Tag: ಡೋಲೋ 650

  • ಡೋಲೋ ಮಾರಾಟಕ್ಕಾಗಿ ವೈದ್ಯರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆ – IT ತನಿಖೆಯಿಂದ ಅಕ್ರಮ ಬಯಲು

    ಡೋಲೋ ಮಾರಾಟಕ್ಕಾಗಿ ವೈದ್ಯರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆ – IT ತನಿಖೆಯಿಂದ ಅಕ್ರಮ ಬಯಲು

    ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ನಡೆದ ವಂಚನೆಯ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಡೋಲೋ-650 ಮಾತ್ರೆಯ ಪ್ರಚಾರಕ್ಕಾಗಿ 1 ಸಾವಿರ ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ನೀಡಲಾಗಿದೆ ಎಂಬ ಆತಂಕಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.

    ಕೋವಿಡ್ ಸಾಂಕ್ರಾಮಿಕದ ವೇಳೆ ದೇಶಾದ್ಯಂತ ಬಹುತೇಕ ಸೋಂಕಿತರಿಗೆ ವೈದ್ಯರು ಮತ್ತು ಮೆಡಿಕಲ್ ಶಾಪ್‌ಗಳಲ್ಲಿ ಬೆಂಗಳೂರು ಮೂಲಕದ ಮೈಕ್ರೋಲ್ಯಾಬ್ ಕಂಪೆನಿ ಉತ್ಪಾದಿಸುವ ಡೋಲೋ-650 ಮಾತ್ರೆಗಳನ್ನು ಪ್ರಮುಖವಾಗಿ ಶಿಫಾರಸು ಮಾಡಲಾಗಿತ್ತು. ಆದರೆ ಇದೇ ಕಂಪೆನಿ ತನ್ನ ಉತ್ಪನ್ನವನ್ನೇ ಹೆಚ್ಚಾಗಿ ಮಾರಾಟ ಮಾಡಲು ವೈದ್ಯರು ಹಾಗೂ ವೃದ್ಯಕೀಯ ಅಧಿಕಾರಿ ವರ್ಗದವರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿತ್ತು ಎಂಬ ಸ್ಫೋಟಕ ವಿಚಾರ ತನಿಖೆ ವೇಳೆ ಕಂಡುಬಂದಿದೆ.

    ಬೆಂಗಳೂರು ಸೇರಿದಂತೆ 50 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳನ್ನ ಪ್ರವಾಸಕ್ಕೆ ಕಳಿಸಿರುವುದು, ಹಣಕಾಸು ನೀಡಲು 1 ಸಾವಿರ ಕೋಟಿ ಉಡುಗೊರೆಗಳನ್ನು ನೀಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಪ್ರತ್ಯೇಕತಾವಾದಿ ಹೇಳಿಕೆ ನೀಡಿದ್ದ ಕುಮಾರ್ ವಿಶ್ವಾಸ್‍ಗೆ ವೈ ಪ್ಲಸ್ ಭದ್ರತೆ

    ಪತ್ರಿಕಾ ಹೇಳಿಕೆಯಲ್ಲಿ 1,000 ಕೋಟಿ ಹಣ ಖರ್ಚು ಮಾಡಿರೋದನ್ನ ಉಲ್ಲೇಖಿಸಲಾಗಿದೆ. ಇದರೊಂದಿಗೆ 300 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆಮಾಡಿದ್ದು, 1.20 ನಗದು ಹಣ ಹಾಗೂ 1.40 ಕೋಟಿ ವಜ್ರದ ಆಭರಣಗಳನ್ನು ವಶಕ್ಕೆ ಪಡೆದಿರುವಾಗಿ ಉಲ್ಲೇಖಿಸಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೈಕ್ರೋಲ್ಯಾಬ್ಸ್ಗೆ ಸೇರಿದ 9 ರಾಜ್ಯಗಳ 36 ಸ್ಥಳಗಳ ಮೇಲೆ ಜು.6ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿತ್ತು. ಈ ವೇಳೆ 1.20 ಕೋಟಿ ರೂ. ಲೆಕ್ಕ ತೋರಿಸದ ನಗದು ಹಣ ಹಾಗೂ 1.40 ಕೋಟಿ ವಜ್ರಾಭರಣ ಪತ್ತೆಯಾಗಿತ್ತು. ಸಾಕಷ್ಟು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಳ್ಳಲಾದ ದಾಖಲೆ ಪರಿಶೀಲನೆ ಮಾರಾಟದ ವೇಳೆ `ಮಾರಾಟ ಮತ್ತು ಪ್ರಚಾರ’ ಎಂಬ ಶೀರ್ಷಿಕೆ ಅಡಿಯಲ್ಲಿ ವೈದ್ಯರು ಮತ್ತು ವೃತ್ತಿಪರರಿಗೆ ಉಚಿತ ಉಡುಗೊರೆ, ಪ್ರಯಾಣವೆಚ್ಚ ಹಾಗೂ ಪ್ರಚಾರಕ್ಕಾಗಿ ಸಭೆ ಆಯೋಜಿಸುವುದಕ್ಕಾಗಿ 1 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದು ಬೆಳಿಕೆಗೆ ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾಹಿತಿ ನೀಡಿದೆ.

    ವರ್ಷದಲ್ಲಿ 400 ಕೋಟಿ ವಹಿವಾಟು: ಕೋವಿಡ್ ಸಮಯದಲ್ಲಿ ಡೋಲೋ-650 ಮಾತ್ರೆ ಸುಮಾರು 350 ಕೋಟಿ ರೂ.ಗಳಷ್ಟು ವಹಿವಾಟು ನಡೆದಿತ್ತು. ಒಂದೇ ವರ್ಷದಲ್ಲಿ 400 ಕೋಟಿ ಆದಾಯ ಸಂಗ್ರಹಿಸಿರುವುದಾಗಿ ಇತ್ತೀಚೆಗೆ ವ್ಯವಸ್ಥಾಪಕ ದಿಲೀಪ್ ಸುರಾನಾ ಹೇಳಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಡೋಲಾ ಟ್ಯಾಬ್ಲೆಟ್‍ಗಳು ಮಾರಾಟ

    ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಡೋಲಾ ಟ್ಯಾಬ್ಲೆಟ್‍ಗಳು ಮಾರಾಟ

    ನವದೆಹಲಿ: ಕೊರೊನಾ ಸೋಂಕಿನಿಂದ ಭಯಗೊಂಡಿರುವ ಜನ ಯಾವುದೇ ಜ್ವರ ಬಂದ ಕೂಡಲೇ ಡೋಲಾ 650 ಮಾತ್ರೆಯನ್ನು ಪಡೆಯುತ್ತಿದ್ದಾರೆ. ಪರಿಣಾಮ ದೇಶದಲ್ಲಿ ಕೊರೊನಾ ಕಾಲದಲ್ಲಿ ಡೋಲಾ 650 ಮಾತ್ರೆಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ.

    ಎರಡೇ ವರ್ಷದಲ್ಲಿ ಭಾರತದಲ್ಲಿ 358 ಕೋಟಿ ಡೋಲಾ 650 ಮಾತ್ರೆ ಮಾರಾಟವಾಗಿದೆ. 2020ರ ಬಳಿಕ ಭಾರತದಲ್ಲಿ ಏಕಾಏಕಿ ಜ್ವರ ವಿರುದ್ಧ ಔಷಧವಾದ ಡೋಲಾ 650 ಮಾತ್ರೆಗಳು ಬರೋಬ್ಬರಿ 350 ಕೋಟಿಗೂ ಹೆಚ್ಚು ಮಾರಾಟ ಆಗಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಅಂಡಾಕಾರದ ಆಕಾರದ ಬಿಳಿ ಮಾತ್ರೆಯು ಮಾರಾಟವು ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಇದನ್ನೂ ಓದಿ:   ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

    ಸೆಪ್ಟೆಂಬರ್ 2020ರ ಸುಮಾರಿಗೆ ಕೋವಿಡ್ ಮೊದಲ ಅಲೆಯು ಭಾರತಕ್ಕೆ ಬಂದಿತ್ತು. ಆದರೆ ಹೆಚ್ಚಿನ ಸಾವುಗಳನ್ನು ಕಂಡ ಎರಡನೇ ಅಲೆಯು ಮೇ 2021 ರಲ್ಲಿ ಭಾರತವನ್ನು ಅಪ್ಪಳಿಸಿತು. ಭಾರತವು 3.5 ಕೋಟಿಗೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ಡೋಲೋ 2021ರಲ್ಲಿ 307 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಮೂಲಕ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ನೋವು ನಿವಾರಕ ಟ್ಯಾಬ್ಲೆಟ್ ಆಗಿದೆ.  ಇದನ್ನೂ ಓದಿ:  ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಔಷಧದ ವಾರ್ಷಿಕ ಮಾರಾಟವು 9.4 ಕೋಟಿ ಸ್ಟ್ರಿಪ್‍ಗಳಿಗೆ ಏರಿಕೆಯಾಯಿತು. ಒಂದು ಸ್ಟ್ರಿಪ್‍ನಲ್ಲಿ 15 ಮಾತ್ರೆಗಳು ಇರುತ್ತವೆ. 141 ಕೋಟಿ ಮಾತ್ರೆಗಳು ಮಾರಾಟವಾಗಿವೆ. 2020ರಲ್ಲಿ 2019 ಕ್ಕಿಂತ ಎರಡು ಪಟ್ಟು ಹೆಚ್ಚಿನ ಡೋಲಾ 650 ಮಾತ್ರೆಗಳು ಮಾರಾಟವಾಗಿವೆ. ನವೆಂಬರ್ 2021ರ ವೇಳೆಗೆ 14.5 ಸ್ಟ್ರಿಪ್ಸ್‍ಗಳು ಮಾರಾಟವಾಗಿವೆ. 217 ಕೋಟಿ ಟ್ಯಾಬ್ಲೆಟ್‍ಗಳು ಮಾರಾಟವಾದವು. 2020 ಹಾಗೂ 2021ರಲ್ಲಿ ಡೋಲಾ 650ಮಾತ್ರೆಗಳು ಬರೋಬ್ಪರಿ 358 ಕೋಟಿ ಟ್ಯಾಬ್ಲೆಟ್‍ಗಳು ಮಾರಾಟವಾಗಿತ್ತು.

    ಜನವರಿ 2020 ರಲ್ಲಿ ಕೋವಿಡ್ -19 ಏಕಾಏಕಿ ಪ್ರಾರಂಭವಾದಾಗಿನಿಂದ, ಡೋಲೋ 650 ಸುಮಾರು 2 ಲಕ್ಷ ಹುಡುಕಾಟಗಳೊಂದಿಗೆ ಗೂಗಲ್‍ನಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್ ಆಗಿದೆ ಮತ್ತು ಕ್ಯಾಲ್ಪೋಲ್ 650 ಅನ್ನು ಸುಮಾರು 40,000 ಬಾರಿ ಸರ್ಚ್ ಮಾಡಲಾಗಿದೆ. ಎರಡನೇ ಅಲೆಯ ಸಮಯದಲ್ಲಿ ಕೀವರ್ಡ್‍ಗಾಗಿ ಹುಡುಕಾಟದ ಪ್ರಮಾಣವು ಉತ್ತುಂಗಕ್ಕೇರಿತ್ತು.