Tag: ಡೇನಿಯಲ್ ವೆಬರ್

  • ಸನ್ನಿಗೆ ಪತಿಯಿಂದ ಸಿಕ್ತು ಸ್ಪೆಷಲ್ ಗಿಫ್ಟ್

    ಸನ್ನಿಗೆ ಪತಿಯಿಂದ ಸಿಕ್ತು ಸ್ಪೆಷಲ್ ಗಿಫ್ಟ್

    ಮುಂಬೈ: 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸನ್ನಿ ಲಿಯೋನ್‍ಗೆ ಪತಿಯಿಂದ ಚಂದದ ಡೈಮಂಡ್ ಹಾರ ಉಡುಗೊರೆಯಾಗಿ ಸಿಕ್ಕಿದೆ.

     

    ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಅತ್ಯಂತ ಸ್ವೀಟ್ ಸೆಲೆಬ್ರಿಟಿ ದಂಪತಿಗಳಾಗಿದ್ದಾರೆ. ಇವರು ಸುಖ ಸಂಸಾರ ನಿನ್ನೆ 10 ವರ್ಷ ಪೂರೈಸಿದೆ. ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಸನ್ನಿಗೆ ಪತಿ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದಾರೆ. ಈ ಕುರಿತಾಗಿ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

    ನಮ್ಮ ವಾರ್ಷಿಕೋತ್ಸವಕ್ಕಾಗಿ ನನಗೆ ವಜ್ರದ ಹಾರವನ್ನು ನೀಡಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಒಂದು ಕನಸಾಗಿದೆ. ನಾವಿಬ್ಬರು ಮದುವೆಯಾಗಿ 10 ವರ್ಷಗಳಾಗಿವೆ. ಆದರೆ ನಮ್ಮ ಜೀವನವನ್ನು ಒಟ್ಟಿಗೆ ಕಳೆಯಲಾರಂಭಿಸಿ 13 ವರ್ಷಗಳಾಗಿವೆ. ನಾವು ಯಾರ ಊಹೆಗೂ ನಿಲುಕದ ರೀತಿಯಲ್ಲಿ ಅದ್ಭುತವಾದ ಜೀವನವನ್ನು ನಡೆಸುತ್ತಿದ್ದೇವೆ. ಲವ್ ಯೂ ಎಂದು ಬರೆದುಕೊಂಡು ಪತಿ ಕೊಡಿಸಿರುವ ವಜ್ರದ ಹಾರದೊಂದಿಗೆ ಒಂದು ಸೆಲ್ಫಿ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರೀತಿಯ ಪತಿಗೆ ಸಿಹಿಯಾದ ಧನ್ಯವಾದವನ್ನು ಸೋಶಿಯಲ್ ಮೀಡಿಯಾದ ಮೂಲಕವಾಗಿ ಸನ್ನಿ ಲಿಯೋನ್ ತಿಳಿಸಿದ್ದರೆ. ಡೇನಿಯಲ್ ಉಡುಗೊರೆಯಾಗಿ ನೀಡಿದ ವಜ್ರದ ಹಾರವನ್ನು ತೋರಿಸಿರುವ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿ ವಾರ್ಷಿಕೋತ್ಸವದ ಶುಭಾಶಯವನ್ನು ಕೋರಿದ್ದಾರೆ.

  • ಮಧ್ಯರಾತ್ರಿ ಒಂಟಿ ಮಹಿಳೆಗೆ ಸಹಾಯ ಮಾಡಿದ ಪತಿಯನ್ನು ಹೊಗಳಿದ ಸನ್ನಿ

    ಮಧ್ಯರಾತ್ರಿ ಒಂಟಿ ಮಹಿಳೆಗೆ ಸಹಾಯ ಮಾಡಿದ ಪತಿಯನ್ನು ಹೊಗಳಿದ ಸನ್ನಿ

    ಮುಂಬೈ: ಬಾಲಿವುಡ್ ನಟಿ ಸನ್ನಿಲಿಯೋನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಅಂತೆಯೇ ಇದೀಗ ನಟಿ ತನ್ನ ಪತಿ ಮಾಡಿರುವ ಮಾನವೀಯ ಕೆಲಸದ ಕುರಿತು ಬರೆದುಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಹೌದು. ಸನ್ನಿ ಪತಿ ಡೇನಿಯಲ್ ವೆಬರ್ ಅವರು ಒಂಟಿ ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಚಾರವನ್ನು ಸ್ವತಃ ಸನ್ನಿ ಲಿಯೋನ್ ಅವರು ವೀಡಿಯೋ ಮೂಲಕ ಪತಿಯ ಘನ ಕಾರ್ಯವನ್ನು ಬರೆದುಕೊಂಡು ಹೆಮ್ಮೆ ವ್ಯಕ್ತಡಿಸಿದ್ದಾರೆ.

    ಮೊದಲು ಪತಿಯ ಜೊತೆಗೆ ಡೇಟಿಂಗ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಸನ್ನಿ, ನಂತರ ಮಹಿಳೆಗೆ ಸಹಾಯ ಮಾಡಿರುವ ವೀಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಪತಿ ಡೇನಿಯಲ್ ಜೊತೆ ಕ್ಯೂಟ್ ಡೇಟ್. ಇವರು ರಾತ್ರಿ ಒಂಟಿ ಮಹಿಳೆಗೆ ಟಯರ್ ಚೇಂಜ್ ಮಾಡೋಕೆ ಸಹಾಯ ಮಾಡಿದರು. ಇವರು ನಿಜವಾದ ಜಂಟಲ್‍ಮ್ಯಾನ್ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

  • ನೀನು ಶ್ರೇಷ್ಠ ತಾಯಿ, ಪತ್ನಿ, ಲವ್ವರ್ ಎಂದು ಹೆಮ್ಮೆಯಿದೆ – ಬೇಬಿ ಡಾಲ್‍ಗೆ ಪತಿ ಸ್ಪೆಷಲ್ ವಿಶ್

    ನೀನು ಶ್ರೇಷ್ಠ ತಾಯಿ, ಪತ್ನಿ, ಲವ್ವರ್ ಎಂದು ಹೆಮ್ಮೆಯಿದೆ – ಬೇಬಿ ಡಾಲ್‍ಗೆ ಪತಿ ಸ್ಪೆಷಲ್ ವಿಶ್

    ಮುಂಬೈ: ಬಾಲಿವುಡ್ ಮಾದಕ ಚೆಲುವೆ ನಟಿ ಸನ್ನಿ ಲಿಯೋನ್ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರೀತಿಯ ಪತ್ನಿಗೆ ಪತಿ ಡೇನಿಯಲ್ ವೆಬರ್ ಸ್ಪೆಷಲ್ ವಿಶ್ ಮಾಡಿದ್ದಾರೆ. ಇತ್ತ ಬೇಬಿ ಡಾಲ್‍ಗೆ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

    ಮಾಜಿ ಪೋರ್ನ್ ಸ್ಟಾರ್ ಆಗಿದ್ದರೂ ಸನ್ನಿ ತಮ್ಮ ಸಮಾಜಮುಖಿ ಕೆಲಸಗಳಿಂದ ಎಲ್ಲರ ಮನ ಗೆದ್ದಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬೇಬಿ ಡಾಲ್‍ಗೆ ಪತಿ ಡೇನಿಯಲ್ ವೆಬರ್, ಸನ್ನಿ ನೀನು ಶ್ರೇಷ್ಠ ತಾಯಿ, ಪತ್ನಿ ಹಾಗೂ ಲವ್ವರ್. ಲಕ್ಷಾಂತರ ಮಂದಿಗೆ ನೀನು ಸ್ಪೂರ್ತಿ, ರೋಲ್ ಮಾಡೆಲ್. ನಿನ್ನ ಬಗ್ಗೆ ಸಾಕಷ್ಟು ಮಂದಿ ಕೆಟ್ಟದಾಗಿ ಮಾತನಾಡಿದರೂ ನೀನು ಅಂಜಲಿಲ್ಲ. ಯಾರೇ ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ನಿನ್ನ ಜೀವನದ ಹಾದಿಯಲ್ಲಿ ನೀನು ಸಾಗುತ್ತಿರುವೆ. ನಿನ್ನ ಮೇಲೆ ನನಗೆ ಹೆಮ್ಮೆ ಇದೆ. ಐ ಲವ್ ಯು ಸೋ ಮಚ್, ಲವ್ ಯು ಬೇಬಿ ಲವ್ ಎಂದು ಬರೆದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/CAHaAIyHRN8/

    ಬಾಲಿವುಡ್‍ನಲ್ಲಿ ಸಾಕಷ್ಟು ಹಿಟ್ ಐಟಂ ಸಾಂಗ್ ಗಳಲ್ಲಿ ಮಿಂಚಿದ ಸನ್ನಿ, ಹಲವು ಸಿನಿಮಾಗಳಲ್ಲಿ ಕೂಡ ನಟಿಸಿ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ‘ಸೇಸಮ್ಮ’ ಆಗಿ ಸೊಂಟ ಬಳುಕಿಸಿದ ಸನ್ನಿ, ಬಾಲಿವುಡ್‍ನಲ್ಲಿ ಬೇಬಿ ಡಾಲ್, ಲೈಲಾ ಆಗಿ ಹೆಜ್ಜೆ ಹಾಕಿ ಪಡ್ಡೆ ಹುಡುಗರ ಹಾಟ್ ಫೆವರಟ್ ಆಗಿದ್ದಾರೆ. ನೆಚ್ಚಿನ ನಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಮನಸೋತ ಬೇಬಿ ಡಾಲ್ ವಿಡಿಯೋ ಒಂದನ್ನು ಮಾಡಿ, ನಿಮ್ಮ ಪ್ರೀತಿ ಅಬಿಮಾನಕ್ಕೆ ಧನ್ಯವಾದ. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ ಎಂದು ಹೇಳಿದ್ದಾರೆ.

    https://www.instagram.com/p/CAGyp-WDANh/

    ಹಿಂದೆ ಪೋರ್ನ್ ಸ್ಟಾರ್ ಆಗಿದ್ದ ಕಾರಣಕ್ಕೆ ಸನ್ನಿ ಬಗ್ಗೆ ಬಹಳಷ್ಟು ಮಂದಿ ಕೆಟ್ಟದಾಗಿ ಮಾತನಾಡುತ್ತಾರೆ. ಆದರೆ ಅವರು ಅದೇಷ್ಟೋ ಅನಾಥ ಮಕ್ಕಳಿಗೆ ಹೊಸ ಜೀವನ ಕಟ್ಟಿಕೊಟ್ಟಿದ್ದಾರೆ. ಬಡವರಿಗೆ ಸಾಕಷ್ಟು ಸಹಾಯ ಮಾಡಿ ನೆರವಾಗಿದ್ದಾರೆ. ಹಲವು ಚ್ಯಾರಿಟಿಗಳಿಗೆ ದೇಣಿಗೆ ನೀಡಿ ಸಹಾಯ ಮಾಡಿದ್ದಾರೆ. ಅಲ್ಲದೇ 2017ರಲ್ಲಿ ಹೆಣ್ಣು ಮಗುವೊಂದನ್ನು ದತ್ತು ಪಡೆದು ಮಾದರಿಯಾಗಿದ್ದಾರೆ. ತಮ್ಮ ಸಮಾಜಮುಖಿ ಕಾರ್ಯದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    2011ರಲ್ಲಿ ಡೇನಿಯಲ್ ಹಾಗೂ ಸನ್ನಿ ವಿವಾಹವಾಗಿದ್ದು, ಅವರಿಗೆ ನೋವಾ, ಆಶೀರ್, ನಿಶಾ ಎಂಬ ಮೂವರು ಮುದ್ದಾದ ಮಕ್ಕಳಿದ್ದಾರೆ. ಸದ್ಯ ಕೊರೊನಾ ಭೀತಿಯಿಂದ ಸನ್ನಿ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಭಾರತ ಬಿಟ್ಟು ಅಮೆರಿಕದ ಲಾಸ್ ಎಂಜಲೀಸ್‍ಗೆ ಹೋಗಿದ್ದಾರೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿರುವ ಸನ್ನಿ, ಮಕ್ಕಳ ಇಲ್ಲಿ ಸೇಫ್ ಆಗಿರುತ್ತಾರೆ ಎಂದು ಬಂದಿದ್ದೇವೆ ಅಂತ ಹೇಳಿಕೊಂಡಿದ್ದರು.

  • ಹೊಸ ಪತಿಯ ಫೋಟೋ ಶೇರ್ ಮಾಡಿಕೊಂಡ ಸನ್ನಿ

    ಹೊಸ ಪತಿಯ ಫೋಟೋ ಶೇರ್ ಮಾಡಿಕೊಂಡ ಸನ್ನಿ

    ಮುಂಬೈ: ಸನ್ನಿ ಲಿಯೋನ್ ಹೆಸರಿನಲ್ಲಿಯೇ ಮಾದಕತೆ ತುಂಬಿಕೊಂಡಿರುವ ಬಾಲಿವುಡ್‍ನ ಹಾಟ್ ನಟಿ. ಕೆಲವು ದಿನಗಳಿಂದ ಸನ್ನಿಯ ಆತ್ಮಕಥನ `ಕರಣಜೀತ್ ಕೌರ: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಸಾಕಷ್ಟು ಚರ್ಚೆಯಲ್ಲಿದೆ. ಸನ್ನಿ ಲಿಯೋನ್ ಖಾಸಗಿ ಜೀವನವನ್ನು ರಿವೀಲ್ ಮಾಡುವ ಕರಣಜೀತ್ ಕೌರ್‍ಗಾಗಿ ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ.

    ಸನ್ನಿಲಿಯೋನ್ ಜೀವನಾಧರಿತ ಕಥೆಯನ್ನು ಒಳಗೊಂಡ ವೆಬ್ ಸಿರೀಸ್ ಆರಂಭವಾಗಲಿದೆ. ಈ ವೆಬ್ ಸಿರೀಸ್‍ನಲ್ಲಿ ಸನ್ನಿ ಲಿಯೋನ್ ತಮ್ಮ ಪಾತ್ರವನ್ನು ತಾವೇ ನಟಿಸುತ್ತಿರೋದು ಮತ್ತೊಂದು ವಿಶೇಷ. ಆದ್ರೆ ಪತಿಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ? ರಿಯಲ್ ಲೈಫ್‍ನ ಸಂಗಾತಿ ಡೇನಿಯಲ್ ವೆಬರ್ ಬಣ್ಣ ಹಚ್ಚುತ್ತಾರೆ ಎಂಬ ಮಾತುಗಳು ಬಾಲಿವುಡ್‍ನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಸನ್ನಿ ಲಿಯೋನ್ ಉತ್ತರ ನೀಡಿದ್ದಾರೆ.

    ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಪಾತ್ರದಲ್ಲಿ ದಕ್ಷಿಣ ಆಫ್ರಿಕಾದ ಯುವ ನಟ ಮಾರ್ಕ್ ಬಕನರ್ ನಟಿಸೋದು ಪಕ್ಕಾ ಆಗಿದೆ. ಕರಣಜೀತ್ ಕೌರ ವೆಬ್ ಸಿರೀಸ್‍ನ ಶೂಟಿಂಗ್ ಸೆಟ್‍ನಲ್ಲಿ ಸನ್ನಿ ಲಿಯೋನ್ ತನ್ನ ರೀಲ್ ಲೈಫ್ ಪತಿಯೊಂದಿಗಿನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಸನ್ನಿ ನಿಜ ಜೀವನದಲ್ಲಿ ಡೇನಿಯಲ್ ವೆಬರ್ ಅತ್ಯಂತ ಪ್ರಮುಖ ವ್ಯಕ್ತಿ. ಸನ್ನಿಯ ವೃತ್ತಿ ಜೀವನ ಮತ್ತು ಖಾಸಗಿ ಜೀವನದಲ್ಲಿಯೂ ಮಹತ್ವದ ವ್ಯಕ್ತಿ ಡೇನಿಯಲ್ ವೆಬರ್. 7 ವರ್ಷಗಳ ಹಿಂದೆ ಸಾಂಸರಿಕ ಜೀವನಕ್ಕೆ ಕಾಲಿಟ್ಟ ಸನ್ನಿ ಮತ್ತು ಡೆನಿಯಲ್ ಅನ್ಯೋನ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಸದ್ಯ ರೊಮ್ಯಾಂಟಿಕ್ ದಂಪತಿ ಮೂರು ಮಕ್ಕಳನ್ನು ಹೊಂದಿದ್ದಾರೆ. 2017ಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದ, ಸನ್ನಿ ಈ ವರ್ಷ ಬಾಡಿಗೆ ತಾಯಿಯ ಸಹಾಯದಿಂದ ಮತ್ತೆರೆಡು ಮುದ್ದಾದ ಮಕ್ಕಳ ತಾಯಿ ಆಗಿದ್ದಾರೆ.

    https://www.instagram.com/p/BkhnpaXh1cJ/?taken-by=sunnyleone

    https://www.instagram.com/p/BkU0GbMFvkb/?taken-by=marcbuckner

    https://www.instagram.com/p/BfO4D4slcH-/?taken-by=marcbuckner

  • 7ನೇ ಮದುವೆ ವಾರ್ಷಿಕೋತ್ಸವಕ್ಕೆ ಪತಿ ಡೇನಿಯಲ್‍ಗೆ ಸಂದೇಶ ರವಾನಿಸಿದ ಸನ್ನಿ ಲಿಯೋನ್!

    7ನೇ ಮದುವೆ ವಾರ್ಷಿಕೋತ್ಸವಕ್ಕೆ ಪತಿ ಡೇನಿಯಲ್‍ಗೆ ಸಂದೇಶ ರವಾನಿಸಿದ ಸನ್ನಿ ಲಿಯೋನ್!

    ಮುಂಬೈ: ಹೆಸರಲ್ಲೆ ಮಾದಕತೆ ತುಂಬಿಕೊಂಡಿರುವ ನಟಿ ಸನ್ನಿ ಲಿಯೋನ್. ಇದೇ ಸನ್ನಿ ಲಿಯೋನ್ ಸಾಂಸರಿಕ ಜೀವನಕ್ಕೆ ಕಾಲಿರಿಸಿ 7 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಮದುವೆ ವಾರ್ಷಿಕೋತ್ಸವದಲ್ಲಿರುವ ಸನ್ನಿ ಪತಿ ಡೇನಿಯಲ್ ವೆಬರ್ ಗೆ ಭಾವನಾತ್ಮಕವಾಗಿ ಟ್ವಿಟ್ಟರ್ ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ.

    ಏನದು ಸಂದೇಶ?: ನಾವಿಬ್ಬರು ದೇವರ ಮುಂದೆ ನಮ್ಮ ಪ್ರೀತಿಯನ್ನು ವಿನಿಮಯ ಮಾಡಿಕೊಂಡು ಇಂದಿಗೆ 7 ವರ್ಷಗಳು ಕಳೆದಿವೆ. ಇಬ್ಬರಲ್ಲಿಯೂ ಅಂದಿನ ಪ್ರೀತಿ ಇಂದಿಗೂ ಹಾಗೆ ಇದೆ. ಅಂದು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೇನೋ, ಇಂದು ಆ ಪ್ರೀತಿ ಇನ್ನು ಹೆಚ್ಚಾಗಿದೆ. ಹೀಗೆ ಇಬ್ಬರು ಸಂತೋಷದಿಂದ ಜೀವನದ ಪಯಣ ಮುಂದುವರೆಸೋಣ. ಲವ್ ಯೂ ಸೋ ಮಚ್. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಡೇನಿಯಲ್ ಎಂದು ಬರೆದುಕೊಂಡಿದ್ದಾರೆ.

    ಪತ್ನಿ ಸನ್ನಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಡೇನಿಯಲ್, ಇಂದಿಗೆ ನಾವಿಬ್ಬರು ನಮ್ಮ ಪಯಣ ಆರಂಭಿಸಿ 7 ವರ್ಷಗಳು ಕಳೆದಿವೆ. ನಾನು ಫಸ್ಟ್ ಡೇ ನಿನ್ನ ಭೇಟಿಯಾದ ದಿನದಂತೆ ಎಲ್ಲ ದಿನಗಳು ಹಾಗಿರಲಿ ಅಂತಾ ಇಷ್ಟಪಡುತ್ತೇನೆ ಅಂತಾ ಬರೆದು ಸನ್ನಿಯನ್ನು ಎತ್ತಿಕೊಂಡಿರುವ ಫೋಟೋ ಹಾಕಿಕೊಂಡಿದ್ದಾರೆ.

    ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ 2017ರಲ್ಲಿ ಹೆಣ್ಣು ಮಗುವೊಂದನ್ನ ದತ್ತು ಪಡೆದಿದ್ದರು. ಈ ವರ್ಷ ಆಶೆರ್ ಸಿಂಗ್ ವೆಬರ್ ಮತ್ತು ನೋವಾ ಸಿಂಗ್ ವೆಬರ್ ಮುದ್ದಾದ ಮಕ್ಕಳಿಗೆ ಸನ್ನಿ ತಾಯಿಯಾಗಿದ್ದಾರೆ. ಇದು ನಿಜಕ್ಕೂ ದೇವರ ಇಚ್ಛೆ. ಇಷ್ಟು ಸುಂದರವಾದ ದೊಡ್ಡ ಕುಟುಂಬವನ್ನ ಹೊಂದುವ ಅವಕಾಶ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಹಾಗೂ ನಮ್ಮ ಜೀವನದಲ್ಲಿ ಈ ಮೂರು ಪವಾಡಗಳನ್ನ ಹೊಂದಿರೋದು ನಮ್ಮ ಅದೃಷ್ಟ. ಈಗ ನಮ್ಮ ಕುಟುಂಬ ಸಂಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಹೇಳಿದ್ದರು.

    ನಾವು ಡೇನಿಯಲ್ ನ ಜೀನ್ ಮತ್ತು ನನ್ನ ಜೀನ್‍ಗಳಿಂದ ಮಾಡಿದ ಅಂಡಾಣುವಿನಿಂದ ಬಾಡಿಗೆ ತಾಯ್ತನದ ಮೊರೆ ಹೋದೆವು. ಬಾಡಿಗೆ ತಾಯಿಯ ಮೂಲಕ ಆಶೆರ್ ಮತ್ತು ನೋವಾ ಜನಿಸಿದ್ದಾರೆ. ಬಾಡಿಗೆ ತಾಯ್ತನದ ಬಗ್ಗೆ ನಾವು ಹಲವು ವರ್ಷಗಳ ಹಿಂದೆಯೇ ಚಿಂತಿಸಿದ್ದೆವು. ಈಗ ಅದು ಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.

    ಏಳನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸನ್ನಿ ಮತ್ತು ವೆಬರ್ ದಂಪತಿಗೆ ಬಾಲಿವುಡ್ ಗಣ್ಯರೆಲ್ಲ ಶುಭಕೋರಿದ್ದಾರೆ.

  • ಮತ್ತಿಬ್ಬರು ಮಕ್ಕಳಿಗೆ ತಂದೆ ತಾಯಿಯಾದ ಸನ್ನಿ ಲಿಯೋನ್- ವೆಬರ್ ದಂಪತಿ

    ಮತ್ತಿಬ್ಬರು ಮಕ್ಕಳಿಗೆ ತಂದೆ ತಾಯಿಯಾದ ಸನ್ನಿ ಲಿಯೋನ್- ವೆಬರ್ ದಂಪತಿ

    ನವದೆಹಲಿ: ಕಳೆದ ವರ್ಷವಷ್ಟೇ ಹೆಣ್ಣು ಮಗುವೊಂದನ್ನ ದತ್ತು ಪಡೆದಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ ಇದೀಗ ಮತ್ತೊಮ್ಮೆ ತಂದೆ ತಾಯಿಯಾಗಿದ್ದಾರೆ. ಈ ಬಾರಿ ಆಶೆರ್ ಸಿಂಗ್ ವೆಬರ್ ಮತ್ತು ನೋವಾ ಸಿಂಗ್ ವೆಬರ್ ಎಂಬ ಎರಡು ಮುದ್ದಾದ ಮಕ್ಕಳು ಸನ್ನಿ- ವೆಬರ್ ಕುಟುಂಬಕ್ಕೆ ಸೇರ್ಪಡೆಗೊಂಡಿವೆ.

    ಇದು ನಿಜಕ್ಕೂ ದೇವರ ಇಚ್ಛೆ. ಇಷ್ಟು ಸುಂದರವಾದ ದೊಡ್ಡ ಕುಟುಂಬವನ್ನ ಹೊಂದುವ ಅವಕಾಶ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಹಾಗೂ ನಮ್ಮ ಜೀವನದಲ್ಲಿ ಈ ಮೂರು ಪವಾಡಗಳನ್ನ ಹೊಂದಿರೋದು ನಮ್ಮ ಅದೃಷ್ಟ. ಈಗ ನಮ್ಮ ಕುಟುಂಬ ಸಂಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಹೇಳಿಕೆ ನೀಡಿದ್ದಾರೆ.

    ನಾವು ಡೇನಿಯಲ್ ನ ಜೀನ್ ಮತ್ತು ನನ್ನ ಜೀನ್‍ಗಳಿಂದ ಮಾಡಿದ ಅಂಡಾಣುವಿನಿಂದ ಬಾಡಿಗೆ ತಾಯ್ತನದ ಮೊರೆ ಹೋದೆವು. ಬಾಡಿಗೆ ತಾಯಿಯ ಮೂಲಕ ಆಶೆರ್ ಮತ್ತು ನೋವಾ ಜನಿಸಿದ್ದಾರೆ. ಬಾಡಿಗೆ ತಾಯ್ತನದ ಬಗ್ಗೆ ನಾವು ಹಲವು ವರ್ಷಗಳ ಹಿಂದೆಯೇ ಚಿಂತಿಸಿದ್ದೆವು. ಈಗ ಅದು ಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.

    ಸನ್ನಿ ಹಾಗೂ ವೆಬರ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಜೊತೆಗಿರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಸನ್ನಿ ಹಾಗೂ ವೆಬರ್ ದಂಪತಿ ಮಹಾರಾಷ್ಟ್ರದ ಲಾತೂರ್‍ನಿಂದ ನಿಶಾ ಎಂಬ ಹೆಣ್ಣುಮಗುವನ್ನ ದತ್ತು ಪಡೆದಿದ್ದರು.

    ಈ ಹಿಂದೆ ಬಾಲಿವುಡ್‍ನ ಕರಣ್ ಜೋಹರ್ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು.

  • ಹೆಣ್ಣು ಮಗುವಿಗೆ ತಾಯಿಯಾದ ಸನ್ನಿ ಲಿಯೋನ್

    ಹೆಣ್ಣು ಮಗುವಿಗೆ ತಾಯಿಯಾದ ಸನ್ನಿ ಲಿಯೋನ್

    ನವದೆಹಲಿ: ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ವೆಬರ್ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ. 21 ತಿಂಗಳ ಪುಟ್ಟ ಮಗು ನಿಶಾ ಈಗ ಸನ್ನಿ ಹಾಗೂ ವೆಬರ್ ದಂಪತಿ ಮನೆಗೆ ಹೊಸ ಸದಸ್ಯಳಾಗಿದ್ದಾಳೆ.

    ಮಗುವಿಗೆ ನಿಶಾ ಕೌರ್ ವೆಬರ್ ಎಂದು ಹೆಸರಿಡಲಾಗಿದೆ. ಮೊದಲಿಗೆ ನಟಿ ಶೆರ್ಲಿನ್ ಚೋಪ್ರಾ ಈ ವಿಷಯವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸನ್ನಿ ದಂಪತಿಗೆ ಶುಭ ಹಾರೈಸಿದ್ರು. ಸನ್ನಿ ಕೂಡ ಇದಕ್ಕೆ ಪ್ರತಿಕ್ರಿಯಿಸಿ ಧನ್ಯವಾದ ಅಂದ್ರು. ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ 2011ರಲ್ಲಿ ವಿವಾಹವಾಗಿದ್ದು ನಿಶಾ ಇವರ ಮೊದಲ ಮಗುವಾಗಿದೆ.

    ಮಹಾರಾಷ್ಟ್ರದ ಲಾತೂರ್‍ನಲ್ಲಿರೋ ಅನಾಥಾಶ್ರಮವೊಂದಕ್ಕೆ ಸನ್ನಿ ದಂಪತಿ 2 ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಈ ವೇಳೆ ಮಗುವನ್ನ ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದರು. ನಾನು ಮಗುವೊಂದನ್ನ ದತ್ತು ಪಡೆಯುವ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಆದ್ರೆ ಅನಾಥಾಶ್ರಮಗಳಲ್ಲಿ ಜನರು ಮಾಡುತ್ತಿರುವ ಕೆಲಸ ಕಂಡು ನನ್ನ ಮನಸ್ಸು ಬದಲಾಯಿತು ಎಂದು ಸನ್ನಿ ಪತಿ ಡೇನಿಯಲ್ ವೆಬರ್ ಹೇಳಿದ್ದಾರೆ. ಮಗುವಿನ ಮೂಲ ಹೆಸರು ನಿಶಾ ಆಗಿದ್ದು, ನಾವು ಅದನ್ನು ಬದಲಾಯಿಸದಿರಲು ನಿರ್ಧರಿಸಿದೆವು ಎಂದು ಸನ್ನಿ ಹೇಳಿದ್ದಾರೆ.

    ಸನ್ನಿ ಲಿಯೋನ್ 2012ರಲ್ಲಿ ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ನೀಡಿದ್ರು. ನಂತರ ರಾಗಿಣಿ ಎಮ್‍ಎಮ್‍ಎಸ್-2, ಏಕ್ ಪಹೇಲಿ ಲೀಲಾ ಹಾಗೂ ಮಸ್ತಿಝಾದೆ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಶಾರೂಖ್ ಖಾನ್ ಅಭಿನಯದ ರಯೀಸ್ ಚಿತ್ರದಲ್ಲಿ ಸನ್ನಿ ಲೈಲಾ ಮೈ ಮೈಲಾ ಹಾಡಿಗೆ ಹೆಜ್ಜೆ ಹಾಕಿದ್ರು. ಸನ್ನಿಯ ಮುಂಬರುವ ಚಿತ್ರ ಬಾದ್‍ಶಾಹೋ ಮತ್ತು ತೇರಾ ಇಂತಿಜಾರ್. ಹಾಗೆ ಸನ್ನಿ ಶೀಘ್ರದಲ್ಲೇ ಸ್ಪ್ಲಿಟ್ಸ್‍ವಿಲ್ಲಾ ಎಂಬ ರಿಯಾಲಿಟಿ ಶೋವೊಂದನ್ನ ನಡೆಸಿಕೊಡಲಿದ್ದಾರೆ.