Tag: ಡೋಣಿ ನದಿ

  • ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

    ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

    ವಿಜಯಪುರ: ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಡೋಣಿ ನದಿ (Doni River) ಮೈದುಂಬಿ ಹರಿಯುತ್ತಿದ್ದು, ಸಾತಿಹಾಳ ಸೇತುವೆ (Satihal Bridge) ಸಂಪೂರ್ಣವಾಗಿ ಜಲಾವೃತಗೊಂಡಿದೆ.ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಮಂಡನೆ – ಆ.16ಕ್ಕೆ ವಿಶೇಷ ಸಂಪುಟ ಸಭೆ

    ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಇದೀಗ ಕಡಿಮೆಯಾಗಿದೆ. ಮಳೆ ನಿಂತರೂ ಕೂಡ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಹರಿಯುವ ಡೋಣಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸಾತಿಹಾಳ ಸೇತುವೆ ಜಲಾವೃತಗೊಂಡಿದೆ. ಹೀಗಾಗಿ ಬಸವನಬಾಗೇವಾಡಿ – ಸಾತಿಹಾಳ – ದೇವರಹಿಪ್ಪರಗಿ ಮಾರ್ಗದ ಸಂಪರ್ಕ ಕಡಿತಗೊಂಡಿದೆ.

    ಸೇತುವೆ ಜಲಾವೃತಗೊಂಡಿದ್ದರೂ ಜನರು ಅಪಾಯವನ್ನು ಲೆಕ್ಕಿಸದೇ ಸೇತುವೆ ಮೇಲೆ ಓಡಾಟ ನಡೆಸಿದ್ದಾರೆ. ಸೇತುವೆ ಮೇಲೆ ಹೊರಟಾಗ ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.ಇದನ್ನೂ ಓದಿ:ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ

  • ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ

    ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ

    ವಿಜಯಪುರ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ನೇಗಿನಾಳ ಗ್ರಾಮದಲ್ಲಿ ನಡೆದಿದೆ.

    ಮಂಜುನಾಥ್ ಸಿದ್ದನಗೌಡ ಪಾಟೀಲ್(25) ಮೃತ ದುರ್ದೈವಿ. ಬಸವನ ಬಾಗೇವಾಡಿ ತಾಲೂಕಿನ ನೇಗಿನಾಳ ಮುಳ್ಳಾಳ ಹಳ್ಳದ ಬಳಿ ಕಳೆದ ಶುಕ್ರವಾರ ರಾತ್ರಿ ಮಂಜುನಾಥ್ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನಿಗಾಗಿ ಹುಡುಕಾಟ ಮಾಡುತ್ತಿದ್ದು, ಇಂದು ಡೋಣಿ ನದಿಯಲ್ಲಿ ಶವ ಪತ್ತೆಯಾಗಿದೆ.ಇದನ್ನೂ ಓದಿ:ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ: ಹಾಲಪ್ಪ ಆಚಾರ್

    ನೇಗಿನಾಳ ಮುಳ್ಳಾಳ ಹಳ್ಳದಿಂದ 100 ಮೀಟರ್ ದೂರದಲ್ಲಿ ಡೋಣಿ ನದಿಯಿದ್ದು, ಮಂಜುನಾಥ್ ಶವ ಪತ್ತೆಯಾಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಶವ ಪತ್ತೆ ಮಾಡಲಾಗಿದೆ. ಮನಗೂಳಿ ಪೆÇಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

  • ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರಿಗೆ ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು

    ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರಿಗೆ ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು

    ವಿಜಯಪುರ: ಡೋಣಿ ನದಿ ದಾಟುವಾಗ ಡಬಲ್ ಟ್ರಾಲಿ ಸಮೇತ ನದಿಯಲ್ಲಿ ಕೊಚ್ಚಿಹೋದ ಟ್ರ್ಯಾಕ್ಟರ್ ಇಂಜಿನ್ ಅನ್ನು ರೈತರು ಹಗ್ಗ ಕಟ್ಟಿ ಹೊರತೆಗೆದಿದ್ದಾರೆ. ಈ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದಿದೆ.

    ತಾಳಿಕೋಟೆಯ ರಾಜು ಬೀಳಗಿ ಅವರು ಶುಕ್ರವಾರ ಟ್ರ್ಯಾಕ್ಟರ್ ನಲ್ಲಿ ಕಡಕೋಳದಿಂದ ಕೊಂಡಗೂಳು ಗ್ರಾಮಕ್ಕೆ ಹೊರಟಿದ್ದರು. ಈ ವೇಳೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡೋಣಿ ನದಿ ದಾಟಲು ಸೇತುವೆ ಇಲ್ಲದ ಕಾರಣ ರಾಜು ಹಾಗೂ ಅವರ ಜೊತೆ ಮನ್ಸೂರ್ ಬೀಳಗಿ ಕಚ್ಚಾ ರಸ್ತೆಯಲ್ಲಿಯೇ ಟ್ರ್ಯಾಕ್ಟರ್ ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ನದಿಯಲ್ಲಿ ಪ್ರವಾಹ ಉಂಟಾಗಿ ಟ್ರ್ಯಾಕ್ಟರ್ ಜೊತೆಯಲ್ಲಿಯೇ ರಾಜೂ ಹಾಗೂ ಮನ್ಸೂರ್ ನೀರಿಗೆ ಕೊಚ್ಚಿಹೋಗಿದ್ದರು. ಆದರೆ ಹೇಗೋ ಇಬ್ಬರೂ ಈಜಿಕೊಂಡು ದಡ ಸೇರಿದರು. ಆದರೆ ಟ್ರ್ಯಾಕ್ಟರ್ ಮಾತ್ರ ಪ್ರವಾಹದ ಮಧ್ಯೆಯೇ ಸಿಲುಕಿಕೊಂಡಿತ್ತು. ಇದನ್ನೂ ಓದಿ:ಬೈಕ್ ಓಡಿಸ್ತಿದ್ದಾಗ್ಲೇ 40 ಅಡಿ ಕುಸಿದ ಸೇತುವೆ

    ಇದನ್ನು ಕಂಡ ಸ್ಥಳೀಯ ರೈತರು ರಾಜೂ ಹಾಗೂ ಮನ್ಸೂರ್ ಅವರ ಸಹಾಯಕ್ಕೆ ಬಂದಿದ್ದಾರೆ. ಜೆಸಿಬಿ ತರಿಸಿ ಅದಕ್ಕೆ ಹಗ್ಗ ಕಟ್ಟಿ ಆ ಹಗ್ಗದ ಮೂಲಕ ಪ್ರವಾಹದಲ್ಲಿ ಸಿಲುಕಿದ್ದ ಟ್ರ್ಯಾಕ್ಟರ್ ಅನ್ನು ಹರಸಾಹಸ ಪಟ್ಟು ಎಳೆದು ದಡಕ್ಕೆ ತಂದಿದ್ದಾರೆ. ಈ ಕಾರ್ಯಾಚರಣೆ ನಡೆಸಲು ಕಡಕೋಳ ಗ್ರಾಮಸ್ಥರು ಸುಮಾರು ಐದು ಗಂಟೆಗಳವರೆಗೆ ಶ್ರಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಡೋಣಿ ನದಿಯನ್ನು 200 ಮೀಟರ್ ದಾಟಿದರೆ ಒಂದು ಕಿ.ಮಿ ಅಂತರದಲ್ಲಿ ಜಮೀನುಗಳಿವೆ. ಹೀಗಾಗಿ ರೈತರು ನದಿ ದಾಟಿಕೊಂಡು ಜಮೀನುಗಳಿಗೆ ತೆರಳುತ್ತಾರೆ. ಇಲ್ಲವಾದಲ್ಲಿ ರೈತರು ಜಮೀನಿಗೆ ಹೋಗಲು ಸುಮಾರು 30 ಕಿ.ಮಿ ಸುತ್ತುಹಾಕಬೇಕಾಗುತ್ತದೆ. ಹೀಗಾಗಿ ಸುತ್ತುವರಿದು ಯಾಕೇ ಹೋಗಬೇಕು, ಹತ್ತಿರದ ಮಾರ್ಗದಲ್ಲೇ ಹೋಗೋಣ ಎಂದು ತುಂಬಿ ಹರಿಯುವ ನದಿಯಲ್ಲೇ ಟ್ರ್ಯಾಕ್ಟರ್ ದಾಟಿಸಲು ಹೋಗಿ ರಾಜೂ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಸೇತುವೆ ಇಲ್ಲದ ಕಾರಣ ಇವರಂತೆ ಇತರೆ ರೈತರು ಸಹ ನದಿ ದಾಟಿಯೇ ಜಮೀನುಗಳಿಗೆ ಹೋಗುತ್ತಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಡೋಣಿ ನದಿ ದಾಟಲು ರೈತರು ಪರದಾಟ ನಡೆಸುತ್ತಾರೆ.

    ಮುಂದೆ ಈ ರೀತಿ ಅನಾಹುತಗಳು ನಡೆಯಬಾರದು, ಹೀಗಾಗಿ ಡೋಣಿ ನದಿಗೆ 200 ಮೀಟರ್ ಉದ್ದದ ಸೇತುವೆ ನಿರ್ಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

  • ಸತ್ತೇ ಹೋಗಿದ್ದ ಅಂದವನು ಬದುಕಿ ಬಂದ-ವಿಜಯಪುರದಲ್ಲಿ ಅಚ್ಚರಿ ಘಟನೆ

    ಸತ್ತೇ ಹೋಗಿದ್ದ ಅಂದವನು ಬದುಕಿ ಬಂದ-ವಿಜಯಪುರದಲ್ಲಿ ಅಚ್ಚರಿ ಘಟನೆ

    ವಿಜಯಪುರ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಆ ವ್ಯಕ್ತಿ ಅದೃಷ್ಟಾವಷತ್ ಬದುಕಿ ಬಂದಿದ್ದಾರೆ.

    ತಾಳಿಕೋಟಿ ಪಟ್ಟಣದ ನಿವಾಸಿಗಳಾದ ಶಿವು ಹೊಸಳ್ಳಿ ಹಾಗೂ ಪ್ರಕಾಶ್ ಎಂಬವರು ಬೈಕ್ ಸಮೇತ್ ಡೋಣಿ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಇಂದು ಅಗ್ನಿಶಾಮಕದಳದ ಸಿಬ್ಬಂದಿ ಶಿವು ಎಂಬಾತರ ಮೃತದೇಹವನ್ನು ಪತ್ತೆ ಮಾಡಿದ್ದಾರೆ.

    ಬೈಕ್ ನೀರಿನ ರಭಸಕ್ಕೆ ಕೊಚ್ಚಿ ಹೋಯಿತು. ಇಬ್ಬರೂ ಸಹ ನೀರಿನಲ್ಲಿ ಬಿದ್ದ ನಂತರ ನಾನು ಒಂದು ಸಾರಿ ಮುಳುಗಿ ಮೇಲ್ಗಡೆ ನೋಡಿದೆ. ಆದರೆ ಶಿವು ಮಾತ್ರ ಎಲ್ಲಿಯೂ ಕಾಣಲಿಲ್ಲ. ನಾನು ಹಾಗೆಯೇ ನಾನು ಈಜುತ್ತಾ ಮುಂದೆ ಸಾಗಿ ಮುಳ್ಳಿನ ಕಂಟಿಯ ಸಹಾಯದಿಂದ ದಡಕ್ಕೆ ಬಂದೆನು. ನೇರವಾಗಿ ಮನಗೆ ಹೋದೆ ಅಷ್ಟರಲ್ಲೇ ಎಲ್ಲರೂ ಅಳಲಾರಂಭಿಸಿದ್ದರು. ನನ್ನನ್ನು ನೋಡಿದ ಕುಟುಂಬಸ್ಥರು ಖುಷಿಪಟ್ಟರು ಎಂದು ಪ್ರಕಾಶ್ ಹೇಳಿದ್ದಾರೆ.

    ಈ ಸಂಬಂಧ ತಾಳಿಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ತುಂಬಿ ಹರಿಯುತಿದೆ ಡೋಣಿ ನದಿ: ಸೇತುವೆಗಳು ಜಲಾವೃತ- 5 ಗ್ರಾಮಗಳ ಸಂಪರ್ಕ ಕಡಿತ

    ತುಂಬಿ ಹರಿಯುತಿದೆ ಡೋಣಿ ನದಿ: ಸೇತುವೆಗಳು ಜಲಾವೃತ- 5 ಗ್ರಾಮಗಳ ಸಂಪರ್ಕ ಕಡಿತ

    ವಿಜಯಪುರ: ಬುಧವಾರ ರಾತ್ರಿ ಸುರಿದ ಮಳೆಗೆ ಡೋಣಿ ನದಿ ತುಂಬಿ ಹರಿಯುತ್ತಿದ್ದು, ರಸ್ತೆಗಳು ಹಾಗೂ ಸೇತುವೆಗಳು ಜಲಾವೃತಗೊಂಡಿವೆ.

    ಸೇತುವೆಗಳು ಜಲವೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಪಟ್ಟಣದಿಂದ ಒಟ್ಟು ಐದು ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ಜಿಲ್ಲೆಯ ಹಡಗಿನಾಳ, ಶಿವಪೂರ, ಕಲ್ಕದೇವನಹಳ್ಳಿ ಸೇರಿದಂತೆ ಐದು ಗ್ರಾಮಗಳ ಸಂಪರ್ಕ ಕಳೆದುಕೊಂಡಿವೆ.

    ಡೋಣಿ ನದಿಯ ದಡದಲ್ಲಿರುವ ಗ್ರಾಮಗಳ ರಸ್ತೆಗಳ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಇನ್ನೂ ಮಳೆ ಹೆಚ್ಚಾದರೆ ನದಿ ತೀರದ ಗ್ರಾಮಗಳು ಜಲಾವೃತಗಳ್ಳಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=M6-cTiZr02w