Tag: ಡ್ರೈವಿಂಗ್ ಲೈಸನ್ಸ್

  • ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆದ ಅಲ್ಲು ಅರ್ಜುನ್

    ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆದ ಅಲ್ಲು ಅರ್ಜುನ್

    ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದಿದ್ದಾರೆ. ಈ ಲೈಸೆನ್ಸ್ ಪಡೆಯೋಕೆ ಕಾರಣ ಪುಷ್ಪ 2 ಸಿನಿಮಾದ ಶೂಟಿಂಗ್ ಎಂದು ಹೇಳಲಾಗುತ್ತಿದೆ. ಸದ್ಯ ಭಾರತದಲ್ಲೇ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಚೀನಾಗೆ ಹಾರಲಿದೆ ಅಂತೆ. ಅಲ್ಲಿ ಈ ಲೈಸೆನ್ಸ್ ಉಪಯೋಗಕ್ಕೆ ಬರಲಿದೆಯಂತೆ. ಈ ಕಾರಣದಿಂದಾಗಿಯೇ ಅವರು ಆರ್.ಟಿ.ಓ ಆಫೀಸಿಗೆ ತೆರಳಿ, ಪರವಾಣಿಗೆ ಪತ್ರ ಪಡೆದುಕೊಂಡಿದ್ದಾರೆ.

    ಈ ನಡುವೆ ಪುಷ್ಪ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪರಾಜ್‌ಗೆ ಜೋಡಿಯಾಗಿರುವ ಶ್ರೀವಲ್ಲಿ ಲುಕ್ ಹೇಗಿದೆ ಎಂಬುದು ಈಗ ರಿವೀಲ್ ಆಗಿದೆ. ಪುಷ್ಪ 2 ಚಿತ್ರೀಕರಣದ ಫೋಟೋ ಲೀಕ್ ಆಗಿದೆ. ರಶ್ಮಿಕಾ ಮಂದಣ್ಣ ನಟಿಸುತ್ತಿರೋ ಶ್ರೀವಲ್ಲಿ ಲುಕ್ ಔಟ್ ಆಗಿದೆ.

    ಆಗಿ ಕೋಟಿ ಕೋಟಿ ಲೂಟಿ ಮಾಡಿದೆ. ಹಾಗಾಗಿ ‘ಪುಷ್ಪ 2’ (Pushpa 2) ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ‘ಪುಷ್ಪ’ ಪಾರ್ಟ್ 2 ಹೇಗೆ ಮೂಡಿ ಬರಲಿದೆ ಎಂದು ಕೌತುಕ ಸೃಷ್ಟಿಸಿರುವಾಗಲೇ ಚಿತ್ರದಲ್ಲಿನ ಶ್ರೀವಲ್ಲಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ನಟಿ ರಶ್ಮಿಕಾ ಮಂದಣ್ಣ ಕೆಂಪು ಬಣ್ಣದ ಸೀರೆ, ಆಭರಣ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ನಟಿಯನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಈ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

     

    ಇನ್ನೂ ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಆಗಸ್ಟ್ 15ಕ್ಕೆ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್ ನ್ಯೂ ಗೆಟಪ್ ನೋಡೋಕೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ‌Expressway- ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿಎಲ್ ರದ್ದು: ಅಲೋಕ್ ಕುಮಾರ್

    ‌Expressway- ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿಎಲ್ ರದ್ದು: ಅಲೋಕ್ ಕುಮಾರ್

    – ಮೊಬೈಲ್ ಬಳಕೆ ಮಾಡಿದ್ರೆ ಕೇಸ್

    ರಾಮನಗರ: ಯಾರಾದರೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಡಿಎಲ್‌ (Driving Licence) ರದ್ದು ಮಾಡುತ್ತೇವೆ.  ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಹಾಗೂ ಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಕೇಸ್ (Case) ಹಾಕುವ ಕೆಲಸ ಮಾಡುತ್ತೇವೆ ಎಂದು ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಇಂದು ಎನ್‌ಹೆಚ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್ ಹೆದ್ದಾರಿಯ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈ ರಸ್ತೆಯಲ್ಲಿ ಬಹಳ ಬಾರಿ ಸಂಚರಿಸಿದ್ದೇನೆ. ಕಳೆದ ಐದಾರು ತಿಂಗಳಿನಿಂದ ರಾಮನಗರ (Ramanagara) ವ್ಯಾಪ್ತಿಯಲ್ಲಿ 58ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. 48ಕ್ಕೂ ಹೆಚ್ಚು ಅಪಘಾತಗಳಾಗಿವೆ. ಎಲ್ಲೆಲ್ಲಿ ಅಪಘಾತ ನಡೆದಿದೆ ಆ ಸ್ಥಳಗಳ ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೆವೆ. ಹೆದ್ದಾರಿಯಲ್ಲಿ ಆಗಮನ ಮತ್ತು ನಿರ್ಗಮನದ ಸಮಸ್ಯೆ ಇದೆ. ಕೆಲವೆಡೆ ರಸ್ತೆಯಲ್ಲಿ ತೀವ್ರ ತಿರುವುಗಳಿವೆ. ಇದರಿಂದ ವಾಹನಗಳು ಡಿವೈಡರ್ ಹಾರುತ್ತಿವೆ. ಹೈವೆಯಲ್ಲಿ ಲೇನ್ ಶಿಸ್ತನ್ನು ಬಳಸಬೇಕು. ಹೀಗಾಗಿ ಹೈವೇ ಪಟ್ರೋಲಿಂಗ್ (Patroling) ಅಗತ್ಯ ಇದೆ ಎಂದರು. ಇದನ್ನೂ ಓದಿ: ಬಿಜೆಪಿ ನಾಯಕರ ಬೀದಿ ಜಗಳ; ಅಚ್ಚರಿ ಮೂಡಿಸಿದ ಹೈಕಮಾಂಡ್ ಮೌನ

    ಈಗಾಗಲೇ ನಾಲ್ಕು ಹೈವೇ ಪಟ್ರೊಲಿಂಗ್ ವಾಹನಗಳಲ್ಲಿ ಗಸ್ತು ಮಾಡಲಾಗುತ್ತಿದೆ. ಹೈ ಸ್ಪೀಡ್ ಲಿಮಿಟ್ ತಡೆಗೆ ಸ್ಪೀಡ್ ರೆಡಾರ್ (Speed Radar) ಅಳವಡಿಕೆ ಮಾಡುತ್ತೇವೆ. ಯಾರಾದರೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಡಿಎಲ್ ರದ್ದು ಮಾಡುತ್ತೇವೆ. ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಹಾಗೂ ಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಕೇಸ್ ಹಾಕುವ ಕೆಲಸ ಮಾಡುತ್ತೇವೆ. ಸದ್ಯ ಕನಿಷ್ಠ 25% ರಷ್ಟು ಅಪಘಾತ ಕಡಿಮೆ ಮಾಡುವ ಗುರಿ ಇದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ, ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: LKGಯಿಂದ ಸ್ನಾತಕೋತ್ತರ ಪದವಿವರೆಗೂ ಕೆಂಪೇಗೌಡರ ಪಠ್ಯ ಸೇರಿಸಿ: ನಂಜಾವಧೂತ ಶ್ರೀ

    ದಶಪಥ ಹೆದ್ದಾರಿಯಲ್ಲಿ ವಾಹನ ಸವಾರರು ನಿಯಮ ಪಾಲನೆ ಮಾಡಬೇಕು. ಅಮೂಲ್ಯವಾದ ಜೀವಕ್ಕಾಗಿ ನಿಧಾನವಾಗಿ ಚಲಿಸಿ. ನಮ್ಮ ಕುಟುಂಬಕ್ಕೆ ನಾವುಗಳೇ ಮುಖ್ಯ. ಹಾಗಾಗಿ ಸುಗಮ ಸಂಚಾರಕ್ಕೆ ಸೀಟ್ ಬೆಲ್ಟ್, ಇಂಡಿಕೇಟರ್ ಬಳಕೆ, ಸ್ಪೀಡ್ ಲಿಮಿಟ್‌ನಲ್ಲಿಯೇ ವಾಹನ ಚಲಾಯಿಸಬೇಕು. ದಶಪಥ ಹೆದ್ದಾರಿಯಲ್ಲಿ ಗರಿಷ್ಟ ಮಿತಿ 100 ಕಿ.ಮೀ ಇದೆ. ತಿರುವುಗಳಲ್ಲಿ 60- 80 ವೇಗ ಮಿತಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ: ರೇಣುಕಾಚಾರ್ಯ

    ಹೆದ್ದಾರಿಯಲ್ಲಿ ಎನ್‌ಹೆಚ್ ಅಧಿಕಾರಿಗಳ ನ್ಯೂನ್ಯತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಸೂಚನೆಗಳನ್ನು ಹೈವೇ ಪ್ರಾಧಿಕಾರ ಪಾಲಿಸದಿದ್ದರೆ, ಅಧಿಕಾರಿಗಳ ಮೇಲೆ ಕ್ರಮ ವಹಿಸುತ್ತೇವೆ. ನಾವು ನೀಡಿರುವ ಕಾಲವಕಾಶವನ್ನು ಮೀರಿದರೆ, ಕ್ರಮ ಖಂಡಿತ ಎಂದರು. ಹೆದ್ದಾರಿ ಪ್ರಾಧಿಕಾರ ಅಂಬುಲೆನ್ಸ್, ಹೈವೆ ಪಟ್ರೋಲ್ ವ್ಯವಸ್ಥೆ ಮಾಡಬೇಕು. ಅಲ್ಲಲ್ಲಿ ತುರ್ತು ಗೇಟ್‌ಗಳನ್ನು ಸಿದ್ಧಪಡಿಸಬೇಕು. ಹಲವೆಡೆ ಸ್ಕೈವಾಕ್ ನಿರ್ಮಾಣ ಮಾಡಬೇಕು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಒತ್ತಡವನ್ನು ಹೇರುತ್ತೇವೆ ಎಂದರು. ಇದನ್ನೂ ಓದಿ: ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿ: ಸಿದ್ದರಾಮಯ್ಯ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕಾಲೇಜಿಗೆ ಬೈಕ್ ನಲ್ಲಿ ತೆರೆಳುವ ವಿದ್ಯಾರ್ಥಿಗಳಿಗೆ ಬ್ರೇಕ್ ಕೊಟ್ಟ ಬೆಂಗಳೂರು ಪೊಲೀಸ್!

    ಕಾಲೇಜಿಗೆ ಬೈಕ್ ನಲ್ಲಿ ತೆರೆಳುವ ವಿದ್ಯಾರ್ಥಿಗಳಿಗೆ ಬ್ರೇಕ್ ಕೊಟ್ಟ ಬೆಂಗಳೂರು ಪೊಲೀಸ್!

    ಬೆಂಗಳೂರು: ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬೈಕ್ ಮತ್ತು ಕಾರಲ್ಲಿ ಮೋಜು ಮಸ್ತಿ ಮಾಡುತ್ತಾರೆ. ವಿದ್ಯಾರ್ಥಿಗಳು ಮೋಜು ಮಸ್ತಿ ಮಾಡಲು ತೆರಳಿದ ವೇಳೆಯಲ್ಲಿ ಸಾಕಷ್ಟು ಅಪಘಾತ ಪ್ರಕರಣಗಳು ಕೂಡ ನಡೆದಿರುವ ಉದಾಹರಣೆಯಿದ್ದು, ಹಾಗಾಗಿ ಪೊಲೀಸರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

    ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ಪೊಲೀಸರು, ಶಾಲಾ-ಕಾಲೇಜುಗಳಿಗೆ ಒಂದು ಸೂಚನೆ ಕೊಟ್ಟಿದ್ದು, ಯಾವ ವಿದ್ಯಾರ್ಥಿ ಬಳಿ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲವೋ ಆ ವಿದ್ಯಾರ್ಥಿಗೆ ವಾಹನ ನಿಲ್ಲಿಸಲು ಶಾಲಾ-ಕಾಲೇಜು ಆವರಣದಲ್ಲಿ ಅವಕಾಶ ನೀಡಬಾರದು ಎಂದು ಹೇಳಿದೆ.

    ಶಿಕ್ಷಣ ಇಲಾಖೆಗೆ 2016 ಜುಲೈ 30ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಇದೀಗ ಕಟ್ಟುನಿಟ್ಟಾಗಿ ಜಾರಿಯಾಗುವ ಮುನ್ಸೂಚನೆ ಕಂಡು ಬರುತ್ತಿದೆ. ಎಲ್ಲಾ ಶಾಲಾ-ಕಾಲೇಜುಗಳು ಸ್ವಂತ ವಾಹನದಲ್ಲಿ ಬರುವ ವಿದ್ಯಾರ್ಥಿಗಳ ಚಾಲನ ಪರವಾನಗಿ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ನಿಯಮದ ಪ್ರಕಾರ 18 ವರ್ಷ ಪೂರ್ಣಗೊಳ್ಳದ ವಿದ್ಯಾರ್ಥಿಗಳಿಗೆ ಡಿಎಲ್ ಸಿಗಲ್ಲ.