Tag: ಡ್ಯಾನ್ಸರ್

  • ನರ್ತಕಿಯರ ಜೊತೆ ಬಿಜೆಪಿ ನಾಯಕನ ನಂಗಾನಾಚ್!

    ನರ್ತಕಿಯರ ಜೊತೆ ಬಿಜೆಪಿ ನಾಯಕನ ನಂಗಾನಾಚ್!

    – ಜನರೆದ್ರು ಆಶ್ಲೀಲ ನೃತ್ಯ

    ಜೈಪುರ: ಬಿಜೆಪಿ ನಾಯಕರೊಬ್ಬರು ಡ್ಯಾನ್ಸರ್ ಜೊತೆ ಆಶ್ಲೀಲವಾಗಿ ನರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಚಿತ್ತೋಢಗಢ ಜಿಲ್ಲೆಯ ಮಾಂಗರೋಲ್ ನಲ್ಲಿ ಈ ಘಟನೆ ನಡೆದಿದೆ.

    ವೀಡಿಯೋದಲ್ಲಿ ಕಾಣಿಸಿಕೊಂಡಿರುವ ನಾಯಕನ ಹೆಸರು ಕೈಲಾಶ್ ಗುರ್ಜರ್. ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸರ್ ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಜನವರಿ 23ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ದೇಶಾದ್ಯಂತ ವೈರಲ್ ಆಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೈಲಾಶ್ ಗುರ್ಜರ್, ಕುಟುಂಬಸ್ಥರ ಮದುವೆಯಲ್ಲಿ ಭಾಗಿಯಾಗಿದ್ದ ವೇಳೆ ಕೆಲವರು ವೀಡಿಯೋ ಸೆರೆಹಿಡಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ತಪ್ಪು ಬರಹಗಳೊಂದಿಗೆ ವೀಡಿಯೋ ವೈರಲ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

  • ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನವದೆಹಲಿ: ಬಾಲಿವುಟ್ ನಟಿ, ಡ್ಯಾನ್ಸರ್ ಎಲಿ ಅವ್ರಾಮ್ ಮುಖ, ಕೈ-ಕಾಲು ಸೇರಿ ಈಡೀ ದೇಹಕ್ಕೆ ಬೀಟ್‍ರೂಟ್ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    29 ವರ್ಷದ ನಟಿ ಎಲಿ ಅವ್ರಾಮ್‍ಗೆ ಚರ್ಮದ ಚಿಕಿತ್ಸೆಗಾಗಿ ಮೈತುಂಬ ಬೀಟ್‍ರೂಟ್ ಜ್ಯೂಸ್ ಅನ್ನು ಹಚ್ಚಿಕೊಳ್ಳಲು ಅವರ ಮನೆಯ ಸಹಾಯಕಿ ಸಲಹೆ ನೀಡಿದ್ದಳು. ಇದರಿಂದಾಗಿ ಮೈತುಂಬ ಬೀಟ್‍ರೂಟ್ ಜ್ಯೂನ್ ಅನ್ನು ಹಚ್ಚಿಕೊಂಡ ನಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಬಿಕಿನಿಯಲ್ಲಿರುವ ಫೋಟೋಗಳನ್ನು ತಮ್ಮನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಎಲಿ ಅವ್ರಾಮ್, ‘ಇದು ಬೀಟ್‍ರೂಟ್ ಅಂಗಡಿ’ ಎಂದು ಶೀರ್ಷಿಕೆ ಹಾಕಿದ್ದಾರೆ. ಜೊತೆಗೆ “ಬೀಟ್‍ರೂಟ್‍ನ ಪ್ರೀತಿಗಾಗಿ. ಇದು ಮನೆಯಲ್ಲಿ ನನ್ನ ಸಹಾಯಕಿ ಉಷಾ ಕಲ್ಪನೆ. ಈ ಅಲಂಕಾರ ನೋಡಿ ಅವಳು ನನ್ನನ್ನು ಅನ್ಯಲೋಕದವಳು ಎಂದು ಕರೆದಳು” ಎಂದು ಬರೆದುಕೊಂಡಿದ್ದಾರೆ.

    ಎಲಿ ಅವ್ರಾಮ್ ಫೋಟೋಗಳಿಗೆ 99 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಕೆಲ ನೆಟ್ಟಿಗರು ತಮ್ಮದೇ ರೀತಿಯಲ್ಲಿ  ಕಮೆಂಟ್ ಮಾಡಿದ್ದಾರೆ.

    ಡ್ಯಾನ್ಸಿಂಗ್ ಕೌಶಲ್ಯದಲ್ಲಿ ಸಖತ್ ಹೆಸರು ಮಾಡಿರುವ ಎಲಿ ಅವ್ರಾಮ್ ಅನೇಕ ಸಿನಿಮಾ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಸಲ್ಮಾನ್ ಖಾನ್ ನಿರೂಪಿಸಿದ ರಿಯಾಲಿಟಿ ಟಿವಿ ಶೋ ಬಿಗ್‍ಬಾಸ್‍ನ ಏಳನೇ ಆವೃತ್ತಿಯಲ್ಲಿ ಎಲಿ ಅವ್ರಾಮ್ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಝಲಕ್ ದಿಕ್ಲಾ ಜಾ ಸೀಸನ್ 7ರ ಸ್ಪರ್ಧಿಯೂ ಆಗಿದ್ದಾರೆ. ಕಳೆದ ವರ್ಷ, ಅವರು ಟೈಪ್ ರೈಟರ್ ಮತ್ತು ಇನ್‍ಸೈಡ್ ಎಡ್ಜ್-2 ನಂತಹ ವೆಬ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

    https://www.instagram.com/p/CAz1kmMggFm/?utm_source=ig_embed

  • ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ – 22 ವರ್ಷದ ಡ್ಯಾನ್ಸರ್ ಸಾವು

    ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ – 22 ವರ್ಷದ ಡ್ಯಾನ್ಸರ್ ಸಾವು

    – ಮಾತ್ರೆ ಸೇವಿಸಿದ ಕೆಲ ಕ್ಷಣದಲ್ಲೇ ವಾಂತಿ

    ಮುಂಬೈ: ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ ಮಾಡಿ 22 ವರ್ಷದ ಡ್ಯಾನ್ಸರ್, ಜಿಮ್ ಟ್ರೈನರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಮೃತ ಡ್ಯಾನ್ಸರನ್ನು ಮೇಘನಾ ದೇವಗಡ್ಕರ್ (22) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಡ್ಯಾನ್ಸರ್ ಮತ್ತು ಜಿಮ್ ಟ್ರೈನರ್ ಆಗಿದ್ದ ಈಕೆ ತೂಕ ಇಳಿಸಲು ನಿಷೇಧಿತ ಡೈನಿಟ್ರೋಫೆನಾಲ್ ಎಂಬ ಮಾತ್ರೆ ಸೇವಿಸಿದ್ದಾರೆ. ಮಾತ್ರೆ ಸೇವಿಸಿದ ಕೆಲ ಗಂಟೆಯೊಳಗೆ ಸಾವನ್ನಪ್ಪಿದ್ದಾರೆ.

    ಮೇಘನಾ ಇಂದು ಬೆಳಗ್ಗೆ ಎಂದಿನಂತೆ ತಾನು ಹೊಸದಾಗಿ ಟ್ರೈನರ್ ಆಗಿ ಸೇರಿದ್ದ ಜಿಮ್‍ಗೆ ಬಂದು ವರ್ಕೌಟ್ ಆರಂಭಿಸುವ ಮೊದಲು ಈ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ. ಅದನ್ನು ಸೇವಿಸಿದ ಕೆಲ ಕ್ಷಣದಲ್ಲಿ ಅವರು ವಾಂತಿ ಮಾಡಲು ಶುರು ಮಾಡಿದ್ದಾರೆ. ಇದಾದ ನಂತರ ಆಕೆಯನ್ನು ಜಿಮ್ ನಲ್ಲಿ ಇದ್ದ ಕೆಲವರು ಅಲ್ಲಿಯೇ ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

    ಮೇಘನಾಳನ್ನು ಪರೀಕ್ಷಿಸಿದ ವೈದ್ಯರು ನಂತರ ಲೈಫ್‍ಲೈನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ಸಿಯಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಿಯಾನ್ ಆಸ್ಪತ್ರೆ ವೈದ್ಯರು ಆಕೆಯನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಸ್ವಲ್ಪ ಸಮಯದ ಕಾಲ ಐಸಿಯುವಿನಲ್ಲಿ ಇದ್ದ ಮೇಘನಾ ಅಲ್ಲೇ ಅಧಿಕ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ನಿಷೇಧಿತ ಮಾತ್ರೆ ಸೇವಿಸಿದ ನಂತರ ಮೇಘನಾ ಹೈಪರ್ಥರ್ಮಿಯಾದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಈ ಮಾತ್ರೆ ಸೇವನೆಯಿಂದ ಅವರ ದೇಹದ ಉಷ್ಣತೆಯನ್ನು ಸಾಮಾನ್ಯಕ್ಕಿಂತ ಜಾಸ್ತಿ ಮಾಡಿದೆ. ಹೀಗಾಗಿ ಅವರ ದೇಹದಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ತೀವ್ರವಾಗಿ ಹೆಚ್ಚಾಗಿದ್ದು, ಮೇಘನಾ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಸಾಯುವುದಕ್ಕೂ ಮುನ್ನ ಮೇಘನಾ ಆಸ್ಪತ್ರೆಗೆ ಬಂದ ಪೊಲೀಸರಿಗೆ ನಾನು ತೂಕ ಕಮ್ಮಿ ಮಾಡಿಕೊಳ್ಳಲು ಡೈನಿಟ್ರೋಫೆನಾಲ್ ಮಾತ್ರೆಯನ್ನು ಸೇವಿಸಿದ್ದೆ ಎಂದು ಮಾಹಿತಿ ನೀಡಿದ್ದಾಳೆ. ಸದ್ಯ ಈ ಬಗ್ಗೆ ನೌಪಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷೇಧಿತ ಮಾತ್ರೆ ಮೇಘನಾ ಅವರಿಗೆ ಹೇಗೆ ದೊರಕಿದೆ ಎಂದು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ವಿಡಿಯೋ: ಅಮೆರಿಕದಲ್ಲಿ ಮುಂಬೈ ಡ್ಯಾನ್ಸರ್ ಕಮಾಲ್- ತೀರ್ಪುಗಾರರು ಫಿದಾ

    ವಿಡಿಯೋ: ಅಮೆರಿಕದಲ್ಲಿ ಮುಂಬೈ ಡ್ಯಾನ್ಸರ್ ಕಮಾಲ್- ತೀರ್ಪುಗಾರರು ಫಿದಾ

    ವಾಷಿಂಗ್ಟನ್: ಅಮೆರಿಕದ ವೇದಿಕೆಯಲ್ಲಿ ಮುಂಬೈ ಡ್ಯಾನ್ಸ್ ತಂಡದ ಡ್ಯಾನ್ಸ್ ನೋಡಿ ತೀರ್ಪುಗಾರರು ಫುಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ.

    ಅಮೆರಿಕದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಅಮೆರಿಕ ಗಾಟ್ ಟ್ಯಾಲೆಂಟ್” ನಲ್ಲಿ ಮುಂಬೈ ‘ವಿ. ಅನ್‍ಬೀಟಬಲ್’ ಟೀಂ ಭಾಗವಹಿಸಿತ್ತು. ಈ ಶೋನಲ್ಲಿ ವಿ. ಅನ್‍ಬೀಟಬಲ್ ತಂಡ ನೃತ್ಯ ಪ್ರದರ್ಶಿಸಿದ್ದು, ಈ ತಂಡದ ನೃತ್ಯ ನೋಡಿ ತೀರ್ಪುಗಾರರಾದ ಗೇಬ್ರಿಲ್ ಯೂನಿಯನ್, ಹೌವಿ ಮ್ಯಾಂಡೆಲ್, ಜುಲಿಯನ್ ಹಗ್ ಮತ್ತು ಸೈಮನ್ ಕೋವೆಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

    ವಿ. ಅನ್‍ಬೀಟಬಲ್ ತಂಡ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೊಣೆ ನಟಿಸಿದ ‘ಬಾಜಿರಾವ್ ಮಸ್ತಾನಿ’ ಚಿತ್ರದ ‘ಮಲ್ಹಾರಿ’ ಚಿತ್ರಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಈ ತಂಡದಲ್ಲಿ ಒಟ್ಟು 28 ಮಂದಿ ಇದ್ದು, 12ರಿಂದ 27 ವಯಸ್ಸಿನವರು ಇದ್ದಾರೆ. ನೃತ್ಯ ಶುರು ಮಾಡುವ ಮೊದಲು ತಂಡ ‘ಗಣಪತಿ ಬಪ್ಪಾ ಮೋರಿಯಾ’ ಎಂದು ಹೇಳಿದ್ದಾರೆ. ಈ ತಂಡ ಡ್ಯಾನ್ಸ್ ಶುರು ಮಾಡಿದ ನಂತರ ಇವರ ಫ್ಲಿಪ್ಸ್ ಹಾಗೂ ಡ್ಯಾನ್ಸ್ ಮೂವ್ಸ್ ಗೆ ತೀರ್ಪುಗಾರರು ಕ್ಲೀನ್ ಬೋಲ್ಡ್ ಆಗಿದ್ದಾರೆ.

    ಈ ಡ್ಯಾನ್ಸ್ ವಿಡಿಯೋವನ್ನು ಅಮೆರಿಕ ಗಾಟ್ ಟ್ಯಾಲೆಂಟ್ ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ನೋಡಿದ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.

  • ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

    ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

    ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಡ್ಯಾನ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದ ಯುವ ಡ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ.

    ಇಶಾನ್ ಡ್ಯಾನ್ಸ್ ಅಭ್ಯಾಸದ ವೇಳೆ ಡಬಲ್ ಫ್ರಂಟ್ ಫ್ಲಿಪ್ ಒಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಈ ವಿಷಯ ತಿಳಿದ ಹಲವು ಡ್ಯಾನ್ಸರ್ ಗಳು ಇಶಾನ್ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಶುರು ಮಾಡಿದ್ದರು.

    ಡ್ಯಾನರ್ಸ್ ಹಣ ಸಂಗ್ರಹಿಸುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದನ್ನು ನೋಡಿದ ವರುಣ್ ಇನ್‍ಸ್ಟಾಗ್ರಾಂ ಮೆಸೇಜ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಇಶಾನ್ ಬಗ್ಗೆ ಮಾಹಿತಿ ಪಡೆದು ಸಾಹಯಕ್ಕೆ ಮುಂದಾಗಿದ್ದಾರೆ.

    ವರುಣ್, ಇಶಾನ್ ಚಿಕಿತ್ಸೆಗಾಗಿ 5 ಲಕ್ಷ ರೂ. ಹಣ ನೀಡಿದ್ದಾರೆ. ಡ್ಯಾನ್ಸರ್ ವೊಬ್ಬರು ವರುಣ್ ಜೊತೆ ಚಾಟ್ ಮಾಡಿದ ಸ್ಕ್ರೀನ್ ಶಾಟ್ ತೆಗೆದು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸ್ಕ್ರೀನ್ ಶಾಟ್ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವರುಣ್ ಧವನ್ ನಿರ್ದೇಶಕ ರೆಮೋ ಡಿಸೋಜಾ ನಿರ್ದೇಶನದ ‘ಸ್ಟ್ರೀಟ್ ಡ್ಯಾನ್ಸರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ವರುಣ್‍ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಹಾಗೂ ನೋರಾ ಫತೇಹಿ ನಟಿಸುತ್ತಿದ್ದಾರೆ. ಇದಲ್ಲದೆ ವರುಣ್ ನಟಿ ಸಾರಾ ಅಲಿ ಖಾನ್ ಜೊತೆ ‘ಕೂಲಿ ನಂ. 1’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಸಲ್ಮಾನ್ ಯೂಸುಫ್ ಖಾನ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

    ಸಲ್ಮಾನ್ ಯೂಸುಫ್ ಖಾನ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

    ಮುಂಬೈ: ಬೆಂಗಳೂರು ಮೂಲದ ಡ್ಯಾನ್ಸರ್, ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮುಂಬೈನ ಅಂಧೇರಿಯ ಓಶಿವರಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

    ಜನವರಿ 30ರಂದ ಸಂತ್ರಸ್ತೆ ದೂರು ದಾಖಲಿಸಿದ್ದು, ಸಲ್ಮಾನ್ ಮತ್ತು ಆತನ ಸೋದರ ಸಂಬಂಧಿ ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಬೇರೆ ಬೇರೆ ಸ್ಥಳಗಳಲ್ಲಿ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದು, ಸಿನಿಮಾ ಉದ್ಯಮದಲ್ಲಿ ಇದೆಲ್ಲ ಸಾಮಾನ್ಯ ಅಂತಾ ಸಲ್ಮಾನ್ ಹೇಳಿದ್ದರು. ಆಷ್ಟೇ ಅಲ್ಲದೇ ವಿಷಯವನ್ನು ಬಹಿರಂಗಗೊಳಿಸದಂತೆ ಬೆದರಿಕೆಯನ್ನು ಸಲ್ಮಾನ್ ಹಾಕಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಸಹ ನೃತ್ಯಗಾರ್ತಿಯಾಗಿದ್ದು, 2018 ಆಗಸ್ಟ್ ನಲ್ಲಿ ಸಲ್ಮಾನ್ ಮ್ಯಾನೇಜರ್ ಅವರನ್ನು ನಾನು ಸಂಪರ್ಕಿಸಿದೆ. ಈ ಸಮಯದಲ್ಲಿ ನಾನು ಲಂಡನ್ ನಲ್ಲಿದ್ದೆ. ಕೆಲ ದಿನಗಳ ನಂತರ ಅಂಧೇರಿಯ ಕಾಫಿ ಶಾಪ್ ನಲ್ಲಿ ಸಲ್ಮಾನ್ ಮತ್ತು ನಾನು ಭೇಟಿಯಾಗಿದ್ದೆ. ಇದಾದ ಬಳಿಕ ಸಲ್ಮಾನ್ ಬಾಲಿವುಡ್ ಪಾರ್ಕ್, ದುಬೈನಲ್ಲಿ ತಮ್ಮೊಂದಿಗೆ ನರ್ತಿಸುವ ಅವಕಾಶ ನೀಡಿದ್ದರು. ಒಂದು ದಿನ ಸಲ್ಮಾನ್ ಡ್ಯಾನ್ಸ್ ಮಾಡುವ ವೇಳೆ ನನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಬಾಲಿವುಡ್ ನಲ್ಲಿ ಇದೆಲ್ಲಾ ಕಾಮನ್ ಅಂತ ಹೇಳಿದ್ದರು. ಈ ಘಟನೆ ಬಳಿಕ ಮತ್ತೊಮ್ಮೆ ಸಲ್ಮಾನ್ ಮ್ಯಾನೇಜರ್ ಕರೆ ಮಾಡಿ ದುಬೈ ಕಾರ್ಯಕ್ರಮದ ಅವಕಾಶ ನೀಡಿದ್ದರು. ಆಗಸ್ಟ್ 30ರಂದು ಮತ್ತೊಂದು ಶೋಗಾಗಿ ನಮ್ಮ ಡ್ಯಾನ್ಸ್ ತಂಡವನ್ನು ಬಹರೈನ್ ಗೆ ಕಳುಹಿಸಲಾಯ್ತು.

    ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ತಮ್ಮ ಓರ್ವ ಸೋದರನನ್ನು ಪರಿಚಯಿಸಿದರು. ಪ್ರಯಾಣದ ವೇಳೆ ಸಲ್ಮಾನ್ ಸೋದರ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಈ ಘಟನೆ ನಂತರ ಸಲ್ಮಾನ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ. ಒಂದು ವೇಳೆ ಈ ವಿಷಯವನ್ನು ಬಹಿರಂಗಗೊಳಿಸಿದ್ರೆ ಪರಿಣಾಮ ಸರಿಯಾಗಿರಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಸಲ್ಮಾನ್ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‍ನಲ್ಲಿ ಕೆಲ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡದ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಕೈಹಾಕಿ ಸಿಕ್ಕಿಬಿದ್ದ ಡಾನ್ಸರ್..!

    ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಕೈಹಾಕಿ ಸಿಕ್ಕಿಬಿದ್ದ ಡಾನ್ಸರ್..!

    ನವದೆಹಲಿ: ಪ್ರಿಯತಮೆಯರಿಗಾಗಿ ದೆಹಲಿಯ ಡ್ಯಾನ್ಸರ್ ಒಬ್ಬ ಆಟೋ ಚಾಲಕನಿಂದ ಹಣ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಗೋವಿಂದಪುರಿ ನಿವಾಸಿ ರೋಹನ್ ಗಿಲ್ಲಿ(21) ಅಲಿಯಾಸ್ ಸನ್ನಿ ಬಂಧಿತ ಡ್ಯಾನ್ಸರ್. ರಾಹುಲ್ ಹಣ ಕಳೆದುಕೊಂಡಿದ್ದ ಆಟೋ ಚಾಲಕ. ಹಣ ಕಿತ್ತುಕೊಂಡು ಪರಾರಿಯಾಗುತ್ತಿದ್ದಾಗಲೇ ರೋಹನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಗೋವಿಂದ ಪುರಿ ಆಟೋ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಾ ನಿಂತಿದ್ದೆ. ಈ ವೇಳೆ ನನ್ನ ಬಳಿಯಿದ್ದ ಹಣವನ್ನು ಎಣಿಕೆ ಮಾಡಿ, ಪರ್ಸ್ ನಲ್ಲಿ ಇಟ್ಟುಕೊಂಡಿದ್ದಾಗ ನನ್ನ ಬಳಿಗೆ ಬಂದಿದ್ದ ರೋಹನ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದನು ಎಂದು ರಾಹುಲ್ ದೂರಿದ್ದಾನೆ.

    ಹಣ ಕಿತ್ತುಕೊಂಡು ಓಡುತ್ತಿದ್ದಂತೆ ರಾಹುಲ್ ಕಿರುಚಲು ಪ್ರಾರಂಭಿಸಿದ್ದಾನೆ. ಬಳಿಕ ರೋಹನ್‍ನ ಹಿಂದೆ ಓಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು, ರೋಹನ್‍ನನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ಬಯಲಿಗೆ ಬಂದಿದೆ. ಬಳಿಕ ಆರೋಪಿಯನ್ನು ಬಂಧಿಸಿ ದೆಹಲಿಯ ಆಗ್ನೇಯ ಪೊಲೀಸ್ ಠಾಣೆಗೆ ತರಲಾಗಿತ್ತು. ರೋಹನ್‍ನನ್ನು ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದಾಗ, ಆತನಿಗೆ ಮೂವರು ಪ್ರಿಯತಮೆಯರಿದ್ದು, ಅವರಿಗಾಗಿ ತಾನು ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ರೋಹನ್‍ನಿಂದ 1,900 ರೂಪಾಯಿ ಇದ್ದ ಪರ್ಸ್, ಒಂದು ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೋಹನ್ ನನ್ನು 2017 ಡಿಸೆಂಬರ್ ನಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews