Tag: ಡ್ರೋಣ್

  • ಬಿಗ್ ಬಾಸ್ ಗೆಲ್ಲೋದು ಯಾರು?: ಎಲಿಮಿನೇಟ್ ಆದ ಸ್ಪರ್ಧಿಗಳು ಹೇಳೋದೇನು?

    ಬಿಗ್ ಬಾಸ್ ಗೆಲ್ಲೋದು ಯಾರು?: ಎಲಿಮಿನೇಟ್ ಆದ ಸ್ಪರ್ಧಿಗಳು ಹೇಳೋದೇನು?

    ಹುನಿರೀಕ್ಷಿತ ಬಿಗ್‌ಬಾಸ್‌ (Bigg Boss Kannada) ಕನ್ನಡ ಸೀಸನ್‌ 10 ಬಹುದೊಡ್ಡ ಯಶಸ್ಸಿನೊಂದಿಗೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇದೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಈ ಫಿನಾಲೆ ವಾರದಲ್ಲಿ ಬಿಗ್‌ಬಾಸ್ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹೀಗೆ ಒಟ್ಟು ಆರು ಸದಸ್ಯರು ಇದ್ದಾರೆ. ಅಷ್ಟೇ ಅಲ್ಲ, ಮಿಡ್‌ ವೀಕ್ ಎಲಿಮಿನೇಷನ್  (Elimination)ಇರುವುದಿಲ್ಲ ಎಂದು ನಿನ್ನೆಯ ಎಪಿಸೋಡಿನಲ್ಲಿ ಬಿಗ್‌ಬಾಸ್ ಹೇಳಿದ್ದಾರೆ. ಹಾಗಾಗಿ ಕುತೂಹಲ ಇನ್ನಷ್ಟು ಗರಿಗೆದರಿದೆ.

    ಈ ಸಲ ಯಾರು ಬಿಗ್‌ಬಾಸ್ ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ವಾಗ್ವಾದಗಳು ನಡೆಯುತ್ತಿವೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ನೆಚ್ಚಿನ ಸ್ಪರ್ಧಿಯ ಪರವಾಗಿ ಜೋರಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರತಿ ವಾರ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಸ್ಪರ್ಧಿಗಳು ಹೊರಗೆ ಬರುತ್ತಿದ್ದ ಹಾಗೆಯೇ ಜಿಯೊಸಿನಿಮಾ ಅವರೊಂದಿಗೆ ಎಕ್ಸ್‌ಕ್ಲೂಸೀವ್ “ಬಿಗ್‌ಬ್ಯಾಂಗ್‌’ ಸಂದರ್ಶನ ಮಾಡುತ್ತಿತ್ತು. ಆ ಎಲ್ಲ ಸಂದರ್ಶನಗಳು ಜಿಯೊಸಿನಿಮಾದಲ್ಲಿ ಈಗ ಉಚಿತವಾಗಿ ವೀಕ್ಷಣೆಗೆ ಲಭ್ಯ.

    ಪ್ರತಿಯೊಬ್ಬ ಸ್ಪರ್ಧಿಯ ಬಿಗ್‌ಬ್ಯಾಂಗ್ ಸಂದರ್ಶನದಲ್ಲಿಯೂ ಕೇಳಲಾಗಿದ್ದ ಒಂದು ಸಾಮಾನ್ಯ ಪ್ರಶ್ನೆ, ‘ಈ ಸಲ ಬಿಗ್‌ಬಾಸ್‌ ಷೋದ ಅಂತಿಮ ಹಂತದಲ್ಲಿ ಇರುವ ಐವರು ಸ್ಪರ್ಧಿಗಳು ಯಾರು?’ಎಂಬುದಾಗಿತ್ತು. ಹಾಗೆಯೇ ಯಾರು ಗೆಲ್ಲಬಹುದು ಎಂಬ ತಮ್ಮ ಊಹೆಯನ್ನೂ ಹಲವು ಸ್ಪರ್ಧಿಗಳು ಈ ಸಂದರ್ಶನಗಳಲ್ಲಿ ಮಾಡಿದ್ದಾರೆ. ಈ ಎಲ್ಲ ಸ್ಪರ್ಧಿಗಳ ಊಹೆಯ ಪ್ರಕಾರ ಈ ಸಲದ ಬಿಗ್‌ಬಾಸ್‌ ಅನ್ನು ಯಾರು ಗೆಲ್ಲುತ್ತಾರೆ? ಕಪ್ ಯಾರ ಕೈಯಲ್ಲಿ ಸೇರಲಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಇದು ಪೂರ್ತಿಯಾಗಿ ಜಿಯೊಸಿನಿಮಾದಲ್ಲಿ ಎವಿಕ್ಟೆಡ್ ಸ್ಪರ್ಧಿಗಳ ಊಹೆಯ ಆಧಾರದ ಮೇಲೆ ರೂಪಿಸಲಾದ ವರದಿ.

    ಈ ಸಲದ ಬಿಗ್‌ಬಾಸ್‌ ಸೀಸನ್‌ನ ಟಾಪ್‌ 5ನಲ್ಲಿ ಯಾರು ಇರುತ್ತಾರೆ ಎಂದು ಎವಿಕ್ಟೆಡ್ ಕಂಟೆಸ್ಟೆಂಟ್ಸ್‌ಗೆ ಕೇಳಲಾದ ಪ್ರಶ್ನೆಗೆ ಅವರು ನೀಡಿದ ಉತ್ತರದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿತರಾದವರು ಸಂಗೀತಾ ಶೃಂಗೇರಿ. ಒಟ್ಟೂ ಒಂಬತ್ತು ಜನ ಎಲಿಮಿನೇಟೆಡ್ ಸ್ಪರ್ಧಿಗಳು ಜಿಯೊ ಸಿನಿಮಾ ಸಂದರ್ಶನದಲ್ಲಿ ಸಂಗೀತಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಕಾರ್ತಿಕ್ ಮಹೇಶ್ ಅವರು ಆರು ಬಾರಿ ಉಲ್ಲೇಖಿತರಾಗಿದ್ದಾರೆ. ತುಕಾಲಿ ಸಂತೋಷ್ ಕೂಡ ಆರು ಸಲವೇ ಉಲ್ಲೇಖಿತರಾಗಿ ಕಾರ್ತಿಕ್ ಸಮಕ್ಕೆ ನಿಂತಿದ್ದಾರೆ. ವಿನಯ್ ಕೂಡ ಪದೇ ಪದೇ ಉಲ್ಲೇಖಿತಗೊಂಡಿರುವ ಸ್ಪರ್ಧಿಗಳಲ್ಲಿ ಒಬ್ಬರು. ನಮ್ರತಾ, ಮೈಕಲ್, ಪವಿ, ಸ್ನೇಹಿತ್‌ ಎಲ್ಲವೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ.

    ಸಂಗೀತಾ ಶೃಂಗೇರಿ

    ಅಸಮರ್ಥರಾಗಿ ಒಳಗೆ ಹೋಗಿದ್ದರೂ, ಮೊದಲ ವಾರದಿಂದಲೇ ಮನೆಯ ಕೇಂದ್ರಬಿಂದುಗಳಲ್ಲಿ ಒಬ್ಬರಾಗಿದ್ದವರು ಸಂಗೀತಾ ಶೃಂಗೇರಿ. ನಂತರದ ದಿನಗಳಲ್ಲಿಯೂ ಟಾಸ್ಕ್‌ಗಳಲ್ಲಾಗಲಿ, ಮನೆಯ ಕೆಲಸಗಳಲ್ಲಾಗಲಿ, ಚಟುವಟಿಕೆಗಳಲ್ಲಾಗಲಿ, ನಾಮಿನೇಷನ್‌ ಪ್ರಕ್ರಿಯೆಯಲ್ಲಾಗಲಿ ಸಂಗೀತಾ ಹೆಸರು ಮುಂಚೂಣಿಯಲ್ಲಿ ಇದ್ದೇ ಇರುತ್ತಿತ್ತು. ಜಿದ್ದು, ಜಗಳ, ಸ್ಟ್ರಾಟಜಿ ಎಲ್ಲದರಲ್ಲಿಯೂ ಸಂಗೀತಾ ಮುಂದಿರುತ್ತಿದ್ದರು. ಹೀಗಾಗಿಯೇ ಅವರನ್ನು ಮನೆಯೊಳಗೆ ವಿರೋಧಿಸುತ್ತಿದ್ದವರೂ ಟಾಪ್‌ 5ನಲ್ಲಿ ಅವರು ಇರುತ್ತಾರೆ ಎಂದು ಊಹಿಸಿದ್ದರು. ಭಾಗ್ಯಶ್ರೀ, ನೀತು, ಸ್ನೇಹಿತ್, ಪವಿ ಪೂವಪ್ಪ, ಅವಿನಾಶ್, ಸಿರಿ, ತನಿಷಾ ನಮೃತಾ ಇವರೆಲ್ಲರೂ ಟಾಪ್‌ 5ನಲ್ಲಿ ಇರುತ್ತಾರೆ ಎಂದು ಊಹಿಸಿದ್ದರು. ಅದರಲ್ಲಿ ತನಿಷಾ ಮತ್ತು ನಮೃತಾ  ಅವರು ಈ ಸಲದ ಬಿಗ್‌ಬಾಸ್‌ ಅನ್ನು ಸಂಗೀತಾ ಅವರೇ ಗೆಲ್ಲಬಹುದು ಎಂದು ಊಹಿಸಿದ್ದಾರೆ.

    ತುಕಾಲಿ ಸಂತೋಷ್

    ರಂಜನೆ ಮತ್ತು ತಂತ್ರಗಾರಿಕೆ ಎರಡರ ಮಿಶ್ರಣದಂತಿರುವ ತುಕಾಲಿ ಸಂತೋಷ್ ತಮ್ಮ ಜಾಣತನದಿಂದಲೇ ಬಿಗ್‌ಬಾಸ್ ಮನೆಯೊಳಗೆ ಸ್ಥಾನವನ್ನು ಭದ್ರ ಮಾಡಿಕೊಳ್ಳುತ್ತ ಬಂದರು. ವರ್ತೂರು ಸಂತೋಷ್ ಜೊತೆಗಿನ ಅವರ ಸ್ನೇಹಸಂಬಂಧವಂತೂ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಮನೆಯೊಳಗೆ ಅವರ ವರ್ತನೆ, ತಂತ್ರಗಾರಿಕೆಯನ್ನು ಗಮನಿಸಿದ ಉಳಿದ ಸದಸ್ಯರು ತುಕಾಲಿ ಟಾಪ್‌ 5ನಲ್ಲಿ ಇರುತ್ತಾರೆ ಎಂದು ಊಹಿಸಿದ್ದರು. ನಮೃತಾ, ಮೈಕಲ್, ಸಿರಿ, ಸ್ನೇಹಿತ್, ಭಾಗ್ಯಶ್ರೀ  ಮತ್ತು ನೀತು ಅವರು ತುಕಾಲಿ ಅವರನ್ನು ಟಾಪ್‌ 5ನಲ್ಲಿ ನೋಡುತ್ತೇವೆ ಎಂದು ಹೇಳಿದ್ದರು. ಅವರ ಊಹೆಯಂತೆ ತುಕಾಲಿ ಟಾಪ್‌6ನಿಂದ ಟಾಪ್‌ 5ಗೆ ಜಿಗಿಯುತ್ತಾರೆ ಎಂದು ಕಾದುನೋಡಬೇಕಷ್ಟೆ.

    ಕಾರ್ತಿಕ್ ಮಹೇಶ್‌

    ಲವಲವಿಕೆಯ ವ್ಯಕ್ತಿತ್ವ, ಎಲ್ಲದರಲ್ಲಿಯೂ ಪಾಲ್ಗೊಳ್ಳುವ ಉತ್ಸಾಹ, ಸ್ನೆಹಪರ, ಭಾವುಕ ಮನಸ್ಸು ಈ ಎಲ್ಲವೂ ಕಾರ್ತಿಕ್ ಮಹೇಶ್ ಅವರನ್ನು ಮನೆಯ ಬಹುತೇಕ ಸದಸ್ಯರ ಮನಸಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದವು. ಕಾರ್ತಿಕ್ ಅವರನ್ನು ಫೇಕ್‌ ಎಂದು ಉಳಿದ ಸದಸ್ಯರು ಉಲ್ಲೇಖಿಸಿದ್ದು ತುಂಬವೇ ವಿರಳ. ಇದು ಅವರ ವ್ಯಕ್ತಿತ್ವದ ಇನ್ನೊಂದು ಆಯಾಮವನ್ನು ಸೂಚಿಸುವಂತಿದೆ. ತನಿಷಾ, ಮೈಕಲ್, ಪವಿ, ಸಿರಿ, ಸ್ನೇಹಿತ್, ಭಾಗ್ಯಶ್ರೀ, ನೀತು ಅವರುಕಾರ್ತಿಕ್ ಅವರನ್ನು ಟಾಪ್ 5ನಲ್ಲಿ ನೋಡುತ್ತೇವೆ ಎಂದು ಊಹಿಸಿದ್ದರು. ಅದರಲ್ಲಿಯೂ ಮನೆಯೊಳಗೆ ಆಪ್ತಸ್ನೇಹವನ್ನು ಕಾಪಾಡಿಕೊಂಡಿದ್ದ ತನಿಷಾ ಅವರು, ‘ಕಾರ್ತಿಕ್ ಗೆಲ್ಲಬೇಕು ಎಂಬ ಆಸೆ ಇದೆ.  ಆದರೆ ಸಂಗೀತಾ ಗೆಲ್ಲಬಹುದು ಅನಿಸುತ್ತಿದೆ’ ಎಂದು ಹೇಳಿದ್ದರು. ಸಿರಿ ಕೂಡ,  ‘ಕಾರ್ತಿಕ್ ಗೆಲ್ಲಬೇಕು’ ಎಂದು ಹೇಳಿದ್ದರು. ಅದಕ್ಕೆ ಕಾರಣ ಕಾರ್ತೀಕ್ ಜೆನ್ಯೂನ್‌ ಎಂಬುದು.


    ವಿನಯ್ ಗೌಡ

    ‘ಐ ಆಮ್ ವಿಲನ್’ ಎನ್ನುತ್ತಲೇ ಒಳಹೋದ ವಿನಯ್ ಗೌಡ ಮನೆಯೊಳಗಿನ ಹಲವರ ಪಾಲಿಗೆ ಹೀರೊ ಆಗಿದ್ದೂ ಸತ್ಯ. ಒಂದು ಹಂತದಲ್ಲಿಯಂತೂ ಸ್ವತಃ ಸುದೀಪ್‌ ಅವರೇ, ‘ನಮ್ಮ ಕಣ್ಣಿಗೆ ಒಬ್ಬರು ಮಾತ್ರ ಫಿನಾಲೆ ವೀಕ್‌ಗೆ ಹೋಗುವ ಕಂಟೆಸ್ಟೆಂಟ್ ಆಗಿ ಕಾಣಿಸುತ್ತಿದ್ದಾರೆ. ಉಳಿದವರು ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತಿರುವ ಹಾಗೆ ಕಾಣಿಸುತ್ತಿದೆ’ ಎಂದೇ ನೇರವಾಗಿ ಹೇಳಿದ್ದರು. ಅವರು ಹೇಳಿದ್ದು ವಿನಯ್ ಅವರ ಬಗ್ಗೆಯೇ. ನಂತರದ ವಾರಗಳಲ್ಲಿಈ ಲೆಕ್ಕಾಚಾರ ಬದಲಾಯಿತಾದರೂ, ವಿನಯ್ ಅವರು ತಮ್ಮದೇ ದಾರಿಯಲ್ಲಿ ಮುಂದೆ ನಡೆಯುತ್ತಲೇ ಬಂದರು. ಜಿಯೊಸಿನಿಮಾ ಸಂದರ್ಶನಗಳಲ್ಲಿ ನಮ್ರತಾ, ಮೈಕಲ್, ಪವಿ, ಸ್ನೇಹಿತ್‌ ಎಲ್ಲವೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ. ಮೈಕಲ್‌, ನಮೃತಾ ಮತ್ತು ಸ್ನೇಹಿತ್ ‘ವಿನಯ್ ಗೆಲ್ಲಬೇಕು ಎಂಬುದು ನನ್ನ ಆಸೆ’ ಎಂದು ಹೇಳಿಕೊಂಡಿದ್ದಾರೆ.  ಮನೆಯಿಂದ ಹೊರಬಂದ ಸ್ಪರ್ಧಿಗಳ ಊಹೆ ಏನೇ ಇದ್ದರೂ ಅದು ಊಹೆ ಮಾತ್ರವೇ. ಅದು ನಿರ್ಧಾರಾತ್ಮಕ ಅಲ್ಲವೇ ಅಲ್ಲ. ಯಾಕೆಂದರೆ ಕೊನೆಗೂ ಒಬ್ಬ ಸ್ಪರ್ಧಿ ಬಿಗ್‌ಬಾಸ್ ಗೆಲ್ಲಲು ಸಾಧ್ಯವಾಗುವುದು ಜನರ ವೋಟ್‌ನಿಂದ. ಮನೆಯಿಂದಾಚೆಗೆ ಜನರ ಕಣ್ಣಿಗೆ ಅವರ ವ್ಯಕ್ತಿತ್ವ ಹೇಗೆ ಕಾಣಿಸುತ್ತಿದೆ, ಅದನ್ನು ಅವರು ಎಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ, ಆ ಮೆಚ್ಚುಗೆ ಎಷ್ಟರಮಟ್ಟಿಗೆ ಮತಗಳಾಗಿ ಬದಲಾಗುತ್ತಿವೆ ಎನ್ನುವುದೇ ಗೆಲುವಿನ ನಿರ್ಣಾಯಕ ಸಂಗತಿ. ಹಾಗೆ ನೋಡಿದಾಗ, ಮನೆಯೊಳಗೆ ಉಳಿದಿರುವ ಪ್ರತಾಪ್, ವರ್ತೂರು ಸಂತೋಷ್ ಅವರ ಜನಪ್ರಿಯತೆ ಏನೂ ಕಮ್ಮಿಯದಲ್ಲ. ಹಾಗಾಗಿ ಎಲಿಮಿನೇಟೆಡ್ ಸ್ಪರ್ಧಿಗಳ ಊಹೆಯನ್ನು ಸುಳ್ಳಾಗಿಸಿ ಇವರಿಬ್ಬರಲ್ಲಿ ಒಬ್ಬರು ‘ಈ ಸಲ ಕಪ್ ನಮ್ದೆ’ ಎಂದು ಗೆಲುವಿನ ನಗು ಬೀರಿದರೂ ಅಚ್ಚರಿಯಿಲ್ಲ.

     

    ಈ ಎಲ್ಲ ಊಹೆ, ನಿರೀಕ್ಷೆ, ಆತಂಕಗಳಿಗೆ ಉತ್ತರ ಸಿಗಲು ತುಂಬ ಕಾಯಬೇಕಾಗಿಲ್ಲ. ಈ ಭಾನುವಾರ ನಡೆಯಲಿರುವ ಫಿನಾಲೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಫಿನಾಲೆಯ ನೇರಪ್ರಸಾರ ಜಿಯೊಸಿನಿಮಾದಲ್ಲಿ ವೀಕ್ಷಿಸಬಹುದು.

  • ಗ್ರಾಮಗಳ ಆಸ್ತಿ ಸರ್ವೆಗೆ ಡ್ರೋಣ್ ಸರ್ವೆ ಪ್ರಕ್ರಿಯೆ ನಡೆಯುತ್ತಿದೆ: ಅಶೋಕ್

    ಗ್ರಾಮಗಳ ಆಸ್ತಿ ಸರ್ವೆಗೆ ಡ್ರೋಣ್ ಸರ್ವೆ ಪ್ರಕ್ರಿಯೆ ನಡೆಯುತ್ತಿದೆ: ಅಶೋಕ್

    ಬೆಂಗಳೂರು: ಕೇಂದ್ರ ಸರ್ಕಾರ (Central Government) ರಾಜ್ಯದ ಗ್ರಾಮಗಳ ಜನ ವಸತಿ ಪ್ರದೇಶಗಳ ಆಸ್ತಿಗಳನ್ನು ಅಳತೆ ಮಾಡಿ ಹಕ್ಕು ದಾಖಲೆ ವಿತರಿಸುವ ಉದ್ದೇಶದಿಂದ ಸ್ವಮಿತ್ವ ಯೋಜನೆ ಜಾರಿಗೊಳಿಸಿದ್ದು, ಅದರಂತೆ ಗ್ರಾಮ ಠಾಣಾಗಳ ಸರ್ವೆ ಕಾರ್ಯ ನಡೆಸಿ ಪಿ.ಆರ್.ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ (BJP) ಸದಸ್ಯ ವೈ.ಎಂ ಸತೀಶ್ ಪರ ಡಿಎಸ್ ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಗ್ರಾಮಠಾಣಾ ಪ್ರದೇಶ ಗುರುತಿಸುವುದು ಬಹಳ ವಿಶಿಷ್ಟ. ಮೊದಲು ಬ್ರಿಟಿಷರ ಕಾಲದಲ್ಲಿ ಹಳೆ ಮೈಸೂರಿನಲ್ಲಿ, ಮುಂಬೈ (Mumbai) ಪ್ರಾಂತ್ಯದಲ್ಲಿ, ಮದರಾಸು ಪ್ರಾಂತ್ಯದಲ್ಲಿ, ಹೈದರಾಬಾದ್ (Hyderabad) ಪ್ರಾಂತ್ಯ, ಕೊಡಗು ಪ್ರಾಂತ್ಯದಲ್ಲಿ ಸರ್ವೆ ನಡೆದು ಶತಮಾನದ ಹಿಂದ ಮತ್ತೆ ರೀ ಸರ್ವೆ ಮಾಡಲಾಗಿದೆ. ಈಗ ಶತಮಾನದ ನಂತರ ನಾವು ಗ್ರಾಮಠಾಣಾ ಸರ್ವೆ ಕಾರ್ಯ ನಡೆಸಲಾಗುತ್ತಿದೆ ಎಂದರು.

    ಕೇಂದ್ರದ ಸ್ವಮಿತ್ವ ಯೋಜನೆಯಡಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. 10 ಮನೆ ಇದ್ದರು ಗ್ರಾಮಠಾಣಾ ಮಾಡಲು ಆದೇಶಿಸಲಾಗಿದೆ. 3,191 ಗ್ರಾಮಗಳಲ್ಲಿ ಡ್ರೋಣ್ ಸರ್ವೆ ಮಾಡಲಾಗಿದೆ. ಇದರಲ್ಲಿ 2,467 ಗ್ರಾಮಗಳ 8.02 ಲಕ್ಷ ಕರಡು ಪಿ.ಆರ್ ಕಾರ್ಡ್ ವಿತರಿಸಲಾಗಿದೆ ಎಂದರು. ಇದನ್ನೂ ಓದಿ: ಇದುವರೆಗೂ 38 ಮಂದಿ ಮೆಟ್ರೋ ಅವಘಡಕ್ಕೆ ಬಲಿಯಾಗಿದ್ದಾರೆ: ಸಿಎಂ

    ನೂರು ವರ್ಷದ ನಂತರ ಈಗ ಮತ್ತೆ ಸರ್ವೆ ಮಾಡಲಾಗುತ್ತಿದೆ. ಡ್ರೋಣ್ ಸರ್ವೆ ನಿಖರವಾಗಿ ದಾಖಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಭಾಗದಲ್ಲಿಯೂ ಸರ್ವೆ ಕಾರ್ಯ ಮುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾನೂನು ಸುವ್ಯವಸ್ಥೆ ಕಾಪಾಡಲು ಡ್ರೋಣ್ ಬಳಕೆ

    ಕಾನೂನು ಸುವ್ಯವಸ್ಥೆ ಕಾಪಾಡಲು ಡ್ರೋಣ್ ಬಳಕೆ

    ರಾಯಚೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಡ್ರೋಣ್ ಮೊರೆ ಹೋಗಿದ್ದಾರೆ. ಅಪರಾಧ ಪತ್ತೆ ಹಚ್ಚಲು, ಪ್ರತಿಭಟನೆ, ಧರಣಿಗಳ ವೇಳೆ ನಿಗಾ ವಹಿಸಲು, ಮೆರವಣಿಗೆ ವೇಳೆ ಹದ್ದಿನ ಕಣ್ಣಿನ ನೋಟಕ್ಕಾಗಿ, ಟ್ರಾಫಿಕ್ ನಿಯಮಪಾಲನೆ ಸೇರಿದಂತೆ ನಾನಾ ಕೆಲಸಗಳಿಗೆ ಇನ್ನು ಮುಂದೆ ಡ್ರೋಣ್ ಬಳಕೆ ಹೆಚ್ಚಾಗಲಿದೆ.

    ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎರಡು ಡ್ರೋಣ್ ಖರೀದಿಸಲಾಗಿದೆ. ಇನ್ನೂ ಎರಡು ಡ್ರೋಣ್‌ಗಳನ್ನು ಶೀಘ್ರದಲ್ಲೇ ತರಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡ್ತಿದ್ರು: ಸಿಎಂ ಇಬ್ರಾಹಿಂ

    ಒಂದು ಗಂಟೆ ಬ್ಯಾಟರಿ ಸಾಮರ್ಥ್ಯದ ಹಾಗೂ 3 ಕಿ.ಮೀ ದೂರದ ವರೆಗೂ ಚಲಿಸಬಲ್ಲ ಈ ಡ್ರೋಣ್‌ಗಳು ಇಲಾಖೆಗೆ ಹೆಚ್ಚು ಉಪಯುಕ್ತವಾಗಲಿವೆ ಎಂದು ಎಸ್‌ಪಿ ನಿಖಿಲ್ ಬಿ ಹೇಳಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ದಾಖಲೆ ಬಹಿರಂಗ ಪಡಿಸಿದವರನ್ನು ಹೆದರಿಸ್ತೀರಾ? ಈ ಆಟ ನಮ್ಮಲ್ಲಿ ನಡೆಯಲ್ಲ: ಡಿಕೆಶಿ

     

  • ದೇವೇಗೌಡ್ರ ಆಗಮನದ ವೇಳೆ ಡ್ರೋಣ್ ಹಾರಾಟ- ಕಕ್ಕಾಬಿಕ್ಕಿಯಾಗಿ ಹೆಲಿಕಾಪ್ಟರ್‌ನಿಂದ ಇಳಿಯದ ಮಾಜಿ ಪ್ರಧಾನಿ

    ದೇವೇಗೌಡ್ರ ಆಗಮನದ ವೇಳೆ ಡ್ರೋಣ್ ಹಾರಾಟ- ಕಕ್ಕಾಬಿಕ್ಕಿಯಾಗಿ ಹೆಲಿಕಾಪ್ಟರ್‌ನಿಂದ ಇಳಿಯದ ಮಾಜಿ ಪ್ರಧಾನಿ

    ನೆಲಮಂಗಲ: ಮಾಜಿ ಪ್ರಧಾನಿ ಹೆಚ್.ಡಿ ದೇವಗೌಡರ ಆಗಮನದ ವೇಳೆ ಭದ್ರತಾ ವೈಫಲ್ಯ ಎದುರಾಗ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲ ತಾಲೂಕಿನ ಭಾರತಿಪುರದ ಗ್ರಾಮದಲ್ಲಿ ದೇವತಾ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿ ಆಗಮಿಸುತ್ತಿದ್ದರು. ಅಂತೆಯೇ ನೆಲಮಂಗಲ ತಾಲೂಕಿನ ನಿಡವಂದ ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಎಲಿಕಾಪ್ಟರ್ ಸಮೀಪಕ್ಕೆ ಡ್ರೋನ್ ಕ್ಯಾಮೆರಾ ಬಂದಿದೆ. ಇದರಿಂದ ಸಿಬ್ಬಂದಿ ಕೆಲಕಾಲ ಆತಂಕ ಗೊಂಡ ಪ್ರಸಂಗ ಎದುರಾಗಿದೆ. ಇದನ್ನೂ ಓದಿ: ಜಾತಿಯ ವಿಷಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡ್ತಿದೆ: ಸತೀಶ್ ಜಾರಕಿಹೊಳಿ

    ಡ್ರೋನ್ ಹಾರಾಟ ಕಂಡು ಭದ್ರತಾ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ. ಡ್ರೋನ್ ಹಾರಾಟ ನಿಲ್ಲಿಸುವಂತೆ ಭದ್ರತಾ ಸಿಬ್ಬಂದಿ ಗರಂ ಆಗಿದ್ದಾರೆ. ಡ್ರೋನ್ ಹಾರಾಟ ನಿಲ್ಲಿಸುವವರೆಗೂ ಮಾಜಿ ಪ್ರಧಾನಿ ಕೆಳಗೆ ಇಳಿಯಲಿಲ್ಲ. ಡ್ರೋನ್ ಹಾರಾಟ ನಿಂತ ಬಳಿಕ ದೇವೇಗೌಡರು ಕೆಳಗಿಳಿದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆನೀಡದೆ ಟಿ.ನರಸೀಪುರಕ್ಕೆ ತೆರಳಿದರು.

  • ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿ..!

    ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿ..!

    ತಿರುನಲ್ವೇಲಿ (ತಮಿಳುನಾಡು): `ಬಂಡೆಯಿಂದ ಬಂಡೆಗೆ ಹಾರುವ ಕಲೆ ಕರಗತ ಮಾಡಿಕೊಂಡಿದ್ದ ಆರೋಪಿಯೊಬ್ಬ ಹಲವು ದಿನಗಳಿಂದ ತೆನ್ಕಾಶಿಯ ಚಿನ್ನಪೋತಿ ಎಂಬ ಚಿಕ್ಕಗುಡ್ಡದಲ್ಲಿ ತಲೆ ಮರೆಸಿಕೊಂಡಿದ್ದ. ಪೊಲೀಸರು ಸಹ ಒಂದು ಹಂತದವರೆಗೆ ಅವನ ಕಾರ್ಯತಂತ್ರವನ್ನೆಲ್ಲ ವೀಕ್ಷಿಸಲು ಎರಡು ಡ್ರೋಣ್ ಕ್ಯಾಮೆರಾವನ್ನು ನಿಯೋಜಿಸಿದ್ದರು. ಸಮಯ ನೋಡಿ ಕಾದುಕುಳಿತಿದ್ದ ಪೊಲೀಸರು ಸಮೀಪದಲ್ಲೇ ಇದ್ದ ಹೊಂಡದಲ್ಲಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

    ಹೌದು. ಹಲವು ದಿನಗಳಿಂದ ಗುಡ್ಡದಲ್ಲೇ ತಲೆ ಮರೆಸಿಕೊಂಡಿದ್ದ ಆರೋಪಿ ಶಾಹುಲ್ ಹಮೀದ್ ಅಲಿಯಾಸ್ ಲೆಫ್ಟ್ ಸಾಹುಲ್ (32) ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನ ತಿರನ್ವೇಲಿಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಮೊದಲಿಗೆ ಆಯುಧಗಳನ್ನು ಒಪ್ಪಿಸಿ ಶರಣಾಗುವಂತೆ ತಿಳಿಸಿದರು. ಪೊಲೀಸರು ಸುತ್ತುವರಿದಿದ್ದರಿಂದ ಅತನಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಇದಕ್ಕೂ ಮುನ್ನ ಡ್ರೋಣ್ ಮೂಲಕ ವೀಕ್ಷಿಸಿದಾಗ ಶಾಹುಲ್ ಕೊಳದ ಮೇಲ್ಮೈಗೆ ಬರುತ್ತಿರುವುದನ್ನು ತೋರಿಸಿತು. ಎತ್ತರದ ಗಿಡಗಂಟಿಗಳೂ ಅಲ್ಲಿ ಬೆಳೆದಿದ್ದರಿಂದ ಪೊಲೀಸರೇ ಹೊಂಡಕ್ಕಿಳಿದು ಆರೋಪಿಯನ್ನು ಕರೆತರುವಲ್ಲಿ ಯಶಸ್ವಿಯಾದರು.

    ಏನಿದು ಘಟನೆ? 
    ಇದೇ ಮಾರ್ಚ್ 10ರಂದು 50 ವರ್ಷದ ಕುರುಬ ಪೀರ್ ಮೊಹಮ್ಮದ್ ಎಂಬವರ ಮೇಲೆ ಶಾಹುಲ್ ಹಲ್ಲೆ ನಡೆಸಿ ತೆನ್ಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಗಂಭಿರ ಗಾಯಗೊಂಡಿದ್ದರಿಂದ ಆತನನನ್ನು ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ತಪ್ಪಿಸಿಕೊಂಡು ಗುಡ್ಡದಲ್ಲಿ ಅಡಗಿಕೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಕಾಡಿನ ಮಾರ್ಗ ನಿರ್ಬಂಧಿಸಿದ್ದರಿಂದ ಶಾಹುಲ್ ಹೊಂಡದಲ್ಲಿ ಸ್ನಾನಕ್ಕೆ ಬರುವ ಮಹಿಳೆಯರಿಗೂ ಬೆದರಿಕೆಯೊಡಿದ್ದನು ಎನ್ನಲಾಗಿದೆ. ಇಲ್ಲಿನ ಗುಡ್ಡ ನೀರು ಹಾಗೂ ದೊಡ್ಡದೊಡ್ಡ ಗಿಡಗಂಟಿಗಳು ಬೆಳೆದಿದ್ದರಿಂದ ಆರೋಪಿಯನ್ನು ಬಂಧಿಸುವುದು ಸಾಹಸವೇ ಆಗಿತ್ತು. ಬಂಡೆಯಿಂದ ಹಾದುಹೋಗಿ ಹಿಡಿಯಲು ಮುಂದಾದಾಗ ಆತ ಮತ್ತೊಂದು ಬಂಡೆ ಮಾರ್ಗವಾಗಿ ನುಸುಳುತ್ತಿದ್ದನು. ನಂತರ ಇನ್ಸ್‍ಪೆಕ್ಟರ್ ಬಾಲಮುರುಗನ್ ನೇತೃತ್ವದ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು, ಅವರು ಮಾರ್ಚ್ 15 ರಂದು ಡ್ರೋನ್‍ಗಳನ್ನು ಬಳಸಲು ನಿರ್ಧರಿಸಿದರು.

    ವ್ಯಾಪಕ ಶೋಧಕಾರ್ಯದ ನಂತರ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಐಪಿಸಿ ಸೆಕ್ಷನ್ 341 (ತಪ್ಪು ಸಂಯಮಕ್ಕೆ ಶಿಕ್ಷೆ), 294 (ಬಿ) (ಅಶ್ಲೀಲ ಕೃತ್ಯಗಳು ಮತ್ತು ಗೀತೆ), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯವನ್ನುಂಟು ಮಾಡಿದಾಗ), 506 (2) (ಅಪರಾಧಕ್ಕೆ ಬೆದರಿಕೆಯೊಡ್ಡಿದಾಗ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ತೆನ್ಕಾಶಿ ಪೊಲೀಸ್ ವರಿಷ್ಠಾದಿಕಾರಿ ಆರ್.ಕೃಷ್ಣ ಅವರು ಪೊಲೀಸರ ಕಾರ್ಯಾಚರಣೆಗೆ ಟ್ವೀಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಕಡಿಮೆ ಸಮಯದಲ್ಲಿ ಅಧಿಕ ಕೆಲಸ – ಪ್ರತಿ ಗಂಟೆಗೆ 600 ರೂ. ನಿಗದಿ

    ಕಡಿಮೆ ಸಮಯದಲ್ಲಿ ಅಧಿಕ ಕೆಲಸ – ಪ್ರತಿ ಗಂಟೆಗೆ 600 ರೂ. ನಿಗದಿ

    ಕೊಪ್ಪಳ: ಕೂಲಿಕಾರರ ಸಮಸ್ಯೆ ಹಾಗೂ ಅಧಿಕ ಕೂಲಿ ಹಣ ಸೇರಿದಂತೆ ನಾನಾ ಸಮಸ್ಯೆಗಳಿಂದ ಕಂಗಾಲಾಗಿದ್ದ ಭತ್ತ ಬೆಳೆದಿರುವ ರೈತರು ಸದ್ಯ ಡ್ರೋಣ್ ಬಳಸಿ ಬೆಳೆಗೆ ರಾಸಾಯನಿಕವನ್ನು ಸಿಂಪಡನೆ ಮಾಡಲು ಮುಂದಾಗಿದ್ದಾರೆ.

    ಭತ್ತದ ಕಣಜ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ, ಹೊಸ್ಕೇರಾ, ಬೂದಗುಂಪಾ, ಶ್ರೀರಾಮನಗರ ಸೇರಿದಂತೆ ನಾನಾ ಭಾಗಗಳಲ್ಲಿ ಭತ್ತ ಬೆಳೆದಿರುವ ರೈತರು ಸೇರಿಕೊಂಡು ಭತ್ತದ ಕ್ರಿಮಿನಾಶಕವನ್ನು ಹಾಕಲು ಡ್ರೋಣ್ ಮೊರೆ ಹೋಗಿದ್ದಾರೆ. ಕೂಲಿಕಾರರ ಸಮಸ್ಯೆಯನ್ನು ಎದುರಿಸುತ್ತಿರುವ ರೈತರು ಅಧಿಕ ಕೂಲಿಯನ್ನು ನೀಡಿದರು ಸಹ ಸಮಯಕ್ಕೆ ಸರಿಯಾಗಿ ಕೆಲಸಗಾರರು ದೊರೆಯುತ್ತಿಲ್ಲ. ಇದರಿಂದ ಬೇಸತ್ತಿರುವ ರೈತರು ಅನಿವಾರ್ಯ ಎನ್ನುವಂತೆ ಡ್ರೋಣ್ ಬಳಕೆಗೆ ಮುಂದಾಗಿ ರೋಗದಿಂದ ಭತ್ತವನ್ನು ಕಾಪಾಡಲು ಪರ್ಯಾಯವನ್ನು ಮಾರ್ಗವನ್ನು ಕಂಡುಕೊಂಡಿದ್ದಾರೆ.

    ಈಗಾಗಲೇ ಜಂಗಮರ ಕಲ್ಗುಡಿ ಗ್ರಾಮದಲ್ಲಿ 10 ಎಕರೆ ಜಮೀನಿನಲ್ಲಿ ಬೆಳೆದಿರುವ ಭತ್ತಕ್ಕೆ ಪ್ರಾಯೋಗಿಕವಾಗಿ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡನೆಯನ್ನು ಮಾಡಲಾಗಿದೆ. ಹಂತ ಹಂತವಾಗಿ ಹೊಸ್ಕೇರಾ, ಶ್ರೀರಾಮನಗರ, ಸಿದ್ದಪೂರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಇಚ್ಛಿಸುವ ರೈತರ ಜಮೀನುಗಳಲ್ಲಿ ಸಿಂಪಡಿಸಲಾಗುವುದು.

    ಬಾಡಿಗೆಗೆ ಡ್ರೋಣ್: ತಮಿಳುನಾಡಿನಿಂದ ಬಾಡಿಗೆ ರೂಪದಲ್ಲಿ ಡ್ರೋಣ್ ಅನ್ನು ತೆಗೆದುಕೊಂಡು ಬಂದು ಬಳಸಲಾಗುತ್ತಿದೆ. ಪ್ರತಿ ಎಕರೆಗೆ ರಾಸಾಯನಿಕ ಸಿಂಪಡನೆ ಮಾಡಲು 600 ರೂಗಳನ್ನು ನಿಗದಿಗೊಳಿಸಲಾಗಿದೆ. ಬಾಡಿಗೆ ತಂದಿರುವ ಕಂಪನಿಯವರೇ ಡ್ರೋಣ್ ನಿರ್ವಹಣೆಯನ್ನು ಮಾಡುತ್ತಾರೆ. ಡ್ರೋಣ್ ಬಳಕೆಯ ಮೂಲಕ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ ಎನ್ನುವ ಮನೋಭಾವನೆಯಲ್ಲಿ ರೈತರು ಇದ್ದಾರೆ. ಡ್ರೋಣ್ ಮೂಲಕ 5 ರಿಂದ 6 ನಿಮಿಷದಲ್ಲಿ ಒಂದು ಎಕರೆ ಜಮೀನಿಗೆ ರಾಸಾಯನಿಕ ಸಿಂಪಡನೆ ಮಾಡಬಹುದು.

    ಒಂದು ದಿನಕ್ಕೆ 50 ಎಕರೆ ಜಮೀನು ಸಿಂಪಡನೆಯನ್ನು ಮಾಡಬಹುದು. ಈ ರೀತಿಯ ಸಾಮರ್ಥ್ಯವನ್ನು ಡ್ರೋಣ್ ಹೊಂದಿರುವುದರಿಂದ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಪ್ರಮಾಣದ ಜಮೀನಿಗೆ ರಾಸಾಯನಿಕ ಸಿಂಪಡಿಸಲು ಗಂಗಾವತಿ ತಾಲೂಕಿನ ರೈತರು ಆಸಕ್ತಿ ತೋರಿಸುತ್ತಿದ್ದಾರೆ.

  • ಕುತಂತ್ರಿ ಬುದ್ಧಿ ಪ್ರದರ್ಶಿಸಿದ ಪಾಕ್- ಚೀನಾದಲ್ಲಿ ತಯಾರಾಗಿದ್ದ ಕ್ವಾಡ್‍ಕಾಪ್ಟರ್ ಹೊಡೆದುರುಳಿಸಿದ ಸೇನೆ

    ಕುತಂತ್ರಿ ಬುದ್ಧಿ ಪ್ರದರ್ಶಿಸಿದ ಪಾಕ್- ಚೀನಾದಲ್ಲಿ ತಯಾರಾಗಿದ್ದ ಕ್ವಾಡ್‍ಕಾಪ್ಟರ್ ಹೊಡೆದುರುಳಿಸಿದ ಸೇನೆ

    ಶ್ರೀನಗರ: ಭಾರತದಲ್ಲಿ ಗಡಿಯಲ್ಲಿ ಬೇಹುಗಾರಿಕೆ ನಡೆಸಲು ಹಾಗೂ ಉಗ್ರರನ್ನ ಅಕ್ರಮವಾಗಿ ಗಡಿ ಒಳಗೆ ನುಸುಳಿಸಲು ಪ್ರಯತ್ನಿಸಿ ಪಾಕ್‍ನ ಕ್ವಾಡ್‌ಕಾಪ್ಟರ್‌ನ್ನು ಹೊಡೆದುರುಳಿಸಿರುವುದಾಗಿ ಭಾರತೀಯ ಸೇನೆ ತಿಳಿಸಿದೆ.

    ಪಾಕಿಸ್ತಾನ ಕ್ವಾಡ್‍ಕಾಪ್ಟರ್ (ಹೆಲಿಕಾಪ್ಟರ್ ಮಾದರಿಯ ಡ್ರೋಣ್ ಸಾಧನ) ಚೀನಾದ ಡಿಜಿಐ ಮಾವಿಕ್ 2 ಕಂಪೆನಿ ತಯಾರಿಸಿದ್ದು, ಬೆಳಗ್ಗೆ 8 ಗಂಟೆ ಸಮಯದಲ್ಲಿ ಜಮ್ಮು ಕಾಶ್ಮೀರದ ಕೇರನ್ ಸೆಕ್ಟರ್ ನ ಭಾರತೀಯ ಸೇನೆ ಗಡಿಯಲ್ಲಿ ಹಾರಾಡುತ್ತಿದ್ದ ಕ್ವಾಡ್‌ಕಾಪ್ಟರ್‌ನ್ನು ಹೊಡೆದುರುಳಿಸಿದ್ದಾರೆ.

    ಭಯೋತ್ಪಾದಕರೊಳಗೆ ನುಸುಳಲು ಮತ್ತು ಭಾರತೀಯ ಸ್ಥಾವರಗಳ ಮಾಹಿತಿ ಕಲೆಹಾಕಲು ಪಾಕ್ ತನ್ನ ಕುತಂತ್ರಿ ತಂತ್ರವನ್ನು ಪ್ರದರ್ಶಿಸಿದ್ದು, ಭಾರತದ ಬಾರ್ಡರ್ ಆಕ್ಷನ್ ಟೀಂ (ಬ್ಯಾಟ್) ಗಡಿಯಲ್ಲಿ ಪಾಕ್ ಯತ್ನಗಳನ್ನು ವಿಫಲಗೊಳಿಸಿದೆ. ಅಲ್ಲದೇ ಗಡಿಯುದ್ದಕ್ಕೂ ತೀವ್ರ ಎಚ್ಚರಿಕೆ ವಹಿಸಿದೆ.

    ಇತ್ತೀಚೆಗಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸೇನಾ ಮುಖ್ಯ ಜನರಲ್ ಮನೋಜ್ ಮುಕುಂದ್, ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸುವ ಪ್ರಯತ್ನವನ್ನು ಮುಂದುವರಿಸುತ್ತಿದೆ ಎಂದು ಹೇಳಿದ್ದರು.

  • ಲಾಕ್‍ಡೌನ್ ಉಲ್ಲಂಘಿಸಿ ಮನೆಯಿಂದ ಹೊರಗಡೆ ಬಂದವ್ರ ಮೇಲೆ ಡ್ರೋಣ್ ಕಣ್ಣು

    ಲಾಕ್‍ಡೌನ್ ಉಲ್ಲಂಘಿಸಿ ಮನೆಯಿಂದ ಹೊರಗಡೆ ಬಂದವ್ರ ಮೇಲೆ ಡ್ರೋಣ್ ಕಣ್ಣು

    ದಾವಣಗೆರೆ: ಕೋವಿಡ್-19 ಸೋಂಕು ಹರಡದಂತೆ ಲಾಕ್ ಡೌನ್ ಮಾಡಲಾಗಿದ್ದರೂ ಜನ ಹೊರ ಬರುತ್ತಿರುವುದನ್ನು ಮಟ್ಟ ಹಾಕಲು ಎಸ್‍ಪಿ ಹನುಮಂತರಾಯ ನೇತೃತ್ವದ ತಂಡ ಡ್ರೋಣ್ ಕ್ಯಾಮೆರಾ ಮೂಲಕ ಹದ್ದಿನ ಕಣ್ಣಿಟ್ಟಿದೆ.

    ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಹಂತವಾಗಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಕ್ಯಾಮೆರಾವನ್ನು ನಗರದಲ್ಲಿ ಹಾರಿಸಲಾಯಿತು. ಆಜಾದ್ ನಗರ, ಬಾಷಾನಗರ, ವೆಂಕೊಬ ಕಾಲೊನಿ ಸೇರಿದಂತೆ ಠಾಣೆ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾವನ್ನು ಪೊಲೀಸ್ ಪೇದೆ ಪ್ರಶಾಂತ್, ಠಾಣಾ ವ್ಯಾಪ್ತಿಯಲ್ಲಿ ಹಾರಿಸಿದರು. ಅಲ್ಲದೇ ಪೊಲೀಸ್ ವಾಹನಗಳಲ್ಲಿನ ಮೈಕ್ ಮೂಲಕ ಹೊರಗಡೆ ಬಂದರೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಲಾಯಿತು.

    ಈ ಕಾಲೊನಿಗಳಲ್ಲಿ ಜನರು ಹೊರಗಡೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರು. ಇಲ್ಲಿನ ಗಲ್ಲಿಗಲ್ಲಿಗಳಲ್ಲೂ ಡ್ರೋಣ್ ಕ್ಯಾಮೆರಾದ ಮೂಲಕ ಕಣ್ಗಾವಲು ಇರಿಸಲಾಗಿದ್ದು, ಮೈದಾನ, ಗದ್ಡೆ ಸೇರಿ ಹಲವೆಡೆ ಕ್ರಿಕೆಟ್ ಆಡುವವರ, ಗುಂಪು ಸೇರುವವರ ಪತ್ತೆಗೆ ಡ್ರೋಣ್ ಕ್ಯಾಮೆರಾ ಬಳಕೆ ಮಾಡಲಾಯಿತು. ಪೊಲೀಸರ ಡ್ರೋನ್ ಕ್ಯಾಮಾರಾ ಕಂಡು ಬೈಕ್ ಸವಾರರು ಅರ್ಧ ದಾರಿಯಿಂದಲೇ ವಾಪಸಾಗುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗುಂಪು ಸೇರಿ ಮಾತನಾಡುವ, ಕ್ರಿಕೆಟ್ ಆಡುವ ಯುವಕರೂ ಡ್ರೋಣ್ ನನ್ನು ಕುತುಹೂಲದಿಂದ ನೋಡುತ್ತಿದ್ದರು.

    ಒಟ್ಟಾರೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುವ ಜನರನ್ನು ನಿಯಂತ್ರಿಸಲು ಡ್ರೋಣ್ ಕ್ಯಾಮೆರಾದ ಬಳಕೆ ಮಾಡಿ ಹೊಸ ಪ್ರಯೋಗವೊಂದನ್ನು ಜಿಲ್ಲಾ ಪೊಲೀಸರು ಕೈಗೊಂಡಿದ್ದು, ಈ ಪ್ರಯೋಗ ಯಶಸ್ವಿಯಾಗುತ್ತಿದೆಯೇ ಎಂದು ಕಾದು ನೋಡಬೇಕಾಗಿದೆ.

    ಡ್ರೋಣ್ ಕ್ಯಾಮೆರಾ ವಿಶೇಷ:
    ಈ ಡ್ರೋಣ್ ಕ್ಯಾಮೆರಾ ಅಂದಾಜು ಎರಡು ಲಕ್ಷ ರೂಪಾಯಿದ್ದಾಗಿದ್ದು, ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ಕವರ್ ಮಾಡುತ್ತದೆ. ಸುಮಾರು 700 ಮೀಟರ್ ಎತ್ತರಕ್ಕೆ ಹಾರುತ್ತದೆ. ಇದರೊಳಗೆ 4 ಬ್ಯಾಟರಿಗಳಿದ್ದು, ಒಂದು ಬ್ಯಾಟರಿ 2 ಗಂಟೆಗಳ ಕಾಲ ಚಾಲ್ತಿಯಲ್ಲಿರುತ್ತದೆ.

  • ಜನರ ಓಡಾಟಕ್ಕೆ ಬ್ರೇಕ್ ಹಾಕಲು ಡ್ರೋಣ್ ಬಳಕೆ- ರಾಯಚೂರು ಪೊಲೀಸರ ಹೊಸ ಪ್ರಯತ್ನ

    ಜನರ ಓಡಾಟಕ್ಕೆ ಬ್ರೇಕ್ ಹಾಕಲು ಡ್ರೋಣ್ ಬಳಕೆ- ರಾಯಚೂರು ಪೊಲೀಸರ ಹೊಸ ಪ್ರಯತ್ನ

    ರಾಯಚೂರು: ಎಷ್ಟು ಹೇಳಿದರೂ ಜನ ಹೊರಗಡೆ ಓಡಾಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ಜನರ ಓಡಾಟ ತಡೆಯಲು ರಾಯಚೂರಿನಲ್ಲಿ ಡ್ರೋಣ್ ಬಳಕೆ ಮಾಡಲಾಗುತ್ತಿದೆ. ರಾಯಚೂರು ಪೊಲೀಸರಿಂದ ವಿನೂತನ ಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಬಡಾವಣೆ, ಓಣಿಗಳಲ್ಲಿ ಜನ ಗುಂಪುಗುಂಪಾಗಿ ಸೇರುವುದನ್ನ ತಡೆಯಲು ಡ್ರೋಣ್ ಬಳಕೆ ಮಾಡಲಾಗುತ್ತಿದೆ.

    ಡ್ರೋಣ್ ಶಬ್ದಕ್ಕೆ ಹೆದರಿ ಜನ ಚದುರಿ ಹೋಗುತ್ತಿದ್ದಾರೆ. ಹೋಗದಿರುವವರನ್ನ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ. ಜಿಲ್ಲೆಯಲ್ಲಿ 50 ಚೆಕ್ ಪೋಸ್ಟ್ ಮಾಡಿದ್ದರೂ ಜನ ಸಂದಣಿ ನಿಯಂತ್ರಣವಾಗುತ್ತಿರಲಿಲ್ಲ. ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ನಾನಾ ಪ್ರಯತ್ನ ಮಾಡಿದ್ರೂ, ಲಾಠಿ ಏಟಿಗೂ ಜಗ್ಗದ ಹಿನ್ನಲೆ ಡ್ರೋಣ್ ಬಳಕೆ ಮಾಡುತ್ತಿರುವುದಾಗಿ ರಾಯಚೂರು ಎಸ್ ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

    ನಗರದ ಸಿಯತಲಾಬ್, ಆಶಾಪುರ ರಸ್ತೆ ಸೇರಿದಂತೆ ಸುಮಾರು ಪ್ರದೇಶಗಳಲ್ಲಿ ಜನ ಎಷ್ಟೇ ಹೇಳಿದರೂ ಹೊರಗಡೆ ಓಡಾಡುವುದು, ಗುಂಪಾಗಿ ಕೂಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ಡ್ರೋಣ್ ಮೂಲಕ ಜನರಲ್ಲಿ ಪೊಲೀಸರು ಎಚ್ಚರಿಕೆ ಮೂಡಿಸುತ್ತಿದ್ದಾರೆ.

  • ಬೆಂಗ್ಳೂರಿನ ನಂದಿನಿ ಲೇಔಟ್‍ನಲ್ಲಿ ಡ್ರೋಣ್ ಮೂಲಕ ಔಷಧಿ ಸಿಂಪಡಣೆ

    ಬೆಂಗ್ಳೂರಿನ ನಂದಿನಿ ಲೇಔಟ್‍ನಲ್ಲಿ ಡ್ರೋಣ್ ಮೂಲಕ ಔಷಧಿ ಸಿಂಪಡಣೆ

    ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ಡ್ರೋಣ್ ಮೂಲಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.

    ಬಿಬಿಎಂಪಿ ಕಾರ್ಪೋರೇಟರ್ ಕೆ.ವಿ.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಮಾರುತಿನಗರ, ರವಿ ಬಡವಾಣೆ, ಪರಿಮಳ ನಗರ ಸೇರಿದಂತೆ ಹಲವು ಬಡವಾಣೆಗಳಲ್ಲಿ ಔಷಧಿ ಸಿಂಪಡಣೆ ಆರಂಭವಾಗಿದೆ. ಈ ಹಿನ್ನೆಲೆ ಮನೆಯಿಂದ ಯಾರು ಹೊರ ಬರದಂತೆ ಸೂಚನೆ ನೀಡಲಾಗಿದೆ.

    ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ವಿದೇಶದಿಂದ ವಾಪಸ್ ಆಗಿರುವ ಹಾಗೂ ಹೋಮ್ ಕ್ವಾರೆಂಟೈನ್‍ನಲ್ಲಿರುವ ಕೊರೊನಾ ಶಂಕಿತರು ಹೆಚ್ಚನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಔಷಧಿ ಸಿಂಪಡಣೆ ಆರಂಭಿಸಿದೆ.

    ದೇಶದಲ್ಲಿ ಶುಕ್ರವಾರ ಒಂದೇ ದಿನ ಅತಿ ಹೆಚ್ಚು 125 ಕೊರೊನಾ ಪಾಸಿಟಿವ್ ದಾಖಲಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 834ಕ್ಕೆ ಏರಿಕೆಯಾಗಿದೆ. ಈವರೆಗೂ 19 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಮೂರು ಸೇರಿದಂತೆ ದೆಹಲಿ, ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ.