Tag: ಡೈರಿ ಪ್ರಕರಣ

  • ಅಧಿಕೃತ ದಾಖಲೆಗಳಿದ್ರೆ ಬನ್ನಿ: ‘ಕೈ’ ಪಡೆಗೆ ಆಯನೂರು ಮಂಜುನಾಥ್ ಸವಾಲ್

    ಅಧಿಕೃತ ದಾಖಲೆಗಳಿದ್ರೆ ಬನ್ನಿ: ‘ಕೈ’ ಪಡೆಗೆ ಆಯನೂರು ಮಂಜುನಾಥ್ ಸವಾಲ್

    ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮಾಡುತ್ತಿರುವ ಡೈರಿ ಆರೋಪದ ಕುರಿತು ನಿಮ್ಮ ಬಳಿ ಅಧಿಕೃತ ದಾಖಲೆಗಳು ಇದ್ದರೆ ಮಾತನಾಡಿ, ಇಲ್ಲವಾದರೇ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕ ಆಯನೂರು ಮಂಜುನಾಥ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಇಂದು ಬಿಎಸ್‍ವೈ ಡೈರಿ ಪ್ರಕರಣ ಬಗ್ಗೆ ಸುದ್ದಿಗೋಷ್ಠಿ ಮಾಡಿದ ಅವರು, ಅಧಿಕೃತ ದಾಖಲೆಗಳು ಇದ್ದರೆ ಬನ್ನಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಮುಂಚೂಣಿಯಲ್ಲಿರುವ ಬಿಜೆಪಿಯ ಸಮರ್ಥ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಇಡೀ ರಾಷ್ಟ್ರದಲ್ಲಿ ಸೋಲುತ್ತೇವೆ ಎಂಬ ಭಯ ಅವರನ್ನು ಕಾಡತೊಡಗಿದೆ. ಅದ್ದರಿಂದಾಗಿ ಹೋರಾಟಗಾರನ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ಅಷ್ಟೇ ಅಲ್ಲದೆ, ಹಣ- ಮದುವೆ ಯಾವ ವಿಷಯವೇ ಆಗಲಿ, ಅಧಿಕೃತ ದಾಖಲೆ ಇದ್ದರೆ ಮಾತನಾಡಿ, ಇಲ್ಲದಿದ್ದರೆ ಕಟಕಟೆಗೆ ನಿಲ್ಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಎಚ್ಚರಿಕೆಯನ್ನೂ ಕೂಡ ನೀಡಿದ್ದಾರೆ.

    ಬಿಎಸ್‍ವೈ ಕೇಂದ್ರ ನಾಯಕರಿಗೆ ಕೋಟಿಗಟ್ಟಲೆ ಹಣ ನೀಡಿದ್ದಾರೆ. ಅದರ ಬಗ್ಗೆ ಬರೆದಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಡೈರಿಯನ್ನು ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಆದ್ರೆ ಬಿಜೆಪಿ ನಾಯಕರು ಬಿಎಸ್‍ವೈ ಪರ ನಿಂತು ವಿರೋಧ ಪಕ್ಷಗಳಿಗೆ ತಿರುಗೇಟು ನೀಡುತ್ತಿದ್ದಾರೆ. ಇತ್ತ ಆದಾಯ ತೆರಿಗೆ ಇಲಾಖೆಯೂ ಸಹ ಬಿಡುಗಡೆಗೊಂಡಿರುವ ದಾಖಲೆಗಳು ನಕಲಿ ಎಂದು ಸ್ಪಷ್ಟಪಡಿಸಿದೆ.

  • ದೇವೇಗೌಡರದ್ದು ಭಸ್ಮಾಸುರ ಕುಟುಂಬ, ಎಲ್ಲರ ತಲೆ ಮೇಲೆ ಕೈ ಇಡ್ತಾರೆ: ರೇಣುಕಾಚಾರ್ಯ ಟೀಕೆ

    ದೇವೇಗೌಡರದ್ದು ಭಸ್ಮಾಸುರ ಕುಟುಂಬ, ಎಲ್ಲರ ತಲೆ ಮೇಲೆ ಕೈ ಇಡ್ತಾರೆ: ರೇಣುಕಾಚಾರ್ಯ ಟೀಕೆ

    -ದಿನೇಶ್ ಗುಂಡೂರಾವ್ ರಾಜಕೀಯದಲ್ಲಿ ಬಚ್ಚಾ

    ದಾವಣಗೆರೆ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಭಸ್ಮಾಸುರ ಇದ್ದಂಗೆ, ಅವರು ಎಲ್ಲರ ತಲೆ ಮೇಲೆ ಕೈ ಇಡಲು ಹೊರಟಿದ್ದಾರೆ. ಈ ಮೂಲಕ ಕಾಂಗ್ರೆಸ್ಸನ್ನು ಸರ್ವನಾಶ ಮಾಡುತ್ತಾರೆ, ಕೊನೆಗೆ ತಾವು ನಾಶವಾಗುತ್ತಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ರೇಣುಕಾಚಾರ್ಯ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಕೈ ಕೊಟ್ರು ಅಂತಾರೆ. ಹೋಗಿ ಹೋಗಿ ರಾಕ್ಷಸರ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಉದ್ದಾರವಾಗಲ್ಲ. ರಾಜ್ಯದಲ್ಲಿ ಒಂದು ಸ್ಥಾನವನ್ನು ಕೂಡ ಜೆಡಿಎಸ್ ಗೆಲ್ಲೋಲ್ಲ. ತಾತ, ಮೊಮ್ಮಕ್ಕಳು ಹೀನಾಯವಾಗಿ ಸೋಲುತ್ತಾರೆ ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ಬಿಎಸ್‍ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ

    ಬಿಎಸ್‍ವೈ ಡೈರಿ ವಿಚಾರವಾಗಿ ಪ್ರತಿಕ್ರಿಯಿಸಿ, ದಿನೇಶ್ ಗುಂಡೂರಾವ್ ರಾಜಕೀಯದಲ್ಲಿ ಬಚ್ಚಾ. ಬಿಎಸ್‍ವೈ ಅವರ ವಯಸ್ಸಿಗಾದರೂ ಮರ್ಯಾದೆ ನೀಡಬೇಕು. ಯಡಿಯೂರಪ್ಪನವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದೀರಾ. ಇನ್ನಾದರೂ ಯಡಿಯೂರಪ್ಪನವರ ಬಗ್ಗೆ ಗೌರವದಿಂದ ಮಾತನಾಡಿ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ನಾನು ಕೋಟಿನೇ ನೋಡಿಲ್ಲ. ಬರೀ ಲಕ್ಷ ನೋಡಿದ್ದೇನೆ. ಬಹುಕೋಟಿ ಹಗರಣ ಮಾಡಿದವರಿಗೆ ಕೋಟಿ ಬೆಲೆ ಗೊತ್ತಿಲ್ವಾ? ಹೈ ಕಮಾಂಡ್‍ಗೆ ಕಪ್ಪ ಕೊಡೋದು ಕಾಂಗ್ರೆಸ್ ಸಂಸ್ಕೃತಿ, ನಮ್ಮದಲ್ಲಾ. ಚುನಾವಣೆ ವೇಳೆಯಲ್ಲಿ ಈ ಪ್ರಕರಣ ತೆಗೆದು ಕಾಂಗ್ರೆಸ್ ಜನರ ಕಿವಿಗೆ ಹೂವು ಇಡುತ್ತಿದ್ದಾರೆ. ಇದನ್ನು ಜನರು ನಂಬೋದಿಲ್ಲ ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.