Tag: ಡೇನಿಯಲ್ ವೇಬರ್

  • ಸುಖ ಸಂಸಾರಕ್ಕೆ ಪಂಚಸೂತ್ರ ನೀಡಿದ ಸನ್ನಿ ಲಿಯೋನ್

    ಸುಖ ಸಂಸಾರಕ್ಕೆ ಪಂಚಸೂತ್ರ ನೀಡಿದ ಸನ್ನಿ ಲಿಯೋನ್

    ಮುಂಬೈ: ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಸುಖ ಸಂಸಾರಕ್ಕೆ ಪಂಚ ಸೂತ್ರಗಳನ್ನ ಡ್ಯಾನ್ಸ್ ಮೂಲಕ ನೀಡಿದ್ದಾರೆ. ಸನ್ನಿ ಲಿಯೋನ್ ಪಂಚಸೂತ್ರದ ಡ್ಯಾನ್ಸ್ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಗೆ ಇಷ್ಟವಾಗ್ತಿದೆ.

    ಸನ್ನಿ ಲಿಯೋನ್ ಮತ್ತು ಡೇನಿಯಲ್ ವೇಬರ್ ಮದುವೆಯಾಗಿ 10 ವರ್ಷಗಳಾಗಿದ್ದು, ದಂಪತಿ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಪತಿ ಜೊತೆಗಿನ ಡ್ಯಾನ್ಸ್ ವೀಡಿಯೋವನ್ನ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ತಮ್ಮ ವೈವಾಹಿಕ ಜೀವನದ ಗುಟ್ಟನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡು, ನೀವು ಪಾಲಿಸಿ ಅಂತ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

    ಸನ್ನಿ ಪಂಚಸೂತ್ರ:
    1. ಇಬ್ಬರ ಮಧ್ಯೆ ಒಳ್ಳೆಯ ಮಾತುಕತೆ ಆಗ್ತಿರಬೇಕು.
    2. ಜೊತೆಯಾಗಿ ಡೇಟ್ ನೈಟ್ ಪ್ಲಾನ್ ಮಾಡಬೇಕು.
    3. ಇಬ್ಬರು ಒಟ್ಟಿಗೆ ಅಡುಗೆ ಮಾಡಿ.
    4. ಒಬ್ಬರಿಗೊಬ್ಬರು ನಗಿಸುತ್ತಿರಬೇಕು.
    5. ಒಬ್ಬರು ಮತ್ತೊಬ್ಬರನ್ನು ಹೊಗಳುತ್ತಿರಬೇಕು.

    2011ರಲ್ಲಿ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೇಬರ್ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಮೂರು ಮಕ್ಕಳಿವೆ. ಜಿಸ್ಮ್-2 ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸನ್ನಿ ಲಿಯೋನ್ ಶಾರೂಖ್ ಖಾನ್ ಸೇರಿದಂತೆ ದೊಡ್ಡ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಜೊತೆಗೂ ಸಾಮಾಜಿಕ ಕೆಲಸಗಳಲ್ಲಿಯೂ ಸನ್ನಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

  • ಬರ್ತ್ ಡೇ ಸಂಭ್ರಮದಲ್ಲಿ ಮಾದಕ ಚೆಲುವೆ- ಸನ್ನಿ ಇಂದಿಗೂ, ಎಂದೆಂದಿಗೂ ಸೆಕ್ಸಿ ಎಂದ ಪತಿ

    ಬರ್ತ್ ಡೇ ಸಂಭ್ರಮದಲ್ಲಿ ಮಾದಕ ಚೆಲುವೆ- ಸನ್ನಿ ಇಂದಿಗೂ, ಎಂದೆಂದಿಗೂ ಸೆಕ್ಸಿ ಎಂದ ಪತಿ

    -ಸನ್ನಿ ಬಗ್ಗೆ ನಿಮಗೆ ಗೊತ್ತಿರದ 12 ಸಂಗತಿಗಳು ಇಲ್ಲಿವೆ

    ಮುಂಬೈ: ಬಾಲಿವುಡ್ ಮಾದಕ ಚೆಲುವೆ, ಲೈಲಾ ಸನ್ನಿ ಲಿಯೋನ್ ಇಂದು ತಮ್ಮ 38ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. 2012ರಲ್ಲಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸನ್ನಿ ತಮ್ಮ ಮೋಹಕತೆಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟಿರುವ ಸನ್ನಿ ಲಿಯೋನ್ ಗೆ ಪತಿ ಡೇನಿಯಲ್ ವೇಬರ್, ಇಂದು ಹಾಗೂ ಎಂದೆಂದಿಗೂ ನೀನೇ ಸೆಕ್ಸಿ ಮಹಿಳೆ ಎಂದು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಸನ್ನಿ ಲಿಯೋನ್ ಕೆನಡದ ಒಂಟೋರಿಯಾದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ್ದು, ಮೂಲ ಹೆಸರು ಕರಣ್‍ಜಿತ್ ಕೌರ್ ವೋಹ್ರಾ. ಇವರು ಪೂಜಾ ಭಟ್ ನಿರ್ಮಾಣದ ‘ಜಿಸ್ಮ್-2’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅದಕ್ಕೂ ಮುಂಚೆ ಭಾರತದ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ತಮ್ಮ ಚಿತ್ರ ಬಿಡುಗಡೆಗೆ ಮುನ್ನವೇ ಸಿನಿ ಅಂಗಳದಲ್ಲಿ ಸದ್ದು ಮಾಡಿದ ಮೋಹಕ ಬೆಡಗಿ ಸನ್ನಿ ಲಿಯೋನ್.

    ರೊಮ್ಯಾಂಟಿಕ್ ಪೋಸ್ಟ್: ಪತಿ ಡೇನಿಯಲ್ ವೇಬರ್ ತಮ್ಮಿಬ್ಬರ ರೊಮ್ಯಾಂಟಿಕ್ ಫೋಟೋವನ್ನು ಇನ್ಸ್ ಸ್ಟಾದಲ್ಲಿ ಅಪ್ಲೋಡ್ ಮಾಡಿ, ನಿನ್ನ ಬಗ್ಗೆ ಈ ಪೋಸ್ಟ್ ನಲ್ಲಿ ಕೇವಲ ನಾಲ್ಕು ಪದಗಳಿಂದ ತಿಳಿಸಲು ಸಾಧ್ಯವಿಲ್ಲ. ನಾನು ನೋಡಿದವರಲ್ಲಿ ಅತ್ಯಂತ ಕರುಣಾ ಹೃದಯಿ ಮಹಿಳೆ ನೀನು. ಬೇರೆಯವರು ನಿನ್ನ ಬಗ್ಗೆ ತಿಳಿದುಕೊಂಡಿದ್ದಕ್ಕಿಂತ ಹೆಚ್ಚು ನಾನು ನಿನ್ನನ್ನು ಅರ್ಥ ಮಾಡಿಕೊಂಡಿದ್ದೇನೆ. ನಿನ್ನೊಳಗಿನ ನಂಬಿಕೆ, ಆತ್ಮಸ್ಥೈರ್ಯ ಎಲ್ಲವನ್ನೂ ನಾನು ಗಮನಿಸಿದ್ದೇನೆ. ಜೀವನದ ಪಯಣದಲ್ಲಿ ನಾವಿಬ್ಬರು ಆಯ್ಕೆ ಮಾಡಿಕೊಂಡು ಸುಂದರ ಪ್ರಯಾಣದಲ್ಲಿ ನಾವಿದ್ದೇವೆ.ನಾನು ಕಂಡಂತೆ ಭೂ ಲೋಕದ ಸುಂದರಿಯಾದ ನಿನಗೆ ತಾಯಂದಿರ ದಿನ ಮತ್ತು ಹುಟ್ಟು ಹಬ್ಬದ ಶುಭಾಶಯಗಳು. ಇಂದಿಗೂ ನೀನು ಸೆಕ್ಸಿಯಾಗಿದ್ದು, ಮುಂದೆಯೂ ಎವರ್ ಗ್ರೀನ್ ಚೆಲುವೆ ನೀನು ಎಂದು ಬರೆದುಕೊಳ್ಳುವ ಮೂಲಕ ಪತ್ನಿಯನ್ನು ಬಣ್ಣಿಸಿದ್ದಾರೆ. ಸನ್ನಿ ಲಿಯೋನ್ ಇದೀಗ ಮೂರು ಮಕ್ಕಳ (ಬೇಬಿ ನಿಶಾ, ನೊಹಾ, ಅಶ್ ಹರ್) ತಾಯಿಯಾಗಿದ್ದಾರೆ.

    https://www.instagram.com/p/BxXGr0eHPqk/

    ಸನ್ನಿ ಲಿಯೋನ್ ಬಗ್ಗೆ ನಿಮಗೆ ಗೊತ್ತಿರದ 12 ವಿಚಾರಗಳು
    1. ಸನ್ನಿ ಲಿಯೋನ್ 2001ರ ಮಾರ್ಚ್‍ನಲ್ಲಿ ಅಮೆರಿಕದ ಪೆಂಟ್‍ಹೌಸ್ ಮ್ಯಾಗಜೀನ್‍ನ ಪೆಂಟ್‍ಹೌಸ್ ಪೆಟ್ ಆಫ್ ದಿ ಮಂತ್ ಆಗಿದ್ರು. 2003ರಲ್ಲಿ ಪೆಂಟ್‍ಹೌಸ್ ಪೆಟ್ ಆಫ್ ದಿ ಇಯರ್ ಆಗಿದ್ದಾರೆ.
    2. ಸನ್ನಿ ಲಿಯೋನ್‍ಗೆ ಊಟವೆಂದ್ರೆ ಬಲು ಇಷ್ಟ. ಹಬೆಯಲ್ಲಿ ಬೇಯಿಸಿದ ಲೈಮ್ ಫಿಶ್ ಸನ್ನಿಯ ಆಲ್ ಟೈಮ್ ಫೇವರೆಟ್ ಫುಡ್. ದೆಹಲಿಯ ಗಲ್ಲಿಗಳಲ್ಲಿ ಮಾರುವ ಕರಿದ ತಿನಿಸು, ಗೋಲ್‍ಗಪ್ಪಾ ಮತ್ತು ದಹಿ ಚಾಟ್ಸ್, ಪರಾಟಾ ಹಾಗೂ ಚಾಕಲೇಟ್ ಸನ್ನಿಗೆ ಬಲು ಇಷ್ಟವಾದ ತಿನಿಸುಗಳು.

    3. ಬಿಬಿಸಿಯ 2016ನೇ ವರ್ಷದ ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರಾಗಿದ್ದರು.
    4. ಕ್ಯಾನ್ಸರ್ ರೋಗಿಗಳ ಚಾರಿಟಿಗಳಿಗೆ ಸನ್ನಿ ಧನಸಹಾಯ ಮಾಡ್ತಾರೆ ಹಾಗೂ ಪ್ರಾಣಿ ಹಕ್ಕುಗಳು ಹೋರಾಟಗಾರ್ತಿಯೂ ಆಗಿದ್ದಾರೆ.
    5. ನರ್ಸಿಂಗ್ ಓದುತ್ತಿದ್ದ ಸನ್ನಿ ಪಾರ್ಟ್ ಟೈಮ್‍ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ಗೆಳತಿಯ ಸಲಹೆಯ ಮೇರೆಗೆ ಮಾಡೆಲಿಂಗ್ ಮಾಡಲಾರಂಭಿಸಿದ ಸನ್ನಿ ಅದರಲ್ಲೂ ಯಶಸ್ಸು ಗಳಿಸಿದ್ದಾರೆ. ಮುಂದೆ ಪೆಂಟಾಹೌಸ್ ಮ್ಯಾಗಜಿನ್ ಕಡೆಗೆ ಹೋದ್ರು. ಈ ಮ್ಯಾಗಜೀನ್‍ನ ನಿರ್ಮಾತೃ ಸನ್ನಿಗೆ ‘ಲಿಯೋನ್’ ಎಂದು ತನ್ನ ಹೆಸರಿನ ಜೊತೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
    6. 2016ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ತನ್ನದೇ ಸ್ವಂತ ಆ್ಯಪ್ ಲಾಂಚ್ ಮಾಡಿದ ಮೊದಲ ಸೆಲೆಬ್ರೆಟಿ ಎಂಬ ಹೆಗ್ಗಳಿಕೆ ಸನ್ನಿ ಲಿಯೋನ್‍ಗಿದೆ.

    7. ಸನ್ನಿ ತಾನು ತುಂಬಾ ನಾಚಿಕೆ ಸ್ವಭಾವದವಳು ಅಂತರ್ಮುಖಿ ಅನ್ನೋ ಸಂಗತಿಯನ್ನ ಹೇಳಿಕೊಂಡಿದ್ದರು. 2016ರಲ್ಲಿ ರಯೀಸ್ ಚಿತ್ರದ ಪ್ರಮೋಶನ್ ವೇಳೆ ಎಲ್ಲರೊಂದಿಗೆ ಸ್ನೇಹದಿಂದ ಮಾತನಾಡೋದನ್ನ ಕಲಿತೆ ಎಂಬುದನ್ನ ಬಹಿರಂಗಪಡಿಸಿದ್ದರು.
    8. ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮಿರ್ ಖಾನ್ ಅವರೊಂದಿಗೆ ನಟಿಸುವ ಆಸೆಯನ್ನು ಸನ್ನಿ ವ್ಯಕ್ತಪಡಿಸಿದ್ದರು. ಆದರೆ ಇದುವರೆಗೂ ಸನ್ನಿಗೆ ಅಮಿರ್ ಜೊತೆ ನಟಿಸಲು ಅವಕಾಶ ಸಿಕ್ಕಿಲ್ಲ.
    9. 2009ರ ಜನವರಿ 20ರಂದು ಸನ್ನಿ ಫಿಲಂ ಮೇಕರ್ ಡೇನಿಯಲ್ ವೇಬರ್ ಅವರೊಂದಿಗೆ ಸಿಖ್ ಸಂಪ್ರದಾಯದಂತೆ ಮದುವೆ ಆಗುವುದರೊಂದಿಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ಡೇನಿಯಲ್ ತಮ್ಮ ಪತ್ನಿಯನ್ನು `ಬೇಬಿ’ ಎಂದು, ಸನ್ನಿ ತಮ್ಮ ಪತಿಯನ್ನು ‘ಡಾಲಿ’ ಎಂದು ಪ್ರೀತಿಯಿಂದ ಕರೆಯುತ್ತಾರಂತೆ.

    10. ಟೋರೆಂಟೂ ಮೂಲದ ನಿರ್ದೇಶಕ ದಿಲೀಪ್ ಮೆಹ್ತಾ ಸನ್ನಿ ಬಗ್ಗೆ ಸಾಕ್ಷ್ಯಚಿತ್ರವೊಂದನ್ನ ತಯಾರಿಸಿದ್ದು, ಇದು 2016ರಲ್ಲಿ ಟೊರಾಂಟೋ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ನಲ್ಲಿ ಪ್ರದರ್ಶನಗೊಂಡಿತ್ತು. ಆದರೆ ಇದನ್ನು ಭಾರತದಲ್ಲಿ ರಿಲೀಸ್ ಮಾಡುವುದು ಸನ್ನಿಗೆ ಇಷ್ಟವಿಲ್ಲ.
    11. ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಬಗ್ಗೆ ಪ್ರತಿದಿನ ಸಾಕಷ್ಟು ಟ್ರಾಲ್‍ಗಳು ಹರಿದಾಡುತ್ತವೆ. ಇದರಿಂದ ಮುಕ್ತಿ ಹೊಂದಲು ಸನ್ನಿಯ ಬಳಿ ಒಂದು ಮಂತ್ರವಿದೆ- ಅದೇ ಅವರನ್ನು ಬ್ಲಾಕ್ ಮಾಡುವುದು.
    12. ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಲಿಯೋನ್ ಬಾಲಿವುಡ್ ಸ್ಟಾರ್ ಗಳನ್ನು ಫಾಲೋ ಮಾಡ್ತಾರೆ. ಮಾಧುರಿ ದೀಕ್ಷಿತ್, ಆಮೀರ್ ಖಾನ್, ಸೋನಮ್ ಕಪೂರ್ ಮತ್ತು ರಣ್‍ವೀರ್ ಸಿಂಗ್ ಅಂದರೆ ಸನ್ನಿಗೆ ಇಷ್ಟ.

  • ಪತಿ ಜೊತೆ ಸೇರಿ ರಣ್‍ವೀರ್ ಗೆ ಕಣ್ಣು ಹೊಡೆದ ಸನ್ನಿ-ವಿಡಿಯೋ ನೋಡಿ

    ಪತಿ ಜೊತೆ ಸೇರಿ ರಣ್‍ವೀರ್ ಗೆ ಕಣ್ಣು ಹೊಡೆದ ಸನ್ನಿ-ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ಅಂಗಳದ ಮಾದಕ ಬೆಡಗಿ ಸನ್ನಿಲಿಯೋನ್ ಪತಿ ಡೇನಿಯಲ್ ವೇಬರ್ ಜೊತೆ ಸೇರಿ ನಟ ರಣ್‍ವೀರ್ ಸಿಂಗ್‍ಗೆ ಕಣ್ಣು ಹೊಡೆದಿದ್ದಾರೆ.

    ಒಂದು ಸಿನಿಮಾ ಅಥವಾ ಹಾಡು ಜನಪ್ರಿಯಗೊಂಡಾಗ ಅದನ್ನು ಅನುಕರಿಸುವುದು ಮತ್ತು ಡಬ್‍ಮ್ಯಾಶ್ ಮಾಡೋದು ಟ್ರೆಂಡ್. ಇತ್ತೀಚೆಗೆ ರಣ್‍ವೀರ್ ಸಿಂಗ್ ಮತ್ತ ಸಾರಾ ಅಲಿಖಾನ್ ಅಭಿನಯದ ಸಿಂಬಾ ಸಿನಿಮಾ ತೆರೆಕಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಆಂಕ್ ಮಾರೇ ಹಾಡು ಸಹ ಹಿಟ್ ಆಗಿದ್ದು, ಜನರು ಡಬ್‍ಮ್ಯಾಶ್ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಸನ್ನಿ ಲಿಯೋನ್ ಸಹ ಪತಿ ಡೇನಿಯಲ್ ವೇಬರ್ ಜೊತೆ ಈ ಹಾಡಿಗೆ ಹೆಜ್ಜೆ ಹಾಕಿ ಇನ್ಸ್ಟಾದಲ್ಲಿ ಹಾಕಿಕೊಂಡಿದ್ದಾರೆ.

    ಇನ್ಸ್ಟಾದಲ್ಲಿ 1.8 ಕೋಟಿ ಫಾಲೋವರ್ಸ್ ಆದ ಖುಷಿಯಲ್ಲಿ ಸನ್ನಿ ಹೆಜ್ಜೆ ಹಾಕುವ ಮೂಲಕ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತೋಟದಲ್ಲಿ ಸನ್ನಿ ಮತ್ತು ಡೇನಿಯಲ್ ಹೆಜ್ಜೆ ಹಾಕಿರುವ ವಿಡಿಯೋ ಇದೂವರೆಗೂ 20 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ

    ಸಿಂಬಾ ಚಿತ್ರದ ಈ ಹಾಡು ಇದೂವರೆಗೂ 32 ಕೋಟಿಗೂ ಅಧಿಕ ಬಾರಿ ವ್ಯೂ ಪಡೆದುಕೊಂಡಿದೆ. ಹಾಡು ತುಂಬಾನೇ ವಿಭಿನ್ನವಾಗಿದ್ದು, ತನಿಷ್ಕ್ ಬಗ್ಚಿ, ಮಿಕಾ, ನೇಹಾ ಕಕ್ಕರ್ ಮತ್ತು ಕುಮಾರ್ ಸಾನು ಹಾಡಿಗೆ ಧ್ವನಿ ನೀಡಿದ್ದಾರೆ. ಮೊದಲ ಬಾರಿಗೆ ಸಾರಾ ಮತ್ತು ರಣ್‍ವೀರ್ ಜೊತೆಯಾಗಿದ್ದು, ತೆರೆಯ ಮೇಲೆ ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿದ್ದು, ನೋಡುಗರು ಫಿದಾ ಆಗಿದ್ದಾರೆ.

    ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಭಿನಯದ ಎರಡನೇ ಚಿತ್ರ ಇದಾಗಿದ್ದು, ತಮ್ಮ ನಟನೆಯ ಮೂಲಕ ಬಾಲಿವುಡ್ ಅಂಗಳದಲ್ಲಿ ಭರವಸೆ ಮೂಡಿಸಿದ್ದಾರೆ. ಇದಕ್ಕೂ ಮೊದಲು ತೆರೆಕಂಡಿದ್ದ ಕೇದಾರನಾಥ್ ಸಿನಿಮಾ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

    https://www.instagram.com/p/Bs2W_JUBK9I/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರಿ ನಿಶಾಳಿಂದಾಗಿ ಸಂಭ್ರಮದಲ್ಲಿ ತೇಲಾಡುತ್ತಿರುವ ಸನ್ನಿ ಲಿಯೋನ್!

    ಪುತ್ರಿ ನಿಶಾಳಿಂದಾಗಿ ಸಂಭ್ರಮದಲ್ಲಿ ತೇಲಾಡುತ್ತಿರುವ ಸನ್ನಿ ಲಿಯೋನ್!

    ಮುಂಬೈ: ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಮೊಗದಲ್ಲಿ ಡಬಲ್ ಸಂಭ್ರಮ ನಗೆ ಮೂಡಿದೆ. ಇಂದು ಸನ್ನಿ ಲಿಯೋನ್ ಪತಿ ನಿಶಾಳನ್ನು ದತ್ತು ಪಡೆದು ಇಂದಿಗೆ ಒಂದು ವರ್ಷವಾಗಿದೆ. ಪುತ್ರಿ ನಿಶಾ ಮನೆಗೆ ಆಗಮಿಸಿದ ದಿನದಂದು ಸನ್ನಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿ, ಭಾವನಾತ್ಮಕವಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

    “ನಿನ್ನನ್ನು ನಮ್ಮ ಮನೆಗೆ ಕರೆತಂದು ಒಂದು ವರ್ಷವಾಗಿದೆ. ನೀನು ನಮ್ಮ ಬದುಕನ್ನು ಬದಲಿಸಿದೆ. ಇಂದು ನಿನ್ನ 1ನೇ ವರ್ಷದ ವಾರ್ಷಿಕೋತ್ಸವಾಗಿದ್ದು, ನೀನು ಬಂದು ವರ್ಷ ಆಯ್ತು ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನಿನ್ನ ನನ್ನ ಪರಿಚಯ ಬಹಳ ವರ್ಷದ್ದು ಎನ್ನುವ ಭಾವನೆ ನನ್ನಲ್ಲಿ ಮೂಡಿದೆ. ನೀನು ನನ್ನ ಬದುಕಿನ ಮುಖ್ಯ ಭಾಗ ಮತ್ತು ಪ್ರಪಂಚದ ಅತೀ ಸುಂದರ ಹೆಣ್ಣು ಮಗು! ಐ ಲವ್ ಯು ವೆರಿ ಮಚ್ ನಿಶಾ ಕೌರ್ ವೆಬರ್..” ಎಂದು ಸನ್ನಿ ಲಿಯೋನ್ ತಮ್ಮ ಸಂತೋಷವನ್ನು ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

    ಜುಲೈ 2017 ರಂದು ಮಹಾರಾಷ್ಟ್ರದ ಲಾತೂರ್‍ನಿಂದ ಸನ್ನಿ ಮತ್ತು ಡೇನಿಯಲ್ ಪುತ್ರಿ ನಿಶಾಳನ್ನು ದತ್ತು ಪಡೆದಿದ್ದರು. ಮೊದಲಿಗೆ ನಿಶಾಳ ಫೋಟೋ ನಮಗೆ ಸಿಕ್ಕಿದ ಕ್ಷಣ, ನಾನು ಬಹಳ ಖುಷಿಯಾಗಿದ್ದೆ. ಅಂದು ಭಾವುಕಳಾಗಿ ಬಹಳಷ್ಟು ಭಾವನೆಗಳನ್ನು ಒಟ್ಟಿಗೆ ಅನುಭವಿಸಿದೆ. ನಮ್ಮ ಬಳಿ ದತ್ತು ವಿಚಾರ ತೀರ್ಮಾನಿಸಲು ಅಕ್ಷರಶಃ ಮೂರು ವಾರಗಳ ಸಮಯವಿತ್ತು. ಸಾಮಾನ್ಯವಾಗಿ ಜನರಿಗೆ ಮಗುವಿಗೆ ಜನ್ಮ ಕೊಡಲು ಒಂಬತ್ತು ತಿಂಗಳು ಕಾಯಬೇಕು ಎಂದು ನಿಶಾ ಫೋಟೋ ಅಪ್ಲೋಡ್ ಮಾಡಿಕೊಂಡು ದತ್ತು ಪಡೆದ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು.

    ಪುತ್ರಿ ಆಗಮಿಸಿದ ದಿನದಂದೇ ಸನ್ನಿ ಲಿಯೋನ್ ಜೀವನಾಧರಿತ `ಕರಣ್‍ಜಿತ್ ಕೌರ್’ ವೆಬ್ ಸಿರೀಸ್ ಆರಂಭವಾಗಲಿದೆ. ಟೀಸರ್ ಮತ್ತು ಟ್ರೇಲರ್ ನಿಂದಲೇ ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ ವೆಬ್ ಸೀರಿಸ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    https://www.instagram.com/p/BlR-ZMAHI65/?taken-by=sunnyleone