Tag: ಡ್ರಾಗರ್

  • 10 ಜನ ದುಷ್ಕರ್ಮಿಗಳು ಯುವಕನ ಕಿಡ್ನ್ಯಾಪ್ ಮಾಡಿ ಡ್ರಾಗರ್, ಚಾಕುಗಳಿಂದ ಹಲ್ಲೆಗೈದ್ರು!

    10 ಜನ ದುಷ್ಕರ್ಮಿಗಳು ಯುವಕನ ಕಿಡ್ನ್ಯಾಪ್ ಮಾಡಿ ಡ್ರಾಗರ್, ಚಾಕುಗಳಿಂದ ಹಲ್ಲೆಗೈದ್ರು!

    ಬೆಂಗಳೂರು: ಕೊಲೆ ಮಾಡುವ ಉದ್ದೇಶದಿಂದ ಕಿಡ್ನ್ಯಾಪ್ ಮಾಡಿ ಥಳಿಸಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ.

    ಅರುಣ್ ಕುಮಾರ್ ಹಲ್ಲೆಗೊಳಗಾದ ಯುವಕ. ಶನಿವಾರ ಸಂಜೆ ವೇಳೆ ಇಂದಿರಾನಗರ ಡಿಪೋ ಬಳಿ ತಾಯಿಯನ್ನು ಬಿಟ್ಟು ಬರುತ್ತಿದ್ದಾಗ 10 ಜನ ದುಷ್ಕರ್ಮಿಗಳು ಅರುಣ್ ನನ್ನು ಕಿಡ್ನ್ಯಾಪ್ ನಾಡಿ ಹತ್ತಿರದ ಗ್ರೌಂಡ್‍ಗೆ ಕರೆದೊಯ್ದಿದ್ದರು.

    ಅಪಹರಣಗೈದ ಬಳಿಕ ಮಾತನಾಡಲೂ ಬಿಡದೆ ಕೊಲೆ ಮಾಡುವ ಉದ್ದೇಶದಿಂದ ಡ್ರಾಗರ್, ಚಾಕುಗಳಿಂದ ಹಲ್ಲೆಯನ್ನ ನಡೆಸಿದ್ರು. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಅರುಣ್, ಪೋಷಕರಿಗೆ ವಿಷಯ ತಿಳಿಸಿದ್ದಾನೆ. ನಂತರ ಆತನನ್ನು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರು.

    ಕಳೆದ ಮೂರು ತಿಂಗಳ ಹಿಂದೆ ಮನೆಯ ಬಳಿ ವಿಜಯ್ ಕುಮಾರ್ ಎಂಬಾತನ ಜೊತೆ ಕಿರಿಕ್ ಮಾಡಿಕೊಂಡಿದ್ದ ಅರುಣ್, ನಂತರ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನದ ಬಳಿಕ ವಿಜಯ್ ಕುಮಾರ್ ಕೊಲೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಈತನೆ ಕೊಲೆಗೆ ಯತ್ನಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

    ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಡ್ರಾಗರ್‍ನಿಂದ ಇರಿದು ಎಸ್ಕೇಪ್ ಆಗಲು ರೌಡಿ ಯತ್ನ-ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಫೈರಿಂಗ್

    ಡ್ರಾಗರ್‍ನಿಂದ ಇರಿದು ಎಸ್ಕೇಪ್ ಆಗಲು ರೌಡಿ ಯತ್ನ-ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಫೈರಿಂಗ್

    ಬೆಂಗಳೂರು: ನಗರದಲ್ಲಿ ರೌಡಿ ಕಾಲಿಗೆ ಗುಂಡೇಟು ಬಿದ್ದಿದೆ. ಶನಿವಾರ ರಾತ್ರಿ ಹಲಸೂರು ಕೆರೆಯ ಗುರುದ್ವಾರದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ರೌಡಿಶೀಟರ್ ಕಾರ್ತಿಕ್‍ ನನ್ನು ಪೊಲೀಸ್ ಪೇದೆ ಬಸವರಾಜ್ ಬನ್ಕರ್ ತಡೆದಿದ್ದಾರೆ.

    ಈ ವೇಳೆ ರೌಡಿಶೀಟರ್ ಪೊಲೀಸರಿಗೆ ಡ್ರಾಗರ್‍ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಜೊತೆಗಿದ್ದ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಆತನ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿಕಟ್ಟಿದ್ರು.

    ಸದ್ಯ ಗಾಯಾಳು ರೌಡಿಶೀಟರ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೌಡಿಶೀಟರ್ ಕಾರ್ತಿಕ್ ರೇಪ್ ಕೇಸ್‍ನಲ್ಲಿ ಏಳು ವರ್ಷ ಶಿಕ್ಷೆ ಅನುಭವಿಸಿದ್ದಾನೆ. ಅಲ್ಲದೇ ಈತನ ವಿರುದ್ಧ ಕಲಾಸಿಪಾಳ್ಯದಲ್ಲಿ ನಾಲ್ಕು ಪ್ರಕರಣಗಳಿತ್ತು ಅಂತ ತಿಳಿದುಬಂದಿದೆ.