Tag: ಡೇಟಿಂಗ್

  • ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ನಟಿ ಸೋನಮ್ ಬಾಜ್ವಾ

    ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ನಟಿ ಸೋನಮ್ ಬಾಜ್ವಾ

    ಟೀಮ್ ಇಂಡಿಯಾ ಕ್ರಿಕೆಟಿಗ (Cricket) ಶುಭಮನ್ ಗಿಲ್ (Shubman Gill) ಹೊಡೆದ ದ್ವಿಶತಕಕ್ಕಿಂತ ಆತನ ಡೇಟಿಂಗ್ (Dating) ವಿಚಾರವೇ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಗಿಲ್ ಜೊತೆ ದಿನಕ್ಕೊಂದು ಹುಡುಗಿಯ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಶುಭಮನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾನೋ ಗೊತ್ತಿಲ್ಲ. ಆದರೆ, ಹೊಸ ಹೊಸ ಹುಡುಗಿಯರ ಹೆಸರು ಮಾತ್ರ ಕೇಳಿ ಬರುತ್ತಲೇ ಇದೆ.

    ಮೊನ್ನೆಯಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಜೊತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕ ಎನ್ನುವಂತೆ ಈ ಇಬ್ಬರೂ ಸುತ್ತಾಡುವ ಫೋಟೋಗಳು ಕಂಡು ಬಂದವು. ರೆಸ್ಟೋರೆಂಟ್ ಸೇರಿದಂತೆ ನಾನಾ ಕಡೆ ಸಾರಾ ಮತ್ತು ಗಿಲ್ ಒಟ್ಟಿಗೆ ಇದ್ದ ಫೋಟೋಗಳು ವೈರಲ್ ಆದವು. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಉದ್ಯಮಿ ವಿಶಾಲ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಇದೀಗ ಗಿಲ್ ಜೊತೆ ಮತ್ತೋರ್ವ ಹುಡುಗಿಯ ಹೆಸರು ಕೇಳಿ ಬಂದಿದೆ. ಪಂಜಾಬಿ ನಟಿ ಸೋನಮ್ ಬಾಜ್ವಾ (Sonam Bajwa) ಜೊತೆ ಕ್ರಿಕೆಟಿಗ ಗಿಲ್ ಲವ್ವಿಡವ್ವಿ ಶುರು ಮಾಡಿದ್ದಾರಂತೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿವೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಆಚೆ ಬರುತ್ತಿದ್ದಂತೆಯೇ ಅದಕ್ಕೆ ಸೋನಮ್ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಗಿಲ್ ಜೊತೆ ನಾನು ಡೇಟಿಂಗ್ ಮಾಡುತ್ತಿಲ್ಲ. ಸುಖಾಸುಮ್ಮನೆ ರೂಮರ್ ಹಬ್ಬಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತನಗಿಂತ ಐದು ವರ್ಷ ದೊಡ್ಡವಳ ಜೊತೆ ಶಾರುಖ್ ಮಗನ ಡೇಟಿಂಗ್

    ತನಗಿಂತ ಐದು ವರ್ಷ ದೊಡ್ಡವಳ ಜೊತೆ ಶಾರುಖ್ ಮಗನ ಡೇಟಿಂಗ್

    ಬಿಟೌನ್ ನಲ್ಲಿ ಒಂದು ಕಡೆ ಶಾರುಖ್ ನಟನೆಯ ಪಠಾಣ್ ಸಿನಿಮಾದ ಸದ್ದಾಗುತ್ತಿದ್ದರೆ, ಮತ್ತೊಂದು ಕಡೆ ಶಾರುಖ್ ಪುತ್ರನ ಡೇಟಿಂಗ್ ವಿಚಾರ ಬಾಲಿವುಡ್ ನಲ್ಲಿ ಗಿರಿಕಿ ಹೊಡೆಯುತ್ತಿದೆ. ಅಪ್ಪ ಪಠಾಣ್ ಸಿನಿಮಾದ ವಿವಾದದಲ್ಲಿ ತಲೆಬಿಸಿ ಮಾಡಿಕೊಂಡಿದ್ದರೆ, ಮಗ ಕೂಲ್ ಕೂಲ್ ಆಗಿ ನಟಿ ನೋರಾ ಫತೇಹಿ ಜೊತೆ ಡೇಟಿಂಗ್ ನಡೆಸಿದ್ದಾನೆ. ಅದು ತನಗಿಂತ ಐದು ವರ್ಷ ದೊಡ್ಡವಳಿರುವ ಹುಡುಗಿಯ ಜೊತೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಈ ಜೋಡಿಯ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಸುದ್ದಿಗಳನ್ನು ಬಿತ್ತರಿಸುತ್ತಿವೆ.

    ಕೆಲ ತಿಂಗಳ ಹಿಂದೆಯಷ್ಟೇ ಡ್ರಗ್ಸ್ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್, ಇದೀಗ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ 25ರ ವಯಸ್ಸಿನ ಈ ಹುಡುಗ 30ರ ಹರೆಯದ ನೋರಾ ಫತೇಹಿ ಜೊತೆ ಸುತ್ತುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಅನೇಕ ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ವಿಚಾರವನ್ನು ಬಹಿರಂಗಗೊಳಿಸಿದೆ ಈ ಜೋಡಿ. ಕೆಲವರು ಕೇವಲ ಇದು ಫ್ರೆಂಡ್ ಶಿಪ್ ಎಂದು ಹೇಳುತ್ತಿದ್ದರೆ, ಇನ್ನೂ ಹಲವರು ಫ್ರೆಂಡ್ ಶಿಪ್ ಮೀರಿದ ಸ್ನೇಹವಿದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ನನಗೆ ನಟನಾಗಲು ಇಷ್ಟವಿಲ್ಲ. ತಂದೆಯಂತೆ ನಾನು ನಟನಾಗಲಾರೆ. ನಟನೆ ಅಂದರೆ ನನಗೆ ಅಷ್ಟಕಷ್ಟೆ ಎಂದು ಅನೇಕ ಬಾರಿ ಹೇಳಿರುವ ಆರ್ಯನ್, ತಾನು ಪ್ರೀತಿಸುತ್ತಿರುವುದು ನಟಿಯನ್ನು ಅನ್ನುವುದು ವಿಶೇಷ. ಆದರೆ, ಈ ಕುರಿತು ಇಬ್ಬರೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದರೂ, ಬಿಟೌನ್ ನಲ್ಲಿ ಮಾತ್ರ ಈ ಸುದ್ದಿ ಭಾರೀ ಮಹತ್ವ ಪಡೆದುಕೊಂಡಿದೆ. ಇಬ್ಬರ ಮಧ್ಯೆ ಏನೋ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಸದ್ಯ ಆರ್ಯನ್ ಖಾನ್ ಭರ್ಜರಿಯಾಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಿರ್ದೇಶಕನಾಗಿ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೂಡ ರೆಡಿ ಮಾಡಿಕೊಂಡಿದ್ದಾರೆ. ನಿರ್ದೇಶನಕ್ಕೆ ಬೇಕಿರುವ ಅಗತ್ಯ ತರಬೇತಿಯನ್ನೂ ಅವರು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ತಮ್ಮ ಸಿನಿಮಾದ ಮಾಹಿತಿಯನ್ನು ಅವರು ಹಂಚಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೀನಾದಲ್ಲಿ ಹೊಸ ಡೇಟಿಂಗ್ ಸಂಸ್ಕೃತಿ – ಡೇಟ್ ಮಾಡೋ ಮುಂಚೆ ಕಿಸ್ ಮಾಡ್ಲೇಬೇಕಂತೆ

    ಚೀನಾದಲ್ಲಿ ಹೊಸ ಡೇಟಿಂಗ್ ಸಂಸ್ಕೃತಿ – ಡೇಟ್ ಮಾಡೋ ಮುಂಚೆ ಕಿಸ್ ಮಾಡ್ಲೇಬೇಕಂತೆ

    ಬೀಜಿಂಗ್: ಡೇಟಿಂಗ್ (Dating) ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದ್ದು, ಮದುವೆಗೂ (Marriage) ಮುನ್ನ ಜೀವನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಡೇಟಿಂಗ್ ಉತ್ತಮ ಆಯ್ಕೆ ಎಂದು ಬಹುತೇಕ ಮಂದಿ ಭಾವಿಸಿದ್ದಾರೆ. ಹೀಗಾಗಿ ದಂಪತಿಯಾಗುವುದಕ್ಕೂ ಮುನ್ನವೇ ಹೊರಗೆ ಹೋಗಬಹುದು ಮತ್ತು ಒಟ್ಟಿಗೆ ಸಮಯ ಕಳೆಯಬಹುದಾಗಿದೆ.

    ಇದೀಗ ಚೀನಾದಲ್ಲಿ (China) ಹೊಸ ಡೇಟಿಂಗ್ ಸಂಸ್ಕೃತಿ ಆರಂಭವಾಗಿದೆ. ದಿನೇದಿನ ಖ್ಯಾತಿ ಪಡೆದುಕೊಳ್ಳುತ್ತಿದೆ. ಮೊದಲ ಭೇಟಿಯಲ್ಲಿ ಅಪರಿಚಿತರ ಜೊತೆ ಕಿಸ್ ಮಾಡುವ ಮೂಲಕ ಪರಿಚಯಿಸಿಕೊಳ್ಳುವುದು ಈ ಡೇಟಿಂಗ್‌ನ ವಿಧಾನವಾಗಿದೆ. ಇದಕ್ಕೆ ಚೀನಾದಲ್ಲಿ ‘ಸುಯಿ ಯು’ ಎಂದು ಹೆಸರಿಸಲಾಗಿದೆ. ಇಲ್ಲಿ ಮೊದಲು ಚುಂಬನಕ್ಕಿಂತ ಹೆಚ್ಚೇನೂ ಇಲ್ಲ. ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂ ಆದೇಶ

    ಆದಾಗ್ಯೂ ಬಹುತೇಕ ಮಂದಿ ಈ ವಿಧಾನವನ್ನು ವಿರೋಧಿಸುತ್ತಿದ್ದಾರೆ. ಅಪರಿಚಿತರನ್ನು ಚುಂಬಿಸುವ ಮೂಲಕ ಬ್ಯಾಕ್ಟೀರಿಯಾ (Bacteria) ಮತ್ತು ವೈರಸ್‌ಗಳಿಂದ (Virus) ರೋಗಗಳು ಹರಡಲು ಕಾರಣವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿಷೇಧ – ಪ್ರತಿಭಟನೆಗೆ ಪರೀಕ್ಷೆಯಿಂದಲೇ ಹೊರನಡೆದ ಅಫ್ಘನ್ ಯುವಕರು

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡ ನಟಿ ಶ್ರೀದೇವಿ ಪುತ್ರಿ

    ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡ ನಟಿ ಶ್ರೀದೇವಿ ಪುತ್ರಿ

    ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತೆಲುಗಿನ ಹೆಸರಾಂತ ನಟ ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ವಿಜಯ್ ತಾಯಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುದ್ದಿಗೆ ರೆಕ್ಕೆಪುಕ್ಕಗಳು ಸೇರಿಕೊಂಡು, ನಾನಾ ರೀತಿಯ ಪ್ರಶ್ನೆಗಳನ್ನು ಅವು ಹರಿಬಿಟ್ಟಿವೆ.

    ಜಾಹ್ನವಿಯ ಹಲವಾರು ಸಂದರ್ಶನಗಳನ್ನು ತಿರುವಿ ಹಾಕಿ ಅಲ್ಲಿ ವಿಜಯ್ ದೇವರಕೊಂಡ ಹೆಸರು ಕೇಳಿ ಬರುತ್ತದೆ. ನೀವು ಯಾರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡುತ್ತೀರಿ ಎಂದು ಯಾರೇ ಪ್ರಶ್ನೆ ಕೇಳಲಿ, ಅಲ್ಲಿ ವಿಜಯ್ ದೇವರಕೊಂಡ ಹೆಸರು ಬರುತ್ತದೆ. ನೇರವಾಗಿಯೇ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಲು ಇಷ್ಟಪಡುತ್ತೇನೆ ಎಂದು ಜಾಹ್ನವಿ ಹೇಳಿದ ಮಾತುಗಳು ಅಚ್ಚರಿ ಮೂಡಿಸುತ್ತವೆ. ಸ್ವತಃ ವಿಜಯ್ ಮುಂದೆಯೇ ಒಂದು ಬಾರಿ ಜಾಹ್ನವಿ ಈ ಮಾತುಗಳನ್ನು ಆಡಿದ್ದೂ ಇದೆ. ಇದನ್ನೂ ಓದಿ:  ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಹಾಗಂತ ಇಬ್ಬರೂ ಡೇಟ್ ಮಾಡುತ್ತಿದ್ದಾರಾ? ಅದಕ್ಕೆ ಸ್ಪಷ್ಟನೆ ಇಲ್ಲ. ಹಾಗಾದರೆ, ಜಾಹ್ನವಿ ಇದ್ದಕ್ಕಿದ್ದಂತೆ ವಿಜಯ್ ಮನೆಯಲ್ಲಿ ಕಾಣಿಸಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರವೂ ಇದೆ. ಹೇಳಿಕೇಳಿ ವಿಜಯ್ ದೇವರಕೊಂಡ ಅಭಿಮಾನಿ ಎಂದು ಹೇಳಿಕೊಂಡಿರುವ ಜಾಹ್ನವಿ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದ್‍ಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ವಿಜಯ್ ಮನೆಗೆ ಹೋಗಿ ಅಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ. ವಿಜಯ್ ತಾಯಿ ಜೊತೆ ನೆನಪಿಗಾಗಿ ಫೋಟೋವೊಂದನ್ನು ತೆಗೆಸಿಕೊಂಡಿದ್ದಾರೆ.

    ವಿಜಯ್ ದೇವರಕೊಂಡ ಹೆಸರು ಹಲವು ಹುಡುಗಿಯರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಅದರಲ್ಲೂ ಕನ್ನಡತಿ ರಶ್ಮಿಕಾ ಮಂದಣ್ಣ ಜೊತೆ ಹಲವು ಬಾರಿ ಕಾಣಿಸಿಕೊಂಡಿದೆ. ಇಬ್ಬರೂ ಸಾಕಷ್ಟು ಹೋಟೆಲ್‍ಗಳನ್ನು ಸುತ್ತಿದ್ದಾರೆ. ಪ್ರವಾಸ ಮಾಡಿದ್ದಾರೆ. ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಿದ್ದಾರೆ. ಹಾಗಾಗಿ ವಿಜಯ್ ದೇವರಕೊಂಡ ಯಾರನ್ನು ಪ್ರೀತಿಸುತ್ತಾರೆ, ಯಾರೊಂದಿಗೆ ಡೇಟ್ ಮಾಡುತ್ತಿದ್ದಾರೆ ಎನ್ನುವುದು ಬಗೆಹರಿಯದ ಸಮಸ್ಯೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಿದ್ಧಾರ್ಥ್ -ಅದಿತಿ

    ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಿದ್ಧಾರ್ಥ್ -ಅದಿತಿ

    ಸೌತ್ ಮತ್ತು ಬಾಲಿವುಡ್‌ನಲ್ಲಿ ಸಿದ್ಧಾರ್ಥ್ (Siddarth) ಮತ್ತು ಅದಿತಿ (Aditi Rao) ಲವ್ ಟ್ರ್ಯಾಕ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇತ್ತೀಚೆಗೆ ಇವರಿಬ್ಬರ ಡೇಟಿಂಗ್ ವಿಚಾರ ಹೊರಬೀಳುತ್ತಿದ್ದಂತೆ ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಈ ಜೋಡಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬ್ಯೂಟಿಗೆ ಸೌತ್ ನಟ ಫಿದಾ ಆಗಿದ್ದಾರೆ.

    ತೆಲುಗಿನ (Telagi Films) ಸಿನಿಮಾವೊಂದರಲ್ಲಿ ಜೊತೆಯಾಗಿದ್ದ ಈ ಜೋಡಿಯ ನಡುವೆ ಅಲ್ಲಿಂದ ಲವ್ವಿ ಡವ್ವಿ ಶುರುವಾಗಿತ್ತು. ಈಗ ಮುಂಬೈನಲ್ಲಿ ನಾಲ್ಕೈದು ತಿಂಗಳುಗಳಿಂದ ಈ ಜೋಡಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಮುಂಬೈ ಹೋಟೆಲ್‌ನಿಂದ ಹೊರಬರುವಾಗ ಕ್ಯಾಮೆರಾಗೆ ಸಿಕ್ಕಿಬಿದ್ದಿದ್ದಾರೆ. ಫೋಟೋ ತೆಗೆಯಲು ಹೋದವರ ವಿರುದ್ಧ ಸಿದ್ಧಾರ್ಥ್ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ಕಿನ್‌ ಲಿಫ್ಟ್‌ ಥೆರಪಿ ಮೊರೆ ಹೋದ ಶಿವರಾಜ್‌ಕುಮಾರ್‌ ನಾಯಕಿ ಮೆಹ್ರೀನ್‌ ಫಿರ್ಜಾದ

    ಪರಸ್ಪರ ಪ್ರೀತಿಸುತ್ತಿರುವ ವಿಚಾರ ಸುದ್ದಿಯಾಗುತ್ತಿದ್ದರು ಕೂಡ ಈ ಜೋಡಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಕಷ್ಟು ಕಡೆ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿರುವ ಸಿದ್ಧಾರ್ಥ್, ಅದಿತಿ ಮದುವೆಯ ಬಗ್ಗೆ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡು ರಾಷ್ಟ್ರ ಮಟ್ಟದ ಗಮನ ಸೆಳೆದ ಮಾನುಷಿ ಚಿಲ್ಲರ್, ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಾನುಷಿ, ಇದೀಗ ವಿಚ್ಛೇದಿತ ಉದ್ಯಮಿ ನಿಖಿತ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಜಿರೊಧಾ ಕಂಪನಿಯ ಸಹ ಸಂಸ್ಥಾಪಕ ಆಗಿರುವ ನಿಖಿತ್ ಮತ್ತು ಮಾನಷಿ ಇತ್ತೀಚೆಗಷ್ಟೇ ರಿಷಿಕೇಶಕ್ಕೆ ಒಟ್ಟಾಗಿ ಭೇಟಿ ಕೊಟ್ಟಿದ್ದಾರೆ ಎಂದೂ ವರದಿಯಾಗಿದೆ.

    ನಿಖಿಲ್ ಕಾಮತ್ ಈ ಮುಂಚೆಯೇ ಅಮಂಡಾ ಪುರವಂಕರಾ ಎಂಬುವವ ಜೊತೆ 2019 ಏಪ್ರಿಲ್ 18 ರಂದು ಮದುವೆಯಾಗಿದ್ದರು. ಇವರ ದಾಂಪತ್ಯ ಜೀವನ ತುಂಬಾ ದಿನಗಳ ಕಾಲ ಉಳಿಯಲಿಲ್ಲ. 2021ರಲ್ಲಿ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡರು. ಡಿವೋರ್ಸ್ ಸಿಗುತ್ತಿದ್ದಂತೆಯೇ ಮಾನಷಿ ಜೊತೆ ನಿಖಿಲ್ ಡೇಟಿಂಗ್ ನಲ್ಲಿ ತೊಡಗಿದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

    ನಿಖಿಲ್ ಗಿಂತ ಮುಂಚೆಯೇ ಮಾನಷಿ ಬೇರೆ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿಯೂ ಗುಟ್ಟಾಗಿ ಇರಲಿಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ರೋಹಿತ್ ಖಾಂದೇಲವಾಲ್ ಎಂಬುವವರ ಜೊತೆ ಮಾನಷಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆಗಾಗ್ಗೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು ಎನ್ನುವ ಗಾಸಿಪ್ ಕೂಡ ಇತ್ತು.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    ಧಾರವಾಡ: ಇತ್ತೀಚೆಗೆ ದೆಹಲಿಯಲ್ಲಿ (NewDelihi) ನಡೆದ ಭೀಕರ ಘಟನೆ ತಾಲಿಬಾನ್ (Taliban) ಕೃತ್ಯಕ್ಕಿಂತಲೂ ಕೆಟ್ಟದಾಗಿದೆ. ಆದ್ದರಿಂದ ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಪಾಠ ಕಲಿಯಬೇಕು. ಪ್ರೀತಿ (Love) ಮಾಡುವಾಗ, ಡೇಟಿಂಗ್ (Dating) ಮಾಡುವಾಗ ವಿಚಾರ ಮಾಡಿ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸಲಹೆ ನೀಡಿದ್ದಾರೆ.

    ಧಾರವಾಡದಲ್ಲಿಂದು (Darwad) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ (Live In RelationShip) ಗೆಳತಿಯನ್ನು 35 ಪೀಸ್‌ಗಳಾಗಿ ಮಾಡಿ ಹತ್ಯೆಮಾಡಿರುವ ಘಟನೆ ತಾಲಿಬಾನಿಗಳ (Taliban) ಕೃತ್ಯಕ್ಕಿಂತೂ ಕೆಟ್ಟದಾದದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ – ನ್ಯಾಯಧಿಕರಣ ರಚನೆಗೆ ಕೇಂದ್ರದ ಒಲವು

    ಲವ್ ಜಿಹಾದ್‌ಗೆ (Love Jihad) ಬಲಿಯಾಗುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಾನು 15 ವರ್ಷಗಳಿಂದಲೂ ಎಚ್ಚರಿಕೆ ಕೊಡುತ್ತಲೇ ಬಂದಿದ್ದೇನೆ. ಇಷ್ಟೆಲ್ಲಾ ಎಚ್ಚರಿಕೆ ಕೊಟ್ಟರೂ ದೆಹಲಿಯಲ್ಲಿ ನಡೆದ ಇದೊಂದು ಘಟನೆ ದೊಡ್ಡ ದುರಂತವೇ ಸರಿ ಎಂದಿದ್ದಾರೆ. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್‌ ಅನುಮತಿ

    ಹಿಂದೂ ಹುಡುಗಿಯರು ಇದರಿಂದ ಎಚ್ಚರಿಕೆಯ ಪಾಠ ಕಲಿಯಬೇಕು, ಯಾರ ಜೊತೆ ಪ್ರೀತಿ ಮಾಡುತ್ತಿದ್ದೇನೆ, ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ಅರಿವಿರಬೇಕು. ದೆಹಲಿಯ ಘಟನೆಯ ನಂತರ ಆ ಯುವಕ ಮತ್ತೆ ನಾಲ್ಕು ಜನ ಹಿಂದೂ ಹುಡುಗಿಯರ ಜೊತೆ ಸುತ್ತಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯೇ ಅಂತಿಮ, ಕೋರ್ಟ್ ಸಹ ವಿಳಂಬ ಮಾಡದೆ, ಒಂದೇ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ಎರಡು ಪ್ರಕರಣಗಳು ನಡೆದಿದ್ದವು. ಇದೀಗ ಚಿಕ್ಕಲಗೇರಿ ಎನ್ನುವ ಸಣ್ಣ ಬಡ ಕುಟುಂಬದ ಮೇಲೆ ಮತಾಂತರ ಆಗಿದೆ. ಪತಿ, ಪತ್ನಿಯರಿಗೆ ಜಗಳ ಹಚ್ಚಿ ಪತ್ನಿಯನ್ನು ಮತಾಂತರ ಮಾಡಿದ್ದಾರೆ. ಪತ್ನಿಯ ಮೂಲಕ ಗಂಡನಿಗೆ ಒತ್ತಾಯ ಮಾಡುವ ಪ್ರಕ್ರಿಯೆ ನಡೆದಿದೆ. ಈ ಜಗಳ ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಮತ್ತೆ ಸಮರ ಸಾರಿದ ರಷ್ಯಾ – ಒಂದೇ ಬಾರಿಗೆ 100 ಕ್ಷಿಪಣಿ ಉಡಾವಣೆ

    ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ರೀತಿ ನಡೆಯುತ್ತಲೇ ಇದೆ. ಈ ನಿರ್ಲಕ್ಷ್ಯ ಸರ್ಕಾರದ್ದು, ಕೇವಲ ಕಾನೂನು ಮಾಡುವುದಲ್ಲ, ಅದನ್ನು ಜಾರಿ ಮಾಡಬೇಕು. ಕ್ರಿಶ್ಚಿಯನ್ ಮತಾಂತರ ಎನ್ನುವುದು ಬಹಳ ದೊಡ್ಡ ಗಂಡಾಂತರ, ಇದನ್ನು ತಡೆಯದೇ ಇದ್ದರೆ ದೇಶಕ್ಕೆ ದೊಡ್ಡ ಅಪಾಯ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡೇಟಿಂಗ್ ಬಗ್ಗೆ ಯುವತಿಗೆ ಅಡ್ವೈಸ್ ಕೊಟ್ಟ ಜೋ ಬೈಡೆನ್ – ವೀಡಿಯೋ ವೈರಲ್

    ಡೇಟಿಂಗ್ ಬಗ್ಗೆ ಯುವತಿಗೆ ಅಡ್ವೈಸ್ ಕೊಟ್ಟ ಜೋ ಬೈಡೆನ್ – ವೀಡಿಯೋ ವೈರಲ್

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಡೇಟಿಂಗ್ ಬಗ್ಗೆ ಯುವತಿಯೊಬ್ಬಳಿಗೆ ಸಲಹೆ ನೀಡಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕ್ಯಾಲಿಫೋರ್ನಿಯಾದ (California) ಇರ್ವಿನ್‍ಗೆ (Irvine Valley)ಭೇಟಿ ನೀಡಿದ್ದ ಜೋ ಬೈಡೆನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವತಿಯರ ಗುಂಪೊಂದು ಮುಗಿಬಿದ್ದಿತ್ತು, ಈ ವೇಳೆ ಯುವತಿಯರೊಂದಿಗೆ ಫೋಟೋಗೆ ಪೋಸ್ ಕೊಟ್ಟ ಜೋ ಬೈಡೆನ್ ನಾನು ನನ್ನ ಮೊಮ್ಮಕ್ಕಳಿಗೆ ಯಾವಾಗಲೂ ಹೀಗೆ ಹೇಳುತ್ತಿರುತ್ತೇನೆ. 30 ವರ್ಷ ವಯಸ್ಸಾಗುವವರೆಗೂ ನೀನು ಕೂಡ ಗಂಭೀರವಾಗಿರಬೇಡ. ಏಕೆ ಗೊತ್ತಾ? 30 ವರ್ಷ ವಯಸ್ಸಾಗುವವರೆಗೂ ಯಾವ ಹುಡುಗನೂ ಗಂಭೀರವಾಗಿರುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‍ನೂ ಡ್ರಗ್ಸ್ ಸೇವಿಸ್ತಾರೆ, ಶಾರೂಖ್ ಪುತ್ರ ಜೈಲಿಗೂ ಹೋಗಿದ್ರು: ಬಾಬಾ ರಾಮ್‍ದೇವ್ ಹೇಳಿಕೆ ವೈರಲ್

    ಇದನ್ನು ಕೇಳಿ ಶಾಕ್ ಆದ ಯುವತಿ, ಸರಿ, ನಾನು ಅದನ್ನು ತಲೆಯಲ್ಲಿಟ್ಟುಕೊಳ್ಳುತ್ತೇನೆ ಎಂದು ನಗುತ್ತಾ ಹೇಳುತ್ತಾಳೆ. ಇದೀಗ 18 ಸೆಕೆಂಡ್ ಇರುವ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಲ್ಲಿಯವರೆಗೂ ಸುಮಾರು 5.2 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ಈ ವೀಡಿಯೋ ವೀಕ್ಷಿಸಿದ್ದು, ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಪಕ ಜಕ್ಕಿ ಜೊತೆ ನಟಿ ರಾಕುಲ್ ಪ್ರೀತ್ ಸಿಂಗ್ ಮದುವೆ ಪಕ್ಕಾ

    ನಿರ್ಮಾಪಕ ಜಕ್ಕಿ ಜೊತೆ ನಟಿ ರಾಕುಲ್ ಪ್ರೀತ್ ಸಿಂಗ್ ಮದುವೆ ಪಕ್ಕಾ

    ಬಾಲಿವುಡ್ (Bollywood) ನಿರ್ಮಾಪಕ ಹಾಗೂ ನಟ ಜಕ್ಕಿ ಬಗ್ ನಾನಿ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ (Rakul Singh) ಡೇಟಿಂಗ್ (Dating)  ವಿಚಾರ ಹೊಸದೇನೂ ಅಲ್ಲ. ಸದಾ ಅಂಟಿಕೊಂಡೇ ಓಡಾಡುತ್ತಿದ್ದ ಈ ಜೋಡಿಯ ಮದುವೆ ವಿಚಾರ ನೂರಾರು ಬಾರಿ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಂತೂ ಹಲವು ಬಾರಿ ಇವರ ಮದುವೆಯನ್ನೂ ಮಾಡಲಾಗಿದೆ. ಆದರೆ, ಈ ಬಾರಿ ಈ ಜೋಡಿಯ ಮದುವೆಯ ಕುರಿತು ಅಧಿಕೃತ ಮಾಹಿತಿ ಹೊರ ಬಿದ್ದಿದೆ.

    ರಾಕುಲ್ ಸಹೋದರ ಅಮನ್ ಸಿಂಗ್ ವಾಹಿನಿಯ ಜೊತೆ ಮಾತನಾಡುತ್ತಾ, ಜಕ್ಕಿ ಬಗ್ ನಾನಿ (Jakki Bug Nani) ಜೊತೆ ರಾಕುಲ್ ಮದುವೆ (Marriage) ಆಗುತ್ತಿರುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದು, ಮದುವೆ ದಿನಾಂಕ ಮತ್ತು ಜಾಗವನ್ನು ಅಂತಿಮಗೊಳಿಸುವುದಷ್ಟೇ ಬಾಕಿ ಎಂದೂ ಅವರು ಹೇಳಿದ್ದಾರೆ. ಇದೇ ವಿಚಾರವನ್ನು ಜಕ್ಕಿ ತಂದೆ ವಾಸು ಅವರು ಕೂಡ ಖಚಿತ ಪಡಿಸಿದ್ದರು, ಶೀಘ್ರದಲ್ಲೇ ಮದುವೆ ಮಾಹಿತಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ರೆಹನಾ ಹೈ ತೆರೆ ದಿಲ್ ಮೇನ್ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿರುವ ಜಕ್ಕಿ ಬಗ್ ನಾನಿ ನಟರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡವರು. ಕೋಲ್ಕತ್ತ ಮೂಲದ ಇವರು, ಕೂಲಿ ನಂ1, ಫಾಲ್ತು, ಅಜಬ್ ಗಜಬ್ ಸೇರಿದಂತೆ ಹಲವು ಸಿನಿಮಾಗಳನ್ನೂ ನಿರ್ಮಿಸಿದ್ದಾರೆ. ರಾಕುಲ್ ಕೂಡ ಛತ್ರಿವಾಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲೇ ಇಬ್ಬರೂ ಭೇಟಿಯಾಗಿ, ಇದೀಗ ಹೊಸ ಜೀವನಕ್ಕೆ ಕಾಲಿಡಲು ಇಬ್ಬರೂ ಸಿದ್ಧತೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ವಿಚಾರ : ಫಸ್ಟ್ ಟೈಮ್ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ವಿಚಾರ : ಫಸ್ಟ್ ಟೈಮ್ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

    ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಹಲವಾರು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ (Love) ಎನ್ನುವುದರಿಂದ ಹಿಡಿದು ಇನ್ನೇನು ಮದುವೆ ಆಗೇ ಬಿಡ್ತಾರೆ ಎನ್ನುವಲ್ಲಿಗೆ ಗಾಸಿಪ್ ಹರಿದಾಡಿದವು. ಇದಕ್ಕೆ ಪೂರಕ ಎನ್ನುವಂತೆ ಈ ಜೋಡಿಯೇ ಒಟ್ಟೊಟ್ಟಿಗೆ ಓಡಾಡುತ್ತಿತ್ತು. ತಡರಾತ್ರಿ ಪಾರ್ಟಿಗಳಲ್ಲೂ ಹಾಜರಾತಿ ಇರುತ್ತಿತ್ತು. ಹೀಗಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಆಗಿತ್ತು.

    ಕಾಫಿ ವಿತ್ ಕರಣ್ ಶೋನಲ್ಲೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Devarakonda) ಅವರ ಡೇಟಿಂಗ್ ವಿಚಾರ ಹಲವು ಬಾರಿ ಬಂದು ಹೋಗಿದೆ. ರಶ್ಮಿಕಾ ಮಂದಣ್ಣ ಈ ಶೋನಲ್ಲಿ ಭಾಗಿ ಆಗದೇ ಇದ್ದರೂ, ಬೇರೆ ಬೇರೆ ನಟ ನಟಿಯರ ಕಾರಣದಿಂದಾಗಿಯೂ ಇವರ ಡೇಟಿಂಗ್ ವಿಚಾರ ಪ್ರಸ್ತಾವಾಗಿದೆ. ಇಷ್ಟೆಲ್ಲ ಸುದ್ದಿಯಾದರೂ, ಈವರೆಗೂ ರಶ್ಮಿಕಾ ಮಂದಣ್ಣ ಒಂದೇ ಒಂದು ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ. ಮೊದಲ ಬಾರಿಗೆ ಈ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

    ತಮ್ಮ ಡೇಟಿಂಗ್ (Dating) ವಿಚಾರದ ಕುರಿತು ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದರು. ನಮ್ಮಿಬ್ಬರ ಮಧ್ಯ ಅಂಥದ್ದೇನೂ ಇಲ್ಲ ಎಂದೇ ವಾದಿಸಿದ್ದರು. ಆಕೆ ಬೆಸ್ಟ್ ಫ್ರೆಂಡ್ ಅನ್ನುವ ಉತ್ತರವನ್ನು ಕೊಟ್ಟಿದ್ದರು. ರಶ್ಮಿಕಾ ಕೂಡ ಅದನ್ನೇ ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಇಬ್ಬರೂ ಬೆಳೆಯುತ್ತಿದ್ದೆವು. ಒಟ್ಟೊಟ್ಟಿಗೆ ಸಿನಿಮಾ ಮಾಡಿದೆವು. ಜಾಹೀರಾತಿನಲ್ಲೂ ಕಾಣಿಸಿಕೊಂಡೆವು. ಹಾಗಾಗಿ ಜೊತೆ ಇರಬೇಕಾಗುತ್ತಿತ್ತು. ಅದನ್ನೇ ಕೆಲವರು ಡೇಟಿಂಗ್ ಅಂದುಕೊಂಡರು ಅಂದಿದ್ದಾರೆ.

    ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಬ್ರೇಕ್ ಅಪ್ (Break Up) ಮಾಡಿಕೊಂಡಿರುವುದರಿಂದ ಮತ್ತೆ ಸಿನಿಮಾ ಮಾಡಲಾರರು ಎಂದೂ ಹೇಳಲಾಗಿತ್ತು. ಅದಕ್ಕೂ ಉತ್ತರ ನೀಡಿರುವ ರಶ್ಮಿಕಾ, ‘ನನ್ನ ಮತ್ತು ವಿಜಯ್ ಜೋಡಿಯನ್ನು ಎಲ್ಲರೂ ಮೆಚ್ಚಿದ್ದಾರೆ. ಮತ್ತೆ ಸಿನಿಮಾ ಮಾಡಬೇಕು ಎಂದು ಹಲವರು ಕೇಳಿದ್ದಾರೆ. ವಿಜಯ್ ಮತ್ತು ನಾನು ಮತ್ತೆ ಸಿನಿಮಾ ಮಾಡುತ್ತೇವೆ. ಇಬ್ಬರಿಗೂ ಒಟ್ಟಿಗೆ ಅಭಿನಯಿಸಬೇಕು ಅನ್ನುವ ಆಸೆ ಇದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ರಶ್ಮಿಕಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]