Tag: ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ

  • ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋಗೆ ಮೊದ್ಲ ದಿನ ಸಖತ್ ರೆಸ್ಪಾನ್ಸ್- ಇಂದು ಕೊನೆ ದಿನ, ತಪ್ಪದೇ ಬನ್ನಿ

    ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋಗೆ ಮೊದ್ಲ ದಿನ ಸಖತ್ ರೆಸ್ಪಾನ್ಸ್- ಇಂದು ಕೊನೆ ದಿನ, ತಪ್ಪದೇ ಬನ್ನಿ

    ಬೆಂಗಳೂರು: ನಿಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು..? ಶಿಕ್ಷಣ ನೀಡುವ ಶಾಲೆ ಹೇಗಿರಬೇಕು..? ಎಲ್ಲಿ ಓದಿದರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು..? ಈ ರೀತಿ ಯೋಚನೆ ಮಾಡುತ್ತಿರುವ ಪೋಷಕರಿಗೆ ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‍ಪೋ ಆಯೋಜಿಸಿದೆ. ಶನಿವಾರ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಇಂದು ಕೂಡ ಎಕ್ಸ್ ಪೋ ನಡೆಯುತ್ತಿದೆ.

    ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಬ್ಲಿಕ್‍ಟಿವಿ ಪ್ರಸ್ತುತ ಪಡಿಸಿರುವ ಬಿಜಿಎಸ್ ಇಂಟರ್ ನ್ಯಾಷನಲ್ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ 2ನೇ ಆವೃತ್ತಿಗೆ ಅದ್ದೂರಿಯಾಗಿ ಚಾಲನೆ ದೊರೆತಿದೆ. ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್‍ನಲ್ಲಿರೋ ಶ್ರೀ ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ಕೊಟ್ಟರು. ಸಚಿವರಾದ ವಿ ಸೋಮಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ ಮತ್ತು ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ ಭಾಗವಹಿಸಿದ್ದರು.

    ಈ ಎಜುಕೇಶನ್ ಎಕ್ಸ್ ಪೋಗೆ ಪೋಷಕರು ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದಾರೆ. ಎಕ್ಸ್ ಪೋ ನಿಂದ ನಮಗೆ ತುಂಬಾ ಅನುಕೂಲವಾಗಿದೆ. ನಮಗೆ ಬೇಕಾದ ಶಾಲೆಯನ್ನ ಆಯ್ಕೆ ಮಾಡಿಕೊಳ್ಳಲು ಸಹಾಯಕವಾಗುತ್ತಿದೆ. ಒಂದೇ ಜಾಗದಲ್ಲಿ 20ಕ್ಕೂ ಹೆಚ್ಚಿನ ಶಾಲೆಗಳ ಬಗ್ಗೆ ಮಾಹಿತಿ ಸಿಗುತ್ತಿದ್ದು ಇದು ಅತ್ಯುತ್ತಮ ಕೆಲಸ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸುನೀತಾ ಹೇಳಿದ್ದಾರೆ. ಇದನ್ನೂ ಓದಿ:  ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ನಿರ್ಮಲಾನಂದ ಶ್ರೀ ಚಾಲನೆ

    ಇಂದು ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ ಕಡೇ ದಿನವಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 6ರ ಎಕ್ಸ್ ಪೋ ನಡೆಯಲಿದೆ. ಮಕ್ಕಳಿಗೆ ಬೆಳಗ್ಗೆ 11 ಗಂಟೆಗೆ ಡ್ರಾಯಿಂಗ್ ಮತ್ತು ಕ್ವಿಜ್ ಸ್ಪರ್ಧೆಗಳ ಫೈನಲ್ಸ್ ನಡೆಯಲಿದೆ. ಜೊತೆಗೆ ಬರವಣಿಗೆ ತಜ್ಞ ಡಾ. ರಫೀವುಲ್ಲಾ ಬೇಗ್ ಅವರಿಂದ ಮೆಮೊರಿ ಅಂಡ್ ಹ್ಯಾಂಡ್ ರೈಟಿಂಗ್ ಸ್ಕಿಲ್ಸ್ ಬಗ್ಗೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಇರಲಿದೆ. ಇಂದು ಮಿಸ್ ಮಾಡದೇ ಬನ್ನಿ, ಎಕ್ಸ್ ಪೋನ ಲಾಭ ಪಡೆಯಿರಿ.

    ಏನು ಇರುತ್ತೆ?
    * ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
    * ಮಾಹಿತಿಪೂರ್ಣ ಸಂವಾದಗಳು
    * ಡ್ರಾಯಿಂಗ್ ಸ್ಪರ್ಧೆ
    * ಕ್ವಿಜ್ ಸ್ಪರ್ಧೆ
    * ಮ್ಯಾಜಿಕ್ ಶೋ
    * ಸ್ಪರ್ಧಿಗಳಿಗೆ ಉಚಿತ ಗಿಫ್ಟ್
    * ಸ್ಥಳದಲ್ಲೇ ಅಡ್ಮಿಶನ್ ವ್ಯವಸ್ಥೆ

  • ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ನಿರ್ಮಲಾನಂದ ಶ್ರೀ ಚಾಲನೆ

    ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ನಿರ್ಮಲಾನಂದ ಶ್ರೀ ಚಾಲನೆ

    ಬೆಂಗಳೂರು: ಎರಡು ದಿನಗಳ ಕಾಲ ವಿಜಯನಗರದ ಎಂಸಿ ಲೇಔಟ್ ನಲ್ಲಿರೋ ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ಪಬ್ಲಿಕ್ ಟಿವಿ ಆಯೋಜಿಸಿರುವ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಇಂದು ಚಾಲನೆ ನೀಡಿದ್ದಾರೆ.

    ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ದೇಶಕ್ಕೆ ಮಾನವ ಸಂಪನ್ಮೂಲವೇ ಬಹುದೊಡ್ಡ ಸಂಪನ್ಮೂಲವಾಗಿರುತ್ತದೆ. ಜ್ಞಾನವಂತರು ಇರುವಂತಹ ದೇಶ, ಮನೆ ಅಥವಾ ಸಮಾಜ ಇದ್ದು, ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಆ ದೇಶದಲ್ಲಿರುವಂತಹ ಜ್ಞಾನವಂತ ಮಕ್ಕಳು ಪ್ರಜೆಗಳು ಆ ದೇಶಕ್ಕೆ ಆಸ್ತಿಯಾಗುತ್ತಾರೆ. ಇಂತಹ ಜ್ಞಾನವನ್ನು ಹೊರಗೆ ತರುವಂತಹ ಮತ್ತು ಅವರವರಿಗೆ ಅವರವರ ಶಕ್ತಿಯ ದರ್ಶನವನ್ನು ಮಾಡಿಕೊಡುವಂತಹ ವ್ಯವಸ್ಥೆ ಅಂದರೆ ಅದು ಎಜುಕೇಶನ್ ಸಿಸ್ಟಮ್ ಆಗಿರುತ್ತದೆ ಎಂದು ಹೇಳಿದರು.

    ಮಕ್ಕಳಿಗೆ ಅತ್ಯತ್ತಮ ಶಿಕ್ಷಣ ಕೊಡಿಸುವ ಹಲವಾರು ಶಾಲೆಗಳು ನಮ್ಮ ಪಟ್ಟಣದಲ್ಲಿ ಬರುತ್ತಿರುತ್ತದೆ. ಇಂತಹ ಶಾಲೆಗಳನ್ನು ಗುರುತಿಸಿ, ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಗೆ ಸೇರಿಸುವುದರಿಂದ ಅವರು ವಿಶ್ವದ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

    ಶಾಲೆಗಳಲ್ಲಿ ಆಧುನಿಕ ವಿದ್ಯೆ ಖಂಡಿತಾ ಬೇಕು. ಹೀಗಾಗಿ ಉತ್ತಮ ಶಾಲೆಗಳನ್ನು ಇಲ್ಲಿಗೆ ಕರೆಸಿ, ಅವರ ಪರಿಚಯವನ್ನು ನಾಗರಿಕರಿಗೆ ಮಾಡಿಸಿ, ನಿಮ್ಮ ಆಯ್ಕೆ ಯಾವ ಶಾಲೆ ಎಂಬುದನ್ನು ತಿಳಿದುಕೊಳ್ಳಿ ಎಂದು ಪಬ್ಲಿಕ್ ಟಿವಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಒಳ್ಳೆಯ ಪ್ರಯತ್ನವಾಗಿದೆ ಎಂದು ಅವರು ಹಾರೈಸಿದರು.

    ಕಾರ್ಯಕ್ರಮದಲ್ಲಿ ಸಚಿವರಾದ ವಿ ಸೋಮಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್, ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಪೋಷಕರಿಗೆ ಒಂದೇ ಸೂರಿನಲ್ಲಿ ಸುಲಭವಾಗಿ ಸಿಗಲೆಂದು ಇಂದು ಮತ್ತು ನಾಳೆ ಎಕ್ಸ್ ಪೋವನ್ನು ಆಯೋಜಿಸಲಾಗಿದೆ. ಪ್ರಿಸ್ಕೂಲ್, ಇಂಟರ್ ನ್ಯಾಷನಲ್ ಮತ್ತು ರೆಸಿಡೆನ್ಶಿಯಲ್ ಸ್ಕೂಲ್ ಬಗ್ಗೆ ಸ್ಪಷ್ಟವಾದ ಮಾಹಿತಿ ಡ್ರೀಮ್ಸ್ ಸ್ಕೂಲ್‍ನಲ್ಲಿ ಸಿಗಲಿದೆ.

    ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಾತ್ಮಕ ಶಿಕ್ಷಣ, ಪಾಠ ಮತ್ತು ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಶಾಲೆಗಳನ್ನು ವಿಂಗಡಿಸಿದ್ದು ಮಗುವನ್ನು ಎಲ್ಲಿ ಸೇರಿಸಿದರೆ ಭವಿಷ್ಯ ಉಜ್ವಲವಾಗಬಹುದು ಎಂಬ ಪೋಷಕರ ಪ್ರಶ್ನೆಗೆ ಎಕ್ಸ್ ಪೋದಲ್ಲಿ ಸುಲಭವಾಗಿ ಉತ್ತರ ಸಿಗಲಿದೆ. ಉಚಿತ ಪ್ರವೇಶದ ಕಾರ್ಯಕ್ರಮ ಇದಾಗಿದ್ದು ಪೋಷಕರು ಆಗಮಿಸಿ ಶಾಲೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಏನು ಇರುತ್ತೆ?
    – ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
    – ಮಾಹಿತಿಪೂರ್ಣ ಸಂವಾದಗಳು
    – ಡ್ರಾಯಿಂಗ್ ಸ್ಪರ್ಧೆ
    – ಕ್ವಿಜ್ ಸ್ಪರ್ಧೆ
    – ಮ್ಯಾಜಿಕ್ ಶೋ
    – ಸ್ಪರ್ಧಿಗಳಿಗೆ ಉಚಿತ ಗಿಫ್ಟ್
    – ಸ್ಥಳದಲ್ಲೇ ಅಡ್ಮಿಶನ್ ವ್ಯವಸ್ಥೆ

     

  • ಪಬ್ಲಿಕ್ ಟಿವಿ ಆಯೋಜನೆಯಲ್ಲಿ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ-ಇವತ್ತೇ ಕೊನೆ ದಿನ, ಮಿಸ್ ಮಾಡಿಕೊಳ್ಳದೇ ಬನ್ನಿ

    ಪಬ್ಲಿಕ್ ಟಿವಿ ಆಯೋಜನೆಯಲ್ಲಿ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ-ಇವತ್ತೇ ಕೊನೆ ದಿನ, ಮಿಸ್ ಮಾಡಿಕೊಳ್ಳದೇ ಬನ್ನಿ

    ಬೆಂಗಳೂರು: ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ ಆಯೋಜಿಸಿದೆ. ಈ ಎಜುಕೇಷನ್ ಎಕ್ಸ್ ಪೋಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈ ಎಜುಕೇಶನ್ ಎಕ್ಸ್ ಪೋ ಗೆ ಪೋಷಕರು ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದಾರೆ. ಎಕ್ಸ್ ಪೋ ಉದ್ಘಾಟನೆಯನ್ನ ಬಿಜಿಎಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಕಾಶ್ ನಾಥ್ ಸ್ವಾಮೀಜಿ, ಗಾರ್ಡನ್ ಸಿಟಿ ಯುನಿವರ್ಸಿಟಿಯ ಚೇರ್ಮನ್ ಡಾ. ವಿ.ಜೆ.ಜೋಸೆಫ್, ಕೆಂಬ್ರಿಡ್ಜ್ ಸಂಸ್ಥೆಯ ಚಕ್ರವರ್ತಿ, ಪಬ್ಲಿಕ್ ಟಿವಿಯ ಸಿಇಓ ಅರುಣ್ ಕುಮಾರ್ ಹಾಗೂ ಪಬ್ಲಿಕ್ ಟಿವಿ ಮಾರ್ಕೆಟಿಂಗ್ ಹೆಡ್ ಹರೀಶ್ ನೆರವೇರಿಸಿದರು.

    ಇಂದು ಈ ಎಜುಕೇಶನ್ ಎಕ್ಸ್ ಪೋಗೆ ಎರಡನೇ ಹಾಗೂ ಕೊನೆ ದಿನ. ಮೊದಲ ದಿನವೇ 1000 ಕ್ಕೂ ಹೆಚ್ವು ಪೋಷಕರು ಎಕ್ಸ್ ಪೋ ಆಗಮಿಸಿ ತಮ್ಮ ಮಕ್ಕಳಿಗೆ ಸೂಕ್ತವಾದ ಶಾಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಂದು ಜಾಗದಲ್ಲಿ ಇಷ್ಟೊಂದು ಶಾಲೆಗಳ ಬಗ್ಗೆ ಮಾಹಿತಿ ಸಿಗುತ್ತಿದ್ದು ಇದು ಅತ್ಯುತ್ತಮ ಕೆಲಸ ಎಂದು ಪೋಷಕರು ಹೇಳುತ್ತಿದ್ದಾರೆ.

    ಇಂದು ಬೆಳಗ್ಗೆ 9:30 ಯಿಂದ ಸಂಜೆ 6:30 ವರೆಗೂ ಏಕ್ಸ್ ಪೋ ನಡೆಯಲಿದೆ. ಸೆಕೆಂಡ್ ಡೇಯಲ್ಲಿ ಎಕ್ಸ್ ಪೋಗೆ ಬರುವ ಪೋಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಪ್ರೊಫೆಸರ್ ಶ್ರೀಧರ್ ಮೂರ್ತಿ ಅವರು ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಮಕ್ಕಳ ಮೇಲೆ ಶಿಕ್ಷಣದ ಜೊತೆ ಮ್ಯೂಸಿಕ್ ಎಷ್ಟು ಪ್ರಭಾವ ಬೀರುತ್ತೆ..? ಮ್ಯೂಸಿಕ್‍ನ ಅಗತ್ಯದ ಬಗ್ಗೆ ವಿಶ್ವನಾಥ್ ಪ್ರಸಾದ್ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಇದರೊಂದಿಗೆ ಮಕ್ಕಳಿಗಾಗಿ ಡ್ರಾಯಿಂಗ್ ಅಂಡ್ ಪೇಂಟಿಂಗ್ ಸ್ಪರ್ಧೆ ಕೂಡ ಇರಲಿದೆ.

    ಪಬ್ಲಿಕ್ ಟಿವಿ ಆಯೋಜಿಸಿರುವ ಎಕ್ಸ್ ಪೋನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ 25 ಕ್ಕೂ ಹೆಚ್ಚು ವಿದ್ಯಾಕೇಂದ್ರಗಳು ಒಂದೇ ಸೂರಿನಡಿಯಲ್ಲಿ ತಮ್ಮ ಸಂಸ್ಥೆಯ ಬಗ್ಗೆ ವಿವರಗಳನ್ನ ಪೋಷಕರಿಗೆ ತಿಳಿಸುತ್ತಿದ್ದಾರೆ. ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‍ನ ಕಾಳಿಂಗ ಹಾಲ್‍ನಲ್ಲಿ ನಡೆಯುತ್ತಿರುವ ಈ ಎಕ್ಸ್ ಪೋಗೆ ಎಲ್ಲರಿಗೂ ಉಚಿತ ಪ್ರವೇಶವಿದೆ. ತಮ್ಮ ಮಕ್ಕಳಿಗಾಗಿ ಪೋಷಕರು ಮಿಸ್ ಮಾಡ್ದೇ ಈ ಎಕ್ಸ್ ಪೋ ಗೆ ಬಂದು ತಮಗೆ ಬೇಕಾದ ಡ್ರೀಮ್ ಸ್ಕೂಲ್ ಬಗ್ಗೆ ಮಾಹಿತಿ ಪಡೆದುಕೊಂಡು, ಅಡ್ಮಿಶನ್ ಕೂಡ ಮಾಡಿಕೊಳ್ಳಬಹುದಾಗಿದೆ. ಮತ್ತೆಕೇ ತಡ ಮಾಡ್ತಿದ್ದೀರಾ ಬನ್ನೀ ಪಬ್ಲಿಕ್ ಟಿವಿ ಆಯೋಜಿಸಿರೋ ಸಾಮಾಜಿಕ ಕಳಕಳಿಯ ಡ್ರೀಮ್ಸ್ ಸ್ಕೂಲ್ ಎಜುಕೇಶನ್ ನಲ್ಲಿ ಭಾಗಿಯಾಗಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv