Tag: ಡೈಸಿ ಬೋಪಣ್ಣ

  • ಥೈಲ್ಯಾಂಡ್ ನಿಂದ ಗ್ಲಾಮರಸ್ ಫೋಟೋ ಹಂಚಿಕೊಂಡ ಡೈಸಿ ಬೋಪಣ್ಣ

    ಥೈಲ್ಯಾಂಡ್ ನಿಂದ ಗ್ಲಾಮರಸ್ ಫೋಟೋ ಹಂಚಿಕೊಂಡ ಡೈಸಿ ಬೋಪಣ್ಣ

    ಗಾಳಿಪಟ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟಿ ಡೈಸಿ ಬೋಪಣ್ಣ (Daisy Bopanna), ಸದ್ಯ ಸಿನಿಮಾ ರಂಗದಿಂದ ದೂರವಿದ್ದಾರೆ. ಹಾಗಂತ ಅವರು ಸೋಷಿಯಲ್ ಮೀಡಿಯಾದಿಂದ ದೂರವಿಲ್ಲ. ಹಾಗಾಗಿ ಗ್ಲಾಮರಸ್ ಫೋಟೋಗಳನ್ನು ಹಾಕುತ್ತಾ, ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

    ಸದ್ಯ ಡೈಸಿ ಥೈಲ್ಯಾಂಡ್ ನಲ್ಲಿದ್ದಾರೆ. ಥೈಲ್ಯಾಂಡ್ (Thailand) ನ ಕಾಡಿನೊಳಗಿರುವ ನೀರಿನ ತೊರೆಯಲ್ಲಿ ಮಿಂದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆ ಫೋಟೋಗಳನ್ನೇ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತುಂಡುಡುಗೆಯಲ್ಲಿ ಡೈಸಿ ಸಖತ್ ಹಾಟ್ ಹಾಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ ಅಭಿಮಾನಿಗಳು. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿರುವ ಡೈಸಿ ಬೋಪಣ್ಣ 2012ರಲ್ಲಿ ತೆರೆಕಂಡ ಕ್ರೇಜಿ ಲೋಕ ಸಿನಿಮಾದ ನಂತರ ಚಿತ್ರರಂಗದಿಂದ ಕಾಣೆಯಾದರು. ನಂತರ ಅವರು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ. ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಲೇ ಅಮಿತ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟು ಶಾಶ್ವತವಾಗಿ ಸಿನಿಮಾ ರಂಗ ತೊರೆದರು.

    ಸಿನಿಮಾ ರಂಗದಿಂದ ಈ ಬ್ಯೂಟಿ ದೂರವಿದ್ದರೂ  ಆಗಾಗ್ಗೆ ಹೊಸ ಹೊಸ ಫೋಟೋಶೂಟ್ ( Photo) ಮೂಲಕ ಸುದ್ದಿಯಲ್ಲಿರುತ್ತಾರೆ. ಮೊನ್ನೆಯಷ್ಟೇ ಟಾಪ್ ತೆಗೆದು ಗುಲಾಬಿ ಹಿಡಿದು ಕ್ಯಾಮೆರಾ ಮುಂದೆ ಬಂದಿದ್ದರು ಡೈಸಿ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.

    ರಾಮ ಶಾಮ ಭಾಮ, ಕ್ರೇಜಿ ಲೋಕ, ಐಶ್ವರ್ಯ, ತವರಿನ ಸಿರಿ, ಗಾಳಿಪಟ ಸೇರಿದಂತೆ ಹಲವು ಸಿನಿಮಾ ನಟಿಸಿದ ಕೊಡಗಿನ ಕುವರಿ ಡೈಸಿ ಬೋಪಣ್ಣ ಚಿತ್ರರಂಗದಿಂದ ದೂರ ಉಳಿಸಿದ್ದಾರೆ. ಉದ್ಯಮಿ ಅಮಿತ್ ಜಾಜು  ಜೊತೆ 2011ರಲ್ಲಿ ಮದುವೆಯಾದರು. ಮದುವೆ, ಸಂಸಾರ ಎಂದು ಬ್ಯುಸಿ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿದ್ದಾರೆ.

     

    ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ಡೈಸಿ ಬೋಪಣ್ಣ ಅವರಿಗೆ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗುವಂತೆ ಫ್ಯಾನ್ಸ್ ಮನವಿ ಮಾಡ್ತಿದ್ದಾರೆ. ಹೊಸ ಬಗೆಯ ಫ್ಯಾಷನ್ ಲುಕ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುವ ನಟಿ, ಸಿನಿಮಾಗಳಲ್ಲಿ ಮತ್ತೆ ನಟಿಸುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

  • ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಗಾಳಿಪಟ’ ನಟಿ

    ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಗಾಳಿಪಟ’ ನಟಿ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಡೈಸಿ ಬೋಪಣ್ಣ (Daisy Bopanna) ಅವರು ಈಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಟಾಪ್ ತೆಗೆದು ಗುಲಾಬಿ ಹಿಡಿದು ಕ್ಯಾಮೆರಾ ಮುಂದೆ ಗಾಳಿಪಟ (Galipata) ನಟಿ ಬಂದಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Daisy Bopanna (@daisybopanna)

    ರಾಮ ಶಾಮ ಭಾಮ, ಕ್ರೇಜಿ ಲೋಕ, ಐಶ್ವರ್ಯ, ತವರಿನ ಸಿರಿ, ಗಾಳಿಪಟ ಸೇರಿದಂತೆ ಹಲವು ಸಿನಿಮಾ ನಟಿಸಿದ ಕೊಡಗಿನ ಕುವರಿ ಡೈಸಿ ಬೋಪಣ್ಣ ಚಿತ್ರರಂಗದಿಂದ ದೂರಯುಳಿದ್ದಾರೆ. ಉದ್ಯಮಿ ಅಮಿತ್ ಜಾಜು 2011ರಲ್ಲಿ ಮದುವೆಯಾದರು. ಮದುವೆ, ಸಂಸಾರ ಎಂದು ಬ್ಯುಸಿಯಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

     

    View this post on Instagram

     

    A post shared by Daisy Bopanna (@daisybopanna)

    ಮದುವೆಯ ನಂತರ ಮತ್ತಷ್ಟು ಹಾಟ್ ಮತ್ತು ಫಿಟ್ ಆಗಿರುವ ನಟಿ ಡೈಸಿ ಇದೀಗ ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ಲೈಟ್ ಪಿಂಕ್ ಕಲರ್ ರೋಸ್‌ಗಳನ್ನು ಹಿಡಿದು ಡೈಸಿ ಪೋಸ್ ಕೊಟ್ಟಿದ್ದಾರೆ. ನಟಿ ಕೂದಲನ್ನು ಫ್ರೀಯಾಗಿ ಬಿಟ್ಟು ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ನಟಿ ಪೋಸ್ ನೀಡಿದ್ದಾರೆ. ಸಿಂಪಲ್‌ ಆಗಿ ಮೇಕಪ್‌ ಮಾಡಿ, ಬಾಟಂ ವೇರ್‌ ಮಾತ್ರ ಧರಿಸಿದ್ದಾರೆ. ಇದನ್ನೂ ಓದಿ: 12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್

     

    View this post on Instagram

     

    A post shared by Daisy Bopanna (@daisybopanna)

    ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ಡೈಸಿ ಬೋಪಣ್ಣ ಅವರಿಗೆ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗುವಂತೆ ಫ್ಯಾನ್ಸ್ ಮನವಿ ಮಾಡ್ತಿದ್ದಾರೆ. ಹೊಸ ಬಗೆಯ ಫ್ಯಾಷನ್ ಲುಕ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುವ ನಟಿ, ಸಿನಿಮಾಗಳಲ್ಲಿ ಮತ್ತೆ ನಟಿಸುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.