Tag: ಡ್ರಿಂಕ್

  • ಲೈವ್ ಸೂಸೈಡ್: ಹಾಲು ಕುಡ್ದ ಮಕ್ಕಳೇ ಬದುಕಲ್ಲ ಎಂದು ಹಾಡಿ ಕಂಠಪೂರ್ತಿ ಕುಡಿದು ನದಿಗೆ ಹಾರಿದ

    ಲೈವ್ ಸೂಸೈಡ್: ಹಾಲು ಕುಡ್ದ ಮಕ್ಕಳೇ ಬದುಕಲ್ಲ ಎಂದು ಹಾಡಿ ಕಂಠಪೂರ್ತಿ ಕುಡಿದು ನದಿಗೆ ಹಾರಿದ

    ಉಡುಪಿ: ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ… ಎಂಬ ಸಾಂಗ್ ಹಾಡಿಕೊಂಡು ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ರೈಲ್ವೆ ಬ್ರಿಡ್ಜ್ ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಕ್ಕುಂಜೆಯ ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ನಡೆದಿದೆ.

    ಹುಬ್ಬಳ್ಳಿ ಮೂಲದ ಕಾಪು ನಿವಾಸಿ ಸಾದಿಕ್, ಎಣ್ಣೆ ಹಾಡು ಹಾಡುತ್ತಲೇ ಸ್ವರ್ಣ ನದಿಗೆ ಜಿಗಿದು ಕುಡಿದ ಮತ್ತಿನಲ್ಲಿ ಈಜಲಾಗದೇ ಸಾವನ್ನಪ್ಪಿದ ಯುವಕ.

    ಪೆರಂಪಳ್ಳಿ ರೈಲ್ವೇ ಪಟ್ಟಿಯ ಕೆಳಗೆ ಇರುವ ಪಿಲ್ಲರ್ ನ ಮೇಲೆ ಯುವಕರ ತಂಡವೊಂದು ಕುಳಿತು ಪಾರ್ಟಿ ಮಾಡುತ್ತಿದ್ದರು. ಮನಸೋ ಇಚ್ಛೆ ಬಂದಂತೆ ಕುಡಿದು ಮೋಜು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಾದಿಕ್ ಎಂಬ ಯುವಕ ಕಂಠಪೂರ್ತಿ ಕುಡಿದು ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ ಎಂಬ ಹಾಡು ಹಾಡ್ತಾ ಹಾಡ್ತಾ ನೋಡ ನೋಡುತ್ತಿದ್ದಂತೆ ಸ್ವರ್ಣ ನದಿಗೆ ಜಿಗಿದಿದ್ದಾನೆ.

    ಸಾದಿಕ್‍ನನ್ನು ರಕ್ಷಿಸಲು ಜೊತೆಗಿದ್ದ ಸಿಯಾನ್ ಎಂಬ ಯುವಕ ತಕ್ಷಣ ನದಿಗೆ ಹಾರಿದ್ದಾನೆ. ಆದರೆ ಸಾದಿಕ್‍ನನ್ನು ರಕ್ಷಿಸಲು ಸಾಧ್ಯವಾಗದೇ ಅಸ್ವಸ್ಥಗೊಂಡಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಗೆಳೆಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಈ ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯುವಕರ ಮೋಜುಮಸ್ತಿ ಮಿತಿ ಮೀರಿದ್ದು, ಕುಡಿತ ಮತ್ತು ಗಾಂಜಾ ಸೇವಿಸಲು ಬಂದಿರಬಹುದು ಎಂದು ಶಂಕಿಸಲಾಗಿದೆ. ಅಷ್ಟೇ ಅಲ್ಲದೇ ಸಾದಿಕ್ ನದಿಗೆ ಹಾರುವ ಮೊದಲು ಹಗ್ಗಕಟ್ಟಿ ಸೇತುವೆಯಿಂದ ಕೆಳಗಿಳಿಯುವ ಯೋಚನೆಯನ್ನು ಕೂಡ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಈಜಿಪುರದಿಂದ ಮಡಿಕೇರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕ ವಶ

    ಈಜಿಪುರದಿಂದ ಮಡಿಕೇರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕ ವಶ

    ಬೆಂಗಳೂರು: ಕಂಠಪೂರ್ತಿ ಕುಡಿದು ಸೈರನ್ ಹಾಕೊಂಡು ತಮಗೆ ತೋಚಿದಂತೆ ಓಡಾಡೋ ಆಂಬುಲೆನ್ಸ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೇ ವಾರದಲ್ಲಿ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಡೆ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕ ಸಿಕ್ಕಿಬಿದ್ದಿದ್ದಾನೆ.

    ಕೆ.ಆರ್. ಪುರಂನ ಸತ್ಯಸಾಯಿ ಅರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ಗೆ ಸೇರಿದ ಆಂಬುಲೆನ್ಸ್ ಚಾಲಕ ಮಹೇಶ್ ಎಂದು ಗುರುತಿಸಲಾಗಿದ್ದು, ಈತ ಈಜಿಪುರದಿಂದ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಮಡಿಕೇರಿಗೆ ಕರೆದೊಯ್ಯುತ್ತಿದ್ದ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬರುವಾಗ ಬಿಡದಿ ಬಳಿ ಕುಡಿದು ಸೈರನ್ ಬಳಸಿಕೊಂಡು ಚಾಲನೆ ಮಾಡುತ್ತಿದ್ದನು.

    ಹಲಸೂರು ಗೇಟ್ ಮಾರ್ಗದಲ್ಲಿ ಇನ್ಸ್‍ಪೆಕ್ಟರ್ ಮಹಮ್ಮದ್ ಆಂಬುಲೆನ್ಸ್ ಅನ್ನು ತಡೆದು ತಪಾಸಣೆ ನಡೆಸಿದಾಗ ಚಾಲಕನ ಕುಡಿದಿರುವುದು ತಿಳಿದಿದೆ. ನಂತರ ಪೊಲೀಸರು ಆಂಬುಲೆನ್ಸ್ ಅನ್ನು ವಶಕ್ಕೆ ಪಡೆದು ಚಾಲಕ ಮಹೇಶ್‍ಗೆ ದಂಡ ಹಾಕಿದ್ದಾರೆ.