Tag: ಡೈವೋರ್ಸ್

  • 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    ಲಂಡನ್‌: 6 ವರ್ಷದ ಹಿಂದೆ ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ಇದೀಗ ತಮ್ಮ 4ನೇ ಪತ್ನಿ ನಟಿ ಜೆರ್ರಿ ಹಾಲ್‍ಗೆ ವಿಚ್ಛೇದನ ನೀಡುವ ಮೂಲಕ ಮತ್ತೊಮ್ಮೆ ಸುದ್ದಿ ಆಗಿದ್ದಾರೆ.

    2016ರ ಮಾರ್ಚ್‍ನಲ್ಲಿ ಮಧ್ಯ ಲಂಡನ್‍ನಲ್ಲಿ ನಡೆದ ಸಮಾರಂಭದಲ್ಲಿ 91 ವರ್ಷದ ರೂಪರ್ಟ್ ಮುರ್ಡೋಕ್ 65 ವರ್ಷದ ಜೆರ್ರಿ ಹಾಲ್ ಅವರನ್ನು ಮದುವೆ ಆಗಿದ್ದರು. ಹಿಂದಿನ ವರ್ಷವಷ್ಟೇ ರೂಪರ್ಟ್ ಮುರ್ಡೋಕ್‍ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಇದೀಗ ಜೆರ್ರಿಗೆ ವಿಚ್ಛೇದನವನ್ನು ನೀಡಿದ್ದಾರೆ. ಯಾವ ಕಾರಣಕ್ಕಾಗಿ ವಿಚ್ಛೇದನ ನೀಡಿದ್ದಾರೆ ಎನ್ನುವ ವಿಷಯ ಇನ್ನೂ ಬಹಿರಂಗವಾಗಿಲ್ಲ. ಈ ವಿಚ್ಛೇದನದ ಬಗ್ಗೆ ಮುರ್ಡೋಕ್‍ನ ವಕ್ತಾರ ಬ್ರೈಸ್ ಟಾಮ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ರೂಪರ್ಟ್ ಮುರ್ಡೋಕ್ ಫ್ಯಾಕ್ಸ್ ನ್ಯೂಸ್ ಚಾನೆಲ್ ಹಾಗೂ ವಾಲ್ ಸ್ಟ್ರೀಟ್ ಜರ್ನಲ್‍ನ ನ್ಯೂಸ್ ಕಾರ್ಪ್ ಮಾಲೀಕತ್ವವನ್ನು ಹೊಂದಿದ್ದಾರೆ. ಮುರ್ಡೋಕ್ ನ್ಯೂಸ್ ಕಾರ್ಪ್ ಮತ್ತು ಫಾಕ್ಸ್ ಕಾರ್ಪ್ ಅನ್ನು ರೆನೋ, ನೆವಾಡಾ ಮೂಲದ ಫ್ಯಾಮಿಲಿ ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ. ಅದರಲ್ಲಿ ಶೇ. 40 ರಷ್ಟು ಷೇರನ್ನು ಹೊಂದಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಮಲ ಬಿಜೆಪಿಯವರ ಅನಿಷ್ಟ ಕೂಸು: ದಿನೇಶ್ ಗುಂಡೂರಾವ್

    ಮುರ್ಡೋಕ್ ಈವರೆಗೆ 3ಜನ ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ಅವರಲ್ಲಿ ಮುರ್ಡೋಕ್ ಈ ಹಿಂದೆ ಉದ್ಯಮಿ ವೆಂಡಿ ಡೆಂಗ್ ಅವರನ್ನು ವಿವಾಹವಾದರು. ಅವರೊಂದಿಗೂ ಮದುವೆಯಾಗಿ 14 ವರ್ಷಗಳ ನಂತರ ಅಂದರೆ 2014ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಹಾಗೇ 1999ರಲ್ಲಿ ತಮ್ಮ ಎರಡನೇ ಪತ್ನಿ ಅನ್ನಾ ಮುರ್ಡೋಕ್ ಮಾನ್, ಸ್ಕಾಟಿಷ್ ಪತ್ರಕರ್ತೆಯಿಂದ ಬೇರ್ಪಟ್ಟಿದ್ದರು. ಅವರಿಗೂ 3 ಮಕ್ಕಳಿದ್ದಾರೆ. ಮೊದಲ ಪತ್ನಿ ಪೆಟ್ರೀಷಿಯಾ ಬೂಕರ್, ಮಾಜಿ ಫ್ಲೈಟ್ ಅಟೆಂಡೆಂಟ್‍ಗೆ ಮಗಳಿದ್ದು, 1966ರಲ್ಲಿ ವಿಚ್ಛೇದನ ಪಡೆದರು. ಇದನ್ನೂ ಓದಿ: ಶವದ ಮುಂದೆ ಕೋತಿ ಕಿರಿಕ್ – ಅಂತ್ಯ ಸಂಸ್ಕಾರಕ್ಕೆ ಬಿಡದೇ ಕಾಟ

    Live Tv

  • ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತ್ರೂ ಮಳೆ ಹನಿ ನಿಲ್ಲದು!

    ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತ್ರೂ ಮಳೆ ಹನಿ ನಿಲ್ಲದು!

    ನಾಗಚೈತನ್ಯ ಮತ್ತು ಸಮಂತಾ ದೂರವಾಗಿ ಹಲವು ತಿಂಗಳುಗಳೇ ಉರುಳಿವೆ. ಇಬ್ಬರೂ ತಮ್ಮ ಪಾಡಿಗೆ ತಾವು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ದಾಂಪತ್ಯದ ಹೊಸ ಹೊಸ ಮುಖಗಳು ಮಾತ್ರ ಅನಾವರಣಗೊಳ್ಳುತ್ತಲೇ ಇವೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಸಮಂತಾ ಬಗ್ಗೆ ನಾಗಚೈತನ್ಯ ಅಭಿಮಾನಿಗಳು ಸಲ್ಲದ ಆರೋಪ ಮಾಡಿದರು. ಅವರು ಯಾವುದೇ ಸಿನಿಮಾ ಒಪ್ಪಿಕೊಂಡರೂ, ಅದಕ್ಕೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದರು. ಪುಷ್ಪಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದಾಗಲಂತೂ ಮಾನಹಾನಿ ಆಗುವಂತಹ ಸಂದೇಶಗಳನ್ನು ಕಳುಹಿಸಿದರು. ಇದೀಗ ಮದ್ವೆ ಸೀರೆ ಸುದ್ದಿ ಹಿಡಿದುಕೊಂಡು ಜಗ್ಗಾಡುತ್ತಿದ್ದಾರೆ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು

    ಈಗ ತೆಲುಗು ಸಿನಿಮಾ ರಂಗದಲ್ಲಿ ಚಿತ್ರಗಳಿಗಿಂತ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿಯೆಂದರೆ ಸಮಂತಾ ಅವರು ಮದ್ವೆ ಸೀರೆಯದ್ದು. ಮದುವೆ ದಿನದಂದು ನಾಗಚೈತನ್ಯ ಕುಟುಂಬವು ಬೆಲೆಬಾಳು ರೇಷ್ಮೆ ಸೀರೆಯನ್ನು ಸಮಂತಾಗೆ ನೀಡುತ್ತು. ಮದುವೆ ಸಂದರ್ಭದಲ್ಲಿ ಆ ಸೀರೆಯದ್ದೇ ಹೈಲೆಟ್ ಆಗಿತ್ತು. ಈಗ ಆ ಸೀರೆಯನ್ನೂ ನಾಗಚೈತನ್ಯ ಕುಟುಂಬಕ್ಕೆ ಸಮಂತಾ ವಾಪಸ್ಸು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರಿಂದಾಗಿ ಅಕ್ಕಿನೇನಿ ಕುಟುಂಬ ತೀರಾ ಮುಜಗರಕ್ಕೀಡಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡ ನಂತರ ಸಾಯುವತನಕ ಜತೆಗಿರುತ್ತೇನೆ ಎಂದು ಪ್ರಮಾಣ ಮಾಡಿದ ಪತಿಯನ್ನೇ ಬಿಟ್ಟು ಬಂದಿದ್ದೇನೆ. ಇನ್ನು ಅವರು ಕೊಟ್ಟಿರುವ ವಸ್ತುಗಳು ಯಾವ ಲೆಕ್ಕ ಎನ್ನುವ ಧೋರಣೆಯಿಂದಲೇ ಸಮಂತಾ ಹಾಗೆ  ಮಾಡಿದ್ದಾರೆ ಎನ್ನುವುದು ಸದ್ಯ ಸುದ್ದಿಗೆ ಸಿಕ್ಕ ಆಹಾರ.

  • 27 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ಬಿಲ್ ಗೇಟ್ಸ್, ಮೆಲಿಂಡಾ

    27 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ಬಿಲ್ ಗೇಟ್ಸ್, ಮೆಲಿಂಡಾ

    ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ವಿಶ್ವದ ಮಾಜಿ ನಂಬರ್ ಒನ್ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಗೇಟ್ಸ್ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿದ್ದಾರೆ.

    27 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಇಬ್ಬರು ಸಮ್ಮತಿಯೊಂದಿಗೆ ಬೇರೆ ಬೇರೆಯಾಗಿ ಜೀವಿಸುವುದಾಗಿ ಪ್ರಕಟಿಸಿದ್ದಾರೆ. ಇಬ್ಬರು ಜಂಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದೇ ಬರಹ ಇರುವ ಪೋಸ್ಟ್ ಪ್ರಕಟಿಸುವ ಮೂಲಕ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನಾವು ನಮ್ಮ ಸಂಬಂಧದ ಬಗ್ಗೆ ದೀರ್ಘವಾಗಿ ಚಿಂತನೆ ನಡೆಸಿದ ಬಳಿಕ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಕಳೆದ 27 ವರ್ಷಗಳಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದೇವೆ ಮತ್ತು ವಿಶ್ವದ ಜನರು ಆರೋಗ್ಯಕರ ಜೀವನ ನಡೆಸಲು ನಾವು ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ. ಈ ಸಂಸ್ಥೆಯ ಕೆಲಸದಲ್ಲಿ ನಾವು ಪೂರ್ಣವಾಗಿ ತೊಡಗಿಸಿಕೊಂಡು ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಆದರೆ ನಮ್ಮ ಜೀವನದ ಈ ಮುಂದಿನ ಹಂತದಲ್ಲಿ ದಂಪತಿಯಾಗಿ ನಾವು ಒಟ್ಟಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ. ನಾವು ಈ ಹೊಸ ಜೀವನವನ್ನು ಆರಂಭಿಸುತ್ತಿರುವ ಕಾರಣ ನಾವು ನಮ್ಮ ಕುಟುಂಬದ ಜೊತೆ ಪ್ರೈವೆಸಿಯನ್ನು ಕೇಳುತ್ತೇವೆ ಎಂದು ಜಂಟಿಯಾಗಿ ಹೇಳಿದ್ದಾರೆ.

    67 ವರ್ಷದ ಬಿಲ್ ಗೇಟ್ಸ್ ಮತ್ತು 56 ವರ್ಷದ ಮೆಲಿಂಡಾ ಗೇಟ್ಸ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇಬ್ಬರು ಸೇರಿ ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್’ ಹೆಸರಿನಲ್ಲಿ 2000ನೇ ಇಸ್ವಿಯಲ್ಲಿ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು.

    1987ರಲ್ಲಿ ಮೆಲಿಂಡಾ ಪ್ರಾಡಕ್ಟ್ ಮ್ಯಾನೇಜರ್ ಆಗಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸೇರಿದ್ದರು. ಇವರಿಬ್ಬರು ಕಂಪನಿಯ ಕೆಲಸದಲ್ಲಿ ಜೊತೆಯಾಗಿ ತೊಡಗಿದ್ದ ಸಮಯದಲ್ಲಿ ಪ್ರೇಮ ಮೊಳೆದು 1994ರಲ್ಲಿ ವಿವಾಹವಾಗಿದ್ದರು.

    ದತ್ತಿ ನಿಧಿ ಕೆಲಸದಲ್ಲಿ ತೊಡಗಿಸಿಕೊಳ್ಳಲು 2008ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದಿದ್ದರು. ಬಳಿಕ ಕಂಪನಿಯ ಮಂಡಳಿಯಿಂದಲೂ ಹೊರ ಬಂದು ನಂತರ ತಂತ್ರಜ್ಞಾನ ಸಲಹೆಗಾರನಾಗಿ ಮುಂದುವರಿಯುತ್ತಿರುವುದಾಗಿ ತಿಳಿಸಿದ್ದರು.

    ಅಮೆಜಾನ್ ಸಂಸ್ಥಾಪಕ ಸಿಇಓ, ವಿಶ್ವದ ನಂ.1 ಶ್ರೀಮಂತ ಜೆಫ್ ಬಿಜೋಸ್ ಅವರು 2 ವರ್ಷಗಳ ಹಿಂದೆ ಪತ್ನಿ ಮ್ಯಾಕ್‍ಕೆಂಜೀ ಅವರಿಗೆ ಡೈವೋರ್ಸ್ ನೀಡಿದ್ದರು. 26 ವರ್ಷಗಳ ದಾಂಪತ್ಯ ಜೀವನ ಗುಡ್‍ಬೈ ಹೇಳಿದ್ದ ಬಿಜೋಸ್ ಮ್ಯಾಕ್‍ಕೆಂಜೀ ಅವರಿಗೆ 38 ಶತಕೋಟಿ ಡಾಲರ್ ನೀಡುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಪರಿಹಾರವನ್ನು ನೀಡಿದ್ದರು. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ

  • ಪತ್ನಿಗೆ ತಿಳಿಯದಂತೆ ಡೈವೋರ್ಸ್ ನೀಡಿ ಪ್ರೇಯಸಿಯನ್ನ ಮದ್ವೆಯಾದ

    ಪತ್ನಿಗೆ ತಿಳಿಯದಂತೆ ಡೈವೋರ್ಸ್ ನೀಡಿ ಪ್ರೇಯಸಿಯನ್ನ ಮದ್ವೆಯಾದ

    ಬೆಂಗಳೂರು: ಪರಸ್ತ್ರೀಯ ಆಸೆಗೆ ಬಿದ್ದು, ಪತಿ ಪತ್ನಿಗೆ ಮೋಸ ಮಾಡೋದನ್ನ ನೋಡಿದ್ದೀರಿ. ಆದರೆ ಇಲ್ಲೊಬ್ಬ ತನ್ನ ಹೆಂಡತಿಗೆ ತಿಳಿಯದಾಗೆ ವಿಚ್ಛೇದನ ನೀಡಿ ತನ್ನ ಪ್ರೇಯಸಿಯೊಂದಿಗೆ ವಿವಾಹವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಸಂಜಯ್ ನಗರದಲ್ಲಿ ವಾಸವಾಗಿರುವ ವಿಜಯ್ ಕುಮಾರ್ ಪತ್ನಿಗೆ ತಿಳಿಯದಂತೆ ಬೇರೆ ಮಹಿಳೆಯನ್ನ ಮದುವೆಯಾಗಿದ್ದಾನೆ. ಕುಮಾರ್ ಬಿಎಸ್‍ಎನ್‍ಎಲ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದು, ಪ್ರಭಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ವಿವಾಹವಾಗಿದ್ದನು. ಇವರಿಗೆ ಮದುವೆಯಾಗಿ 20 ವರ್ಷ ಕಳೆದಿದ್ದು, ಮಗಳು ಕೂಡ ಇದ್ದಾಳೆ.

    ಕುಮಾರ್ ಪತ್ನಿಗೆ ಗೊತ್ತಾಗದಂತೆ ವಿಚ್ಛೇದನ ನೀಡಿದ್ದಾನೆ. ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಒಮ್ಮೆಯೂ ಕೋರ್ಟ್ ಗೆ ಹೋಗಿಲ್ಲ, ನನಗೆ ಗೊತ್ತಾಗದಂತೆ ನನ್ನ ಗಂಡ ಡೈವೋರ್ಸ್ ನೀಡಿದ್ದಾನೆ. ಅವರು ನನ್ನ ಕೈಗೆ ಡೈವೋರ್ಸ್ ಕಾಪಿ ಕೋಟ್ಟಾಗಲೇ ನನಗೆ ಗೊತ್ತಾಗಿದ್ದು, ಅಷ್ಟೇ ಅಲ್ಲದೇ ಡೈವೋರ್ಸ್ ಕಾಪಿ ಜೊತೆ ಮತ್ತೊಂದು ಮದುವೆಯಾಗಿರುವ ಮದುವೆಯ ಸರ್ಟಿಫಿಕೇಟ್ ನೀಡಿದ್ದು, ನನ್ನ ನಿನ್ನ ಸಂಬಂಧ ಮುಗಿಯಿತು. ನೀನು ಹೊರಡು ಎಂದು ಹೇಳಿದ್ದಾನೆ ಎಂದು ನೊಂದ ಮಹಿಳೆ ಹೇಳಿದ್ದಾರೆ.

    ನನ್ನ ಗಂಡನಿಗೆ ವಕೀಲೆ ಗೌರಿ (ಹೆಸರು ಬದಲಾಯಿಸಲಾಗಿದೆ) ಎಂಬವರ ಜೊತೆ ಅನೈತಿಕ ಸಂಬಂಧವಿತ್ತು. ಅದನ್ನ ಲೀಗಲ್ ಮಾಡಿಕೊಳ್ಳುದ್ದಕ್ಕೆ ನನ್ನ ಬಿಟ್ಟಿದ್ದಾರೆ. ಡೈವೋರ್ಸ್ ಆರ್ಡಾರ್ ಆಗಿರುವುದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಅದನ್ನ ನನಗೆ ಕೊಟ್ಟಿರುವುದು ಕಳೆದ ಫೆಬ್ರವರಿಯಲ್ಲಿ. ನ್ಯಾಯಲಯಕ್ಕೆ ವಂಚಿಸಿ ಇವರು ಡೈವೋರ್ಸ್ ಮಾಡಿಸಿದ್ದಾರೆ ಎಂದು ನೊಂದ ಮಹಿಳೆ ಪಬ್ಲಿಕ್ ಟಿವಿಗೆ ಬಂದು ತನ್ನ ಪತಿ ಮಾಡಿರುವ ವಂಚನೆಯನ್ನ ಹೇಳಿಕೊಂಡಿದ್ದಾರೆ.

    ಅಮ್ಮ ಯಾವುತ್ತು ಕೋರ್ಟ್ ಗೆ ಹೋಗಿಲ್ಲ. ಡೈವೋರ್ಸ್ ಲೆಟರ್ ಕೊಟ್ಟಾಗಲೇ ನಮಗೂ ಇದು ಗೊತ್ತಾಗಿದ್ದು. ನನಗೆ ಇಬ್ಬರೂ ಒಟ್ಟಿಗೆ ಇರಬೇಕು ಎಂದು ಮಗಳು ಹೇಳುತ್ತಿದ್ದಾರೆ.

  • ನನ್ನ ಹೆಂಡ್ತಿ  ಹೊಡಿತಾಳೆ, ಅವಳನ್ನ ಕಂಡ್ರೆ ಭಯ, ಡೈವೊರ್ಸ್ ಕೊಡಿ – ಹೈಕೋರ್ಟ್ ನಲ್ಲಿ ಕಣ್ಣೀರಿಟ್ಟ ಟೆಕ್ಕಿ ಪತಿ

    ನನ್ನ ಹೆಂಡ್ತಿ ಹೊಡಿತಾಳೆ, ಅವಳನ್ನ ಕಂಡ್ರೆ ಭಯ, ಡೈವೊರ್ಸ್ ಕೊಡಿ – ಹೈಕೋರ್ಟ್ ನಲ್ಲಿ ಕಣ್ಣೀರಿಟ್ಟ ಟೆಕ್ಕಿ ಪತಿ

    ಬೆಂಗಳೂರು: ನನ್ನ ಹೆಂಡತಿ ತುಂಬಾ ಜೋರು, ಅವಳ ಜೊತೆ ನನಗೆ ಬದುಕಲು ಆಗುತ್ತಿಲ್ಲ ಅಂತಾ ನ್ಯಾಯಮೂರ್ತಿಗಳ ಮುಂದೆ ಟೆಕ್ಕಿ ಪತಿ ಕಣ್ಣೀರು ಹಾಕಿದ್ದಾರೆ.

    ಕರ್ನಾಟಕ ಹೈಕೋರ್ಟ್ ಇಂತಹದೊಂದು ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಅಮೆರಿಕಾದಲ್ಲಿ ನೆಲೆಸಿರೋ ಬೆಂಗಳೂರಿನ ಟೆಕ್ಕಿಯೊಬ್ಬರು, ನನಗೆ ಹೆಂಡ್ತಿನಾ ಕಂಡ್ರೆ ಭಯ, ಅವಳು ನನಗೆ ಹೊಡೀತಾಳೆ, ಅವಳ ಮುಖ ನೋಡಿದ್ರೆನೆ ನನಗೆ ಭಯ ಆಗುತ್ತದೆ. ಹಾಗಾಗಿ ನನಗೆ ಡೈವೋರ್ಸ್ ಕೊಡಿ ಅಂತ ಜಡ್ಜ್ ಬಳಿ ಬೇಡಿಕೊಂಡಿದ್ದಾರೆ.

    ನ್ಯಾಯಾಧೀಶರು ಹೇಳಿದ್ದೇನು?: ಭಾವನೆಗಳು ಬೆರೆತಾಗ ಮಾತ್ರ ಗಂಡ ಹೆಂಡತಿ ಸಂಸಾರ ಮಾಡಲು ಸಾಧ್ಯವಾಗುತ್ತದೆ. ಗಂಡ ಅಮೆರಿಕಾದಲ್ಲಿ ಇದ್ದರೂ ಅಲ್ಲಿಂದಲೇ ಪ್ರೀತಿಯಿಂದ ಇರೋದನ್ನ ನೋಡಿದ್ದೇವೆ. ಆದ್ರೆ ಮಾನಸಿಕ ತೊಂದರೆಗಳು ಆಗುವುದು ಸಾಮಾನ್ಯ, ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರಲು ಸಾಧ್ಯವಿಲ್ಲ.ಮಾನಸಿಕ ತಜ್ಞರಾದ ಶಾಹ ಎಂಬವರು ಬಳಿ ಕೌನ್ಸೆಲಿಂಗ್ ಮಾಡಿಸಿಕೊಳ್ಳಿ.ಪ್ರೀತಿ ಇಲ್ಲದವರ ಬಳಿ ಇರಲೂ ಯಾರಿಗೂ ಸಾಧ್ಯವಿಲ್ಲ. ಹಾಗೇನಾದ್ರು ಇದ್ರೆ ಅವರನ್ನು ನಾಯಿಯಂತೆ ನೋಡಿಕೊಳ್ಳುತ್ತಾರೆ. ಆರೋಪಗಳನ್ನು ಮಾಡುವುದನ್ನು ಬಿಡಬೇಕು, ಹಿಂದೆ ನಡೆದಿದ್ದನ್ನು ಮರೆಯಬೇಕು.. ಗಂಡನಿಗೆ ಇಚ್ಛೆ ಇಲ್ಲ ಅಂದ್ರೆ ನ್ಯಾಯಾಲಯ ಒತ್ತಾಯಪೂರ್ವಕವಾಗಿ ಒಂದೇ ಕಡೆ ಇರಿ ಎಂದು ಹೇಳಲು ಸಾಧ್ಯವಿಲ್ಲ. ಇದು ಒಂದು ದಿನದ ಜೀವನವಲ್ಲ, ಪ್ರೀತಿ ಇಲ್ಲದ ಮೇಲೆ ಭಾವನೆಗಳು ಬೆರೆಯದೇ ಸಂಸಾರ ನಡೆಸಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.

    ಈ ರೀತಿಯಾಗಿ ಬುದ್ದಿವಾದ ಹೇಳಿದ ಜಡ್ಜ್, ಕೊನೆಗೆ ಮಧ್ಯಸ್ಥಿಕಾ ಕೇಂದ್ರಕ್ಕೆ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳಿ. ಅಲ್ಲಿಯೂ ಪರಿಹಾರ ದೊರೆಯದೆ ಹೋದರೆ ಮತ್ತೆ ಬನ್ನಿ ಅಂತ ಹೇಳಿ ಪ್ರಕರಣವನ್ನ ಮುಂದೂಡಿದ್ದಾರೆ.

  • ಡೈವೋರ್ಸ್ ನೀಡಲು ಮುಂದಾಗಿದ್ದ ಪತ್ನಿಯನ್ನು ಹೆದರಿಸಲು ವಿಷ ಸೇವಿಸಿದ ಪತಿ

    ಡೈವೋರ್ಸ್ ನೀಡಲು ಮುಂದಾಗಿದ್ದ ಪತ್ನಿಯನ್ನು ಹೆದರಿಸಲು ವಿಷ ಸೇವಿಸಿದ ಪತಿ

    ಚಿಕ್ಕಬಳ್ಳಾಪುರ: ಡೈವೋರ್ಸ್ ನೀಡಲು ನಿರ್ಧರಿಸಿರುವ ಪತ್ನಿಯನ್ನು ಹೆದರಿಸಲು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ನಡೆದಿದೆ.

    ಮೂಲತಃ ಬೆಂಗಳೂರಿನ ಲೊಟ್ಟಗೊಲ್ಲಹಳ್ಳಿ ನಿವಾಸಿ ರಾಜು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಟಿ.ದಾಸರಹಳ್ಳಿ ನಿವಾಸಿಯಾಗಿರುವ ಮೋನಿಷಾರನ್ನು ಪ್ರೀತಿಸಿದ್ದ ರಾಜು 2014 ರಲ್ಲಿ ಗೋರವನಹಳ್ಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ತಮ್ಮ ವಿವಾಹವನ್ನು ರಿಜಿಸ್ಟರ್ ಮಾಡಿಸಿದ್ದರು.

    ಕೆಲ ದಿನಗಳಿಂದ ಪತಿ ರಾಜು ಹಾಗೂ ಪತ್ನಿ ಮೋನಿಷಾ ನಡುವೆ ಹೊಂದಾಣಿಕೆ ಇಲ್ಲದೇ ಮೋನಿಷಾ ಗಂಡನನ್ನು ತೊರೆದು ತವರು ಮನೆ ಸೇರಿದ್ದರು. ಅಲ್ಲದೇ ಪತಿ ರಾಜು ಜೊತೆ ಮತ್ತೆ ಜೀವನ ನಡೆಸಲು ಇಷ್ಟವಿಲ್ಲದ ಎಂದು ಹೇಳಿ ಮೋನಿಷಾ ವಿಚ್ಛೇದನ ನೀಡಲು ನಿರ್ಧರಿಸಿದ್ದರು.

    ಬುಧವಾರ ಕೆಲಸದ ನಿಮಿತ್ತ ಸ್ನೇಹಿತನ ಜೊತೆ ರಾಜು ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಈ ವೇಳೆ ತನ್ನ ಪತ್ನಿ ಡೈವೋರ್ಸ್ ನೀಡಲು ಮುಂದಾಗುತ್ತಿರುವ ವಿಚಾರವನ್ನು ಸ್ನೇಹಿತನಿಗೆ ತಿಳಿಸಿದ್ದಾರೆ. ಈ ಹಿಂದೆಯೂ ಒಮ್ಮೆ ಮೋನಿಷಾ ಮನೆ ಬಿಟ್ಟು ಹೋಗಿದ್ದಾಗ ಆಕೆಯನ್ನು ಬೆದರಿಸಲು ಆತ್ಮಹತ್ಯೆಗೆ ಯತ್ನಿಸಿದ್ದ ಕುರಿತು ತಿಳಿಸಿದ್ದಾರೆ. ಮತ್ತೆ ಇದೇ ಉಪಾಯವನ್ನು ಅನುಸರಿಸಿರುವ ರಾಜು ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಸ್ನೇಹಿತ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಾರಿನಲ್ಲೇ ಇಲಿ ಪಾಷಾಣ ಹಾಗೂ ಡೆಟಾಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಊಟ ಮುಗಿಸಿ ಬಂದ ರಾಜು ಸ್ನೇಹಿತ ಕಾರಿನಲ್ಲಿ ಡೆಟಾಲ್ ವಾಸನೆ ಬರುವುದನ್ನು ಕಂಡು ಆತ್ಮಹತ್ಯೆ ಯತ್ನಿಸಿದ ರಾಜುರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.