Tag: ಡೈಮಂಡ್

  • ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರ ಪತ್ತೆ – ಭೂ ವಿಜ್ಞಾನಿಗಳ ತಂಡ ಸ್ಪಷ್ಟನೆ

    ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರ ಪತ್ತೆ – ಭೂ ವಿಜ್ಞಾನಿಗಳ ತಂಡ ಸ್ಪಷ್ಟನೆ

    ಕೋಲಾರ: ನಗರದ ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರವೂ ಇದೆ ಎಂಬ ವಂದತಿಗಳಿಗೆ ಶುಕ್ರವಾರ ಹಿರಿಯ ಭೂ ವಿಜ್ಞಾನಿಗಳ ತಂಡ ಹಾಗೂ ಅಧಿಕಾರಿಗಳ ತಂಡ ತೆರೆ ಎಳೆದಿದ್ದಾರೆ.

    ಇತ್ತೀಚೆಗೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪೆದ್ದಪಲ್ಲಿ ಗ್ರಾಮದ ಬಳಿಯ ಸರ್ವೆ ನಂ. 15 ಹಾಗೂ 17 ರಲ್ಲಿ, ಸುಮಾರು ಎರಡೂವರೆ ಎಕರೆಯಲ್ಲಿ ಬೆಲೆ ಬಾಳುವ ಖನಿಜ ಸಂಪತ್ತಿನೊಂದಿಗೆ ವಜ್ರ ಇದೆ ಎಂಬ ವದಂತಿಗಳು ಎಲ್ಲಡೆ ಹಬ್ಬಿತ್ತು. ಅದರಂತೆ ಕಳೆದ ದಿನ ಸ್ಥಳಕ್ಕೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ ನೀಡಿದ್ದರು. ಗ್ರಾಮದಲ್ಲಿರುವ ಬಂಡೆಯನ್ನ ಪರಿಶೀನೆಯನ್ನ ನಡೆಸಿ, ಇಲ್ಲಿ ಯಾವುದೇ ಖನಿಜ ಸಂಪತ್ತು ಇಲ್ಲವೆಂದು ಸ್ಪಷ್ಟ ಪಡಿಸಿದರು.

    ಹೀಗಾಗಿ ಈ ಬಂಡೆಯನ್ನ ಪೈರೋಕ್ಲಾಸಿಕ್ ರಾಕ್ ಎಂದು ಗುರುತಿಸಿ ಪ್ರವಾಸಿ ತಾಣ ಮಾಡಲು ಕೋಲಾರ ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ಇದೇ ವೇಳೆ ಪೆದ್ದಪಲ್ಲಿ ಗ್ರಾಮದ ಗಂಗಮ್ಮ ದೇವಾಲಯದ ಹಿಂಭಾಗದಲ್ಲಿ ವಿಶೇಷವಾದ ಹಾಗೂ ಅಪರೂಪವಾದ ಶಿಲಾನ್ಯಾಸಗಳ ಜೊತೆಗೆ ಭೂಸ್ಮಾರಕಗಳು ಪತ್ತೆಯಾಗಿವೆ.

    ಈ ಸ್ಮಾರಕಗಳನ್ನ ರಕ್ಷಣೆ ಮಾಡಿ ಪ್ರವಾಸೋದ್ಯಮ ಸ್ಥಳವನ್ನಾಗಿ ಮಾರ್ಪಡಿಸಿ, ಭೂಗೋಳ ಶಾಸ್ತ್ರ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನಿಗಳಿಗೆ ತರಬೇತಿ ನೀಡಲು ಈ ಸ್ಥಳ ಪ್ರಸಿದ್ಧಿ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಭೂವೈಜ್ಞಾನಿಕ ಸರ್ವೇಕ್ಷಣೆ ಅಧಿಕಾರಿಗಳು, ಕರ್ನಾಟಕ ಗಣಿ ವೈಜ್ಞಾನಿಕ ಇಲಾಖೆ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಿನ್ನಿಸ್ ರೆಕಾರ್ಡ್ ಬರೆದ ಡೈಮಂಡ್ ಲಿಪ್ ಆರ್ಟ್..!

    ಗಿನ್ನಿಸ್ ರೆಕಾರ್ಡ್ ಬರೆದ ಡೈಮಂಡ್ ಲಿಪ್ ಆರ್ಟ್..!

    – ಬರೋಬ್ಬರಿ 3.78 ಕೋಟಿ ರೂ. ವೆಚ್ಚ

    ಕ್ಯಾನ್ಬೆರಾ: ನೇಲ್ ಆರ್ಟ್, ಹೇರ್ ಆರ್ಟ್, ಐ ಆರ್ಟ್ ಹೀಗೆ ಅದೆಷ್ಟೋ ಆರ್ಟ್‍ಗಳು ಇವೆ. ಆದ್ರೆ ಆಸ್ಟ್ರೇಲಿಯಾದ ಜ್ಯುವೆಲ್ಲರಿ ಕಂಪನಿ ಬರೋಬ್ಬರಿ 3.78 ಕೋಟಿ ರೂ. ಮೌಲ್ಯದ ವಜ್ರಗಳನ್ನು ಬಳಸಿ ವಿಶ್ವದ ಅತ್ಯಂತ ದುಬಾರಿ ಲಿಪ್ ಆರ್ಟ್ ಎಂಬ ಗಿನ್ನಿಸ್ ಬುಕ್‍ನಲ್ಲಿ ರೆಕಾರ್ಡ್ ಮಾಡಿದೆ.

    ಆಸ್ಟ್ರೇಲಿಯಾದ ರೋಸೆನ್‍ಡ್ರಾಫ್ ಎಂಬ ಜ್ಯುವೆಲ್ಲರಿ ಕಂಪನಿ ಈ ಆರ್ಟ್ ತಯಾರಿಸುವ ಮೂಲಕ ಮೋಸ್ಟ್ ವ್ಯಾಲುವೆಬಲ್ ಲಿಪ್ ಆರ್ಟ್ ಎಂಬ ದಾಖಲೆ ಬರೆದಿದೆ. ಮಾಡೆಲ್ ಒಬ್ಬರ ತುಟಿ ಮೇಲೆ ಸುಮಾರು 3.78 ಕೋಟಿ ರೂ. ಮೌಲ್ಯದ ಓಟ್ಟು 126 ಡೈಮಂಡ್‍ನಿಂದ ಅಲಂಕಾರ ಮಾಡಿದೆ. ತನ್ನ 50 ವರ್ಷದ ವಾರ್ಷಿಕೋತ್ಸವಕ್ಕಾಗಿ ಕಂಪನಿ ಈ ದುಬಾರಿ ಲಿಪ್ ಆರ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

    ರೋಸನ್ ಡ್ರಾಫ್ ಡೈಮಂಡ್ ಜ್ಯುವೆಲ್ಲರಿ ಕಂಪನಿ ಆಸ್ಟ್ರೇಲಿಯಾದಲ್ಲಿ ಹೆಸರಾಂತ ಜ್ಯುವೆಲ್ಲರಿ ಕಂಪನಿಗಳಲ್ಲಿ ಒಂದಾಗಿದೆ. ಈ ಜ್ಯುವೆಲ್ಲರಿ ಕಂಪನಿ 1963ರಲ್ಲಿ ಸ್ಥಾಪನೆಯಾಗಿದೆ. ರೋಸನ್ ಡ್ರಾಫ್ ವಿಶೇಷವಾಗಿ ವಜ್ರದ ಆಭರಣಗಳನ್ನು ತಯಾರಿಸುವಲ್ಲಿ ಹೆಸರುವಾಸಿ. ಈ ಬಾರಿ ಲಿಪ್ ಆರ್ಟ್ ತಯಾರಿಕೆ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿ ಸದ್ಯ ಸುದ್ದಿಯಲ್ಲಿದೆ.

    ಮೇಕಪ್ ಆರ್ಟಿಸ್ಟ್ ಕ್ಲೇರ್ ಮ್ಯಾಕ್ ಎಂಬವರು ಈ ಲಿಪ್ ಆರ್ಟ್ ಡಿಸೈನ್ ಮಾಡಿದ್ದು, ಮೊದಲು ಮಾಡೆಲ್ ತುಟಿಗಳ ಮೇಲೆ ಬ್ಲ್ಯಾಕ್ ಲೇಯರ್ ಲಿಪ್‍ಸ್ಟಿಕ್ ಹಾಕಿದ್ದಾರೆ. ಬಳಿಕ ಡೈಮಂಡ್ ಅಂಟಿಸಿದ್ದಾರೆ. ಈ ದುಬಾರಿ ಹಾಗೂ ಸುಂದರ ಅಲಂಕಾರ ಮಾಡಲು ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ. 22.92 ಕ್ಯಾರೆಟ್‍ನ 126 ಡೈಮಂಡ್‍ಗಳಿಂದ ಈ ಲಿಪ್ ಆರ್ಟ್ ಅಲಂಕೃತಗೊಂಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಲಿಪ್ ಆರ್ಟ್ ಸುದ್ದಿಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv