Tag: ಡ್ರೈವರ್

  • ಮುಷ್ಕರಕ್ಕೆ ಹೆದರಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಚಾಲಕ

    ಮುಷ್ಕರಕ್ಕೆ ಹೆದರಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಚಾಲಕ

    ಬೆಳಗಾವಿ: ಸಾರಿಗೆ ಮುಷ್ಕರಕ್ಕೆ ಇಳಿದಿರುವ ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಾರಿಗೆ ಬಸ್‍ಗಳನ್ನು ರಸ್ತೆಗೆ ಇಳಿಸಲು ಅಧಿಕಾರಿಗಳು ಇನ್ನಿಲ್ಲದ ಹರಸಾಹಸ ಮಾಡುತ್ತ ಇದ್ದಾರೆ. ಸಿಬ್ಬಂದಿ ಮೇಲೆ ಒತ್ತಡ ಹೇರಿ ಡ್ಯೂಟಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಬಸ್ ಚಾಲಕರೊಬ್ಬರು ಮುಷ್ಕರಕ್ಕೆ ಹೆದರಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

     

    ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ಓಡಾಟ ಸ್ಥಬ್ದವಾದ ಪರಿಣಾಮ ಸಾರಿಗೆ ಇಲಾಖೆ ಅಧಿಕಾರಿಗಳು ಇಂದು ಕೆಲವು ಸಿಬ್ಬಂದಿಗೆ ಒತ್ತಡ ಹೇರಿ ಡ್ಯೂಟಿಗೆ ನಿಯೋಜನೆ ಮಾಡಿದ್ದಾರೆ. ಹೀಗಾಗಿ ಮುಷ್ಕರಕ್ಕೆ ಹೆದರಿ ಬಸ್ ಚಾಲಕರೊಬ್ಬರು ಬಸ್ ಒಳಭಾಗದಲ್ಲಿ ಹೆಲ್ಮೆಟ್ ಧರಿಸಿ ಬೆಳಗಾವಿಯಿಂದ ಧಾರವಾಡಕ್ಕೆ ಬಸ್ ಚಾಲನೆ ಮಾಡಿದರು.

    ಸಾರಿಗೆ ಇಲಾಖೆಯ ಹಲವು ಚಾಲಕ ಹಾಗೂ ನಿರ್ವಾಹಕರಿಗೆ ಇಂದು ಮುಂಜಾನೆ ಡ್ಯೂಟಿ ಮುಗಿದ ಬಳಿಕವೂ ಹಿರಿಯ ಅಧಿಕಾರಿಗಳು ಡ್ಯೂಟಿ ಮುಂದುವರೆಸುವಂತೆ ಒತ್ತಡ ಹೇರುತ್ತಿದ್ದರು. ಪರಿಣಾಮ ಒಲ್ಲದ ಮನಸ್ಸಿನಿಂದಲೇ ಚಾಲಕರು ಮತ್ತು ನಿರ್ವಾಹಕರು ಬಸ್‍ಗಳನ್ನು ರಸ್ತೆ ಇಳಿಸಿದ್ದಾರೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ್ದು ವಿಶೇಷವಾಗಿದೆ.

  • ಬಸ್ ಡ್ರೈವರ್ ಆತ್ಮಹತ್ಯೆ ಬೆನ್ನಲ್ಲೇ ಕಾಣೆಯಾದ ಬಸ್

    ಬಸ್ ಡ್ರೈವರ್ ಆತ್ಮಹತ್ಯೆ ಬೆನ್ನಲ್ಲೇ ಕಾಣೆಯಾದ ಬಸ್

    -ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಚಾಲಕ

    ಬೀದರ್: ಚುನಾವಣೆಯ ಕರ್ತವ್ಯಕ್ಕೆ ಹೋಗಿದ್ದ ಸಾರಿಗೆ ಚಾಲಕ ಬಸ್ ಡಿಪೋ 1 ರಲ್ಲಿ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.

    ಓಂಕಾರ್ (40) ಆತ್ಮಹತ್ಯೆಗೆ ಶರಣಾದ ಬಸ್ ಡ್ರೈವರ್. ಇಂದು ಅನುಮಾನಾಸ್ಪದವಾಗಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಓಂಕಾರ ಮೂಲತಃ ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮದ ನಿವಾಸಿಯಾಗಿದ್ದಾರೆ.

    ಇಂದು ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಓಂಕಾರ್ ಅವರನ್ನು ಬೀದರ್ ತಾಲೂಕಿನ ಸಂಗೊಳಿ ಮತಗಟ್ಟೆಗೆ ಸಾರಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಚುನಾವಣಾ ಕರ್ತವ್ಯಕ್ಕೆಂದು ಬಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಓಂಕಾರ್ ಕಳೆದ ಎಂಟು ವರ್ಷದಿಂದ ಸಾರಿಗೆ ಬಸ್ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಓಂಕಾರ್ ಓಡಿಸುತ್ತಿದ್ದ ಏಂ-32 ಈ-926 ಸಂಖ್ಯೆಯ ಸಾರಿಗೆ ಬಸ್ ನಾಪತ್ತೆಯಾಗಿದೆ. ನಾಪತ್ತೆಯಾಗಿರುವ ಸಾರಿಗೆ ಬಸ್‍ಗಾಗಿ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

    ಓಂಕಾರ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಡ್ರೈವರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲಾ.

  • ಮಾರಕಾಸ್ತ್ರಗಳಿಂದ ಹೊಡೆದು ಕಾರು ಚಾಲಕನ ಬರ್ಬರ ಹತ್ಯೆ

    ಮಾರಕಾಸ್ತ್ರಗಳಿಂದ ಹೊಡೆದು ಕಾರು ಚಾಲಕನ ಬರ್ಬರ ಹತ್ಯೆ

    – ಅರಿಶಿನ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದ ವೇಳೆ ಅಟ್ಯಾಕ್
    – ಮನೆಯಿಂದ ಹೊರಗೆ ಬಾ ಎಂದು ಕರೆದು ಮಾರಕಾಸ್ತ್ರಗಳಿಂದ ಹಲ್ಲೆ

    ಬೆಳಗಾವಿ: ಸಂಬಧಿಕರೊಬ್ಬರ ಅರಿಶಿಣ ಕಾರ್ಯಕ್ರಮ ಮುಗಿಸಿ ಮನೆಗೆ ಸೇರಿದ್ದವನನ್ನು, ಹೊರಗೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಅಂಬೇಟ್ಕರ್‍ಗಲ್ಲಿಯಲ್ಲಿ ನಡೆದಿದೆ.

    ಬರ್ಬರವಾಗಿ ಹತ್ಯೆಯಾಗಿರುವ ವ್ಯಕ್ತಿಯನ್ನು ಜಯಪಾಲ್ ಗರಾನೆ (35) ಎಂದು ಗುರುತಿಸಲಾಗಿದೆ. ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಜಯಪಾಲ್ ಗರಾನೆಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಮಾಡಿದ್ದಾರೆ.

    ಪ್ರಕರಣ ಹಿನ್ನೆಲೆ:
    ಜಯಪಾಲ್ ಗರಾನೆ ನಿನ್ನೆ ರಾತ್ರಿ ಸಂಬಂಧಿಕರೊಬ್ಬರ ಮದುವೆಯ ಅರಿಶಿಣ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಸರಿಸುಮಾರು ರಾತ್ರಿ ಹನ್ನೆರಡು ಗಂಟೆಗೆ ಸುಮಾರಿಗೆ ಮತ್ತೆ ಮನೆಗೆ ವಾಪಾಸ್ ಬಂದಿದ್ದರು. ಈ ವೇಳೆ ಮನೆಗೆ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಬಂದು ಜಯಪಾಲ್‍ನನ್ನು ಹೊರ ಕರೆದಿದ್ದಾರೆ. ತಕ್ಷಣ ಹೊರ ಹೋದ ಜಯಪಾಲ್ ರಾತ್ರಿ ಕಳೆದರೂ ಮನೆಗೆ ವಾಪಸ್ ಬಂದಿಲ್ಲ. ಬಾಡಿಗೆ ಕಾರು ಓಡಿಸುತ್ತಿದ್ದ ಈತನನ್ನ ಯಾರೋ ಅರ್ಜಂಟ್ ಆಗಿ ಕರೆದುಕೊಂಡು ಹೋಗಿರಬಹುದು ಎಂದು ಕುಟುಂಬಸ್ಥರು ಕೂಡ ಸುಮ್ಮನಾಗಿದ್ದಾರೆ. ಆದರೆ ಬೆಳಗ್ಗಿನ ಜಾವ ವಾಕಿಂಗ್ ಮಾಡಲು ಬಂದಿದ್ದ ಜನರು ಜಯಪಾಲ್ ಮನೆಯಿಂದ ನೂರು ಮೀಟರ್ ನಷ್ಟು ದೂರದಲ್ಲಿ ಶವವಾಗಿ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ಹಾಗೂ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಶಹಾಪುರ್ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಕೇಸ್‍ನ್ನು ದಾಖಲಿಸಿಕೊಂಡಿದ್ದಾರೆ. ಶವವನ್ನ ಪೋಸ್ಟ್ ಮಾರ್ಟಂ ಮಾಡಿ ಕುಟುಂಬಸ್ಥರಿಗೆ ನೀಡಿ ತನಿಖೆಯನ್ನ ಆರಂಭಿಸಿದ್ದಾರೆ. ಇತ್ತ ಮೂರು ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಡಿದ ನಶೆಯಲ್ಲಿ ಗೆಳೆಯರೊಡನೆ ಜಗಳ ಮಾಡಿಕೊಂಡು ಕೊಲೆ ಮಾಡಿರಬಹುದು, ಕುಟುಂಬಸ್ಥರಲ್ಲಿ ಯಾರಾದ್ರೂ ಕೊಲೆ ಮಾಡಿದ್ದಾರಾ ಅಥವಾ ಆಸ್ತಿ, ಹಣಕ್ಕಾಗಿ ಕೊಲೆ ಮಾಡಿರುವ ಶಂಕೆಯಡಿಯಲ್ಲಿ ತನಿಖೆಯನ್ನ ಕೈಗೆತ್ತಿಕೊಂಡಿದ್ದಾರೆ. ಈ ಕುರಿತು ಜಯಪಾಲ್ ಜೊತೆಗೆ ಇದ್ದವರನ್ನ ಮತ್ತು ಗೆಳೆಯರನ್ನ ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಯಾರು ಕೊಲೆ ಮಾಡಿದ್ದಾರೆ ಎಂಬುದು ಮಾತ್ರ ತಿಳಿದು ಬಂದಿಲ್ಲ.

    ಜಯಪಾಲ್ ಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ಜಯಪಾಲ್‍ನ ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆ ಮಾಡಿದವರ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಆರೋಪಿಗಳನ್ನ ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕು ಅಂತ ಕುಟುಂಬಸ್ಥರು ಆಗ್ರಹಿಸಿದ್ದಾರೆ.

  • ಪಾಕಿಸ್ತಾನಕ್ಕೆ ಗುಪ್ತ ಸಂದೇಶ ರವಾನಿಸ್ತಿದ್ದ ಆರ್ಮಿ ಡ್ರೈವರ್ ಅರೆಸ್ಟ್

    ಪಾಕಿಸ್ತಾನಕ್ಕೆ ಗುಪ್ತ ಸಂದೇಶ ರವಾನಿಸ್ತಿದ್ದ ಆರ್ಮಿ ಡ್ರೈವರ್ ಅರೆಸ್ಟ್

    – ನಕಲಿ ಖಾತೆ ಬಳಸಿ ಪಾಕ್ ಜೊತೆ ಸಂಪರ್ಕ

    ಜೈಪುರ: ವೈರಿ ಪಾಕಿಸ್ತಾನಕ್ಕೆ ದೇಶದ ಸೇನೆಯ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಆರ್ಮಿ ಕಚೇರಿಯ ಚಾಲಕನನ್ನು ರಾಜಸ್ಥಾನದ ಗುಪ್ತಚರ ತಂಡ ಬಂಧಿಸಿದೆ.

    29 ವರ್ಷದ ರಾಮ್‍ನಿವಾಸ್ ಬಂಧಿತ ಆರ್ಮಿ ವಾಹನದ ಚಾಲಕ. ಬಂಧಿತ ಚಾಲಕ ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದನು. ಅನುಮಾನದ ಮೇಲೆ ಗುಪ್ತಚರ ತಂಡ ರಾಮ್‍ನಿವಾಸ್ ಚಲನವಲನ ಮೇಲೆ ಕಣ್ಣೀಟ್ಟಿತ್ತು. ಸಂಶಯದ ಮೇಲೆ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಜಸ್ಥಾನದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತರೆದಿದ್ದ ರಾಮ್‍ನಿವಾಸ್ ಪಾಕಿಸ್ತಾನದ ಸೇನೆಯ ಜೊತೆ ಸಂಪರ್ಕ ಹೊಂದಿದ್ದನು. ಭಾರತೀಯ ಸೇನೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚಾಲಕ ಪಾಕಿಸ್ತಾನದ ಜೊತೆ ಹಂಚಿಕೊಳ್ಳುತ್ತಿದ್ದನು. ಆರೋಪಿ ವಿಷಯ ಹಂಚಿಕೆ ಪ್ರತಿಫಲವಾಗಿ ಪಾಕಿಸ್ತಾನ ಸೇನಾಧಿಕಾರಿಗಳಿಗೆ ಹಣ ನೀಡುವಂತೆ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನ ಸಹ ಕಳುಹಿಸಿದ್ದನು ಎಂದು ಉಮೇಶ್ ಮಿಶ್ರಾ ತಿಳಿಸಿದ್ದಾರೆ.

    ಬಂಧಿತ ರಾಮ್‍ನಿವಾಸ್ ನಾಗೌರ್ ಜಿಲ್ಲೆಯ ನಿವಾಸಿಯಾಗಿದ್ದು, ಜೈಪುರದ ನಿವಾರೂದಲ್ಲಿರುವ ಸೇನಾ ಕಾರ್ಯಲಯದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಸದ್ಯ ಆರೋಪಿಯನ್ನ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯಾರಿಗೆ, ಯಾವ ವಿಷಯಗಳನ್ನ ರವಾನಿಸುತ್ತಿದ್ದ ಮತ್ತು ಹಣ ಹೇಗೆ ಈತನ ಖಾತೆಗೆ ಬರುತ್ತಿತ್ತು? ಚಾಲಕನಾಗಿದ್ದರೂ ರಾಮನಿವಾಸ್ ಗೆ ಸೇನೆಯ ರಹಸ್ಯ ಮಾಹಿತಿ ಹೇಗೆ ತಲುಪತ್ತಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು

    ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು

    ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಚಾಲಕನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಹೊಸಪೇಟೆ ನಗರದ ರಾಣಿಪೇಟೆಯ ಕಚೇರಿಯನ್ನು ಇಂದು ಸೀಲ್‍ಡೌನ್ ಮಾಡಲಾಗಿದೆ. ಸಚಿವ ಆನಂದ್ ಸಿಂಗ್ ಅವರ ಕಾರು ಚಾಲಕರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಸ್ವಯಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ. ಸೋಂಕು ತಗುಲಿದ ವಾಹನ ಚಾಲಕನನ್ನು ಹೊಸಪೇಟೆ ನಗರದ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರು ಚಾಲಕನ ಕುಟುಂಬ ಸದಸ್ಯರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕರು, ಸಚಿವರ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಅಲ್ಲದೆ ಸಚಿವರ ಕಚೇರಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

  • ಯಾದಗಿರಿ ಡಿಸಿ ಗನ್‍ಮ್ಯಾನ್, ಕಾರು ಚಾಲಕನಿಗೆ ಕೊರೊನಾ

    ಯಾದಗಿರಿ ಡಿಸಿ ಗನ್‍ಮ್ಯಾನ್, ಕಾರು ಚಾಲಕನಿಗೆ ಕೊರೊನಾ

    – ಜಿಲ್ಲಾಡಳಿತ ಭವನ ಸೀಲ್‍ಡೌನ್

    ಯಾದಗಿರಿ: ಕಿಲ್ಲರ್ ಕೊರೊನಾದಿಂದ ಈಗಾಗಲೇ ದೇವಸ್ಥಾನ, ಮಾಲ್, ಚಿತ್ರಮಂದಿರ ಪ್ರವಾಸಿ ಸ್ಥಳಗಳನ್ನು ಮುಚ್ಚಿಸಿದೆ. ಇದೀಗ ಯಾದಗಿರಿ ಜಿಲ್ಲಾಡಳಿತ ಭವನದ ಬಾಗಿಲು ಸಹ ಮುಚ್ಚಲಾಗಿದೆ.

    ಜಿಲ್ಲಾಧಿಕಾರಿ ಕಚೇರಿಯ 20ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ಇರೋದು ಬೆಳಕಿಗೆ ಬಂದಿದೆ. ಇದರಲ್ಲಿ ಜಿಲ್ಲಾಧಿಕಾರಿ ಗನ್‌ಮ್ಯಾನ್ ಮತ್ತು ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಇದರಿಂದ ಇಡೀ ಜಿಲ್ಲಾಡಳಿತ ಭವನಕ್ಕೆ ಆತಂಕ ಎದುರಾಗಿದೆ.

    ಹೀಗಾಗಿ ಇಂದಿನಿಂದ ಮೂರು ದಿನಗಳವರೆಗೆ ಜಿಲ್ಲಾಡಳಿತ ಭವನವನ್ನು ಸೀಲ್‍ಡೌನ್ ಮಾಡಲಾಗಿದೆ. ಭವನದ ಸುತ್ತಮುತ್ತಲಿನ 500 ಮೀಟರ್ ಪ್ರದೇಶವನ್ನು ಬಫರ್ ಝೋನ್ ಮಾಡಲಾಗಿದ್ದು, ಭವನಕ್ಕೆ ನಗರಸಭೆಯಿಂದ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ.

    ಸೋಂಕಿನ ಆತಂಕದ ಮಧ್ಯೆ ಯಾದಗಿರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಸಹ ನಡೆಯುತ್ತಿದೆ. ಹೀಗಾಗಿ ಪಂಚಾಯಿತಿ ಆವರಣದಲ್ಲಿ ಸದಸ್ಯರು ಮತ್ತು ಚುನಾವಣಾ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಕೊರೊನಾ ಆತಂಕದ ನಡುವೆ ಇಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಆಯಾ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  • ಸ್ವಂತ ಹಣದಲ್ಲಿ ಉಚಿತ ಮಾಸ್ಕ್ ವಿತರಿಸಿದ ಡ್ರೈವರ್, ಕಂಡಕ್ಟರ್

    ಸ್ವಂತ ಹಣದಲ್ಲಿ ಉಚಿತ ಮಾಸ್ಕ್ ವಿತರಿಸಿದ ಡ್ರೈವರ್, ಕಂಡಕ್ಟರ್

    ಹುಬ್ಬಳ್ಳಿ: ಪ್ರಯಾಣಿಕರೇ ನಮ್ಮ ದೇವರು ಎಂದು ಹೇಳುವ ಸಾರಿಗೆ ಸಂಸ್ಥೆ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರ ಹಿತಾಸಕ್ತಿಗಾಗಿ ಹೊಸ ಪ್ರಯೋಗವೊಂದನ್ನು ಕೈಗೊಂಡಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಪ್ರಯಾಣಿಕರಿಗೆ ಉಚಿತ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಯರಗುಪ್ಪಿಗೆ ಪ್ರಯಾಣಿಸುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಉಚಿತವಾಗಿ ಮಾಸ್ಕ್ ನೀಡಲಾಗುತ್ತಿದೆ. ಕಂಡಕ್ಟರ್ ಎಂ.ಎಲ್.ನದಾಫ್ ಹಾಗೂ ಚಾಲಕ ಎಚ್.ಟಿ.ಮಾಯನವರ್ ಸ್ವಯಂ ಪ್ರೇರಿತರಾಗಿ ಹಾಗೂ ಸ್ವಂತ ಕರ್ಚಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಮೂಲಕ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ಸಾರಿಗೆ ಸಂಸ್ಥೆ ಅಭಿವೃದ್ಧಿಗೆ ಪ್ರಯಾಣಿಕರೇ ಆಧಾರ ಸ್ಥಂಭ. ಪ್ರಯಾಣಿಕರು ಆರೋಗ್ಯವಾಗಿದ್ದರೆ, ಸಂಸ್ಥೆ ಕೂಡ ಉತ್ತಮ ರೀತಿಯಲ್ಲಿ ಇರುತ್ತದೆ ಎಂಬ ಸುದುದ್ದೇಶದಿಂದ ಚಾಲಕ ಮತ್ತು ಕಂಡಕ್ಟರ್ ಇಬ್ಬರು ಉಚಿತ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಈಗ ರಾಜ್ಯದ ವಿವಿಧ ಮೂಲೆಗಳಿಗೆ ಲಗ್ಗೆ ಇಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಆರೋಗ್ಯದ ಬಗ್ಗೆ ಚಿಂತನೆ ನಡೆಸಿದ್ದು, ಚಾಲಕ ಮತ್ತು ಕಂಡಕ್ಟರ್ ಇಂತಹ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ಕ್ಯಾಬ್ ಚಾಲಕರಿಗೆ ಕೊರೊನಾ ಭಯ – ಎಸಿ ಹಾಕದೇ ಸಂಚಾರ

    ಕ್ಯಾಬ್ ಚಾಲಕರಿಗೆ ಕೊರೊನಾ ಭಯ – ಎಸಿ ಹಾಕದೇ ಸಂಚಾರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊದಲ ಕೊರೊನಾ ವೈರಸ್ ಸೊಂಕು ಖಚಿತವಾಗುತ್ತಿದ್ದಂತೆ ಜನ ಹೈ ಅಲರ್ಟ್ ಆಗಿದ್ದಾರೆ.

    ಈ ಕೊರೊನಾ ವೈಸರ್ ಹೆಸರೇ ಭಯಾನಕವಾಗಿದೆ. ಹೇಗೆ ಬರುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ಕೊರೊನಾ ವೈರಸ್ ಸೊಂಕಿತರ ಸಂಪರ್ಕ ಮಾಡಿದರೆ ಅಲ್ಲ ಅವರ ಬಳಿ ಹೋದರು ವೈರಸ್ ಬರುತ್ತೆ. ಅದಕ್ಕಾಗಿ ಓಲಾ ಉಬರ್ ಡ್ರೈವರ್ ಗಳು ಎಸಿ ಹಾಕುತ್ತಿಲ್ಲ.

    ನಮಗೆ ಆರೋಗ್ಯವೇ ಮುಖ್ಯ ಎಸಿ ಹಾಕಿದರೆ ಉಸಿರಾಡುವ ಗಾಳಿ ಕಾರಿನ ಒಳಗಡೆ ಇರುತ್ತದೆ. ಅದಕ್ಕಾಗಿ ನಾವೂ ಎಸಿ ಬಳಕೆ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಚಾಲಕರು ಹೇಳಿದ್ದಾರೆ. ಇದನ್ನು ಓದಿ: ಈಗ ಅಧಿಕೃತ – ಭಾರತಕ್ಕೆ ಆಗಮಿಸಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ

    ಎಸಿ ಕತೆ ಹೀಗಾದರೆ ಅಪ್ಪಿ ತಪ್ಪಿ ಏರ್‌ಪೋರ್ಟ್ ಡ್ಯುಟಿ ಏನಾದರೂ ಸಿಕ್ಕಿದರೇ ಹೋಗಬೇಕೇ ಬೇಡವೇ ಎಂದು ಯೋಚನೆ ಮಾಡುತ್ತಿದ್ದಾರೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲೇ ಕೊರೊನಾ ಸೋಂಕು ತಗಲಿರುವುದರಿಂದ ವಿಮಾನ ನಿಲ್ದಾಣದ ಕಡೆ ಹೋಗಲು ಬಹಳ ಅಲೋಚನೆ ಮಾಡುತ್ತಿದ್ದಾರೆ.

  • ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಿರುವನಂತಪುರಂ: ತಡರಾತ್ರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸುರಕ್ಷತೆಗಾಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿಕೊಂಡು ಕಾದು ಕುಳಿತ ಬಸ್ ಕಂಡಕ್ಟರ್ ಮತ್ತು ಡ್ರೈವರ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಇತ್ತೀಚಿಗೆ ದೇಶಾದ್ಯಂತ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮನೆ ಮಾಡಿದೆ. ಇದರ ಬೆನ್ನಲ್ಲೇ ಕೇರಳ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡ್ರೈವರ್ ಡೆನ್ನಿಸ್ ಕ್ಸೇವಿಯರ್ ಓರ್ವ ವಿದ್ಯಾರ್ಥಿನಿಗೆ ಮಾಡಿರುವ ಸಹಾಯಕ್ಕೆ ಎಲ್ಲರೂ ಮೆಚ್ಚಿಕೊಂಡಾಡಿದ್ದಾರೆ.

    ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಫಿಲ್ ಓದುತ್ತಿರುವ ಕೇರಳದ ಕಣ್ಣೂರಿನ ವಿದ್ಯಾರ್ಥಿ ಎಲ್ಸಿನಾ ತನ್ನ ಸಂಶೋಧನೆ ಕೆಲಸದ ನಿಮಿತ್ತ ಕಳೆದ ಮಂಗಳವಾರ ಸರ್ಕಾರಿ ಬಸ್ ನಲ್ಲಿ ಕೊಟ್ಟಾಯಂ ಜಿಲ್ಲೆಯ ಪೊಡಿಮಟ್ಟಂಗೆ ತೆರಳಿದ್ದಾಳೆ. ಈ ವೇಳೆ ಅವಳು ಪೊಡಿಮಟ್ಟಂ ಹತ್ತಿರದ ಕಂಜರಪಲ್ಲಿ ಬಸ್ ನಿಲ್ದಾಣಕ್ಕೆ ಬರುವುದರೊಳಗೆ ರಾತ್ರಿ 11 ಗಂಟೆಯಾಗಿದೆ. ಆ ದಿನ ಅಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ನಿಲ್ದಾಣದ ಬಳಿಯಿದ್ದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

    ಈ ವೇಳೆ ಅಲ್ಲಿ ಎಲ್ಸಿನಾ ಒಬ್ಬಳೇ ಆ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಜನರೇ ಇಲ್ಲದ ಸ್ಥಳದಲ್ಲಿ ಒಬ್ಬಳೇ ಹೆಣ್ಣುಮಗಳನ್ನು ಕೆಳಗಿಳಿಸಬಾರದು ಎಂದು ಡ್ರೈವರ್ ಮತ್ತು ಕಂಡಕ್ಟರ್ ಅದೇ ನಿಲ್ದಾಣದಲ್ಲಿ ಬಸ್ ಸಿಲ್ಲಿಸಿಕೊಂಡು ಎಲ್ಸಿನಾಳನ್ನು ಕರೆದುಕೊಂಡು ಹೋಗಲು ಅವಳ ಸಂಬಂಧಿ ಬರುವವರೆಗೂ ಕಾಯ್ದಿದ್ದಾರೆ. ಇದಕ್ಕೆ ಬಸ್‍ನಲ್ಲಿ ಇದ್ದ ಸಹ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಕೆಲ ಸಮಯದ ನಂತರ ಎಲ್ಸಿನಾ ಸಂಬಂಧಿಯೊಬ್ಬರು ಸ್ಥಳಕ್ಕೆ ಬಂದು ಅವಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡೆನ್ನಿಸ್ ಕ್ಸೇವಿಯರ್ ಅವರು ರಾತ್ರಿ ವೇಳೆ ವಿದ್ಯಾರ್ಥಿನಿಯ ಭದ್ರತೆಯ ಬಗ್ಗೆ ತೋರಿದ ಕಾಳಜಿಗೆ ಮತ್ತು ಸಹ ಪ್ರಯಾಣಿಕರ ತಾಳ್ಮೆಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೊಟ್ಟಾಯಂ ಜಿಲ್ಲೆಯ ಪುಂಜಾರ್ ತಾಲೂಕಿನ ಶಾಸಕರಾದ ಪಿ.ಸಿ. ಜಾರ್ಜ್ ಅವರು ಶಜುದ್ದೀನ್ ಮತ್ತು ಕ್ಸೇವಿಯರ್ ಅವರನ್ನು ಅಭಿನಂದಿಸಿದ್ದಾರೆ.

  • ಟ್ರಿಪ್ ಕ್ಯಾನ್ಸಲ್ ಮಾಡದ್ದಕ್ಕೆ ಊಬರ್ ಚಾಲಕನಿಂದ ಟೆಕ್ಕಿ ಮೇಲೆ ಹಲ್ಲೆ

    ಟ್ರಿಪ್ ಕ್ಯಾನ್ಸಲ್ ಮಾಡದ್ದಕ್ಕೆ ಊಬರ್ ಚಾಲಕನಿಂದ ಟೆಕ್ಕಿ ಮೇಲೆ ಹಲ್ಲೆ

    ಬೆಂಗಳೂರು: ಶುಲ್ಕದ ಬಗ್ಗೆ ವಿವಾದ ನಡೆದು ಊಬರ್ ಚಾಲಕನೋರ್ವ 23 ವರ್ಷದ ಸಾಫ್ಟ್‍ವೇರ್ ಎಂಜಿನಿಯರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ನಗರದ ಹೊರ ವಲಯದಲ್ಲಿ ನಡೆದಿದೆ.

    ನಗರದ ಟೆಕ್ಕಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಬುಕ್ ಮಾಡಿದ್ದು, ಬುಕ್ ಮಾಡಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ಡ್ರೈವರ್ ಕೇಳಿದ್ದನ್ನು ಪ್ರಶ್ನಿಸಿದ್ದಾರೆ. ಇದೇ ವಿವಾದವಾಗಿ ಬೆಳೆದು ಚಾಲಕನು ಎಂಜಿನಿಯರ್‍ಗೆ ರಕ್ತ ಬರುವಂತೆ ಮೂಗಿಗೆ ಗುದ್ದಿದ್ದಾನೆ. ಈ ಕುರಿತು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 323(ಹಲ್ಲೆ), 341(ಸಂಯಮ ಕಳೆದುಕೊಂಡಿರುವುದು), 504(ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು) ಅಡಿ ಎಫ್‍ಐಆರ್ ದಾಖಲಾಗಿದೆ.

    ಡ್ರೈವರ್ ಟ್ರಿಪ್ ಕ್ಯಾನ್ಸಲ್ ಮಾಡುವಂತೆ ಕೇಳಿಕೊಂಡಿದ್ದು, ಆಗ ಗ್ರಾಹಕ ಎಂಜಿನಿಯರ್ ಕ್ಯಾನ್ಸಲ್ ಮಾಡುವುದಿಲ್ಲ. ನೀವು ಇದಕ್ಕೆ ದಂಡ ಹಾಕುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ವಿವಾದ ಸೃಷ್ಟಿಯಾಗಿದೆ. ನಂತರ ಕಾರ್ ಡ್ರೈವರ್ ಹಿಂದೆ ಹೋಗಿ ಡಿಕ್ಕಿಯಲ್ಲಿದ್ದ ಎಂಜಿನಿಯರ್ ಬ್ಯಾಗ್ ಹಾಗೂ ವಸ್ತುಗಳನ್ನು ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಈ ರೀತಿ ವರ್ತಿಸಿದರೆ ಸ್ಮಾರ್ಟ್‍ಫೋನ್‍ನ ಆ್ಯಪ್‍ನಲ್ಲಿ ಚಾಲಕ ಅಶಿಸ್ತಿನಿಂದ ವರ್ತಿಸಿದ್ದಾನೆ ಎಂದು ದೂರು ನೀಡುತ್ತೇನೆ ಎಂದು ಗ್ರಾಹಕ ಎಚ್ಚರಿಸಿದ್ದಾರೆ. ಇಷ್ಟಕ್ಕೆ ಕೋಪಿತನಾದ ಡ್ರೈವರ್ ಗ್ರಾಹಕನ ಮೂಗಿಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗ್ರಾಹಕನ ಮೂಗಿನ ಮೂಳೆ ಸರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದುರ್ಗಾ ಪೂಜೆಗಾಗಿ ಕೋಲ್ಕತ್ತಾಗೆ ಹೊರಟಿದ್ದಾಗ ಈ ಘಟನೆ ನಡೆದಿದ್ದರಿಂದ ತಡವಾಗಿದೆ. ಕ್ಯಾಬ್ ಡ್ರೈವರ್ ಇಳಿಸಿದ ನಂತರ ಇನ್ನೊಂದು ಕ್ಯಾಬ್ ಬುಕ್ ಮಾಡಿಕೊಂಡು ಹೋದರೂ ಸಹ ವಿಮಾನ ತಪ್ಪಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ಹರೀಶ್.ಕೆ.ಎಸ್. ಎಂದು ಗುರುತಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಚಾಲಕನನ್ನು ಇನ್ನೂ ಪತ್ತೆ ಹಚ್ಚಿಲ್ಲ. ಆದರೆ ದೂರಿನ ಆಧಾರದ ಮೇಲೆ ಆರೋಪಿಯನ್ನು ಆನ್‍ಲೈನ್ ವೇದಿಕೆಯಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಕ್ಯಾಬ್ ಅಗ್ರಿಗೇಟರ್ ಖಚಿತಪಡಿಸಿದ್ದಾರೆ.

    ನಮಗೆ ಸವಾರರ ಸುರಕ್ಷತೆ ಅತ್ಯುನ್ನತವಾದದ್ದು, ಈ ಘಟನೆ ಕುರಿತು ತಿಳಿದ ನಂತರ ಚಾಲಕನನ್ನು ಪಾಲುದಾರಿಕೆಯ ಅಪ್ಲಿಕೇಶನ್‍ನಿಂದ ತೆಗೆದು ಹಾಕಿದ್ದೇವೆ ಎಂದು ಉಬರ್ ವಕ್ತಾರರು ದೃಢಪಡಿಸಿದ್ದಾರೆ.