Tag: ಡ್ಯಾಂ

  • ಡ್ಯಾಂಗೆ ಮುತ್ತಿಗೆ ಹಾಕಲು ರೈತರು ಸಿದ್ಧತೆ

    ಡ್ಯಾಂಗೆ ಮುತ್ತಿಗೆ ಹಾಕಲು ರೈತರು ಸಿದ್ಧತೆ

    ಮಂಡ್ಯ: ಜಿಲ್ಲೆಯಲ್ಲಿ ನೀರಿಗಾಗಿ ಅನ್ನದಾತರ ಅಹೋರಾತ್ರಿ ಧರಣಿ ನಡೆಯುತ್ತಿದ್ದು, 8 ದಿನಗಳು ಕಳೆದಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಹೀಗಾಗಿ ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ನೀರು ಬಿಡದ ಹಿನ್ನೆಲೆಯಲ್ಲಿ ಮಂಡ್ಯದಿಂದ ಕೆಆರ್‍ಎಸ್‍ವರೆಗೆ ಜಾಥಾ ನಡೆಸಿ ಮುತ್ತಿಗೆಗೆ ಹಾಕಲು ರೈತರು ಪ್ಲಾನ್ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಗುರುವಾರ ರಾತ್ರಿ, ಕಾವೇರಿ ಜಲಾಶಯಗಳಿಂದ ನೀರು ಬಿಡಿಸುವ ಅಧಿಕಾರ ನನ್ನ ಕೈಯಲ್ಲಿ ಇಲ್ಲ. ಅದು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಕೈಯಲ್ಲಿದೆ. ರೈತರು ಬೇಕಿದ್ದರೆ ದೆಹಲಿಗೆ ಹೋಗಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಿ ಎಂದು ಹೇಳಿಕೆ ನೀಡಿದ್ದರು.

    ಈ ನಡುವೆ ಮಂಡ್ಯದಲ್ಲಿ ನೀರಿಗಾಗಿ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಕೆಆರ್‍ಎಸ್‍ವರೆಗೆ ಜಾಥಾ ನಡೆಸಿ, ಡ್ಯಾಂಗೆ ಮುತ್ತಿಗೆ ಹಾಕಲು ರೈತರು ತೀರ್ಮಾನಿಸಿದ್ದಾರೆ.

    ಸಿಎಂ ಆಡಿದ ಮಾತುಗಳಿಂದ ನಿಖಿಲ್ ಚುನಾವಣೆಯಲ್ಲಿ ಸೋತ ಬಳಿಕ ಮಂಡ್ಯದಿಂದ ಸಿಎಂ ದೂರ ಆಗುತ್ತಿದ್ದಾರಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಬೀದರ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಬಳಿ ನಡೆದಿದೆ.

    ಕಾಶಿನಾಥ್ ಪಾಟೀಲ್ (17) ಹಾಗೂ ನಾಗರಾಜ್ (16) ಸೆಲ್ಫಿ ಕ್ಲಿಕ್ಕಿಸಿಕೊಳ್ಳವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಬೇಸಿಗೆ ರಜೆ ಇದ್ದ ಕಾರಣ ಕಾಶಿನಾಥ್ ಹಾಗೂ ನಾಗರಾಜ್ ದುಬಲಗುಂಡಿಯಿಂದ ಮಾವನ ಮನೆಗೆ ಬಂದಿದ್ದರು. ಈ ವೇಳೆ ಇಬ್ಬರು ಕಾರಂಜಾ ಡ್ಯಾಂನಲ್ಲಿ ಹತ್ತಿರ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

    ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಇಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ನೀರಿನಲ್ಲಿ ಬಿದ್ದ ಕಾಶಿನಾಥ್ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಬಗ್ಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸ ವರ್ಷಕ್ಕೆ ಶಾಲಾ ಪ್ರವಾಸಕ್ಕೆ ಹೋಗಿದ್ದ ಬಾಲಕ ಡ್ಯಾಂನಲ್ಲಿ ಬಿದ್ದು ಸಾವು

    ಹೊಸ ವರ್ಷಕ್ಕೆ ಶಾಲಾ ಪ್ರವಾಸಕ್ಕೆ ಹೋಗಿದ್ದ ಬಾಲಕ ಡ್ಯಾಂನಲ್ಲಿ ಬಿದ್ದು ಸಾವು

    ಕೋಲಾರ: ಹೊಸ ವರ್ಷದ ಪ್ರಯುಕ್ತ ಶಾಲೆಯಿಂದ ಡ್ಯಾಂ ವೀಕ್ಷಣೆಗೆ ತೆರಳಿದ್ದ ಶಾಲಾ ಬಾಲಕನೊಬ್ಬ ಈಜಲು ಹೋಗಿ ಕಾಲು ಜಾರಿ ಮೃತಪಟ್ಟಿರುವ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

    ಬಂಗಾರಪೇಟೆ ತಾಲೂಕಿನ ಕಾವರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ 7 ತರಗತಿ ವಿದ್ಯಾರ್ಥಿ ಆಕಾಶ್(12) ಮೃತಪಟ್ಟ ಬಾಲಕ. ಆಕಾಶ್ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಬಳಿ ಇರುವ ಮುಷ್ಟ್ರರಹಳ್ಳಿ ಡ್ಯಾಂಗೆ ಬಿದ್ದು ಮೃತಪಟ್ಟಿದ್ದಾನೆ.

    ಮಂಗಳವಾರ ಹೊಸ ವರ್ಷದ ಪ್ರಯುಕ್ತ ಶಾಲೆಯಿಂದ ಡ್ಯಾಂ ವೀಕ್ಷಣೆಗೆ ಶಾಲಾ ವಿದ್ಯಾರ್ಥಿಗಳ ಜೊತೆ ಆಕಾಶ್ ಪ್ರವಾಸ ಹೋಗಿದ್ದ. ಈ ಸಂದರ್ಭದಲ್ಲಿ ಡ್ಯಾಂ ಬಳಿ ಈಜಲು ಹೋಗಿ ಅಲ್ಲಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಘಟನಾ ಸ್ಥಳಕ್ಕೆ ಕಾಮಸಮುದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರೀ ಅನಾಹುತದಿಂದ ಬದುಕುಳಿದ ಐದು ವಿದ್ಯಾರ್ಥಿಗಳು!

    ಭಾರೀ ಅನಾಹುತದಿಂದ ಬದುಕುಳಿದ ಐದು ವಿದ್ಯಾರ್ಥಿಗಳು!

    ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ, ವಿದ್ಯಾರ್ಥಿಗಳಲ್ಲಿ ಐವರು ನೀರಿನ ಪ್ರವಾಹಕ್ಕೆ ಸಿಲುಕಿ, ಬದುಕುಳಿದ ಘಟನೆ ಮಂಗಳೂರು ತಾಲೂಕಿನ ನಾವೂರ ಗ್ರಾಮದಲ್ಲಿ ನಡೆದಿದೆ.

    ವಾಲ್ಮೀಕಿ ಜಯಂತಿ ನಿಮಿತ್ತ ಇಂದು ಶಾಲಾಗಳಿಗೆ ಸರ್ಕಾರಿ ರಜೆ ಘೋಷಿಸಲಾಗಿತ್ತು. ಹೀಗಾಗಿ ನಾವೂರ ಗ್ರಾಮ ಸಮೀಪದ ಲಕ್ಷ್ಮಿ ವಿಷ್ಣು ಮೂರ್ತಿ ದೇವಸ್ಥಾನದ ಬಳಿ ಹರಿಯುವ ನೇತ್ರಾವತಿ ನದಿಗೆ 11 ಜನರ ವಿದ್ಯಾರ್ಥಿಗಳ ತಂಡ ಈಜಾಡಲು ತೆರಳಿತ್ತು. ಈ ವೇಳೆ ಶಂಭೂರು ಎಎಂಆರ್ ಡ್ಯಾಂನಿಂದ ಏಕಾಏಕಿ ನೀರನ್ನು ಹೊರಬಿಡಲಾಗಿತ್ತು. ನೀರಿನ ರಭಸವನ್ನು ಗಮನಿಸಿದ 6 ಮಂದಿ ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ.

    ಉಳಿದ ಐವರು ವಿದ್ಯಾರ್ಥಿಗಳಿಗೆ ಈಜಲು ಸಾಧ್ಯವಾಗದೇ ನದಿಯ ಇನ್ನೊಂದು ಬದಿಯ ದೊಡ್ಡ ಬಂಡೆಯ ಮೇಲೆ ಹತ್ತಿದ್ದಾರೆ. ಮಕ್ಕಳು ಅಲ್ಲಿಂದ ಪಾರಾಗಲು ಪರದಾಡುವಂತಾಗಿತ್ತು. ನದಿಯ ದಂಡೆ ಸೇರಿದ್ದ 6 ವಿದ್ಯಾರ್ಥಿಗಳು ಬೊಬ್ಬೆ ಹಾಗೂ ಕಿರುಚಾಟ ಕೇಳಿಸಿಕೊಂಡ, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾದರು. ಹಗ್ಗ ಕೊಟ್ಟು ಒಬ್ಬೊಬ್ಬರನ್ನೇ ರಕ್ಷಿಸಿದ್ದಾರೆ.

    ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿ, ವಿದ್ಯಾರ್ಥಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡು, ನಿಮಗೆ ನದಿಯ ಆಳ ಗೊತ್ತಿಲ್ಲದಿದ್ದರೆ ಸ್ಥಳೀಯರನ್ನು ಕೇಳಬೇಕಿತ್ತು. ಯಾರೇ ಪ್ರಾಣ ಹೋಗಿದ್ದರೂ ನಷ್ಟ ಅಲ್ಲವೇ. ಡ್ಯಾಂ ಹತ್ತಿರವೇ ಇದೆ. ನಿಮಗೆ ಈಜಾಡುವ ಉದ್ದೇಶವಿದ್ದರೆ ಮಾಹಿತಿ ಪಡೆಯಬೇಕಿತ್ತು. ಒಂದು ವೇಳೆ ಸ್ಥಳೀಯರು ಬಾರದಿದ್ದರೇ ಐವರ ಜೀವವೇ ಹೋಗುತ್ತಿತ್ತು ಎಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ಚಿಕ್ಕಮಗಳೂರು: ತುಂಬಿ ಹರಿಯುತ್ತಿದ್ದ ಭದ್ರಾ ಬಲ ದಂಡೆ ನಾಲೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಸಮೀಪ ನಡೆದಿದೆ.

    ದಾವಣಗೆರೆ ಮೂಲದ ಪ್ರವಾಸಿ ಬಸವರಾಜ್ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಬಸವರಾಜ್ ತನ್ನ ಐವರು ಸ್ನೇಹಿತರೊಂದಿಗೆ ಎರಡು ದಿನಗಳ ಹಿಂದೆ ಪ್ರವಾಸಕ್ಕೆಂದು ಲಕ್ಕವಳ್ಳಿ ಡ್ಯಾಂಗೆ ಬಂದಿದ್ದರು. ಈ ವೇಳೆ ಸಹ ಸ್ನೇಹಿತರು ಅಲ್ಲೇ ನಾಲೆಯ ಮತ್ತೊಂದು ಬದಿಯಲ್ಲಿ ಅಡುಗೆ ಮಾಡುವ ವೇಳೆ ಬಸವರಾಜ್ ಏಕಾಂಗಿಯಾಗಿ ಈಜುತ್ತಿದ್ದರು. ಅವರ ಸ್ನೇಹಿತರು ಬೇಡ ಬಾ ಎಂದ್ರು ಬಾರದ ಬಸವರಾಜ್ ಈಜುತ್ತಲೇ ಸ್ನೇಹಿತರು ನೋಡುತ್ತಿದ್ದಂತೆಯೇ ಮುಳುಗಿ ಹೋಗಿದ್ದಾರೆ.

    ಈ ಸನ್ನಿವೇಶವನ್ನ ಸ್ನೇಹಿತರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮೃತದೇಹ ಸಿಗುವ ಲಕ್ಷಣಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈ ನಾಲೆ ದಾವಣಗೆರೆಗೆ ಹೋಗಿ ವಾಣಿವಿಲಾಸ ಸಾಗರದವರೆಗೂ ಹರಿಯಲಿದೆ.

    ದಾವಣಗೆರೆಯಿಂದ ಕೂಡ ನೂರಾರು ಜನ ಬಂದು ಮೃತದೇಹ ಹುಡುಕಾಟ ನಡೆಸುತ್ತಿದ್ದಾರೆ. ನಲ್ಲೂರು ಬಳಿ ನಾಲೆ ಎರಡು ವಿಭಾಗವಾಗಿ ಹರಿಯಲಿದೆ. ಒಂದು ವಾಣಿವಿಲಾಸ ಸಾಗರಕ್ಕೆ ಹೋದರೆ ಮತ್ತೊಂದು ಬೇರೆ ಕಡೆ ಹೋಗುತ್ತೆದೆ. ಸದ್ಯಕ್ಕೆ ಪೊಲೀಸರು ಮಾರ್ಗದುದ್ದಕ್ಕೂ ಹುಡುಕುತ್ತಿದ್ದಾರೆ.

    ನಲ್ಲೂರು ಪೊಲೀಸರು, ಸ್ಥಳಿಯರು ಮತ್ತು ಈಜು ತಜ್ಞರು ಮೃತದೇಹ ತೇಲಿಬರಬಹುದೆಂದು ಕಾಯುತ್ತಿದ್ದಾರೆ. ಈ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ನೀರಿನ ಸೆಳೆತಕ್ಕೆ ಸಿಲುಕಿದ್ದ ಯುವಕನ ರಕ್ಷಣೆ

    ನೀರಿನ ಸೆಳೆತಕ್ಕೆ ಸಿಲುಕಿದ್ದ ಯುವಕನ ರಕ್ಷಣೆ

    ಮಂಗಳೂರು: ಡ್ಯಾಂ ನಲ್ಲಿ ಈಜಾಡೋಕೆ ಹೋಗಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿದ ಘಟನೆ ನಗರದ ಮರವೂರಿನಲ್ಲಿ ನಡೆದಿದೆ.

    ಬಜ್ಪೆ ನಿವಾಸಿ ಶರತ್ ಸ್ಥಳೀಯರು ರಕ್ಷಿಸಿದ ಯುವಕ. ಫಲ್ಗುಣಿ ನದಿಗೆ ಅಡ್ಡಲಾಗಿ ಮರವೂರು ಡ್ಯಾಂ ಇದೆ. ಇತ್ತೀಚೆಗೆ ಅಧಿಕ ಮಳೆಯಾಗಿದ್ದರಿಂದ ಡ್ಯಾಂ ಭರ್ತಿಯಾಗಿತ್ತು. ಆದ್ದರಿಂದ ನೀರನ್ನು ಹೊರಬಿಡಲಾಗುತ್ತಿದೆ. ಸ್ನೇಹಿತರ ಜೊತೆ ಡ್ಯಾಂ ನೋಡೋಕೆ ಹೋಗಿದ್ದ ಶರತ್ ಈಜಾಡಲು ನೀರಿಗೆ ಇಳಿದಿದ್ದಾನೆ. ಈ ವೇಳೆ ನೀರಿನ ಸೆಳೆತ ಜಾಸ್ತಿ ಕಾರಣ ಶರತ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

    ಸ್ಥಳದಲ್ಲಿದ್ದ ಸ್ಥಳೀಯ ಜತೀನ್ ಡಿಸೋಜಾ, ಶರತ್ ನೀರಿನ ಸೆಳೆತಕ್ಕೆ ಒಳಗಾಗಿದ್ದನ್ನು ಗಮನಿಸಿ ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ನಂತರ ಟ್ಯೂಬ್ ಮತ್ತು ಹಗ್ಗದ ಮೂಲಕ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಜೀವ ಪಣಕಿಟ್ಟು ಜತೀನ್ ಡಿಸೋಜಾ ಯುವಕನನ್ನು ರಕ್ಷಣೆ ಮಾಡಿದ್ದು, ಯುವಕನ ಪ್ರಾಣ ಉಳಿಸಿದ್ದಾರೆ.

    ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಯುವಕನೊಬ್ಬ ಡ್ಯಾಂನಲ್ಲಿ ಮುಳುಗಿ ಮೃತಪಟ್ಟಿದ್ದನು. ಮತ್ತೊಂದು ಅನಾಹುತ ನಡೆಯುವ ಮುನ್ನ ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದಾರೆ.

  • ಕಬಿನಿ, ಕೆಆರ್ ಎಸ್ ನಿಂದ ನೀರು ಹೊರಕ್ಕೆ- ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣದ ನೀರು!

    ಕಬಿನಿ, ಕೆಆರ್ ಎಸ್ ನಿಂದ ನೀರು ಹೊರಕ್ಕೆ- ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣದ ನೀರು!

    ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

    ಕಾವೇರಿ ನದಿ ಪಾತ್ರದಲ್ಲಿ ಬಿಟ್ಟುಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್‍ಎಸ್ ಡ್ಯಾಂ ಭರ್ತಿಯಾಗಿದೆ. ಹೀಗಾಗಿ ಕಬಿನಿ, ಕೆಆರ್ ಎಸ್ ಡ್ಯಾಂನಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗ್ತಿದೆ. ಇದ್ರಿಂದ ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣ ನೀರು ಹರಿಯುತ್ತಿದೆ.

    ಸೋಮವಾರ ಬೆಳಗ್ಗೆ 87.92 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಸದ್ಯ ಮೆಟ್ಟೂರು ಡ್ಯಾಂ ನಲ್ಲಿ 1.25 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಓ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಡ್ಯಾಂ ನ ನೀರಿನ ಮಟ್ಟ 100 ಅಡಿ ತಲುಪುವ ಸಾಧ್ಯತೆಗಳು ಹೆಚ್ಚಿವೆ.

    ಹೊಗೇನಕಲ್ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ನದಿ ಪಾತ್ರದ ಪ್ರದೇಶಗಳಿಗೆ ನೀರು ನುಗ್ಗಿದೆ. ಮನೆಗಳು, ದೇಗುಲಗಳಲ್ಲಿ ನೀರು ನಿಂತಿದ್ದು, ಜನ ಆತಂಕದಲ್ಲಿದ್ದಾರೆ. ಹೊಗೇನಕಲ್ ಫಾಲ್ಸ್ ಗೆ ಯಾರು ಹೋಗಬಾರದು ಅಂತಾ ತಮಿಳುನಾಡು ನಿಷೇಧ ಹೇರಿದೆ. ಈಗಾಗಲೇ 88 ಅಡಿಯಷ್ಟು ತಲುಪಿರುವ ಮೆಟ್ಟೂರು ಡ್ಯಾಂನ ನೀರಿನ ಮಟ್ಟ ಕೆಲವೇ ದಿನಗಳಲ್ಲಿ 100 ಅಡಿಯಷ್ಟು ತಲುಪಲಿದೆ. ಈ ಜಲಾಶಯದಲ್ಲಿ 120 ಅಡಿ ನೀರಿನ ಗರಿಷ್ಠ ಮಟ್ಟವನ್ನು ಹೊಂದಿದೆ.

    ಒಟ್ಟಿನಲ್ಲಿ ಮೆಟ್ಟೂರು ಜಲಾಶಯದಲ್ಲಿ ಜಲತಾಂಡವೇ ಸೃಷ್ಟಿಯಾಗಿದೆ. ಇನ್ನು ನದಿ ಪಾತ್ರದ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.

  • ದೇವಸ್ಥಾನ ಸುತ್ತಲೂ ಆವರಿಸಿದ ನೀರು: ಕ್ಷೇತ್ರದಿಂದ ಹೊರ ಬರಲ್ಲ ಅಂತಾ ಪಟ್ಟು ಹಿಡಿದ ಸ್ವಾಮೀಜಿ

    ದೇವಸ್ಥಾನ ಸುತ್ತಲೂ ಆವರಿಸಿದ ನೀರು: ಕ್ಷೇತ್ರದಿಂದ ಹೊರ ಬರಲ್ಲ ಅಂತಾ ಪಟ್ಟು ಹಿಡಿದ ಸ್ವಾಮೀಜಿ

    ಮಂಡ್ಯ: ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ದೇವಸ್ಥಾನದಿಂದ ಹೊರಬರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರೂ ಸ್ವಾಮೀಜಿಯೊಬ್ಬರು ಇದಕ್ಕೆ ಒಪ್ಪದೇ ಅಲ್ಲಿಯೇ ಕುಳಿತಿದ್ದಾರೆ.

    ಕಾವೇರಿ ನದಿ ಪಾತ್ರದ ಶ್ರೀರಂಗಪಟ್ಟಣದ ಗೌತಮ ಕ್ಷೇತ್ರ ದೇವಸ್ಥಾನ ಈಗಾಗಲೇ ನದಿ ಪ್ರವಾಹದಿಂದ ಅರ್ಧ ಮುಳುಗಡೆಯಾಗಿದೆ. ಮತ್ತೇ ಕೆಆರ್‌ಎಸ್‌ ಡ್ಯಾಂ ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ದೇವಸ್ಥಾನವೇ ಮುಳುಗಡೆ ಆಗುತ್ತದೆ. ಹೀಗಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಸ್ಥಳಕ್ಕೆ ಭೇಟಿ ನೀಡಿ, ಸ್ವಾಮೀಜಿಗಳಿಗೆ ಕರೆ ಮಾಡಿ ದೇವಸ್ಥಾನ ಬಿಟ್ಟು ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

    ನೀರು ಬಂದರೂ ನಮಗೆನೂ ಆಗಲ್ಲ. ನಾನು ಗೌತಮ ಕ್ಷೇತ್ರದಿಂದ ಹೊರ ಬರುವುದಿಲ್ಲ ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸ್ವಾಮೀಜಿಯ ಯೋಗಕ್ಷೇಮ ವಿಚಾರಿಸಿದ ಮಂಜುಶ್ರೀ ಅವರು, ನೀರಿನ ಮಟ್ಟ ಹೆಚ್ಚಾಗಿ ನೀವು ತೊಂದರೆಗೆ ಒಳಗಾಗುತ್ತಿದ್ದಂತೆ ತಿಳಿಸಿ, ನಾವು ನಿಮ್ಮನ್ನು ಬೋಟ್‍ನಲ್ಲಿ ಕರೆದು ತರುತ್ತೇವೆ ಎಂದು ಸಲಹೆ ನೀಡಿದ್ದಾರೆ.

    ಬಳಿಕ ಸ್ಥಳೀಯ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಯಾವುದೇ ಅವಘಡ ಸಂಭವಿಸದಂತೆ ಎಚ್ಚರವಹಿಸಿ ಎಂದು ಸೂಚಿಸಿದ್ದಾರೆ.

  • ದಾಖಲೆ ಮಳೆಗೆ ಕಾವೇರಿಕೊಳ್ಳದ ಡ್ಯಾಂಗಳು ಭರ್ತಿ- ಹೆಚ್ಚುವರಿ ನೀರು ಬಳಕೆ ಅವಕಾಶಕ್ಕಾಗಿ ಸರ್ಕಾರ ಮನವಿ?

    ದಾಖಲೆ ಮಳೆಗೆ ಕಾವೇರಿಕೊಳ್ಳದ ಡ್ಯಾಂಗಳು ಭರ್ತಿ- ಹೆಚ್ಚುವರಿ ನೀರು ಬಳಕೆ ಅವಕಾಶಕ್ಕಾಗಿ ಸರ್ಕಾರ ಮನವಿ?

    ಬೆಂಗಳೂರು: ಮುಂಗಾರು ಅಬ್ಬರದಿಂದಾಗಿ ಕಾವೇರಿಕೊಳ್ಳದ ಡ್ಯಾಂಗಳು ಎಲ್ಲಾ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರು ಬಳಕೆಗೆ ಸಂಬಂಧ ಕರ್ನಾಟಕದಿಂದ ಮನವಿ ಸಾಧ್ಯತೆಗಳಿವೆ.

    ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಯಶಗಳು ಅವಧಿಗೂ ಮೊದಲೇ ಭರ್ತಿಯಾಗಿರುವುದರಿಂದ ರಾಜ್ಯ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಚಿಂತಿಸಿದೆ ಎನ್ನಲಾಗಿದೆ.

    ಸಾಧಾರಣ ಮಳೆ ವರ್ಷದಲ್ಲಿ ಹೆಚ್ಚುವರಿ ನೀರು ಬಳಕೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಆದೇಶವಿಲ್ಲ. ಸಾಧಾರಣ ಮಳೆ ವರ್ಷದಲ್ಲಿ ಬಿಳಿಗುಂಡ್ಲುಗೆ 177.25 ಟಿಎಂಸಿ ನೀರು ತಲುಪಿದ ಬಳಿಕ ಸಿಗೋ ಹೆಚ್ಚುವರಿ ನೀರು ಬಳಕೆಗೆ ಸಂಬಂಧಿಸಿದಂತೆ ಇದೀಗ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ದಶಕಗಳ ಬಳಿಕ ಇದೀಗ ಅವಧಿಗೂ ಮುನ್ನವೇ ಕೆಆರ್‍ಎಸ್ ಜಲಾಶಯ ಭರ್ತಿಯಾಗಿದ್ದು, ಕನ್ನಡ ನಾಡಿನ ಜೀವನದಿ ಕಾವೇರಿ ಭೋರ್ಗರೆದು ಹರಿಯುತ್ತಿದ್ದಾಳೆ. ಬತ್ತಿ ಹೋಗಿದ್ದ ಕಾವೇರಿ ಕೊಳ್ಳದ ಭೂಮಿಯೀಗ ಹಸಿರಿನಿಂದ ಕಂಗೊಳಿಸುತ್ತಿದೆ. ಕೆಲ ವರ್ಷಗಳಿಂದ ಬರಿದಾಗಿದ್ದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆ ಬಂದು ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಅವಧಿಗೂ ಮುನ್ನವೇ ಕೆಆರ್‍ಎಸ್ ಭರ್ತಿಯಾಗಿರೋದ್ರಿಂದ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ವಾಡಿಕೆಯಂತೆ ಆಗಸ್ಟ್ ನಲ್ಲಿ ಕೆಆರ್‍ಎಸ್ ತುಂಬುವುದು. ಆದರೆ ಈ ಬಾರಿ ಒಂದು ತಿಂಗಳ ಮುಂಚಿತವಾಗಿ ಅಂದರೆ ಜುಲೈ ತಿಂಗಳಲ್ಲಿಯೇ ಅಣೆಕಟ್ಟು ಭರ್ತಿಯಾಗಿದೆ.

  • ಕಾವೇರಿ ನದಿ ಸಮೀಪದಲ್ಲಿರೋ ಜನರೇ ಎಚ್ಚರ ಎಚ್ಚರ!

    ಬೆಂಗಳೂರು: ಡ್ಯಾಂ ಮತ್ತು ನದಿಗಳ ಸನಿಹದಲ್ಲಿರುವ ಜನರೆ ಎಚ್ಚರವಾಗಿರಿ. ನಿರಂತರ ಭಾರೀ ಮಳೆಯಿಂದಾಗಿ ಕಾವೇರಿ ನದಿಯ ಹರಿಯುವ ಡ್ಯಾಂಗಳು ಭರ್ತಿಯಾಗಿವೆ. ಶನಿವಾರ ಅಥವಾ ಭಾನುವಾರ ಜಲಾಶಯಗಳ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ.

    ಈಗಾಗಲೇ ಕೆಆರ್‌ಎಸ್‌, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಯಾವುದೇ ಸಮಯದಲ್ಲಿ ಡ್ಯಾಂ ನಿಂದ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ.

    ನದಿಪಾತ್ರದಲ್ಲಿ ಪ್ರವಾಹ ಉಂಟಾಗಲಿದ್ದು, ವಿಶೇಷವಾಗಿ ರಾಮನಗರ, ಮಂಡ್ಯ, ಹಾಸನ ಹಾಗೂ ಮೈಸೂರಿನ ಕೆಲ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಜಲ ಆಯೋಗದ ಅಧಿಕೃತ ಪ್ರವಾಹ ಮುನ್ಸೂಚನಾ ಟ್ವಿಟ್ಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.