Tag: ಡೈರೆಕ್ಟರ್

  • ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಶಸ್ವಿ ಚಿತ್ರಗಳಾದ  ಓ ಮೈ ಲವ್, 18 ಟು 25  ಬಳ್ಳಾರಿ ದರ್ಬಾರ್ ಅಲ್ಲದೆ ತೆಲುಗಿನಲ್ಲೂ ಪ್ರತಿಭಾವಂತ  ನಿರ್ದೇಶಕನಾಗಿ  ಗುರುತಿಸಿಕೊಂಡಿರುವ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) (Smile Srinu) ಇದೀಗ ಹೀರೋ ಆಗುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಶ್ರೀನು,  ‘ನಿರ್ದೇಶಕರು ಕಥೆ ತುಂಬಾ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಎಲ್ಲಾ ಪಾತ್ರಗಳ ಜೊತೆ ನಾಯಕನ ಪಾತ್ರ ತುಂಬಾ ಚೆನ್ನಾಗಿದೆ. ನಟನಾಗಿ ಈ ಒಂದು ಪಾತ್ರ ಮಾಡಿದರೆ ಸಾಕು ಅನ್ನುವ ಹಾಗೆ ಈ ನಾಯಕನ ಪಾತ್ರ ಇದೆ. ಒಬ್ಬ ನಟನಾಗಿ ನಿರೂಪಿಸಲು ಏನೆಲ್ಲಾ ಭಾವನೆಗಳು ಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಹಾಗಾಗಿ ನಟಿಸಲು ಒಪ್ಪಿಕೊಂಡೆ’ ಅಂತಾರೆ.

    ಶ್ರೀಧರ್ ಪೂರ್ವಜಿತ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು. ಆ ಚಿತ್ರದ ಹೆಸರು ಮಂಡೇಲಾ (Mandela). ಇದೊಂದು ವಿಭಿನ್ನ  ಪ್ರಯೋಗದ  ಚಿತ್ರ ಎಂದೂ ಹೇಳಬಹುದು.  ಸಿನಿಮಾ ಎಂದಮೇಲೆ ಹಲವಾರು ಪಾತ್ರಗಳಿರಬೇಕಲ್ಲವೆ, ಈ ಚಿತ್ರದಲ್ಲೂ ಒಂದಷ್ಟು ಪಾತ್ರಗಳಿವೆ. ಆದರೆ ಪ್ರಮುಖವಾಗಿ ಮೂರು ಪಾತ್ರಗಳ ಮೂಲಕ ನಿರ್ದೇಶಕರು ಕಥೆಯನ್ನು ಹೇಳಹೊರಟಿದ್ದಾರೆ. 1980- 90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ  ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ನಟಿಸುತ್ತಿದ್ದಾರೆ.

    ಈ ಸಿನಿಮಾ ಹೊರತುಪಡಿಸಿ ಇನ್ನೂ  ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ ಸ್ಮೈಲ್ ಶ್ರೀನು.  ಹಾಗೆ ಎರೆಡು ಚಿತ್ರಗಳನ್ನು  ನಿರ್ದೇಶನ ಕೂಡ ಮಾಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಎಲ್ಲ ವಿವರಣೆ ನೀಡುತ್ತೇನೆ ಎಂದು ಸ್ಮೈಲ್ ಮಾಡುತ್ತಾರೆ ನಟ ,ನಿರ್ದೇಶಕ ನಾರಿ ಶ್ರೀನಿವಾಸ್.

    ಚಿತ್ರದಲ್ಲಿ  ಇಬ್ಬರು ನಾಯಕಿಯರು ನಟಿಸುತ್ತಿದ್ದು, ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡದಲ್ಲಿ ಈಗಾಗಲೇ ಬಾ ನಲ್ಲೆ ಮಧುಚಂದ್ರಕೆ, ಬೆಳದಿಂಗಳ ಬಾಲೆಯಂಥ ಚಿತ್ರಗಳು ಬಂದು ಹೋಗಿವೆ. ಆಗಿನಿಂದಲೂ ಹೊಸಥರದ ಕಂಟೆಂಟ್ ಇರುವ ಕಥೆಗಳನ್ನು ನಮ್ಮ ಜನ  ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅದೇ ರೀತಿ ನಮ್ಮ ಹೊಸ ಈ ಪ್ರಯತ್ನವನ್ನೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತ ಪಡಿಸುತ್ತಾರೆ ಚಿತ್ರದ ನಾಯಕ ಸ್ಮೈಲ್ ಶ್ರೀನು.  ಕನ್ನಡ, ತೆಲುಗು, ತಮಿಳು ಸೇರಿ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪಕ್ಕಾ ಕಂಟೆಂಟ್ ಬೇಸ್ ಸಿನಿಮಾ ಇದಾಗಲಿದೆ.  ಬರುವ ಜುಲೈ 2 ಅಥವಾ 3ನೇ ವಾರ ಈ  ಚಿತ್ರ ಪ್ರಾರಂಭವಾಗಲಿದೆ.

    ನಮಗೆ ಫೇಮಸ್ ಆಗಿರೋ ಮ್ಯೂಸಿಕ್ ಡೈರೆಕ್ಟರ್ ಬೇಡ. ಫೇಮಸ್ ಆಗೋವಂಥ ಮ್ಯೂಸಿಕ್ ಕಂಪೋಜ್  ಮಾಡುವ ಸಂಗೀತ ನಿರ್ದೇಶಕರನ್ನ ಹುಡುಕುತ್ತಿದ್ದೇವೆ.  ಸಂಬಂಧಗಳ‌ ವ್ಯಾಲ್ಯೂ ಚೆನ್ನಾಗಿರಬೇಕು. ‌‌ಇಲ್ಲಿ ಯಾರೂ ಶತ್ರುಗಳಿಲ್ಲ ಅಂತ ಹೇಳ ಹೊರಟಿದ್ದೇವೆ. ನಾವು ತಪ್ಪು ಮಾಡಿದಾಗ ಪ್ರಪಂಚ ನಮ್ಮನ್ನು ಹೇಗೆ ನೋಡುತ್ತೆ  ಅಂತ ಸಮಯದಲ್ಲಿ ಸಮಾಜ ನಮ್ಮ ಜೊತೆ ಹೇಗೆ ನೆಡೆದುಕೊಳ್ಳುತ್ತೆ ಅನ್ನುವುದರ ಜೊತೆಗೆ ಇನ್ನೂ ಹಲವಾರು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಿದ್ದೇವೆಂದು ಅಂತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್. ಮಂಡೇಲಾದ ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ. ಹಂತ ಹಂತವಾಗಿ ಎಲ್ಲವನ್ನೂ ತಿಳಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್.

  • ಜಗತ್ತಿನ ಬೆಸ್ಟ್ ಡೈರೆಕ್ಟರ್ ಉಪೇಂದ್ರ : ಹೊಗಳಿದ ನಿರ್ದೇಶಕ ಪ್ರಶಾಂತ್ ನೀಲ್

    ಜಗತ್ತಿನ ಬೆಸ್ಟ್ ಡೈರೆಕ್ಟರ್ ಉಪೇಂದ್ರ : ಹೊಗಳಿದ ನಿರ್ದೇಶಕ ಪ್ರಶಾಂತ್ ನೀಲ್

    ಪ್ಪಿ ಗ್ರೆಟಸ್ಟ್ ಡೈರೆಕ್ಟರ್ ಇನ್ ದಿಸ್ ವರ್ಲ್ಡ್’ ಇದೇ ಮೊದಲ ಬಾರಿಗೆ ಕೆಜಿಎಫ್ ಸಾರಥಿ ಪ್ರಶಾಂತ್ ನೀಲ್ (Prashant Neel) ಈ ಸಾಲಿಗೆ ಧ್ವನಿಯಾಗಿದ್ದಾರೆ. ಇದುವರೆಗೆ ಎಲ್ಲಿಯೂ ಅವರು ಉಪೇಂದ್ರ (Upendra) ಬಗ್ಗೆ ಮಾತಾಡಿರಲಿಲ್ಲ. ಈಗ ಅದನ್ನು ಸುಳ್ಳು ಮಾಡಿದ್ದಾರೆ. ಉಪ್ಪಿ ಗ್ರೇಟ್ ಡೈರೆಕ್ಟರ್ ಎನ್ನುವುದಕ್ಕೆ ನೀಲ್ ಕೊಟ್ಟ ಕಾರಣ ಏನು? ಅದ್ಯಾವ ಸಿನಿಮಾಗಳನ್ನು ವಿಶ್ವ ದರ್ಜೆಗೆ ಏರಿಸಿದರು? ರಿಯಲ್‌ಸ್ಟಾರ್‌ಗೆ ಬಹುಪರಾಕ್ ಹಾಕಿದ್ದೇಕೆ ? ಆ ಮೈಂಡ್ ಬ್ಲೋಯಿಂಗ್ ಸ್ಟೋರಿ ಇಲ್ಲಿದೆ.

    ಉಪ್ಪಿ…ರಿಯಲ್ ಸ್ಟಾರ್…ಅದ್ಯಾವ ಗಳಿಗೆಯಲ್ಲಿ ಇವರು ಓಂ ಸಿನಿಮಾಕ್ಕೆ ಓಂಕಾರ ಹಾಕಿದರೋ…ಅದ್ಯಾವ ಕ್ಷಣದಲ್ಲಿ ಎ ಸಿನಿಮಾಕ್ಕೆ ನಾಯಕರಾದರೊ…ಅದ್ಯಾವ ಅಮೃತ ಗಳಿಗೆಯಲ್ಲಿ ಉಪೇಂದ್ರ ಟೈಟಲ್ ಇಟ್ಟು ವಿಶ್ವವನ್ನು ಬೆಚ್ಚಿಬೀಳಿಸಿದರೋ…ಅಲ್ಲಿಂದ ಇದುವರೆಗೆ ಉಪ್ಪಿ ದರ್ಬಾರ್ ನಿಂತಿಲ್ಲ. ಯರ‍್ಯಾರೋ ಬಂದರು ಹೋದರು. ಆದರೆ ಉಪ್ಪಿ ಮಾತ್ರ ಅಂದಿಗೂ ಇಂದಿಗೂ…ಮುಂದೆಂದಿಗೂ ಅದೇ ಚಿನ್ನದ ಕುದುರೆ ಮೇಲೆ ಸವಾರಿ ಮಾಡುತ್ತಿರುತ್ತಾರೆ. ಕಾರಣ ಅವರ ಸಿನಿಮಾ ಬರೀ ಸಿನಿಮಾ ಅಗಿರಲಿಲ್ಲ. ಅವೆಲ್ಲ ನಮ್ಮ ಬದುಕಿಗೆ ಕನ್ನಡಿ. ಮನಸಿನ ದ್ವಂದ್ವಕ್ಕೆ ಮುನ್ನುಡಿ. ದಟ್ ಈಸ್ ಪವರ್ ಆಫ್ ಉಪೇಂದ್ರ. ಪ್ರಶಾಂತ್ ನೀಲ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿಶ್ವದ ಬೆಸ್ಟ್ ಡೈರೆಕ್ಟರ್ ಈಸ್ ಉಪೇಂದ್ರ.

    ಉಪ್ಪಿ ಸಿನಿಮಾಗಳನ್ನು ನೋಡುತ್ತಾ ಬೆಳೆದ ನೀಲ್ ಇಂದು ಪ್ಯಾನ್ ಇಂಡಿಯಾ ಡೈರೆಕ್ಟರ್. ಆದರೆ ಅದಕ್ಕೆಲ್ಲ ಸ್ಪೂರ್ತಿ ಉಪ್ಪಿ. ರ‍್ಲೆ ನನ್ಮಗ, ಶ್ ಹಾಗೂ ಓಂ. ಈ ಮೂರೂ ಸಿನಿಮಾಗಳನ್ನು ಜನರು ಈಗಲೂ ಫಸ್ಟ್ ಟೈಮ್ ನೋಡಿದಂತೆ ಕಣ್ಣಗಲಿಸತ್ತಾರೆ. ರ‍್ಲೆ ನನ್ಮಗ ಸೈಡಿಗಿಡಿ. ಶ್ ಹಾಗೂ ಓಂ ಮಾತ್ರ ಯಾವತ್ತಿಗೂ ಅಚ್ಚರಿಗೊಳಿಸುತ್ತವೆ. ವಿಶ್ವದ ಸಾವಿರಾರು ಸಿನಿಮಾ ನೋಡಿರುವ ನೀಲ್ ಕೂಡ ಇದನ್ನು ಒಪ್ಪುತ್ತಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ಉಚ್ಛರಿಸಿದ್ದಾರೆ.

    ಕನ್ನಡ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನೀಲ್ ಈ ಮಾತು ಹೇಳಿದ್ದಾರೆ. ಓಹೋ…ಎಷ್ಟಿದ್ದರೂ ಕನ್ನಡ ಮಾಧ್ಯಮ ? ಅದಕ್ಕಾಗಿ ಉಪ್ಪಿಯನ್ನು ನೆನಪು ಮಾಡಿಕೊಂಡಿದ್ದಾರೆ. ಪರಭಾಷೆಗೆ ಇಂಟರ್‌ವ್ಯೂವ್ ಕೊಟ್ಟಿದ್ದರೆ ಇನ್ಯಾರೊ ನಿರ್ದೇಶಕನ ಹೆಸರನ್ನು ಹೇಳುತ್ತಿದ್ದರೇನೊ ? ಹೀಗಂತ ಜನರು ಅಂದುಕೊಳ್ಳುತ್ತಿದ್ದರು. ಅಷ್ಟರಲ್ಲಿ ಸ್ವಯಂ ಪ್ರೇರಿತರಾಗಿ ಗುಡುಗಿದರು ನೀಲ್. ಇದು ನೋಡಿ ಉಪ್ಪಿ ತಾಕತ್ತು ಹಾಗೂ ನಿರ್ದೇಶನದ ದೌಲತ್ತು. ಇಡೀ ವಿಶ್ವದಲ್ಲಿ ಉಪ್ಪಿಯನ್ನು ಮೀರಿಸುವ ಪ್ರತಿಭಾವಂತರಿದ್ದಾರೆ, ಬುದ್ಧಿವಂತರಿದ್ದಾರೆ, ನಿರ್ದೇಶಕರೂ ಇದ್ದಾರೆ. ಆದರೆ `ಉಪೇಂದ್ರ’ ಎನ್ನುವ ಚಿತ್ರವನ್ನು ಯಾರಿಗೂ ಹೆಣೆಯಲು ಸಾಧ್ಯ ಇಲ್ಲ. ಅದೊಂದೇ ಮಾಸ್ಟರ್ ಪೀಸ್. ಬರೀ ಮೂರು ಸಿನಿಮಾ ಹೆಸರು ಹೇಳಿದ ನೀಲ್, ಉಪೇಂದ್ರ ಸಿನಿಮಾ ಯಾಕೆ ನೆನಪಿಸಿಕೊಳ್ಳಲಿಲ್ಲ ? ಹೀಗಂತ ಅಂದುಕೊಳ್ಳುವಾಗಲೇ ನೀಲ್ ಬಿಟ್ಟರಲ್ಲ ಪಾಶು ಪತಾಸ್ತ್ರ.

    ಕೆಜಿಎಫ್ ಸಾರಥಿ ಇಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೆರೆಯುತ್ತಿದ್ದಾರೆ. ಆದರೆ ಅವರಿಗೆ ಹುರುಪು ತುಂಬಿದ್ದು ಮಾತ್ರ ಒನ್ ಆನ್ ಓನ್ಲಿ ಉಪ್ಪಿ. ಈಗ ಉಪೇಂದ್ರ ಕೂಡ ಗ್ಲೋಬಲ್ ಸಿನಿಮಾ ಸವಾರಿ ಹೊರಟಿದ್ದಾರೆ. `ಯುಐ’…ಇನ್ನೇನು ತಿಂಗಳಲ್ಲಿ ವಿಶ್ವಾದ್ಯಂತ ದಿಬ್ಬಣ ಹೊರಡಲಿದೆ. `ನನ್ನ ಮುಂದೆ ಬಂದವರು ಎಲ್ಲೆಲ್ಲೋ ಹೋಗಿ ಪಟಾಕಿ ಹಚ್ಚುತ್ತಿದ್ದಾರೆ. ನಾನಿಲ್ಲಿ ಬರೀ ಕಡ್ಡಿ ಗೀರುತ್ತಾ ಕೂಡಬೇಕಾ?’ ಬಹುಶಃ ಹೀಗಂದುಕೊಂಡೇ ಮೈ ಕೊಡವಿದ್ದಾರೆ. ಯುಐ ಅಬ್ಬರ, ಆರ್ಭಟ, ಉಪ್ಪಿಯನ್ನು ಇನ್ಯಾವ ರತ್ನ ಖಚಿತ ಸಿಂಹಾಸನದಲ್ಲಿ ರಾರಾಜಿಸುತ್ತದೋ? ಬುದ್ಧಿವಂತರಿಗೂ ಗೊತ್ತಿಲ್ಲ.

  • ‘ಕಾಂತಾರ’ದ ಫಾರೆಸ್ಟ್ ಗಾರ್ಡ್ ರವಿ ಈಗ ಡೈರೆಕ್ಟರ್

    ‘ಕಾಂತಾರ’ದ ಫಾರೆಸ್ಟ್ ಗಾರ್ಡ್ ರವಿ ಈಗ ಡೈರೆಕ್ಟರ್

    ವಿ ಬಸ್ರೂರ್ ಬಹುಬೇಡಿಕೆ ಸಂಗೀತ ನಿರ್ದೇಶಕರಲ್ಲಿ ಒಬ್ಬರು.. ಕೆಜಿಎಫ್  ಸರಣಿ ಸಿನಿಮಾ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್ ಗಳಿಗೂ ಪಯಣಿಸಿರುವ ಅವರು ಸ್ಟಾರ್ ಹೀರೋ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇದೀಗ ರವಿ ಬಸ್ರೂರ್ ಅಖಾಡದಿಂದ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕರಾಗಿ (Director) ಸೂಚನ್ ಶೆಟ್ಟಿ (Suchan Shetty) ಹೊಸ ಪಯಣ ಪ್ರಾರಂಭಿಸಿದ್ದಾರೆ.

    ಸೂಚನ್ ಶೆಟ್ಟಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೂಚನ್ ಅವರ ಚೊಚ್ಚಲ ಪ್ರಯತ್ನದ ಸಿನಿಮಾಗೆ ಗಾಡ್ ಪ್ರಾಮಿಸ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ರವಿ ಬಸ್ರೂರ್ ಸಾರಥ್ಯದ ಕಟಕ, ಗಿರ್ಮಿಟ್, ಕಡಲ್ ಸಿನಿಮಾಗಳಿಗೆ ಬಹರಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್ ಈ ಅನುಭವದೊಂದಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಕಾಂತಾರ (Kantara) ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ (Forest Guard) ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ಕಡಲ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಸೂಚನ್ ಶೆಟ್ಟಿ ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

    ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಚೊಚ್ಚಲ ಕನಸಿಗೆ ಜೊತೆಯಾಗಿದೆ. ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ಗಾಡ್ ಪ್ರಾಮಿಸ್..ಹಳ್ಳಿ ಸೊಗಡನ್ನು ಬಿಂಬಿಸುವ ಟೈಟಲ್ ಪೋಸ್ಟರ್ ಕುತೂಹಲವನ್ನು ಹೆಚ್ಚು ಮಾಡಿದೆ.

     

    ಗಾಡ್ ಪ್ರಾಮಿಸ್ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ. ಕಬ್ಜ-ಸಲಾರ್ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ ಹಾಗೂ ಭುವನ್ ಗೌಡ ಜೊತೆ ಕೆಲಸ ಮಾಡಿರುವ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ರವಿ ಬಸ್ರೂರ್ ಜೊತೆ ಸಲಾರ್, ಕೆಜಿಎಫ್ ಸರಣಿ ಚಿತ್ರಗಳಿಗೆ ಕೆಲಸ ಮಾಡಿರುವ 400ಕ್ಕೂ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಭರತ್ ಮಧುಸೂದನನ್  ಸಂಗೀತ ನಿರ್ದೇಶನ, ಲವ್ ಮಾಕ್ಟೇಲ್-2, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ವಿಕ್ರಾಂತ್ ರೋಣ ಸೇರಿದಂತೆ  ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಆನ್ ಲೈನ್ ಎಡಿಟರ್ ಆಗಿ ಕೆಲಸ ಮಾಡಿರುವ, ಖ್ಯಾತ ಸಂಕಲನಕಾರರಾದ ಕೆಎಂ ಪ್ರಕಾಶ್, ರುತ್ವಿಕ್. ಪ್ರತಿಕ್ ಶೆಟ್ಟಿ ಬಳಗದಲ್ಲಿ ದುಡಿದಿರುವ ನವೀನ್ ಶೆಟ್ಟಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯಶಸ್ವಿ ತಂತ್ರಜ್ಞನರ ಸಿನಿಮಾವಾಗಿರುವ ಗಾಡ್ ಪ್ರಾಮಿಸ್ ತಂಡದಲ್ಲಿ ಯಾವೆಲ್ಲಾ ಕಲಾಬಳಗದ ಇರಲಿದೆ ಅನ್ನೋದು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ. ಮಾರ್ಚ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

  • ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ ನಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಆ ಸಿನಿಮಾದ ಟೈಟಲ್ ಲಾಂಚ್ ಗೆ ಸಿದ್ಧತೆ ನಡೆದಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ರಿವಿಲ್ ಮಾಡುವುದಾಗಿ ಸ್ವತಃ ಗಣೇಶ್ ಅವರೇ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ‘ನವ ಸಂವತ್ಸರ ಯುಗಾದಿಯಂದು ಹೊಸ ಚಿತ್ರದ ಟೈಟಲ್ ಲಾಂಚ್. ನಾನು, ಪ್ರೀತಮ್ ಗುಬ್ಬಿ ಮುಂಗಾರು ಮಳೆಯಿಂದ ಸಿನಿ ಪಯಣದಲ್ಲಿ ಜೊತೆಯಾದವರು. ನಮ್ಮ ಜೋಡಿಯ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ನೋಡಿ ತಾವು ಹರಿಸಿದ್ದೀರಿ. ಈಗ ಶ್ರೀವಾರಿ ಟಾಕೀಸ್ ನೊಂದಿಗೆ ಮತ್ತೊಂದು ಹೊಸ ಕನಸಿನ ಪಯಣ ಪ್ರಾರಂಭ. ಹರೆಯದ ಹೃದಯಗಳೇ ಹರಸಿ’ ಎಂದು ಗಣೇಶ್ ಹೊಸ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.

    ಗಣೇಶ್ ಅವರೇ ಹೇಳಿಕೊಂಡಂತೆ ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಸ್ನೇಹಿತರು. ಆರಂಭದ ದಿನಗಳಲ್ಲಿ ಒಟ್ಟಿಗೆ ಒಂದೇ ರೂಮ್ ನಲ್ಲಿ ಕಾಲಕಳೆದವರು. ಗಣೇಶ್ ಅವರ ಮುಂಗಾರು ಮಳೆ ಚಿತ್ರಕ್ಕೆ ಪ್ರೀತಮ್ ಕಥೆ ಬರೆದದ್ದು. ಅಲ್ಲದೇ ಗಣೇಶ್ ಜತೆಗೆ ಈವರೆಗೂ ಮೂರು ಸಿನಿಮಾಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗೆಳೆಯನಿಗಾಗಿಯೇ ಗಣೇಶ್ ಮಳೆಯಲಿ ಜೊತೆಯಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಗಣೇಶ್ ಮತ್ತು ಪ್ರೀತಮ್ ಕಾಂಬಿನೇಷನ್ ನ ‘99’ ಸಿನಿಮಾದ ನಂತರ ಈ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ಈ ಕಾಂಬಿನೇಷನ್ ನಲ್ಲಿ ಈವರೆಗೂ ಲವ್ ಸ್ಟೋರಿಗಳನ್ನೇ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲೂ ಪ್ರೇಮಕಥೆಯೇ ಇರಲಿದೆ ಎನ್ನಲಾಗುತ್ತಿದೆ. ಏಪ್ರಿಲ್ 2 ರಂದು ಕೆಲವು ಸುದ್ದಿಗಳು ಹೊರ ಬೀಳಲಿವೆ.

  • ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಜಗ್ಗೇಶ್ ಮತ್ತು ನಿರ್ದೇಶಕ ಮಠದ ಗುರುಪ್ರಸಾದ್ ಕಾಂಬಿನೇಷನ್ ನ ಎರಡೂ ಚಿತ್ರಗಳು ಸೂಪರ್ ಹಿಟ್. ಇದೀಗ ಮೂರನೇ ಸಿನಿಮಾದಲ್ಲೂ ಈ ಜೋಡಿ ಒಂದಾಗಿದೆ. ಈ ನಡುವೆ ಗುರು ಪ್ರಸಾದ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ‘ಎದ್ದೇಳು ಮಂಜುನಾಥ 2’ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಹಿರಣ್ಯ ಸಿನಿಮಾದ ಸ್ಪೆಷಲ್ ಪಾತ್ರದಲ್ಲಿ ಬಿಗ್ ಬಾಸ್ ದಿವ್ಯಾ

    ಹಲವು ವರ್ಷಗಳ ಹಿಂದೆ ತೆರೆ ಕಂಡ ‘ಎದ್ದೇಳು ಮಂಜುನಾಥ’ ಸಿನಿಮಾ ನಕ್ಕು ನಗಿಸಿ, ಒಂದೊಳ್ಳೆ ಸಂದೇಶವನ್ನು ನೀಡಿತ್ತು. ಈ ಸಿನಿಮಾದಲ್ಲಿ ಮಂಜುನಾಥ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದರು. ಮಂಜುನಾಥನಾಗಿ ಸಾಕಷ್ಟು ಮನರಂಜನೆ ನೀಡಿದ್ದರು. ಈಗ ಮಂಜುನಾಥ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾನೆ. ಆದರೆ, ಆ ಪಾತ್ರವನ್ನು ಜಗ್ಗೇಶ್ ಮಾಡುತ್ತಿಲ್ಲ. ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ರಾಘವೇಂದ್ರ ಸ್ಟೋರ್ಸ್ : ಹೋಟೆಲ್ ಮಾಲಿಕನಾದ ಜಗ್ಗೇಶ್

    ಮಂಜುನಾಥ ಅಂದರೆ ಜಗ್ಗೇಶ್, ಜಗ್ಗೇಶ್ ಅಂದರೆ ಮಂಜುನಾಥ ಎನ್ನುವಷ್ಟರ ಮಟ್ಟಿಗೆ ಆ ಪಾತ್ರವನ್ನು ಜಗ್ಗೇಶ್ ಪೋಷಿಸಿದ್ದರು. ಇದೀಗ ಬರುತ್ತಿರುವ ಎದ್ದೇಳು ಮಂಜುನಾಥ 2 ಸಿನಿಮಾದಲ್ಲಿ ಆ ಪಾತ್ರವನ್ನು ಸ್ವತಃ ನಿರ್ದೇಶಕ ಗುರು ಪ್ರಸಾದ್ ನಿರ್ವಹಿಸುತ್ತಿದ್ದಾರೆ. ಹಾಗಂತ ಎದ್ದೇಳು ಮಂಜುನಾಥ ಸಿನಿಮಾದ ಮುಂದುವರೆಕೆಯ ಸಿನಿಮಾ ಇದಲ್ಲ ಎಂದಿದ್ದಾರೆ ನಿರ್ದೇಶಕ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಗುರುಪ್ರಸಾದ್ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಸಿನಿಮಾದ ಸಂದರ್ಭದಲ್ಲಿ ಥಿಯೇಟರ್ ಮುಂದೆ ತಮ್ಮದೇ ಕಟೌಟ್ ಹಾಕಿ, ಸಿನಿಮಾದ ನಿಜವಾದ ಹೀರೋ ನಿರ್ದೇಶಕ ಎಂದೇ ಎದೆಯುಬ್ಬಿಸಿ ಹೇಳಿದ್ದರು. ಆದರೆ, ಈ ಬಾರಿ ನಿರ್ದೇಶನದ ಜತೆಗೆ ನಾಯಕನಾಗಿಯೂ ಅವರು ಪ್ರೇಕ್ಷಕರ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಈ ಸಿನಿಮಾ ಕೂಡ ಸೋಂಬೇರಿಯೊಬ್ಬನ ಆತ್ಮಕಥೆಯನ್ನು ಬಿಚ್ಚಿಡಲಿದೆಯಂತೆ. ಜತೆಗೆ ಗುರು ಪ್ರಸಾದ್ ಜೀವನದಲ್ಲಿ ಕಂಡುಂಡ ಅನುಭವವನ್ನು ಸಿನಿಮಾಗಾಗಿ ಅಳವಡಿಸಿದ್ದಾರಂತೆ. ಈಗಾಗಲೇ ಶೂಟಿಂಗ್ ಕೂಡ ಮುಗಿದಿದೆ. ತೆರೆಗೆ ಯಾವಾಗ ಬರತ್ತೋ ಕಾದು ನೋಡಬೇಕು.

  • ಶಿವಣ್ಣ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ: ದರ್ಶನ್

    ಶಿವಣ್ಣ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ: ದರ್ಶನ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಈಗ ಗಾಂಧಿ ನಗರದಲ್ಲಿ ಸಖತ್ ಚರ್ಚೆ ಆಗುತ್ತಿದ್ದು ಇಂದು ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ನವ ನಟ ಧ್ರುವನ್ ಹಾಗೂ ಪ್ರಿಯಾ ವಾರಿಯರ್ ನಟನೆ ಇನ್ನೂ ಹೆಸರಿಡದ ಸಿನಿಮಾ ಪೂಜೆಗೆ ಇವರಿಬ್ಬರೂ ಒಟ್ಟಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಣ್ಣ, ಒಳ್ಳೆ ಕಥೆ ಸಿಕ್ಕರೆ ಖಂಡಿತಾ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.

    ನಾನು ದರ್ಶನ್ ಯಾವಗಲೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇವೆ. ಸಿನಿಮಾ ಮಾಡಿದರೆ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು. ಆ ರೀತಿಯ ಕಥೆ ಬಂದರೆ ಖಂಡಿತಾ ಇಬ್ಬರು ಒಟ್ಟಿಗೆ ಮಾಡುತ್ತೇವೆ ಎಂದು ಹೇಳಿದರು.

    ಈ ವೇಳೆ ಶಿವಣ್ಣನ ಜೊತೆಯಲ್ಲೇ ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಶಿವಣ್ಣ ಸೀನಿಯರ್ ಅವರು ಲಾಂಗ್ ಹಿಡಿದರೆ ಮುಂದೆ ನಿಂತರೆ ನಾನು ಅವರ ಹಿಂದೆ ನಿಲ್ಲುತ್ತೇನೆ. ಇನ್ನೊಂದು ಹೇಳಬೇಕು ಎಂದರೆ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡೋ ಡೈರೆಕ್ಟರ್ ಯಾರೂ ಇಲ್ಲ. ಈ ರೀತಿಯ ಡೈರೆಕ್ಟರ್ ಇದ್ದರೆ ಅವರು ಕಥೆ ಮಾಡಿಕೊಂಡು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

    ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ಸ್‍ ಗಳ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿವಣ್ಣ, ಈ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ಮಫ್ತಿ ಸಿನಿಮಾದಲ್ಲಿ ನಟಿಸಿದ್ದರು. ನಂತರ ಜೋಗಿ ಪ್ರೇಮ್ ನಿರ್ದೇಶನ ದಿ ವಿಲನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ನಟಿಸಿದ್ದರು.

    ದರ್ಶನ್ ಕೂಡ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಈ ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.