Tag: ಡ್ರಗ್

  • ದೆಹಲಿಗೆ ಡ್ರಗ್ ರಾಕೆಟ್‌ ಹಿಂದೆ ದುಬೈ, ಲಂಡನ್ ನಂಟು – ದುಬೈನಲ್ಲಿರುವ ಭಾರತೀಯನಿಂದಲೇ ಡ್ರಗ್ ಮಾಫಿಯಾ

    ದೆಹಲಿಗೆ ಡ್ರಗ್ ರಾಕೆಟ್‌ ಹಿಂದೆ ದುಬೈ, ಲಂಡನ್ ನಂಟು – ದುಬೈನಲ್ಲಿರುವ ಭಾರತೀಯನಿಂದಲೇ ಡ್ರಗ್ ಮಾಫಿಯಾ

    ನವದೆಹಲಿ: 5,000 ಕೋಟಿ ರೂ.ಗಳ ಡ್ರಗ್ಸ್ (Drugs) ದಂಧೆಯ ಬೆನ್ನು ಬಿದ್ದು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ (Delhi Police) ತಂಡಕ್ಕೆ ಲಂಡನ್ ಮತ್ತು ದುಬೈ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಜಾಲದ ಮಾಹಿತಿ ಲಭ್ಯವಾಗಿದೆ. ದಂಧೆಯ ಹಿಂದಿರುವ ಆರೋಪಿ ತುಷಾರ್ ಗೋಯಲ್ ಸೇರಿದಂತೆ ಇತರೆ ಆರೋಪಿಗಳ ಪ್ರಾಥಮಿಕ ವಿಚಾರಣೆಯ ಬಳಿಕ ಈ ಮಾಹಿತಿ ಸ್ಪಷ್ಟವಾಗಿದೆ.

    ಪ್ರಕರಣದಲ್ಲಿ ದಕ್ಷಿಣ ದೆಹಲಿಯ ಸರೋಜಿನಿ ನಗರದ ನಿವಾಸಿ ವೀರೇಂದ್ರ ಬಸೋಯಾ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಬಸೋಯಾ ದುಬೈನಿಂದ ಬೃಹತ್ ಡ್ರಗ್ ಸಿಂಡಿಕೇಟ್ ನಡೆಸುತ್ತಿದ್ದಾನೆ ಎನ್ನಲಾಗಿದೆ. ಕಳೆದ ವರ್ಷ ಪುಣೆ ಪೊಲೀಸರು 3,000 ಕೋಟಿ ರೂಪಾಯಿ ಮೌಲ್ಯದ ‘ಮಿಯಾಂವ್ ಮಿಯಾಂವ್’ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲೂ ಬಸೋಯಾ ಹೆಸರು ಕೇಳಿಬಂದಿತ್ತು. ಇದನ್ನೂ ಓದಿ: ದಲಿತ ಶಿಕ್ಷಕ ಸೇರಿ ನಾಲ್ವರ ಭೀಕರ ಹತ್ಯೆ ಕೇಸ್; ಆರೋಪಿಗೆ ಗುಂಡೇಟು‌

    ಪುಣೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಂಧನದಿಂದ ಪಾರಾಗಲು ಬಸೋಯಾ ದೆಹಲಿಯಿಂದ ದುಬೈಗೆ ಪರಾರಿಯಾಗಿದ್ದ. ದೆಹಲಿ ಪ್ರಕರಣದ ಆರೋಪಿ ತುಷಾರ್ ಗೋಯಲ್ ಜೊತೆ ಬಸೋಯಾ ಅವರ ನಿಕಟ ಸಂಬಂಧ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಬಸೋಯಾ ಅವರು ತಮ್ಮ ಡೀಲ್‌ಗಳಲ್ಲಿ ಪ್ರತಿ ವಿತರಣೆಗೆ 4 ಕೋಟಿ ರೂ.ಗಳನ್ನು ಗೋಯಲ್‌ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ದೆಹಲಿ ಪೊಲೀಸ್ ವಿಶೇಷ ಕೋಶವು ಮುಂಬೈ, ಪುಣೆ ಮತ್ತು ಇತರ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರಗ್ ಮಾಫಿಯಾಗಳನ್ನು ಈ ಪ್ರಕಣದ ವ್ಯಾಪ್ತಿಗೆ ಸೇರಿಸಲು ತನ್ನ ತನಿಖೆಯನ್ನು ವಿಸ್ತರಿಸಿದೆ. ಎಲ್ಲರೂ ಸಾಮಾನ್ಯವಾಗಿ ಒಂದೇ ಸಿಂಡಿಕೇಟ್‌ಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ. ದಕ್ಷಿಣ ದೆಹಲಿಯಲ್ಲಿ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ 500 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡ ನಂತರ ತುಷಾರ್ ಗೋಯಲ್ ಅವರನ್ನು ಅ.2 ರಂದು ಬಂಧಿಸಲಾಯಿತು. ಇದನ್ನೂ ಓದಿ: ಈರುಳ್ಳಿ, ಬೆಳ್ಳುಳ್ಳಿ ಆಯ್ತು – ಈಗ ದಿಢೀರ್‌ ಟೊಮೆಟೊ ದರ ಭಾರೀ ಏರಿಕೆ

    ಗೋಯಲ್ ಅವರನ್ನು ಇತರ ಮೂವರೊಂದಿಗೆ ಬಂಧಿಸಲಾಯಿತು. ಹಿಮಾಂಶು ಕುಮಾರ್ ಮತ್ತು ದೆಹಲಿಯ ಔರಂಗಜೇಬ್ ಸಿದ್ದಿಕಿ ಮತ್ತು ಭರತ್ ಕುಮಾರ್ ಜೈನ್ ಅವರನ್ನು ಬೃಹತ್ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಪೊಲೀಸರ ಪ್ರಕಾರ, ಕೊಕೇನ್ ಅನ್ನು ವಿವಿಧ ರಾಜ್ಯಗಳಿಂದ ರಸ್ತೆ ಮೂಲಕ ದೆಹಲಿಗೆ ಕಳ್ಳಸಾಗಣೆ ಮಾಡಲಾಗಿದ್ದು, ಗಾಂಜಾ ಥಾಯ್ಲೆಂಡ್‌ನ ಫುಕೆಟ್‌ನಿಂದ ಹುಟ್ಟಿಕೊಂಡಿದೆ. ಆರೋಪಿಗಳು ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಕ್ರಿಪ್ಟೋಕರೆನ್ಸಿಯನ್ನು ಬಳಸಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (ಎನ್‌ಡಿಪಿಎಸ್) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

  • ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

    ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

    ಪಣಜಿ: ಬಿಜೆಪಿ ನಾಯಕಿ ಸೋನಾಲಿ ಪೋಗಟ್‌ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಾರ್ಟಿ ವೇಳೆ ಪೋಗಟ್‌ಗೆ ಬಲವಂತವಾಗಿ ಮಾದಕ ದ್ರವ್ಯ (ಡ್ರಗ್ಸ್‌) ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋನಾಲಿ ಫೋಗಟ್ ಅವರು ಗೋವಾದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸಹಚರರು ಬಲವಂತವಾಗಿ ಮಾದಕ ದ್ರವ್ಯ ನೀಡಿದ್ದಾರೆ. ರೆಸ್ಟೋರೆಂಟ್‌ನಿಂದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಇದು ತಿಳಿದುಬಂದಿದ್ದು, ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

    ಬಿಜೆಪಿ ನಾಯಕಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಸಹಚರರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಅವರು ನಿರಂತರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸೋನಾಲಿ ಪೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಸೊನಾಲಿ ಫೋಗಟ್ ಆತ್ಮಹತ್ಯೆ ಪ್ರಕರಣ- ಇಬ್ಬರು ಸಹಚರರ ವಿರುದ್ಧ ಕೇಸ್

    ಟಿಕ್‌ ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೋನಾಲಿ ಪೋಗಟ್‌, 14ನೇ ಆವೃತ್ತಿಯ ʼಬಿಗ್‌ಬಾಸ್‌ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ಸ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

    ಡ್ರಗ್ಸ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

    ಮಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಆ್ಯಂಕರ್ ಕಮ್ ನಟಿ ಅನುಶ್ರೀ ವಿರುದ್ಧ ಸ್ಯಾಂಡಲ್‍ವುಡ್ ಡ್ರಗ್ಸ್ ಲಿಂಕ್ ಪ್ರಕರಣ ಮತ್ತೆ ಅಂಟಿಕೊಂಡಿದೆ. ಇದೀಗ ಮಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್  ಶೀಟ್‍ನಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಲಾಗಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಸ್ನೇಹಿತ ಕಿಶೋರ್ ಅಮನ್ ಶೆಟ್ಟಿ, ಅನುಶ್ರೀ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರು. ಅಲ್ಲದೆ ರೂಂಗೆ ಕೂಡ ತರುತ್ತಿದ್ದರು ಎಂದು  ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ 

    ಅನುಶ್ರೀ ಮಾದಕ ದ್ರವ್ಯ ಸಾಗಾಟದೊಂದಿಗೆ ಸ್ನೇಹಿತರೊಂದಿಗೆ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು. ತರುಣ್, ನಾನು ಹಾಗೂ ಅನುಶ್ರೀ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದೆವು. ಆಗ ಅನುಶ್ರೀ ನಮ್ಮ ರೂಂಗೆ ಎಕ್ಟಸಿ ಡ್ರಗ್ಸ್ ತರುತ್ತಿದ್ದರು ಎಂದು ಅಮನ್ ಶೆಟ್ಟಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಆರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಅನುಶ್ರೀ ಮತ್ತೆ ಡ್ರಗ್ಸ್ ಶಾಕ್ ಎದುರಾಗಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ನಿರೂಪಕಿ ಅನುಶ್ರೀಗೆ ಕ್ಲೀನ್ ಚಿಟ್ ಸಾಧ್ಯತೆ

  • ರಿಯಾ ಚಕ್ರವರ್ತಿ ಮತ್ತು ಶೋವಿಕ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ಅರೆಸ್ಟ್

    ರಿಯಾ ಚಕ್ರವರ್ತಿ ಮತ್ತು ಶೋವಿಕ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ಅರೆಸ್ಟ್

    ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿರುವ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್‍ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ನಾರ್ಕೋಟಿಕ್ಸ್ ಬ್ಯೂರೋ(ಎನ್‍ಸಿಬಿ) ಬಂಧಿಸಿದೆ.

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಬೆಳಕಿಗೆ ಬಂದ ನಂತರ ಪರಾರಿಯಾಗಿದ್ದ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ಎನ್‍ಸಿಬಿ ಈಗ ಮುಂಬೈನ ಪಶ್ಚಿಮ ಉಪನಗರದಲ್ಲಿ ಬಂಧಿಸಿದೆ.

    ಮಹಕಲ್ ಈ ಪ್ರಕರಣದ ಆರೋಪಿ ಅನುಜ್ ಕೇಶ್ವಾನಿಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದನು. ನಂತರ ಅದನ್ನು ಕೈಜಾನ್ ಎಂಬ ವ್ಯಕ್ತಿಗೆ ಹಸ್ತಾಂತರಿಸುತ್ತಿದ್ದನು. ಕೈಜಾನ್ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್ ರಜಪೂತ್‍ಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದ.

    ಈ ಕುರಿತಾಗಿ ಸುಳಿವು ಸಿಕ್ಕಿರುವ ಎನ್‍ಸಿಬಿ ಅಧಿಕಾರಿಗಳು ಮತ್ತೊಬ್ಬ ಪೆಡ್ಲರ್ ನ ಮೇಲೆ ದಾಳಿ ನಡೆಸಿ 2.5 ಕೋಟಿ ರೂ.ಗಳ ಮೌಲ್ಯದ ಮಲಾನಾ ಕ್ರೀಮ್ ಅನ್ನು ವಶಪಡಿಸಿಕೊಂಡಿದ್ದಾರೆ

    ಸುಮಾರು ಒಂದು ವಾರದ ಹಿಂದೆ ಎನ್‍ಸಿಬಿ ದಾಖಲಿಸಿಕೊಂಡಿರುವ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್‍ಗೆ ವಿಶೇಷ ಎನ್‍ಡಿಪಿಎಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

  • ಬೇರೆಯವರಿಗೆ ಸ್ಫೂರ್ತಿಯಾಗ್ಬಾರ್ದು, ಹೆಸರು ಬಹಿರಂಗವಾಗಲಿ: ನೀತು ಶೆಟ್ಟಿ

    ಬೇರೆಯವರಿಗೆ ಸ್ಫೂರ್ತಿಯಾಗ್ಬಾರ್ದು, ಹೆಸರು ಬಹಿರಂಗವಾಗಲಿ: ನೀತು ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಘಮಲು ಇರುವುದು ಸತ್ಯ. ಆದರೆ ಅದು ಬೇರೆಯವರಿಗೆ ಸ್ಫೂರ್ತಿಯಾಗಬಾರದು. ಹೀಗಾಗಿ ಮಾಫಿಯಾದಲ್ಲಿ ಇರುವವರ ಹೆಸರುಗಳು ಬಹಿರಂಗವಾಗಲಿ ಎಂದು ನಟಿ ನೀತು ಶೇಟ್ಟಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಚಿತ್ರರಂಗದವರ ಜೊತೆ ನಾನು ಪಾರ್ಟಿ ಮಾಡಲ್ಲ. ಮಾಡಬಾರದು ಅಂತ ಏನಿಲ್ಲ. ಆದರೆ ನನಗೆ ಅಷ್ಟೋಂದು ಗೆಳೆಯರು ಇಂಡಸ್ಟ್ರಿನಲ್ಲಿ ಇಲ್ಲ. ಡ್ರಗ್ಸ್ ಮಾಫಿಯಾದಲ್ಲಿದ್ದವರ ಹೆಸರು ಬಹಿರಂಗವಾಗಲಿ. ಯಾಕಂದರೆ ಇದು ಬೇರೆಯವರಿಗೆ ಸ್ಫೂರ್ತಿ ಆಗಬಾರದು ಎಂದರು.

    ಇಂಡಸ್ಟ್ರಿನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದು ಸ್ಫೋಟಕ ನ್ಯೂಸ್ ಆಗುವುದು ಸಹಜ. ಆದರೆ ಇಡೀ ಭಾರತದಲ್ಲಿ ಕೂಡ ಇಂತಹ ಒಂದು ಸಮಸ್ಯೆ ಇದೆ ಎಂಬುದನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ. ಹಾಗೆಯೇ ಪೊಲೀಸರು ಕೂಡ ಈ ಸಂಬಂಧ ಹುಡುಕಾಟಗಳನ್ನು ನಡೆಸುತ್ತಲೇ ಇದ್ದಾರೆ. ಈ ಮೂಲಕ ಇಂಡಸ್ಟ್ರಿನಲ್ಲಿ ಮಾತ್ರವಲ್ಲ ದೇಶದ ಒಳಗಡೆಯೇ ಇದೆ ಎಂಬುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.

    ಇದು ಒತ್ತಡ ನಿಯಂತ್ರಿಸಲು ಇದನ್ನು ಉಪಯೋಗಿಸುತ್ತಾರೆ. ಆದರೆ ಇದು ಕೂಲ್ ಅಲ್ಲ. ಕಾನೂನು ಬಾಹಿರವಾಗಿ ಇರುವಂತದ್ದನ್ನು ಮಾಡುವುದು ಸರಿಯಲ್ಲ. ಇನ್ನು ಕ್ರಿಯೇಟಿವ್ ಫೀಲ್ಡ್ ನಲ್ಲಿ ಇರುವವರು ಇದನ್ನು ಜಾಸ್ತಿ ಸೇವನೆ ಮಾಡುತ್ತಾರಂತೆ. ಯಾಕೆಂದರೆ ಅವರ ಕ್ರಿಯೇಟಿವ್ ಎಕ್ಸ್ ಪ್ರೆಶನ್ ಇನ್ನೂ ಚೆನ್ನಾಗಿ ಬರಬೇಕೆಂದು ಸೇವನೆ ಮಾಡುತ್ತಾರಂತೆ ಎಂಬುದನ್ನು ನಾನು ಕೇಳಿದ್ದೇನೆ. ಆದರೆ ಪ್ರತಿಭೆ, ಲಕ್, ಪರಿಶ್ರಮ ಇದ್ದರೆ ಮಾತ್ರ ಸ್ಟಾರ್ ಡಮ್ ಎಂದರು.

    ಆಲ್ಕೋಹಾಲ್‍ಗೇ ಅಡಿಕ್ಟ್ ಆಗಿರಬಾರದು ಅಂತ ನಂಬಿರೋಳು ನಾನು. ಅಂತದ್ರಲ್ಲಿ ಡ್ರಗ್ಸ್ ಸೇವನೆ ಮಾಡುವವರನ್ನು ಶಿಕ್ಷೆ ಗುರಿಪಡಿಸಬೇಕು. ಇವೆಲ್ಲವನ್ನೂ ನಿಲ್ಲಿಸಬೇಕು. ಒಟ್ಟಿನಲ್ಲಿ ನಮ್ಮ ಚಿತ್ರರಂಗದ ಸ್ವಾಸ್ಥ್ಯ ಕೆಡಿಸುವಂತಹ ಕೆಲಸ ಆಗಬಾರದು ಎಂದು ಅವರು ತಿಳಿಸಿದರು.

  • ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    – ಸೌಂದರ್ಯ ಹೆಚ್ಚಿಸಿಕೊಳ್ಳಲು ಡ್ರಗ್ಸ್ ಹಿಂದೆ ಬಿದ್ದಿದ್ದ ನಟಿಯರು

    ಬೆಂಗಳೂರು: ಡ್ರಗ್ಸ್ ಕಸ್ಟಮರ್ಸ್ ಗಳಲ್ಲಿ ನಟರಿಗಿಂತ ನಟಿಯರೇ ಹೆಚ್ಚು ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತ ಡ್ರಗ್ ಡೀಲರ್ ಅನೂಪ್ ಬಾಯ್ಬಿಟ್ಟಿದ್ದಾನೆ.

    ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ದಂಧೆಯ ಘಾಟು ಜೋರಾಗಿ ಬರುತ್ತಿದೆ. ಗುರುವಾರ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ ಮೂವರು ಹೈಟೆಕ್ ಡ್ರಗ್ ಪೆಡ್ಲರ್ ಗಳು ವಿಚಾರಣೆ ವೇಳೆ ಒಂದೇ ಒಂದೇ ಭಯಾನಕ ಸತ್ಯವನ್ನು ಹೊರಹಾಕುತ್ತಿದ್ದಾರೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ನಟಿಯರು ಡ್ರಗ್ಸ್ ಹಿಂದೆ ಬಿದ್ದಿದ್ದರು ಎಂಬ ಮಾಹಿತಿ ಲಭ್ಯವಾಗುತ್ತಿದೆ.

    ಮೂವರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದಿರುವ ಎನ್‍ಸಿಬಿ ಅಧಿಕಾರಿಗಳು ದಿನ ಒಬ್ಬರಂತೆ ಡ್ರಿಲ್ ಮಾಡುತ್ತಿದ್ದಾರೆ. ಶುಕ್ರವಾರ ಕಿಂಗ್‍ಪಿನ್ ಅನಿಕಾಳನ್ನು ವಿಚಾರಣೆ ಮಾಡಲಾಗಿತ್ತು. ಅನಿಕಾ ತಾನು ಆರು ವರ್ಷದಿಂದ ಡ್ರಗ್ ಡೀಲರ್ ಆಗಿದ್ದು, ಕಾಲೇಜಿನಲ್ಲೇ ಡ್ರಗ್ ಸಪ್ಲೇ ಮಾಡುತ್ತಿದ್ದೆ. ಜೊತೆಗೆ ಸದ್ಯ ಕನ್ನಡದ ಸ್ಟಾರ್ ನಟಿ ತನ್ನ ಸಹಪಾಠಿ ಎಂಬ ವಿಚಾರವನ್ನು ಹೇಳಿದ್ದಳು. ಈಗ ಅನೂಪ್, ನಟರಿಗಿಂತ ನಟಿಯರೇ ಹೆಚ್ಚು ಡ್ರಗ್ ಖರೀದಿ ಮಾಡುತ್ತಿದ್ದರು ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.

    ಗುರುವಾರ ಅನಿಕಾ, ಅನೂಪ್ ಮತ್ತು ರೀಜೇಸ್‍ನನ್ನು ಎನ್‍ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಡ್ರಗ್ ಡೀಲರ್ಸ್ ಗಳು ಹಲವಾರು ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಯಾಂಡಲ್‍ವುಡ್‍ನ ಹಲವು ನಟಿಯರಿಗೆ ಎನ್‍ಸಿಬಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ.

  • ಆಯುರ್ವೇದ ಔಷಧವೆಂದು ಡ್ರಗ್ ಸಾಗಣೆ- 1 ಸಾವಿರ ಕೋಟಿ ಬೆಲೆಯ ಮಾದಕ ವಸ್ತು ವಶಕ್ಕೆ

    ಆಯುರ್ವೇದ ಔಷಧವೆಂದು ಡ್ರಗ್ ಸಾಗಣೆ- 1 ಸಾವಿರ ಕೋಟಿ ಬೆಲೆಯ ಮಾದಕ ವಸ್ತು ವಶಕ್ಕೆ

    ಮುಂಬೈ: ಅಫ್ಘಾನಿಸ್ಥಾನದಿಂದ ಕಳ್ಳಸಾಗಣೆ ಮಾಡಿದ್ದ ಸುಮಾರು 1 ಸಾವಿರ ಕೋಟಿ ರೂ. ಬೆಲೆ ಬಾಳುವ 191 ಕೆ.ಜಿ. ಡ್ರಗ್‍ನ್ನು ವಶಪಡಿಸಿಕೊಳ್ಳಲಾಗಿದೆ.

    ಸಿಮಾ ಸುಂಕ ಹಾಗೂ ಆದಾಯ ಡೈರಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್(ಡಿಆರ್ ಐ) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಪಾರ ಪ್ರಮಾಣದ ಡ್ರಗ್ ವಶಪಡಿಸಿಕೊಂಡಿದ್ದಾರೆ. ನವಿ ಮುಂಬೈನ ನವ ಸೇವಾ ಕೋಟೆ ಬಳಿ ಈ ಡ್ರಗ್‍ನ್ನು ಸಂಗ್ರಹಿಸಿಡಲಾಗಿತ್ತು. ಅಫ್ಘಾನಿಸ್ಥಾನದಿಂದ ಕಳ್ಳ ಸಾಗಣೆ ಮೂಲಕ ಮುಂಬೈಗೆ ಸಾಗಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

    ಪೈಪ್‍ಗಳ ಮೂಲಕ ಅಫ್ಘಾನಿಸ್ಥಾನದಿಂದ ಡ್ರಗ್‍ನ್ನು ಕಳ್ಳ ಸಾಗಣೆ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಆಮದನ್ನು ದಾಖಲಿಸುತ್ತಿದ್ದ ಇಬ್ಬರು ಸಿಮಾ ಸುಂಕ ಏಜೆಂಟ್‍ಗಳನ್ನು ಬಂಧಿಸಲಾಗಿದ್ದು, ಕಳ್ಳ ಸಾಗಣೆಗಾರರು ಪ್ಲಾಸ್ಟಿಕ್ ಪೈಪ್‍ಗಳ ಮೂಲಕ ಡ್ರಗ್ ಸಾಗಿಸಿದ್ದು, ಪ್ಲಾಸ್ಟಿಕ್ ಪೈಪ್‍ಗಳಿಗೆ ಬಂಬುಗಳ ರೀತಿ ಬಣ್ಣ ಬಳಿದು, ಇದು ಆಯುರ್ವೇದಿಕ್ ಔಷಧ ಎಂದು ಹೇಳಿ ಸಾಗಣೆ ಮಾಡಿದ್ದಾರೆ.

    ಇಂಪೋರ್ಟರ್ ಹಾಗೂ ಫೈನಾನ್ಶಿಯರ್ ಸೇರಿ ಇನ್ನೂ ನಾಲ್ವರನ್ನು ದೆಹಲಿಯಲ್ಲಿ ಹಿಡಿಯಲಾಗಿದ್ದು, ಮುಂಬೈಗೆ ಕರೆತರಲಾಗುತ್ತಿದೆ. ಇದು ನಗರದ ಅತೀ ದೊಡ್ಡ ಮಾದಕವಸ್ತು ದಂಧೆಯ ಜಾಲವಾಗಿದ್ದು, ಬಂದರಿನಲ್ಲಿ ಸಿಮಾ ಸುಂಕ ಅಧಿಕಾರಿ ಸರಕುಗಳನ್ನು ತಪ್ಪಾಗಿ ಘೋಷಿಸಿರುವ ಕುರಿತು ಎಚ್ಚರಿಕೆ ನೀಡಿದ ಬಳಿಕ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ.