ಗದಗ: ನಗರದಲ್ಲಿ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಕಾಮುಕ ಡೋಂಗಿ ಬಾಬಾ ಅಲಿಯಾಸ್ ಆಸೀಫ್ ಜಾಗಿರದಾರ್ ಎಂಬವನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮೂಲತ: ವಿಜಯಪುರ ಜಿಲ್ಲೆಯವನಾಗಿದ್ದ ಡೋಂಗಿ ಬಾಬಾ ಆಸೀಫ್, ಎಸ್ ಎಂ.ಕೃಷ್ಣಾ ನಗರದಲ್ಲಿ ತನ್ನ ಪತ್ನಿ ಮನೆಯಲ್ಲಿಯೇ ಬಹಳ ದಿನಗಳಿಂದ ಠಿಕಾಣಿ ಹೂಡಿದ್ದನು. ಕಷ್ಟಪಟ್ಟು ದುಡಿಯದೇ ಆರಾಮಾಗಿ ಹಣ ಸಂಪಾದನೆ ಮಾಡಬೇಕೆಂದು ಕೊಂಡಿದ್ದ ಆಸೀಫ್, ದೇವರ ಹೆಸರಲ್ಲಿ ಮಾಟ, ಮಂತ್ರ, ಅಂತ್ರ, ತಂತ್ರಗಳನ್ನು ಮಾಡಿಕೊಡುತ್ತಿದ್ದನು. ಇದನ್ನೂ ಓದಿ: ಮಂಡ್ಯ ಕದನಕ್ಕೆ ಹೆಚ್‍ಡಿಕೆ ವಿರಾಮ – ದಳಪತಿ ಸೈಲೆಂಟ್ ಆಗಿದ್ದರ ಹಿಂದಿದ್ಯಾ ಲೆಕ್ಕಾಚಾರ..?
ಕುದಿಯೋ ಎಣ್ಣೆ ಹಾಗೂ ಸುಡುವ ತುಪ್ಪದಲ್ಲಿ ಕೈ ಹಾಕುವುದು, ಅದರಿಂದ ಬೊಂಡಾ ಬಜ್ಜಿ ತೆಗೆಯುವುದು, ಹೀಗೆ ದೇವರ ಪವಾಡವೆಂಬಂತೆ ಜನರಿಗೆ ಮಂಕುಬೂದಿ ಎರಚುತ್ತಿದ್ದನು. ಮೈಮೇಲೆ ದೇವರು ಬಂದಂತೆ ನಟಿಸಿ ಜನರಲ್ಲಿ ನಂಬಿಕೆ ಹುಟ್ಟಿಸಿ ಮನಬಂದಂತೆ ಹಣ ಲೂಟಿ ಮಾಡುತ್ತಿದ್ದ. ಹಿಂದೂ ದೇವರುಗಳನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದನು. ಅಲ್ಲದೇ ಸಮಸ್ಯೆ ಹೊತ್ತು ಬಂದ ಸುಂದರ ಮಹಿಳೆಯರನ್ನು ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಈ ಡೋಂಗಿ ಬಾಬಾನ ಮೋಸದ ಪವಾಡ ಬಯಲಾಗುತ್ತಿದ್ದಂತೆ, ಆಕ್ರೋಶಗೊಂಡ ಜನರು ಆತನಿಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟು ಸ್ಥಲೀಯ ಪೊಲಿಸರಿಗೆ ಒಪ್ಪಿಸಿದ್ದಾರೆ. ಡೋಂಗಿ ಬಾಬಾನಿಗೆ ಮೋಸ ಹೋದ ಜನರು ಮುಖಮೂತಿ ನೋಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹೊಡೆತಕ್ಕೆ ಡೋಂಗಿ ಬಾಬಾ ಆಸೀಫ್, ನಾನು ಮಾಡಿದ್ದು ತಪ್ಪಾಗಿದೆ, ನಾನು ಮಾಡಿದ್ದೆಲ್ಲ ಮೋಸ, ತಪ್ಪಾಗಿದೆ ಕ್ಷಮಿಸಿ, ನನ್ನನ್ನು ಬಿಟ್ಟುಬಿಡಿ ಎಂದು ಅದೆಷ್ಟೇ ಕೈ ಕಾಲು ಹಿಡಿದು ಬೇಡಿಕೊಂಡರೂ, ಜನ ಮಾತ್ರ ಡೋಂಗಿಯ ಚಳಿ ಬಿಡಿಸಿದ್ದಾರೆ. ಓರ್ವ ಮಹಿಳೆಯಂತೂ ಬಾಬಾನಿಗೆ ಮನಸೋ ಇಚ್ಚೇ ಗೂಸಾ ಕೊಟ್ಟಿದ್ದಾಳೆ. ಇದೀಗ ಆರೋಪಿಯನ್ನು ಗದಗ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಮಾಡಿ ಅಸಲಿ ಮುಖ ಬಯಲು ಮಾಡಬೇಕಾಗಿದೆ. ಮಾಟ, ಮಂತ್ರ, ತಂತ್ರ ಎಂದು ಮೋಸ ಮಾಡುವವರು ಇನ್ನು ಮುಂದಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.

ಜನ ಎಲ್ಲಿವರೆಗೂ ಮೋಸ ಹೋಗುತ್ತಾರೋ, ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುವುದು ಸತ್ಯ ಅನ್ನುವುದಕ್ಕೆ ಮುದ್ರಣಾ ನಗರಿಯಲ್ಲಿ ನಡೆದ ಈ ಘಟನೆ ಒಂದು ಸಾಕ್ಷಿಯಾಗಿದೆ. ಇದನ್ನೂ ಓದಿ: ಹಳೇ ವೈಷಮ್ಯ, ಬಿಜೆಪಿ ನಾಯಕನ ಸಂಬಂಧಿ ಹತ್ಯೆ ಕೇಸ್ – ಆರೋಪಿಗಳು ಅಂದರ್






















