Tag: ಡೈನೋಸಾರ್

  • ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಮೆಕ್ಸಿಕೋ: ಬೀಚ್‍ನಲ್ಲಿ ಬೇಬಿ ಡೈನೋಸಾರ್‌ಗಳ ಗುಂಪು ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ಕೆಲವರು ಆಶ್ಚರ್ಯರಾಗಿದ್ದಾರೆ.

    ಡೈನೋಸಾರ್ ಮರಿಗಳು ಸಮುದ್ರದ ಬೀಚ್‍ನಲ್ಲಿ ಓಡಾಡುತ್ತಿವೆ ಎಂಬ ಶೀರ್ಷಿಕೆಯನ್ನು ನೀಡಿ ಈ ವೀಡಿಯೋ ಒಬ್ಬರು ಹಂಚಿಕೊಂಡಿದ್ದಾರೆ. ಈ ವೀಡಿಯೋ 14 ಸೆಕೆಂಡಿದ್ದು, ನೋಡಗರನ್ನು ಗೊಂದಲಕ್ಕಿಡು ಮಾಡುತ್ತದೆ. ಈಗಾಗಲೇ ಈ ವೀಡಿಯೋವನ್ನು 9.9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 47 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

    ವೀಡಿಯೋದಲ್ಲಿ ಏನಿದೆ?:
    ಉದ್ದನೆಯ ಕುತ್ತಿಗೆಯ ಡೈನೋಸಾರ್ ಜಾತಿಯ ಪ್ರಾಣಿಯೊಂದು ಸಮುದ್ರದ ಕಡೆಗೆ ಓಡುತ್ತಿವೆ. ಇದನ್ನು ಒಮ್ಮೆಲೆ ನೋಡಿದಾಗ ಡೈನೋಸಾರ್ ರೀತಿಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಡೈನೋಸಾರ್ ಅಲ್ಲ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ.

    ಅಂದ ಹಾಗೆ ಈ ವೀಡಿಯೋದಲ್ಲಿರುವ ಪ್ರಾಣಿ ಡೈನೋಸಾರ್ ಅಲ್ಲ, ಬದಲಿಗೆ ಕೋಟಿಸ್ ಎನ್ನುವ ಪ್ರಾಣಿ. ಇದರ ಬಾಲ ಉದ್ದವಿರುವುದರಿಂದ ಇದು ನೋಡಲು ಡೈನೋಸಾರ್ ಹಾಗೆ ಕಾಣುತ್ತಿದೆ. ಈ ವೀಡಿಯೋವನ್ನು ಸೂಕ್ಷ್ಮವಾಗಿ ನೋಡಿದಾಗ ಕೋತಿಸ್ ಓಡುತ್ತಿರುವುದನ್ನು ಉಲ್ಟಾ ತೋರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಕೋಟಿಸ್ ಅಮೆರಿಕ, ಮೆಕ್ಸಿಕೊ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು 33 ರಿಂದ 68 ಇಂಚು ಎತ್ತರವಿದ್ದು, 2ರಿಂದ 8 ಕ.ಜಿಯವರೆಗೆ ತೂಕವಿರಲಿದೆ. ಇದನ್ನೂ ಓದಿ: ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ

  • ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಸ್ಯಾಂಟಿಯಾಗೊ: 7.5 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿತ್ತು ಎನ್ನಲಾಗುತ್ತಿರುವ ಡೈನೋಸಾರ್ ಒಂದರ 80% ದಷ್ಟು ಅಸ್ತಿಪಂಜರ ಪತ್ತೆಯಾಗಿದೆ.

    ಚಿಲಿಯ ಪ್ಯಾಟಗೋನಿಯಾದಲ್ಲಿ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಸಂಶೋಧನೆಯ ಮಾಹಿತಿಯನ್ನು ಇತ್ತೀಚೆಗೆ ಪ್ಯಾಲಿಯಂಟಾಲಜಿಸ್ಟ್ ಗಳು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಈ ಡೈನೋಸಾರ್‌ನ ಬಾಲ ವಿಭಿನ್ನವಾಗಿದ್ದು, ಹೊಸದೊಂದು ಪ್ರಭೇಧದ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇದು ಡೈನೋಸಾರ್‌ನ ಹೊಸ ಪ್ರಭೇದ ಎಂಬುದಾಗಿ ಗುರುತಿಸಲಾಗಿದೆ. ಇದರ ಬಾಲ ಇಲ್ಲಿಯ ವರೆಗೆ ಗುರುತಿಸಲಾಗಿರುವ ಪ್ರಭೇದಗಳಿಗಿಂತಲೂ ಭಿನ್ನವಾಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ 7 ಜನರಿಗೆ ಓಮಿಕ್ರಾನ್ ಪತ್ತೆ – 12ಕ್ಕೆ ಏರಿದ ಕೇಸ್

    ಈ ಹೊಸ ಜಾತಿಯ ಡೈನೋಸಾರ್ ಅನ್ನು ಸ್ಟೆಗೌರೋಸ್ ಎಲೆಂಗಸ್ಸೆನ್ ಎಂದು ಕರೆಯಲಾಗಿದ್ದು, ಇದರ ಪಳೆಯುಳಿಕೆಯನ್ನು 2018ರಲ್ಲಿ ಕಂಡುಹಿಡಿಯಲಾಗಿತ್ತು. ಹೊಸ ರೀತಿಯ ದೇಹ ರಚನೆಯುಳ್ಳ ಡೈನೋಸಾರ್‌ನ ಪತ್ತೆಯಾಗಿರವುದು ನಿಜವಾಗಿಯೂ ಅದ್ಭುತ ಎಂದು ಸಂಶೊಧಕ ಅಲೆಗ್ಸಾಂಡರ್ ವರ್ಗಾಸ್ ತಿಳಿಸಿದ್ದಾರೆ.

    ಈ ಪ್ರಭೇದದ ಬಾಲದಲ್ಲಿ ಏಳು ಜತೆ ಆಸ್ಟಿಯೋಡರ್ಮ್‍ಗಳು ಇದ್ದು, ಇದು ಡೈನೋಸಾರ್‍ಗೆ ಆಯುಧವಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ಪತ್ತೆಯಾಗಿರುವ ಡೈನೋಸಾರ್‌ಗಳಿಗಿಂತ ಇದು ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

    ಇದು ಜರಿ ಗಿಡವನ್ನು ಹೋಲುವ ಬಾಲದ ರಚನೆ ಹೊಂದಿದ್ದು, ಅಸ್ಥಿಪಂಜರದ 80% ದಷ್ಟು ಭಾಗಗಳನ್ನು ಕಂಡುಹಿಡಿಯಲಾಗಿದೆ. ಸುಮಾರು 7 ಅಡಿ ಉದ್ದ ಹಾಗೂ 150 ಕೆಜಿ ತೂಗಬಹುದಾದ ಪ್ರಭೇದ ಸಸ್ಯಾಹಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

     

  • ಬೆಂಗ್ಳೂರಿನಲ್ಲಿದೆ ಅಪರೂಪದ ಡೈನೋಸಾರ್ ಮೊಟ್ಟೆ

    ಬೆಂಗ್ಳೂರಿನಲ್ಲಿದೆ ಅಪರೂಪದ ಡೈನೋಸಾರ್ ಮೊಟ್ಟೆ

    ಬೆಂಗಳೂರು: ಭೂಮಿಯ ಮೇಲೆ ದೈತ್ಯ ಪ್ರಾಣಿ ಡೈನೋಸಾರ್ ಇತ್ತು ಎನ್ನುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ. ಇಂದಿಗೂ ಅದರ ಬಗ್ಗೆ ಸಂಶೋಧನೆ ಮುಂದುವರೆಯುತ್ತಾಲೇ ಇದೆ. ಆದರೆ ಅತಿ ಅಪರೂಪದ ಡೈನೋಸಾರ್ ಮೊಟ್ಟೆ ಬೆಂಗಳೂರಿನಲ್ಲಿ ಇರುವುದು ವಿಶೇಷ.

    ಹೌದು. ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್ ಅವರು ಈ ಡೈನೋಸಾರ್ ಮೊಟ್ಟೆಯನ್ನು ತಮ್ಮ ಸಂಶೋಧನೆಗಾಗಿ ತಂದಿಟ್ಟುಕೊಂಡಿದ್ದಾರೆ. 65 ದಶಲಕ್ಷ ವರ್ಷದ ಹಿಂದೆ ಜ್ವಾಲಮುಖಿ ಸ್ಪೋಟದಿಂದ ಕತ್ತಲು ಮತ್ತು ಶೀತಲ ವಾತಾವರಣ ನಿರ್ಮಾಣವಾಗಿತ್ತು. ಆಗ ಬಂದ ಕಪ್ಪು ಹೊಗೆಯಿಂದ ಭೂಮಿಯ ಮೇಲಿದ್ದ ಅಪರೂಪದ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದ್ದವು ಎನ್ನಲಾಗುತ್ತದೆ. ಬಹುತೇಕ ಜೀವಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಿತ್ತಂತೆ, ಆಗ ಈ ಅಪರೂಪದ ಡೈನೋಸಾರ್ ಗುಜರಾತ್ ಭಾಗಕ್ಕೆ ಬಂದಿದ್ದು, ಅಲ್ಲಿ 22 ಮೊಟ್ಟೆ ಇಟ್ಟಿತ್ತು ಎನ್ನಲಾಗಿದೆ.

    ಆ ಬಳಿಕ ಈ ಪ್ರದೇಶದಲ್ಲಿ ಪ್ರವಾಹ ಬಂದು ಈ ಮೊಟ್ಟೆಯೆಲ್ಲಾ ಭೂಮಿಯ ಒಳಗೆ ಹುಗಿದು ಹೋಗಿತ್ತು. ಈ ವಿಶೇಷ ಮೊಟ್ಟೆಯನ್ನು ಸಂಶೋಧನೆಗಾಗಿ ವಿಜ್ಞಾನಿಗಳು ಹುಡುಕಿ ತಂದಿದ್ದರು. ಅದರಲ್ಲಿ ಒಂದು ಮೊಟ್ಟೆಯನ್ನು ಪ್ರಕಾಶ್ ಅವರು ತಂದು ಸಂಶೋಧನೆಗೆ ಬಳಕೆ ಮಾಡುತ್ತಿದ್ದಾರೆ. ಕಾಲಂತಾರದಲ್ಲಿ ಈ ಡೈನೋಸಾರ್ ಮೊಟ್ಟೆ ಕಲ್ಲಿನ ರೂಪಕ್ಕೆ ಬದಲಾಗಿರೋದು ವಿಶೇಷವಾಗಿದೆ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.