Tag: ಡ್ಯಾಮ್

  • ಮುಂಬೈನಿಂದ ಬಂದಿದ್ದ ಬಾಲಕಿಯರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವು

    ಮುಂಬೈನಿಂದ ಬಂದಿದ್ದ ಬಾಲಕಿಯರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವು

    ಚಿಕ್ಕಬಳ್ಳಾಪುರ: ಈಜಲು (Swimming) ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಚೇನಹಳ್ಳಿ (Manchenahalli) ಬಳಿ ಇರುವ ದಂಡಿಗಾನಹಳ್ಳಿ ಡ್ಯಾಮ್‌ನಲ್ಲಿ ನಡೆದಿದೆ.

    ಮಹಾರಾಷ್ಟ್ರದ (Maharashtra) ಮುಂಬೈ (Mumbai) ಮೂಲದ ಆಲಿಯಾ ಪಾಟೀಲ್ (17) ಹಾಗೂ ಜೋಯ ಪಾಟೀಲ್(14) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬೇಸಿಗೆಯ ರಜೆ ಹಿನ್ನೆಲೆಯಲ್ಲಿ ಮುಂಬೈ ಮೂಲದ ಬಾಲಕಿಯರು ಗೌರಿಬಿದನೂರು ನಗರದ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಇನ್ನೆರಡು ದಿನಗಳ ನಂತರ ಮುಂಬೈಗೆ ವಾಪಸ್ ಆಗಲಿದ್ದರು. ದಂಡಿಗಾನಹಳ್ಳಿ ಜಲಾಶಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಜಲಾಶಯಕ್ಕೆ ಹೋದವರು ಜಲಾಶಯದ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಪೊಲೀಸ್ ಅಧಿಕಾರಿ ನಿವೃತ್ತಿ ಹಿಂದಿನ ದಿನವೇ ಸಸ್ಪೆಂಡ್

    ಸ್ಥಳೀಯರು ಇಬ್ಬರ ಮೃತದೇಹವನ್ನು ನೀರಿನಿಂದ ಮೇಲೆ ತಂದಿದ್ದಾರೆ. ಮೃತರ ಸಂಬಂಧಿಕರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸದೆ ಮನೆಗೆ ತೆಗೆದುಕೊಂಡು ಹೋಗಿದ್ದರು. ಕೊನೆಗೆ ಪೊಲೀಸರು ಮನೆಗೆ ತೆರಳಿ ಸಂಬಂಧಿಕರ ಮನವೊಲಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೆರಡು ದಿನಗಳಲ್ಲಿ ಜೀವಂತವಾಗಿ ಮುಂಬೈಗೆ ತೆರಳಬೇಕಿದ್ದ ಇಬ್ಬರು ಬಾಲಕಿಯರು ಸದ್ಯ ಶವವಾಗಿ ಮುಂಬೈಗೆ ತೆರಳಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಮೈತ್ರಿಯಿಂದ 10 ಸ್ಥಾನ ಗೆಲುವು: ಬಿಜೆಪಿ ವಿಶ್ವಾಸ

  • ಭಾರೀ ಮಳೆ-ಕೆರೆ, ಡ್ಯಾಮ್ ಭರ್ತಿ

    ಭಾರೀ ಮಳೆ-ಕೆರೆ, ಡ್ಯಾಮ್ ಭರ್ತಿ

    ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಉತ್ತಮ ಮಳೆಯಾಗಿದ್ದು, ಕೆರೆ ಡ್ಯಾಮ್‍ಗಳು ಭರ್ತಿಯಾಗಿ ದಾವಣಗೆರೆಯ ಕೆಲವು ಕಡೆ ಅವಾಂತರ ಸೃಷ್ಟಿಯಾಗಿದೆ.

    ಬೆಣ್ಣೆ ನಗರಿ ದಾವಣಗೆರೆಯಲ್ಲಿ ರಾತ್ರಿ ಸುರಿದ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ದಾವಣಗೆರೆಯ ಪಕ್ಕದಲ್ಲಿರುವ ನಾಗರಕಟ್ಟೆ, ಕಾಡಜ್ಜಿ ಗ್ರಾಮಗಳಲ್ಲಿ ಜಮೀನುಗಳು ಮುಳಗಡೆಯಾಗಿದ್ದು, ಭತ್ತದ ಗದ್ದೆ, ಹಾಗೂ ಅಡಿಗೆ ತೋಟಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಕೆಇಬಿ ಸಬ್ ಸ್ಟೇಷನ್, ಕೃಷಿ ಕೇಂದ್ರಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಕೆಇಬಿ ಸಬ್ ಸ್ಟೇಷನ್ ನಲ್ಲಿ ಸಿಲುಕಿದ್ದ ಇಬ್ಬರು ಸಿಬ್ಬಂದಿಯನ್ನು ತಡರಾತ್ರಿ ಅಗ್ನಿ ಶಾಮಕ ಸಿಬ್ಬಂದಿಗಳು ಅಗ್ನಿಶಾಸಕ ಅಧಿಕಾರಿ ಬಸವಶರ್ಮ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ:  ಬಕ್ರೀದ್ ಹಬ್ಬ -ಸಮುದಾಯದ ಮುಖಂಡರ ಜೊತೆಗೆ ಪೊಲೀಸರ ಶಾಂತಿ ಸಭೆ

    ರಾತ್ರಿಯಿಡಿ ಸುರಿದ ಮಳೆಗೆ ಬಹುತೇಕ ಜಮೀನುಗಳು ಜಲಾವೃತವಾಗಿದ್ದು, ರೈತರು ಬೆಳೆದ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆ ಕೊಳೆಯುವ ಹಂತಕ್ಕೆ ತಲುಪಿದೆ. ಸರ್ಕಾರಿ ಕಟ್ಟಡಗಳ ಅವೈಜ್ಞಾನಿಕ ಕಾಮಗಾರಿಯಿಂದ ಸರಿಯಾಗಿ ಚರಂಡಿ ವ್ಯವಸ್ಥೆ ಮಾಡದೆ ಸರಾಗವಾಗಿ ನೀರು ಹೋಗದೆ ಜಮೀನುಗಳೇಲ್ಲ ಕೆರೆಯಂತಾಗಿವೆ. ದಾವಣಗೆರೆಯ ಕಾಡಜ್ಜಿ ಗ್ರಾಮದಲ್ಲಿ ನೂರಾರು ಎಕರೆ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿದ್ದು, ಕೊಳೆಯುವ ಹಂತಕ್ಕೆ ತಲುಪಿದೆ. ಅಲ್ಲದೆ ಕೃಷಿ ತರಬೇತಿ ಕೇಂದ್ರ ಕೂಡ ಜಲಾವೃತವಾಗಿದ್ದು, ಕಚೇರಿಗಳಿಗೆ ನೀರು ನುಗ್ಗಿ ದಾಖಲೆಗಳು ಕೂಡ ಮಳೆ ನೀರಿನಿಂದ ಹಾನಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ಕೃಷಿ ತರಬೇತಿ ಕೇಂದ್ರ ಹಾಗೂ ಕೆಇಬಿ ಸಬ್ ಸ್ಟೇಷನ್ ನಿರ್ಮಾಣ ಮಾಡಿರುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖ್ಯಾತ ನಟನ ಪುತ್ರಿ 

    ಬಹುತೇಕ ಕೆರೆ ಡ್ಯಾಮ್‍ಗಳು ಭರ್ತಿಯಾಗಿದ್ದು, ಜಗಳೂರಿನ ತುಪ್ಪದಹಳ್ಳಿ ಕೆರೆ, ಕಾಡಜ್ಜಿ ಕೆರೆ, ಹರಪ್ಪಹಳ್ಳಿಯ ಕಲ್ಲಹಳ್ಳಿ, ಕುರೇಮಾಗನಹಳ್ಳಿ, ಕೆಂಚಾಪುರ, ಸೇರಿದಂತೆ ಹಲವು ಕೆರೆ ಡ್ಯಾಮ್‍ಗಳು ಭರ್ತಿಯಾಗಿವೆ. ಒಂದೇ ದಿನದ ಮಳೆಗೆ ಹರಪ್ಪಹಳ್ಳಿಯ ಚಟ್ನಹಳ್ಳಿ ಕೆರೆ ಕೋಡಿ ಬಿದ್ದಿದೆ. ಅಲೂರು ಗ್ರಾಮದ ಬಳಿ ನೂರಾರು ಎಕರೆ ಮೆಕ್ಕೆಜೋಳ ಕೂಡ ಜಲಾವೃತವಾಗಿದ್ದು, ಬೆಳೆ ನಾಶವಾಗಿವ ಭೀತಿಯಲ್ಲಿ ರೈತರಿದ್ದಾರೆ. ಹರಪ್ಪನಹಳ್ಳಿಯ ಪಣಿಯಾಪುರ ಗ್ರಾಮದ ಕೆಂಚಪ್ಪ ರೈತನಿಗೆ ಸೇರಿದ ಮೇಕೆಗಳ ಶಡ್ ನಲ್ಲಿ ನೀರು ನುಗ್ಗಿ 9 ಮೇಕೆಗಳು ಸಾವನ್ನಪ್ಪಿದ್ದು, ಬಡ ರೈತ ಕಣ್ಣೀರು ಹಾಕುವಂತಾಗಿದೆ.

  • ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಭೀತಿ – ಮಹಾರಾಷ್ಟ್ರ, ಗುಜರಾತ್‍ನಲ್ಲಿ ವರುಣನ ಅಬ್ಬರ

    ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಭೀತಿ – ಮಹಾರಾಷ್ಟ್ರ, ಗುಜರಾತ್‍ನಲ್ಲಿ ವರುಣನ ಅಬ್ಬರ

    – ಅಮರನಾಥ ಯಾತ್ರೆ ರದ್ದು

    ಬೆಳಗಾವಿ/ ಮುಂಬೈ: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೃಷ್ಣಾ ನದಿಯಲ್ಲಿ ಹೆಚ್ಚಿದ ಒಳ ಹರಿವು ಹೆಚ್ಚಿರುವುದರಿಂದ ಚಿಕ್ಕೋಡಿಯಲ್ಲಿ ಮೂರು ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ನಾರಾಯಣಪುರ ಡ್ಯಾಂ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ನೀರು ಬಿಡುವ ಸಾಧ್ಯತೆಯಿದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ನದಿಪಾತ್ರದ ಗ್ರಾಮಗಳ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಹೇಳಿದೆ. ಆಲಮಟ್ಟಿ ಡ್ಯಾಂ ಕೂಡ ಭರ್ತಿಯಾಗಿದ್ದು 6 ಕ್ರಸ್ಟ್‍ಗೇಟ್ ಗಳ ಮೂಲಕ 32,000 ಕ್ಯೂಸೆಕ್ ನೀರು ಹೊರಬಿಡಲಾಗ್ತಿದೆ.

    ಮಹಾರಾಷ್ಟ್ರದಲ್ಲಿ ಮಹಾಮಳೆ ಹಿನ್ನೆಲೆ ನೀರಿನ ಒಳಹರಿವು ಪ್ರಮಾಣ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಭರ್ತಿಯಾಗಿದೆ. 6 ಕ್ರಸ್ಟಗೇಟ್ ಗಳನ್ನು ಒಂದು ಮೀಟರ್ ಏರಿಸಿ 32,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ 40,000 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ.

    ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ಮತ್ತೆ ವಾಣಿಜ್ಯ ನಗರಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುರ್ಬಾದ್ ಮತ್ತು ಕಲ್ಯಾಣ್ ನಗರ ಸಂಪರ್ಕಿಸುವ ರಾಯ್ತಾ ಎಂಬಲ್ಲಿ ಉಲಾಸ್ ನದಿಗೆ ಕಟ್ಟಿದ ಸೇತುವೆಯೇ ಕುಸಿದು ಬಿದ್ದಿದೆ. ಬೈಕುಲ್ಲಾದಲ್ಲಿ ಕಟ್ಟಡ ಕುಸಿದು ಒಬ್ಬರಿಗೆ ಗಾಯಗಳಾಗಿದೆ. ರೈಲು ಹಳಿಗಳಲ್ಲಿ ನೀರು ನಿಂತ ಪರಿಣಾಮ 5 ರೈಲುಗಳ ಸಂಚಾರ ನಿಷೇಧಿಸಲಾಗಿದೆ. 6ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

    ಮುಂಬೈ, ಥಾಣೆ, ರಾಯ್‍ಗಡ್, ಪಲ್ಘಾಟ್‍ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 1,311 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಎನ್‍ಡಿಆರ್ ಎಫ್ ತಂಡ ಪ್ರವಾಹಪೀಡಿತ ಸ್ಥಳಗಳಲ್ಲಿ ಬೀಡುಬಿಟ್ಟಿದೆ. ಗೋವಾ, ಗುಜರಾತ್, ರಾಜಸ್ಥಾನದಲ್ಲೂ ಭಾರೀ ಮಳೆ ಆಗುತ್ತಿದೆ. ಜಮ್ಮುವಿನಲ್ಲಿ ಮಳೆ ಮತ್ತು ಹಿಮಪಾತದ ಕಾರಣ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದೆ.

  • ಬೃಹತ್ ಡ್ಯಾಮ್ ಒಡೆದು 110 ಮಂದಿ ಬಲಿ- ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

    ಬೃಹತ್ ಡ್ಯಾಮ್ ಒಡೆದು 110 ಮಂದಿ ಬಲಿ- ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

    ಬ್ರೆಜಿಲ್: ಮಿನಾಸ್ ಗಿರೈಸ್ ಪ್ರದೇಶದಲ್ಲಿರುವ ಗಣಿಗಾರಿಕೆಯ ಅಣೆಕಟ್ಟು ಒಡೆದ ಪರಿಣಾಮ 110 ಮಂದಿ ಸಾವನ್ನಪ್ಪಿದ ಭಯಾನಕ ವಿಡಿಯೋ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ.

    ಕಳೆದ ಜನವರಿ 25ರಂದು ಬ್ರೆಜಿಲ್‍ನ ಮಿನಾಸ್ ಗಿರೈಸ್ ಪ್ರದೇಶದಲ್ಲಿರುವ ಕಬ್ಬಿಣದ ಗಣಿಗಾರಿಕಾ ಪ್ರದೇಶದ ಪಕ್ಕದಲ್ಲಿದ್ದ ಬೃಹತ್ ಅಣೆಕಟ್ಟು ಒಡೆದು ಹೋಗಿತ್ತು. ಈ ವೇಳೆ ಗಣಿಗಾರಿಕೆ ಪ್ರದೇಶಕ್ಕೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಸ್ಥಳದಲ್ಲಿದ್ದ 110 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 238 ಮಂದಿ ಕಾಣೆಯಾಗಿದ್ದರು. ಈ ಭಯಾನಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ, ಡ್ಯಾಮ್ ಒಡೆದು ಗಣಿ ಪ್ರದೇಶಕ್ಕೆ ನೀರು ನುಗ್ಗಿದ ತಕ್ಷಣ ಸ್ಥಳದಲ್ಲಿದವರು ಪ್ರಾಣ ಉಳಿಸಿಕೊಳ್ಳು ಓಡುತ್ತಿರುವ ದೃಶ್ಯ ಹಾಗೂ ಕಾರು ಲಾರಿಗಳು ಸ್ಥಳದಿಂದ ದೂರ ಹೋಗಲು ಪ್ರಯತ್ನಿಸುತ್ತಿರುವ ದೃಶ್ಯಗಳು, ಅಲ್ಲದೆ ಏಕಾಏಕಿ ಡ್ಯಾಮ್ ನೀರು ಗಣಿ ಪ್ರದೇಶಕ್ಕೆ ನುಗ್ಗಿ, ಸಂಪೂರ್ಣ ಜಲಾವೃತವಾಗುತ್ತಿರುವ ದೃಶ್ಯ ಸೆರೆಯಾಗಿದೆ.

    ಈ ವಿಡಿಯೋವನ್ನು ಸ್ಥಳೀಯ ಮಾಧ್ಯಮವೊಂದು ಪ್ರಸಾರ ಮಾಡಿದ್ದು, ಸದ್ಯ ಅದರ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮಧ್ಯಾಹ್ನದ ವೇಳೆ ಕಾರ್ಮಿಕರು ಊಟ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇಲ್ಲಿಯವರೆಗೆ ಒಟ್ಟು 110 ಮಂದಿಯ ಮೃತದೇಹವನ್ನು ಪತ್ತೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅವರು ದೊಡ್ಡ ಜನ, ದೊಡ್ಡವರು; ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ: ರೆಡ್ಡಿಗೆ ಡಿಕೆಶಿ ಟಾಂಗ್

    ಅವರು ದೊಡ್ಡ ಜನ, ದೊಡ್ಡವರು; ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ: ರೆಡ್ಡಿಗೆ ಡಿಕೆಶಿ ಟಾಂಗ್

    ಬೆಂಗಳೂರು: ಅವರು ದೊಡ್ಡ ಜನ, ದೊಡ್ಡವರು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ್ದಾರೆ.

    ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಬುಧವಾರದಂದು ಜಾಮೀನಿನ ಮೇಲೆ ಹೊರಬಂದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಕಿಡಿಕಾರಿದ್ದರು.

    ಈ ವಿಚಾರಕ್ಕೆ ವಿಧಾನಸೌದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳು ಜನಾರ್ದನ ರೆಡ್ಡಿಯ ಹೇಳಿಕೆಯ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ, ಅವರು ದೊಡ್ಡ ಜನ, ದೊಡ್ಡವರು, ದೊಡ್ಡ ಮಾತನ್ನ ಆಡುವವರು. ನಾನು ಚಿಕ್ಕವನು ಅದರ ಬಗ್ಗೆ ನಾನು ಮಾತಾಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಯಾರು ಏನ್ ಬೇಕಾದ್ರು ಮಾಡಿಕೊಳ್ಳಬಹುದು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ. ಅವರಿಗೆ ಆಲ್ ದಿ ಬೆಸ್ಟ್ ಎಂದು ಹೇಳಿ ರೆಡ್ಡಿಗೆ ಟಾಂಗ್ ಕೊಟ್ಟರು. ಇದನ್ನು ಓದಿ: ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್- ರಾಜ್ಯದಲ್ಲಿ ಕಾವೇರಿ ಪ್ರತಿಮೆ ಸ್ಥಾಪನೆ: ಏನಿದು ಯೋಜನೆ? ವೆಚ್ಚ ಎಷ್ಟು?

    ಬೈ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿರುವ ನನಗೆ ನನ್ನದೇ ಆದ ಕೆಲಸಗಳು ಇವೆ. ನಾನು ಯಾರ ತಂಟೆಗೂ ಹೋಗ್ತಿಲ್ಲ. ನಾನು ಎಲ್ಲರ ಹತ್ತಿರ ಅಣ್ಣ ಅಕ್ಕಾ ಅಂತಾ ಮಾತಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

    ಕಾವೇರಿ ಪ್ರತಿಮೆ ನಿರ್ಮಾಣದ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಕೆಆರ್‌ಎಸ್‌ ನಲ್ಲಿ ಪ್ರವಾಸೋದ್ಯಮಕ್ಕಾಗಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಸ್ಥಳಗಳ ಕುರಿತು ಒಂದು ಸ್ಟ್ರೀಟ್ ನಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಆರಂಭದಲ್ಲಿ ಕಾವೇರಿ ತಾಯಿ ಪ್ರತಿಮೆ ಮಾಡಲು ಯೋಜನೆ ತಯಾರಿಸಿದ್ದು, ಈ ಕುರಿತು ನಿರ್ಮಾಣದ ಯೋಜನೆಯನ್ನ ಅಂತಿಮವಾಗಿ ಕ್ಯಾಬಿನೆಟ್ ಮುಂದೆ ಪ್ರಸ್ತಾಪಿಸಲಾಗುವುದು ಎಂದು ವಿವರಿಸಿದರು.

    ಪ್ರತಿಮೆ ನಿರ್ಮಾಣದ ಜಾಗದದ ಬಗ್ಗೆ ಮಾಹಿತಿ ನೀಡಿದ ಸಚಿವರು ಕೆಆರ್‌ಎಸ್‌ ಡ್ಯಾಮ್‍ನ ಹತ್ತಿರ ಮುನ್ನೂರು ಎಕರೆಯಷ್ಟು ಜಾಗವಿದೆ. ಈ ವಿಚಾರವಾಗಿ ನಾವು ಕೆಲವು ಸಲಹೆಗಳನ್ನ ನೀಡಿದ್ದೇವೆ ಎಂದು ಹೇಳಿದ್ದಾರೆ.

    ಕಾವೇರಿ ಪ್ರತಿಮೆಯನ್ನ ವರ್ಣಿಸಿದ ಸಚಿವರು, ಕಾವೇರಿ ತಾಯಿಯ ಬೃಹತ್ ಪ್ರತಿಮೆಯ ಕೆಳಗೆ ನೀರು ಹರಿಯುತ್ತದೆ, ಈ ಮಧ್ಯೆ ಗಾಜಿನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಲಿಫ್ಟ್ ಇರುತ್ತದೆ. ಪ್ರತಿಮೆಯ ಮುಂದೆ ನಿಂತರೆ ಡ್ಯಾಂ ವಿಹಂಗಮ ನೋಟವನ್ನ ಕಾಣುಬಹುದು. ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ನೀಡುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 8 ಕೋಟಿ ರೂ. ದಾನ – ವ್ಯಕ್ತಿಯ ಮಾನಸಿಕ ಪರೀಕ್ಷೆಗೆ ಕೋರ್ಟ್ ಆದೇಶ

    8 ಕೋಟಿ ರೂ. ದಾನ – ವ್ಯಕ್ತಿಯ ಮಾನಸಿಕ ಪರೀಕ್ಷೆಗೆ ಕೋರ್ಟ್ ಆದೇಶ

    ಇಸ್ಲಾಮಾಬಾದ್: ಆಣೆಕಟ್ಟು ನಿರ್ಮಾಣ ನಿಧಿಗೆ 8 ಕೋಟಿ ರೂ. ನೀಡಿದ್ದ ವ್ಯಕ್ತಿಯೊಬ್ಬನನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸುವಂತೆ ಪಾಕಿಸ್ತಾನ ಕೋರ್ಟ್ ಆದೇಶ ನೀಡಿದೆ.

    ಪಾಕಿಸ್ತಾನದ ಶೇಖ್ ಶಾಹಿದ್ ಎಂಬವರು ತಮ್ಮ 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆಣೆಕಟ್ಟು ನಿರ್ಮಾಣಕ್ಕಾಗಿ ನೀಡಿದ್ದರು. ಆದರೆ ಅವರ ಮನೆಯಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಶಾಹಿದ್ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಅವರ ಹೇಳಿಕೆಯನ್ನು ಪರಿಗಣಿಸಬೇಡಿ ಎಂದು ಕುಟುಂಬಸ್ಥರು ಕೋರ್ಟ್ ಮೆಟ್ಟಿಲು ಏರಿದ್ದರು.

    ಈ ಕುರಿತು ಕೋರ್ಟ್‍ನಲ್ಲಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಶಾಹಿದ್ ಪತ್ನಿ, ನನ್ನ ಪತಿ ರೈತನಾಗಿದ್ದು, ಮಾನಸಿಕ ಅಸ್ವಸ್ಥರಾಗಿದ್ದಾರೆ. ನಾನು ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವೆ ಎಂದು ತಿಳಿಸಿದ್ದಾಳೆ. ಆಕೆಯ ಹೇಳಿಕೆಯನ್ನು ಆಲಿಸಿ ನ್ಯಾಯಾಧೀಶರು, ಶಾಹಿದ್ ಅವರು ಕುಟುಂಬಸ್ಥರ ಒಪ್ಪಿಗೆ ಇಲ್ಲದೆ ಆಸ್ತಿಯನ್ನು ದಾನ ಮಾಡಿದ್ದಾರೆ. ಜೊತೆಗೆ ಇದು ಪಿತ್ರಾರ್ಜಿತ ಆಸ್ತಿಯಾಗಿದ್ದರಿಂದ ಆನುವಶೀಕವಾಗಿ ಶಾಹಿದ್ ಕುಟುಂಬಸ್ಥರಿಗೆ ಸಲ್ಲುತ್ತದೆ ಎಂದು ಆದೇಶ ನೀಡಿದ್ದಾರೆ.

    ಶಾಹಿದ್‍ನನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸಿ, ಅದರ ವರದಿಯನ್ನು ಕೋರ್ಟ್ ಗೆ ಸಲ್ಲಿಸಬೇಕು ಅಂತಾ ನ್ಯಾಯಾಧೀಶರು, ಪೊಲೀಸರಿಗೆ ಸೂಚನೆ ನೀಡಿದ್ದಾರೆ. ವಿಚಾರಣೆ ವೇಳೆ ಶಾಹಿನ್ ಅವರ ಮೂರು ಮಕ್ಕಳು ಕೋರ್ಟ್ ಗೆ ಹಾಜರಾಗಿದ್ದರು.

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ನೀರಿನ ಸಮಸ್ಯೆ ನಿವಾರಿಸಲು ಡ್ಯಾಮ್ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ದಾನ ನೀಡುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಇಟ್ಟಿತ್ತು. ಹೀಗಾಗಿ ಅನೇಕ ಜನ ಡ್ಯಾಮ್ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ಬೆಂಗಳೂರು: ಮುಂಗಾರು ಮಳೆ ಈ ಬಾರಿ ರಾಜ್ಯಕ್ಕೆ ಖುಷಿ ತಂದಿದೆ. ಮುಂಗಾರು ಬಹುತೇಕ ಎಲ್ಲಾ ಜಿಲ್ಲೆಗಳನ್ನು ಆವರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದು ಸಂತಸ ಅಂದರೆ ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಜಲಾಶಯಗಳು ಭರ್ತಿ ಆಗುತ್ತಿದ್ದವು. ಆದರೆ ಈ ಬಾರಿ ತಿಂಗಳ ಮುಂಚೆಯೇ ಜುಲೈನಲ್ಲಿ ಬಹುತೇಕ ಡ್ಯಾಮ್‍ಗಳು ಭರ್ತಿಯಾಗುತ್ತಿವೆ.

    ಪ್ರತಿ ವರ್ಷವೂ ನೀರಿಗಾಗಿ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ಈಗ ಬಾಯಿ ಬಂದ್ ಮಾಡಿಕೊಂಡಿದೆ. ಕಾರಣ ಅಷ್ಟರ ಮಟ್ಟಿಗೆ ಕೆಆರ್‌ಎಸ್ ನಿಂದ ನೀರು ಹರಿದು ಹೋಗುತ್ತಿದೆ. ಇನ್ನೂ ಎರಡು ದಿನ ಮಳೆಯಾಗಲಿದ್ದು ಇವತ್ತು ಸಹ ರಾಜ್ಯದ ಹಲವೆಡೆ ಬಿಟ್ಟೂ ಬಿಡದೆ ಮಳೆಯಾಗಿದೆ.

    ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಕಳಸ, ಬಾಳೆಹೊನ್ನೂರು, ಶೃಂಗೇರಿ, ಕುದುರೆಮುಖ ಭಾಗದಲ್ಲಿ ವರುಣ ರುದ್ರನರ್ತನ ಮಾಡುತ್ತಿದ್ದಾನೆ. 3 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕಳೆದ 8-10 ವರ್ಷಗಳಿಂದ ತುಂಬದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿ 15 ವರ್ಷಗಳಲ್ಲೇ ದಾಖಲೆ ಮಟ್ಟದ ಮಳೆಯಾಗಿದೆ. ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ರೈತರು ಖುಷಿ ಜೊತೆಗೆ ಕಾಫಿ, ಮೆಣಸು, ಅಡಿಕೆಗೆ ಕೊಳೆ ರೋಗದ ಭೀತಿ ಶುರುವಾಗಿದ್ದರಿಂದ ಆತಂಕದಲ್ಲಿದ್ದಾರೆ. ಕಂಬಿಹಳ್ಳಿಯಲ್ಲಿ ಗೋಡೆ ಕುಸಿದು ವನಜಾ (48) ಎನ್ನುವವರು ಮೃತಪಟ್ಟಿದ್ದಾರೆ.

    ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಕಾವೇರಿ ನದಿಗೆ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಮರಗಳು, ವಿದ್ಯುತ್ ಕಂಬಗಳು ಮತ್ತಷ್ಟು ನೆಲಕ್ಕೆ ಉರುಳುತ್ತಿವೆ. ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಕೆಎಸ್‍ಆರ್ ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಅದೃಷ್ಟವಶಾತ್ ವಿದ್ಯುತ್ ಇಲ್ಲದ ಕಾರಣ ಅನಾಹುತ ಸಂಭವಿಸಿಲ್ಲ.

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ವರ್ಷಧಾರೆ ಆಗುತ್ತಿದೆ. ಉಪ್ಪಿನಂಗಡಿ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಮತ್ತೆ ಮತ್ತೆ ಮುಳುಗಡೆ ಆಗುತ್ತಿದೆ. ಹಾಗಾಗಿ, ರಸ್ತೆ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ವ್ಯಾಪಕ ಮಳೆಯಾಗಿದ್ದು ಕೆರೆಕಟ್ಟೆಗಳು ನೀರು ತುಂಬಿ ತುಳುಕುತ್ತಿವೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕರಾವಳಿ ಭಾಗದ ಕಾರವಾರದಲ್ಲಿ ಮಳೆಯ ಆರ್ಭಟ ಅಲ್ಪಪ್ರಮಾಣದಲ್ಲಿ ಇಳಿಮುಖವಾಗಿದೆ.

    ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಕೊಯ್ನಾ ದಡದಲ್ಲಿ ನಿರಂತರ ಮಳೆಯಿಂದಾಗಿ, ಕೃಷ್ಣಾ ನದಿ ಮೈದುಂಬಿದೆ. ನೀರಿನ ಹರಿವು ಹೆಚ್ಚಾಳದಿಂದ ನದಿ ತೀರದ ಜಮಖಂಡಿಯ ಮತ್ತೂರು, ಮೈಗೂರು, ಕಂಕನವಾಡಿ, ಶೂರ್ಪಾಲಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು ಸಿಲುಕುವ ಸಾಧ್ಯತೆ ಇದೆ. ಜಮಖಂಡಿಯ ಹಿಪ್ಪರಿಗೆ ಬ್ಯಾರೇಜ್‍ನ ಒಳ ಹಾಗೂ ಹೊರ ಹರಿವು ಹೆಚ್ಚಾಗಿದೆ. ಕೃಷಿ, ಕೂಲಿ, ಸಂತೆ ಜಾನುವಾರುಗಳಿಗೆ ಮೇವು ಸಾಗಾಟಕ್ಕೆ ಜನ ಬೋಟ್ ಅವಲಂಬಿಸುತ್ತಿದ್ದಾರೆ.

    ಧಾರವಾಡ: ಧಾರವಾಡದಲ್ಲಿ ಬೆಳಗ್ಗೆಯೇ ಮಳೆರಾಯ ಅಬ್ಬರಿಸಿದ್ದರಿಂದ ನಗರದ ಜನ ಜೀವನ ಅಸ್ತವ್ಯಸ್ತವಾಗಿ ಪರದಾಡಬೇಕಾಯಿತು.

    ಯಾದಗಿರಿ: ಜಿಲ್ಲೆಯ ಶಹಾಪೂರ, ಸುರಪುರಗಳಲ್ಲಿ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ, ದಟ್ಟವಾದ ಮೋಡಗಳು ಆವರಿಸಿದ್ದವು.

    ಕೋಲಾರ: ಕರಾವಳಿ, ಮಲೆನಾಡು ಮಾತ್ರವಲ್ಲ ಬರದ ನಾಡು ಕೋಲಾರದಲ್ಲೂ ವರ್ಷಧಾರೆ ಇದೆ. 3 ದಿನಗಳಿಂದ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಯಿತು. ರೈತರು ಈಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

     

    ಬೆಂಗಳೂರು: ಬೆಂಗಳೂರು ನಗರ, ಹೊಸಕೋಟೆ, ನೆಲಮಂಗಲ, ಆನೇಕಲ್ ಗಳಲ್ಲೂ ಮಳೆಯಾಯಿತು. ಮಧ್ಯಾಹ್ನವೇ ಮಳೆಯ ಅರ್ಭಟ ಶುರುವಾಗಿ ಅರ್ಧ ಗಂಟೆ ಬಿರುಗಾಳಿ ಸಹಿತ ಮಳೆಯಾಯಿತು. ನೆಲಮಂಗಲದ ನಿಡುವಂದ ಬಳಿ ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿ ಹೊರವಲಯದಲ್ಲಿ ತಮಿಳುನಾಡಿನಿಂದ ಆಂಧ್ರ ಪ್ರದೇಶಕ್ಕೆ ರವಾನೆ ಆಗುತ್ತಿದ್ದ ಹೆಟೆನ್ಷನ್ ವಿದ್ಯುತ್ ಟವರ್ ಕಳಪೆ ಕಾಮಗಾರಿಯಿಂದಾಗಿ ಬಿರುಗಾಳಿಗೆ ಮುರಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವಿದ್ಯುತ್ ತಂತಿ ಅಳವಡಿಸದ ಕಾರಣ ಅನಾಹುತ ತಪ್ಪಿದೆ.