Tag: ಡ್ರೈನೇಜ್

  • ಡ್ರೈನೇಜ್ ರಿಪೇರಿ ವೇಳೆ ಕುಸಿದು ಬಿದ್ದ ಮಣ್ಣು- ಪೌರ ಕಾರ್ಮಿಕ ಅಸ್ವಸ್ಥ

    ಡ್ರೈನೇಜ್ ರಿಪೇರಿ ವೇಳೆ ಕುಸಿದು ಬಿದ್ದ ಮಣ್ಣು- ಪೌರ ಕಾರ್ಮಿಕ ಅಸ್ವಸ್ಥ

    ವಿಜಯಪುರ: ಡ್ರೈನೇಜ್ ರಿಪೇರಿ ವೇಳೆ ಮಣ್ಣು ಕುಸಿದು ಬಿದ್ದ ಕಾರಣ ಡ್ರೈನೇಜ್ ಒಳಗೆ ಪೌರ ಕಾರ್ಮಿಕ ಸಿಲುಕಿದ ಘಟನೆ ವಿಜಯಪುರದ ಇಂಡಿ ಪಟ್ಟಣದ 17ನೇ ವಾರ್ಡ್ ನಲ್ಲಿ ನಡೆದಿದೆ.

    ಡ್ರೈನೇಜ್‍ ಗುಂಡಿ ತೊಡುವ ಕೆಲಸ ಮಾಡುವ ವೇಳೆ ಮಣ್ಣು ಕುಸಿದು ಮೈಮೇಲೆ ಬಿದ್ದ ಕಾರಣ ಪೌರ ಕಾರ್ಮಿಕ ಅಶೋಕ್ ಕಡಿಮನಿ (42) ಅಸ್ವಸ್ಥಗೊಂಡು ಪರದಾಡಿದ್ದಾರೆ. ಅಸ್ವಸ್ಥಗೊಂಡಿದ್ದನ್ನು ಕಂಡ ಸ್ಥಳದಲ್ಲಿದ್ದ ಇತರೆ ಪೌರ ಕಾರ್ಮಿಕರು ಮಣ್ಣು ತಗೆದು ಅಶೋಕ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆ ಕಾರ್ಮಿಕನ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಕಾರ್ಮಿಕನನ್ನು ತುರ್ತು ಚಿಕಿತ್ಸೆಗಾಗಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೌರ ಕಾರ್ಮಿಕರ ಸಮಯ ಪ್ರಜ್ಞೆಯಿಂದಾಗಿ ಅಶೋಕ್‍ನನ್ನು ಆಸ್ಪತ್ರೆ ಸಾಗಿಸಲಾಗಿದೆ. ಇಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಳೆಯಿಂದ ಚರಂಡಿ ಒಳಗೆ ಬಿದ್ದ ಶ್ವಾನವನ್ನು ರಕ್ಷಿಸಿದ ರೆಸ್ಕ್ಯೂ ಟೀಮ್

    ಮಳೆಯಿಂದ ಚರಂಡಿ ಒಳಗೆ ಬಿದ್ದ ಶ್ವಾನವನ್ನು ರಕ್ಷಿಸಿದ ರೆಸ್ಕ್ಯೂ ಟೀಮ್

    ಬೆಂಗಳೂರು: ಮಳೆಯಿಂದ ಚರಂಡಿಗೆ ಒಳಗೆ ಬಿದ್ದ ಶ್ವಾನವನ್ನು ಸಿವಿಲ್ ಡಿಫೆನ್ಸ್ ಕ್ವಿಕ್ ರೆಸ್ಕ್ಯೂ ಟೀಮ್ ರಕ್ಷಿಸಿದೆ.

    ಸಿಲಿಕಾನ್ ಸಿಟಿಯಲ್ಲಿ ಒಂದೇ ಸಮನೆ ಸುರಿದ ಮಳೆಯಿಂದ ತಪ್ಪಿಸಿಕೊಳ್ಳಲು ಹೋಗಿ ವಿದ್ಯಾರಣ್ಯಪುರದಲ್ಲಿ ನಾಯಿಯೊಂದು ತೆರೆದ ಸ್ಲ್ಯಾಬ್ ನಿಂದಾಗಿ ಚರಂಡಿ ಒಳಗೆ ಹೋಗಿದೆ. ನಂತರ ಮೇಲೆ ಬರಲಾರದೇ ಸುಮಾರು ಎರಡು ಗಂಟೆ ಒದ್ದಾಡಿದೆ.

    ಇದನ್ನು ಕಂಡ ಸ್ಥಳೀಯರು ಕೊನೆಗೆ ಸಿವಿಲ್ ಡಿಫೆನ್ಸ್ ಕ್ವಿಕ್ ರೆಸ್ಕ್ಯೂ ಟೀಮ್‍ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಟೀಮ್ ಡ್ರೈನೇಜ್‍ನಲ್ಲಿ ಒದ್ದಾಡಿ ಗೋಳಿಡುತ್ತಿದ್ದ ನಾಯಿಯನ್ನು ಅರ್ಧಗಂಟೆ ಕಾರ್ಯಚರಣೆ ಮಾಡಿ ರಕ್ಷಿಸಿದ್ದಾರೆ. ಚರಂಡಿಯಿಂದ  ಹೊರ ಬರುತ್ತಿದ್ದಂತೆ ನಾಯಿ ಖುಷಿಯಿಂದ ರಕ್ಷಿಸಿದ ಟೀಮ್ ನತ್ತ ಕೃತಜ್ಞತಾ ದೃಷ್ಟಿ ಬೀರಿದೆ.

  • ಬಸ್ ರಿಪೇರಿ ಮಾಡೋ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ!

    ಬಸ್ ರಿಪೇರಿ ಮಾಡೋ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ!

    ಬಳ್ಳಾರಿ: ಸಾರಿಗೆ ಬಸ್ ರಿಪೇರಿ ಮಾಡುವ ಮೆಕ್ಯಾನಿಕಲ್ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಮಾಡುವ ಶಿಕ್ಷೆ ಕೊಟ್ಟ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೌದು. ಸಾರಿಗೆ ಇಲಾಖೆ ಅಧಿಕಾರಿಗಳ ಅಮಾನುಷ ವರ್ತನೆಯಿಂದ ಮೆಕ್ಯಾನಿಕಲ್ ಸಿಬ್ಬಂದಿ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ ಅನುಭವಿಸಿದ ಘಟನೆ ಗುರುವಾರ ನಡೆದಿದೆ. ಬಳ್ಳಾರಿಯ 2ಡಿಪೋ ಘಟಕದಲ್ಲಿ ನಿನ್ನೆ 10 ಕ್ಕೂ ಹೆಚ್ಚು ಸಾರಿಗೆ ಮೆಕ್ಯಾನಿಕಲ್ ಸಿಬ್ಬಂದಿ ಡಿಪೋದಲ್ಲಿನ ಡ್ರೈನೇಜ್ ಕ್ಲೀನ್ ಮಾಡಿದ್ದಾರೆ.

    ಸ್ವತಃ ಸಾರಿಗೆ ಡಿಸಿ ಆದೇಶದ ಮೇರೆಗೆ ಡಿಎಂಇ ಅಧಿಕಾರಿಯೇ ಮೆಕ್ಯಾನಿಕಲ್ ಗಳನ್ನು ಮುಂದಿರಿಸಿಕೊಂಡು ಡ್ರೈನೇಜ್ ಅನ್ನು ಕ್ಲೀನ್ ಮಾಡಿಸಿದ್ದಾರೆ. ಡ್ರೈನೇಜ್ ಕ್ಲೀನ್ ಮಾಡಲು ನಿರಾಕರಿಸಿದಸಿಬ್ಬಂದಿಗೆ ಎತ್ತಂಗಡಿ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅನಿವಾರ್ಯವಾಗಿ ಕ್ಲೀನಿಂಗ್ ಮಾಡಿದ್ದಾರೆ.

    ಸಾರಿಗೆ ಸಿಬ್ಬಂದಿಗೆ ಡ್ರೈನೇಜ್ ಕ್ಲೀನ್ ಮಾಡೋ ಕೆಲಸ ಮಾಡಿಸಿದ್ದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿಯಿಂದ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಡ್ರೈನೇಜ್ ಕ್ಲೀನಿಂಗ್ ನ್ನು ಹೊರಗಿನವರಿಗೆ ವಹಿಸಿದ್ರೆ 25 ಸಾವಿರ ರೂಪಾಯಿ ಖರ್ಚಾಗುತ್ತೆ ಅನ್ನೋ ಕಾರಣದಿಂದ ಈ ರೀತಿಯಾಗಿ ಸಿಬ್ಬಂದಿಗೆ ಶಿಕ್ಷೆ ನೀಡಿರುವುದಾಗಿ ತಿಳಿದುಬಂದಿದೆ.

  • ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆ

    ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆ

    ಚಿಕ್ಕಬಳ್ಳಾಪುರ: ಖಾಸಗಿ ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಮಾನಸ ಖಾಸಗಿ ಆಸ್ಪತ್ರೆಯ ಚರಂಡಿಯಲ್ಲಿ ಭ್ರೂಣ ಶಿಶು ಪತ್ತೆಯಾಗಿದ್ದು, ಇದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿಯೇ ಅಬಾರ್ಷನ್ ಮಾಡಿ ಶಿಶುವನ್ನ ಚರಂಡಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಚರಂಡಿಯಲ್ಲಿ ಪತ್ತೆಯಾದ ಭ್ರೂಣ ಶಿಶುವನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.