Tag: ಡ್ರಂಕ್ ಅಂಡ್ ಡ್ರೈವ್

  • ಆ.22ರಿಂದ ಬೆಂಗಳೂರಲ್ಲಿ ಮತ್ತೆ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಶುರು!

    ಆ.22ರಿಂದ ಬೆಂಗಳೂರಲ್ಲಿ ಮತ್ತೆ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಶುರು!

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ರಸ್ತೆ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಪ್ರತಿ ಗುರುವಾರದಿಂದ ಭಾನುವಾರದ ವರೆಗೆ ಡ್ರಂಕ್‌ ಅಂಡ್‌ ಡ್ರೈವ್‌ (Drink and Drive) ತಪಾಸಣೆ ನಡೆಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಆದೇಶ ಹೊರಿಸಿದ್ದಾರೆ.

    ಆಗಸ್ಟ್‌ 22ರ ಗುರುವಾರದಿಂದಲೇ ನಗರದಲ್ಲಿ ಡ್ರಂಕ್ ಆಂಡ್ ಡ್ರೈವ್ ತಪಾಸಣೆಗೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: Jhakhand | ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ ಚಂಪೈ ಸೊರೆನ್  

    ಆದೇಶ ಪ್ರತಿಯಲ್ಲಿ ಏನಿದೆ?
    ಬೆಂಗಳೂರು ನಗರದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಸಂಚಾರ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಾರಾಂತ್ಯದ ಗುರುವಾರದಿಂದ ಭಾನುವಾರದವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ವಾಹನ ಸವಾರರು/ಚಾಲಕರುಗಳ ವಿರುದ್ಧ ಪ್ರತಿವಾರ ಠಾಣೆಯ ಎಲ್ಲಾ ಪಿ.ಎಸ್.ಐಗಳು ಕಡ್ಡಾಯವಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ಕ್ರಮ ವಹಿಸಬೇಕು.

    ಪ್ರಕರಣಗಳನ್ನು ದಾಖಲಿಸಲು ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಜಂಕ್ಷನ್‌ಗಳಲ್ಲಿ ಮಾತ್ರ ಪ್ರಕರಣಗಳನ್ನು ದಾಖಲಿಸುವುದು ಹಾಗೂ ದಾಖಲಿಸುವ ಸಮಯದಲ್ಲಿ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿಗಳನ್ನೂ ಸಹ ಕಾರ್ಯಾಚರಣೆಗೆ ನೇಮಿಸಬೇಕು ಎಂದು ಸೂಚಿಸಿದ್ದಾರೆ.

  • ಡ್ರೈವಿಂಗ್ ಮಾಡ್ತಾ ಕಾರಿನಲ್ಲೇ ಪಾರ್ಟಿ ಮಾಡ್ತಿದ್ದ ಯುವತಿ- ಬೈಕಿಗೆ ಕಾರ್ ಡಿಕ್ಕಿಯಾಗಿ 20ರ ಯುವಕ ಸಾವು

    ಡ್ರೈವಿಂಗ್ ಮಾಡ್ತಾ ಕಾರಿನಲ್ಲೇ ಪಾರ್ಟಿ ಮಾಡ್ತಿದ್ದ ಯುವತಿ- ಬೈಕಿಗೆ ಕಾರ್ ಡಿಕ್ಕಿಯಾಗಿ 20ರ ಯುವಕ ಸಾವು

    ಹೈದರಾಬಾದ್: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡ್ತಿದ್ದ ಯುವತಿಯೊಬ್ಬಳು ತನ್ನ ಕಾರಿನಿಂದ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಯುವಕ ಸಾವನ್ನಪ್ಪಿದ ಘಟನೆ ರಾಯದುರ್ಗಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

    ಬೋರಬಂದಾ ನಿವಾಸಿಯಾದ ಚಿರಂಜೀವಿ(20) ಮೃತ ದುರ್ದೈವಿ. ಘಟನೆಯಲ್ಲಿ ರಮಾನಾತಿ ಸಾಯಿ ಕುಮಾರ್ ಎಂಬವರು ಗಾಯಗೊಂಡಿದ್ದಾರೆ. ಜೆನ್ನಿ ಜೇಕಬ್(26) ವಾಹನ ಚಾಲನೆ ಮಾಡುತ್ತಲೇ ಕಾರಿನೊಳಗೆ ತನ್ನ ಸ್ನೇಹಿತೆ ಲೀಸಾ ಜೊತೆ ಪಾರ್ಟಿ ಮಾಡಿದ್ದು, ಈ ವೇಳೆ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾಳೆ. ಜೆನ್ನಿ ಹಾಗೂ ಲೀಸಾ ದೆಹಲಿ ಮೂಲದವರಾಗಿದ್ದು, ಮಾಧಾಪುರ ಬಳಿಯ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿಗಳಾಗಿದ್ದಾರೆ. ಕೊಕಪೇಟ್ ನ ಬ್ಲಾಸಮ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಇಬ್ಬರೂ ನಗರದಲ್ಲಿ ಝೂಮ್ ಕಾರ್ ನಿಂದ ಹೂಂಡೈ ಕ್ರೇಟಾ ಕಾರ್ ಬಾಡಿಗೆಗೆ ಪಡೆದಿದ್ದರು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು, ಜೆನ್ನಿ ಮಾಧಾಪುರ ದಿಂದ ರಾಯದುರ್ಗಂ ಕಡೆಗೆ ಹೊರಟಿದ್ದಳು. ಅತೀ ವೇಗವಾಗಿ ಕಾರ್ ಚಾಲನೆ ಮಾಡ್ತಿದ್ದ ಜೆನ್ನಿ, ಹೊಂಡಾ ಆ್ಯಕ್ಟೀವಾದಲ್ಲಿ ಬರ್ತಿದ್ದ ಚಿರಂಜೀವಿ ಹಾಗೂ ಸಾಯಿ ಕುಮಾರ್‍ಗೆ ಡಿಕ್ಕಿ ಹೊಡೆದಿದ್ದಾಳೆ.

    ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಿರಂಜೀವಿ ಹಾಗೂ ಸಾಯಿ ಕುಮಾರ್ ಅವರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ವೇಳೆ ಚಿರಂಜೀವಿ ಸಾವನ್ನಪ್ಪಿದ್ದು, ಸಾಯಿ ಕುಮಾರ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಬೈಕಿಗೆ ಡಿಕ್ಕಿ ಹೊಡೆದ ಬಳಿಕ ಕಾರ್ ಮೂರು ಬಾರಿ ಪಲ್ಟಿಯಾಗಿದೆ. ಆದ್ರೆ ಕಾರಿನ ಏರ್‍ಬ್ಯಾಗ್ಸ್‍ನಿಂದ ಜೆನ್ನಿ ಹಾಗೂ ಲೀಸಾಳ ಪ್ರಾಣ ಉಳಿದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

  • ನನ್ನ ಹೆಸರು ಸಿದ್ದರಾಮಯ್ಯ, ಕೆಲಸ ಮಾಡೋದು ಭೂಮಿ ಮೇಲೆ- ಕುಡಿದ ಮತ್ತಲ್ಲಿ ಪೊಲೀಸರಿಗೆ ಅವಾಜ್

    ನನ್ನ ಹೆಸರು ಸಿದ್ದರಾಮಯ್ಯ, ಕೆಲಸ ಮಾಡೋದು ಭೂಮಿ ಮೇಲೆ- ಕುಡಿದ ಮತ್ತಲ್ಲಿ ಪೊಲೀಸರಿಗೆ ಅವಾಜ್

    ಬೆಂಗಳೂರು: ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡೋ ವೇಳೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಅವಾಜ್ ಹಾಕಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೆಲ ದಿನಗಳ ಹಿಂದೆ ಬೆಂಗಳೂರಿನ ಕಾರ್ಪೊರೇಷನ್ ಸಿಗ್ನಲ್ ಬಳಿ ಹಲಸೂರು ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಸಂಜಯ್ ಕಿರಣ್ ಎಂಬಾತ ಕುಡಿದಿರುವುದು ಪತ್ತೆಯಾಗಿತ್ತು.

    ಈ ವೇಳೆ ಪೊಲೀಸರು ನಿಮ್ಮ ಹೆಸರೇನು ಎಂದು ಕೇಳಿದ್ರೆ, ನನ್ನ ಹೆಸರು ಸಿದ್ದರಾಮಯ್ಯ ಎಂದು ಉತ್ತರ ನೀಡಿದ್ದಾನೆ. ಎಲ್ಲಿ ಕೆಲಸ ಮಾಡುತ್ತೀರಿ ಎಂದು ಕೇಳಿದಾಗ ಭೂಮಿ ಮೇಲೆ ಎಂದು ಉತ್ತರಿಸಿದ್ದಾನೆ.

    ಇಷ್ಟೇ ಅಲ್ಲದೇ ನಾಳೆಯಿಂದ ನಿಮಗೆಲ್ಲಾ ಏನ್ ಮಾಡುತ್ತೀನಿ ನೋಡುತ್ತಾ ಇರಿ ಎಂದು ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.

  • ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಬೆಂಗಳೂರು: ತಡ ರಾತ್ರಿ ಟ್ರಾಫಿಕ್ ಪೊಲೀಸರು ಡ್ರಂಕ್ & ಡ್ರೈವ್ ತಪಾಸಣೆ ಮಾಡುವ ವೇಳೆ ಇಬ್ಬರು ವಿದೇಶಿಯರು ಸೇರಿ ಏಳು ಜನರ ಗುಂಪು ಪಾನ ಮತ್ತರಾಗಿ 1 ಗಂಟೆಗೂ ಹೆಚ್ಚುಕಾಲ ಇನ್ನಿಲ್ಲದೆ ಸಂಚಾರಿ ಪೊಲೀಸರನ್ನ ಕಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಂ.ಜಿ ರಸ್ತೆಯಿಂದ ಪಾರ್ಟಿ ಮುಗಿಸಿ ಕುಡಿದು ತಮಿಳುನಾಡು ರಿಜಿಸ್ಟ್ರೇಷನ್ ನ ಟಾಟಾ ಸುಮೋದಲ್ಲಿ ಬಂದ ಏಳು ಜನರು ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಸಹಕರಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

    ಸತತ ಒಂದು ಗಂಟೆಗಳ ಕಾಲ ನಾಲ್ವರು ಟ್ರಾಫಿಕ್ ಸಿಬ್ಬಂದಿಗಳನ್ನು ಕಾಡಿದ ಅವರು ಅವಾಂತರ ಸೃಷ್ಟಿಸಿದ್ದಾರೆ. ತಪಾಸಣೆ ವೇಳೆ ಚಾಲಕ ಸುಂದರೇಶನ್(35) ಮದ್ಯ ಸೇವಿಸಿರುವುದು ಸಾಬೀತಾಗಿದೆ. ಇನ್ನುಳಿದಂತೆ ಆರು ಜನರು ಕುಡಿದು ರಸ್ತೆಯಲ್ಲೆಲ್ಲಾ ತೂರಾಟ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಲು ನಾನಾ ಕಸರತ್ತು ನಡೆಸಿದರು.

    ಎಂ.ಜಿ.ರಸ್ತೆಯಿಂದ ಪಾರ್ಟಿ ಮಾಡಿ ಬಂದ ಇಬ್ಬರು ಇಟಲಿ ಮಹಿಳೆಯರು, ಮೂವರು ಗಂಡಸರು, ಒಬ್ಬ ತಮಿಳು ಯುವತಿ, ಮತ್ತೊಬ್ಬ ಮಲೆಯಾಳಿ ಯುವತಿ ಸೇರಿ 7 ಜನರ ಗುಂಪು ಪುಂಡಾಟ ನಡೆಸಿದೆ. ಇವರ ತರಲೆ ನಿಲ್ಲಿಸಲಾಗದೇ ಪರದಾಡಿದ ಪೊಲೀಸರು ತಪಾಸಣೆ ನಡೆಸುವಷ್ಟರಲ್ಲಿ ಸುಸ್ತಾಗಿದ್ದರು. ಕೊನೆಗೂ ಚಾಲಕನನ್ನ ತಪಾಸಣೆ ನಡೆಸಿ ಟಾಟಾ ಸುಮೋ ಸೀಜ್ ಮಾಡಿ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಯುವತಿಯರ ಅವಾಜ್

    ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಯುವತಿಯರ ಅವಾಜ್

    ಬೆಂಗಳೂರು: ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದ ವೇಳೆ ಯುವತಿಯರು ಪೊಲೀಸರಿಗೆ ಅವಾಜ್ ಹಾಕಿದ ಘಟನೆ ರಿಚ್ಮಂಡ್ ಸರ್ಕಲ್ ಬಳಿ ನಡೆದಿದೆ.

    ಇಲ್ಲಿನ ರಮಣಶ್ರೀ ಹೋಟೆಲ್ ಮುಂಭಾಗ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ತಂಡಕ್ಕೆ ನಾಲ್ವರು ಯುವತಿಯರು ಅವಾಜ್ ಹಾಕಿದ್ದಾರೆ. ಅಷ್ಟೆ ಅಲ್ಲದೆ ತಾನೊಬ್ಬ ರಾಷ್ಟ್ರೀಯ ವಾಹಿನಿಯ ವರದಿಗಾರ್ತಿ ಅಂತಾ ಪೊಲೀಸರನ್ನ ನಿಂದಿಸಿದ್ದಾರೆ.

    ಮತ್ತೊಂದೆಡೆ ಕುಡಿದು ಗಾಡಿ ಓಡಿಸ್ತಿದ್ದ ಇರಾನಿ ಪ್ರಜೆಯನ್ನ ಚೆಕ್ ಮಾಡೋಕೆ ಹೋದಾಗ ಹೈಡ್ರಾಮ ನಡೆಸಿದ ಘಟನೆ ತಡರಾತ್ರಿ ಶಾಂತಿನಗರದ ಕೆಎಸ್‍ಆರ್‍ಟಿಸಿ ಬಸ್ ಸ್ಟಾಪ್ ಮುಂದೆ ನಡೆದಿದೆ. ಎಂಜಿ ರಸ್ತೆಯಲ್ಲಿ ಕಂಠ ಪೂರ್ತಿ ಕುಡಿದು ಕಾರು ಚಲಾಯಿಸಿಕೊಂಡು ಬರ್ತಿದ್ದ ಇರಾನಿ ಯುವಕ ಯುವತಿಯರ ಕಾರನ್ನು ತಡೆದು ಪೊಲೀಸರು ತಪಾಸಣೆ ನಡೆಸೋಕೆ ಮುಂದಾಗಿದ್ದಾರೆ. ಆದ್ರೆ ಕುಡಿದ ಅಮಲಿನಲ್ಲಿದ್ದ ಯುವಕ ಮತ್ತು ಯುವತಿಯನ್ನ ಆಲ್ಕೋಮಿಟರ್ ಊದುವಂತೆ ಪೊಲೀಸರು ಅದೆಷ್ಟು ಪರಿ ಪರಿಯಾಗಿ ಕೇಳಿಕೊಂಡರು ಕೂಡ ಅದಕ್ಕೆ ತಲೆಕೆಡಿಸಿಕೊಳ್ಳದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು.

    ನಂತರ ಪೊಲೀಸರು ಅಲ್ಕೋಮೀಟರ್ ಊದುವಂತೆ ಉತ್ತಾಯ ಮಾಡಿದ್ದಕ್ಕೆ ಸಂಚಾರಿ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗೋಕೆ ನೋಡಿದ್ದಾರೆ. ತಕ್ಷಣ ನೈಟ್ ರೌಂಡ್ಸ್ ನಲ್ಲಿದ್ದ ಹೊಯ್ಸಳ ವಾಹನ ಸ್ಥಳಕ್ಕೆ ಆಗಮಿಸಿ ಇಬ್ಬರು ಯುವಕ ಯುವತಿಯರನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸೋಕೆ ಕರೆದುಕೊಂಡು ಹೋಗಿದ್ದಾರೆ.