Tag: ಡ್ರಗ್ಸ್ ಪೆಡ್ಲರ್

  • ಬೆಂಗಳೂರಲ್ಲಿ ಬೃಹತ್ ಪ್ರಮಾಣದ ಗಾಂಜಾ ಸೀಜ್

    ಬೆಂಗಳೂರಲ್ಲಿ ಬೃಹತ್ ಪ್ರಮಾಣದ ಗಾಂಜಾ ಸೀಜ್

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಡಿಜೆ ಹಳ್ಳಿ ಪೊಲೀಸರು ಬೃಹತ್ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಇದು ಸುಮಾರು 2.4 ಕೋಟಿ ರೂ. ಮೌಲ್ಯದ್ದು ಎಂದು ತಿಳಿಸಿದ್ದಾರೆ.

    ಟ್ಯಾನರಿ ರಸ್ತೆಯ ಈದ್ಗಾ ಮೈದಾನದ (Idga Ground) ಬಳಿ ದಾಳಿ ನಡೆಸಿದ ಪೊಲೀಸರು ಗಾಂಜಾ (Drugs) ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಫೈರೋಜ್ ಖಾನ್ ಹಾಗೂ ಪ್ರಸಾದ್ ಬಂಧಿತ ಆರೋಪಿಗಳು. ಇದನ್ನೂ ಓದಿ: Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ

    ಗಾಂಜಾ ಸೀಜ್ ಮಾಡಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳು, ಇನ್ನಿಬ್ಬರು ಪ್ರಮುಖ ಡ್ರಗ್ಸ್ ಪೆಡ್ಲರ್‌ಗಳ (Drug Peddler) ಹೆಸರನ್ನು ಬಾಯಿ ಬಿಟ್ಟಿದ್ದಾರೆ. ಇದನ್ನೂ ಓದಿ: ಹೆಡ್ ಮಾಸ್ಟರ್ ಕಿರುಕುಳ ಆರೋಪ- ಡೆತ್‍ನೋಟ್ ಬರೆದು ರೈಲಿಗೆ ತಲೆಕೊಟ್ಟ ಶಿಕ್ಷಕಿ

    ಸದ್ಯ ಇನ್ನಿಬ್ಬರು ಪೆಡ್ಲರ್‌ಗಳನ್ನು ಪತ್ತೆ ಮಾಡಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಡಿಜೆ ಹಳ್ಳಿ ಪೊಲೀಸರು ಕಿಂಗ್ ಪಿನ್‌ಗಳಿಗಾಗಿ ತೀವ್ರ ಹುಡುಕಾಟವನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ಆಲಿಯಾ ಭಟ್

  • ಮಂಗಳೂರು ಪೊಲೀಸರಿಂದ ಓಮನ್ ದೇಶದ ಡ್ರಗ್ಸ್ ಪೆಡ್ಲರ್ ಬಂಧನ

    ಮಂಗಳೂರು ಪೊಲೀಸರಿಂದ ಓಮನ್ ದೇಶದ ಡ್ರಗ್ಸ್ ಪೆಡ್ಲರ್ ಬಂಧನ

    ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ ಮಾಫಿಯಾ ಹೆಚ್ಚಾಗಿದ್ದು, ಇಂದು ಮಂಗಳೂರು ಪೊಲೀಸರು ಡ್ರಗ್ ಪೆಡ್ಲರ್ಸ್‍ಗಳನ್ನು ಬಂಧಿಸಿದ್ದಾರೆ.

    ಮಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದು ಇಂದು ಓಮನ್ ದೇಶದ ಪ್ರಜೆ ಅಹಮ್ಮದ್ ಹಾಗೂ ಹಿಮಾಚಲ ಪ್ರದೇಶದ ರಾಮ್ ಎಂಬವನನ್ನು ಬಂಧಿಸಿದ್ದಾರೆ. ಪ್ರವಾಸಿ ವೀಸಾದಲ್ಲಿ ಗೋವಾಕ್ಕೆ ಬಂದಿದ್ದ ಅಹಮ್ಮದ್ ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದು ನಗರದ ಲಾಡ್ಜ್ ಒಂದರಲ್ಲಿ ತಂಗಿದ್ದ. ಈತನಿಗೆ ರಾಮ್ ಸಹ ಜೊತೆಯಾಗಿದ್ದು, ಇವರು ಮಾದಕ ದ್ರವ್ಯದ ಚಟದ ದಾಸರಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಲಾಡ್ಜ್‌ಗೆ ದಾಳಿ ನಡೆಸಿದ ಮಂಗಳೂರು ಉತ್ತರ ಠಾಣಾ ಪೊಲೀಸರು 51 ಗ್ರಾಂ ಗಾಂಜಾ, 2 ಗ್ರಾಂ ಎಂ.ಡಿ.ಎಂ.ಎ ಸಹಿತ ಈ ವ್ಯಸನಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಬಾಂಗ್ಲಾ ವಲಸಿಗರ ವಿರುದ್ದ ಕ್ರಮ: ಬಿಎಸ್ ವೈ

    ಓಮನ್ ದೇಶದ ಪ್ರಜೆ ಅಹಮ್ಮದ್ ಪಾಸ್ ಪೋರ್ಟ್ ವ್ಯಾಲಿಡಿಟಿ ಮುಗಿದಿದ್ದರೂ, ಅನಧಿಕೃತವಾಗಿ ಇಲ್ಲಿ ತಂಗಿದ್ದರಿಂದ ಎನ್.ಡಿ.ಪಿ.ಎಸ್ ಕೇಸ್ ಜೊತೆ ಪಾಸ್ ಪೋರ್ಟ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲರ್ಸ್ ಹಾವಳಿ ಹೆಚ್ಚಾಗಿದ್ದು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿ ಪೆಡ್ಲರ್ಸ್‍ಗಳನ್ನು ಹೆಡೆಮುರಿಕಟ್ಟುತ್ತಿದ್ದಾರೆ. ಇದನ್ನೂ ಓದಿ: ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್

  • ಸಿಸಿಬಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆ – ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

    ಸಿಸಿಬಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆ – ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

    ಬೆಂಗಳೂರು: ಸಿಲಿಕಾನ್ ಸಿಟಿ ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

    ಮೊದಲಿಗೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕಂಟೋನ್ಮೆಂಟ್ ಮುಂಭಾಗದಲ್ಲಿ ಕಾರ್ಯಾಚರಣೆಗೆ ಇಳಿದ ಸಿಸಿಬಿ ಪೊಲೀಸರು, ಒರಿಸ್ಸಾ ಮೂಲದ ಮಿಥುನ್ ದಿಗಲ್ ಅನ್ನೋ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನಿಂದ ಸುಮಾರು ಎರಡು ಲಕ್ಷ ಬೆಲೆ ಬಾಳುವ ಡ್ರಗ್ಸ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಇದಾದ ನಂತರ ಇದೇ ಪೊಲೀಸ್ ತಂಡ ಮತ್ತೊಂದು ಕಾರ್ಯಾಚರಣೆ ನಡೆಸಿ ಡಿಜೆ ಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರ ಬಳಿ ನೈಜೀರಿಯಾ ಮೂಲದ ವೈಟ್ ಅನ್ನೋ ವ್ಯಕ್ತಿಯನ್ನು ವಶಕ್ಕೆ ಪಡೆದು ವಿವಿಧ ಮಾದರಿಯ ಡ್ರಗ್ಸ್ ಮತ್ತು ಗಾಂಜಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಭಾರತ ಮೂಲದಿಂದ ರೈಲುಗಳ ಮೂಲಕ ಡ್ರಗ್ಸ್ ಗಳನ್ನು ತಂದು ಹೋಲ್‍ಸೇಲ್ ರೂಪದಲ್ಲಿ ಇಲ್ಲಿನ ಸ್ಥಳೀಯ ಮಾರಾಟಗಾರರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

    ಸ್ಥಳೀಯ ಮಾರಾಟಗಾರರು, ನಗರದ ಹೈ-ಫೈ ಕಾಲೇಜುಗಳು, ಪಬ್‍ಗಳು, ಸೇರಿದಂತೆ ನಗರದ ಐಷಾರಾಮಿ ಜನರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಸದ್ಯ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.