Tag: ಡ್ರೈವರ್‌ ಲೆಸ್‌ ಮೆಟ್ರೋ

  • ಡ್ರೈವರ್‌ಲೆಸ್ ಮೆಟ್ರೋದ ಫಸ್ಟ್ ಫೋಟೋ ರಿವೀಲ್

    ಡ್ರೈವರ್‌ಲೆಸ್ ಮೆಟ್ರೋದ ಫಸ್ಟ್ ಫೋಟೋ ರಿವೀಲ್

    ಬೆಂಗಳೂರು: ನಮ್ಮ ಮೆಟ್ರೋ ಯೆಲ್ಲೋ ಮಾರ್ಗದ (Namma Metro Yellow Line) ಮೊದಲ ಡ್ರೈವರ್ ಲೆಸ್ ಮೆಟ್ರೋದ ಮೊದಲ ಫೋಟೋ ರಿವೀಲ್‌ ಆಗಿದೆ.

    ಹೆಬ್ಬಗೋಡಿ ಡಿಪೋದಲ್ಲಿರುವ ಮೆಟ್ರೋದ ಮೊದಲ ಫೋಟೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

    ಚೀನಾ ತಯಾರಿಸಿರುವ ಈ ಮೆಟ್ರೋದ ಬೋಗಿಗಳನ್ನು ಫೆಬ್ರವರಿ 6 ರಂದು ಸಮುದ್ರ ಮಾರ್ಗವಾಗಿ ಚೆನ್ನೈಗೆ ಬಂದರು ಮೂಲಕ ಲಾರಿಗಳಲ್ಲಿ ಬೆಂಗಳೂರಿಗೆ ತರಲಾಗಿತ್ತು. ಸದ್ಯ ರಾಜ್ಯದ ಮೊದಲ ಡ್ರೈವರ್ ಲೆಸ್‌ ಮೆಟ್ರೋ ರೈಲು ಸಂಚಾರಕ್ಕೆ ಸಜ್ಜಾಗಿದೆ. ಇದನ್ನೂ ಓದಿ: ಕಿಮ್‌ ಜಾಂಗ್‌ ಉನ್‌ಗೆ ವಿಶೇಷ ಕಾರು ಗಿಫ್ಟ್‌ ಕೊಟ್ಟ ರಷ್ಯಾ ಅಧ್ಯಕ್ಷ!

    ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ಚಾಲಕ ರಹಿತ ಮೆಟ್ರೋ ಓಡಾಡಲಿದ್ದು, ಚೀನಾದಿಂದ ಕೋಚ್ ತರಿಸಲಾಗಿದೆ. ಇನ್ನು ಮೂರು- ನಾಲ್ಕು ತಿಂಗಳ ಕಾಲ ಟೆಸ್ಟಿಂಗ್ ಪ್ರಕ್ರಿಯೆ ನಡೆಯಬೇಕಾಗಿದೆ. ಟ್ರ್ಯಾಕ್​​ನಲ್ಲಿ ಸುಮಾರು 15 ಮಾದರಿ ಪರೀಕ್ಷೆಗಳು ನಡೆಯಬೇಕಿದೆ. ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಯ ಬಳಿಕ ಹಳದಿ ಮಾರ್ಗದಲ್ಲಿ ಕಮಾಲ್ ಸೃಷ್ಟಿಸಲಿದೆ.

    ಮುಂದಿನ ದಿನಗಳಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗ, ಏರ್‌ಪೋರ್ಟ್‌ ಮಾರ್ಗದಲ್ಲೂ ಡ್ರೈವರ್ ಲೆಸ್‌ ಮೆಟ್ರೋ ಓಡಾಟ ನಡೆಸಲು ಸಕಲ ತಯಾರಿ ನಡೆಸಲಾಗಿದೆ. ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಚಿಂತನೆಯನ್ನು BMRCL ಅಧಿಕಾರಿಗಳು ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.