Tag: ಡೇಟಿಂಗ್

  • ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

    ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

    ನಟಿ ನತಾಶಾ (Natasa) ಅವರಿಂದ ವಿಚ್ಛೇದನ ಪಡೆದು ದೀರ್ಘಕಾಲದ ಬಳಿಕ ಮತ್ತೆ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ (Hardik Pandya) ಲವ್‌ನಲ್ಲಿ ಬಿದ್ದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಹುಟ್ಟಿಕೊಳ್ತಿದ್ದಂತೆ ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಪಾಂಡ್ಯ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ತಮ್ಮ ಹೊಸ ಗರ್ಲ್‌ಫ್ರೆಂಡ್‌ ಯಾರು ಅನ್ನೋದನ್ನೂ ಬಹಿರಂಗಪಡಿಸಿದ್ದಾರೆ.

    ಟಿ20 ಏಷ್ಯಾಕಪ್‌ ಟೂರ್ನಿ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ಪಾಂಡ್ಯ, ಹೊಸ ಗರ್ಲ್‌ಫ್ರೆಂಡ್‌ ಮಹೀಕಾ ಶರ್ಮಾ (Mahieka Sharma) ಅವರೊಂದಿಗೆ ಹಾಲಿಡೇಸ್‌ ಎಂಜಾಯ್‌ ಮಾಡ್ತಿದ್ದಾರೆ. ಈ ವೇಳೆ ಬೀಚ್‌ ಎದುರು ಹಾಗೂ ನೈಟ್‌ ಔಟ್‌ ವೇಳೆ ತೆಗೆದ ಫೋಟೋಗಳನ್ನ ಪಾಂಡ್ಯ ಹಂಚಿಕೊಂಡಿದ್ದು, ಮಹೀಕಾ ಅವರಿಗೂ ಟ್ಯಾಗ್‌ ಮಾಡಿದ್ದಾರೆ. ಇದನ್ನೂ ಓದಿ: ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್‌ 1’ ನೋಡಿದ ಅಟ್ಲೀ

    ಮೊದಲ ಫೋಟೋದಲ್ಲಿ ಪಾಂಡ್ಯ, ಮಹೀಕಾ ಅವರ ಹೆಗಲ ಮೇಲೆ ರೊಮ್ಯಾಂಟಿಕ್‌ ಆಗಿ ಕೈ ಹಾಕಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ನೈಟ್‌ಔಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಹೀಕಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ರೆ, ಪಾಂಡ್ಯ ಸಿಂಪಲ್ಲಾಗಿ ಡ್ರೆಸ್‌ ಮಾಡಿಕೊಂಡಿದ್ದಾರೆ. ಫೋಟೋಗಳಿಗೆ ಪಾಂಡ್ಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

    ಯಾರು ಈ ಬ್ಯೂಟಿ?
    ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಮಹೀಕಾ ಶರ್ಮಾ, ಫ್ಯಾಷನ್‌ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಐಎಫ್‌ಎ ಮಾಡೆಲ್‌ ಆಫ್‌ ದಿ ಇಯರ್‌ ಹಾಗೂ ಎಲ್ಲೆ ಮಾಡೆಲ್‌ ಆಫ್‌ ದಿ ಸೀಸನ್‌ ಪ್ರಶಸ್ತಿಗಳನ್ನು ಮಹೀಕಾ ಮುಡಿಗೇರಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಮಹೀಕಾ ಶರ್ಮಾ ಇನ್‌ಸ್ಟಾದಲ್ಲಿ 1.47 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    Jasmin Walia 4

    2024ರಲ್ಲಿ ಭಾರತ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಹಾರ್ದಿಕ್‌ ಪಾಂಡ್ಯ ನಟಿ ನತಾಶಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಬಾಲಿವುಡ್‌ ಬ್ಯೂಟಿ ಅನನ್ಯಾ ಪಾಂಡೆ ಅವರೊಂದಿಗೆ ಡೇಟಿಂಗ್‌ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ನಂತ್ರ ಬ್ರಿಟಿಷ್‌ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್‌ ಮಾಡ್ತಿದ್ದಾರೆ ಎನ್ನಲಾಗಿತ್ತು. ಆದ್ರೆ, ಇಬ್ಬರು ಪರಸ್ಪರ ಮಾತನಾಡ್ತಿದ್ದೆವು, ಡೇಟಿಂಗ್‌ ಹಂತಕ್ಕೆ ಬರುವ ಮೊದಲೇ ಇಬ್ಬರ ಸಂಬಂಧ ಅಂತ್ಯಗೊಂಡಿತು ಎಂದು ಪಾಂಡ್ಯ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದ್ರೀಗ ಖುದ್ದು ಪಾಂಡ್ಯ ಅವರೇ ಮಹೀಕಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರೋದನ್ನ ಬಹಿರಂಗಪಡಿಸಿದ್ದಾರೆ.

  • ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಖ್ಯಾತ ನಟ ನಟ ಧನುಷ್ (Dhanush) ಮತ್ತು ನಟಿ ಮೃಣಾಲ್ ಠಾಕೂರ್ (Mrunal Thakur) ನಡುವೆ ಲವ್ ಇದೆ, ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗೆ ಖುದ್ದು ಮೃಣಾಲ್‌ ತೆರೆ ಎಳೆದಿದ್ದಾರೆ.

    ಕೆಲ ದಿನಗಳಿಂದ ಮೃಣಾಲ್‌ ಜೊತೆಗೆ ಧನುಷ್‌ ಡೇಟಿಂಗ್‌ (Dating Rumours) ನಡೆಸುತ್ತಿದ್ದಾರೆ ಅನ್ನೋ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿತ್ತು. ಆದ್ರೆ ಈ ಬಗ್ಗೆ ಧನುಷ್‌ ಆಗಲಿ, ನಟಿ ಆಗಲಿ ಯಾವುದೇ ರಿಯಾಕ್ಷನ್‌ ಕೊಟ್ಟಿರಲಿಲ್ಲ. ಆದರೀಗ ಮೃಣಾಲ್ ಠಾಕೂರ್ ಅವ್ರೇ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

    ನಾನು ಮತ್ತು ಧನುಷ್ ಉತ್ತಮ ಸ್ನೇಹಿತರು. ನಮ್ಮಿಬ್ಬರ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ ಅನ್ನೋದು ಗಮನಕ್ಕೆ ಬಂದಿದೆ. ಮೊದಲು ನೋಡಿದಾಗ ತಮಾಷೆಗೆ ಅಂದುಕೊಂಡಿದ್ದೆ. ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್‌ಗೆ ಧನುಷ್ ಹಾಜರಾಗಿದ್ದರು. ಹಾಗಂದ ಮಾತ್ರಕ್ಕೆ ಯಾರೂ ಅದನ್ನ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅಂದಹಾಗೆ, ಧನುಷ್ ಅವರನ್ನು ಅಜಯ್ ದೇವಗನ್ ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    ಡೇಟಿಂಗ್‌ ವದಂತಿ ಹಬ್ಬಿದ್ದೇಕೆ?
    ಈಚೆಗೆ ಮೃಣಾಲ್ ಠಾಕೂರ್ ಅವರ ಹುಟ್ಟುಹಬ್ಬವಿತ್ತು. ಅಲ್ಲಿಗೆ ಧನುಷ್ ಆಗಮಿಸಿದ್ದರು. ಅದಕ್ಕೂ ಮುನ್ನ ಅಜಯ್ ದೇವ್‌ಗನ್ ಮತ್ತು ಮೃಣಾಲ್ ಠಾಕೂರ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ಶೋಗೂ ಧನುಷ್ ಆಗಮಿಸಿದ್ದರು. ಈ ವೇಳೆ ಪ್ರೀಮಿಯರ್ ರೆಡ್ ಕಾರ್ಪೆಟ್ ಬಳಿ ಧನುಷ್ ಬಂದಾಗ, ಸ್ವತಃ ಮೃಣಾಲ್ ಹೋಗಿ ಕರೆದುಕೊಂಡು ಬಂದಿದ್ದರು. ಆ ಕ್ಷಣದ ಅವರಿಬ್ಬರ ನಡುವಿನ ಆಪ್ತತೆ ಹಲವರ ಕಣ್ಣು ಕುಕ್ಕಿತ್ತು. ಹೀಗಾಗಿ ಇಬ್ಬರ ನಡುವೆ ಸಂಥಿಗ್‌, ಸಂಥಿಕ್‌ ನಡೀತಿದೆ ಎಂದೇ ಹೇಳಲಾಗಿತ್ತು.

    ಐಶ್ವರ್ಯಾರಿಂದ ದೂರವಾಗಿರುವ ಧನುಷ್
    ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರನ್ನು ನಟ ಧನುಷ್ ಪ್ರೀತಿಸಿ ಮದುವೆ ಆಗಿದ್ದರು. ಆದರೆ 2022ರಲ್ಲಿ ಇವರು ದೂರವಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಬಳಿಕ 2024ರ ನವೆಂಬರ್‌ನಲ್ಲಿ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿತ್ತು. ಇದನ್ನೂ ಓದಿ: ಉಂಗುರಕ್ಕೆ 9ನೇ ವರ್ಷದ ಸಂಭ್ರಮ – ವಿಶೇಷ ನೆನಪು ಹಂಚಿಕೊಂಡ ರಾಧಿಕಾ

  • ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

    ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

    ಮಿಳು ನಟ ಧನುಶ್ (Dhanush) ಹಾಗೂ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಇದಕ್ಕೆ ಸಾಕ್ಷಿ ಇಬ್ಬರ ನಡುವಿನ ಭಾರೀ ಅನ್ಯೋನ್ಯತೆ.

    ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸದಿದ್ದರೂ ಈ ಮಟ್ಟಿಗೆ ಸ್ನೇಹ ಹೇಗೆ ಉಂಟಾಯಿತು ಎಂದು ಪ್ರಶ್ನೆ ಹುಟ್ಟುಹಾಕಿದೆ. ಮೃಣಾಲ್ ಕೈ ಹಿಡಿದಿರುವ ಧನುಶ್ ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ ಇದು ನಡೆದಿದ್ದು ತೇರೆ ಇಷ್ಕ್ ಮೆ ಚಿತ್ರದ ಶೂಟಿಂಗ್ ರ‍್ಯಾಪ್ ಅಪ್ ಪಾರ್ಟಿಯಲ್ಲಿ ಎಂದು ಹೇಳಲಾಗುತ್ತಿದೆ.

    ಈ ಚಿತ್ರಕ್ಕೂ ಮೃಣಾಲ್‌ಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಮೃಣಾಲ್ ಈ ಪಾರ್ಟಿಯಲ್ಲಿದ್ದರು ಎನ್ನಲಾಗುವ ಫೋಟೋ ವೈರಲ್‌ ಆಗಿದೆ. ಇಬ್ಬರ ನಡುವಿನ ಆಪ್ತತೆ ನೋಡುಗರಲ್ಲಿ ಪ್ರೇಮ ಸಂಬಂಧವನ್ನೇ ಕಲ್ಪಿಸುತ್ತಿದೆ.

    ಈ ಹಿಂದೆ ಮೃಣಾಲ್ ಅಭಿನಯದ ಸನ್ ಆಫ್ ಸರ್ದಾರ್ 2 ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ಮುಂಬೈಗೆ ಧನುಶ್‌ ಬಂದಿದ್ದರು. ಈ ಎರಡು ಘಟನೆಗಳು ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ: `ಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

    ಇಬ್ಬರ ಮೊದಲ ಭೇಟಿ ಸೀತಾರಾಮಂ ಸಕ್ಸಸ್ ಇವೆಂಟ್‌ನಲ್ಲಿ ನಡೆದಿತ್ತು. ಅಲ್ಲಿಂದ ಸ್ನೇಹ ಶುರುವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಧನುಶ್ ಈಗಾಗಲೇ ರಜನಿಕಾಂತ್ ಪುತ್ರಿ ಐಶ್ವರ್ಯರನ್ನು (Aishwarya Rajinikanth) ವಿವಾಹವಾಗಿ ವಿಚ್ಛೇದನವನ್ನು (Divorce) ನೀಡಿದ್ದರು.

    ಇಬ್ಬರು ಪರಸ್ಪರ ಬೇರೆಯಾಗುವು ಬಗ್ಗೆ ಧನುಶ್ 2022ರಲ್ಲೇ ಘೋಷಿಸಿದ್ದರು. ಇದೀಗ ಅಧಿಕೃತ ವಿಚ್ಛೇದನವೂ ಆಗಿದೆ. ವಿಚ್ಛೇದನಕ್ಕೆ ಅಸಲಿ ಕಾರಣ ತಿಳಿದುಬಂದಿರಲಿಲ್ಲ. ಇದೀಗ ಮೃಣಾಲ್ ಜೊತೆ ಧನುಶ್ ಇನ್ನಿಲ್ಲದ ಸ್ನೇಹ ಇನ್ನೇನೇನೋ ಗಾಸಿಪ್‌ಗೆ ದಾರಿಮಾಡಿಕೊಟ್ಟಿದೆ.

  • ನಾನಿನ್ನೂ ಸಿಂಗಲ್‌, ಮದ್ವೆಯಾಗಲು ನಾನು ಬಯಸುವವರ ಜೊತೆ ಮಾತ್ರ ಡೇಟಿಂಗ್‌ – ಚಹಲ್‌ ಜೊತೆ ಕಾಣಿಸಿಕೊಂಡ ಬ್ಯೂಟಿ ಸ್ಪಷ್ಟನೆ

    ನಾನಿನ್ನೂ ಸಿಂಗಲ್‌, ಮದ್ವೆಯಾಗಲು ನಾನು ಬಯಸುವವರ ಜೊತೆ ಮಾತ್ರ ಡೇಟಿಂಗ್‌ – ಚಹಲ್‌ ಜೊತೆ ಕಾಣಿಸಿಕೊಂಡ ಬ್ಯೂಟಿ ಸ್ಪಷ್ಟನೆ

    ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಜೊತೆ ಕಾಣಿಸಿಕೊಂಡಿದ್ದ ಬ್ಯೂಟಿ ಆರ್‌ಜೆ ಮಹ್ವಾಷ್ (RJ Mahvash) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚಹಲ್‌ ಅವರೊಂದಿಗೆ ಡೇಟಿಂಗ್‌ ಸುದ್ದಿ ಹರಿದಾಡುತ್ತಿದ್ದಂತೆ ವದಂತಿಗಳಿಗೆ ಫುಲ್‌ಸ್ಟಾಪ್‌ ಹಾಕಿದ್ದಾರೆ. ನಾನು ಮದುವೆಯಾಗಲು ಬಯಸುವವರ ಜೊತೆಗೆ ಮಾತ್ರ ಡೇಟಿಂಗ್‌ ಮಾಡ್ತೀನಿ ಅಂತ ಸ್ಪಷ್ಟನೆ ನೀಡಿದ್ದಾರೆ.

     

    View this post on Instagram

     

    A post shared by Mahvash (@rj.mahvash)

    ಕಳೆದ ತಿಂಗಳು ಮುಕ್ತಾಯಗೊಂಡ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಚಹಲ್‌ (Yuzvendra Chahal) ಜೊತೆಗೆ ಮಹ್ವಾಷ್‌ ಕಾಣಿಸಿಕೊಂಡಿದ್ದರು. ಆದ್ರೆ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ಅವರಿಂದ ವಿಚ್ಛೇದನ ಪಡೆದ ಬಳಿಕ ಚಹಲ್‌ ಮತ್ತು ಮಹ್ವಾಷ್‌ ಅವರ ಡೇಟಿಂಗ್‌ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಹೈಪ್‌ ಕ್ರಿಯೆಟ್‌ ಮಾಡಿತ್ತು. ಅಲ್ಲದೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಹೇಳಿಕೆಗಳೂ ಕೇಳಿಬಂದಿತ್ತು. ಇದೀಗ ಈ ಎಲ್ಲ ವದಂತಿಗಳಿಗೆ ಆರ್‌ಜೆ ಮಹ್ವಾಷ್‌ ಫುಲ್‌ಸ್ಟಾಪ್‌ ಹಾಕಿದ್ದಾರೆ.

    ಪಾಡ್‌ಕಾಸ್ಟ್‌ವೊಂದರಲ್ಲಿ ಮಾತಮಾಡಿದ ಅವರು, ಸದ್ಯಕ್ಕೆ ನಾನಿನ್ನೂ ಸಿಂಗಲ್, ಮದುವೆ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ಈ ಮೊದಲು ನನಗೆ ನಿಶ್ಚಿತಾರ್ಥ ಆಗಿತ್ತು, ಆ ಸಂಬಂಧವೂ ಮುರಿದುಬಿದ್ದಿತು. ಹಾಗಾಗಿ ನಾನು ಕ್ಯಾಷುವಲ್ ಡೇಟಿಂಗ್ ಹೋಗಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಮದುವೆಯಾಗಲು ಬಯಸಿದವರ ಜೊತೆ ಮಾತ್ರ ಡೇಟಿಂಗ್‌ಗೆ ಹೋಗಲು ಬಯಸುತ್ತೇನೆ. ಆದ್ರೆ ಸದ್ಯಕ್ಕೆ ಈ ಯಾವ ಯೋಚನೆಯೂ ನನಗಿಲ್ಲ ಎಂದಿದ್ದಾರೆ.

    ತನಗೆ 19ನೇ ವಯಸ್ಸಿನಲ್ಲೇ ನಿಶ್ಚಿತಾರ್ಥ ಆಗಿತ್ತು, ಮದ್ವೆಗೆ 2 ವರ್ಷ ಸಮಯವಿತ್ತು. ಆದ್ರೆ ತಾನು 21 ವರ್ಷ ವಯಸ್ಸಿನವಳಿದ್ದಾಗ, ಮದುವೆ ಸಂಬಂಧವನ್ನು ರದ್ದುಗೊಳಿಸಿದೆ. ಏಕೆಂದರೆ ನನಗೆ ಹೊಂದಿಕೆಯಾಗುವಂತಹ ಒಳ್ಳೆಯ ಗಂಡ ಸಿಗಬೇಕು ಅನ್ನೋದೊಂದೇ ನನ್ನ ಬಯಕೆಯಾಗಿತ್ತು. ಮುಂದೆ ಅಂತಹ ತಪ್ಪು ಆಗದಂತೆ ನಾನು ನೋಡಿಕೊಳ್ಳಲು ಬಯಸುತ್ತಿದ್ದೇನೆ ಎಂದು ಮಹ್ವಾಷ್‌ ಹೇಳಿಕೊಂಡಿದ್ದಾರೆ.

  • ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಬೆಂಗಳೂರಿನ ಬೆಡಗಿ ಗೌರಿ ಸ್ಪ್ರಾಟ್‌ (Gauri Spratt) ಜೊತೆ ಎಂಗೇಜ್ ಆಗಿರುವ ಬಗ್ಗೆ ಖಚಿತಪಡಿಸಿದ್ದಾರೆ. ಗೌರಿ ಜೊತೆ 3ನೇ ಮದುವೆಗೆ ಆಮೀರ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ಹುಟ್ಟೂರಿನ ರಥೋತ್ಸವದಲ್ಲಿ ತೇರು ಎಳೆದ ಅರ್ಜುನ್ ಸರ್ಜಾ, ಧ್ರುವ ಸರ್ಜಾ

    ಆಮೀರ್ ಖಾನ್ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ, ಮಾಧ್ಯಮದ ಜೊತೆ ಡೇಟಿಂಗ್ (Dating) ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. ಗೌರಿ ಜೊತೆ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಅವರನ್ನು ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಪರಿಚಿತರು ಎಂದು ಹೇಳಿದ್ದಾರೆ. ಗೌರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತಮ್ಮದೇ ನಿರ್ಮಾಣದ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಆಮೀರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಗೌರಿಗೆ 6 ವರ್ಷದ ಮಗನಿದ್ದು, ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಕುಟುಂಬಸ್ಥರನ್ನು ಆಕೆ ಭೇಟಿಯಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಮನೆಯವರಿಗೂ ಖುಷಿಯಿದೆ ಎಂದು ನಟ ತಿಳಿಸಿದ್ದಾರೆ.

    ತಾವು ನಟಿಸಿರುವ ‘ಲಗಾನ್’ ಮತ್ತು ‘ದಂಗಲ್’ ಸೇರಿದಂತೆ ಕೆಲವು ಚಿತ್ರಗಳನ್ನು ಗೌರಿ ವೀಕ್ಷಿಸಿದ್ದಾರೆ. ಬುಧವಾರ ಆಮೀರ್ ಖಾನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಡಿನ್ನರ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಡಿನ್ನರ್ ವೇಳೆ ಗೌರಿ ಬಗ್ಗೆ ಆಮೀರ್ ಮಾತನಾಡಿದ್ದಾರೆ.

    ಇನ್ನೂ ಆಮೀರ್ ಗೆಳತಿ ಗೌರಿ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಎನೆಂದರೆ, ಅರ್ಧ ತಮಿಳಿನ ಮತ್ತು ಐರಿಷ್ ಆಗಿದ್ದಾರೆ. ಅವರ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

    2021ರಲ್ಲಿ ಕಿರಣ್ ರಾವ್‌ಗೆ (Kiran Rao) ಆಮೀರ್ ಡಿವೋರ್ಸ್ ನೀಡಿದರು. ಇದಕ್ಕೂ ಮುನ್ನ ರೀನಾ ದತ್‌ಗೆ 2002ರಲ್ಲಿ ಡಿವೋರ್ಸ್ ಆಗಿತ್ತು. ಈಗ ಮತ್ತೆ ಹೊಸ ಬಾಳಿಗೆ ಕಾಲಿಡಲು ಆಮೀರ್ ರೆಡಿಯಾಗಿದ್ದಾರೆ.

  • ವಿವಾಹೇತರ ಸಂಬಂಧಕ್ಕೆ ಡೇಟಿಂಗ್‌ ಆಪ್‌ ಬಳಕೆ – ದೇಶದಲ್ಲೇ ಬೆಂಗಳೂರು ನಂ.1

    ವಿವಾಹೇತರ ಸಂಬಂಧಕ್ಕೆ ಡೇಟಿಂಗ್‌ ಆಪ್‌ ಬಳಕೆ – ದೇಶದಲ್ಲೇ ಬೆಂಗಳೂರು ನಂ.1

    ನವದೆಹಲಿ: ಇಂದು ಅಕ್ರಮ ಸಂಬಂಧಗಳು ವೈವಾಹಿಕ ಜೀವನವನ್ನು ಹಾಳು ಮಾಡುತ್ತಿರುವ ಸಮಯದಲ್ಲೇ ವಿವಾಹೇತರ ಸಂಬಂಧ (Extra Marital Relationship) ಬೆಸೆಯುವ ಗ್ಲೀಡನ್ (Gleeden) ಆ್ಯಪ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು (Indians) ನೊಂದಾಯಿಸಿಕೊಂಡಿದ್ದು ಅದರಲ್ಲೂ ಬೆಂಗಳೂರು (Bengaluru) ಮೊದಲ ಸ್ಥಾನದಲ್ಲಿದೆ.

    ವಿಶ್ವದ ಅತಿದೊಡ್ಡ ವಿವಾಹೇತರ ಡೇಟಿಂಗ್ (Dating Application) ಪ್ಲಾಟ್‌ಫಾರ್ಮ್‌ ಗ್ಲೀಡನ್ ಬಿಡುಗಡೆ ಮಾಡಿರುವ ವರದಿಯಂತೆ 2024 ರಲ್ಲಿ ಅಪ್ಲಿಕೇಶನ್ ತನ್ನ ಬಳಕೆದಾರರ ಸಂಖ್ಯೆಯಲ್ಲಿ 270% ರಷ್ಟು ಏರಿಕೆ ಕಂಡಿದೆ. ಹೊಸ ಬಳಕೆದಾರರ ಪೈಕಿ 128% ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಒಟ್ಟು ಬಳಕೆದಾರರ ಪೈಕಿ  40% ರಷ್ಟು ಮಂದಿ 30 ರಿಂದ 45 ವಯಸ್ಸಿನ ವಿವಾಹಿತ ಸ್ತ್ರೀಯರಿದ್ದಾರೆ ಎಂದು ತಿಳಿಸಿದೆ.

    AI ಚಿತ್ರ

    ಎಲ್ಲಿ ಎಷ್ಟು?
    ಗ್ಲೀಡನ್‌ ಬಳಕೆದಾರರ ಸಂಖ್ಯೆಯಲ್ಲಿ ಬೆಂಗಳೂರು 20% ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ(19%), ಕೋಲ್ಕತ್ತಾ (18%), ದೆಹಲಿ (15%) ಇದೆ. ಬಳಕೆದಾರರ ಪೈಕಿ 58% ರಷ್ಟು ಮಂದಿ ಮಹಿಳೆಯರಿದ್ದಾರೆ. ಇವರು ಸುಮಾರು 45 ನಿಮಿಷಗಳ ಕಾಲ ಈ ಆ್ಯಪ್​​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ಅಪ್ಲಿಕೇಶನ್​ ಬಳಸುತ್ತಿದ್ದಾರೆ.

    ಮೆಟ್ರೋ ನಗರಗಳು ಗರಿಷ್ಠ ಬಳಕೆದಾರರನ್ನು ಹೊಂದಿದ್ದರೂ ಭೋಪಾಲ್, ವಡೋದರಾ ಮತ್ತು ಕೊಚ್ಚಿಯಂತಹ ಸಣ್ಣ ನಗರಗಳಿಂದ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಗ್ಲೀಡನ್ ಭಾರತದಲ್ಲಿ 50 ಲಕ್ಷ ಗ್ರಾಹಕರನ್ನು ತಲುಪುವ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಭವ್ಯಾ ಮೇಲೆ ನಿಜವಾಗಲೂ ಲವ್ ಆಗಿದ್ಯಾ?- ತ್ರಿವಿಕ್ರಮ್ ಹೇಳೋದೇನು?

    ಭಾರತದಲ್ಲಿ ಮದುವೆ ತನ್ನದೇ ಆದ ಪಾವಿತ್ರ್ಯತೆ ಇದೆ. ಕುಟುಂಬ ವ್ಯವಸ್ಥೆಗೂ ಗೌರವ ಇದೆ. ಈ ರೀತಿಯ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಈ ಬೆಳವಣಿಗೆಯ ಬಗ್ಗೆ ಗ್ಲೀಡನ್‌ನ ಭಾರತದ ವ್ಯವಸ್ಥಾಪಕಿ ಸಿಬಿಲ್ ಶಿಡ್ಡೆಲ್ ಪ್ರತಿಕ್ರಿಯಿಸಿ, ಭಾರತದಲ್ಲಿ 3 ಮಿಲಿಯನ್‌ ಬಳಕೆದಾರರನ್ನು ತಲುಪಿರುವುದು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಗೆ ಸಾಕ್ಷಿ. ಮಹಿಳಾ ಬಳಕೆದಾರರ ಹೆಚ್ಚುತ್ತಿರುವ ಆಸಕ್ತಿಯು ಇಂದಿನ ಜಗತ್ತಿನಲ್ಲಿ ಸುರಕ್ಷತೆ ಮತ್ತು ಆಯ್ಕೆಯ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವ ವೇದಿಕೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

     

  • ನಿಶಾಂತ್ ಜೊತೆ ಡೇಟಿಂಗ್ ವಿಚಾರ: ನಟಿ ಕಂಗನಾ ಪ್ರತಿಕ್ರಿಯೆ

    ನಿಶಾಂತ್ ಜೊತೆ ಡೇಟಿಂಗ್ ವಿಚಾರ: ನಟಿ ಕಂಗನಾ ಪ್ರತಿಕ್ರಿಯೆ

    ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ (Dating)ನಲ್ಲಿ ಇರುವ ವಿಚಾರ ಹಾಗಾಗ್ಗೆ ಮುನ್ನೆಲೆಗೆ ಬರುತ್ತದೆ. ಅದರಲ್ಲೂ ಈಸ್ ಮೈಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ (Nishant Pitti) ಜೊತೆ ಕಂಗನಾ ಕಾಣಿಸಿಕೊಂಡಾಗೆಲ್ಲ ಇಬ್ಬರ ಹೆಸರೂ ತಳುಕು ಹಾಕಿಕೊಳ್ಳುತ್ತದೆ. ಈ ಬಾರಿಯೂ ಅದೇ ಆಗಿದೆ. ನಿಶಾಂತ್ ಜೊತೆ ಕಂಗನಾ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

    ಸುದ್ದಿ ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದಂತೆಯೇ ಕಂಗನಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ನಿಶಾಂತ್ ಮದುವೆ ಆಗಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ. ನಿಶಾಂತ್ ಅವರಿಗೆ ಈಗಾಗಲೇ ಮದುವೆ ಆಗಿದೆ. ನಮ್ಮಿಬ್ಬರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಅವರ ಸಂಸಾರ ಹಾಳು ಮಾಡಬೇಡಿ. ನಾನು ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದರೂ, ಅದನ್ನು ಹೇಳುವುದಕ್ಕಾಗಿ ಸಮಯ ಕೊಡಿ ಎಂದು ಕಂಗನಾ ಹೇಳಿದ್ದಾರೆ.

    ಈ ನಡುವೆ  ಕಂಗನಾ ರಣಾವತ್  ಮತ್ತೊಂದು ಸುದ್ದಿಯನ್ನೂ ನೀಡಿದ್ದಾರೆ. ಕಂಗನಾ ನಟನೆಯ ‘ಎಮರ್ಜೆನ್ಸಿ’ (Emergency) ಸಿನಿಮಾ ನವೆಂಬರ್ 24ರಂದು ರಿಲೀಸ್ (Release) ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದರು ಕಂಗನಾ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ‘ನಾವು ಘೋಷಿಸಿದ ತಿಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದ್ದು, 2024ರಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ ಎಂದು ಬರೆದುಕೊಂಡಿದ್ದರು. ಈಗ ಜೂನ್ ನಲ್ಲಿ ಸಿನಿಮಾವನ್ನು ತೆರೆಗೆ ತರುವುದಾಗಿ ಅಪ್ ಡೇಟ್ ನೀಡಿದ್ದಾರೆ.

    ಕಂಗನಾ ರಣಾವತ್ (Kangana Ranaut) ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾವನ್ನು ಅವರೇ ನಿರ್ಮಾಣ ಮಾಡಿ, ನಿರ್ದೇಶನ ಮತ್ತು ನಟನೆ ಮಾಡುತ್ತಿದ್ದರೆ ಮತ್ತೊಂದು ಚಿತ್ರದಲ್ಲಿ ಕೇವಲ ನಟಿಯಾಗಿದ್ದಾರೆ. ಈ ಎರಡೂ ಸಿನಿಮಾಗಳ ನಡುವೆ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.  ಎಮರ್ಜೆನ್ಸಿ ಸಿನಿಮಾ ತೆರೆಗೆ ಬರುತ್ತಿದ್ದಂತೆಯೇ ಲೆಜೆಂಡ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ತಯಾರಾಗಲಿರುವ, ಸಂದೀಪ್ ಸಿಂಗ್ (Sandeep Singh) ನಿರ್ಮಾಣದ ಹೊಸ ಸಿನಿಮಾದಲ್ಲಿ ಅವರು ನಟಿಸಲಿದ್ದಾರಂತೆ.

     

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಬರೆದುಕೊಂಡಿದ್ದಾರೆ. ಎಮರ್ಜೆನ್ಸಿ ಸಿನಿಮಾ ಕಂಗನಾ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ. ಈ ಸಿನಿಮಾದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ.

  • ನಟರ ಜೊತೆ ಡೇಟ್ ಮಾಡುವುದಿಲ್ಲ: ಜಾಹ್ನವಿ ಶಾಕಿಂಗ್ ಹೇಳಿಕೆ

    ನಟರ ಜೊತೆ ಡೇಟ್ ಮಾಡುವುದಿಲ್ಲ: ಜಾಹ್ನವಿ ಶಾಕಿಂಗ್ ಹೇಳಿಕೆ

    ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ (Jahnavi Kapoor) ಹಿಂದಿನ ಪಾಪ್ಯುಲರ್ ಶೋ ಕಾಫಿ ವಿತ್ ಕರಣ್ (Koffee With Karan) ದಲ್ಲಿ ಭಾಗಿಯಾಗಿದ್ದಾರೆ. ಕರಣ್ ಜೊತೆ ಜಾಹ್ನವಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಡೇಟಿಂಗ್ (Dating) ವಿಚಾರವನ್ನು ಹಂಚಿಕೊಂಡಿದ್ದು, ತಾವು ಯಾವುದೇ ಕಾರಣಕ್ಕೂ ನಟರ ಜೊತೆ ಡೇಟ್ ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ.

    ಕಾಫಿ ವಿತ್ ಕರಣ್ ಶೋನಲ್ಲಿ ಇದಷ್ಟೇ ಅಲ್ಲ, ಇನ್ನೂ ಹಲವು ಸಂಗತಿಗಳನ್ನು ಅವರು ನೇರವಾಗಿ ಮಾತನಾಡಿದ್ದಾರೆ. ನಿರೂಪಕ ಕರಣ್ ಜೋಹಾರ್ (Karan Johar) ಕೇಳಿದ ಪ್ರಶ್ನೆಗೆ ಅಷ್ಟೇ ಬೋಲ್ಡ್ ಆಗಿ ಉತ್ತರಿಸಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಬೋಲ್ಡ್ ಪ್ರಶ್ನೆಗಳನ್ನು ಕೇಳುವುದರಲ್ಲಿ ಕರಣ್ ಜೋಹಾರ್ ಎತ್ತಿದ ಕೈ. ಅದರಲ್ಲೂ ಕಾಂಟ್ರವರ್ಸಿ ಎನ್ನುವಂತಹ ಪ್ರಶ್ನೆಗಳನ್ನೂ ಅವರು ಕೇಳುತ್ತಾರೆ. ಹೆಚ್ಚಾಗಿ ಅವರ ಮಾತುಗಳು ಸೆಕ್ಸ್, ಅಫೇರ್, ಬ್ರೇಕ್ ಅಪ್, ಡೇಟಿಂಗ್ ಇದರ ಸುತ್ತಲೇ ಗಿರಕಿ ಹೊಡೆಯುತ್ತವೆ. ಅದರಲ್ಲೂ ಸೆಕ್ಸ್ ಬಗ್ಗೆ ಕೇಳದೇ ಯಾವ ಎಪಿಸೋಡ್ ಅನ್ನು ಅವರು ಮುಗಿಸೋದಿಲ್ಲ. ಜಾಹ್ನವಿ ಎಪಿಸೋಡ್ ನಲ್ಲಿ ಅವರು ಬೇರೆ ರೀತಿಯಲ್ಲಿ ಕೇಳಿ ಅಚ್ಚರಿ ಮೂಡಿಸಿದ್ದಾರೆ.

    ಜಾಹ್ನವಿ ಕಪೂರ್ ಅವರ ಸಿನಿಮಾ ಕೆರಿಯರ್, ಶೂಟಿಂಗ್, ಫ್ರೆಂಡ್ಸ್ ಹೀಗೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಹೋಗುವ ಕರಣ್ ಜೋಹಾರ್, ಕೊನೆಗೊಂದು ಪ್ರಶ್ನೆ ಮಾಡುತ್ತಾರೆ. ರಾಪಿಡ್ ರೌಂಡ್ ನಲ್ಲಿ ಅವರು, ನಿಮ್ಮನ್ನು ಮೊದಲ ಬಾರಿಗೆ ಹುಡುಗರು ನೋಡಿದಾಗ, ಅವರ ಕಣ್ಣುಗಳು ನಿಮ್ಮಲ್ಲಿ ಏನನ್ನು ನೋಡುತ್ತಿರುತ್ತವೆ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಅಷ್ಟೇ ಸಖತ್ತಾಗಿ ಆನ್ಸರ್ ಮಾಡಿದ್ದಾರೆ ಜಾಹ್ನವಿ.

     

    ಮೊದಲ ಬಾರಿಗೆ ಹುಡುಗರು ನನ್ನನ್ನು ನೋಡಿದಾಗ, ಅವರು ನನ್ನ ಕಣ್ಣುಗಳನ್ನು ನೋಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಬೇರೆಯದನ್ನೇ ನೋಡ್ತಾ ಇರ್ತಾರೆ ಅನ್ನೋದು ಆಮೇಲೆ ಗೊತ್ತಾಯಿತು ಎಂದು ಹೇಳುವ ಮೂಲಕ ಹುಡುಗರಿಗೆ ಶಾಕ್ ನೀಡಿದ್ದಾರೆ.

  • ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್‌ ಆ್ಯಪ್‌ ಪ್ರಿಯತಮೆಗೆ ಜೀವಾವಧಿ ಶಿಕ್ಷೆ

    ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್‌ ಆ್ಯಪ್‌ ಪ್ರಿಯತಮೆಗೆ ಜೀವಾವಧಿ ಶಿಕ್ಷೆ

    ಜೈಪುರ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಪ್ರೀತಿ (Online Relationship) ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಯುವಕರು, ಮಹಿಳೆಯರು, ವೃದ್ಧರೂ ಸೇರಿದಂತೆ ಅನೇಕರು ಪ್ರೀತಿಯ ಮೋಹಕ್ಕೆ ಬಿದ್ದು ಬಲಿಯಾಗುತ್ತಿದ್ದಾರೆ. ಯುವಕರು ಚೆಂದದ ಹುಡುಗಿಯನ್ನು ಪಟಾಯಿಸಲು ನಾನಾ ತಂತ್ರಗಳನ್ನ ಹೆಣೆಯುತ್ತಾರೆ. ಅದಕ್ಕೆ ಸೊಪ್ಪು ಹಾಕುವ ಹುಡುಗಿಯರೂ ಆತನ ಜೊತೆ ಗಂಟೆಗಟ್ಟಲೆ ಮೆಸೇಜ್‌ ಮಾಡಲು, ಊರು ಸುತ್ತಲು ಈಗ ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ಗಳು (Dating Apps) ಏಣಿಯಾಗಿವೆ. ಆದ್ರೆ ದೆಹಲಿಯಲ್ಲಿ (Delhi) ದುಷ್ಯಂತ ಎಂಬ ವ್ಯಕ್ತಿಯೊಬ್ಬ ಡೇಟಿಂಗ್‌ ಆ್ಯಪ್‌ನಲ್ಲಿ‌ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಜೈಪುರಕ್ಕೆ ಹೋಗಿ ಕೊಲೆಯಾಗಿದ್ದಾನೆ.

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ ನ್ಯಾಯಾಲಯವು (Jaipur Court) ಚೆಲುವೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಷನ್ಸ್ ನ್ಯಾಯಾಧೀಶ ಅಜಿತ್ ಕುಮಾರ್ ಹಿಂಗರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಲವ್‌ ಜಿಹಾದ್‌ಗೆ ಒಳಗಾಗೋದಿಲ್ಲ – ಗದಗ SSK ಸಮಾಜದಿಂದ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ

    2018ರಲ್ಲಿ ಡೇಟಿಂಗ್‌ ಆಪ್‌ವೊಂದರಲ್ಲಿ ದೆಹಲಿಯ ದುಷ್ಯಂತ್ ಶರ್ಮಾ (ಪ್ರೊಫೈಲ್‌ ಹೆಸರು) ಹಾಗೂ ಜೈಪುರದ ಪ್ರಿಯಾ ಸೇಠ್‌ ಎಂಬಾಕೆಯೊಂದಿಗೆ ಪರಿಚಯವಾಗಿದೆ. ಇಬ್ಬರೂ ಚಾಟ್‌ ಮಾಡಿದಾಗ ಪರಸ್ಪರರ ಅಭಿವೃದ್ಧಿಗಳಿಗೆ ಸಾಮ್ಯತೆ ಇದೆ ಎಂಬುದು ಗೊತ್ತಾಗಿದೆ. 3 ತಿಂಗಳ ಬಳಿಕ ಇಬ್ಬರೂ ಭೇಟಿ ಆಗಲು ನಿರ್ಧರಿಸಿದ್ದಾರೆ. ಜೈಪುರಕ್ಕೆ ಬಾ ಎಂದು ಪ್ರಿಯಾ ಸೇಠ್‌ ಕರೆದಿದ್ದಾಳೆ. ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ, ಇಲ್ಲಿಗೇ ಬಾ ಎಂದು ಆಹ್ವಾನಿಸಿದ್ದಾಳೆ. ನೆಚ್ಚಿನ ಪ್ರಿಯತಮೆಯ ಭೇಟಿಗೆ ಕಾದಿದ್ದ ದುಷ್ಯಂತ್‌ ಶರ್ಮಾ ಜೈಪುರಕ್ಕೆ ಹೋಗಿದ್ದಾರೆ. ಇದನ್ನೂ ಓದಿ: ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

    ದುಷ್ಯಂತ್‌ ಶರ್ಮಾ ಅವರು ಜೈಪುರದಲ್ಲಿರುವ ಪ್ರಿಯಾ ಸೇಠ್‌ ಅವರ ಬಾಡಿಗೆ ಮನೆ ಪ್ರವೇಶಿಸಿದ ನಂತರ ಆಗಿದ್ದೇ ಬೇರೆ. ಪ್ರಿಯಾ ಸೇಠ್‌, ದೀಕ್ಷಂತ್‌ ಕಮ್ರಾ ಹಾಗೂ ಲಕ್ಷ್ಯಾ ವಾಲಿಯಾ ಎಂಬುವರು ದುಷ್ಯಂತ್‌ ಶರ್ಮಾ ಅವರನ್ನು ಅಪಹರಣ ಮಾಡಿದ್ದಾರೆ. ದುಷ್ಯಂತ್‌ ಶರ್ಮಾ ಅವರ ತಂದೆಗೆ ಕರೆ ಮಾಡಿ, ನಿಮ್ಮ ಮಗ ಜೀವಂತವಾಗಿ ಮನೆ ಸೇರಬೇಕಾದ್ರೆ 10 ಲಕ್ಷ ರೂ. ಕೊಡಬೇಕು ಎಂದಿದ್ದಾರೆ. ಆದ್ರೆ ದುಷ್ಯಂತ್‌ ತಂದೆ ನನ್ನ ಬಳಿ ಅಷ್ಟು ದುಡ್ಡು ಇಲ್ಲ, 3 ಲಕ್ಷ ಮಾತ್ರ ಕೊಡಲು ಸಾಧ್ಯ ಎಂದಿದ್ದಾರೆ. ಇದೇ ವೇಳೆ ತಂದೆ ಜತೆ ಮಾತನಾಡಿದ ದುಷ್ಯಂತ್‌ ಶರ್ಮಾ, ಅಪ್ಪಾ ಇವರು ತುಂಬ ಟಾರ್ಚರ್‌ ಮಾಡುತ್ತಿದ್ದಾರೆ. ನೀವು ಹಣ ಕೊಡದಿದ್ದರೆ ಕೊಂದೇ ಬಿಡುತ್ತಾರೆ ಎಂದು ಅಂಗಲಾಚಿದ್ದಾರೆ. ಆದರೆ, ದುಷ್ಯಂತ್‌ ಶರ್ಮಾ ಅವರ ತಂದೆಗೆ ಹಣ ಹೊಂದಿಸಲು ಆಗದ ಕಾರಣ, ಮೂವರೂ ದುಷ್ಕರ್ಮಿಗಳು ದುಷ್ಯಂತ್‌ ಶರ್ಮಾ ಅವರನ್ನು ಕ್ರೂರವಾಗಿ ಕೊಂದಿದ್ದಾರೆ.

    ದುಷ್ಯಂತ್‌ ಹೇಳಿದ ಸುಳ್ಳೇ ಕೊಲೆಗೆ ಕಾರಣವಾಯ್ತಾ?
    ದುಷ್ಯಂತ್‌ ಶರ್ಮಾ ಅವರ ಹೆಸರು ನಕಲಿ ಆಗಿದೆ. ಅವರ ನಿಜವಾದ ಹೆಸರು ವಿವಾನ್‌ ಕೊಹ್ಲಿ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ನಾನು ದೊಡ್ಡ ಉದ್ಯಮಿ ಎಂಬುದಾಗಿ ಪ್ರಿಯಾ ಸೇಠ್‌ಗೆ ಸುಳ್ಳು ಹೇಳಿದ್ದಾನೆ. ಅಷ್ಟೇ ಅಲ್ಲ, ಮದುವೆಯಾಗಿರುವುದನ್ನೂ ಮುಚ್ಚಿಟ್ಟು, ಪ್ರಿಯಾ ಸೇಠ್‌ಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾನೆ. ಯಾವಾಗ ದುಷ್ಯಂತ್‌ ಶರ್ಮಾ ದೊಡ್ಡ ಉದ್ಯಮಿ ಎಂಬುದನ್ನು ಕೇಳಿದಳೋ, ಪ್ರಿಯಾ ಸೇಠ್‌ಗೆ ಹಣದ ಆಸೆ ಹುಟ್ಟಿದೆ. ಹಾಗಾಗಿಯೇ, ಜೈಪುರಕ್ಕೆ ಕರೆಸಿ, ಅಪಹರಣ ಮಾಡಿದ್ದಾಳೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆದರೆ, ದುಷ್ಯಂತ್‌ ಶರ್ಮಾ ಬಡವ ಎಂದು, ಆತನ ತಂದೆ ಹಣ ಕೊಡಲು ಆಗುವುದಿಲ್ಲ ಎಂದು ಗೊತ್ತಾದ ಕೂಡಲೇ ಸಹಚರರ ಜತೆಗೂಡಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಕೊನೆಗೆ ಮೂವರೂ ಅಪರಾಧಿಗಳು ಎಂದು ತೀರ್ಪಿತ್ತ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

  • ಪ್ರೇಮಿಗಳ ದಿನದಂದು ನಟಿ ತಮನ್ನಾ ಮದುವೆ

    ಪ್ರೇಮಿಗಳ ದಿನದಂದು ನಟಿ ತಮನ್ನಾ ಮದುವೆ

    ಕ್ಷಿಣದ ಖ್ಯಾತ ನಟಿ ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಇಬ್ಬರೂ ಒಟ್ಟೊಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ, ಹಲವಾರು ಪ್ರಾಜೆಕ್ಟ್ ಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದೀಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. 2024 ಫೆಬ್ರವರಿಯಲ್ಲಿ ಅವರು ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮದುವೆ ವಿಚಾರವನ್ನು ಈ ಜೋಡಿ ಅಧಿಕೃತವಾಗಿ ಹೇಳದೇ ಇದ್ದರೂ, ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ  ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.

    ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.

    ಆದರೆ, ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು ತಮನ್ನಾ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು.  ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.

     

    ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ನಂತರ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದು ಸಲ ಒಪ್ಪಿಕೊಂಡು ಮತ್ತೊಂದು ಸಲ ಗಾಸಿಪ್ ಎಂದು ಹೇಳುತ್ತಾ ಡೇಟಿಂಗ್ ವಿಚಾರದಲ್ಲಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ ಈ ಸ್ಟಾರ್ ಜೋಡಿ.