Tag: ಡ್ರಿಂಕ್ ಅಂಡ್ ಡ್ರೈವ್

  • 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಈ ವರ್ಷ ದಾಖಲೆಯ ಮಟ್ಟದಲ್ಲಿ ಡ್ರಿಂಕ್ ಅಂಡ್ ಡ್ರೈವ್ (Drink And Drive) ಕೇಸ್‍ಗಳು ದಾಖಲಾಗಿದೆ.

    ಹೌದು. 2022 ಅಂತ್ಯಗೊಂಡು, 2023 ಪ್ರಾರಂಭವಾಗಲು ಐದೇ ದಿನ ಬಾಕಿಯಿದೆ. ಈಗಾಗಲೇ 2023ರ ಆಚರಣೆಗೆ ಅದ್ಧೂರಿಯ ಸಿದ್ಧತೆಯು ಪ್ರಾರಂಭಗೊಂಡಿದ್ದು, ಎಲ್ಲಾ ಪಬ್‍ಗಳು ಬುಕ್ ಆಗಿದೆ. ಆದರೆ ಕೇವಲ ಸಿಲಿಕಾನ್ ಸಿಟಿಯೊಂದರಲ್ಲಿ ಈ ವರ್ಷದ ನವೆಂಬರ್‌ವರೆಗೆ 26,017 ಮಂದಿಯ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

    ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ವಾಹನ ಸವಾರರು 26 ಕೋಟಿ ರೂ. ಸಂದಾಯ ಮಾಡಿದ್ದಾರೆ. 2020 ಹಾಗೂ 2021ರಲ್ಲಿ ಕೋವಿಡ್ ಹಿನ್ನೆಲೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಅಷ್ಟಾಗಿ ನಡೆದಿರಲಿಲ್ಲ. ಆದರೆ ಈ ವರ್ಷ ಅಪಘಾತ ತಡೆಯುವ ಸಲುವಾಗಿ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ: ಇಂಧನ ಟ್ಯಾಂಕರ್ ಭೀಕರ ಸ್ಫೋಟ – 10 ಸಾವು, 40 ಮಂದಿಗೆ ಗಾಯ

    2020ರಲ್ಲಿ 5,343 ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದ್ದವು. 2021ರಲ್ಲಿ 4,144 ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದ್ದವು. ಆದರೆ ಈ ಬಾರಿ ಸಾಕಷ್ಟು ಜನ ಕುಡಿದು ಗಾಡಿ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕೈ ನಾಯಕ ಅಲ್ತಾಫ್‌ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲ್ಲ: ಭಾಸ್ಕರ್ ರಾವ್ ಆದೇಶ

    ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲ್ಲ: ಭಾಸ್ಕರ್ ರಾವ್ ಆದೇಶ

    ಬೆಂಗಳೂರು: ಕೊರೊನಾ ಭಯದಿಂದ ಇಡೀ ಬೆಂಗಳೂರು ಆತಂಕಕ್ಕೀಡಾಗಿದೆ. ಆದರೆ ಪೊಲೀಸರು ಪ್ರತಿದಿನ ವಾಹನ ಸವಾರರಿಗೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಬೇಕು, ನಿಲ್ಲಿಸುವಂತಿಲ್ಲ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ.

    ಕೊರೊನಾ ವೈರಸ್‍ಗೆ ಬೆದರಿರುವ ಪೊಲೀಸರು ಪ್ರತಿದಿನ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುವಾಗ ಸೋಂಕಿತ ವಾಹನ ಸವಾರರ ಉಸಿರು ನಮಗೆ ತಗುಲಿ ನಮಗೂ ಸಂಕಷ್ಟ ಎದುರಾಗುತ್ತೆ ಅಂತ ಗೋಳಿಡುತ್ತರುವಾಗಲೇ ಪೊಲೀಸ್ ಆಯುಕ್ತರು ಈ ಹೇಳಿಕೆ ನೀಡಿದ್ದಾರೆ.

    ಯಾವುದೇ ಕಾರಣಕ್ಕೂ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡೋದನ್ನು ನಿಲ್ಲಿಸೋದಕ್ಕೆ ಸಾಧ್ಯವಿಲ್ಲ. ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ಮಾಡದೇ ಇರೋದು ಅತ್ಯಂತ ದೊಡ್ಡ ಅಪರಾಧ ಆಗುತ್ತೆ. ಅದಕ್ಕಾಗಿ ನಾವು ಡ್ರಿಂಕ್ ಅಂಡ್ ಡ್ರೈವ್ ನಿರಂತರವಾಗಿ ಚೆಕ್ ಮಾಡಿಸ್ತೀವಿ. ಈಗಾಗಲೇ ಇದರ ಬಗ್ಗೆ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರಿಂದ ಮಾಹಿತಿಯನ್ನು ಕೇಳಿದ್ದೀವಿ. ಅವರು ಕೂಡ ಯಾವುದೇ ಭಯಪಡುವ ಅಗತ್ಯ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ಕಿಂಗ್ ಮುಂದುವರೆಸಿದ್ದೇವೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

  • ಕುಡುಕರಿಗೆ ವರದಾನವಾದ ಕೊರೊನಾ ವೈರಸ್- ಸದ್ಯಕ್ಕಿಲ್ಲ ಡ್ರಿಂಕ್ & ಡ್ರೈವ್ ಚೆಕಪ್

    ಕುಡುಕರಿಗೆ ವರದಾನವಾದ ಕೊರೊನಾ ವೈರಸ್- ಸದ್ಯಕ್ಕಿಲ್ಲ ಡ್ರಿಂಕ್ & ಡ್ರೈವ್ ಚೆಕಪ್

    ಬೆಂಗಳೂರು: ಇಡೀ ವಿಶ್ವದ ನಿದ್ದೆಗೆಡಿಸಿ, ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನಾ ವೈರಸ್ ಈಗ ಬೆಂಗಳೂರು ಪೊಲೀಸರಿಗೂ ತಲೆ ನೋವಾಗಿದೆ. ಈ ತಲೆ ನೋವಿನಿಂದ ತಪ್ಪಿಸಿಕೊಳ್ಳುವುದಕ್ಕೆ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಬೇಡಿ ಎಂದು ಆದೇಶ ನೀಡಿದ್ದಾರೆ. ಜೊತೆಗೆ ವೈದ್ಯರ ಮೊರೆ ಹೋಗಿದ್ದರೆ.

    ಕೊರೊನಾ ಕೇವಲ ಉಸಿರಾಟದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಅಂಟು ಕಾಯಿಲೆ. ಆದ್ದರಿಂದ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವಾಗ ವ್ಯಕ್ತಿ ಕುಡಿದಿದ್ದಾನಾ ಇಲ್ಲವಾ ಅನ್ನೋದನ್ನ ಸ್ಮೆಲ್ ಮಾಡಬೇಕು. ಆತನ ಬಾಯಿಯಿಂದ ಹೊರಬರುವ ಗಾಳಿಯನ್ನು ಪೊಲೀಸರು ಗಮನಿಸಬೇಕಾಗುತ್ತೆ. ಇದರಿಂದ ವೈರಾಣುಗಳು ಪೊಲೀಸರಿಗೂ ತಗುಲುವ ಸಾಧ್ಯತೆಯ ಭಯ ಬೆಂಗಳೂರು ಪೊಲೀಸರಿಗೆ ಪ್ರಾರಂಭವಾಗಿದೆ.

    ಕರ್ನಾಟಕದಲ್ಲಿ ಸದ್ಯ ಕೊರೊನಾ ಪತ್ತೆಯಾಗಿಲ್ಲ. ಆದರೆ ಸಾಕಷ್ಟು ಜನ ಶಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಅಂತಹರು ಪೊಲೀಸರಿಗೆ ಸಿಕ್ಕಿ ಪೊಲೀಸರಿಗೂ ಕೊರೊನಾ ತಟ್ಟುವ ಭಯ ಎದುರಾಗಿರುವುದರಿಂದ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವುದನ್ನು ನಿಲ್ಲಿಸಿದ್ದಾರೆ.

    ಜೊತೆಗೆ ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಯ ವೈದ್ಯರಿಗೂ ಪತ್ರವನ್ನು ಬರೆಯಲಾಗಿದ್ದು, ಡ್ರಿಂಕ್ & ಡ್ರೈವ್ ನಿಂದ ರೋಗ ತಟ್ಟಲಿದ್ಯಾ ಅಂತ ಮಾಹಿತಿ ನೀಡಿ ಎಂದು ಕೋರಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ಉತ್ತರ ನೀಡುವ ತನಕ ಬೆಂಗಳೂರಿನಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಕುಡುಕರು ಮನಸ್ಸಲ್ಲೇ ಖುಷಿ ಪಡುತ್ತಿದ್ದಾರೆ.

  • ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಸವಾರರಿಂದ ಹಣ ಪೀಕಿದ ಪೊಲೀಸರು ಅಮಾನತು

    ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಸವಾರರಿಂದ ಹಣ ಪೀಕಿದ ಪೊಲೀಸರು ಅಮಾನತು

    ಬೆಂಗಳೂರು: ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಚಾಲಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಸಂಚಾರ ಪೊಲೀನರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅಮಾನತು ಮಾಡಲಾಗಿದೆ.

    ಅಶೋಕ್ ನಗರ ಸಂಚಾರ ಪೊಲೀಸ್ ಠಾಣೆ ಎಎಸ್‍ಐ ಮುನಿಯಪ್ಪ, ಪೇದೆಗಳಾದ ಗಂಗರಾಜು, ನಾಗರಾಜ್ ಅಮಾನತು ಮಾಡಿ ಆದೇಶ ಹೋರಡಿಸಲಾಗಿದೆ. ಸಂಚಾರ ಪೊಲೀಸರು ಖಾಸಗಿ ಆಲ್ಕೋಹಾಲ್ ಮೀಟರ್ ಬಳಿಸಿ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೇ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು.

    ಸಂಚಾರ ಪೊಲೀಸರ ಹಣ ವಸೂಲಿ ದಂಧೆಯ ಬಗ್ಗೆ ಸಾರ್ವಜನಕರಿಂದ ಹಲವು ದೂರುಗಳು ಬಂದಿದ್ದವು. ದೂರದಾರರ ಸಹಾಯದಿಂದ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ಬಂಧಿಸಲು ಪ್ಲ್ಯಾನ್ ರೂಪಿಸಿದ್ದರು. ಎಎಸ್‍ಐ ಮುನಿಯಪ್ಪ ನೇತೃತ್ವದಲ್ಲಿ ಪೇದೆಗಳು ಶ್ರೀನಿವಾಗಿಲು ಜಂಕ್ಷನ್ ಬಳಿ ಚಾಲಕರನ್ನು ತಡೆದು ನ್ಯಾಯಾಲಕ್ಕೆ ಹೋದರೆ 15 ಸಾವಿರ ರೂ. ಕಟ್ಟಬೇಕಾಗುತ್ತದೆ. ಇಲ್ಲಿ ಹಣ ಕಟ್ಟಿ ಅಂತ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಈ ವೇಳೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳ ತಂಡ ಹಿಡಿದು ದೂರು ದಾಖಲಿಸಿದ್ದಾರೆ.

    ಚಾಲಕರು ಹಾಗೂ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಮೂವರು ಸಂಚಾರ ಪೊಲೀಸರ ಮೇಲೆ ಕ್ರಿಮಿನಲ್ ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಈ ಮೂವರು ಕಳೆದ ಒಂದು ವರ್ಷದಿಂದ ಇದೇ ರೀತಿ ಚಾಲಕರನ್ನು ಬೆದರಿಸಿ ಹಣ ವಸೂಲಿ ದಂಧೆ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ.