Tag: ಡ್ರೆಸ್ ಕೋಡ್

  • ವಿಧಾನಸಭೆಯಲ್ಲಿ ಡ್ರೆಸ್ ಕೋಡ್ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ

    ವಿಧಾನಸಭೆಯಲ್ಲಿ ಡ್ರೆಸ್ ಕೋಡ್ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆಯಲ್ಲಿ ಪದವಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು. ಚಾಮರಾಜನಗರದಲ್ಲಿ ನಿನ್ನೆ ಅಶ್ವಥ್ ನಾರಾಯಣ್ ಡಿಗ್ರಿ ಕಾಲೇಜ್‍ಗಳಲ್ಲಿ ಸಮವಸ್ತ್ರ ಕಡ್ಡಾಯ ಅಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡ್ಬೇಕು. ಅದಕ್ಕೆ ಬದ್ಧರಾಗಿರಬೇಕು ಅಂದ್ರು.

    ಸಿಎಂ ಬೊಮ್ಮಾಯಿ ಉತ್ತರಿಸಿ, ಎಲ್ಲಿ ಡ್ರೆಸ್ ಕೋಡ್ ಇದೆ. ಅಲ್ಲಿ ನಿಯಮ ಫಾಲೋ ಮಾಡಿ ಅಂತ ಹೈಕೋರ್ಟ್ ಆದೇಶವೂ ಸ್ಪಷ್ಟವಾಗಿದೆ. ಉನ್ನತ ಶಿಕ್ಷಣ ಸಚಿವರು ಕ್ಲಿಯರ್ ಆಗಿ ಹೇಳಿದ್ದಾರೆ. ಅದಕ್ಕೆ ಮತ್ತೆ ಸ್ಪಷ್ಟೀಕರಣ ಅಗತ್ಯ ಇಲ್ಲ ಅಂದ್ರು. ಸಚಿವರು ಹೇಳಿದ್ದು ಸರಿ, ನೀವು ಸ್ಪಷ್ಟನೆ ಕೊಡಿ ಅಂತ ಸಿದ್ದರಾಮಯ್ಯ ಕೇಳಿದ್ರು. ಸಚಿವರೇ ಹೇಳಿದ್ಮೇಲೆ ನನ್ನ ಸ್ಪಷ್ಟನೆ ಅನಗತ್ಯ ಅಂತ ಸಿಎಂ ಉತ್ತರಿಸಿದ್ರು.

    ಇತ್ತ ಸದನದಲ್ಲಿ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿ ಸರಿಯಲ್ಲ ಅಂತ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ. ರಾಷ್ಟ್ರಧ್ವಜವನ್ನು ರಾಜಕೀಯ ತೆವಲಿಗೆ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಕಾನೂನಾತ್ಮಕವಾಗಿ ಈಶ್ವರಪ್ಪನವರು ಮಾತನಾಡಿರುವುದರಲ್ಲಿ ತಪ್ಪಿಲ್ಲ ಅಂದ್ರು. ಈಶ್ವರಪ್ಪ ಮಾತಾಡಿ, ನಾನು ಭಗವಾಧ್ವಜ ಹಾರಿಸಿದ್ದೇನೆ ಅಂತ ಹೇಳಿದ್ದರೆ ಈಗಲೇ ರಾಜೀನಾಮೆ ಕೊಡುತ್ತೇನೆ ಅಂದ್ರು.

    ಘಟನೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ-ಡಿಕೆಶಿ, ಈಶ್ವರಪ್ಪ ಅವರನ್ನು ಅಮಾನತು ಮಾಡದಿದ್ದರೆ ನಾಳೆ ಬೆಳಗ್ಗೆ 11 ಗಂಟೆಗೆ ಅಹೋರಾತ್ರಿ ಧರಣಿ ಬಗ್ಗೆ ತೀರ್ಮಾನ ಮಾಡ್ತೇವೆ. ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಯಾವ ಪುರುಷಾರ್ಥಕ್ಕೆ ಧರಣಿ ಮಾಡ್ತಿದ್ದಾರೆ. ಓಟ್‍ಗಾಗಿ 2 ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನೇ ಹಾಳು ಮಾಡಲು ಹೊರಟಿವೆ ಅಂತ ವಾಗ್ದಾಳಿ ನಡೆಸಿದ್ರು.

  • ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

    ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

    ಕೋಲ್ಕತ್ತಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ಬ್ಯಾಂಕ್ ಗೆ ಗ್ರಾಹಕ ಇತ್ತೀಚೆಗೆ ಶಾರ್ಟ್ಸ್ ಧರಿಸಿದ್ದರಿಂದ ಅವರನ್ನು ಒಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ.

    ಬ್ಯಾಂಕ್ ಒಳಗೆ ಪ್ರವೇಶಿಸಲು ಶಾರ್ಟ್ಸ್ ಯೋಗ್ಯವಲ್ಲ, ಪ್ಯಾಂಟ್ ಧರಿಸಿ ನಂತರ ನೀವು ಬನ್ನಿ ಎಂದು ಎಸ್‍ಬಿಐ ಸಿಬ್ಬಂದಿ ಗ್ರಾಹಕನ ಬಳಿ ಜಗಳವಾಡಿ ಅಲ್ಲಿಂದ ಕಳುಹಿಸಿದ್ದಾರೆ. ಈ ಹಿನ್ನೆಲೆ ಕೋಪಕೊಂಡ ಕೋಲ್ಕತ್ತಾದದ ಗ್ರಾಹಕ ಆಶಿಶ್ ಟ್ವಿಟ್ಟರ್ ನಲ್ಲಿ ಎಸ್‍ಬಿಐ ಅನ್ನು ಟ್ಯಾಗ್ ಮಾಡಿದ್ದು, ಬ್ಯಾಂಕ್‍ಗೆ ಭೇಟಿ ನೀಡಲು ಡ್ರೆಸ್ ಕೋಡ್ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ಟ್ವಟ್ಟರ್ ನಲ್ಲಿ ವಿವರವಾಗಿ ಬರೆದ ಆಶಿಶ್, ಡ್ರೆಸ್ ಕೋಡ್ ವಿಚಾರದಲ್ಲಿ ನನಗೂ ಮತ್ತೆ ಬ್ಯಾಂಕ್ ಸಿಬ್ಬಂದಿಗೂ ವಾಗ್ವಾದ ನಡೆಯಿತು. ಈ ವೇಳೆ ನಾನು ನನ್ನ ಖಾತೆಯನ್ನು ಮುಚ್ಚಲು ಬ್ಯಾಂಕ್‍ಗೆ ಹೋಗಿದ್ದೆ. ನಾನು ಹೋಗಿ ಇನ್ನೂ ಯಾವುದೇ ರೀತಿ ಅಲ್ಲಿ ಮಾತು ಸಹ ಹಾಡಿರಲಿಲ್ಲ. ಶಾಖೆಯನ್ನು ಪ್ರವೇಶಿಸಿದ ತಕ್ಷಣ, ನನ್ನನ್ನು ಶಾಟ್ರ್ಸ್ ಧರಿಸಿದ್ದಿರಾ, ಪ್ಯಾಂಟ್‍ನಲ್ಲಿ ಬನ್ನಿ ಎಂದು ಸಿಬ್ಬಂದಿ ಹೇಳಿದನು. ನಾನು ಈ ನಿಯಮವನ್ನು ಎಲ್ಲಿ ಬರೆದಿಲ್ಲ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದೆ. ಆದರೆ ಆತ ನನ್ನ ಬಳಿ ಜಗಳವಾಡಲು ಪ್ರಾರಂಭಿಸಿದ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:  ಕ್ರಿಸ್‍ಮಸ್ ಮೆರವಣೆಗೆಯಲ್ಲಿ ಭಾರೀ ಅಪಘಾತ – 20 ಜನರಿಗೆ ತೀವ್ರಗಾಯ

    ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಬ್ಯಾಂಕ್‍ನ ಇತರ ಶಾಖೆಗಳಲ್ಲಿ ತಮಗೆ ಆದ ಇದೇ ರೀತಿಯ ಘಟನೆಯನ್ನು ಹಂಚಿಕೊಂಡಿದ್ದಾರೆ.

    ಆಶಿಶ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಎಸ್‍ಬಿಐ, ನಾವು ನಿಮ್ಮ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ನೀತಿ ಅಥವಾ ನಿಗದಿತ ಡ್ರೆಸ್ ಕೋಡ್ ಇಲ್ಲ. ಅವರು ತಮ್ಮ ಆಯ್ಕೆಯ ಪ್ರಕಾರ ಡ್ರೆಸ್ ಮಾಡಬಹುದು ಮತ್ತು ಬ್ಯಾಂಕ್ ಶಾಖೆಯಂತಹ ಸಾರ್ವಜನಿಕ ಸ್ಥಳಕ್ಕಾಗಿ ಸ್ಥಳೀಯವಾಗಿ ಸ್ವೀಕಾರಾರ್ಹವಾದ ಸಂಪ್ರದಾಯ ಮತ್ತು ಸಂಸ್ಕøತಿಯನ್ನು ಪರಿಗಣಿಸಬಹುದು. ನೀವು ಈ ಸಮಸ್ಯೆಯನ್ನು ಎದುರಿಸಿದ ಶಾಖೆಯ ಕೋಡ್ ಅಥವಾ ಹೆಸರನ್ನು ಹಂಚಿಕೊಳ್ಳಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ನಾವು ಇದನ್ನು ಪರಿಶೀಲಿಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

  • ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ

    ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ

    ಮಂಗಳೂರು: ದೇವಸ್ಥಾನಗಳಿಗೆ ಭಕ್ತರು ತಮ್ಮಿಷ್ಟದಂತೆ ಡ್ರೆಸ್ ತೊಟ್ಟು ಬರುತ್ತಾರೆ. ಆದರೆ ಇದು ಕೆಲವು ಮಂದಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಗೆ ಸರ್ಕಾರಕ್ಕೆ ತರಲು ಒತ್ತಾಯಿಸಿದ್ದಾರೆ. ಅದರಲ್ಲೂ ವಿಶ್ವ ಹಿಂದೂ ಪರಿಷತ್, ರಾಜ್ಯದ ನಂಬರ್ ಒನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಪಣತೊಟ್ಟಿದೆ.

    ನೆರೆಯ ರಾಜ್ಯಗಳಾದ ಕೇರಳ ಮತ್ತು ಆಂಧ್ರದಲ್ಲಿರುವಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸರ್ಕಾರವನ್ನು ಆಗ್ರಹಿಸಿದೆ. ಇದಕ್ಕೆ ಪೂರ್ವಭಾವಿ ಎಂಬಂತೆ ರಾಜ್ಯದ ನಂಬರ್ ಒನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದು, ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲ ಭಕ್ತರು ಅಸಭ್ಯವಾಗಿ ಡ್ರೆಸ್ ಹಾಕುವ ಬಗ್ಗೆ ಕೆಲ ಭಕ್ತ ಗಣ ಸ್ಥಳೀಯ ವಿಎಚ್‌ಪಿ ಮುಖಂಡರ ಬಳಿ ದೂರು ಕೊಟ್ಟಿದ್ದು, ಇದೇ ದೂರಿನ ಅನುಸಾರವಾಗಿ ವಿಎಚ್‍ಪಿ ಮತ್ತು ಬಜರಂಗ ದಳದ ಪ್ರಮುಖರು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಗೆ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಮನವಿ ಮಾಡಿದೆ.

    ಕೆಲವರ ಡ್ರೆಸ್ ಕೋಡ್ ನಿಂದ ಭಕ್ತರ ಮನಸ್ಸು ಚಂಚಲಗೊಳ್ಳುತ್ತಿದ್ದು, ಪುರುಷರು ಪಂಚೆ ಅಥವಾ ಧೋತಿ, ಮಹಿಳೆಯರು ಸೀರೆಯಲ್ಲಿ ದೇವಸ್ಥಾನಕ್ಕೆ ಬರಲು ಆದೇಶಿಸುವಂತೆ ಮನವಿ ಮಾಡಲಾಗಿದೆ ಎಂದು ವಿಎಚ್‍ಪಿಯ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

    ಕಾಂಗ್ರೆಸ್ ಮಾತ್ರ ವಿಎಚ್‍ಪಿ ಮನವಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಭಕ್ತರ ಒತ್ತಡ ಹೇರಿಕೆಯ ಕೆಲಸವಾಗುತ್ತಿದ್ದು, ಭಕ್ತರ ಸ್ವಾತಂತ್ರ್ಯಕ್ಕೆ ಬಿಟ್ಟು ಬಿಡಬೇಕು. ಸರ್ಕಾರ ದೇವಸ್ಥಾನಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಭಕ್ತರು ಈ ಹಿಂದೆ ಬರುತ್ತಿದ್ದಂತೆಯೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

    ಈ ಗೊಂದಲ ಬಗ್ಗೆ ಸರ್ಕಾರ ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಆದರೆ ಹಲವು ದೇವಸ್ಥಾನಗಳಿಂದ ವಸ್ತ್ರ ಸಂಹಿತೆ ಜಾರಿಗೊಳಿಸುವ ಬಗ್ಗೆ ಮನವಿಗಳು ಬಂದಿದ್ದು, ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಆದರೆ ಸರ್ಕಾರ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮ ವಿಧಿಸುತ್ತಾ ಅಥವಾ ಭಕ್ತರ ಇಷ್ಟಾನುಸಾರವಾಗಿ ಬಿಟ್ಟುಕೊಡುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಡ್ರೆಸ್ ಕೋಡ್..!

    ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಡ್ರೆಸ್ ಕೋಡ್..!

    ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ನೂತನ ಡ್ರೆಸ್ ಕೋಡ್ ಮಾಡಲಾಗಿದ್ದು, ಇದರಿಂದ ಕಾಂಗ್ರೆಸ್ ನಾಯಕರು ಮೀಟೂಗೆ ಹೆದರಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಇನ್ನು ಮುಂದೆ ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತರು ತುಟಿಗೆ ಲಿಪ್‍ಸ್ಟಿಕ್, ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರುವಂತಿಲ್ಲ. ಅಷ್ಟೇ ಅಲ್ಲದೇ ಉಡೋ ಸೀರೆ ಕೂಡ ಮೈ ಮುಚ್ಚಬೇಕು. ಹಾಕೋ ಬ್ಲೌಸ್ ಕುತ್ತಿಗೆ ಮುಚ್ಚಬೇಕು. ಸ್ಕರ್ಟ್, ಸ್ಲೀವ್ ಲೆಸ್ ಇಂತಹ ಉಡುಪನ್ನು ತೊಡುವಂತಿಲ್ಲ. ಇದು 133 ವರ್ಷದ ಹಳೆ ಪಕ್ಷದಲ್ಲಿ ಹೊಸ ನಿಯಮವಾಗಿದೆ.

    ಕಾಂಗ್ರೆಸ್ ಪಕ್ಷದಲ್ಲಿರುವ ಹೆಣ್ಣು ಮಕ್ಕಳು ಕೂಡ ಇನ್ನು ಮುಂದೆ ಮೈ, ಕೈ ಕಾಣುವಂತೆ ಬಟ್ಟೆ ತೊಡುವ ಹಾಗಿಲ್ಲ. ಸ್ಲೀವ್ ಲೆಸ್, ಪೆನ್ಸಿಲ್ ಟೈಟ್, ಸ್ಕಿನ್ ಟೈಟ್, ಶಾರ್ಟ್ ಸ್ಕರ್ಟ್ ಹಾಕುವ ಹಾಗಿಲ್ಲ. ಮೈತುಂಬ ಲಕ್ಷಣವಾಗಿ ಸೀರೆ ಉಟ್ಟು, ಕುತ್ತಿಗೆವರೆಗೆ ಮೈ ಮುಚ್ಚುವ ಬ್ಲೌಸ್ ಹಾಕಬೇಕು ಎಂದು ಮಹಿಳಾ ಕಾಂಗ್ರೆಸ್ ನ ನೂತನ ಅಧ್ಯಕ್ಷೆ ಪುಷ್ಪ ಅಮರನಾಥ್ ಆದೇಶ ಹೊರಡಿಸಿದ್ದಾರೆ.

    ನವಂಬರ್ 19 ರಂದು ನೂತನ ಅಧ್ಯಕ್ಷೆಯಾಗಿ ಅಧಿಕೃತವಾಗಿ ಪದಗ್ರಹಣ ಕಾರ್ಯಕ್ರಮವಿದ್ದು, ಈ ಪ್ರೋಗ್ರಾಂಗೆ ಬರೋ ಎಲ್ಲಾ ಮಹಿಳಾ ಪದಾಧಿಕಾರಿಗಳು ನೀಲಿ ಸೀರೆ ಉಟ್ಟು ಮೈ ಮುಚ್ಚುವಂತಹ ಬ್ಲೌಸ್ ತೊಟ್ಟು ಇದಕ್ಕೆ ಚಾಲನೆ ನೀಡೋಣ ಅಂತ ಪುಷ್ಪ ಹೇಳಿದ್ದಾರೆ.

    ನೂತನ ಡ್ರೆಸ್‍ಕೋಡ್ ಮಾಡಿದ ತಕ್ಷಣ, ನಾವು ಹಾಕಬೇಕಾದ ಬಟ್ಟೆಯನ್ನು ಅಧ್ಯಕ್ಷೆ ತೀರ್ಮಾನ ಮಾಡಬೇಕಾ. ನಮ್ಮ ಇಷ್ಟ, ನಮ್ಮ ಬಟ್ಟೆ. ಅವರು ಹೇಳಿದಂಗೆ ನಾವು ಯಾಕೆ ಕೇಳಬೇಕು. ಒಂದು ಸಭೆಯಾದರೆ ಅವರು ಹೇಳಿದ ಬಟ್ಟೆಯನ್ನು ಹಾಕಿಕೊಂಡು ಬರಬಹುದು. ಆದರೆ ಇನ್ನು ಮುಂದೆಯೂ ಇದೇ ರೀತಿ ಡ್ರೆಸ್ ಹಾಕಿಕೊಂಡು ಬರಬೇಕು ಎಂದರೆ ಕಷ್ಟವಾಗುತ್ತದೆ ಎಂದು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಅಧ್ಯಕ್ಷೆಯಾಗುವ ಮೊದಲೇ ಈ ರೀತಿ ಹೊಸ ನಿಯಮವನ್ನು ಮಾಡುವ ಮೂಲಕ ವಿವಾದಕ್ಕೀಡಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೇಗುಲದ ಸಿಬ್ಬಂದಿಗೆ ಡ್ರೆಸ್ ಕೋಡ್ ಕಡ್ಡಾಯ: ಮುಜರಾಯಿ ಇಲಾಖೆ

    ದೇಗುಲದ ಸಿಬ್ಬಂದಿಗೆ ಡ್ರೆಸ್ ಕೋಡ್ ಕಡ್ಡಾಯ: ಮುಜರಾಯಿ ಇಲಾಖೆ

    ಬೆಂಗಳೂರು: ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಡ್ರೆಸ್ ಕೋಡ್ ಪಾಲನೆ ಮಾಡಬೇಕೆಂದು ಮುಜರಾಯಿ ಇಲಾಖೆ ದೇಗುಲಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.

    ಮಹಿಳಾ ಸಿಬ್ಬಂದಿಗೆ ಸಲ್ವಾರ್ ಕಮೀಜ್, ಕುರ್ತಾಗಳನ್ನು ನಿಷೇಧಿಸಲಾಗಿದೆ. ಪುರಷರಿಗೆ ಜೀನ್ಸ್ ಪ್ಯಾಂಟ್‍ಗಳನ್ನು ಧರಿಸದಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಹಿಳಾ ಸಿಬ್ಬಂದಿ ನೀಲಿ ಸೀರೆ , ಬಿಳಿ ಬ್ಲೌಸ್ ಮತ್ತು ಪುರುಷ ಸಿಬ್ಬಂದಿಗೆ ನೀಲಿ ಶರ್ಟ್, ಸೆಕ್ಯೂರಿಟಿ ಗಳಿಗೆ ಖಾಕಿ ಪ್ಯಾಂಟ್ ಖಾಕಿ ಶರ್ಟ್ ಧರಿಸಲು ಆದೇಶಿಸಲಾಗಿದೆ. ಈ ಡ್ರೆಸ್ ಕೋಡ್ ಕಡ್ಡಾಯವಿದ್ದರೂ ಇದೂವರೆಗೂ ಪಾಲನೆ ಆಗುತ್ತಿರಲಿಲ್ಲ. ಹಾಗಾಗಿ ಮುಜರಾಯಿ ಇಲಾಖೆ ಮರು ಸುತ್ತೋಲೆಯನ್ನು ಹೊರಡಿಸಿದೆ.

    ಮುಜರಾಯಿ ಇಲಾಖೆಯ ಈ ಆದೇಶ ಎ ಮತ್ತು ಬಿ ಗ್ರೇಡ್ ದೇವಾಲಯಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಹಿಂದೆ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಮಾಡಬೇಕೆಂದು ಚಿಂತಿಸಲಾಗಿತ್ತು. ಆರಂಭದಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ವಿಧಿಸುವುದರಿಂದ ಬೇರೆ ರಾಜ್ಯ ಮತ್ತು ವಿದೇಶಗಳಿಂದ ಬರುವ ಭಕ್ತಾದಿಗಳ ಸಂಖ್ಯೆ ಇಳಿಮುಖವಾಗಲಿದೆ ಎಂಬ ಉದ್ದೇಶದಿಂದ ಯೋಚನೆಯನ್ನು ಆರಂಭದಲ್ಲಿಯೇ ಕೈಬಿಡಲಾಯಿತು.

  • ಡಿಗ್ರಿ ಕಾಲೇಜ್ ಮಹಿಳಾ ಉಪನ್ಯಾಸಕಿಯರಿಗೆ ಡ್ರೆಸ್ ಕೋಡ್!

    ಡಿಗ್ರಿ ಕಾಲೇಜ್ ಮಹಿಳಾ ಉಪನ್ಯಾಸಕಿಯರಿಗೆ ಡ್ರೆಸ್ ಕೋಡ್!

    ಬೆಂಗಳೂರು: ಮಹಿಳಾ ಉಪನ್ಯಾಸಕಿಯರು ಇನ್ನು ಮುಂದೆ ಸೀರೆ ಉಟ್ಟು ಪಾಠ ಮಾಡಬೇಕೆಂಬ ಆದೇಶವೊಂದು ಶಿಕ್ಷಣ ಇಲಾಖೆಯಿಂದ ಪ್ರಕಟವಾಗಿದೆ.

    ಎಲ್ಲಾ ಖಾಸಗಿ ಅನುದಾನಿತ ಕಾಲೇಜು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕಿಯರು ಸೀರೆ ಧರಿಸಿ ಬರುವುದು ಕಡ್ಡಾಯ ಎಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

    ಆದೇಶದಲ್ಲಿ ಏನಿದೆ?
    ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರು ತರಗತಿಗಳಲ್ಲಿ ಪಾಠ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾರೆ. ವಾಟ್ಸಪ್ ಮತ್ತು ಫೇಸ್ ಬುಕ್ ನೋಡಿ ಕಾಲ ಕಳೆಯುತ್ತಾರೆ.   ಮತ್ತು ಮಹಿಳಾ ಉಪನ್ಯಾಸಕಿಯರು  ಚೂಡಿದಾರ್ ಧರಿಸಿ ಕಾಲೇಜಿಗೆ ಬರುತ್ತಾರೆ ಎಂದು ಕೋಲಾರದ ಆರ್. ಸತೀಶ್ ಕುಮಾರ್ 2015ರ ಜುಲೈನಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದರು.

    ಈ ದೂರಿನ ನಂತರ ಕಾಲೇಜಿನ ಆವರಣದಲ್ಲಿ ಈಗಾಗಲೇ ಮೊಬೈಲ್ ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕಾಲೇಜುಗಳಲ್ಲಿ ಉಪನ್ಯಾಸಕರುಗಳು ತರಗತಿಗಳಲ್ಲಿ ಮೊಬೈಲ್ ಬಳಸುವುದನ್ನು ತಟೆಗಟ್ಟುವಂತೆ ಹಾಗೂ ಮಹಿಳಾ ಉಪನ್ಯಾಸಕರುಗಳು ಸೀರೆಯನ್ನು ಧರಿಸಿ ಕಾಲೇಜಿಗೆ ಬರುವಂತೆ ಅಗತ್ಯ ಕ್ರಮ ತಗೆದುಕೊಳ್ಳುವಂತೆ ತಿಳಿಸಿ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಕಳುಹಿಸಿಕೊಡಬೇಕು. ಮೊಬೈಲ್ ಫೋನ್ ಜೊತೆಗೆ ಡ್ರೆಸ್ ಕೋಡ್ ನಿಯಮವು ಸಹ ಜಾರಿಗೆ ಮಾಡಲಾಗಿದೆ ಎನ್ನುವ ಅಂಶ ಈ ಆದೇಶದಲ್ಲಿದೆ.

    ಮೊಬೈಲ್ ನಿಷೇಧ ಸರಿ ಆದ್ರೆ ಡ್ರೆಸ್ ಕೋಡ್ ಯಾಕೆ? ನಾವು ಈ ರೀತಿಯ ಡ್ರೆಸ್ ಧರಿಸಬೇಕೆಂದು ಇಲಾಖೆ ನಿರ್ಧರಿಸುವುದು ಸರಿಯಲ್ಲ ಎಂದು ಮಹಿಳಾ ಪದವಿ ಕಾಲೇಜು ಪ್ರಾಧ್ಯಾಪಕರ ಸಂಘದ ಉಪಾಧ್ಯಕ್ಷೆ ಕಾವಲಮ್ಮ ಪ್ರತಿಕ್ರಿಯಿಸಿದ್ದಾರೆ.