Tag: ಡ್ರೈವಿಂಗ್ ಲೈಸೆನ್ಸ್

  • ಧರ್ಮಸ್ಥಳದಲ್ಲಿ ಸಿಕ್ಕ ಅಸ್ಥಿಪಂಜರ ಗುಬ್ಬಿ ಮೂಲದ ವ್ಯಕ್ತಿಯದ್ದು!

    ಧರ್ಮಸ್ಥಳದಲ್ಲಿ ಸಿಕ್ಕ ಅಸ್ಥಿಪಂಜರ ಗುಬ್ಬಿ ಮೂಲದ ವ್ಯಕ್ತಿಯದ್ದು!

    ಮಂಗಳೂರು: ಧರ್ಮಸ್ಥಳದಲ್ಲಿ (Dharmasthala) ಸಿಕ್ಕ ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆಯಾಗಿದೆ.

    ಬಂಗ್ಲೆಗುಡ್ಡ ನೆಲದ ಮೇಲೆ  ಪತ್ತೆಯಾದ ಅಸ್ಥಿಪಂಜರದ  ಬಳಿ ಡ್ರೈವಿಂಗ್ ಲೈಸೆನ್ಸ್ (DL) ಸಿಕ್ಕಿತ್ತು. ಈ ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ತುಮಕೂರು (Tumakuru) ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂದು ಹೆಸರು ಇತ್ತು. ಇದನ್ನೂ ಓದಿ: ಸರ್ಕಾರಕ್ಕೆ ಬುರುಡೆ ಗ್ಯಾಂಗ್‌ನಿಂದ ಮೋಸ ನನಗೆ ಗೊತ್ತಿಲ್ಲ ಎಂದ ಪರಮೇಶ್ವರ್‌

    ಡಿಎಲ್‌ ಸಿಕ್ಕಿದ ಹಿನ್ನೆಲೆಯಲ್ಲಿ ಆದಿಶೇಷ ನಾರಾಯಣ ಕುಟುಂಬಸ್ಥರಿಗೆ ವಿಶೇಷ ತನಿಖಾ ತಂಡ (SIT) ವಿಚಾರಣೆಗೆ ಬರುವಂತೆ ಬುಲಾವ್‌ ನೀಡಿತ್ತು.

    ಆದಿಶೇಷ ನಾರಾಯಣ 2013 ಅಕ್ಟೋಬರ್ 2 ರಿಂದ ನಾಪತ್ತೆಯಾಗಿದ್ದ. ಬಾರ್‌ನಲ್ಲಿ ಕ್ಯಾಶಿಯಾರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಏಕಾಏಕಿ ನಾಪತ್ತೆಯಾಗಿದ್ದ. ನಾಪತ್ತೆ ಸಂಬಂಧ ಕುಟುಂಬಸ್ಥರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಇದನ್ನೂ ಓದಿಧರ್ಮಸ್ಥಳ ಕೇಸ್‌ ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್  ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

    ಇಂದು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಕುಟುಂಬಸ್ಥರು ಆಗಮಿಸಿ ಹೇಳಿಕೆ ನೀಡಿದ್ದಾರೆ. ವಿಚಾರಣೆಯ ನಂತರ ಡಿಎನ್‌ಎ ಟೆಸ್ಟ್‌ ನಡೆಸಲು ಮತ್ತೊಮ್ಮೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ.

    ನಾಪತ್ತೆಯಾದ ಬಳಿಕ ನಾವು ಆತನನ್ನು ಹುಡುಕಲಿಲ್ಲ. ಮಾನಸಿಕವಾಗಿ ಚೆನ್ನಾಗಿದ್ದ ಎಂದು ಆದಿಶೇಷ ನಾರಾಯಣನ ಕುಟುಂಬಸ್ಥರು ತಿಳಿಸಿದ್ದಾರೆ.

  • ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾದ ಪಿ.ಜಿ ದೀಪಾಮೋಲ್

    ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾದ ಪಿ.ಜಿ ದೀಪಾಮೋಲ್

    ತಿರುವನಂತಪುರಂ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಅಂಬುಲೆನ್ಸ್ (Ambulance) ಚಾಲಕರಾಗಿ ವೃತ್ತಿಪ್ರಾರಂಭಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕೊಟ್ಟಾಯಂ ನಿವಾಸಿ ಪಿ.ಜಿ ದೀಪಾಮೋಲ್ ಅವರು ಕೇರಳದ ಮೊದಲ ಮಹಿಳಾ ಚಾಲಕರಾಗಿ ಸೇವೆಸಲ್ಲಿಸಲು ಸಿದ್ಧರಾಗಿದ್ದಾರೆ. 42 ವರ್ಷದ ದೀಪಾಮೋಲ್ ಅವರು ಆರೋಗ್ಯ ಇಲಾಖೆಯ ಅಂಬುಲೆನ್ಸ್ ಸೇವೆಯೊಂದಿಗೆ ಮೊದಲ ಮಹಿಳಾ ಚಾಲಕರಾಗಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಸಮಾರಂಭದಲ್ಲಿ ಅವರು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಂದ ಅಂಬುಲೆನ್ಸ್‌ನ  ಕೀಗಳನ್ನು ಸ್ವೀಕರಿಸಿದ್ದಾರೆ.

    ಇದು ಕೇರಳದ ಮಹಿಳೆಯರಲ್ಲಿ ತಾವು ಯಾವುದೇ ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ದೀಪಾಮೋಳ್ ಅವರು ಅಂಬುಲೆನ್ಸ್ ಚಾಲಕರಾಗಲು ಇಚ್ಛೆ ವ್ಯಕ್ತಪಡಿಸಿದರು. ಈ ಆಲೋಚನೆಯನ್ನು ಸಿಪಿಐ(ಎಂ) ಸರ್ಕಾರವು, ಇದೀಗ ರಾಜ್ಯದ ಮೊದಲ ಮಹಿಳಾ ಅಂಬುಲೆನ್ಸ್ ಚಾಲಕರಾಗಿದ್ಧಾರೆ.

    ದೀಪಾಮೋಳ್ ಅವರು 2008ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದು, ಟ್ಯಾಕ್ಸಿ ಓಡಿಸುವುದರ ಜೊತೆಗೆ ಟಿಪ್ಪರ್ ಲಾರಿ ಸೇರಿದಂತೆ ಭಾರೀ ವಾಹನಗಳನ್ನು ಓಡಿಸಲು 2009ರಲ್ಲಿ ಪರವಾನಗಿ ಪಡೆದಿದ್ದಾರೆ. ಚಿಕ್ಕ ಡ್ರೈವಿಂಗ್ ಸ್ಕೂಲ್ ಕೂಡ ನಡೆಸುತ್ತಿದ್ದಾರೆ. 2021 ರಲ್ಲಿ, ಅವರು 16 ದಿನಗಳಲ್ಲಿ ಕೊಟ್ಟಾಯಂನಿಂದ ಲಡಾಖ್‍ಗೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದರು. ಜೊತೆಗೆ ತ್ರಿಶೂರ್‍ನಲ್ಲಿ ನಡೆದ ಆಫ್-ರೋಡ್ ಡ್ರೈವಿಂಗ್ ಸ್ಪರ್ಧೆಯನ್ನು ಗೆದ್ದರು. ಅವರ ಪತಿ ಮೋಹನನ್ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅವರು ಡ್ರೈವಿಂಗ್‍ನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಮೂಲಕ ಕುಟುಂಬವನ್ನು ಬೆಂಬಲಿಸಿದರು. ದೀಪಾಮೋಲ್ ಅವರು ಅಂಬುಲೆನ್ಸ್ ಓಡಿಸಲು ಅಗತ್ಯವಿರುವ ಎಲ್ಲಾ ಡ್ರೈವಿಂಗ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಮುಂಚೂಣಿಗೆ ಬರಬೇಕು. ಆರ್ಥಿಕ ಸ್ವಾವಲಂಬನೆ ಪಡೆಯಲು ಯಾವುದೇ ಕೆಲಸವನ್ನು ಕೈಗೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು ಎಂದು ದೀಪಾಮೋಳ್ ಹೇಳಿದರು.

  • ಈಗ ಮನೆಯಲ್ಲೇ ಕುಳಿತು ಡಿಎಲ್‌ ನವೀಕರಣ ಮಾಡಿ

    ಈಗ ಮನೆಯಲ್ಲೇ ಕುಳಿತು ಡಿಎಲ್‌ ನವೀಕರಣ ಮಾಡಿ

    ಬೆಂಗಳೂರು: ಚಾಲನಾ ಪರವಾನಗಿ(ಡಿಎಲ್‌), ಕಲಿಕಾ ಪರವಾನಗಿ(ಎಲ್‌ಎಲ್‌) ನವೀಕರಣಕ್ಕೆ ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನವೀಕರಣ ಮಾಡಬಹುದು.

    ಪ್ರಾದೇಶಿ ಸಾರಿಗೆ ಇಲಾಖೆ(ಆರ್‌ಟಿಒ) ಕಚೇರಿಯಲ್ಲಿನ ಭ್ರಷ್ಟಾಚಾರ ತಡೆಯಲು ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.  ಇದನ್ನೂ ಓದಿ: UP Election: ಓವೈಸಿ ಪಕ್ಷದಿಂದ ನಾಲ್ವರು ಹಿಂದೂಗಳಿಗೆ ಟಿಕೆಟ್

    ಸಾರಥಿ ವೆಬ್ ಸೈಟ್ ಮೂಲಕ ವಿಳಾಸ ಬದಲಾವಣೆ, ಹೆಸರು ಬದಲಾವಣೆಯಂತಹ ಸೇವೆಗಳನ್ನು ಮನೆಯಲ್ಲೇ ಶುಲ್ಕ ಪಾವತಿಸಿ ಅನ್‌ಲೈನ್‌ನಲ್ಲೇ ಮಾಡಬಹುದು ಎಂದು ಆರ್‌ಇಟಿಒ ತಿಳಿಸಿದೆ. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ

    ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್, ಫಿಸಿಕಲ್ ಟೆಸ್ಟ್, ಫಿಟ್ನೆಸ್ ಟೆಸ್ಟ್ ರಿನಿವಲ್ ಮಾಡಿಸಲು ಮಾತ್ರ ಆರ್‌ಟಿಒ ಕಚೇರಿಗೆ ಹೋಗಬೇಕು. ಉಳಿದಂತೆ ಯಾವುದೇ ಕೆಲಸಗಳಿಗೆ ಆರ್‌ಟಿಒ ಕಚೇರಿಗೆ ಹೋಗಬೇಕಿಲ್ಲ.

  • DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕೊರೊನಾ ಹಿನ್ನೆಲೆ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ವಾಹನ ಪರ್ಮಿಟ್‍ಗಳ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿರ್ದೇಶನ ನೀಡಿದ್ದು, ವಾಹನಗಳ ಫಿಟ್ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಹಾಗೂ ಇತರೆ ದಾಖಲೆಗಳ ಅವಧಿಯನ್ನು ಕೊರೊನಾ ಕಾರಣದಿಂದಾಗಿ ವಿಸ್ತರಿಸಲಾಗಿದೆ. ಫೆಬ್ರವರಿ 1, 2020 ರಿಂದ ಮಾರ್ಚ್ 21, 2021ರೊಳಗೆ ಅವಧಿ ಮುಗಿಯುವ ದಾಖಲೆಗಳಿಗೆ ಇದು ಅನ್ವಯವಾಗಲಿದೆ.

    ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಅರ್ಜಿ ಸಲ್ಲಿಸಿದವರಿಗೆ ಕೊರೊನಾ ಕಾರಣದಿಂದಾಗಿ ದಾಖಲೆಗಳನ್ನು ನವೀಕರಿಸುವಲ್ಲಿ ವಿಳಂಬವಾಗಿದ್ದು, ಇವುಗಳಿಗೂ ಫೆಬ್ರವರಿ 1ಕ್ಕೆ ಮುಕ್ತಾಯಗೊಳ್ಳುವ ದಾಖಲೆಗಳ ಅವಧಿಯನ್ನು ಜೂನ್ 30ರ ವರೆಗೆ ಮಾನ್ಯವೆಂದು ಪರಿಗಣಿಸಬಹದು ಎಂದು ತಿಳಿಸಲಾಗಿದೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಿಕರು, ವಾಹನ ಸವಾರರು, ಇತರ ಸಂಸ್ಥೆಗಳಿಗೆ ದಾಖಲೆಗಳ ಕುರಿತು ಕಿರುಕುಳ, ತೊಂದರೆ ನಿಡದೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಸಲಹಾ ಪತ್ರವನ್ನು ಜಾರಿಗೆ ತರಬೇಕೆಂದು ಸಚಿವಾಲಯ ಮನವಿ ಮಾಡಿದೆ.

  • ಅ.1 ರಿಂದ ದೇಶಾದ್ಯಂತ ಒಂದೇ ಡಿಎಲ್, ಆರ್‌ಸಿ- ವಿಶೇಷತೆ ಏನು? ಏನೆಲ್ಲ ಮಾಹಿತಿ ಇರುತ್ತೆ?

    ಅ.1 ರಿಂದ ದೇಶಾದ್ಯಂತ ಒಂದೇ ಡಿಎಲ್, ಆರ್‌ಸಿ- ವಿಶೇಷತೆ ಏನು? ಏನೆಲ್ಲ ಮಾಹಿತಿ ಇರುತ್ತೆ?

    ಬೆಂಗಳೂರು: ಅಕ್ಟೋಬರ್ 1 ರಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ವಿತರಿಸಲು ಸಾರಿಗೆ ಸಚಿವಾಲಯ ನಿರ್ಧರಿಸಿದೆ.

    ದೇಶಾದ್ಯಂತ ಒಂದೇ ಮಾದರಿಯ ಡಿಎಲ್ ಹಾಗೂ ಆರ್‌ಸಿ ಕಾರ್ಡ್‍ಗಳನ್ನು ವಿತರಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂ ಆರ್‍ಸಿ ಕಾರ್ಡ್‍ಗಳು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳ ಎಟಿಎಂ ಕಾರ್ಡ್‍ಗಳು ಕೆಲಸ ನಿರ್ವಹಿಸುವ ರೀತಿಯಲ್ಲೇ ಕಾರ್ಯನಿರ್ವಹಿಸಲಿವೆ.

    ಈ ಸಂಬಂಧ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಪ್ರತಿಕ್ರಿಯಿಸಿ, ಅಕ್ಟೋಬರ್ 1 ರಿಂದ ನೋಂದಣಿಯಾಗುವ ಎಲ್ಲಾ ವಾಹನ ಸವಾರರಿಗೆ ಅನ್ವಯವಾಗಲಿದೆ. ಹಳೆಯ ವಾಹನಗಳ ಮಾಲೀಕರು ನವೀಕರಣ ಸಮಯದಲ್ಲಿ ಹೊಸ ಕಾರ್ಡ್ ಪಡೆದುಕೊಳ್ಳಬಹುದು. ಈ ಹೊಸ ಮಾದರಿ ಸ್ಮಾರ್ಟ್ ಕಾರ್ಡ್ ಕ್ಯೂಆರ್ ಕೋಡ್ ಹಾಗೂ ಮೈಕ್ರೋಚಿಪ್ ಹೊಂದಿರಲಿದೆ. ಇದರಿಂದ ಟ್ರಾಫಿಕ್ ಪೊಲೀಸರು ಸಂಬಂಧಿಸಿದ ವಿವರಗಳನ್ನು, ಸುಲಭವಾಗಿ ಮತ್ತು ತ್ವರಿತವಾಗಿ ಪಡೆಯಬಹುದಾಗಿದೆ. ಈ ಹೊಸ ನಿಯಮದಿಂದ ನಕಲಿ ದಾಖಲೆಗಳನ್ನು ತಡೆಯಬಹುದಾಗಿದೆ. ಈ ಹೊಸ ನಿಯಮ ಕರ್ನಾಟಕದಲ್ಲಿಯೂ ಅಕ್ಟೋಬರ್ ಒಂದರಿಂದಲೇ ಅನ್ವಯವಾಗಲಿದ್ದು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಪ್ರಸ್ತುತ ಒಂದೊಂದು ರಾಜ್ಯವು ಒಂದೊಂದು ವಿನ್ಯಾಸದ ಆರ್‍ಡಿ ಮತ್ತು ಡಿಎಲ್‍ಗಳನ್ನು ಈಗ ವಿತರಿಸುತ್ತಿವೆ. ಈಗ ಅಕ್ಟೋಬರ್ ನಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಡಿಎಲ್ ಮತ್ತು ಆರ್‍ಸಿಗಳ ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.

    ನೂತನ ಸ್ಮಾರ್ಟ್ ಡಿಎಲ್ ಹಾಗೂ ಆರ್‍ಸಿಗಳ ಬಣ್ಣ, ವಿನ್ಯಾಸಗಳು ಎಲ್ಲಾ ರಾಜ್ಯಗಳಲ್ಲಿಯೂ ಒಂದೇ ಆಗಿರಲಿದೆ. ವಿಶೇಷವಾಗಿ ಈ ಕಾರ್ಡ್‍ಗಳಲ್ಲಿ ಮೈಕ್ರೋ ಚಿಪ್ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆಯೂ ಇರಲಿದೆ. ಇದು ನಿಯರ್ ಫೀಲ್ಡ್ ಕಮ್ಯೂನಿಕೇಶನ್(ಎನ್‍ಎಫ್‍ಸಿ) ತಂತ್ರಜ್ಞಾನವನ್ನು ಹೊಂದಿದೆ. ಹೀಗಾಗಿ ಈ ಕಾರ್ಡ್‍ಗಳನ್ನು ಮೆಟ್ರೋ ಹಾಗೂ ಎಟಿಎಮ್ ಕಾರ್ಡ್‍ಗಳ ರೀತಿಯಲ್ಲೂ ಬಳಸಬಹುದಾಗಿದೆ. ಈ ಮೂಲಕ ಸಂಚಾರಿ ಪೊಲೀಸರು ಸ್ಕ್ಯಾನ್ ಮಾಡಿ ಸುಲಭವಾಗಿ ವಾಹನ ಸವಾರರ ಮಾಹಿತಿಗಳನ್ನು ಕಲೆಹಾಕಬಹುದು.

    ಇದಲ್ಲದೇ ವಿಶೇಷವಾಗಿ ವಾಹನ ಚಾಲಕರು ತಮ್ಮ ಅಂಗಾಂಗ ದಾನದ ಮಾಹಿತಿಯನ್ನೂ ಸಹ ಈ ಡಿಲ್‍ನಲ್ಲಿ ನಮೂದಿಸಬಹುದು. ಅಂಗವಿಕಲರಿಗಾಗಿ ಸಿದ್ಧಪಡಿಸಿರುವ ವಿಶೇಷ ವಾಹನಗಳ ಬಗ್ಗೆಯೂ ಸಹ ಈ ಕಾರ್ಡ್‍ಗಳಲ್ಲಿ ವಿವರ ನೀಡಲಾಗಿರುತ್ತದೆ. ನೂತನ ಆರ್‌ಸಿ ಕಾರ್ಡ್ ಮೂಲಕ ವಾಹನವು ಎಷ್ಟು ಪ್ರಮಾಣದಲ್ಲಿ ಹೊಗೆ ಹೊರಹಾಕುತ್ತದೆ ಎಂಬುದನ್ನು ಸಹ ತಿಳಿಯಬಹುದಾಗಿದೆ. ಇದರಿಂದಾಗಿ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿದೆ.

    ನೂತನ ಡಿಎಲ್‍ನಲ್ಲಿ ಏನೇನು ಇರುತ್ತದೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಡಿಎಲ್ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವ್ಯಕ್ತಿಯ ಹೆಸರು, ರಕ್ತದ ಗುಂಪು ಹಾಗೂ ಅಂಗಾಂಗಳನ್ನು ದಾನ ಮಾಡುವ ಮಾಹಿತಿ, ವಾಹನಗಳ ವಿಧ ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು ಮುದ್ರಿತವಾಗಿರುತ್ತದೆ.

    ಆರ್‌ಸಿ ಕಾರ್ಡ್‍ನಲ್ಲಿ ಏನೇನು ಇರುತ್ತೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಆರ್‍ಸಿ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವಾಹನದ ವಿಧ, ವಾಣಿಜ್ಯೇತರ ಹಾಗೂ ವಾಣಿಜ್ಯ ಬಳಕೆಯ ವಿವರ, ವಾಹನಗಳ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಭಾರತ್ ಸ್ಟೇಜ್ 4 ಅಥವಾ 6 ಎಂಬುದರ ವಿವರ ಮುದ್ರಿತವಾಗಿರುತ್ತದೆ.

    ಡಿಎಲ್ ಹಾಗೂ ಆರ್‌ಸಿಗಳಲ್ಲಿರುವ ಭದ್ರತಾ ಕ್ರಮಗಳು:
    ನೂತನ ಸ್ಮಾಟ್ ಡಿಎಲ್ ಹಾಗೂ ಆರ್‍ಸಿಗಳಲ್ಲಿ ಅಳಿಸಲಾರದಂತೆ ಗಿಲ್ಲೋಚ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ ಇದಕ್ಕೆ ಬಳಸಲಾದ ಬಣ್ಣಗಳು ನೇರಾಳಾತಿತಾ ಬಣ್ಣಗಳಿಂದ ಕೂಡಿದ್ದರಿಂದ ಯಾವುದೇ ರೀತಿಯಲ್ಲಿ ಬಣ್ಣ ಬದಲಾಗುವುದಿಲ್ಲ. ಸೂಕ್ಷ್ಮ ರೀತಿಯಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ನಿರ್ದಿಷ್ಟ ಗುರುತಿನ ಪುರಾವೆ(ಹೊಲೊಗ್ರಾಮ್) ಬಳಕೆ ಮಾಡಿರಲಾಗುತ್ತದೆ. ಹಿಂಬದಿ ಹಾಗೂ ಮುಂಭಾಗದಲ್ಲಿ ವಾಟರ್ ಮಾರ್ಕ್ ಮೂಲಕ ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಅಧಿಕೃತ ಚಿಹ್ನೆಗಳನ್ನು ಮುದ್ರಿಸಲಾಗಿರುತ್ತದೆ.

    ಯಾಕೆ ವಿತರಣೆ? ದರ ಎಷ್ಟು?
    ಮಾಹಿತಿಗಳ ಪ್ರಕಾರ ಪ್ರತಿನಿತ್ಯ ಹೊಸ ಹಾಗೂ ಪರಿಷ್ಕೃತ 32,000 ಡಿಎಲ್‍ಗಳನ್ನು ವಿತರಿಸಲಾಗುತ್ತಿದೆ. ಇದಲ್ಲದೇ ಹೊಸ ನೋಂದಣಿ ಹಾಗೂ ಮರು ನೋಂದಣಿಯ ಸುಮಾರು 43 ಸಾವಿರ ಕಾರ್ಡುಗಳನ್ನು ದೇಶದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೊಸ ಮಾದರಿಯ ವಿಶೇಷ ತಂತ್ರಜ್ಞಾನ ಹೊಂದಿರುವ ಕಾರ್ಡ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸಮಯದ ಉಳಿತಾಯ ಹಾಗೂ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸಿಗುವಂತೆ ಮಾಡಲು ರಸ್ತೆ ಸಾರಿಗೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಇಂದು ಮುದ್ರಿತವಾಗುತ್ತಿರುವ ಪ್ರತಿ ಕಾರ್ಡ್ ದರಕ್ಕಿಂತ 15 ರೂಪಾಯಿ ಮಾತ್ರ ಹೆಚ್ಚಳವಾಗುತ್ತದೆ ಎಂದು ತಿಳಿದುಬಂದಿದೆ.