Tag: ಡೇಟ್

  • ಕನ್ನಡ ಬಿಗ್ ಬಾಸ್ 10 : ಪ್ರಸಾರವಾಗುವ ವೇಳೆ ಯಾವುದು?

    ಕನ್ನಡ ಬಿಗ್ ಬಾಸ್ 10 : ಪ್ರಸಾರವಾಗುವ ವೇಳೆ ಯಾವುದು?

    ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡುವ ಮೂಲಕ ವಾಹಿನಿಯು ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ. ಈಗಾಗಲೇ ಬಿಗ್ ಬಾಸ್ ಯಾವಾಗಿಂದ ಶುರುವಾಗುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಪ್ರಸಾರದ ವೇಳೆಯನ್ನೂ ಅದು ಹೇಳಿಕೊಂಡಿದೆ.

    ಅಕ್ಟೋಬರ್ 8 ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಶೋ, ಮೊದಲ ದಿನ ಸಂಜೆ ಆರು ಗಂಟೆಗೆ ಪ್ರಸಾರವಾಗಲಿದೆ. ಮರುದಿನದಿಂದ ಪ್ರತಿ ರಾತ್ರಿ  9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವಾಹಿನಿಯು ರಿಲೀಸ್ ಮಾಡಿದ ಪ್ರೋಮೋದಲ್ಲಿ ತಿಳಿಸಲಾಗಿದೆ. ಇದಕ್ಕಾಗಿಯೇ ವಿಶೇಷ ಪ್ರೋಮೋ ಕೂಡ ಮಾಡಿದೆ.

    ಬಿಗ್ ಬಾಸ್ ಶೋನಲ್ಲಿ ಹೊಸ ಸ್ಪರ್ಧಿ

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಯಾವಾಗ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ. ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.

    ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ವಾಹಿನಿಯಾಗಲಿ, ಬಿಗ್ ಬಾಸ್ ಮನೆ ಪ್ರವೇಶ (Bigg Boss House) ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಅನ್ನೋದು ಬಿಗ್ ಬಾಸ್ ಶೋ ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಅನ್ನೋದನ್ನು ಇದೀಗ ವಾಹಿನಿ ಹೇಳಿದೆ.

     

    ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಚಾರ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಡುತ್ತಿದೆ. ಅಂದಹಾಗೆ, 777 ಚಾರ್ಲಿ (777 charlie) ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಚಾರ್ಲಿ ಕೂಡ ಮನೋಜ್ಞವಾಗಿ ಅಭಿನಯಿಸುವ ಪ್ರೇಕ್ಷಕರ ಮನಗೆದ್ದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್ 29ಕ್ಕೆ ‘ಪೈಲ್ವಾನ್’ ಸಿನಿಮಾ ರಿಲೀಸ್

    ಆಗಸ್ಟ್ 29ಕ್ಕೆ ‘ಪೈಲ್ವಾನ್’ ಸಿನಿಮಾ ರಿಲೀಸ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಪೈಲ್ವಾನ್’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ನಿರ್ದೇಶಕ ಕೃಷ್ಟ ಅವರು ಅಧಿಕೃತವಾಗಿ ತಿಳಿಸಿದ್ದಾರೆ.

    ಸೋಮವಾರ ಪೈಲ್ವಾನ್ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ಆಗ ಪ್ರೆಸ್ ಮೀಟ್‍ನಲ್ಲಿ ಮಾತನಾಡಿದ ನಿರ್ದೇಶಕ ಕೃಷ್ಣ ಅವರು, ಆಗಸ್ಟ್ 29ಕ್ಕೆ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ‘ಪೈಲ್ವಾನ್’ ಸಿನಿಮಾ ಬರುತ್ತಿದೆ. ಹೀಗಾಗಿ ಏಕಕಾಲದಲ್ಲಿ ಒಂದೇ ದಿನ ಸಿನಿಮಾ ಬಿಡುಗಡೆ ಮಾಡುವ ತಯಾರಿಯನ್ನು ಚಿತ್ರತಂಡ ಮಾಡುತ್ತಿದೆ.

    ಸದ್ಯಕ್ಕೆ ಆಗಸ್ಟ್ 29ಕ್ಕೆ ಸಿನಿಮಾ ರಿಲೀಸ್ ಪಕ್ಕಾ ಆಗಿದೆ. ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಪಡೆಯುತ್ತಿದ್ದಂತೆ ಮತ್ತೊಮ್ಮೆ ಅಧಿಕೃತವಾಗಿ ದಿನಾಂಕವನ್ನು ಹೇಳಲಾಗುತ್ತದೆ. ಈ ಸಿನಿಮಾ ನಟ ಸುದೀಪ್, ಕಬೀರ್ ಸಿಂಗ್ ದುಹಾನ್, ಆಕಾಂಕ್ಷ ಸಿಂಗ್ ಮತ್ತು ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

    ಈ ಹಿಂದೆ ‘ಪೈಲ್ವಾನ್’ ಸಿನಿಮಾ ಆಗಸ್ಟ್ 8 ಅಂದರೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಅದೇ ದಿನ ನಟ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದರು. ಹೀಗಾಗಿ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಸಮಸ್ಯೆಯಾಗುತ್ತದೆ ಎಂದು ‘ಕುರುಕ್ಷೇತ್ರ’ ಸಿನಿಮಾವನ್ನು ಮುಂಚಿತವಾಗಿ ಅಂದರೆ ಆಗಸ್ಟ್ 2ಕ್ಕೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

  • ದರ್ಶನ್ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್

    ದರ್ಶನ್ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರ ಏಪ್ರಿಲ್ 5ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಮುನಿರತ್ನ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ಇಂದು ರಾಜರಾಜೇಶ್ಚರಿನಗರ ಶಾಸಕ, ನಿರ್ಮಾಪಕ ಮುನಿರತ್ನ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, “ಕುರುಕ್ಷೇತ್ರ ಚಿತ್ರ ಏಪ್ರಿಲ್ 5ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ” ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ಕುರುಕ್ಷೇತ್ರ ಸಿನಿಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದರು. ಆದರೆ ಸಿನಿಮಾ ಬಿಡುಗಡೆಯಾಗುವುದಕ್ಕೆ ತಡವಾಗುತ್ತಿತ್ತು. ಇದಕ್ಕೆ ಸ್ವತಃ ಮುನಿರತ್ನ ಅವರೇ ಈ ಹಿಂದೆ ಸ್ಪಷ್ಟನೆ ಕೊಟ್ಟಿದ್ದರು. `ಕುರುಕ್ಷೇತ್ರ’ ಒಂದು ಪೌರಾಣಿಕ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ (ಸಿಜೆ) ಕೆಲಸ ತುಂಬಾ ಇದೆ. ಆದರೆ ನಾವು ಅಂದುಕೊಂಡ ಹಾಗೆ ಬರುತ್ತಿಲ್ಲ. ಅದಕ್ಕೆ ಪದೇ ಪದೇ ರೀ- ವರ್ಕ್ ಮಾಡುತ್ತಿದ್ದೇವೆ. ಆದ್ದರಿಂದ ಈ ಸಿನಿಮಾ ಬಿಡುಗಡೆಗೆ ತಡವಾಗುತ್ತಿದೆ ಎಂದು ತಿಳಿಸಿದ್ದರು.

    ಕುರುಕ್ಷೇತ್ರಕ್ಕೆ ಕೋಟಿ ಕೋಟಿ ಹಾಕಿ ಸಿನಿಮಾ ಮಾಡಿದ್ದೇವೆ. ನಾನು ಜನರಿಗೆ ಉತ್ತಮ ಗುಣಮಟ್ಟದಲ್ಲಿ ಸಿನಿಮಾ ತೋರಿಸಬೇಕು ಎನ್ನುವ ಕನಸು ನನಗಿದೆ. ಆದ್ದರಿಂದ ಸಿನಿಮಾದ ಕೆಲಸಗಳು ನಡೆಯುತ್ತಿದೆ. ನನ್ನ ಕನಸು ಈಡೇರುವ ತನಕ `ಕುರುಕ್ಷೇತ್ರ’ ತೆರೆ ಮೇಲೆ ಬರಲ್ಲ ಎಂದು ಮುನಿರತ್ನ ತಿಳಿಸಿದ್ದರು. ಈಗ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಚಿತ್ರದ ಎಲ್ಲ ಕೆಲಸಗಳು ಮುಗಿದಿದೆ. ಇದನ್ನೂ ಓದಿ: ಸಿಎಂ ಬಜೆಟ್ ಮಂಡಿಸದಿದ್ದರೆ 5 ಕೋಟಿಗೆ ಕುರುಕ್ಷೇತ್ರ ಸಿನಿಮಾ ಹಕ್ಕನ್ನು ಬಿಜೆಪಿಗೆ ನೀಡ್ತೀನಿ: ಮುನಿರತ್ನ ಸವಾಲು

    ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿಬಂದಿದೆ.

    ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯ ರಾಜ ಶ್ರೀನಾಥ್ ಅಭಿನಯಿಸಿದ್ದಾರೆ. ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಮೇಘನಾ ರಾಜ್, ಪವಿತ್ರಾ ಲೋಕೇಶ್ ಕೂಡ ಈ ಕುರುಕ್ಷೇತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ನಟಿಸಿದ ಅಭಿಮನ್ಯುವಿನ ಪಾತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಬಾಸ್ ಸೀಸನ್-6 ಓಪನಿಂಗ್ ಡೇಟ್ ಫಿಕ್ಸ್

    ಬಿಗ್ ಬಾಸ್ ಸೀಸನ್-6 ಓಪನಿಂಗ್ ಡೇಟ್ ಫಿಕ್ಸ್

    ಬೆಂಗಳೂರು: ಕಿಚ್ಚ ಸುದೀಪ್ ನಿರೂಪಕರಾಗಿರುವ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್-6 ಕೆಲವೇ ದಿನಗಳಲ್ಲೇ ಶುರುವಾಗಲಿದೆ.

    ಬಿಗ್ ಬಾಸ್ ಸೀಸನ್- 6 ಮುಂದಿನ ಅಕ್ಟೋಬರ್ 21ರಂದು ಆರಂಭವಾಗಲಿದೆ ಎಂದು ಖಾಸಗಿ ವಾಹಿನಿ ಪ್ರಕಟಿಸಿದೆ. ಅಕ್ಟೋಬರ್ 21ರಂದು ಸಂಜೆ 6 ಗಂಟೆಯಿಂದ ಗ್ರಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದೆ.

    ಗ್ರಾಂಡ್ ಓಪನಿಂಗ್ ಕಾರ್ಯಕ್ರಮದ ದಿನಾಂಕದ ಪ್ರೋಮೋವನ್ನು ಖಾಸಗಿ ವಾಹಿನಿ ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ.

    ಈ ಪ್ರೋಮೋದಲ್ಲಿ ಸುದೀಪ್ ಈ ಹಿಂದೆ ಬಿಗ್ ಬಾಸ್‍ನಲ್ಲಿದ್ದ ಹಳೆಯ ಸ್ಪರ್ಧಿಗಳನ್ನು ಅನುಕರಣೆ ಮಾಡಿದ್ದಾರೆ. ನಿಜ ಹೇಳ್ತೀನಿ ಬಿಗ್ ಬಾಸ್ ಇಲ್ಲಿ ನಾನು ನಾನಾಗಿ ಇದ್ದೀನಿ. ಎಲ್ಲರೂ ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಬಿಗ್‍ಬಾಸ್, ಎಷ್ಟು ನಾಟಕ ಬಿಗ್ ಬಾಸ್ ಎಂದು ಹಳೆಯ ಸ್ಪರ್ಧಿಗಳ ಅನುಕರಣೆ ಮಾಡಿದ್ದಾರೆ.

    ಈ ಬಾರಿ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸುವ 6 ಸ್ಪರ್ಧಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲನೆಯದಾಗಿ ಆರ್.ಜೆ ರ್‍ಯಾಪಿಡ್ ರಶ್ಮಿ, ರ್‍ಯಾಪರ್ ಚಂದನ್ ಶೆಟ್ಟಿಯ `ಟಕೀಲಾ’ ಹಾಡಿನಲ್ಲಿ ಸೊಂಟ ಬಳುಕಿಸಿರುವ ಶಾಲಿನಿ, ಸ್ಯಾಂಡಲ್‍ವುಡ್ ನಟಿ ಭಾವನ ಮತ್ತು ಸುಮನ್ ರಂಗನಾಥ್ ಕೂಡ ಈ ಬಾರಿ ಬಿಗ್‍ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ.

    ಬಿಗ್‍ಬಾಸ್ ಮನೆ ಅಂದಮೇಲೆ ಅಲ್ಲಿ ಮನರಂಜನೆ, ಆಟ, ಹರಟೆ ಎಲ್ಲವೂ ಇರಲೆಬೇಕು. ಹೀಗಾಗಿ ಈ ಬಾರಿ ಕುರಿ ಪ್ರತಾಪ್ ಅವರನ್ನು ಬಿಗ್‍ಬಾಸ್ ಮನೆಗೆ ಕಳುಹಿಸುವ ಯೋಚನೆಯನ್ನು ಬಿಗ್‍ಬಾಸ್ ಮಾಡಿದ್ದಾರಂತೆ. ಇತ್ತ ಬಿಗ್‍ಬಾಸ್ ಶೋನಲ್ಲಿ ಪ್ರೇಮ್ ಕುಮಾರಿ ಕೂಡ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಶುಭಪುಂಜಾ, ನಟ ಟೆನ್ನಿಸ್ ಕೃಷ್ಣ, ಪುಟ್ಟಗೌರಿ ಖ್ಯಾತಿಯ ಶಿವರಂಜಿನಿ, ನಟ ಅನಿರುದ್ದ್, ಮುಂಗಾರು ಮಳೆ – 2 ನೇಹಾಶೆಟ್ಟಿ, ಸಿಲ್ಲಿಲಲ್ಲಿ ರವಿಶಂಕರ್, ಸರಿಗಮಪ ಚೆನ್ನಪ್ಪ, ನಟ ಅಚ್ಯುತ್ ಕುಮಾರ್, ಕಿರಿಕ್ ಪಾರ್ಟಿ ಚಂದನ್ ಆಚಾರ್, ನಟಿ ಮಯೂರಿ, ತಿಥಿ ಸಿನಿಮಾ ಖ್ಯಾತಿಯ ಅಭಿ, ಡಾ. ಶಂಕರೇಗೌಡ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv