Tag: ಡ್ರೈವಿಂಗ್

  • ಕಾರು ಡ್ರೈವಿಂಗ್‌ ಕಲಿಸಲು ಹೋಗಿ ಅಪಘಾತ – 8 ಬೈಕ್‌ಗಳು ಡ್ಯಾಮೇಜ್

    ಕಾರು ಡ್ರೈವಿಂಗ್‌ ಕಲಿಸಲು ಹೋಗಿ ಅಪಘಾತ – 8 ಬೈಕ್‌ಗಳು ಡ್ಯಾಮೇಜ್

    ಬೆಂಗಳೂರು: ಕಾರು ಡ್ರೈವಿಂಗ್ (Car Driving) ಕಲಿಸಲು ಹೋಗಿ ಅಪಘಾತ (Accident) ಸಂಭವಿಸಿದ ಪರಿಣಾಮ 8 ಬೈಕ್‌ಗಳು (Bike) ಡ್ಯಾಮೇಜ್‌ಗೊಂಡ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಕೆಎಲ್‌ಇ ಲಾ ಕಾಲೇಜು ಬಳಿ ಅಪಘಾತ ನಡೆದಿದ್ದು, ಕಾರು ಬೇಕರಿ ಬಳಿ ನಿಂತಿದ್ದ ಬೈಕ್‌ಗಳಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಎಂಟು ಬೈಕ್‌ಗಳು ಹಾನಿಗೊಳಗಾಗಿವೆ. ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೆ ಗುದ್ದಿದೆ. ಇದನ್ನೂ ಓದಿ: ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಗೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು

    ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ನರೇಗಲ್ ಪೊಲೀಸ್ ಪೇದೆಯಿಂದ ಅನುಚಿತ ವರ್ತನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವತಿಯ ವಿರುದ್ಧ ಹನಿಟ್ರ್ಯಾಪ್ ಆರೋಪ

  • ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

    ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

    ನವದೆಹಲಿ: ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಭವಿಷ್ಯದ ದಿನಗಳಲ್ಲಿ ಅಪರಾಧ ಎಂದು ಪರಿಗಣಿಸಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂಸತ್‍ನಲ್ಲಿ ಪ್ರಕಟಿಸಿದ್ದಾರೆ.

    ಆದರೆ ಈ ಬಗ್ಗೆ ಕೆಲ ಷರತ್ತುಗಳು ಅನ್ವಯವಾಗುತ್ತವೆ ಎಂದು ಗಡ್ಕರಿ ತಿಳಿಸಿದ್ದು, ಕಾರು ಚಾಲನೆ ಮಾಡುವಾಗ ಹ್ಯಾಂಡ್ ಫ್ರೀ ಡಿವೈಸ್ ಅಂದ್ರೆ ಬ್ಲೂಟೂತ್, ಇಯರ್‌ಫೋನ್ ಉಪಯೋಗಿಸಿ ಫೋನ್‍ನಲ್ಲಿ ಮಾತನಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲ್ಲ. ಆದರೆ ಆಗ ಚಾಲಕ ಫೋನನ್ನು ಕಾರಿನಲ್ಲಿಡದೇ ಜೇಬಲ್ಲಿ ಇಟ್ಟುಕೊಂಡಿರಬೇಕು. ಇದಕ್ಕೆ ಪೊಲೀಸರು ದಂಡ ವಿಧಿಸಬಾರದು. ಒಂದು ವೇಳೆ ಯಾರಾದ್ರೂ ದಂಡ ವಿಧಿಸಿದ್ರೆ ಇದನ್ನು ಕೋರ್ಟ್‍ನಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

    ಈ ಸಂಬಂಧ ಕೆಲವೇ ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಈ ಹಿಂದೆ ಡ್ರೈವಿಂಗ್ ವೇಳೆ ಫೋನ್‍ನಲ್ಲಿ ಮಾತನಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಿದ್ದರು. ಆದರೆ ಇದೀಗ ಸರ್ಕಾರ ಈ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

  • ತವರು ಮನೆಗೆ ವಿಶಿಷ್ಟವಾಗಿ ವಿದಾಯ ಹೇಳಿದ ವಧು!

    ತವರು ಮನೆಗೆ ವಿಶಿಷ್ಟವಾಗಿ ವಿದಾಯ ಹೇಳಿದ ವಧು!

    ನವದೆಹಲಿ: ಹೆಣ್ಣು ಮಕ್ಕಳು ಯಾವಾಗಲೂ ಅಡುಗೆ ಮನೆಗೆ ಮಾತ್ರ ಸೀಮಿತ ಎಂದು ಹೇಳುತ್ತಿದ್ದ ಮಾತು ಬದಲಾಗಿದೆ. ಇತ್ತೀಚೆಗೆ ಮದುವೆಯಾದ ಯುವತಿ ತನ್ನ ತವರು ಮನೆಯಿಂದ ಗಂಡನ ಮನೆಗೆ ಹೋಗುವ ವೇಳೆ ಕಾರಿನ ಚಾಲಕ ಸೀಟಿನಲ್ಲಿ ಕುಳಿತು ಕಾರು ಚಾಲಯಿಸಿದ್ದಾಳೆ.

    ಆಧುನಿಕ ಜಗತ್ತಿನ ಹೆಣ್ಣು ಮಕ್ಕಳು ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಮದುವೆ ಸಮಯದಲ್ಲಿ ವಧು ನಾಚುತ್ತಾ ತಲೆ ಬಾಗಿಸಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ತವರು ಮನೆ ಬಿಟ್ಟು ಹೋಗುವಾಗ ಅಳುತ್ತಾ ಗಂಡನ ಮನೆಗೆ ಹೋಗುತ್ತಾರೆ. ಆದರೆ ಇದೀಗ ಕಾಲ ಬದಲಾಗಿದೆ ಎಂದರೇ ತಪ್ಪಾಗಲಾರದು.

    ಹೌದು ವೀಡಿಯೋಯೊಂದರಲ್ಲಿ ಆಗಷ್ಟೇ ಮದುವೆಯಾದ ಸ್ನೇಹಾ ಸಿಂಘಿ ಎಂಬ ವಧು, ತನ್ನ ತವರು ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೊರಡಲು ಕಾರಿನ ಚಾಲಕನ ಸೀಟಿನಲ್ಲಿ ಡ್ರೈವ್ ಮಾಡಲು ಕುಳಿತುಕೊಳ್ಳುತ್ತಾಳೆ. ಈ ವೇಳೆ ವರ ಡ್ರೈವ್ ಮಾಡದೇ ವಧುವಿನ ಪಕ್ಕದಲ್ಲಿ ಕುಳಿತುಕೊಂಡರೆ, ಉಳಿದವರು ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ಸ್ನೇಹ ಎಲ್ಲರಿಗೂ ಕೈ ಬೀಸಿ ನಗುತ್ತಾ ಬೈ ಹೇಳಿ ಕಾರು ಚಲಾಯಿಸುವ ಮೂಲಕ ವಿಶಿಷ್ಟವಾಗಿ ವಿದಾಯ ಹೇಳುತ್ತಾರೆ.

     

    View this post on Instagram

     

    A post shared by Sneha Singhi Upadhaya (@snehasinghi1)

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದ್ದು, ಈ ವರೆಗೂ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

  • ಬಿ’ಯಮ’ಟಿಸಿಯ ಅಜಾಗರೂಕತೆ ಡ್ರೈವಿಂಗ್‍ಗೆ ಮತ್ತೊಂದು ಬಲಿ!

    ಬಿ’ಯಮ’ಟಿಸಿಯ ಅಜಾಗರೂಕತೆ ಡ್ರೈವಿಂಗ್‍ಗೆ ಮತ್ತೊಂದು ಬಲಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿಯ ಅಜಾಗರೂಕತೆಯ ಚಾಲನೆ ನಿಂತ ಹಾಗೆ ಕಾಣುತ್ತಿಲ್ಲ. ಕೊಟ್ಟಿಗೆಪಾಳ್ಯದಲ್ಲಿ ಬಸ್ ದುರಂತ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದು ಹೋಗಿದೆ.

    ಸುಮನಹಳ್ಳಿಯಲ್ಲಿ ಸಿಗ್ನಲ್ ಬಿತ್ತು ಎಂದು ನಿಂತಿದ್ದ ಬುಲೆಟ್ ಸವಾರನಿಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮುಂದಿದ್ದ 407 ಟೆಂಪೋಗೆ ಅಪ್ಪಳಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಜಯ್ ಕುಮಾರ್ ಸಾವನ್ನಪ್ಪಿದ ಬೈಕ್ ಸವಾರ ಎಂದು ಗುರುತಿಸಲಾಗಿದೆ.

    ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಲಾಗಿದೆ. ಡಿಪೋ ನಂ 16ರ 410 ಕೆಎ57 ಎಫ್ 1557 ಬಸ್ ಆಗಿದ್ದು, ಗೊರಗುಂಟೆಪಾಳ್ಯ ಟು ಬನಶಂಕರಿ ಮಾರ್ಗದಲ್ಲಿ ಓಡಾಡ್ತಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಚಾಲಕ ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಸಂಬಂಧ ಕಾಮಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್ ಚಲಾಯಿಸಿದ KSRTC ಎಂಡಿ ಶಿವಯೋಗಿ ಕಳಸದ್

    ಬಸ್ ಚಲಾಯಿಸಿದ KSRTC ಎಂಡಿ ಶಿವಯೋಗಿ ಕಳಸದ್

    ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಓಡಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಕ್ಕೆ ಸಿಕ್ಕಾಕೊಂಡಿದ್ದರು. ಈ ಬೆನ್ನಲ್ಲೇ ಕಳೆದ ಮೂರು ದಿನಗಳ ಹಿಂದೆ ಬಿಎಂಟಿಸಿ ಎಂಡಿ ಶಿಖಾ ಬಸ್ ಓಡಿಸಿದ್ದರು. ಈಗ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಬಿಎಂಟಿಸಿ ವೋಲ್ವೋ ಬಸ್ ಚಲಾಯಿಸಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    22 ಸೆಕೆಂಡ್ ಇರುವ ಈ ವೈರಲ್ ವಿಡಿಯೋದಲ್ಲಿ, ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಕಪ್ಪು ಕನ್ನಡಕ ಹಾಕಿಕೊಂಡು ಬಸ್ ಚಲಾಯಿಸಿದ್ದಾರೆ. ಬಸ್ಸಿನಲ್ಲಿದ್ದ ಕೆಲ ಅಧಿಕಾರಿಗಳು ಡ್ರೈವಿಂಗ್ ಬಗ್ಗೆ ಎಂಡಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಶಿವಯೋಗಿ ಕಳಸದ್ ಅವರ ಈ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.  ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ಈ ವಿಡಿಯೋ ನೋಡಿ, ಕೆಲವರು ಸಾರಿಗೆಯ ಯಾವುದೋ ಒಂದು ನಿಗಮದ ಎಂಡಿಗಳಾದರೆ ಸರ್ಕಾರಿ ಬಸ್‍ಗಳನ್ನು ಓಡಿಸಬಹುದಾ? ಇವರನ್ನು ಯಾರು ಪ್ರಶ್ನಿಸುವವರು ಇಲ್ಲವೇ? ಇದೇ ಬಸ್‍ಗಳನ್ನು ಬೇರೆಯವರು ಓಡಿಸಿದರೆ ಕಾನೂನು ಉಲ್ಲಂಘನೆ ಎಂದು ದಂಡ ಹಾಕಲಾಗುತ್ತೆ. ಆದರೆ ಈ ಎಂಡಿಗಳಿಗೆ ದಂಡ ಹಾಕುವವರು ಯಾರು ಬಿಎಂಟಿಸಿಯ ಎಂಡಿ, ಕೆಎಸ್‌ಆರ್‌ಟಿಸಿ ಎಂಡಿ ಬಸ್ ಓಡಿಸಲು ಅವಕಾಶ ಇದೆ ಎಂಬುವುದಾದರೆ ರೇಣುಕಾಚಾರ್ಯ ಬಸ್ ಡ್ರೈವ್ ಮಾಡಿದ್ದು ಕೂಡ ಸರಿನೇ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

  • ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

    ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

    ಬೆಂಗಳೂರು: ಬಿಎಂಟಿಸಿ ಎಂಡಿ, ಮಹಿಳಾ ಐಎಎಸ್ ಅಧಿಕಾರಿ ಶಿಖಾ ವೋಲ್ವೋ ಬಸ್‍ನ ಚಾಲಕರಾಗಿದ್ದಾರೆ.

    ಶಿಖಾ ಅವರು ಡಿಪೋವೊಂದರಲ್ಲಿ ಹೊಸ ಬಿಎಂಟಿಸಿ ವೋಲ್ವೋ ಬಸ್‍ನಲ್ಲಿ ಟೆಸ್ಟ್ ಡ್ರೈವ್ ತಾವೇ ಮಾಡಿ ಬಸ್ಸಿಗೆ ಸರ್ಟಿಫಿಕೇಟ್ ನೀಡಿದ್ದಾರೆ. ಶಿಖಾ ಬಸ್ ಚಲಾಯಿಸುವ ವಿಡಿಯೋ ಈಗ ಎಲ್ಲರ ಹುಬ್ಬೇರಿಸಿದೆ. ಖಡಕ್ ಅಧಿಕಾರಿ ಶಿಖಾ ಬಸ್ ಚಲಾಯಿಸುವ ದೃಶ್ಯ ಕಂಡು ಅಧಿಕಾರಿಗಳು ಸಿಬ್ಬಂದಿಗಳೇ ದಂಗಾಗಿದ್ದಾರೆ. ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ಖಾಲಿ ರೋಡ್‍ನಲ್ಲಿ ಶಿಖಾ ಅವರು ಸುಮಾರು ಹೊತ್ತು ಬಸ್ ಚಲಾಯಿಸಿದ್ದಾರೆ. ಕೆಲವರು ಶಿಖಾ ಡ್ರೈವಿಂಗ್‍ಗೆ ಖುಷಿ ಪಟ್ಟು ಏನ್ ಡ್ರೈವಿಂಗ್ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು, “ಅಲ್ಲಾ ಮೊನ್ನೆ ರೇಣುಕಾಚಾರ್ಯ ಕೆಎಸ್‍ಆರ್ ಟಿಸಿ ಬಸ್ ಓಡಿಸಿದಾಗ ಕಾಯ್ದೆ ಪ್ರಕಾರ ಹಿಂಗೆಲ್ಲ ಬಸ್ ಓಡಿಸುವ ಹಾಗಿಲ್ಲ ಎಂದು ರೂಲ್ಸ್ ಮಾತಾನಾಡುತ್ತಿದ್ರೂ ಜೊತೆಗೆ ರೇಣುಕಾಚಾರ್ಯ ವಿರುದ್ಧ ದೂರು ಕೊಡುವುದಕ್ಕೆ ರೆಡಿಯಾಗಿದ್ದರು. ಆದರೆ ಈಗ ಶಿಖಾ ಹೇಗೆ ಬಸ್ ಚಲಾಯಿಸುತ್ತಾರೆ” ಎಂದು ಪ್ರಶ್ನಿಸುತ್ತಿದ್ದಾರೆ.

    ಜನವರಿ 5ರಂದು ಹೊನ್ನಾಳಿಯಲ್ಲಿ ಬಸ್ ಉದ್ಘಾಟನೆ ವೇಳೆ ಶಾಸಕಾ ರೇಣುಕಾಚಾರ್ಯ ಕೆಎಸ್‍ಆರ್‍ಟಿಸಿ ಡ್ರೈವರ್ ಡ್ರೆಸ್ ಹಾಕಿಕೊಂಡು ಸುಮಾರು 60 ಕಿ.ಮೀ ಬಸ್ ಓಡಿಸಿದ್ದು ಎಲ್ಲೆಡೆ ಭಾರೀ ವಿವಾದವಾಗಿತ್ತು

  • ಡ್ರಂಕ್ ಆಂಡ್ ಡ್ರೈವ್ – ವ್ಯಕ್ತಿಯ ದೇಹದಲ್ಲೇ ಮದ್ಯ ಉತ್ಪಾದನೆಯಾಗೋದನ್ನು ಕಂಡು ದಂಗಾದ ಪೊಲೀಸರು

    ಡ್ರಂಕ್ ಆಂಡ್ ಡ್ರೈವ್ – ವ್ಯಕ್ತಿಯ ದೇಹದಲ್ಲೇ ಮದ್ಯ ಉತ್ಪಾದನೆಯಾಗೋದನ್ನು ಕಂಡು ದಂಗಾದ ಪೊಲೀಸರು

    ವಾಷಿಂಗ್ಟನ್: ಮದ್ಯ ಕುಡಿಯದೇ ವ್ಯಕ್ತಿಯ ದೇಹದಲ್ಲಿ ಮದ್ಯ ಉತ್ಪಾದನೆಯಾಗುತ್ತಿರುವ ವಿಶೇಷ ಪ್ರಕರಣವೊಂದು ಅಮೆರಿಕದಲ್ಲಿ ಬೆಳಕಿಗೆ ಬಂದಿದೆ.

    ಹೌದು. ಉತ್ತರ ಕರೋಲಿನಾದ ವ್ಯಕ್ತಿಯ ಕರುಳಿನಲ್ಲಿ ಮದ್ಯ ಉತ್ಪಾದನೆಯಾಗುತ್ತಿದೆ. ಅಲ್ಲದೆ ಆತನ ದೇಹದಲ್ಲಿನ ಎಲ್ಲ ಕಾರ್ಬೋಹೈಡ್ರೇಟ್‍ಗಳು ಬಿಯರ್ ಆಗಿ ಪರಿವರ್ತಿಸುವ ಶಿಲೀಂದ್ರವನ್ನು ಹೊಂದಿವೆ ಎಂಬ ಅಚ್ಚರಿಯ ವಿಚಾರ ಪತ್ತೆಯಾಗಿದೆ.

    ಅಪರಿಚಿತನೊಬ್ಬ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ಆದರೆ ಆತ ಮದ್ಯ ಸೇಸಿರುವುದನ್ನು ನಿರಾಕರಿಸಿದ್ದಾನೆ. ನಂತರ ಮದ್ಯ ಪರೀಕ್ಷೆಗೆ ಒಳಪಡಲು ಆತ ನಿರಾಕರಿಸಿದ್ದು, ಆಗ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತನ ರಕ್ತದ ಆಲ್ಕೊಹಾಲ್ ಮಟ್ಟವು 200 ಮಿಲಿಗ್ರಾಂಎಂದು ತೋರಿಸಿದೆ. ಇದು 10 ಆಲ್ಕೊಹಾಲ್ ಯುಕ್ತ ಪಾನೀಯ ಕುಡಿದಿದ್ದಕ್ಕೆ ಸಮಾನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಗ ವ್ಯಕ್ತಿ ವೈದ್ಯರಿಗೆ ಮಾಹಿತಿ ನೀಡಿದ್ದು, ಸುಮಾರು ಮೂರು ವರ್ಷಗಳಿಂದ ನಾನು ಖಿನ್ನತೆ, ಬ್ರೇನ್ ಫಾಗ್, ಮೆಮೊರಿ ಲಾಸ್ ಹಾಗೂ ವಿಚಿತ್ರ ನಡವಳಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ನನ್ನ ವ್ಯಕ್ತಿತ್ವ ಬದಲಾಗಿರುವುದನ್ನು ಅನುಭವಿಸಿದ್ದೇನೆ. ಬೆರಳಿಗೆ ಗಾಯವಾದಾಗ ಆ್ಯಂಟಿಬಯೋಟಿಕ್ಸ್ ಚಿಕಿತ್ಸೆ ಪಡೆದ ಒಂದು ವಾರದ ನಂತರ ಈ ರೀತಿಯ ಬದಲಾವಣೆಗಳು ಪ್ರಾರಂಭವಾಗಿವೆ ಎಂದು ಹೇಳಿದ್ದಾನೆ.

    ಆತ ಮದ್ಯ ಸೇವನೆ ಮಾಡಿರುವುದನ್ನು ಪದೇ ಪದೆ ನಿರಾಕರಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ನಂಬಲಿಲ್ಲ. ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ ನಂತರ ಕುಟುಂಬಸ್ಥರು ಆತನ ಸ್ನೇಹಿತ ಮದ್ಯಪಾನಿಯಾಗಿದ್ದು ಹೀಗಾಗಿ ಕುಡಿಯಬಹುದು ಎಂದು ಶಂಕಿಸಿದ್ದಾರೆ.

    ವೈದ್ಯರು ಪರೀಕ್ಷಿಸಿದಾಗ ಆತನ ದೇಹ ಸಾಮಾನ್ಯವಾಗಿರುವುದು ಕಂಡು ಬಂತು. ನಂತರ ದೇಹದಲ್ಲಿ ಸ್ಯಾಕರೊಮೈಸಿಸ್ ಸೆರೆವಿಸಿಯೆ ಇರುವುದು ಇರುವುದು ಕಂಡು ಬಂದಿದೆ. ಇದನ್ನು ಬ್ರೆವೆರ್ಸ್ ಯೀಸ್ಟ್ ಎಂದು ಸಹ ಕರೆಯುತ್ತಾರೆ.

    ವ್ಯಕ್ತಿಯನ್ನು ಅಂತಿಮವಾಗಿ ನ್ಯೂಯಾರ್ಕ್‍ನ ರಿಚ್ಮಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ತಜ್ಞರ ಬಳಿ ಕರೆದೊಯ್ಯಲಾಯಿತು. ಆಗ ಆಟೋ-ಬ್ರಿವೆರಿ ಸಿಂಡ್ರೋಮ್(ಎಬಿಎಸ್) ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನುವ ವಿಚಾರ ಪತ್ತೆಯಾಗಿದೆ. ಎಬಿಎಸ್ ರೋಗ ಇರುವುದು ಖಚಿತವಾದ ನಂತರ ಓಹಿಯೋ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ನಂತರ ಅವನ ದೇಹ ಸ್ವಲ್ಪ ಸುಧಾರಣೆಯಾಗಿದೆ ಎಂದು ವರದಿಯಾಗಿದೆ.

    ಈ ರೋಗ ಅಪರೂಪದಲ್ಲಿ ಅಪರೂಪ ಜನರಿಗೆ ಬರುತ್ತದೆ. ಕಳೆದ 30 ವರ್ಷಗಳಲ್ಲಿ ವಿಶ್ವದಲ್ಲಿ ಕೇವಲ 5 ಜನರಲ್ಲಿ ಮಾತ್ರ ಕಾಣಿಸಿಕೊಂಡಿದೆ.

  • 7ರ ಪೋರಿ ಓಡಿಸ್ತಾಳೆ ಕಾರು, ಲಾರಿ..!

    7ರ ಪೋರಿ ಓಡಿಸ್ತಾಳೆ ಕಾರು, ಲಾರಿ..!

    ಮೈಸೂರು: ನಗರದಲ್ಲಿ ಪುಟ್ಟ ಪೋರಿಯ ಸಖತ್ ಡ್ರೈವಿಂಗ್ ಈಗ ಸದ್ದು ಮಾಡುತ್ತಿದೆ. ಅಲ್ಲದೆ ಆ ಪೋರಿ ಈಗ ಮಲ್ಟಿ ವೆಹಿಕಲ್ ಡ್ರೈವಿಂಗ್ ಮೂಲಕ ಗಿನ್ನಿಸ್ ದಾಖಲೆಗೆ ಸೇರುತ್ತಿದ್ದಾಳೆ.

    ಮೈಸೂರಿನ ಏಳು ವರ್ಷದ ರಿಫಾ ತಸ್ಕಿನ್ ಈಗ ತನ್ನ ಡ್ರೈವಿಂಗ್ ಮೂಲಕ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಬುಕ್ ಸೇರುವ ಹಂತದಲ್ಲಿ ಇದ್ದಾಳೆ. ವಿವಿಧ ರೀತಿಯ 14 ವಾಹನಗಳನ್ನು ರಿಫಾ ತಸ್ಕಿನ್ ಚಲಾಯಿಸುತ್ತಾಳೆ.

     

    ಲಾರಿ, ಕಾರು, ಮಿನಿ ಟೆಂಪೋ, ಎಕ್ಸ್ ಯೂವಿ ಕಾರುಗಳ ಸರಾಗ ಚಾಲನೆ ಮಾಡುವ ಈ ಪೋರಿ ತನ್ನ ಏಳನೇ ವಯಸ್ಸಿನಲ್ಲಿ 70 ವೆಹಿಕಲ್ ಓಡಿಸುವ ಸಾಮಥ್ರ್ಯ ಹೊಂದಿರುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಆಟಿಕೆಗಳಂತೆ ಲಾರಿ ಸ್ಟೇರಿಂಗ್ ಹಾಗೂ ಎಲ್ಲಾ ವಾಹನಗಳ ಸ್ಟೇರಿಂಗ್ ತಿರುಗಿಸುವ ತಸ್ಕಿನ್ ತಾನು `ನಾನ್ ಯಾರಿಗು ಕಮ್ಮಿ ಇಲ್ಲ’ ಎಂದು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾಳೆ.

    ಪೈಲೆಟ್ ಆಗಬೇಕೆಂಬ ಕನಸು ಹೊತ್ತಿರುವ ತಸ್ಕಿನ್ ಮೂರು ವರ್ಷದವಳಿದ್ದಾಗಲೇ ಕಾರು ಓಡಿಸಲು ಆರಂಭಿಸಿದ್ದಾಳೆ. ಮೈಸೂರಿನ ಸೆಂಟ್ ಜೊಸೆಫ್ ಶಾಲೆಯಲ್ಲಿ 2ನೇ ತರಗತಿ ಓದಿತ್ತಿರುವ ರಿಫಾ ತಸ್ಕಿನ್ ಇಂದು ದೆಹಲಿಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿ ತನ್ನ ಡ್ರೈವಿಂಗ್ ಅನ್ನು ಪ್ರದರ್ಶಿಸಿದಳು.