Tag: ಡ್ರ್ಯಾಗರ್

  • ಅಣ್ಣನ ಮೆಹೆಂದಿಯಂದೇ ಮದ್ವೆ ಮನೆಯಲ್ಲಿ ತಮ್ಮನ ಹೆಣ ಬಿತ್ತು!

    ಅಣ್ಣನ ಮೆಹೆಂದಿಯಂದೇ ಮದ್ವೆ ಮನೆಯಲ್ಲಿ ತಮ್ಮನ ಹೆಣ ಬಿತ್ತು!

    ಬೆಂಗಳೂರು: ಅಣ್ಣನ ಮದ್ವೆ ಇಂದು ಆಗ್ಬೇಕಿತ್ತು. ಆದ್ರೆ ಅತ್ತ ತಮ್ಮನ ಹೆಣ ಬಿದ್ದಿದೆ. ಮದುವೆ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ನಗುನಗುತ್ತಾ ಓಡಾಡ್ತಿರಬೇಕಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ.

    ಹೌದು. ಗುರುವಾರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿಯ ಉಮರ್ ಫಾರುಕ್ ಮಸ್ಜೀದ್ ಬಳಿ 22 ವರ್ಷದ ಶೇಖ್ ರಿಜ್ವಾನ್ ಅನ್ನೋ ಯುವಕನನ್ನು ದುಷ್ಕರ್ಮಿಗಳು ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಾಹಿದ್, ಚೆನ್ನೈ ಶಾಹಿದ್ ಹಾಗೂ ಇನ್ನೊಬ್ಬ ಅಪರಿಚಿತ ಸೇರಿ ಮೂವರಿಂದ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಇಂದು ರಿಜ್ವಾನ್ ಅಣ್ಣ ಇರ್ಫಾನ್ ಮದುವೆ ನಿಗದಿಯಾಗಿತ್ತು. ಹೀಗಾಗಿ ನಿನ್ನೆ ರಾತ್ರಿ ಮೆಹೆಂದಿ ಕಾರ್ಯಕ್ರಮವಿತ್ತು. ಅಂತೆಯೇ ಮನೆ ಮಂದಿಯೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಂದ ಚೋಟ ಶಾಹಿದ್ ಅತನ ಸಹಚರರು ಮಾತುಕತೆಯ ನೆಪದಲ್ಲಿ ಮಸೀದಿ ಬಳಿ ಕರೆದುಕೊಂಡು ಹೋಗಿ ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ತಕ್ಷಣವೇ ರಿಜ್ವಾನನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣಕ್ಕೆ ಬೋರಿಂಗ್ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಅಂತೆಯೇ ಬೌರಿಂಗ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

    ಸದ್ಯ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಹಾಡಹಗಲೇ ಸೇಲ್ಸ್ ಮ್ಯಾನ್‍ಗೆ ಡ್ರ್ಯಾಗರ್ ತೋರಿಸಿ ದರೋಡೆ ಮಾಡಿದ್ರು

    ಹಾಡಹಗಲೇ ಸೇಲ್ಸ್ ಮ್ಯಾನ್‍ಗೆ ಡ್ರ್ಯಾಗರ್ ತೋರಿಸಿ ದರೋಡೆ ಮಾಡಿದ್ರು

    ಬೆಂಗಳೂರು: ಹಾಡುಹಗಲೇ ಸೇಲ್ಸ್ ಮ್ಯಾನ್ ಒಬ್ಬರಿಗೆ ಡ್ರ್ಯಾಗರ್ ತೋರಿಸಿ ಹೆದರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೆಬ್ಬಾಳದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಬುಧವಾರ ಮಧ್ಯಾಹ್ನ ಅಂಗಡಿಯೊಂದರ ಮುಂದೆ ಸೇಲ್ಸ್ ಮ್ಯಾನ್ ನಿಂತಿದ್ದರು. ಆ ಸ್ಥಳಕ್ಕೆ ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಡ್ರ್ಯಾಗರ್ ನಿಂದ ಚುಚ್ಚುವುದಾಗಿ ಹೆದರಿಸಿ ಅವರ ಕೈಯಲ್ಲಿದ್ದ 40 ಸಾವಿರ ರೂ. ಹಣದ ಬ್ಯಾಗ್ ಹಾಗೂ ಮೊಬೈಲ್ ದೋಚಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಜನರು ಅಸಹಾಯಕ ಸ್ಥಿತಿಯಲ್ಲಿ ನಿಂತು ನೋಡುತ್ತಿದ್ದರು. ಒಬ್ಬನ ಕೈಯಲ್ಲಿ ಡ್ರ್ಯಾಗರ್ ಇದ್ದು ಇನ್ನೊಬ್ಬ ಹಾಗೇ ಬರಿಗೈಯಲ್ಲಿ ಇದ್ದನು. ಅಲ್ಲಿಯೇ ನಿಂತಿದ್ದ ಒಬ್ಬ ಇವರನ್ನು ಹಿಡಿಯಲು ಮುಂದಾದಾಗ ಅವರಿಗೆ ಚುಚ್ಚಲು ಮುಂದಾದಂತೆ ಮಾಡಿ ಹೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

    ಹೆಲ್ಮೆಟ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳ ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ನಡೆದಿದೆ.

  • ರಸ್ತೆಯಲ್ಲಿ ಕಾರು ಅಡ್ಡಲಾಗಿ ನಿಲ್ಲಿಸಿದ್ದಕ್ಕೆ ಮೂವರ ಮೇಲೆ ಡ್ರ್ಯಾಗರ್‍ನಿಂದ ಹಲ್ಲೆ

    ರಸ್ತೆಯಲ್ಲಿ ಕಾರು ಅಡ್ಡಲಾಗಿ ನಿಲ್ಲಿಸಿದ್ದಕ್ಕೆ ಮೂವರ ಮೇಲೆ ಡ್ರ್ಯಾಗರ್‍ನಿಂದ ಹಲ್ಲೆ

    ಬೆಂಗಳೂರು: ರಸ್ತೆಯಲ್ಲಿ ಕಾರು ಅಡ್ಡವಾಗಿ ನಿಲ್ಲಿಸಿದ್ದರು ಅನ್ನೋ ಕಾರಣಕ್ಕೆ ಮನೆಗೆ ನುಗ್ಗಿ ಮೂವರಿಗೆ ಡ್ರ್ಯಾಗರ್‍ನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

    ಶಿಲ್ಪಾ, ಅರ್ಜುನ್, ದೀಪಕ್ ಗಾಯಗೊಂಡ ವ್ಯಕ್ತಿಗಳು. ಭಾನುವಾರ ರಾತ್ರಿ ಅರ್ಜುನ್ ಎಂಬವರು ಬಾಡಿಗೆ ಕಾರೊಂದರಲ್ಲಿ ಮನೆಯ ಬಳಿ ಬಂದು ಇಳಿದು ಕಾರ್ ಡ್ರೈವರ್‍ಗೆ ಬಾಡಿಗೆ ಹಣ ನೀಡುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರು ತೆಗೆಯುವಂತೆ ಅವಾಜ್ ಹಾಕಿದ್ದರು ಎಂದು ಹೇಳಲಾಗಿದೆ.

    ಈ ವೇಳೆ ಅರ್ಜುನ್ ಹಣ ನೀಡಿ ಹೋಗುತ್ತೀನಿ. ನಾನು ಇದೇ ಏರಿಯಾದವನೇ ಎಂದು ಹೇಳಿ ಮನೆಯ ಒಳಗೆ ಹೋಗಿದ್ದಾರೆ. ಇದಾದ ಸ್ವಲ್ಪ ಹೊತ್ತಲ್ಲೇ ಏಕಾಏಕಿ ಅರ್ಜುನ್ ಮನೆಗೆ ನುಗ್ಗಿದ ಇಬ್ಬರು, ಡ್ರ್ಯಾಗರ್‍ನಿಂದ ಮೂವರಿಗೆ ಇರಿದು ಹಲ್ಲೆ ನಡೆಸಿದ್ದಾರೆ. ಗಲಾಟೆ ಶಬ್ಧ ಕೇಳಿದ ಅಕ್ಕಪಕ್ಕದ ಮನೆಯವರು ಇಬ್ಬರನ್ನು ಸೆರೆಹಿಡಿದು ರಾಜಾಜಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರೋ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.