Tag: ಡೈರೆಕ್ಷನ್

  • ನಿರ್ದೇಶನಕ್ಕೆ ಮುಂದಾದ ಲೇಡಿ ಸೂಪರ್ ಸ್ಟಾರ್

    ನಿರ್ದೇಶನಕ್ಕೆ ಮುಂದಾದ ಲೇಡಿ ಸೂಪರ್ ಸ್ಟಾರ್

    ಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಗೆ ಕೊಂಚ ವಿರಾಮ ತೆಗೆದುಕೊಂಡು ನಿರ್ದೇಶನಕ್ಕೆ (Directio) ಹಾರಲಿದ್ದಾರೆ. ನಿರ್ದೇಶನ ಅವರ ಕನಸಂತೆ. ಹಾಗಾಗಿ ಶೀಘ್ರದಲ್ಲೇ ಆ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ ಸ್ಟಾರ್ ನಟಿ. ಸಿನಿಮಾ ಯಾವುದು? ಕಥೆ ಏನು? ಯಾವುದನ್ನೂ ಇನ್ನೂ ಬಿಟ್ಟುಕೊಡದ ನಯನತಾರಾ, ಮುಂದಿನ ದಿನಗಳಲ್ಲಿ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ.

    ಈ ನಡುವೆ ನಯನತಾರಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಖ್ಯಾತ ನಟ ಕಮಲ್ ಹಾಸನ್ ಅವರ ಹೊಸ ಚಿತ್ರಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇದೇ ಸಿನಿಮಾಗೆ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ತ್ರಿಷಾ ಬದಲಾಗಿ ಇದೀಗ ನಯನತಾರಾ ಹೆಸರು ಕೇಳಿ ಬಂದಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಈಗಲೇ ಕಾತರದಿಂದ ಕಾಯುವಂತಾಗಿದೆ.

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

     

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು, ಇದೀಗ ನಯನತಾರಾ ಹೆಸರು ಸೇರ್ಪಡೆ ಆಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

  • ಅಪ್ಪುಗಾಗಿ ನಾನು ಸಿನಿಮಾ ಮಾಡಬೇಕಿತ್ತು: ಭಾವುಕರಾದ ಉಪೇಂದ್ರ

    ಅಪ್ಪುಗಾಗಿ ನಾನು ಸಿನಿಮಾ ಮಾಡಬೇಕಿತ್ತು: ಭಾವುಕರಾದ ಉಪೇಂದ್ರ

    ಪುನೀತ್ ರಾಜಕುಮಾರ್ (Puneeth Rajkumar) ಗಾಗಿ ಸಿನಿಮಾವೊಂದನ್ನು ನಿರ್ದೇಶನ (Direction) ಮಾಡುವ ಕನಸು ಕಂಡಿದ್ದರಂತೆ ನಟ ಉಪೇಂದ್ರ (Upendra). ಈ ವಿಷಯವನ್ನು ಹಲವಾರು ಬಾರಿ ಅಪ್ಪು ಜೊತೆ ಅವರು ಮಾತನಾಡಿದ್ದರಂತೆ. ನಟನೆ, ಸಿನಿಮಾ ನಿರ್ದೇಶನ ಹೀಗೆ ತಮ್ಮಲ್ಲಿ ತಾವು ಕಳೆದು ಹೋಗಿದ್ದ ಉಪೇಂದ್ರರಿಗೆ ಕೊನೆಗೂ ಅಪ್ಪುಗಾಗಿ ಸಿನಿಮಾ ಮಾಡಲಿಲ್ಲವಂತೆ. ಇಂಥದ್ದೊಂದು ನೋವಿನ ಸಂಗತಿಯನ್ನು ಉಪ್ಪಿ ಹಂಚಿಕೊಂಡಿದ್ದಾರೆ.

    ನಿನ್ನೆ ಶಿಡ್ಲಘಟ್ಟದಲ್ಲಿ ನಡೆದ ಕಬ್ಜ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ‘ಆದಷ್ಟು ಬೇಗ ಶಿವಣ್ಣನ (Shivraj Kumar) ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್-ಕಟ್ ಹೇಳುವ ಆಸೆ ಇತ್ತು. ಅದು ಇಡೇರಲಿಲ್ಲ. ಕಬ್ಜ ಬಗ್ಗೆ ಹೇಳುವುದಾದರೆ, ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ ಕಬ್ಜ ಮಾಡಲಿದ್ದಾರೆ’ ಎಂದರು.

    ಪಕ್ಕದಲ್ಲಿಯೇ ಇದ್ದ ಶಿವರಾಜ್ ಕುಮಾರ್ ಅವರತ್ತ ನೋಡಿ ಉಪೇಂದ್ರ, ‘ಶಿವಣ್ಣ ಓಂ ಸಿನಿಮಾ ಪಾರ್ಟ್ 2 ಮಾಡೋಣವಾ?’ ಎಂದರು. ಉಪ್ಪಿ ಮಾತು ಕೇಳಿದ ಶಿವಣ್ಣ ಉತ್ಸಾಹದಿಂದಲೇ ‘ಆಗಲಿ’ ಎಂದು ಒಪ್ಪಿಗೆ ಸೂಚಿಸಿದರು. ‘ಈಗಾಗಲೇ ನಿರ್ಮಾಪಕರು ರೆಡಿ ಇದ್ದಾರೆ. ನಿರ್ದೇಶಕ ಆಗಿ ನಾನಿದ್ದೇನೆ. ನೀವು ಯಾವಾಗ ಡೇಟ್ ಕೊಡ್ತೀರೋ ಅವತ್ತಿನಿಂದ ಹೊಸ ಸಿನಿಮಾ ಶುರು ಮಾಡೋಣ’ ಎಂದು ಎಲ್ಲರ ಸಂಭ್ರಮಕ್ಕೆ ಕಾರಣರಾದರು ಉಪೇಂದ್ರ.

    ಉಪೇಂದ್ರರ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ‘ನಾನು ಉಪೇಂದ್ರ ಅಭಿಮಾನಿ.  ಅವರು ಓಂ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೇ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ’ ಎಂದು ತಂಡಕ್ಕೆ ಶುಭ ಹಾರೈಸಿ ‘ಓಂ’ ಸಿನಿಮಾ ಡೈಲಾಗ್ ಹೇಳಿದರು.