Tag: ಡೇವಿಡ್‌ ಧವನ್‌

  • ಚಿತ್ರೀಕರಣದ ವೇಳೆ ವರುಣ್ ಧವನ್ ಪಕ್ಕೆಲುಬಿಗೆ ಪೆಟ್ಟು

    ಚಿತ್ರೀಕರಣದ ವೇಳೆ ವರುಣ್ ಧವನ್ ಪಕ್ಕೆಲುಬಿಗೆ ಪೆಟ್ಟು

    ಬಾಲಿವುಡ್ ನಟ ವರುಣ್ ಧವನ್‌ಗೆ (Varun Dhawan) ಚಿತ್ರೀಕರಣದ ವೇಳೆ, ಪಕ್ಕೆಲುಬಿಗೆ (Rib Injury) ಪೆಟ್ಟಾಗಿದೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರ ಕೇಳಿ ವರುಣ್ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ:ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

    ಮೂಲಗಳ ಪ್ರಕಾರ, ಡೇವಿಡ್ ಧವನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮೃಣಾಲ್ ಠಾಕೂರ್‌ಗೆ ನಾಯಕನಾಗಿ ವರುಣ್ ಧವನ್ ನಟಿಸುತ್ತಿದ್ದರು. ಈ ಸಿನಿಮಾದ ಚಿತ್ರೀಕರಣದ ವೇಳೆ, ವರುಣ್ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಕೂಡಲೇ ನಟನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    ಸದ್ಯ ಈ ಸಿನಿಮಾದ ಮುಂದಿನ ಶೆಡ್ಯೂಲ್ ನವೆಂಬರ್‌ಗೆ ಮುಂದೂಡಲಾಗಿದೆ. ಇನ್ನೂ ಪುತ್ರ ವರುಣ್‌ಗೆ ಡೇವಿಡ್ 4ನೇ ಬಾರಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.