Tag: ಡೆಲ್ಲಿ

  • ʼಇದು ನನ್ನ ಮೈದಾನʼ – ಟಾಂಗ್‌ ಕೊಟ್ಟ ಕೊಹ್ಲಿಗೆ ಕೈ ಸನ್ನೆ ಮಾಡಿ ತೋರಿಸಿದ ರಾಹುಲ್‌

    ʼಇದು ನನ್ನ ಮೈದಾನʼ – ಟಾಂಗ್‌ ಕೊಟ್ಟ ಕೊಹ್ಲಿಗೆ ಕೈ ಸನ್ನೆ ಮಾಡಿ ತೋರಿಸಿದ ರಾಹುಲ್‌

    ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಜಯಗಳಿಸಿದ ಬಳಿಕ ವಿರಾಟ್‌ ಕೊಹ್ಲಿ (Virat Kohli) ಇದು ನನ್ನ ಮೈದಾನ ಎಂದು ಹೇಳಿ ಕೆಎಲ್‌ ರಾಹುಲ್‌ಗೆ ಟಾಂಗ್‌ ನೀಡಿದ್ದಾರೆ.

    6 ವಿಕೆಟ್‌ಗಳ ಜಯಗಳಿಸಿದ ಬಳಿಕ ರಾಹುಲ್‌ ಜೊತೆ ಕೊಹ್ಲಿ ಸಂತೋಷದಿಂದ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ನೆಲಕ್ಕೆ ಕೈ ತೋರಿಸುತ್ತಾ ಇದು ನನ್ನ ಮೈದಾನ ಹೇಳಿದರು. ಇದಕ್ಕೆ ರಾಹುಲ್‌, ಪೆವಿಲಿಯನ್‌ಗೆ ಕೊಹ್ಲಿ ಹೆಸರು ಇದೆ ಎಂದು ಸನ್ನೆ ಮಾಡಿದರು. ನಂತರ ಕೊಹ್ಲಿ ರಾಹುಲ್‌ ಅವರನ್ನು ಅಪ್ಪಿ ಮಾತನಾಡಿದರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮೂಲತ: ದೆಹಲಿಯವರಾದ ಕೊಹ್ಲಿ ಈ ಮೈದಾನದಲ್ಲೇ ಕ್ರಿಕೆಟ್‌ ಅಭ್ಯಾಸ ನಡೆಸಿದ್ದರು. ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿರುವ ಒಂದು  ಸ್ಟ್ಯಾಂಡ್‌ಗೆ  ‘ವಿರಾಟ್‌ ಕೊಹ್ಲಿ ಪೆವಿಲಿಯನ್‌’ ಎಂದು ಹೆಸರನ್ನು ಇಡಲಾಗಿದೆ.

    ಟಾಂಗ್‌ ಕೊಟ್ಟಿದ್ದು ಯಾಕೆ?
    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ (RCB) ವಿರುದ್ಧ ಗೆದ್ದ ಬಳಿಕ ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಕಾಂತಾರ ಶೈಲಿಯಲ್ಲಿ ವೃತ್ತ ಬರೆದು ಸಂಭ್ರಮಿಸಿದ್ದರು.

    ಪಂದ್ಯಶ್ರೇಷ್ಠ ಗೌರಕ್ಕೆ ಪಾತ್ರರಾದ ರಾಹುಲ್‌, ಬೆಂಗಳೂರು (Bengaluru) ನನ್ನ ಮನೆ. ಈ ಮೈದಾನದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನನಗೆ ತಿಳಿದಿದೆ ಎಂದು ತಿಳಿಸಿದರು. ಈ ಡೈಲಾಗ್‌ ಹೊಡೆಯುವ ಮೂಲಕ ಹರಾಜಿನಲ್ಲಿ ತನ್ನನ್ನು ಪರಿಗಣಿಸದ ಆರ್‌ಸಿಬಿಗೆ ಟಾಂಗ್‌ ನೀಡಿದ್ದರು. ಇದನ್ನೂ ಓದಿ: `ಕಾಂತಾರ’ ನನ್ನ ಫೆವರಿಟ್ ಸಿನಿಮಾ, ಅದರಲ್ಲಿರುವಂತೆ ಮಾಡಿದೆ – ಆರ್‌ಸಿಬಿ ವಿರುದ್ಧ ಗೆದ್ದು ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ ಕೆಎಲ್ ರಾಹುಲ್

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ್ದ ಡೆಲ್ಲಿ  ಕ್ಯಾಪಿಟಲ್ಸ್‌ 8 ವಿಕೆಟ್‌ ನಷ್ಟಕ್ಕೆ 162 ರನ್‌ ಹೊಡೆಯಿತು. ಈ ಮೊತ್ತವನ್ನು ಪೇರಿಸಿದ ಆರ್‌ಸಿಬಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 165 ರನ್‌ ಹೊಡೆದಿ ಜಯಗಳಿಸಿತು.

    ಕೃನಾಲ್‌ ಪಾಂಡ್ಯ ಔಟಾಗದೇ 73 ರನ್‌ (47 ಎಸೆತ, 5 ಬೌಂಡರಿ, 4 ಸಿಕ್ಸ್‌) ಹೊಡೆದರೆ ವಿರಾಟ್‌ ಕೊಹ್ಲಿ 51 ರನ್‌( 47 ಎಸೆತ, 4 ಬೌಂಡರಿ) ಹೊಡೆದು ಔಟಾದರು. ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಸಂಪಾದಿಸಿದ ಆರ್‌ಸಿಬಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

  • ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಡೆಲ್ಲಿ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‍ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ.

    IPL 2022 MI VS KKR 02

    ಈಗಾಗಲೇ 15ನೇ ಆವೃತ್ತಿ ಐಪಿಎಲ್‍ನಲ್ಲಿ ಮುಂಬೈ ತಂಡ ಹೀನಾಯ ಪ್ರದರ್ಶನ ನೀಡಿ ಪ್ಲೇ ಆಫ್ ರೇಸ್‍ನಿಂದ ಹೊರನಡೆದಿದೆ. ಇಂದು ಡೆಲ್ಲಿ ವಿರುದ್ಧ ಕೊನೆಯ ಲೀಗ್ ಪಂದ್ಯವಾಡುತ್ತಿದೆ. ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಕೊಡಿ ಎಂಬ ಅಭಿಪ್ರಾಯ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

    ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯ ಮುಂಬೈಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಾದರೆ, ಡೆಲ್ಲಿಗೆ ಪ್ಲೇ ಆಫ್‍ಗೇರಲು ಕಡೆಯ ಅವಕಾಶವಾಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‍ಗೆ ಎಂಟ್ರಿ ಕೊಡಲಿದೆ. ಡೆಲ್ಲಿ ಗೆದ್ದರೆ, ಆರ್‌ಸಿಬಿ ಅದೃಷ್ಟದಾಟದಲ್ಲಿ ಸೋತು ಮನೆ ದಾರಿ ಹಿಡಿಯಬೇಕಾಗಿದೆ. ಹಾಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಮುಂಬೈಗೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಗೆ ವಿದಾಯ ಹೇಳುವ ಅವಕಾಶವಿದೆ. ಜೊತೆಗೆ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಮುಂದಿನ ಐಪಿಎಲ್ ವೇಳೆ ತಂಡವನ್ನು ಬಲಿಷ್ಠವಾಗಿಸುವ ವೇದಿಕೆಯಾಗಿ ಬಳಸಿಕೊಳ್ಳವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಬದಲಾವಣೆಯ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಅಲ್ಲದೇ ಯುವ ಆಟಗಾರ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ 30 ಲಕ್ಷ ರೂ. ನೀಡಿ ಖರೀದಿಸಿತು. ಆದರೆ ಈವರೆಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿಲ್ಲ. ಹಾಗಾಗಿ ಇಂದಿನ ಕೊನೆಯ ಲೀಗ್ ಪಂದ್ಯದಲ್ಲಿ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ ಮುಂಬೈ ತಂಡ ಅವಕಾಶ ನೀಡುತ್ತಾ? ಅಥವಾ ಮತ್ತೆ ಅರ್ಜುನ್ ತೆಂಡೂಲ್ಕರ್‌ಗೆ ನಿರಾಸೆ ಮಾಡುತ್ತಾ? ಎಂಬುದನ್ನು ಕಾದುನೋಡಬೇಕಾಗಿದೆ.

  • ಐಪಿಎಲ್ ಫೈನಲ್ ಪಂದ್ಯದ ಟೈಮಿಂಗ್ ಚೇಂಜ್ – ರಾತ್ರಿ 7:30ರ ಬದಲು 8 ಗಂಟೆಗೆ ಆರಂಭ

    ಐಪಿಎಲ್ ಫೈನಲ್ ಪಂದ್ಯದ ಟೈಮಿಂಗ್ ಚೇಂಜ್ – ರಾತ್ರಿ 7:30ರ ಬದಲು 8 ಗಂಟೆಗೆ ಆರಂಭ

    ಮುಂಬೈ: 15ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದ ಸಮಯ ಬದಲಾವಣೆಯಾಗಿರುವ ಬಗ್ಗೆ ಮೂಲಗಳಿಂದ ವರದಿಯಾಗಿದೆ.

    ಐಪಿಎಲ್ ಪಂದ್ಯಗಳು ರಾತ್ರಿ 7:30ಕ್ಕೆ ಆರಂಭವಾಗುತ್ತಿತ್ತು. ಈ ಬಾರಿ ಫೈನಲ್ ಪಂದ್ಯವನ್ನು ಅರ್ಧ ಗಂಟೆ ಲೇಟ್ ಆಗಿ ಆರಂಭಿಸಲು ಬಿಸಿಸಿಐ ಒಪ್ಪಿಗೆ ಸೂಚಿಸಿರುವ ಬಗ್ಗೆ ವರದಿಯಾಗಿದೆ. ಐಪಿಎಲ್ ಫೈನಲ್ ಪಂದ್ಯ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 29 ಭಾನುವಾರ ರಂದು ನಡೆಸಲು ಈಗಾಗಲೇ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ವಿರೋಚಿತ ಸೋಲು – ಕಣ್ಣೀರಿಟ್ಟ ರಿಂಕು ಸಿಂಗ್

    ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6:30ಕ್ಕೆ ಮತ್ತು ಪಂದ್ಯದ ಬಳಿಕ 50 ನಿಮಿಷಗಳ ಕಾಲ ಸಮಾರೋಪ ಸಮಾರಂಭ ನಡೆಯಲಿದೆ. ಹಾಗಾಗಿ ಪಂದ್ಯವನ್ನು ರಾತ್ರಿ 7:30ರ ಬದಲಾಗಿ 8 ಗಂಟೆಗೆ ಆರಂಭಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಸಮಾರೋಪ ಸಮಾರಂಭಕ್ಕೆ ಹಲವು ಗಣ್ಯರು ಭಾಗವಹಿಸಲಿದ್ದು, ಬಾಲಿವುಡ್‍ನ ಸ್ಟಾರ್‌ಗಳು ಮೆರುಗು ಹೆಚ್ಚಿಸಲಿದ್ದಾರೆ. ಇದನ್ನೂ ಓದಿ: RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ

    IPL 2022 GT VS LSG PLAYOFF

    ಈಗಾಗಲೇ ಐಪಿಎಲ್‍ನ ಕಡೆಯ ಕೆಲಪಂದ್ಯಗಳು ನಡೆಯುತ್ತಿದ್ದು, ಗುಜರಾತ್ ಮತ್ತು ಲಕ್ನೋ ತಂಡಗಳು ಪ್ಲೇ ಆಫ್‍ಗೆ ಎಂಟ್ರಿಕೊಟ್ಟಿದೆ. ಇನ್ನೆರಡು ತಂಡಗಳು ಪ್ಲೇ ಆಫ್‍ಗೇರುವ ಅವಕಾಶ ಹೊಂದಿದ್ದು, ಡೆಲ್ಲಿ ಮತ್ತು  ಆರ್​ಸಿಬಿ ತಂಡ ತೀವ್ರ ಪೈಪೋಟಿ ನಡೆಸುತ್ತಿದೆ.

  • ಡೆಲ್ಲಿ ದರ್ಬಾರ್‌ಗೆ ಪಂಜಾಬ್ ಪಂಚರ್ – 10 ಓವರ್‌ಗಳಲ್ಲಿ ಟಾರ್ಗೆಟ್ ಉಡೀಸ್

    ಡೆಲ್ಲಿ ದರ್ಬಾರ್‌ಗೆ ಪಂಜಾಬ್ ಪಂಚರ್ – 10 ಓವರ್‌ಗಳಲ್ಲಿ ಟಾರ್ಗೆಟ್ ಉಡೀಸ್

    ಮುಂಬೈ: ಪಂಜಾಬ್ ವಿರುದ್ಧ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಮೂರು ವಿಭಾಗದಲ್ಲೂ ಮೇಲುಗೈ ಸಾಧಿಸಿದ ಡೆಲ್ಲಿ 9 ವಿಕೆಟ್‌ಗಳಿಂದ ಸಲಿಸಾಗಿ ಪಂದ್ಯ ಗೆದ್ದುಕೊಂಡಿದೆ.

    ಪಂಜಾಬ್ ನೀಡಿದ 116 ರನ್‍ಗಳ ಅಲ್ಪಮೊತ್ತದ ಗುರಿ ಪಡೆದ ಡೆಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 10.3 ಓವರ್‌ಗಳಲ್ಲಿ ಇನ್ನೂ 57 ಎಸೆತ ಬಾಕಿ ಇರುವಂತೆ 9 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

    ಪಂಜಾಬ್ ನೀಡಿದ ಅಲ್ಪಮೊತ್ತವನ್ನು ಬೆನ್ನಟಿದ ಡೆಲ್ಲಿಗೆ ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ವಾರ್ನರ್ ನಾ ಮುಂದು ತಾ ಮುಂದು ಎಂಬಂತೆ ಬ್ಯಾಟ್ ಬೀಸಲು ಆರಂಭಿಸಿದರು. ಪಂಜಾಬ್ ಬೌಲರ್‌ಗಳ ಎಸೆತಗಳನ್ನು ಪಟಪಟನೇ ಬೌಂಡರಿಗಟ್ಟಿ ಮೆರೆದಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 83 ರನ್ (39 ಎಸೆತ) ಚಚ್ಚಿ ಗೆಲುವು ಖಾತ್ರಿ ಪಡಿಸಿತು. ಪೃಥ್ವಿ ಶಾ 41 ರನ್ (20 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆದರೆ ಇತ್ತ ವಾರ್ನರ್ ಮಾತ್ರ ಕಳೆದ ಪಂದ್ಯದ ಮುಂದುವರಿದ ಭಾಗ ಎಂಬಂತೆ ಬ್ಯಾಟ್‍ಬೀಸಿ ಅಜೇಯ 60 ರನ್ (30 ಎಸೆತ, 10 ಬೌಂಡರಿ 1 ಸಿಕ್ಸ್‌) ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

    ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡದ ಬ್ಯಾಟ್ಸ್‌ಮ್ಯಾನ್‌ಗಳು ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕರಾದ ಮಯಾಂಕ್ ಅಗರ್‌ವಾಲ್ 24 ರನ್ (15 ಎಸೆತ, 4 ಬೌಂಡರಿ) ಮತ್ತು ಶಿಖರ್ ಧವನ್ 9 ರನ್ (10 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

    ನಂತರ ಆರಂಭವಾದ ಕುಸಿತದಿಂದ ಚೇತರಿಸಿಕೊಳ್ಳಲು ಪಂಜಾಬ್‍ಗೆ ಸಾಧ್ಯವಾಗಲೇ ಇಲ್ಲ. ಡೆಲ್ಲಿ ಬೌಲರ್‌ಗಳ ಕರಾರುವಾಕ್ ದಾಳಿಗೆ ನಲುಗಿದ ಪಂಜಾಬ್ ತಂಡದ ದಾಂಡಿರು ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಪಂಜಾಬ್ ಪರ ಜಿತೇಶ್ ಶರ್ಮಾ ಸಿಡಿಸಿದ 32 ರನ್ (20 ಎಸೆತ) ತಂಡದ ಪರ ಹೆಚ್ಚಿನ ಗಳಿಕೆಯಾಗಿದೆ. ಅಂತಿಮವಾಗಿ 20 ಓವರ್‌ಗಳ ಅಂತ್ಯಕ್ಕೆ 115 ರನ್ ಗಳಿಗೆ ಪಂಜಾಬ್ ಸರ್ವಪತನ ಕಂಡಿತು.

    ಡೆಲ್ಲಿ ಪರ ಖಲೀಲ್ ಅಹಮ್ಮದ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಮತ್ತು ಕುಲ್‍ದೀಪ್ ಯಾದವ್ ತಲಾ 2 ವಿಕೆಟ್ ಹಂಚಿಕೊಂಡರೆ, ಮುಸ್ತಫಿಜುರ್ ರೆಹಮಾನ್ 1 ವಿಕೆಟ್ ಪಡೆದು ಪಂಜಾಬ್ ಕುಸಿತಕ್ಕೆ ಕಾರಣರಾದರು.

  • ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

    ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

    ಮುಂಬೈ: ಭಾನುವಾರ ಕೆಕೆಆರ್ ಮತ್ತು ಡೆಲ್ಲಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿಹಾಕಿದ ಡೆಲ್ಲಿ ತಂಡ 44 ರನ್‍ಗಳ ಅಂತರದ ಜಯ ಸಾಧಿಸಿತ್ತು. ಈ ಜಯವನ್ನು ಡೆಲ್ಲಿ ಟೀಂ ಡ್ರೇಸಿಂಗ್ ರೂಮ್‍ನಲ್ಲಿ ಸಂಭ್ರಮಿಸಿಕೊಂಡಿದೆ.

    ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್‍ನ ತಂಡದ ಪರ ಆಡುತ್ತಿದ್ದ ಓಪನರ್ ಡೇವಿಡ್ ವಾರ್ನರ್ ಡ್ರೆಸಿಂಗ್ ರೂಮ್‍ನಲ್ಲಿ ಹೌ ಈಸ್ ದಿ ಜೋಶ್ ಎಂದು ತಂಡವನ್ನು ಹುರಿದುಂಬಿಸಿದರು.

    ಈ ಬಗ್ಗೆ ಡೆಲ್ಲಿ ತಂಡದ ಅಧಿಕೃತ ಇನ್ಸ್‌ಸ್ಟಾಗ್ರಾಮ್ ಖಾತೆ ವೀಡಿಯೋ ತುಣುಕನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ವಾರ್ನರ್ ಹೌ ಈಸ್ ದಿ ಜೋಶ್ ಎಂದು ಕೇಳುತ್ತಾರೆ. ಅದಕ್ಕೆ ತಂಡದ ಉಳಿದ ಆಟಗಾರರು ಹೈ ಸರ್ ಎನ್ನುತ್ತಾರೆ. ಈ ಡೈಲಾಗ್ ಹಿಂದಿ ಸಿನಿಮಾ ಉರಿಯದ್ದಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

     

    View this post on Instagram

     

    A post shared by Delhi Capitals (@delhicapitals)

     

    ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ತಂಡ ಡೆಲ್ಲಿಯನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಮನಬಂದಂತೆ ಬ್ಯಾಟ್ ಬೀಸಿದರು. ಕೋಲ್ಕತ್ತಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 93 ರನ್ (52 ಎಸೆತ)ಗಳ ಜೊತೆಯಾಟವಾಡಿದರು. ಪೃಥ್ವಿ ಶಾ 51 ರನ್ (29 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಇದನ್ನೂ ಓದಿ: ಡೆಲ್ಲಿ ದರ್ಬಾರ್‌ಗೆ ಕೆಕೆಆರ್ ಢಮಾರ್ – ಮಿಂಚಿದ ವಾರ್ನರ್

    ಆ ಬಳಿಕ ಪಂತ್ ಜೊತೆಗೂಡಿದ ವಾರ್ನರ್ ಮತ್ತಷ್ಟು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಂತಿಮವಾಗಿ ವಾರ್ನರ್ 61 ರನ್ (45 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ರಿಷಭ್ ಪಂತ್ 27 ರನ್ (14 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ 2ನೇ ವಿಕೆಟ್‍ಗೆ 55 ರನ್ (27 ಎಸೆತ) ಒಟ್ಟು ಸೇರಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ

  • ಯಾದವ್, ಅಕ್ಷರ್ ಬ್ಯಾಟಿಂಗ್ ಬಿರುಗಾಳಿಗೆ ತತ್ತರಿಸಿದ ಮುಂಬೈ

    ಯಾದವ್, ಅಕ್ಷರ್ ಬ್ಯಾಟಿಂಗ್ ಬಿರುಗಾಳಿಗೆ ತತ್ತರಿಸಿದ ಮುಂಬೈ

    ಮುಂಬೈ: ಡೆಲ್ಲಿ ತಂಡದ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಪರಿಣಾಮ ಮುಂಬೈ ವಿರುದ್ಧ 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

    16ನೇ ಓವರ್ ವರೆಗೂ ಮುಂಬೈ ಹಿಡಿತದಲ್ಲಿದ್ದ ಪಂದ್ಯ 16ನೇ ಓವರ್ ಬಳಿಕ ಡೆಲ್ಲಿ ಪರ ವಾಲಿತು. ಡೆಲ್ಲಿ ಬ್ಯಾಟ್ಸ್‌ಮ್ಯಾನ್‌ಗಳಾದ ಅಕ್ಷರ್ ಪಟೇಲ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 3 ಸಿಕ್ಸ್) ಮತ್ತು ಲಲಿತ್ ಯಾದವ್ 48 ರನ್ (4 ಬೌಂಡರಿ, 2 ಸಿಕ್ಸ್) ಸಿಡಿಸಿ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಡೇನಿಯಲ್ ಸ್ಯಾಮ್ ಎಸೆದ 18ನೇ ಓವರ್‌ನಲ್ಲಿ ಬರೋಬ್ಬರಿ 24 ರನ್ ಚಚ್ಚಿದ ಈ ಜೋಡಿ ಡೆಲ್ಲಿ ತಂಡದ ಗೆಲುವನ್ನು ಖಾತ್ರಿ ಪಡಿಸಿತು. ಅಂತಿಮವಾಗಿ 18.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಸಿಡಿಸಿ ಡೆಲ್ಲಿ ಗೆಲುವು ಸಾಧಿಸಿತು. ಇದನ್ನೂ ಓದಿ: ಕೊನೆಯ ಓವರ್ ಥ್ರಿಲ್ಲರ್ – ಆ ಒಂದು ‘ನೋ ಬಾಲ್‍’ನಿಂದ ಭಾರತ ತಂಡ ಮನೆಗೆ

    ಈ ಮೊದಲು ಪೃಥ್ವಿ ಶಾ 38 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್), ಟಿಮ್ ಸೀಫರ್ಟ್ 21 ರನ್ (14 ಎಸೆತ, 4 ಬೌಂಡರಿ) ಮತ್ತು ಶಾರ್ದೂಲ್ ಠಾಕೂರ್ 22 ರನ್ (11 ಎಸೆತ, 4 ಬೌಂಡರಿ) ಬಾರಿಸಿ ತಂಡಕ್ಕೆ ನೆರವಾದರು.

    ಈ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ಬೆಂಡೆತ್ತಿದರು. ಈ ಜೋಡಿ ಮೊದಲ ವಿಕೆಟ್‍ಗೆ 67 ರನ್ (50 ಎಸೆತ)ಗಳ ಜೊತೆಯಾಟವಾಡಿತು. ರೋಹಿತ್ ಶರ್ಮಾ 41 ರನ್ (32 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಇತ್ತ ಇಶಾನ್ ಕಿಶನ್ ಮಾತ್ರ ತಮ್ಮ ಬ್ಯಾಟಿಂಗ್ ಅಬ್ಬರ ನಿಲ್ಲಿಸಲಿಲ್ಲ. ಇತ್ತ ವಿಕೆಟ್ ಉರುಳುತ್ತಿದ್ದರು ರನ್ ಮಾತ್ರ ಸರಾಗವಾಗಿ ಹರಿದು ಬರತೊಡಗಿತು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋಲು – ಮಹಿಳಾ ವರ್ಲ್ಡ್‌ಕಪ್ ಟೂರ್ನಿಯಿಂದ ಭಾರತ ಔಟ್

    ಮುಂಬೈ ಬ್ಯಾಟಿಂಗ್ ಸರದಿಯಲ್ಲಿ ತಿಲಕ್ ವರ್ಮ 22 ರನ್ (15 ಎಸೆತ, 3 ಬೌಂಡರಿ) ಸಿಡಿಸಿ ಕಿಶನ್‍ಗೆ ಸಾಥ್ ನೀಡಿದರು. ಇಶನ್ ಆರಂಭಿಕರಾಗಿ ಬಂದು ಇನ್ನಿಂಗ್ಸ್‌ನ ಕೊನೆಯ ವರೆಗೂ ಬ್ಯಾಟ್‍ಬೀಸಿ ಅಜೇಯ 81 ರನ್ (48 ಎಸೆತ, 11 ಬೌಂಡರಿ, 2 ಸಿಕ್ಸ್) ಸಿಡಿಸಿ ಮಿಂಚಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಮುಂಬೈ 5 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು.

    ಡೆಲ್ಲಿ ಪರ ಕುಲ್‍ದೀಪ್ ಯಾದವ್ 3 ವಿಕೆಟ್ ಕಿತ್ತು ಮುಂಬೈನ ರನ್ ಓಟಕ್ಕೆ ಬ್ರೇಕ್ ಹಾಕಿದರು. ಖಲೀಲ್ ಅಹಮ್ಮದ್ 2 ವಿಕೆಟ್ ಪಡೆದು ಸೈ ಎನಿಸಿಕೊಂಡರು.

  • ಒಂದಂಕದ ರೋಚಕ ಜಯ – ಚೊಚ್ಚಲ ಬಾರಿ ಪ್ರೋ ಕಬಡ್ಡಿ ಚಾಂಪಿಯನ್ ಆದ ಡೆಲ್ಲಿ

    ಒಂದಂಕದ ರೋಚಕ ಜಯ – ಚೊಚ್ಚಲ ಬಾರಿ ಪ್ರೋ ಕಬಡ್ಡಿ ಚಾಂಪಿಯನ್ ಆದ ಡೆಲ್ಲಿ

    ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ ಪ್ರೋ ಕಬಡ್ಡಿ ಫೈನಲ್ ಪಂದ್ಯದಲ್ಲಿ ಕಡೆಯ ಸೆಕೆಂಡ್‍ನಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 36 – 37, 1 ಅಂಕದ ಮುನ್ನಡೆಯಿಂದ ವಿಜಯ ಪತಾಕೆ ಹಾರಿಸಿದ ದಬಾಂಗ್ ಡೆಲ್ಲಿ ಚಾಂಪಿಯನ್ ಆಗಿದೆ.

    4 ಬಾರಿ ಫೈನಲ್ ಪ್ರವೇಶಿಸಿದ ಪಾಟ್ನಾಗೆ ಫೈನಲ್ ಪಂದ್ಯದಲ್ಲಿ ಡೆಲ್ಲಿ ಟಕ್ಕರ್ ನೀಡಿದೆ. ಡೆಲ್ಲಿಯ ವಿಜಯ್ ಮಲಿಕ್ ಮತ್ತು ನವೀನ್ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಕುಮಾರ್ ಭರ್ಜರಿ ರೈಡ್ ಮೂಲಕ ಪಾಟ್ನಾಗೆ ಪಂಚ್ ನೀಡಿದರು. ಕೊನೆಯ ಸೆಕೆಂಡ್ ವರೆಗೆ ರೋಚಕವಾಗಿ ಕೂಡಿದ ಪಂದ್ಯದಲ್ಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಯಿತು. ಎರಡು ತಂಡಗಳು ಕೂಡ ಬಲಿಷ್ಠ ಕಾದಾಟ ನಡೆಸಿ ಪ್ರಶಸ್ತಿಗೆ ಮುತ್ತಿಕ್ಕುವ ಕನಸಿನಲ್ಲಿತ್ತು. ಈ ಕನಸನ್ನು ಡೆಲ್ಲಿ ನನಸು ಮಾಡಿಕೊಂಡಿತು.‌ ಇದನ್ನೂ ಓದಿ: ಮಾರ್ಚ್ 26ಕ್ಕೆ ಐಪಿಎಲ್ ಆರಂಭ ಮೇ 29ಕ್ಕೆ ಫೈನಲ್ – 2 ನಗರಗಳಲ್ಲಿ 70 ಪಂದ್ಯ

    ಡೆಲ್ಲಿ ಪರ ವಿಜಯ್ ಮಲಿಕ್ 8 ರೈಡ್, 1 ಟೇಕಲ್, 5 ಬೋನಸ್ ಸಹಿತ 14 ಅಂಕ ಮತ್ತು ನವೀನ್ ಕುಮಾರ್ 11 ರೈಡ್, 2 ಬೋನಸ್ ಅಂಕ ಸಹಿತ ಒಟ್ಟು 13 ಪಾಯಿಂಟ್ ಕಲೆಹಾಕಿ ಗೆಲುವಿನ ರೂವಾರಿಯಾದರು. ಇತ್ತ ಪಾಟ್ನಾ ಪರ ಸಚಿನ್ 7 ರೈಡ್, 1 ಟೇಕಲ್, 2 ಬೋನಸ್ ಸಹಿತ ಸೂಪರ್ 10 ಪೂರೈಸಿ ಮಿಂಚಿದರೂ ಆ ಹೋರಾಟ ವ್ಯರ್ಥವಾಯಿತು. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ

    ಪಾಟ್ನಾ ಪೈರೇಟ್ಸ್ 29 ರೈಡ್, 4 ಟೇಕಲ್, 2 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 36 ಅಂಕ ಕಲೆಹಾಕಿತು. ಡೆಲ್ಲಿ 27 ರೈಡ್, 2 ಸೂಪರ್ ರೈಡ್, 4 ಟೇಕಲ್, 2 ಆಲೌಟ್ ಮತ್ತು 4 ಇತರೆ ಅಂಕ ಸಹಿತ 37 ಅಂಕ ಸಂಪಾದಿಸಿ 1 ಅಂಕದ ಜಯ ದಾಖಲಿಸಿ ಪ್ರೊ ಕಬಡ್ಡಿ 8 ಆವೃತ್ತಿಯ ಪ್ರಶಸ್ತಿಗೆ ಮುತ್ತಿಕ್ಕಿತು.

     

  • ಡೆಲ್ಲಿ ಮನೆಗೆ ಕೋಲ್ಕತ್ತಾ ಫೈನಲ್‍ಗೆ

    ಡೆಲ್ಲಿ ಮನೆಗೆ ಕೋಲ್ಕತ್ತಾ ಫೈನಲ್‍ಗೆ

    ದುಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಡೆಲ್ಲಿ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಕೋಲ್ಕತ್ತಾ ತಂಡ ಜಯದೊಂದಿಗೆ 14ನೇ ಅವೃತ್ತಿ ಐಪಿಎಲ್‍ನ ಫೈನಲ್ ತಲುಪಿದೆ. ಈ ಮೂಲಕ ಕೋಲ್ಕತ್ತಾ ತಂಡ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದಂತಾಗಿದೆ.

    ಗೆಲ್ಲಲು 136 ರನ್ ಟಾರ್ಗೆಟ್ ಪಡೆದ ಕೋಲ್ಕತ್ತಾ ತಂಡಕ್ಕೆ ಆರಂಭಿಕ ಜೋಡಿ 96 ರನ್ (74 ಎಸೆತ) ಜೊತೆಯಾಟದ ಮೂಲಕ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಅಂತಿಮವಾಗಿ ಕೋಲ್ಕತ್ತಾ ತಂಡ 19. 5 ಓವರ್‍ ಗಳಲ್ಲಿ 136 ರನ್ ಸಿಡಿಸಿ ಜಯ ಗಳಿಸಿತು. ಇದನ್ನೂ ಓದಿ: T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

    ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 55 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ಕಗಿಸೋ ರಬಾಡಗೆ ವಿಕೆಟ್ ಒಪ್ಪಿಸಿದರು. ಆದರೆ ಶುಭಮನ್ ಗಿಲ್ ಕಡೆಯವರೆಗೆ ಹೋರಾಡಿ 46 ರನ್ (46 ಎಸೆತ, 1 ಬೌಂಡರಿ 1 ಸಿಕ್ಸ್) ಸಿಡಿಸಿ ಅವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್‍ ನಲ್ಲಿ 6 ಬಾಲ್‍ಗೆ 7 ರನ್ ಬೇಕಾಗಿತ್ತು. ಅಶ್ವಿನ್ ಎಸೆದ ಓವರ್‍ ನ ಮೊದಲ ಎಸೆತ ತ್ರಿಪಾಠಿ ಒಂದು ರನ್ ತೆಗೆದರೆ, 2 ಬಾಲ್ ಡಾಟ್, 3ನೇ ಬಾಲ್ ಶಕೀಬ್ ಔಟ್ ಆದರೆ, 4 ನೇ ಎಸೆತದಲ್ಲಿ ನರೈನ್ ಔಟ್. ಕಡೆಯ 2 ಎಸೆತದಲ್ಲಿ 6 ರನ್ ಬೇಕಾಗಿತ್ತು. ಈ ವೇಳೆ ರಾಹುಲ್ ತ್ರಿಪಾಠಿ 5ನೇ ಎಸತವನ್ನು ಸಿಕ್ಸರ್ ಸಿಡಿಸಿ ರೋಚಕ ಜಯ ತಂದು ಕೊಟ್ಟರು.

    ಈ ಮೊದಲು ಟಾಸ್ ಗೆದ್ದ ಕೋಲ್ಕತ್ತಾ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 18 ರನ್ (12 ಎಸೆತ, 2 ಬೌಂಡರಿ, 1 ಸಿಕ್ಸ್ ಮತ್ತು ಶಿಖರ್ ಧವನ್ 36 ರನ್ (39 ಎಸೆತ, 1 ಬೌಂಡರಿ, 2 ಸಿಕ್ಸ್) ಸಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಮಾರ್ಕಸ್ ಸ್ಟೋಯ್ನಿಸ್ ಮತ್ತು ಶ್ರೇಯಸ್ ಅಯ್ಯರ್ ಸ್ಪಲ್ಪ ಮಟ್ಟಿನ ಚೇತರಿಕೆ ನೀಡಿದರು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ಕೋಲ್ಕತ್ತಾ ಬೌಲರ್‍ ಗಳು ಬಿಡಲಿಲ್ಲ. ಸ್ಟೋಯ್ನಿಸ್ 18 ರನ್ (23 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಇದನ್ನೂ ಓದಿ: ಟಿ20 ವಿಶ್ವಕಪ್‍ಗಾಗಿ ಟೀಂ ಇಂಡಿಯಾ ಸೇರ್ಪಡೆಗೊಂಡ ಐಪಿಎಲ್ ಸ್ಟಾರ್ಸ್

    ಅಲ್ಪ ಮೊತ್ತ ಕಲೆ ಹಾಕಿದ ಡೆಲ್ಲಿ:
    ಶ್ರೇಯಸ್ ಅಯ್ಯರ್ ಅಜೇಯ 30 ರನ್ 27 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಶಿಮ್ರಾನ್ ಹೆಟ್ಮಾಯೆರ್ 17 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ 130 ಗಡಿದಾಟಿತು ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಡೆಲ್ಲಿ ತಂಡ 135 ರನ್ ಕಲೆ ಹಾಕಿತು.

    ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2 ವಿಕೆಟ್ ಕಿತ್ತು ಮಿಂಚಿದರು. ಲೂಕಿ ಫಗ್ರ್ಯೂಸನ್ ಮತ್ತು ಶಿವಂ ಮಾವಿ ತಲಾ 1 ವಿಕೆಟ್ ಪಡೆದರು.

  • ಐಪಿಎಲ್ ಫೈನಲ್‍ಗೆ ಚೆನ್ನೈ – ಸಿಕ್ಸರ್, ಬೌಂಡರಿ ಸಿಡಿಸಿ ದಡ ಸೇರಿಸಿದ ಧೋನಿ

    ಐಪಿಎಲ್ ಫೈನಲ್‍ಗೆ ಚೆನ್ನೈ – ಸಿಕ್ಸರ್, ಬೌಂಡರಿ ಸಿಡಿಸಿ ದಡ ಸೇರಿಸಿದ ಧೋನಿ

    ದುಬೈ: ಡೆಲ್ಲಿ ವಿರುದ್ಧ 4 ವಿಕೆಟ್‍ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲ್ ಪ್ರವೇಶಿಸಿದೆ. ಈ ಮೂಲಕ 9 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದಂತಾಗಿದೆ.

    ಡೆಲ್ಲಿ ತಂಡ ನೀಡಿದ 173 ರನ್‍ಗಳ ಗುರಿ ಪಡೆದ ಚೆನ್ನೈ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಬ್ಯಾಟಿಂಗ್ ನೆರವಿನಿಂದ 19.4 ಓವರ್‍ಗಳಲ್ಲಿ 173 ರನ್ ಸಿಡಿಸಿ ರೋಚಕ ಜಯ ದಾಖಲಿಸಿದೆ. ಈ ಮೂಲಕ ಕಳೆದ ಬಾರಿ ಲೀಗ್ ಹಂತದಲ್ಲೇ ಹೊರ ಬಿದ್ದಿದ್ದ ಚೆನ್ನೈ ಈ ಬಾರಿ ಫೈನಲ್ ಪ್ರವೇಶಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

    ಉತ್ತಪ್ಪ, ಗಾಯಕ್ವಾಡ್ ಬೊಂಬಾಟ್ ಬ್ಯಾಟಿಂಗ್:
    173ರನ್‍ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಆರಂಭದಲ್ಲಿ ಫಾಫ್ ಡು ಪ್ಲೆಸಿಸ್ 1ರನ್ ಸಿಡಿಸಿ ಔಟ್ ಆದರು ಬಳಿಕ ಒಂದಾದ ಉತ್ತಪ್ಪ ಮತ್ತು ಗಾಯಕ್ವಾಡ್ 2ನೇ ವಿಕೆಟ್‍ಗೆ 110 ರನ್ (77 ಎಸೆತ) ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಉತ್ತಪ್ಪ 63 ರನ್ (44 ಎಸೆತ, 7 ಬೌಂಡರಿ, 2 ಸಿಕ್ಸ್) ಬಾರಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶ್ರೇಯಸ್ ಅಯ್ಯರ್ ಹಿಡಿದ ಉತ್ತಮವಾದ ಕ್ಯಾಚ್‍ಗೆ ಬಳಿಯಾದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದರೆ ಸಿಗುವ ನಗದು ಬಹುಮಾನವೆಷ್ಟು ಗೊತ್ತಾ?

    ಕೊನೆಯಲ್ಲಿ ಧೋನಿ ಔಟಾಗದೇ 18 ರನ್(6 ಎಸೆತ, 3 ಬೌಂಡರಿ, 1 ಸಿಕ್ಸರ್), ಮೊಯಿನ್ ಆಲಿ 16 ರನ್(12 ಎಸೆತ, 2 ಬೌಂಡರಿ) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಈ ಮೊದಲು ಕ್ವಾಲಿಫೈಯರ್ ಪಂದ್ಯದ ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ದು ಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡ ಚೆನ್ನೈ ಲೆಕ್ಕಾಚಾರದಂತೆ ಆರಂಭದಲ್ಲಿ ಶಿಖರ್ ಧವನ್ 7 ರನ್ (7 ಎಸೆತ, 1 ಬೌಂಡರಿ) ಸಿಡಿಸಿ ಜೋಶ್ ಹೇಜಲ್‍ವುಡ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ಶ್ರೇಯಸ್ ಅಯ್ಯರ್ ಬಂದಷ್ಟೇ ವೇಗವಾಗಿ 1ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಆರಂಭದಲ್ಲಿ ಚೆನ್ನೈ ಮೇಲುಗೈ ಪಡೆದುಕೊಂಡಿತು. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

    ನಂತರ ಬಂದ ಅಕ್ಷರ್ ಪಟೇಲ್ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ 10 ರನ್ (11 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಆ ಬಳಿಕ ಬಂದ ರಿಷಬ್ ಪಂತ್, ಒಂದು ಕಡೆಯಲ್ಲಿ ಆರಂಭಿಕನಾಗಿ ಬಂದು ಅಬ್ಬರಿಸುತ್ತಿದ್ದ ಪೃಥ್ವಿ ಶಾ ಜೊತೆಗೂಡಿ ಇನ್ನಷ್ಟು ರನ್ ಹೆಚ್ಚಿಸಲು ಆರಂಭಿಸುತ್ತಿದ್ದಂತೆ, ಪೃಥ್ವಿ ಶಾ 60 ರನ್ (34 ಎಸೆತ 7 ಬೌಂಡರಿ, 3 ಸಿಕ್ಸ್) ಚಚ್ಚಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಶಿಮ್ರಾನ್ ಹೆಟ್ಮಾಯೆರ್ ಜೊತೆಗೂಡಿದ ಪಂತ್ ಅಬ್ಬರಿಸಲು ಆರಂಭಿಸಿದರು. ಈ ಜೊಡಿ 5ನೇ ವಿಕೆಟ್‍ಗೆ 83 ರನ್ (50 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿತು. ಹೆಟ್ಮಾಯೆರ್ 37 ರನ್ (24 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಕೊನೆಯವರೆಗೆ ಬ್ಯಾಟ್‍ಬೀಸಿದ ಪಂತ್ 51 ರನ್ ( 35 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು ಜೊತೆಗೆ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್‍ ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಮಾಡಿತು.

    ಚೆನ್ನೈ ಪರ ಜೋಶ್ ಹೇಜಲ್‍ವುಡ್ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ಮೊಯಿನ್ ಆಲಿ ಮತ್ತು ಬ್ರಾವೋ ತಲಾ ಒಂದುವಿಕೆಟ್ ಪಡೆದರು.

  • ಲಾಸ್ಟ್‌ ಬಾಲಿನಲ್ಲಿ ಸಿಕ್ಸ್‌ – ಭರತ್‌, ಮ್ಯಾಕ್ಸಿ ಬೆಂಕಿಯಾಟಕ್ಕೆ ಡೆಲ್ಲಿ ಪಂಚರ್‌

    ಲಾಸ್ಟ್‌ ಬಾಲಿನಲ್ಲಿ ಸಿಕ್ಸ್‌ – ಭರತ್‌, ಮ್ಯಾಕ್ಸಿ ಬೆಂಕಿಯಾಟಕ್ಕೆ ಡೆಲ್ಲಿ ಪಂಚರ್‌

    ದುಬೈ: ಕೊನೆಯ ಎಸೆತದಲ್ಲಿ ಶ್ರೀಕರ್‌ ಭರತ್‌ ಸಿಕ್ಸ್‌ ಸಿಡಿಸುವ ಮೂಲಕ ಡೆಲ್ಲಿ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ತಂಡ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಗೆಲ್ಲಲು 165 ರನ್‌ಗಳ ಸವಾಲು ಪಡೆದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿ ಜಯಗಳಿಸಿತು.

    ಆವೀಶ್‌ ಖಾನ್‌ ಎಸೆದ ಕೊನೆಯ ಓವರಿನಲ್ಲಿ 15 ರನ್‌ ಬೇಕಿತ್ತು. ಮೊದಲ ಎಸೆತದಲ್ಲಿ ಮ್ಯಾಕ್ಸ್‌ವೆಲ್‌ 4 ರನ್‌ ಹೊಡೆದರೆ ಎರಡನೇ ಎಸೆತದಲ್ಲಿ ಎರಡು ರನ್‌ ಓಡಿದರು. ಮೂರನೇ ಎಸೆತ ಲೆಗ್‌ಬೈ ಮೂಲಕ 1 ರನ್‌ ಬಂತು. 4ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5 ನೇ ಎಸೆತದಲ್ಲಿ ಅಕ್ಷರ್‌ ಪಟೇಲ್‌ ಮಿಸ್‌ ಫೀಲ್ಡ್‌ ಮಾಡಿದ ಕಾರಣ 2 ರನ್‌ ಬಂದರೆ ನಂತರದ ಎಸೆತ ವೈಡ್‌ ಆಯ್ತು. ಕೊನೆಯ ಎಸೆತದಲ್ಲಿ 4 ರನ್‌ ಬೇಕಿದ್ದಾಗ ಭರತ್‌ ಸಿಕ್ಸ್‌ ಸಿಡಿಸಿದರು. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

    ಮುರಿಯದ 4ನೇ ವಿಕೆಟಿಗೆ ಭರತ್‌ ಮತ್ತು ಮ್ಯಾಕ್ಸ್‌ವೆಲ್‌ 63 ಎಸೆತಗಳಲ್ಲಿ 111 ರನ್‌ ಹೊಡೆದು ಜಯವನ್ನು ತಂದುಕೊಟ್ಟಿದ್ದಾರೆ.

    ಶ್ರೀಕರ್‌ ಭರತ್‌ 78 ರನ್‌(52 ಎಸೆತ, 3 ಬೌಂಡರಿ, 4 ಸಿಕ್ಸರ್)‌, ಮ್ಯಾಕ್ಸ್‌ವೆಲ್‌ 51 ರನ್‌(33 ಎಸೆತ, 8 ಬೌಂಡರಿ) ಹೊಡೆದರು. ಎಬಿಡಿ 26 ರನ್‌ಗಳಿಸಿ ಔಟಾದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಪೃಥ್ವಿ ಶಾ 48 ರನ್‌(31 ಎಸೆತ, 4 ಬೌಂಡರಿ, 2 ಸಿಕ್ಸರ್‌) ಶಿಖರ್‌ ಧವನ್‌ 43 ರನ್‌(35 ಎಸೆತ, 3 ಬೌಂಡರಿ,2 ಸಿಕ್ಸರ್‌) ಹೆಟ್ಮೆಯರ್‌ 29 ರನ್‌(22 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    ಸಿರಾಜ್‌ 2 ವಿಕೆಟ್‌ ಪಡೆದರೆ ಚಹಲ್‌, ಹರ್ಷಲ್‌ ಪಟೇಲ್‌, ಕ್ರಿಸ್ಟಿಯನ್‌ ತಲಾ ಒಂದೊಂದು ವಿಕೆಟ್‌ ಪಡೆದರು.