Tag: ಡ್ರೀಮ್ಸ್ ಸ್ಕೂಲ್

  • ಎರಡು ದಿನ ನಡೆದ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್

    ಎರಡು ದಿನ ನಡೆದ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆ ಮಾಡಿದ್ದ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಇಂದು ತೆರೆಬಿದ್ದಿದೆ. ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಅನೇಕ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ಹಿಡಿರಿಸೋ ದೃಷ್ಟಿಯಿಂದ ಪಬ್ಲಿಕ್ ಟಿವಿ ಈ ಎಜುಕೇಶನ್ ಎಕ್ಸ್‌ಪೋವನ್ನು ಆಯೋಜನೆ ಮಾಡಿತ್ತು.

    ಪಬ್ಲಿಕ್ ಟಿವಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಾಮಾಜಿಕ ಕಳಕಳಿಯಿಂದ ಡ್ರೀಮ್ಸ್ ಸ್ಕೂಲ್ ಎಜುಕೇಶನ್ ಎಕ್ಸ್‌ಪೋ ಕಳೆದೆರೆಡು ದಿನದಿಂದ ಆಯೋಜಿಸತ್ತು. ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್‍ನಲ್ಲಿರೋ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ ಎಜುಕೇಶನ್ ಎಕ್ಸ್‌ಪೋ ಗೆ ಮೊದಲ ದಿನವೇ 1500 ಕ್ಕೂ ಹೆಚ್ಚು ಪೋಷಕರು ಎಕ್ಸ್‌ಪೋ ಆಗಮಿಸಿ ತಮ್ಮ ಮಕ್ಕಳಿಗೆ ಸೂಕ್ತವಾದ ಶಾಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಇಂದು ಸಹ ಎಕ್ಸ್‌ಪೋ ಗೆ ಪೋಷಕರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ಬೆಳಗ್ಗೆಯಿಂದಲೇ ಪೋಷಕರು ತಮ್ಮ ಮಕ್ಕಳೊಂದಿಗೆ ಎಕ್ಸ್‌ಪೋ ಗೆ ಆಗಮಿಸಿ ತಮಗೆ ಬೇಕಾದ ಶಾಲೆಯ ಮಾಹಿತಿಗಳನ್ನ ಪಡೆದುಕೊಂಡರು. ಒಟ್ಟಾರೆಯಾಗಿ 5 ಸಾವಿರಕ್ಕೂ ಹೆಚ್ಚು ಪೋಷಕರು ಎಕ್ಸ್‌ಪೋಗೆ ಆಗಮಿಸಿದ್ರು. ಒಂದೇ ಸೂರಿನಡಿಯಲ್ಲಿ ಇಷ್ಟೊಂದು ಶಾಲೆಗಳನ್ನು ನೋಡಿ ಫುಲ್ ಖುಷಿಯಾಗಿದ್ರು ಕೆಲ ಪೋಷಕರು ತಮ್ಮಗೆ ಅನುಕೂಲವಾಗೋ ಶಾಲೆಗೆ ಮಕ್ಕಳನ್ನು ಇಲ್ಲೇ ಆಡ್ಮಿಷನ್ ಮಾಡಿಸೋ ನಿರ್ಧಾರವನ್ನು ಸಹ ಮಾಡಿದರು.

    ಎಕ್ಸ್‌ಪೋನ ಕೊನೆಯ ದಿನವಾದ ಇಂದು ಮಕ್ಕಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಿತ್ತು. ಹ್ಯಾಂಡ್ ರೈಟಿಂಗ್ ಎಕ್ಸ್ ಪರ್ಟ್ ಆಗಿರುವ ಡಾ. ರಫೀವುಲ್ಲ ಬೇಗ್ ಅವರು ಮೆಮೊರಿ ಅಂಡ್ ಹ್ಯಾಂಡ್ ರೈಟಿಂಗ್ ಬಗ್ಗೆ ಉಪನ್ಯಾಸ ಮಾಡಿದರು. ಜೊತೆಗ ಮಕ್ಕಳಲ್ಲಿ ಮೆಮೊರಿ ಪವರ್ ಹೇಗೆ ಹೆಚ್ಚಿಸಬೇಕು ಅನ್ನೋದನ್ನ ಪ್ರದರ್ಶನ ಮಾಡಿದರು.

    ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕುವ ಬದಲು ಮಕ್ಕಳಿಗೆ ಸುಲಭವಾಗಿ ಮೆಮೊರಿ ಪವರ್ ಹೇಗೆ ಹೆಚ್ವಿಸಿಕೊಳ್ಳೊದು ಅನ್ನೋದನ್ನು ತಿಳಿಸಿಕೊಟ್ಟರು. ಜೊತೆಗೆ ಮಕ್ಕಳಿಗಾಗಿ ಡ್ರಾಯಿಂಗ್ ಅಂಡ್ ಕ್ವೀಜ್ ಕಾಂಪಿಟೇಷನ್ ಕೂಡ ನಡೆಯಿತು. ನೂರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಡ್ರಾಯಿಂಗ್ ಅಂಡ್ ಕ್ವೀಜ್ ನಲ್ಲಿ ವೀಜೆತರಾದ ಮಕ್ಕಳಿಗೆ ರೇವಾ ಯುನಿವರ್ಸಿಟಿ ವತಿಯಿಂದ ನಗದು ಬಹುಮಾನದ ಜೊತೆಗೆ ಗಿಫ್ಟ್ ಕೂಡ ನೀಡಲಾಯಿತು.

    ಎರಡು ದಿನ ನಡೆದ ಎಕ್ಸ್‌ಪೋ ಗೆ ಪೋಷಕರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಭೂತ ಪೂರ್ವ ಯಶಸ್ಸು ಗಳಿಸುವಂತೆ ಮಾಡಿದ್ದಾರೆ. ಎಕ್ಸ್‌ಪೋ ನಲ್ಲಿ ಭಾಗಿಯಾಗಿದ್ದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಎಕ್ಸ್‌ಪೋ ಕಾರಣಕರ್ತರಾದ ವ್ಯಕ್ತಿಗಳಿಗೆ ಪಬ್ಲಿಕ್ ಟಿವಿಯ ಸಿಇಓ ಅರುಣ್ ಕುಮಾರ್ ಮತ್ತು ಸಿಓಓ ಸಿ.ಕೆ.ಹರೀಶ್ ಕುಮಾರ್ ನೆನಪಿನ ಕಾಣಿಕೆ ನೀಡಿ ಗೌರವ ಅರ್ಪಿಸಿದರು.

    ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಬೆಸ್ಟ್ ಎಜುಕೇಶನ್ ಕೊಡಬೇಕು ಎಂದು ಕನಸು ಕಾಣುತ್ತಾರೆ. ಆ ಕನಸನ್ನ ನನಸು ಮಾಡೋ ನಿಟ್ಟಿನಲ್ಲಿ ನಿಮ್ಮ ಪಬ್ಲಿಕ್ ಟಿವಿ ಸಣ್ಣ ಪ್ರಯತ್ನವನ್ನ ಮಾಡಿದೆ. ಡ್ರೀಮ್ಸ್ ಎಕ್ಸ್‌ಪೋ ಯಶಸ್ವಿಯಾಗಲು ಕಾರಣರಾದ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರಿಗೆ ಪಬ್ಲಿಕ್ ಟಿವಿ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತದೆ.

  • ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಒಂದೇ ಸೂರಿನಲ್ಲಿ ಶಾಲೆಗಳ ಮಾಹಿತಿ

    ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಒಂದೇ ಸೂರಿನಲ್ಲಿ ಶಾಲೆಗಳ ಮಾಹಿತಿ

    ಬೆಂಗಳೂರು: ಮೊದಲ ವರ್ಷದ “ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ -2018” ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಪಬ್ಲಿಕ್ ಟಿವಿ ಈಗ 2ನೇ ವರ್ಷದ ಎಕ್ಸ್‌ಪೋವನ್ನು ಆಯೋಜಿಸುತ್ತಿದೆ.

    ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಪೋಷಕರಿಗೆ ಒಂದೇ ಸೂರಿನಲ್ಲಿ ಸುಲಭವಾಗಿ ಸಿಗಲೆಂದು ಈ ಶನಿವಾರ ಮತ್ತು ಭಾನುವಾರ ಎಕ್ಸ್‍ಪೋವನ್ನು ಆಯೋಜಿಸಲಾಗಿದೆ. ಎಂ.ಸಿ. ಲೇಔಟ್, ವಿಜಯನಗರದಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಪ್ರಿಸ್ಕೂಲ್, ಇಂಟರ್‌ನ್ಯಾಷನಲ್‌ ಮತ್ತು ರೆಸಿಡೆನ್ಶಿಯಲ್ ಸ್ಕೂಲ್ ಬಗ್ಗೆ ಸ್ಪಷ್ಟವಾದ ಮಾಹಿತಿ ಡ್ರೀಮ್ಸ್ ಸ್ಕೂಲ್‍ನಲ್ಲಿ ಸಿಗಲಿದೆ.

    ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಾತ್ಮಕ ಶಿಕ್ಷಣ, ಪಾಠ ಮತ್ತು ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಶಾಲೆಗಳನ್ನು ವಿಂಗಡಿಸಿದ್ದು ಮಗುವನ್ನು ಎಲ್ಲಿ ಸೇರಿಸಿದರೆ ಭವಿಷ್ಯ ಉಜ್ವಲವಾಗಬಹುದು ಎಂಬ ಪೋಷಕರ ಪ್ರಶ್ನೆಗೆ ಎಕ್ಸ್‌ಪೋದಲ್ಲಿ ಸುಲಭವಾಗಿ ಉತ್ತರ ಸಿಗಲಿದೆ. ಉಚಿತ ಪ್ರವೇಶದ ಕಾರ್ಯಕ್ರಮ ಇದಾಗಿದ್ದು ಪೋಷಕರು ಆಗಮಿಸಿ ಶಾಲೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಏನು ಇರುತ್ತೆ?
    – ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
    – ಮಾಹಿತಿಪೂರ್ಣ ಸಂವಾದಗಳು
    – ಡ್ರಾಯಿಂಗ್ ಸ್ಪರ್ಧೆ
    – ಕ್ವಿಜ್ ಸ್ಪರ್ಧೆ
    – ಮ್ಯಾಜಿಕ್ ಶೋ
    – ಸ್ಪರ್ಧಿಗಳಿಗೆ ಉಚಿತ ಗಿಫ್ಟ್
    – ಸ್ಥಳದಲ್ಲೇ ಅಡ್ಮಿಶನ್ ವ್ಯವಸ್ಥೆ

    ದಿನಾಂಕ:
    ಡಿಸೆಂಬರ್ 14, ಶನಿವಾರ
    ಡಿಸೆಂಬರ್ 15, ಭಾನುವಾರ

    ಸ್ಥಳ:
    ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ
    ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು -560040