Tag: ಡ್ರೈ ಫ್ರುಟ್ಸ್

  • ಡ್ರೈ ಫ್ರುಟ್ಸ್ ಖರೀದಿ ನೆಪದಲ್ಲಿ 200 ಕೋಟಿ ವಂಚನೆ- ಫ್ರೀಡಂ 251 ಫೋನ್ ಕಂಪನಿ ಸಂಸ್ಥಾಪಕ ಅರೆಸ್ಟ್

    ಡ್ರೈ ಫ್ರುಟ್ಸ್ ಖರೀದಿ ನೆಪದಲ್ಲಿ 200 ಕೋಟಿ ವಂಚನೆ- ಫ್ರೀಡಂ 251 ಫೋನ್ ಕಂಪನಿ ಸಂಸ್ಥಾಪಕ ಅರೆಸ್ಟ್

    – 3 ಮೂವರು ವಿದೇಶಿಗರ ಬಂಧನ

    ನವದೆಹಲಿ: ಡ್ರೈ ಫ್ರುಟ್ಸ್ ಖರೀದಿ ಮಾಡುವ ನೆಪದಲ್ಲಿ 200 ಕೋಟಿ ರೂಪಾಯಿ ವಂಚಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು ಮೋಹಿತ್ ಗೋಯಲ್ ಎಂದು ಗುರುತಿಸಲಾಗಿದೆ. ಈತನ ಜೊತೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 60 ಕೆಜಿ ಡ್ರೈ ಫ್ರುಟ್ಸ್ ಹಾಗೂ ಒಂದು ಆಡಿ ಕಾರು ಹಾಗೂ ಕೆಲವಷ್ಟು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮೋಹಿತ್ ನೋಯ್ಡಾದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕಚೇರಿಯನ್ನು ತೆರೆದಿದ್ದನು. ಈ ಮೂಲಕವಾಗಿ ತನ್ನ ವ್ಯವಹಾರವನ್ನು ಮಾಡುತ್ತಿದ್ದನು. ಈ ಕಚೇರಿಗೆ ಡ್ರೈ ಫ್ರುಟ್ಸ್ ಆ್ಯಂಡ್ ಸ್ಪೆಸಸ್ ಹಬ್ ಎಂದು ಹೆಸರನ್ನು ಇಟ್ಟಿದ್ದನು. ಈತ 2017 ರಲ್ಲಿ ಕಡಿಮೆ ಬೆಲೆ ಫ್ರೀಡಂ ಎಂಬ ಮೊಬೈಲ್‍ನ್ನು 251 ರೂಪಾಯಿಗೆ ನೀಡುತ್ತೇನೆ ಎಂದು ವಂಚಿಸಿದ್ದಾನೆ. ಮೊಬೈಲ್, ಸ್ಮಾರ್ಟ್‍ಫೋನ್, ಎಲ್‍ಸಿಡಿ ಟಿವಿ ನೀಡುತ್ತೇನೆ ಎಂದು ಆಫರ್ ಇಡುತ್ತಿದ್ದನು.

     

    ಈ ಮೂಲಕವಾಗಿ ಜನರನ್ನು ಮರಳು ಮಾಡಿ ಹಣವನ್ನು ದೋಚುತ್ತಿದ್ದನು. ಡ್ರೈ ಫ್ರುಟ್ಸ್ ಖರೀದಿ ಮಾಡುತ್ತಿದ್ದನು. ಈ ಮೂಲಕವಾಗಿ ಅವರ ವಿಶ್ವಾಸವನ್ನು ಗಳಿಸುತ್ತಿದ್ದನು. ಮುಂಗಡ ಸ್ವಲ್ಪ ಪ್ರಮಾಣದಲ್ಲಿ ಹಣವನ್ನು ನೀಡುತ್ತಿದ್ದನು, ನಂತರ ಇವರು ನೀಡುವ ಚಕ್ ಬೌನ್ಸ್ ಆಗುತ್ತಿದ್ದವು. ಅವರಿಗೆ ವಿಶೇಷವಾದ ಆಫರ್‍ಗಳನ್ನು ನೀಡುತ್ತೇವೆ ಎಂದೆ ನಯವಾದ ಮಾತುಗಳಿಂದ ಹಣವನ್ನು ದೋಚಿ ವಂಚನೆ ಮಾಡುತ್ತಿದ್ದನು.

    ಕರ್ನಾಟಕ ಸೇರಿದಂತೆ ಹಲವು ಭಾಗಗಳಿಂದ 40 ಕ್ಕೂ ಹೆಚ್ಚು ದೂರುಗಳು ಈತನ ವಿರುದ್ಧವಾಗಿ ಬಂದಿದೆ. ಈತನ ಜೊತೆಗೆ ಇನ್ನು ನಾಲ್ವರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಇದರಲ್ಲಿ ಮೂವರು ವಿದೇಶಿಗರಾಗಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಈತ ಡ್ರೈ ಫ್ರುಟ್ಸ್ ಖರೀದಿ ಮಾಡುತ್ತೇನೆ ಎಂದು ನಂಬಿಸಿ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗೂಡ್ಸ್ ಗಾಡಿಯಲ್ಲಿ ವಾಸಿಸೋ ಬಾಣಂತಿಗೆ ಡ್ರೈ ಫ್ರೂಟ್ಸ್ ಸೀರೆ ನೀಡಿ ಗೌರವಿಸಿದ ಕುಟುಂಬ

    ಗೂಡ್ಸ್ ಗಾಡಿಯಲ್ಲಿ ವಾಸಿಸೋ ಬಾಣಂತಿಗೆ ಡ್ರೈ ಫ್ರೂಟ್ಸ್ ಸೀರೆ ನೀಡಿ ಗೌರವಿಸಿದ ಕುಟುಂಬ

    ಧಾರವಾಡ: ಜಿಲ್ಲೆಯ ಬಣದೂರ ಗ್ರಾಮದ ಹೊರಗೆ ಲಾಕ್‍ಡೌನ್‍ನಿಂದಾಗಿ ಊರಿಗೆ ಹೋಗಲಾಗದೇ ಬಾಣಂತಿ ಹಾಗೂ ಹಸುಗೂಸು ಹೆಳವರ ಮಧ್ಯೆ ಗೂಡ್ಸ್ ವಾಹನದಲ್ಲೇ ದಿನ ಕಳೆಯುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಮಾಡಿದ ಮಾನವೀಯ ವರದಿಗೆ ಸ್ಪಂದನೆ ಸಿಕ್ಕಿದೆ.

    ಲಾಕ್‍ಡೌನ್‍ನಿಂದ ಹೆಳವರ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ಸರಸ್ವತಿ ತನ್ನ ತಾಯಿಯೊಂದಿಗೆ ಗೂಡ್ಸ್ ವಾಹನದಲ್ಲಿ ನೆಲೆಸಿದ್ದಾರೆ. ಸಮಾನ್ಯವಾಗಿ ಬಾಣಂತಿಗೆ ಈ ಸಮಯದಲ್ಲಿ ಬೀಗರ ಸಂಬಂಧಿಕರು ಕೊಬ್ಬರಿ, ಸಕ್ಕರೆ, ಬೆಲ್ಲ ಹಾಗೂ ಡ್ರೈ ಫ್ರೂಟ್ಸ್ ನಂತಹ ಪೌಷ್ಟಿಕಾಂಶದ ಆಹಾರಗಳನ್ನು ನೀಡುವ ಸಂಪ್ರದಾಯ ಇದೆ. ಲಾಕ್‍ಡೌನ್ ಕಾರಣ ಯಾವ ಸಂಬಂಧಿಕರಿಗೂ ಬಂದು ಮಗುವಿನ ಮುಖ ನೋಡಲು ಆಗಿರಲಿಲ್ಲ.

    ಈ ವಿಷಯ ತಿಳಿದ ಧಾರವಾಡದ ಸಮಾಜ ಸೇವಕ ಸಾಹಿಲ್ ಡಾಂಗೆ ಹಾಗೂ ಆತನ ತಂದೆ ಸಾವಿರಾರು ರೂಪಾಯಿ ಮೌಲ್ಯದ ಡ್ರೈ ಫ್ರೂಟ್ಸ್ ಸಹಿತ ಕೊಬ್ಬರಿ, ಬೆಲ್ಲದ ಬುತ್ತಿಯೊಂದಿಗೆ ಆಗಮಿಸಿ ಬಾಣಂತಿ ಸರಸ್ವತಿಗೆ ಧೈರ್ಯ ತುಂಬಿದರು. ಅಲ್ಲದೇ ಬಾಣಂತಿಗೆ ಸೀರೆ ಕೂಡ ಕೊಟ್ಟು ಗೌರವಿಸಿದ್ದಾರೆ. ಈ ಬಾಣಂತಿ ಜೊತೆಯಲ್ಲಿ ಇರುವ ಅಕ್ಕ ಪಕ್ಕದ ಹೆಳವರ ಕುಟುಂಬಗಳಿಗೆ 30ಕ್ಕೂ ಹೆಚ್ಚು ದಿನಸಿ ಕಿಟ್ ಸಹ ನೀಡಿದರು. ಇದನ್ನೂ ಓದಿ: ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕು

    ಲಾಕ್‍ಡೌನ್ ವೇಳೆ ಈ ಜನರಿಗೆ ಸ್ಥಳೀಯ ಶಾಸಕರು ಸಹಾಯಕ್ಕೆ ಬರದೇ ಇರುವುದಕ್ಕೆ ಆಕ್ರೋಶ ಕೂಡ ವ್ಯಕ್ತವಾಗಿದ್ದು, ಈ ಜನರಿಗೆ ಸ್ಥಳೀಯ ಜನಪ್ರತಿನಿಧಿಗಳು ಸಹಾಯ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದರು.