Tag: ಡ್ರೈ ಫ್ರೂಟ್ಸ್ ಲಡ್ಡು

  • ಕೃಷ್ಣ ಜನ್ಮಾಷ್ಟಮಿಗೆ ಮಾಡಿ‌ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು

    ಕೃಷ್ಣ ಜನ್ಮಾಷ್ಟಮಿಗೆ ಮಾಡಿ‌ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು

    ಕೃಷ್ಣಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಸಿಹಿ ಮಾಡಿ ಸವಿಯುತ್ತಾರೆ. ಅದರಂತೆ  ಇಂದು ಆಚರಿಸುವ ಕೃಷ್ಣ ಜನ್ಮಾಷ್ಟಮಿಗೆ ರುಚಿ ರುಚಿಯಾದ ಹಾಗೂ ಆರೋಗ್ಯಕರವಾದ ಲಡ್ಡು ಮಾಡಿ ಸವಿದು ಹಬ್ಬವನ್ನು ಎಂಜಾಯ್‌ ಮಾಡಿ.

    ಹಬ್ಬಕ್ಕಾಗಿ ನಾನಾ ತರಹದ ಸಿಹಿ ತಿಂಡಿಗಳನ್ನು ಮಾಡಬೇಕಾಗುತ್ತದೆ. ಆಗ ನೀವು ಮಾಡುವ ಸಿಹಿ ಅಡುಗೆಯಲ್ಲಿ ಡ್ರೈ ಫ್ರೂಟ್ಸ್ ಲಡ್ಡನ್ನು ಸೇರಿಸಿಕೊಳ್ಳಬಹುದಾಗಿದೆ. ಈ ಸಿಹಿ ತಿಂಡಿಯನ್ನು ಒಣಗಿದ ಹಣ್ಣುಗಳಿಂದ ಮಾಡುವುದರಿಂದ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಈ ಸ್ವೀಟ್‍ನ್ನು 15 ರಿಂದ 20 ದಿನಗಳಕಾಲ ನೀವು ಇಟ್ಟು ತಿನ್ನಬಹುದಾಗಿದೆ.  

    ಬೇಕಾಗುವ ಸಾಮಗ್ರಿಗಳು:
    * ದ್ರಾಕ್ಷಿ- ಅರ್ಧ ಕಪ್
    * ಬಾದಾಮಿ- ಅರ್ಧ ಕಪ್
    * ಗೋಡಂಬಿ- ಅರ್ಧ ಕಪ್
    * ಖರ್ಜೂರ- ಅರ್ಧ ಕಪ್
    * ಪಿಸ್ತಾ- ಅರ್ಧ ಕಪ್
    * ತುಪ್ಪ-2 ಟೇಬಲ್ ಸ್ಪೂನ್
    * ಗಸಗಸೆ-1 ಟೇಬಲ್ ಸ್ಪೂನ್
    * ಏಲಕ್ಕಿ ಪುಡಿ-1 ಟೀ ಸ್ಪೂನ್
    * ಬೆಲ್ಲ- ಅರ್ಧ ಕಪ್
    * ಎಳ್ಳು- ಅರ್ಧ ಕಪ್
    * ಬಾದಾಮಿ- ಅರ್ಧ ಕಪ್
    * ಒಣ ಕೊಬ್ಬರಿ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಗೆ ಎಳ್ಳು, ಗಸಗಸೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
    * ಬಾಣಲೆಯಲ್ಲಿ ಒಂದು ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ ಚೆನ್ನಾಗಿ ಹುರಿಯ ಬೇಕು.

    * ನಂತರ ಮಿಕ್ಸಿ ಜಾರ್ ಗೆ ಒಣಗಿದ ಕೊಬ್ಬರಿ ಹಾಗೂ ಹುರಿದ ಡ್ರೈ ಫ್ರೂಟ್ಸ್, ಖರ್ಜೂರ, ಬೆಲ್ಲವನ್ನು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.

    * ನಂತರ ಈ ಡ್ರೈ ಫ್ರೂಟ್ಸ್ ಮಿಶ್ರಣಕ್ಕೆ ಈ ಮೊದಲು ಹುರಿದು ತೆಗೆದಿಟ್ಟ ಎಳ್ಳು, ಗಸಗಸೆ ಹಾಕಿ ಮಿಶ್ರಣವನ್ನು ಮಾಡಿ ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ರುಚಿಯಾ ದ ಡ್ರೈ ಫ್ರೂಟ್ಸ್ ಲಾಡು ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]