬಚ್ಚಿಟ್ಟ ಘಟನೆ ನೈಋತ್ಯ ದೆಹಲಿಯ ನಜಾಫ್‍ಗಢನಲ್ಲಿರುವ ಢಾಬಾದಲ್ಲಿ ನಡೆದಿದೆ.

    ಮೃತ ಯುವತಿಯನ್ನು ದೆಹಲಿಯ ಉತ್ತಮ್ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಢಾಬಾ ಮಾಲೀಕ (Owner) 2-3 ದಿನಗಳ ಹಿಂದೆ ಯುವತಿಯನ್ನು ಕೊಂದು, ಆಕೆಯ ಶವವನ್ನು ಢಾಬಾದ ಫ್ರಿಜರ್‌ನಲ್ಲಿ ಇರಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

    crime

    ಢಾಬಾದ ಮಾಲೀಕ ಸಾಹಿಲ್ ಗೆಹ್ಲೋಟ್ ಹಾಗೂ ಯುವತಿ ಸಂಬಂಧದಲ್ಲಿದ್ದರು. ಆದರೆ ಗೆಹ್ಲೋಟ್‌ಗೆ ಬೇರೊಬ್ಬ ಯುವತಿಯ ಜತೆ ಮದುವೆ ನಿಶ್ಚಯವಾಗಿತ್ತು. ಇದನ್ನು ತಿಳಿದ ಗೆಹ್ಲೋಟ್‍ಗೆ ಹಾಗೂ ಯುವತಿಗೆ ಜಗಳ ನಡೆದಿದೆ.

    ಈ ವೇಳೆ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಕೋಪಗೊಂಡ ಗೆಹ್ಲೋಟ್ ಆಕೆಯನ್ನು ಕೊಂದು ಶವವನ್ನು ತನ್ನ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟಿದ್ದಾನೆ. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲೇ ವಿಜಯೇಂದ್ರ ಆ್ಯಕ್ಟಿವ್; ಫೆ.20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾದ ಮೊದಲ ಸಮಾವೇಶ

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಢಾಬಾ ಮಾಲೀಕ ಸಾಹಿಲ್ ಗೆಹ್ಲೋಟ್‍ನನ್ನು ಬಂಧಿಸಿದ್ದಾರೆ. ಕಳೆದ 3-4 ದಿನಗಳ ಹಿಂದೆ ಯುವತಿಯನ್ನು ಹತ್ಯೆಗೈಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ರಾಜ್ಯದ ಶೈಕ್ಷಣಿಕ ಸಾಧನೆಗೆ ಮಠಗಳೇ ಕಾರಣ – ಸರ್ಕಾರದ ಕೆಲಸವನ್ನ ಮಠಗಳೇ ಮಾಡ್ತಿವೆ ಎಂದ ಸಿಎಂ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿಕನ್ ನೀಡದ್ದಕ್ಕೆ ಡಾಬಾಗೆ ಬೆಂಕಿ ಇಟ್ರು

    ಚಿಕನ್ ನೀಡದ್ದಕ್ಕೆ ಡಾಬಾಗೆ ಬೆಂಕಿ ಇಟ್ರು

    ಮುಂಬೈ: ಇಬ್ಬರು ವ್ಯಕ್ತಿಗಳು ಚಿಕನ್ ನೀಡದ ಕಾರಣಕ್ಕೆ ಡಾಬಾಗೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ಶಂಕರ್ ಟೇಡೆ(29) ಮತ್ತು ಸಾಗರ್ ಪಟೇಲ್(19) ಎಂದು ಗುರುತಿಸಲಾಗಿದೆ. ಇವರು ಭಾನುವಾರ ಬೆಲ್ಟರೋಡಿ ಪ್ರದೇಶದ ರಸ್ತೆ ಬದಿಯ ಡಾಬಾಗೆ ರಾತ್ರಿ ಸುಮಾರು 1 ಗಂಟೆ ಭೇಟಿ ನೀಡಿದ್ದಾರೆ. ಮದ್ಯಪಾನ ಸೇವಿಸಿದ ಸ್ಥಿತಿಯಲ್ಲಿದ್ದ ಇವರು ಚಿಕನ್ ನೀಡುವಂತೆ ಹೇಳಿದ್ದಾರೆ.

    ಮಾಲೀಕರು ಚಿಕನ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರು ಕುಡಿದ ಮತ್ತಿನಲ್ಲಿ ಡಾಬಾಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಆರೋಪಿಗಳ ವಿರುದ್ಧ ಡಾಬಾ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

  • ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ನವದೆಹಲಿ: 30 ವರ್ಷದ ವ್ಯಕ್ತಿಯನ್ನ ಢಾಬಾದ ಮೂವರು ಸಿಬ್ಬಂದಿ ಸೇರಿ ಕೊಲೆ ಮಾಡಿರೋ ಘಟನೆ ದೆಹಲಿಯ ಪ್ರೀತ್ ವಿಹಾರ್‍ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಪವನ್ ಅವರು ಮಂಡಾವ್ಲಿಯಲ್ಲಿ ತನ್ನದೇ ಸ್ವಂತ ಉಪಹಾರಗೃಹವನ್ನ ಹೊಂದಿದ್ದಾರೆ. ಅವರು ಭಾನುವಾರ ಸಂಜೆ ಕಮಲ್ ಢಾಬಾಗೆ ಊಟಕ್ಕೆಂದು ಹೋಗಿದ್ದು, ಅಲ್ಲಿ ನೀಡಲಾಗಿದ್ದ ಆಹಾರದ ಗುಣಮಟ್ಟದ ಬಗ್ಗೆ ಸಿಬ್ಬಂದಿಗೆ ದೂರಿದ್ದರು. ಇದರಿಂದ ಕೋಪಗೊಂಡ ಢಾಬಾ ಸಿಬ್ಬಂದಿ ಪವನ್ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಢಾಬಾ ಮಾಲೀಕ ಹಾಗೂ ಮತ್ತೋರ್ವ ನೌಕರ ಸೇರಿ ಭಾರವಾದ ಪಾತ್ರೆಗಳಿಂದ ಪವನ್ ಮೇಲೆ ಹಲ್ಲೆ ಮಾಡಿದ್ದಾರೆ.

    ಪವನ್ ಅವರ ತಲೆ, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಹೊಡೆಯಲಾಗಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು ಎಂದು ವರದಿಯಾಗಿದೆ.

    ಸ್ಥಳೀಯರೊಬ್ಬರು ಕರೆ ಮಾಡಿ ವಿಷಯ ತಿಳಿಸಿದ ಬಳಿಕ ನಾವು ಸ್ಥಳಕ್ಕೆ ಹೋದೆವು. ಬಳಿಕ ಪವನ್ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಪವನ್ ಸಾವನ್ನಪ್ಪಿದ್ರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಢಾಬಾ ಸಿಬ್ಬಂದಿಯಾದ ಸಚಿನ್, ಗೋವಿಂದ್ ಹಾಗೂ ಕರಣ್ ಎಂಬ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 302(ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.