Tag: ಡೇಟಿಂಗ್

  • ನಾನು ಮಲಯಾಳಂ ಸ್ಟಾರ್ ಜೊತೆ ಮದುವೆ ಆಗುತ್ತಿಲ್ಲ ಎಂದ ಕನ್ನಡದ ನಟಿ ನಿತ್ಯಾ ಮೆನನ್

    ನಾನು ಮಲಯಾಳಂ ಸ್ಟಾರ್ ಜೊತೆ ಮದುವೆ ಆಗುತ್ತಿಲ್ಲ ಎಂದ ಕನ್ನಡದ ನಟಿ ನಿತ್ಯಾ ಮೆನನ್

    ನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮತ್ತು ಕನ್ನಡಿಗರೇ ಆಗಿದ್ದ ನಿತ್ಯಾ ಮೆನನ್ ಮದುವೆ ವಿಚಾರ ಸ್ಯಾಂಡಲ್ ವುಡ್ ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಮಲಯಾಳಂ ಸ್ಟಾರ್ ನಟನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಆ ನಟ ಯಾರಿರಬಹುದು ಎನ್ನುವ ಲೆಕ್ಕಾಚಾರ ನಡೆದಿತ್ತು. ನಿತ್ಯಾ ಅವರ ಬಾಯ್ ಫ್ರೆಂಡ್ ಬಗ್ಗೆ ಹುಡುಕಾಟ ನಡೆಸಿದ ಬೆನ್ನಲ್ಲೇ ಈ ಸುದ್ದಿ ಠಸ್ ಪಟಾಕಿ ಆಗಿದೆ.

    ಹೌದು, ನಿತ್ಯಾ ಮೆನನ್ ಮದುವೆ ಆಗಲಿರುವ ಸ್ಟಾರ್ ನಟ ಯಾರು ಎನ್ನುವ ಪ್ರಶ್ನೆ ಮೂಡಿತ್ತು. ನಿತ್ಯಾ ಜೊತೆ ಆತ್ಮೀಯರಾಗಿರುವ ಹಲವು ನಟರ ಹೆಸರುಗಳು ಕೂಡ ಜೋಡಣೆಯಾಗಿದ್ದವು. ಅದರಲ್ಲಿ ಸ್ಟಾರ್ ನಟರ ಮಕ್ಕಳ ಹೆಸರು ಇದ್ದವು. ಈ ತೀವ್ರತೆಯನ್ನು ಅರಿತ ನಿತ್ಯಾ ಮೆನನ್, ಈ ಎಲ್ಲ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಇಟ್ಟಂತೆ ಮಾತನಾಡಿದ್ದಾರೆ. ತಾವು ಯಾರೊಂದಿಗೂ ಡೇಟಿಂಗ್ ಮಾಡಿಲ್ಲ, ಯಾವ ಸ್ಟಾರ್ ನಟನನ್ನೂ ಮದುವೆ ಆಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ:ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ಪತ್ರೆಗೆ ದಾಖಲು

    ಸದ್ಯ ಮದುವೆ ಆಗುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ಅಲ್ಲದೇ, ಮದುವೆಯಾಗುವಷ್ಟು ಸಲುಗೆಯನ್ನು ಯಾರೊಂದಿಗೂ ನಾನು ಇಟ್ಟುಕೊಂಡಿಲ್ಲ. ಅನೇಕ ಸ್ಟಾರ್ ನಟರು ಆತ್ಮೀಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ಮದುವೆ ಆಗುತ್ತಿದ್ದೇನೆ ಎನ್ನುವುದು ಸುಳ್ಳು. ನಾನು ನನ್ನ ಕೆಲಸದಲ್ಲಿ ಬ್ಯುಸಿ ಆಗಿರುವೆ. ಮದುವೆ ಮಾತು ದೂರ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ‘ಡೈಮಂಡ್ ಡಿಗ್’, ‘ಗೋಲ್ಡನ್ ಡಿಗ್ಗರ್’ ಅಲ್ಲ : ವಿರೋಧಿಗಳಿಗೆ ಸುಶ್ಮಿತಾ ಸೇನ್ ಟಾಂಗ್

    ನಾನು ‘ಡೈಮಂಡ್ ಡಿಗ್’, ‘ಗೋಲ್ಡನ್ ಡಿಗ್ಗರ್’ ಅಲ್ಲ : ವಿರೋಧಿಗಳಿಗೆ ಸುಶ್ಮಿತಾ ಸೇನ್ ಟಾಂಗ್

    ಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಲವ್ವಿಡವ್ವಿ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇವರಿಬ್ಬರ ವಯಸ್ಸಿನ ಅಂತರವನ್ನಿಟ್ಟುಕೊಂಡು ದಿನವೂ ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಸುಶ್ಮಿತಾ ಸೇನ್ ಅವರಿಗೆ ಗೋಲ್ಡನ್ ಡಿಗ್ಗರ್ ಎಂದು ಜರಿಯಲಾಗುತ್ತದೆ. ಇದರಿಂದ ಬೇಸತ್ತು ಹೋಗಿರುವ ಸುಶ್ಮಿತಾ ಸೇನ್, ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ನಾನು ಗೋಲ್ಡನ್ ಡಿಗ್ಗರ್ ಅಲ್ಲ, ಡೈಮಂಡ್ ಡಿಗ್ಗರ್ ಎಂದು ತಿರುಗೇಟು ನೀಡುತ್ತಿದ್ದಾರೆ.

    ಲಲಿತ್ ಮೋದಿಗೆ ವಯಸ್ಸಾಗಿದೆ. ಈ ವೇಳೆಯಲ್ಲಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಅಂದರೆ, ಅದು ಕೇವಲ ಆತನ ಬಳಿ ಇರುವ ಹಣದಿಂದಾಗಿ ಎಂದು ಹಲವರು ಟೀಕೆ ಮಾಡುತ್ತಿದ್ದಾರೆ. ಇದು ಮಗಳು ಮತ್ತು ತಂದೆ ಸಂಬಂಧ ಎಂದೂ ಕಾಳೆಯುತ್ತಿದ್ದಾರೆ. ಅಲ್ಲದೇ, ನಾನಾ ರೀತಿಯಲ್ಲಿ ಸುಶ್ಮಿತಾ ಅವರಿಗೆ ಟೀಕೆ ಮಾಡಲಾಗುತ್ತಿದೆ. ಸ್ವತಃ ಸುಶ್ಮಿತಾ ಅವರ ಮಾಜಿ ಬಾಯ್ ಫ್ರೆಂಡ್ಸ್ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಹಾಗಾಗಿ ಸುಶ್ಮಿತಾ ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ಗೋಲ್ಡನ್ ಡಿಗ್ಗರ್ ಎಂಬ ಪದವನ್ನು ಬಳಸುತ್ತಿದ್ದಂತೆಯೇ ಕೆಂಡಾಮಂಡಲಾಗಿರುವ ಸುಶ್ಮಿತಾ, ತಾವು ಅದಕ್ಕಿಂತಲೂ ಹೆಚ್ಚಿನ ಬೆಲೆಯ ಡೈಮಂಡ್ ಡಿಗ್ಗರ್ ಎಂದು ತಮ್ಮನ್ನು ತಾವೇ ಆಡಿಕೊಂಡಿದ್ದಾರೆ. ಸುಶ್ಮಿತಾ ಅವರು ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ದುಡ್ಡಿನ ಹಿಂದೆ  ಹೋಗುವಂತಹ ಮಹಿಳೆ ತಾವಲ್ಲ ಎಂದು ಬರೆದುಕೊಂಡಿದ್ದಾರೆ. ಈ ಯಾವ ಟೀಕೆಗೂ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಶ್ಮಿತಾ ಸೇನ್ ಬಲೆಗೆ ಬಿದ್ದ ಲಲಿತ್ ಮೋದಿ : ನಾನು ಲಂಚ ತಗೆದುಕೊಂಡು ದೇಶ ಬಿಟ್ಟಿಲ್ಲ ಎಂದು ತಿರುಗೇಟು

    ಸುಶ್ಮಿತಾ ಸೇನ್ ಬಲೆಗೆ ಬಿದ್ದ ಲಲಿತ್ ಮೋದಿ : ನಾನು ಲಂಚ ತಗೆದುಕೊಂಡು ದೇಶ ಬಿಟ್ಟಿಲ್ಲ ಎಂದು ತಿರುಗೇಟು

    ಭುವನ ಸುಂದರಿ ಸುಶ್ಮಿತಾ ಸೇನ್ ಜೊತೆ ತಾವು ಡೇಟಿಂಗ್ ಮಾಡುತ್ತಿರುವುದಾಗಿ ಹಲವು ಫೋಟೋಗಳ ಜೊತೆ ಬಹಿರಂಗ ಪಡಿಸಿದ್ದ ಲಲಿತ್ ಮೋದಿ, ಆನಂತರ ಟ್ರೋಲಿಗರಿಗೆ ಸಖತ್ ಆಹಾರವಾಗಿದ್ದರು. ದೇಶಕ್ಕೆ ಮೋಸ ಮಾಡಿದ ಮೋದಿ, ಲಂಚ ತಗೆದುಕೊಂಡು ಊರು ಬಿಟ್ಟ ಲಲಿತ್ ಮೋದಿ, ಮಿಸ್ ಇನ್ ಇಂಡಿಯಾ ಹೀಗೆ ನಾನಾ ರೀತಿಯಲ್ಲಿ ಲಲಿತ್ ಮೋದಿಯನ್ನು ಟ್ರೋಲ್ ಮಾಡಲಾಗುತ್ತಿತ್ತು. ಅದಕ್ಕೀಗ ಹಲವು ದಿನಗಳ ನಂತರ ಮೋದಿ ತಿರುಗೇಟು ಕೊಟ್ಟಿದ್ದಾರೆ.

    ಟ್ರೋಲ್ ಮಾಡುವವರಿಗೆ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿರುವ ಅವರು, ತಾವು ಹುಟ್ಟುತ್ತಲೇ ಡೈಮಂಡ್ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವನು. ಲಂಚ ತಗೆದುಕೊಂಡು ದೇಶಬಿಟ್ಟು ಹೋಗುವಂಥವನು ತಾನಲ್ಲ ಎಂದು ಹೇಳಿದ್ದಾರೆ. ತಮಗೆ ಲಂಚ ಪಡೆಯುವಂತಹ ಯಾವುದೇ ಅವಶ್ಯಕತೆ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸುಶ್ಮಿತಾ ಸೇನ್ ಜೊತೆ ಫೋಟೋ ತಗೆಸಿಕೊಂಡಿದ್ದನ್ನು ಬಹಿರಂಗ ಪಡಿಸುವುದರಲ್ಲಿ ತಪ್ಪೇನಿದೆ ಎಂದೂ ಅವರು ಕೇಳಿದ್ದಾರೆ. ಇದನ್ನೂ ಓದಿ:ಬ್ರೇಕಪ್ ನಂತರ ಸ್ಟಾರ್ ನಟಿ ಸಹೋದರನ ಜೊತೆ ಇಲಿಯಾನಾ ಡೇಟಿಂಗ್

    ಸುಶ್ಮಿತಾ ಸೇನ್ ಕೂಡ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಬೇರೆಯ ರೀತಿಯಲ್ಲಿ ರಿಯ್ಯಾಕ್ಟ್ ಮಾಡಿದ್ದಾರೆ. ಮದುವೆನೂ ಇಲ್ಲ, ರಿಂಗೂ ಇಲ್ಲ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿರುವ ಅವರು, ಇದೀಗ ಮಾಲ್ಡೀವ್ಸ್ ನಲ್ಲಿ ಹಾಲಿಡೇ ಮೂಡ್ ನಲ್ಲಿದ್ದಾರೆ. ಲಲಿತ್ ಮೋದಿ ಅವರ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ‘ಲವ್ವಿಡವ್ವಿ’ ಬಹಿರಂಗ ಪಡಿಸಿದ ಕರಣ್ ಜೋಹಾರ್

    ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ‘ಲವ್ವಿಡವ್ವಿ’ ಬಹಿರಂಗ ಪಡಿಸಿದ ಕರಣ್ ಜೋಹಾರ್

    ಬಾಲಿವುಡ್ ನಲ್ಲಿ ಕರಣ್ ಜೋಹಾರ್ ನಡೆಸಿಕೊಡುತ್ತಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮ ಬಿಸಿಬಿಸಿ ಸುದ್ದಿಗಳ ಕಾರಣದಿಂದಾಗಿ ಗಮನ ಸೆಳೆಯುತ್ತಿದೆ. ಸಿಲೆಬ್ರಿಟಿಗಳ ವೃತ್ತಿ ಬದುಕಿಗಿಂತ ಅವರ ಖಾಸಗಿ ಬದುಕಿನ ರಸನಿಮಿಷಗಳೇ ಹೆಚ್ಚು ಸದ್ದು ಮಾಡುತ್ತಿವೆ. ಹಾಗಾಗಿ ಸಿಲೆಬ್ರಿಟಿಗಳ ಒಂದು ರೀತಿಯಲ್ಲಿ ಭಯದಿಂದಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಾಗಿದೆ.

    ಡೇಟಿಂಗ್, ಬಾಯ್ ಫ್ರೆಂಡ್, ಬ್ರೇಕ್ ಅಪ್, ಅಕ್ರಮ ಸಂಬಂಧ ಕೇವಲ ಇಂಥದ್ದೇ ಪ್ರಶ್ನೆಗಳನ್ನು ಕೇಳುವ ಮೂಲಕ ಕರಣ್ ಜೋಹಾರ್ ಅತಿಥಿಗಳಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಕೆಲವರು ಈ ಕುರಿತು ಬೋಲ್ಡ್ ಆಗಿಯೇ ಉತ್ತರಿಸಿದ್ದರೆ, ಇನ್ನೂ ಕೆಲವರು ಮೌನಕ್ಕೆ ಜಾರುತ್ತಾರೆ. ಆದರೂ, ಕರಣ್ ಇಂತಹ ಪ್ರಶ್ನೆಗಳನ್ನು ಕೇಳದೇ ಬಿಡುವುದಿಲ್ಲ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿಯರಾದ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರೂ ಕುಚಿಕು ಗೆಳೆತಿಯರು ಆಗಿರುವುದರಿಂದ ಮತ್ತು ಬಾಲಿವುಡ್ ನಲ್ಲಿ ಸಣ್ಣ ವಯಸ್ಸಿನಲ್ಲೇ ಡೇಟಿಂಗ್ ಮಾಡಿದವರು ಎಂದು ಹಣೆಪಟ್ಟ ಕಟ್ಟಿಕೊಂಡಿರುವುದರಿಂದ ಇವರು ಏನೆಲ್ಲ ಮಾತನಾಡಲಿದ್ದಾರೆ ಎನ್ನುವ ಕುತೂಹಲವಂತೂ ನೋಡುಗರಿಗೆ ಇತ್ತು. ಅದಕ್ಕೆ ತಕ್ಕಂತೆ ಕರಣ್ ಪ್ರಶ್ನೆ ಕೇಳಿದ್ದಾರೆ.

    ಅನೇಕ ಪ್ರಶ್ನೆಗಳನ್ನು ಈ ಜೋಡಿಗೆ ಕೇಳಿದ ಕರಣ್, ಅಚ್ಚರಿ ಎನ್ನುವಂತೆ ನೀವಿಬ್ಬರೂ ಒಂದೇ ಕುಟುಂಬದ ಹುಡುಗರ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಅಲ್ಲವಾ ಎಂದು ಕರಣ್ ಕೇಳುತ್ತಾರೆ. ಈ ಪ್ರಶ್ನೆಯನ್ನು ಕನಸು ಮನಸಲ್ಲೂ ಎಣಿಸಿರದ ಸಾರಾ ಮತ್ತು ಜಾಹ್ನವಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗುತ್ತಾರೆ. ಕೊನೆಗೆ ಆ ಹುಡುಗರು ಯಾರು ಎನ್ನುವುದನ್ನು ಕರಣ್ ಅವರೇ ಬಾಯ್ಬಿಡ್ತಾರೆ. ಮಹಾರಾಷ್ಟ್ರದ ಮಾಜಿ ಸಿಎಂ. ಶಿಂಧೆ ಅವರ ಮಕ್ಕಳಾದ ವೀರ ಪಹಾರಿ, ಶಿಖರ್ ಪಹಾರಿ ಹೆಸರು ಹೇಳುವ ಮೂಲಕ ಮತ್ತೆ ಅಚ್ಚರಿಗೆ ದೂಡುತ್ತಾರೆ ಕರಣ್. ಆದರೆ, ಈ ಕುರಿತು ಸಾರಾ ಆಗಲಿ, ಜಾಹ್ನವಿ ಆಗಲೇ ಏನೂ ಹೇಳದೇ ಮೌನಕ್ಕೆ ಜಾರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ರಡು ದಿನಗಳಿಂದ ಲಲಿತ್ ಮೋದಿ ಮತ್ತು ನಟಿ ಸುಶ್ಮಿತಾ ಸೇನ್ ಅವರ ಲವ್ವಿಡವ್ವಿ ವಿಚಾರ ಬಾಲಿವುಡ್ ಅಂಗಳದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ವಯಸ್ಸಿನ ಅಂತರವಿರುವ ಈ ಜೋಡಿ ಒಂದಾಗಿದ್ದು ಹೇಗೆ ಎಂದು ಎಲ್ಲರೂ ಅಚ್ಚರಿಯನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಈಗಾಗಲೇ ಅನೇಕ ಉದ್ಯಮಿಗಳ ಜೊತೆ ಸುಶ್ಮಿತಾ ಸೇನ್ ಅವರ ಹೆಸರು ಕೇಳಿ ಬಂದರೂ, ಅದು ಅಧಿಕೃತವಾಗಿದ್ದು ಲಲಿತ್ ಮೋದಿ ಜೊತೆ ಹೇಗೆ ಎನ್ನುವ ಕುತೂಹಲವೂ ಹುಟ್ಟಿತ್ತು. ಇದಕ್ಕೆಲ್ಲ ಸುಶ್ಮಿತಾ ಸೇನ್ ಪ್ರತಿಕ್ರಿಯೆ ನೀಡಿದ್ದಾರೆ.

    ಸುಶ್ಮಿತಾ ಸೇನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಲಲಿತ್ ಮೋದಿ, ತಾವು ಮಾಜಿ ಭುವನ ಸುಂದರಿ ಜೊತೆ ಡೇಟಿಂಗ್ ನಲ್ಲಿ ಇರುವುದಾಗಿ ತಿಳಿಸಿದ್ದರು. ತಾವು ಮದುವೆ ಆಗಿಲ್ಲ, ಕೇವಲ ಪ್ರೇಮಗೀತೆಯನ್ನಷ್ಟೇ ಹಾಡುತ್ತಿದ್ದೇವೆ ಎಂದು ಫೋಟೋ ಸಮೇತ ಹಂಚಿಕೊಂಡಿದ್ದರು. ಎರಡು ದಿನಗಳಿಂದ ಈ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಸುಶ್ಮಿತಾ ಸೇನ್ ಮಾಜಿ ಬಾಯ್ ಫ್ರೆಂಡ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದರೂ, ಸುಶ್ಮಿತಾ ಸೇನ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ. ನಿನ್ನೆಯಷ್ಟೇ ಇನ್ಸ್ಟಾದಲ್ಲಿ ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡು, ಮೋದಿ ಡೇಟಿಂಗ್ ವಿಚಾರದ ಬಗ್ಗೆ ಸಿಂಪಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ನಿನ್ನೆ ಇನ್ಸ್ಟಾದಲ್ಲಿ ಮಕ್ಕಳ ಜೊತೆಗಿನ ಫೊಟೋ ಹಂಚಿಕೊಂಡಿರುವ ಸುಶ್ಮಿತಾ ಸೇನ್, ಮದುವೆನೂ ಇಲ್ಲ ರಿಂಗೂ ಇಲ್ಲ ಎಂದಷ್ಟೇ ಬರೆದುಕೊಂಡು ಎಲ್ಲ ಗಾಸಿಪ್ ಗಳಿಗೆ ಒಂದೇ ಮಾತಿನಲ್ಲೇ ತೆರೆ ಎಳೆದಿದ್ದಾರೆ. ಅಲ್ಲಿಗೆ ಮೋದಿ ಜೊತೆ ತಮ್ಮದು ಮದುವೆನೂ ಇಲ್ಲ, ಎಂಗೇಜ್ ಮೆಂಟ್ ಇಲ್ಲ ಅನ್ನುವುದನ್ನು ಸಾರಿ ಹೇಳಿದ್ದಾರೆ. ಮೋದಿ ಡೇಟಿಂಗ್ ವಿಚಾರದಲ್ಲಿ ಈ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್ : ಸುಶ್ಮಿತಾ ಮಾಜಿ ಬಾಯ್ ಫ್ರೆಂಡ್ ಪ್ರತಿಕ್ರಿಯೆ

    ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್ : ಸುಶ್ಮಿತಾ ಮಾಜಿ ಬಾಯ್ ಫ್ರೆಂಡ್ ಪ್ರತಿಕ್ರಿಯೆ

    ಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರ ನಿನ್ನೆಯಿಂದ ಭಾರೀ ಸದ್ದು ಮಾಡುತ್ತಿದೆ. ಸುಶ್ಮಿತಾ ಸೇನ್ ಜೊತೆಗಿನ ಫೋಟೋಗಳನ್ನು ಲಲಿತ್ ಮೋದಿ ಹಂಚಿಕೊಳ್ಳುತ್ತಿದ್ದಂತೆಯೇ ಫೋಟೋಗಳು ಸಖತ್ ವೈರಲ್ ಆದವು.  ಇಬ್ಬರ ವಯಸ್ಸಿನ ಅಂತರ ಮತ್ತು ಸುಶ್ಮಿತಾ ಅವರ ಮಾಜಿ ಬಾಯ್ ಫ್ರೆಂಡ್ ಕುರಿತಾಗಿಯೂ ಟ್ರೋಲ್ ಮಾಡಲಾಯಿತು. ಈ ಫೋಟೋಗಳಿಗೆ ಸುಶ್ಮಿತಾ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಕೂಡ ಹೆಚ್ಚಾಯಿತು.

    ಈ ಕುರಿತಂತೆ ರೋಹ್ಮನ್ ಶಾಲ್ ಕೊನೆಗೂ ಬಾಯ್ಬಿಟ್ಟಿದ್ದಾರೆ. ಸುಶ್ಮಿತಾ ಆಯ್ಕೆ ಯಾವಾಗಲೂ ಸರಿಯಾಗಿ ಇರುತ್ತದೆ. ಅವರು ಎಲ್ಲಿ ಖುಷಿಯಾಗಿ ಇರುತ್ತಾರೋ, ಅಲ್ಲಿ ಖುಷಿ ಪಡಲಿ. ಅವರು ಯಾರಿಗೂ ಕೇಡನ್ನು ಬಯಸಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ. ಹಾಗಾಗಿ ಈ ಕುರಿತು ನಾನು ನೆಗೆಟಿವ್ ಕಾಮೆಂಟ್ ಮಾಡಲಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ರೋಹ್ಮನ್ ಶಾಲ್ ಪ್ರತಿಕ್ರಿಯೆ ನೀಡಿದರೂ, ಸುಶ್ಮಿತಾ ಸೇನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಲಿತಾ ಮೋದಿ ಕುರಿತು ಯಾವುದೇ ಕಾಮೆಂಟ್ ಕೂಡ ಮಾಡಿಲ್ಲ. ಆದರೆ, ಇದು ಹೇಗೆ ಸಾಧ್ಯ ಎಂಬ ಪ್ರತಿಕ್ರಿಯೆಗಳು ಮಾತ್ರ ಜೋರಾಗಿ ಕೇಳಿ ಬರುತ್ತಿವೆ. ಜೊತೆಗೆ ಇಬ್ಬರ ಆಸ್ತಿಗಳ ಬಗ್ಗೆಯೂ ಸುದ್ದಿ ಆಗುತ್ತಿದೆ. ಮೋದಿ ಮತ್ತು ಸುಶ್ಮಿತಾ ಹೇಗೆ ಪರಿಚಯವಾದರು, ಪ್ರೇಮ ಹೇಗೆ ಬೆಳೆಯಿತು ಎನ್ನುವ ಕುರಿತು ಪ್ರಶ್ನೆಗಳು ಎದ್ದಿವೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್ ನಲ್ಲಿದ್ದರು ಎನ್ನುವುದು ಈವರೆಗೂ ಗಾಸಿಪ್ ಕಾಲಂನಲ್ಲಿ ಕೇಳಿ ಬರುತ್ತಿತ್ತು. ಇಬ್ಬರೂ ಅಧಿಕೃತವಾಗಿ ಹೇಳಿಕೊಳ್ಳದೇ ಇರುವುದರಿಂದ ಅದು ಗಾಸಿಪ್ ಎಂದೂ ನಂಬಲಾಗಿತ್ತು. ಆದರೆ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಬಾಲಿವುಡ್ ನಟ ಸಾರಾ ಅಲಿಖಾನ್ ಹೇಳಿದ್ದಾರೆ. ಅಲ್ಲಿಗೆ ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ನಲ್ಲಿ ಇದ್ದದ್ದು ಬಹಿರಂಗವಾಗಿದೆ.

    ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಜಾಹ್ನವಿ ಮತ್ತು ಸಾರಾ ಅಲಿಖಾನ್ ಭಾಗಿಯಾಗಿದ್ದರು. ಜಾಹ್ನವಿಗೆ ರಾಪಿಡ್ ರೌಂಡ್ ನಲ್ಲಿ ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾ ದಲ್ಲಿ ಫಾಲೋವರ್ ಹೆಚ್ಚಾದ ಕುರಿತು ಪ್ರಶ್ನೆ ಕೇಳಲಾಗಿತ್ತು. ರಶ್ಮಿಕಾ ಮಂದಣ್ಣ ಬಗ್ಗೆ ಜಾಹ್ನವಿ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಾರಾ, ಈ ಇಬ್ಬರ ಡೇಟಿಂಗ್ ವಿಚಾರವನ್ನು ಮಾತನಾಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಗುಟ್ಟು ರಟ್ಟಾಗಿಸಿದರು. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

    ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಆತ್ಮಿಯ ಗೆಳೆಯರು ಅನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ತೀರಾ ಹತ್ತಿರವಾಗಿದ್ದರು ಎನ್ನುವುದಕ್ಕೆ ಅವರು ಮಾಡಿದ ಪಾರ್ಟಿಗಳೇ ಸಾಕ್ಷಿ ಇವೆ. ಅಲ್ಲದೇ, ಇಬ್ಬರೂ ಜೊತೆಯಾಗಿ ಪ್ರವಾಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾತ್ರ ದೂರವಿದ್ದಾರೆ. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎನ್ನುವುದು ಇದೀಗ ಪಕ್ಕಾ ಆಗಿದೆ. ಆದರೆ, ಈ ಹೊತ್ತಿನಲ್ಲಿ ಇಬ್ಬರೂ ದೂರವಾಗಿದ್ದಾರೆ ಎನ್ನುವ ಸುದ್ದಿಯೂ ಇದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಲು ಒಪ್ಪಿದ ಸಾರಾ ಅಲಿಖಾನ್: ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್

    ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಲು ಒಪ್ಪಿದ ಸಾರಾ ಅಲಿಖಾನ್: ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್

    ತೆಲುಗು ಸಿನಿಮಾ ರಂಗದ ಖ್ಯಾತ ಯುವ ನಟ ವಿಜಯ್ ದೇವರಕೊಂಡ ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಸಿನಿಮಾಗಳಿಗಿಂತಲೂ ಇವರು ಖಾಸಗಿ ವಿಚಾರಕ್ಕಾಗಿ ಹೆಚ್ಚು ಸದ್ದಾಗುತ್ತಾರೆ. ಅದರಲ್ಲೂ ತಾವು ಮಾಡದೇ ಇರುವ ತಪ್ಪಿಗಾಗಿಯೂ ಹೆಚ್ಚು ಸುದ್ದಿ ಆಗುತ್ತಾರೆ. ಇದೀಗ ಡೇಟಿಂಗ್ ವಿಚಾರವಾಗಿ ಮಾಧ್ಯಮಗಳಿಗೆ ಆಹಾರವಾಗಿದ್ದಾರೆ. ಅದೂ ಕೂಡ ತಾವು ಆಡದೇ ಇರುವ ಮಾತಿನಿಂದಾಗಿ ಎನ್ನುವುದು ವಿಶೇಷ.

    ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಾರಾ ಅಲಿಖಾನ್ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದು, ತಮಗೆ ಅವಕಾಶ ಸಿಕ್ಕರೆ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಂತಹ ಹುಡುಗನ ಜೊತೆಯೇ ಡೇಟಿಂಗ್ ಗೆ ಹೋಗಲು ಇಷ್ಟಪಡುತ್ತೇನೆ ಎಂದೂ ಶೋನಲ್ಲಿ ಹೇಳಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಮತ್ತು ಸಾರಾ ಆಲಿಖಾನ್ ಬಗ್ಗೆ ಸಲ್ಲದ ಸಂಶಯಗಳು ಶುರುವಾಗಿವೆ. ವಿಜಯ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲೂ ಮಿಂಚುತ್ತಿರುವುದರಿಂದ, ಇದು ಸಾಧ್ಯವೂ ಆಗಬಹುದು ಎನ್ನುವ ಗಾಸಿಪ್ ಹರಡಿದೆ. ಇದನ್ನೂ ಓದಿ:ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ

    ವಿಜಯ್ ಜೊತೆ ಡೇಟಿಂಗ್ ಮಾಡುತ್ತೇನೆ ಅಂದವರು ಸಾರಾ ಅಲಿಖಾನ್, ಅನಿಸಿಕೊಂಡವರು ವಿಜಯ್ ದೇವರಕೊಂಡ. ಆದರೆ, ಈ ವಿಷಯದಲ್ಲಿ  ಹೆಚ್ಚು ಟ್ರೋಲ್ ಗೆ ತುತ್ತಾಗಿದ್ದು ಮಾತ್ರ ರಶ್ಮಿಕಾ ಮಂದಣ್ಣ. ವಿಜಯ್ ಜೊತೆ ರಶ್ಮಿಕಾ ತುಂಬಾ ಕ್ಲೋಸ್. ಹೀಗಾಗಿ ರಶ್ಮಿಕಾನಿಂದ ಸಾರಾ ಅವರು ವಿಜಯ್ ದೇವರಕೊಂಡ ಅವರನ್ನು ಕಿತ್ತುಕೊಳ್ಳುತ್ತಾರೆ ಎನ್ನುವ ಅರ್ಥ ಬರುವಂತೆ ಟ್ರೋಲ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಾಗಚೈತನ್ಯ ಜೊತೆ ಲವ್ವೂ ಇಲ್ಲ, ಡೇಟಿಂಗೂ ಇಲ್ಲ ಎಂದ ಶೋಭಿತಾ

    ನಾಗಚೈತನ್ಯ ಜೊತೆ ಲವ್ವೂ ಇಲ್ಲ, ಡೇಟಿಂಗೂ ಇಲ್ಲ ಎಂದ ಶೋಭಿತಾ

    ಲವು ದಿನಗಳಿಂದ ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿ ಹರಡಿತ್ತು. ಈ ಕುರಿತು ನಾಗಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಕೂಡ ಪರೋಕ್ಷವಾಗಿ ಈ ಜೋಡಿಗೆ ಟಾಂಗ್ ಕೊಟ್ಟಿದ್ದರು. ಹಾಗಾಗಿ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಎಂಬ ಗಾಸಿಪ್ ಕೂಡ ಹರಿಬಿಡಲಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ಶೋಭಿತಾ. ನಾಗಚೈತನ್ಯ ಜೊತೆ ಲವ್ವೂ ಇಲ್ಲ ಡೇಟಿಂಗ್ ಕೂಡ ನಡೆದಿಲ್ಲ ಎಂದಿದ್ದಾರೆ.

    ವಾಹಿನಿಯೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶೋಭಿತಾ, ‘ನಾನು ಈವರೆಗೂ ನಾಗಚೈತನ್ಯ ಅವರನ್ನು ಭೇಟಿಯಾಗಿದ್ದು ಕೇವಲ ಎರಡೇ ಎರಡು ಬಾರಿ. ಅದೂ ಹಾಯ್, ಬೈ ಲೆಕ್ಕದಲ್ಲಿ ಮಾತ್ರ. ತೀರಾ ಪರಿಚಯವೂ ಇಲ್ಲ. ಕ್ಲೋಸ್ ಕೂಡ ಇಲ್ಲ. ನಾನು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎನ್ನುವ ಸುದ್ದಿ ಹೇಗೆ ಹರಡಿತೋ ಗೊತ್ತಿಲ್ಲ. ಈ ವಿಷಯ ನನಗೂ ತಲುಪಿದಾಗ ಅಚ್ಚರಿ ಆಯಿತು. ಶಾಕ್ ಕೂಡ ಆಯಿತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್

    ನಾಗಚೈತನ್ಯ ಮತ್ತು ಶೋಭಿತಾ ವಿಚಾರವಾಗಿ ಕಳೆದ ಎರಡು ವಾರಗಳಿಂದಲೂ ಸುದ್ದಿ ಆಗುತ್ತಿದೆ. ಸಮಂತಾ ಮಾಡಿರುವ ಕಾಮೆಂಟ್ ಗೆ ಶೋಭಿತಾ ಕೂಡ ರಿಯ್ಯಾಕ್ಟ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಎಲ್ಲ ವಿಚಾರಗಳಿಗೂ ಶೋಭಿತಾ ತೆರೆ ಎಳೆದಿದ್ದಾರೆ. ನಾಗಚೈತನ್ಯ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

    Live Tv

  • ನಾಗಚೈತನ್ಯಗಾಗಿ ಡೇಟಿಂಗ್ ವಿಚಾರ : ನಟಿಯರಿಬ್ಬರ ಕೋಲ್ಡ್ ವಾರ್

    ನಾಗಚೈತನ್ಯಗಾಗಿ ಡೇಟಿಂಗ್ ವಿಚಾರ : ನಟಿಯರಿಬ್ಬರ ಕೋಲ್ಡ್ ವಾರ್

    ತೆಲುಗಿನ ಖ್ಯಾತ ನಟ ನಾಗಚೈತನ್ಯ ನಟಿ ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶೋಭಿತಾ ಮತ್ತು ನಾಗ ಚೈತನ್ಯಗೆ ಟಾಂಗ್ ಕೊಡುವಂತೆ ಈ ಹಿಂದೆ ಸಮಂತಾ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದರು. ಎಕ್ಸ್ ಗಳ ವಿಚಾರ ಬಿಟ್ಟುಬಿಡಿ ಎನ್ನುವಂತೆ ಟ್ರೋಲ್ ಮಾಡುತ್ತಿದ್ದವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಶೋಭಿತಾ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

    ಸಮಂತಾ ಬರಹಕ್ಕೆ ಪ್ರತ್ಯುತ್ತರ ಎನ್ನುವಂತೆ ಶೋಭಿತಾ ಮಧ್ಯೆದ ಬೆರಳು ತೋರಿಸಿದ್ದಾರೆ. ಹಾಗಾಗಿ ಮತ್ತೆ ನಟಿಯರ ಜಟಾಪಟಿ ಶುರುವಾಗಿದೆ. ಸಮಂತಾ ಕೆಟ್ಟದ್ದಾಗಿ ಪ್ರತಿಕ್ರಿಯೆ ನೀಡದೇ ಇದ್ದರೂ, ಶೋಭಿತಾ ಆ ರೀತಿಯ ವರ್ತಿಸುವುದು ಸರಿಯಲ್ಲವೆಂದು ಸಮಂತಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಆದರೆ, ನಾಗಚೈತನ್ಯ ಅವರನ್ನು ಈ ವಿಷಯದಲ್ಲಿ ಸುಖಾಸುಮ್ಮನೆ ಎಳೆತರಲಾಗುತ್ತಿದೆ ಎಂದು ಅವರ ಅಭಿಮಾನಿಗಳು ಗರಂ ಆಗಿದ್ದಾರೆ.  ಇದನ್ನೂ ಓದಿ:ಮಲಯಾಳಂ ನಟಿ ಅಂಬಿಕಾ ರಾವ್ ನಿಧನ

    ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವಿಚಾರ ಕಳೆದೊಂದು ವಾರದಿಂದ ಸಖತ್ ಸದ್ದು ಮಾಡುತ್ತಿದೆ. ಅವರಿಬ್ಬರೂ ಬರೀ ಡೇಟಿಂಗ್ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿದೆ. ಅದಕ್ಕೆ ನಾಗಚೈತನ್ಯ ಕುಟುಂಬ ಸಹ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ. ಆದರೂ, ಡೇಟಿಂಗ್ ವಿಚಾರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ.

    Live Tv