Tag: ಡ್ರಂಕ್ ಆ್ಯಂಡ್ ಡ್ರೈವ್

  • ವಾಹನ ತಪಾಸಣೆ ವೇಳೆ ಪೊಲೀಸರಿಗೆ ಕುಡುಕನ ಅವಾಜ್

    ವಾಹನ ತಪಾಸಣೆ ವೇಳೆ ಪೊಲೀಸರಿಗೆ ಕುಡುಕನ ಅವಾಜ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಕುಡುಕನೋರ್ವ ಟ್ರಾಫಿಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾನೆ.

    ಹೌದು, ಮದ್ಯ ಪ್ರಿಯರಿಗೆ ಮದ್ಯ ಒಂದಿದ್ದರೆ ಸಾಕು ಲೋಕವನ್ನೇ ಮರೆತು ಬಿಡುತ್ತಾರೆ. ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಪರಿಜ್ಞಾನ ಸಹ ಎಲ್ಲದೇ ಎಣ್ಣೆ ಏಟಲ್ಲಿ ಎಷ್ಟೋ ಮಂದಿ ಮುಳುಗಿ ಬಿಟ್ಟಿರುತ್ತಾರೆ. ಎಷ್ಟೋ ಮಂದಿ ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿರುವುದನ್ನು ನೋಡಿರುತ್ತೇವೆ. ಇನ್ನೂ ಎಷ್ಟೋ ಮಂದಿ ಕುಡಿದ ನಂತರ ತಮ್ಮ ಪೌರುಷ ತೋರ್ಪಡಿಸಲು ಪ್ರಯತ್ನಿಸುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಕುಡುಕನೊಬ್ಬ ಪೊಲೀಸರಿಗೆ ಕಿರಿಕಿರಿಯನ್ನುಂಟು ಮಾಡಿದ್ದಾನೆ. ಇದನ್ನೂ ಓದಿ: ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್

    ರಾತ್ರಿ 12 ಗಂಟೆ ಸುಮಾರಿಗೆ ಹಲಸೂರ್ ಪೊಲೀಸ್ ಠಾಣೆ ಮುಂದೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಟ್ರಾಫಿಕ್ ಸಿಬ್ಬಂದಿ ಮಾಡುತ್ತಿದ್ದರು. ಈ ವೇಳೆ ಕುಡಿದು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಗೆ ಟ್ರಾಫಿಕ್ ಸಿಬ್ಬಂದಿ ಗಾಡಿ ಸೈಡಿಗೆ ಹಾಕುವಂತೆ ಹೇಳಿದ್ದಾರೆ. ಅಷ್ಟಕ್ಕೇ ಆತ ಟ್ರಾಫಿಕ್ ಸಿಬ್ಬಂದಿಯನ್ನು ನಾಯಿಗೆ ಹೋಲಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ. ಬಳಿಕ ಆತನಿಂದ ದಂಡ ಕಟ್ಟಿಸಿಕೊಂಡು ಪೊಲೀಸರು ಬಿಟ್ಟು ಕಳಿಸಿದ್ದಾರೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌ – ಮಕ್ಕಳ ಆಯೋಗದಿಂದ ಮಾಹಿತಿ

    Live Tv
    [brid partner=56869869 player=32851 video=960834 autoplay=true]

  • ಡ್ರಂಕ್ ಆ್ಯಂಡ್ ಡ್ರೈವ್‍ನಲ್ಲಿ ಸಿಕ್ಕಿಬಿದ್ದ ಗೆಳೆಯನಿಗಾಗಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಶೆಯ ಮತ್ತಿನಲ್ಲಿದ್ದ ಮಹಿಳೆ

    ಡ್ರಂಕ್ ಆ್ಯಂಡ್ ಡ್ರೈವ್‍ನಲ್ಲಿ ಸಿಕ್ಕಿಬಿದ್ದ ಗೆಳೆಯನಿಗಾಗಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಶೆಯ ಮತ್ತಿನಲ್ಲಿದ್ದ ಮಹಿಳೆ

    ಹೈದರಾಬಾದ್: ಡ್ರಂಕ್ ಡ್ರೈವ್ ನಲ್ಲಿ ಸಿಕ್ಕಿಬಿದ್ದ ಗೆಳೆಯನನ್ನು ಕಾಪಾಡಲು ಮಹಿಳೆ ಪೊಲೀಸರೊಂದಿಗೆ ವಾಗ್ವಾದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದ್ದು, ಭಾನುವಾರ ರಾತ್ರಿ 1 ಗಂಟೆಗೆ ಪೊಲೀಸರು ವಾಹನ ತಪಾಸಣೆಗಾಗಿ ಮಹಿಳೆಯ ಕಾರ್ ನಿಲ್ಲಿಸಿದ್ದಾರೆ. ಕಾರ್ ಚಲಾಯಿಸುತ್ತಿದ್ದ ಮಹಿಳೆಯ ಗೆಳೆಯ ಮದ್ಯಪಾನ ಸೇವಿಸಿದ್ದು, ಉಸಿರಾಟದ ಪರೀಕ್ಷೆ (Breathalyser Test)ಗೆ ನಿರಾಕರಿಸಿದ್ದಾನೆ. ಈ ವೇಳೆ ಗೆಳೆಯನ ಸಹಾಯಕ್ಕೆ ಮುಂದಾದ ಮಹಿಳೆ ಕೆಲಕಾಲ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

    ಸ್ಥಳೀಯ ಪತ್ರಕರ್ತರೊಬ್ಬರು ಈ ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದನ್ನು ಗಮನಿಸಿದ ಮಹಿಳೆ ಕ್ಯಾಮೆರಾದತ್ತ ಕಲ್ಲು ಎಸೆದಿದ್ದಾರೆ. ಕೊನೆಗೆ ಪೊಲೀಸರು ಮಹಿಳೆಯ ಗೆಳೆಯನ ವಿರುದ್ಧ ಮಾತ್ರ ದೂರು ದಾಖಲಿಸಿಕೊಂಡಿದ್ದಾರೆ ಅಂತಾ ವರದಿಯಾಗಿದೆ.

    https://www.youtube.com/watch?v=UDSOmvKcyn0

  • ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ್ದ ಚಾಲಕ ಪೊಲೀಸರ ವಶಕ್ಕೆ

    ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ್ದ ಚಾಲಕ ಪೊಲೀಸರ ವಶಕ್ಕೆ

    ಬೆಂಗಳೂರು: ಕಂಠಪೂರ್ತಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಅಂಬುಲೆನ್ಸ್ ಚಾಲಕನನ್ನು ನಗರದ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    47 ವರ್ಷದ ರುದ್ರೇಶಪ್ಪ ಆಂಬುಲೆನ್ಸ್ ಚಾಲಕ. ರುದ್ರೇಶಪ್ಪ ಸುಂಕದಕಟ್ಟೆಯಿಂದ ಕೆಎಚ್‍ಬಿ ಜಂಕ್ಷನ್ ನಲ್ಲಿರುವ 108 ಅಂಬುಲೆನ್ಸ್ ಕಚೇರಿಗೆ ಆಗಮಿಸುತ್ತಿದ್ದನು. ಈ ವೇಳೆ ಪೊಲೀಸ್ ತಪಾಸಣೆ ಸಂದರ್ಭದಲ್ಲಿ ರುದ್ರೇಶಪ್ಪ ಮದ್ಯಪಾನ ಮಾಡಿರೋದು ಗೊತ್ತಾಗಿದೆ.

    ಟ್ರಾಫಿಕ್ ಪೊಲೀಸರು 108 ಅಂಬುಲೆನ್ಸ್ ವಾಹನವನ್ನು ಜಪ್ತಿ ಮಾಡಿ, ಚಾಲಕ ರುದ್ರೇಶಪ್ಪನ ವಿರುದ್ಧ ಡ್ರಂಕ್ ಆಂಡ್ ಡ್ರೈವ್ ಕೇಸ್ ದಾಖಲಿಸಿದ್ದಾರೆ.