Tag: ಡ್ರಗ್ ಡೀಲರ್

  • ಎಫ್‌ಬಿಐ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಡ್ರಗ್ ಡೀಲರ್ ಪಂಜಾಬ್ ಪೊಲೀಸರ ವಶಕ್ಕೆ

    ಎಫ್‌ಬಿಐ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಡ್ರಗ್ ಡೀಲರ್ ಪಂಜಾಬ್ ಪೊಲೀಸರ ವಶಕ್ಕೆ

    ಚಂಡೀಗಢ: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ (FBI) ಮೋಸ್ಟ್ ವಾಟೆಂಡ್ ಲಿಸ್ಟ್‌ನಲ್ಲಿದ್ದ ಅಂತಾರಾಷ್ಟ್ರೀಯ ಡ್ರಗ್ ಡೀಲರ್‌ನನ್ನು (International Drug Trafficker) ಪಂಜಾಬ್ ಪೊಲೀಸರು (Punjab Police) ವಶಕ್ಕೆ ಪಡೆದಿದ್ದಾರೆ.

    ಕೊಲಂಬಿಯಾ, ಅಮೆರಿಕ, ಕೆನಡಾ ಮತ್ತು ಇತರ ದೇಶಗಳಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಶೆಹ್ನಾಜ್ ಸಿಂಗ್‌ನನ್ನು ವಶಕ್ಕೆ ಪಡೆಯಲಾಗಿದೆ. ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರು ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಆತನ ಸಹಚರರನ್ನು ಬಂಧಿಸಿದ ಬಳಿಕ ಕಾರ್ಯಾಚರಣೆ ನಡೆಸಿ ಶೆಹ್ನಾಜ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್‌ಗೆ KIADBಯಿಂದ ಜಮೀನು ಮಂಜೂರು ಮಾಡಿಲ್ಲ: ಸಿಇಓ ಸ್ಪಷ್ಟನೆ

    ಶಾನ್ ಭಿಂದರ್ ಅಲಿಯಾಸ್ ಶೆಹ್ನಾಜ್ ಸಿಂಗ್, ಫೆಬ್ರವರಿ 26ರಂದು ತನ್ನ ಸಹಚರರ ಬಂಧನದ ಬಳಿಕ ಭಾರತಕ್ಕೆ ಪಲಾಯನ ಮಾಡಿದ್ದ. ಅಮೆರಿಕದಲ್ಲಿ ಶೆಹ್ನಾಜ್ ಸಹಚರರ ಬಂಧನದ ಸಂದರ್ಭ ಅಧಿಕಾರಿಗಳು ಆರೋಪಿಗಳ ನಿವಾಸ ಮತ್ತು ವಾಹನಗಳಿಂದ 391 ಕೆಜಿ ಮೆಥಾಂಫೆಟಮೈನ್, 109 ಕೆಜಿ ಕೊಕೇನ್ ಮತ್ತು ನಾಲ್ಕು ಬಂದೂಕುಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಲಲಿತ್ ಮೋದಿಗೆ ನೀಡಿದ್ದ ವಾನುವಾಟು ಪಾಸ್‌ಪೋರ್ಟ್ ರದ್ದು – ವಾನುವಾಟು ಪ್ರಧಾನಿ ಆದೇಶ

    ಫೆಬ್ರವರಿ 28 ರಂದು, ಪಂಜಾಬ್ ಸರ್ಕಾರ ರಾಜ್ಯದಲ್ಲಿ ಮಾದಕವಸ್ತು ಪಿಡುಗಿನ ಮೇಲೆ ನಡೆಯುತ್ತಿರುವ ಶಿಸ್ತುಕ್ರಮವನ್ನು ಮೇಲ್ವಿಚಾರಣೆ ಮಾಡಲು ಐದು ಸದಸ್ಯರ ಸಮಿತಿಯನ್ನು ರಚಿಸಿತು. ಮುಖ್ಯಮಂತ್ರಿ ಭಗವಂತ್ ಮಾನ್ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆದು 3 ತಿಂಗಳೊಳಗಾಗಿ ಪಂಜಾಬ್ ಮಾದಕಮುಕ್ತವಾಗಲು ಸಹಕರಿಸಿ ಎಂದು ಸೂಚನೆ ನೀಡಿದ ಬಳಿಕ ಈ ಸಮಿತಿಯನ್ನು ರಚಿಸಲಾಯಿತು. ಇದನ್ನೂ ಓದಿ: ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್

  • ಮೋಸ್ಟ್ ವಾಂಟೆಡ್ ಡ್ರಗ್ ಡೀಲರ್ ಮ್ಯಾಶಿ ಅರೆಸ್ಟ್

    ಮೋಸ್ಟ್ ವಾಂಟೆಡ್ ಡ್ರಗ್ ಡೀಲರ್ ಮ್ಯಾಶಿ ಅರೆಸ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಡೀಲ್ ಸಂಬಂಧ ಅರೆಸ್ಟ್ ಆಗದ ಹಳೆಯ ಆರೋಪಿಯೊಬ್ಬ ಕೊನೆಗೂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಮ್ಯಾಶಿ ಅರೆಸ್ಟ್ ಆದ ಮೋಸ್ಟ್ ವಾಂಟೆಂಡ್ ಡ್ರಗ್ ಡೀಲರ್. ಸ್ಯಾಂಡಲ್‍ವುಡ್ ನಲ್ಲಿ ಬಿರುಗಾಳಿಯೆಬ್ಬಿಸಿದ್ದ ಈ ಕೇಸ್ ನಲ್ಲಿ ನಟಿಯರು ಸೇರಿದಂತೆ ಸಾಕಷ್ಟು ಜನ ಅರೆಸ್ಟ್ ಆಗಿದ್ದರು. ಎ21 ಆರೋಪಿಯಾಗಿದ್ದ ಮ್ಯಾಶಿ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ. ಬೆಂಗಳೂರಿನ ಬಹುತೇಕ ಪಾರ್ಟಿಗಳಿಗೆ ಈತನೇ ಡ್ರಗ್ ಪೂರೈಸುತ್ತಿದ್ದನು ಎನ್ನಲಾಗಿದೆ. ಅಲ್ಲದೆ ಡ್ರಗ್ ಕೇಸ್ ಆರೋಪಿಗಳ ಜೊತೆ ಪಾರ್ಟಿ ಮಾಡಿರುವ ಫೋಟೊಗಳು ಸಹ ಲಭ್ಯವಾಗಿದೆ.

    ಒಂದು ಪ್ರಕರಣದಲ್ಲಿ ಬೇಲ್ ಪಡೆದು ರಾಜನಂತೆ ಎಂಟ್ರಿಕೊಟ್ಟ ಮ್ಯಾಶಿಗೆ ಸಿಸಿಬಿ ಪೊಲೀಸರು ಸರಿಯಾಗೇ ಬುದ್ದಿ ಕಲಿಸಿದ್ದಾರೆ. ಈ ಹಿಂದೆಯೇ ದಾಖಲಾಗಿದ್ದ ಮತ್ತೊಂದು ಎನ್‍ಡಿ ಪಿಎಸ್ ಪ್ರಕರಣದಲ್ಲಿ ಮ್ಯಾಶಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸಂಜನಾ, ರಾಗಿಣಿಗೆ ಸಂಕಷ್ಟ:
    ಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಮತ್ತೆ ಸಂಕಷ್ಟ ಎದುರಾಗಿದೆ. ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಹೋಟೆಲಿನ ವಾಶ್ ರೂಮಿನಲ್ಲಿ ಅವಿತಿದ್ದ ನಟಿ ಸೋನಿಯಾ ವಶಕ್ಕೆ

    ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ.  ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

  • ಕೊರೊನಾ ಕಾರಣದಿಂದ ಸಿಕ್ಕಿಬಿದ್ದ ಡ್ರಗ್ ಡೀಲರ್ ಅನೂಫ್

    ಕೊರೊನಾ ಕಾರಣದಿಂದ ಸಿಕ್ಕಿಬಿದ್ದ ಡ್ರಗ್ ಡೀಲರ್ ಅನೂಫ್

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಕಾರಣದಿಂದ ಬ್ಯುಸಿನೆಸ್ ಲಾಸ್ ಆಗಿ ಡ್ರಗ್ ಡೀಲರ್ ಮಹಮದ್ ಅನೂಫ್ ಎನ್‍ಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

    ಕಳೆದ ಗುರುವಾರ ಎನ್‍ಸಿಬಿ ಅಧಿಕಾರಿಗಳು ಭರ್ಜರಿ ಭೇಟಿಯಾಡಿದ್ದರು. ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರ ಡ್ರಗ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದರು. ಇದರಲ್ಲಿ ಅರೆಸ್ಟ್ ಆದ ಮಹಮದ್ ಅನೂಫ್, ಕೊಚ್ಚಿ ಮೂಲದವನು ಎಂದು ಎನ್‍ಸಿಬಿ ಅಧಿಕಾರಿಗಳ ತನಿಖೆ ವೇಳೆ ತಿಳಿದು ಬಂದಿದೆ.

    ಮೂಲತಃ ಕೊಚ್ಚಿ ಅವನಾದ ಅನೂಫ್ ಮೊದಲು ಬೆಂಗಳೂರಿನಲ್ಲೇ ವಾಸವಿದ್ದ. ಈ ಮುಂಚೆಯೇ ಬೆಂಗಳೂರಿನಲ್ಲಿ ಡ್ರಗ್ಸ್ ಡೀಲ್ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದ. ಈ ಹಣವನ್ನು ತೆಗೆದುಕೊಂಡು ತನ್ನೂರಿಗೆ ಹೋಗಿ ಬ್ಯುಸಿನೆಸ್ ಸ್ಟಾರ್ಟ್ ಮಾಡಿದ್ದ. ಆದರೆ ಅಷ್ಟರಲ್ಲೇ ಕೊರೊನಾ ಮಹಾಮಾರಿಗೆ ದೇಶವೇ ಲಾಕ್‍ಡೌನ್ ಆಗಿತ್ತು. ಅನೂಫ್ ಬ್ಯುಸಿನೆಸ್ ನೀರಲ್ಲಿ ಹೋಮ ಮಾಡಿದಂತೆ ಆಗಿತ್ತು. ಇದನ್ನು ಓದಿ: ಡ್ರಗ್ ಡೀಲರ್ ಅನಿಕಾಳಿಗಿವೆ ಮೂರು ನೇಮ್ – ಫುಲ್ ಡಿಟೇಲ್ಸ್ ಕಲೆಹಾಕಿದ ಎನ್‍ಸಿಬಿ

    ಈ ಲಾಸ್ ಅನ್ನು ಸರಿದೂಗಿಸಲು ಲಾಕ್‍ಡೌನ್ ವೇಳೆ ಮತ್ತೆ ಅನೂಫ್ ಬೆಂಗಳೂರಿಗೆ ಬಂದಿದ್ದಾನೆ. ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರಿಸಿ ಡ್ರಗ್ ಸಪ್ಲೇ ಮಾಡಲು ಹೋಗಿದ್ದಾನೆ. ಈ ವೇಳೆ ಆತ ಎನ್‍ಸಿಬಿ ಅಧಿಕಾರಿಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಅನೂಫ್ ಡ್ರಗ್ ಪ್ರಕರಣದ ಕಿಂಗ್‍ಪಿನ್ ಅನಿಕಾಳ ಬಳಿ ಡ್ರಗ್ ಪಡೆದು ಮಾರಾಟ ಮಾಡುತ್ತಿದ್ದ. ಇವರು ಸಾಮಾಜಿಕ ಜಾಲತಾಣದ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರು.

  • ಡ್ರಗ್ ಡೀಲರ್ ಅನಿಕಾಳಿಗಿವೆ ಮೂರು ನೇಮ್ – ಫುಲ್ ಡಿಟೇಲ್ಸ್ ಕಲೆಹಾಕಿದ ಎನ್‍ಸಿಬಿ

    ಡ್ರಗ್ ಡೀಲರ್ ಅನಿಕಾಳಿಗಿವೆ ಮೂರು ನೇಮ್ – ಫುಲ್ ಡಿಟೇಲ್ಸ್ ಕಲೆಹಾಕಿದ ಎನ್‍ಸಿಬಿ

    – ತಮಿಳುನಾಡು ಮೂಲದ ಅನಿಕಾ

    ಬೆಂಗಳೂರು: ಡ್ರಗ್ ಡೀಲರ್ ಅನಿಕಾ ಬಗ್ಗೆ ಎನ್‍ಸಿಬಿ ಅಧಿಕಾರಿಗಳು ಫುಲ್ ಡಿಟೇಲ್ಸ್ ಕಲೆಹಾಕಿದ್ದು, ಆಕೆ ತಮಿಳುನಾಡು ಮೂಲದವಳು ಎಂದು ತಿಳಿದು ಬಂದಿದೆ.

    ಕಳೆದ ಗುರುವಾರ ಎನ್‍ಸಿಬಿ ಅಧಿಕಾರಿಗಳು ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದರು. ಇವರು ದೊಡ್ಡ ಶ್ರೀಮಂತರು, ಸಿನಿಮಾ ನಟ-ನಟಿಯರಿಗೆ ಡ್ರಗ್ ಸಪ್ಲೇ ಮಾಡುತ್ತಿದ್ದರು ಎಂಬ ಮಾಹಿತಿ ಹೊರಬಂದಿತ್ತು. ಈಗ ಅದರಲ್ಲಿ ಬಂಧಿತಳಾದ ಲೇಡಿ ಕಿಂಗ್‍ಪಿನ್ ಅನಿಕಾಳ ಪೂರ್ತಿ ಮಾಹಿತಿಯನ್ನು ಎನ್‍ಸಿಬಿ ಅಧಿಕಾರಿಗಳು ಕಲೆಹಾಕಿದ್ದಾರೆ.

    ಲೇಡಿ ಡ್ರಗ್ ಡೀಲರ್ ನಿಜವಾದ ಹೆಸರು ಅನಿಕಾ, ಆದರೆ ಇವಳು ಮೂರು ನಕಲಿ ನೇಮ್‍ಗಳನ್ನು ಇಟ್ಟುಕೊಂಡಿದ್ದಳು. ಅನಿಕಾ ಡಿ, ಅನಿ ಮತ್ತು ಬಿಮನಿ ಎಂಬ ಮೂರು ಹೆಸರಿನಿಂದ ಪರಿಚಯಿಸಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಬಿಮನಿ ಎಂಬ ಹೆಸರು ಬಳಸುತ್ತಿದ್ದಳು ಎಂಬ ಮಾಹಿತಿ ಲಭಿಸಿದೆ. ಜೊತೆಗೆ ಈಕೆ ತಮಿಳುನಾಡಿನವಳಾಗಿದ್ದು, 24 ವರ್ಷ ವಯಸ್ಸಿನವಳಾಗಿದ್ದಾಳೆ.

    ಅನಿಕಾ ತಮಿಳುನಾಡಿನ ಸೇಲಂ ಸಮೀಪದ ಯರ್ಕಾಡ್ ಮೂಲದವಳು. ಅನಿಕಾ ತಂದೆ ದಿನೇಶ್‍ಗೆ ಮೂವರು ಮಕ್ಕಳಿದ್ದು, ಅನಿಕಾಳೇ ದೊಡ್ಡವಳು. ಅನಿಕಾಗೆ ಒಬ್ಬಳು ತಂಗಿ, ಒಬ್ಬ ತಮ್ಮ ಇದ್ದು ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿಕಾ ಯರ್ಕಾಡ್‍ನ ಶೆವ್ರಾಯ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಹೋಟೆಲ್ ಮ್ಯಾನೇಜ್‍ಮೆಂಟ್ ಡಿಗ್ರಿಯ ಎರಡನೇ ವರ್ಷದಲ್ಲಿ ಫೇಲ್ ಆಗಿ ವಿದ್ಯಾಭ್ಯಾಸವನ್ನು ಬಿಟ್ಟಿದ್ದಾಳೆ ಎನ್ನಲಾಗಿದೆ.

    ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಅನಿಕಾ, ಕೆಲಸ ಸಿಗದೇ ಡ್ರಗ್ ಜಾಲ ಸೇರಿಕೊಂಡಳು. ನಗರದ ದೊಡ್ಡಗುಬ್ಬಿಯಲ್ಲಿ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದು, ಇಲ್ಲಿಂದಲೇ ಡ್ರಗ್ ದಂಧೆ ನಡೆಸುತ್ತಿದ್ದಳು. ಮುಂಬೈನ ಡ್ರಗ್ ಪೆಡ್ಲರ್ ಕೊಟ್ಟ ಮಾಹಿತಿ ಮೇರೆಗೆ ಈಕೆ ಮನೆಯ ಮೇಲೆ ದಾಳಿ ಮಾಡಿದಾಗ, ಎಂಡಿಎಂಎ ಎಂಬ ಮಾದಕ ವಸ್ತು ಸಮೇತ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದಾಳೆ.

  • ಕನ್ನಡ ಸ್ಟಾರ್ ನಟಿಯ ಕ್ಲಾಸ್‍ಮೇಟ್ ಆಗಿದ್ದ ಡ್ರಗ್ ಡೀಲರ್ ಅನಿಕಾ

    ಕನ್ನಡ ಸ್ಟಾರ್ ನಟಿಯ ಕ್ಲಾಸ್‍ಮೇಟ್ ಆಗಿದ್ದ ಡ್ರಗ್ ಡೀಲರ್ ಅನಿಕಾ

    – ನಟರ ಜೊತೆಗಿನ ಫೋಟೋ ಡೀಲರ್ ಫೋನಿನಲ್ಲಿ ಪತ್ತೆ

    ಬೆಂಗಳೂರು: ಕನ್ನಡದ ಸ್ಟಾರ್ ನಟಿ ಓದಿದ ಕಾಲೇಜಿನಲ್ಲೇ ಡ್ರಗ್ ಪೆಡ್ಲರ್ ಅನಿಕಾ ಕೂಡ ವ್ಯಾಸಂಗ ಮಾಡಿದ್ದಾಳೆ ಎಂಬ ಮಾಹಿತಿ ಎನ್‍ಸಿಬಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ಗುರುವಾರ ಬಂಧಿಸಿದ ಲೇಡಿ ಡ್ರಗ್ ಡೀಲರ್ ಅನಿಕಾ ವಿಚಾರಣೆ ಮಾಡುತ್ತಿರುವ ಎನ್‍ಸಿಬಿ ಅಧಿಕಾರಿಗಳಿಗೆ ಒಂದೊಂದೆ ಸ್ಫೋಟಕ ಮಾಹಿತಿಗಳು ಸಿಕ್ಕುತಿವೆ. ಅನಿಕಾ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ್ದಳು. ಇದೇ ಕಾಲೇಜಿನಲ್ಲಿ ಓದಿದ್ದ ಕನ್ನಡ ಸ್ಟಾರ್ ನಟಿಯೊಬ್ಬರು ಆಕೆಯ ಸಹಪಾಠಿ ಎಂಬ ವಿಚಾರ ಈಗ ಅಧಿಕಾರಿಗಳಿಗೆ ಗೊತ್ತಾಗಿದೆ.

    ಇದರ ಜೊತೆಗೆ ಆ ಸ್ಟಾರ್ ನಟಿ ಕೇವಲ ಡ್ರಗ್ ಡೀಲರ್ ಸಹಪಾಠಿಯಗಿದ್ಲಾ? ಇಲ್ಲ ಆ ಸ್ಟಾರ್ ನಟಿಯೇ ಅನಿಕಾಳನ್ನು ಚಿತ್ರರಂಗದ ಮಂದಿಗೆ ಪರಿಚಯ ಮಾಡಿಕೊಟ್ಟಳಾ ಎಂಬ ಅನುಮಾನ ಮೂಡಿದೆ. ಇದೇ ನಿಟ್ಟಿನಲ್ಲಿ ಎನ್‍ಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಸದ್ಯ ಅನಿಕಾಳನ್ನು ಒಂದು ವಾರದ ತನಕ ತಮ್ಮ ಕಸ್ಟಡಿಗೆ ತೆಗೆದುಕೊಂಡಿರುವ ಎನ್‍ಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆ ಮಾಡಲಿದ್ದು, ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

    ಇದರ ಬೆನ್ನಲ್ಲೇ ಡ್ರಗ್ ಡೀಲರ್ ಅನಿಕಾಳ ಮೊಬೈಲ್ ಫೋನ್ ಅನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಅನಿಕಾ ಕನ್ನಡದ ನಟರಿಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳು ಅಧಿಕಾರಿಗಳಿಗೆ ಸಿಕ್ಕಿವೆ ಎನ್ನಲಾಗಿದೆ. ಆದರೆ ಅನಿಕಾ ನಟರನ್ನು ಯಾವ ಸಮಯದಲ್ಲಿ ಮತ್ತು ಯಾಕೆ ಭೇಟಿಯಾಗದ್ದಳು ಎಂಬ ಮಾಹಿತಿ ಹೊರಬಂದಿಲ್ಲ.

  • ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

    ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

    – ಬೆಂಗ್ಳೂರಿನಲ್ಲೇ ವಿದ್ಯಾಭ್ಯಾಸ, 6 ವರ್ಷದಿಂದ ಡ್ರಗ್ ಡೀಲರ್

    ಬೆಂಗಳೂರು: ಎನ್‍ಸಿಬಿ ಬಲೆಗೆ ಬಿದ್ದಿರುವ ಲೇಡಿ ಡ್ರಗ್ ಡೀಲರ್ ಅನಿಕಾ ಕಳೆದ ಆರು ವರ್ಷದಿಂದ ಈ ದಂಧೆ ನಡೆಸುತ್ತಿದ್ದಳು ಎಂಬ ಮಾಹಿತಿ ಹೊರಬಂದಿದೆ.

    ಗುರುವಾರ ಎನ್‍ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಶ್ರೀಮಂತ ಜನರಿಗೆ ಮತ್ತು ಕನ್ನಡದ ನಟ-ನಟಿಯರಿಗೆ ಡ್ರಗ್ ವಿತರಣೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕಿಂಗ್‍ಪಿನ್ ಆಗಿದ್ದ ಅನಿಕಾ, ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ವಿತರಣೆ ಮಾಡುತ್ತಿದ್ದಳು ಎಂಬ ಭಯಾನಕ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.

    ಅನಿಕಾ ಡ್ರಗ್ ವಿತರಣೆ ಮಾಡುತ್ತಿದ್ದುದಲ್ಲದೇ ಸ್ವತಃ ಡ್ರಗ್ ವ್ಯಸನಿಯಾಗಿದ್ದಳು. ಗುರುವಾರ ಅನಿಕಾಳನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದಾಗ ಆಕೆ ಡ್ರಗ್ ಸೇವನೆ ಮಾಡಿದ್ದಳು. ಆಕೆಯನ್ನು ಅಧಿಕಾರಿಗಳು ಕಚೇರಿಗೆ ಕರೆತಂದು 10 ಗಂಟೆಯ ನಂತರ ಆಕೆ ಮತ್ತಿನಿಂದ ಹೊರಬಂದ ಬಳಿಕ ತನಿಖೆ ಮಾಡಿದ್ದಾರೆ. ತನಿಖೆ ವೇಳೆ ತಾನೂ ಬೆಂಗಳೂರಿನಲ್ಲೇ ವ್ಯಾಸಂಗ ಮಾಡಿದ್ದು, ಕಾಲೇಜು ದಿನಗಳಿಂದಲೇ ಡ್ರಗ್ ವಿತರಿಸುತ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ.

    ಸುಮಾರು ಆರು ವರ್ಷದಿಂದಲೂ ಅನಿಕಾ ಈ ಡ್ರಗ್ಸ್ ದಂಧೆ ಮಾಡುತ್ತಿರುವುದು ತಿಳಿದು ಬಂದಿದೆ. ಜೊತೆಗೆ ಆಕೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾಳೆ. ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಶ್ರೀಮಂತರು ಮತ್ತು ಸ್ಯಾಂಡಲ್‍ವುಡ್‍ನ ಖ್ಯಾತ ನಟ-ನಟಿಯರಿಗೂ ಡ್ರಗ್ಸ್ ಸಪ್ಲೇ ಮಾಡುತ್ತಿರುವ ಬಗ್ಗೆ ಅನಿಕಾ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಸದ್ಯ ಎನ್‍ಸಿಬಿ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.

  • ಕನ್ನಡದ ಖ್ಯಾತ ನಟ, ನಟಿಯರಿಗೆ ಡ್ರಗ್ ಡೀಲರ್ಸ್ ಜೊತೆ ನಂಟು

    ಕನ್ನಡದ ಖ್ಯಾತ ನಟ, ನಟಿಯರಿಗೆ ಡ್ರಗ್ ಡೀಲರ್ಸ್ ಜೊತೆ ನಂಟು

    – ಬೆಂಗ್ಳೂರಿನಲ್ಲಿ ಲೇಡಿ ಡ್ರಗ್ ಪೆಡ್ಲರ್ಸ್ ಅರೆಸ್ಟ್
    – ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

    ನವದೆಹಲಿ: ಕರ್ನಾಟಕದ ಕೆಲ ಪ್ರಮುಖ ನಟ, ನಟಿಯರು ಮತ್ತು ಸಂಗೀತ ನಿರ್ದೇಶಕರಿಗೆ ಡ್ರಗ್ ಡೀಲರ್ ಜೊತೆ ನಂಟಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ನಾರ್ಕೋಟಿಕ್ಸ್ ಬ್ಯೂರೋ ತಿಳಿಸಿದೆ.

    ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್‍ನಿಂದ 145 ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು 2.20 ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಪಡಿಸಿಕೊಂಡಿದ್ದೇವೆ. ನಂತರ ಬೆಂಗಳೂರಿನ ನಿಕೂ ಹೌಸ್‍ನಲ್ಲಿ 96 ಎಂಡಿಎಂಎ ಮಾತ್ರೆಗಳು ಮತ್ತು 180 ಎಲ್‍ಎಸ್ಡಿ ಬ್ಲಾಟ್ಸ್ ಗಳನ್ನು ವಶಪಡಿಸಿಕೊಂಡಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಉಪನಿರ್ದೇಶಕ ಕೆಪಿ ಎಸ್ ಮಲ್ಹೋತ್ರಾ ತಿಳಿಸಿದ್ದಾರೆ.

    ಇದೇ ಕಾರ್ಯಚರಣೆಯ ಮುಂದುವರಿದ ಭಾಗವಾಗಿ, ಪ್ರಕರಣದ ಮುಖ್ಯ ಕಿಂಗ್‍ಪಿನ್ ಆಗಿದ್ದ ಲೇಡಿ ಡ್ರಗ್ ಡೀಲರ್ ಬಂಧನವಾಗಿದೆ. ಜೊತೆಗೆ ಬೆಂಗಳೂರಿನ ದೊಡ್ಡ ಗುಬ್ಬಿಯಲ್ಲಿರುವ ಆಕೆಯ ಮನೆಯಿಂದ ಎಂಡಿಎಂಎಯ 270 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ವೇಳೆ ಎಂ ಅನೂಪ್, ಆರ್ ರವೀಂದ್ರನ್ ಮತ್ತು ಅನಿಖಾ ಡಿ ಎಂಬ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

    ಬಂಧಿತ ಆರೋಪಿಗಳು ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರು, ನಟರು ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದಂತೆ ಸಮಾಜದ ಶ್ರೀಮಂತ ವರ್ಗಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬೆಂಗಳೂರು ಎನ್‍ಸಿಬಿ ಘಟಕದಿಂದ ಹೆಚ್ಚಿನ ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

    ಎನ್‍ಸಿಬಿ ಈ ತಿಂಗಳ ಆರಂಭದಲ್ಲಿ ಡ್ರಗ್ ಸಪ್ಲೇ ಮಾಡುತ್ತಿದ್ದ ಆರೋಪದ ಮೇಲೆ ಡೀಲರ್ ರಹಮಾನ್ ಕೆ ಅನ್ನು ಬಂಧಿಸಿತ್ತು. ಈತ ತನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ನೆರೆಹೊರೆಯವರಿಗೆ ಎಂಡಿಎಂಎ ಮತ್ತು ಇತರ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಅನ್‍ಲೈನ್‍ನಲ್ಲಿ ಬಿಟ್‍ಕಾಯಿನ್‍ಗಳ ವಿನಿಮಯದಿಂದ ಎಂಡಿಎಂಎ ಮಾತ್ರೆಗಳ ಖರೀದಿ ಮಾಡುತ್ತಿದ್ದು, ತನಿಖೆ ವೇಳೆ ತಿಳಿದು ಬಂದಿತ್ತು.