Tag: ಡೌಗ್ಲಾಶ್ ಸ್ಮಿತ್

  • ಒಂದೇ ಗಿಡದಲ್ಲಿ 1,200 ಟೊಮೆಟೋ ಬೆಳೆದು ಗಿನ್ನಿಸ್ ದಾಖಲೆ ಮಾಡಿದ

    ಒಂದೇ ಗಿಡದಲ್ಲಿ 1,200 ಟೊಮೆಟೋ ಬೆಳೆದು ಗಿನ್ನಿಸ್ ದಾಖಲೆ ಮಾಡಿದ

    ವಾಷಿಂಗ್ಟನ್: ಕೆಲವು ಹವ್ಯಾಸಗಳು ನಮ್ಮನ್ನು ಹಾಳು ಮಾಡುತ್ತವೆ ಕೆಲವು ಜೀವನ ಕಟ್ಟಿಕೊಡುತ್ತವೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಇಲ್ಲೊಬ್ಬ ವ್ಯಕ್ತಿ ಹವ್ಯಾಸ ಮತ್ತು ಸಂತೋಷಕ್ಕಾಗಿ ಕೃಷಿಯನ್ನು ಮಾಡಿ ಗಿನ್ನಿಸ್ ದಾಖಲೆಗೆ (World Record) ಪಾತ್ರನಾಗಿದ್ದಾನೆ.

    ಒಂದೇ ಗಿಡದಲ್ಲಿ 1,200 ಟೊಮೆಟೋ ಹಣ್ಣುಗಳನ್ನು ಬೆಳೆಸಿ ವ್ಯಕ್ತಿಯೊಬ್ಬ ಗಿನ್ನಿಸ್ ದಾಖಲೆ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ 2 ವರ್ಷಗಳ ಬಳಿಕ ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್

    ಯುಕೆಯ ನಿವಾಸಿ ಡೌಗ್ಲಾಶ್ ಸ್ಮಿತ್ ಮನೆಯ ಟೆರೇಸ್ ಮೇಲೆ ಟೊಮೆಟೋ ಗಿಡವನ್ನು ನೆಟ್ಟು ಒಂದೆ ಗಿಡದಿಂದ 2021ರಲ್ಲಿ 839 ಟೊಮೆಟೋ ಹಣ್ಣುಗಳನ್ನು ಬೆಳೆಸಿ ದಾಖಲೆ ನಿರ್ಮಿಸಿದ್ದರು. ಇದೀಗ ಅದೇ ವ್ಯಕ್ತಿ ಒಂದೇ ಕಾಂಡದ ಗಿಡದಿಂದ 1,269 ಟೊಮೆಟೋ ಹಣ್ಣುಗಳನ್ನು ಬೆಳೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಸ್ಮಿತ್ ಈ ಹಿಂದೆ ಮನೆಯ ಹಿತ್ತಲಿನಲ್ಲಿ 21 ಅಡಿ ಎತ್ತರದ ಸೂರ್ಯಕಾಂತಿ ಗಿಡವನ್ನು ಬೆಳೆದು ದಾಖಲೆ ನಿರ್ಮಿಸಿದ್ದರು. ಇದೀಗ ಒಂದೇ ಗಿಡದಲ್ಲಿ 1269 ಟೊಮೆಟೋ ಹಣ್ಣುಗಳನ್ನು ಬೆಳೆದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

    2021ರ ಸೆಪ್ಟೆಂಬರ್‌ನಲ್ಲಿ  ಟೊಮೆಟೋವನ್ನು ನೆಟ್ಟು ಬೆಳೆಸಲು ಆರಂಭಿಸಿದ್ದರು. ಇದೀಗ 1,200ಕ್ಕೂ ಹೆಚ್ಚು ಟೊಮೆಟೊ ಹಣ್ಣುಗಳನ್ನು ಬೆಳೆಸಿದ್ದಾರೆ. 2022 ಮಾರ್ಚ್ 9 ರಂದು ಗಿನ್ನಿಸ್ ವಲ್ಡ್ ರೆಕಾರ್ಡ್ ಅಧಿಕೃತವಾಗಿ ಹೊಸ ದಾಖಲೆ ನಿರ್ಮಿಸಿರುವುದರ ಕುರಿತು ಖಚಿತಪಡಿಸಿದೆ. ಸ್ಮಿತ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.